ತುಪ್ಪಾನ್ನ

ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅದರಲ್ಲೂ ವಿಶೇಷವಾಗಿ ಮದುವೆಯ ಹಿಂದಿನ ದಿನ ವರಪೂಜೆಯಲ್ಲಿ ಸಾಂಪ್ರದಾಯಕವಾಗಿ ತಯಾರಿಸುವ ತುಪ್ಪಾನ್ನವನ್ನು ಕು.ಅನನ್ಯ ಆನಂದ್ ನಮ್ಮ ಇಂದಿನ   ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದಾರೆ. ‘

ಸುಮಾರು 4-5 ಜನರು ಸವಿಯಬಹುದಾದಷ್ಟು ತುಪ್ಪಾನ್ನ  ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

ತುಪ್ಪಾನ್ನ ತಯಾರಿಸುವ ವಿಧಾನ

  • ತೆಂಗಿನಕಾಯಿ ತುರಿ- 1 ಬಟ್ಟಲು 
  • ಕರಿಬೇವಿನ ಸೊಪ್ಪು – 4-5 ಎಲೆಗಳು
  • ಕರಿದ ಹಪ್ಪಳ – 4-5
  • ರುಚಿಗೆ ತಕ್ಕಷ್ಟು ಉಪ್ಪು
  • ಒಗ್ಗರಣೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು
  • ತುಪ್ಪಾ – 1/2 ಬಟ್ಟಲು
  • ಸಾಸಿವೆ – 1/2 ಚಮಚ
  • ಕಡಲೇಬೇಳೆ – 1 ಚಮಚ
  • ಉದ್ದಿನಬೇಳೆ – 1 ಚಮಚ
  • ಗೋಡಂಬಿ – 1/4 ಬಟ್ಟಲು
  • ಒಣಮೆಣಸಿನಕಾಯಿ 2-3
  • ಇಂಗು  – 1/4 ಚಮಚ
  • ಮೆಣಸಿನಕಾಳಿನ ಪುಡಿ – 1/2 ಚಮಚ

ತುಪ್ಪಾನ್ನ ತಯಾರಿಸುವ ವಿಧಾನ

  • ಒಂದು ಪಾವು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರಿನಲ್ಲಿ ಅನ್ನ ಮಾಡಿಕೊಂಡು ಅನ್ನವನ್ನು ಆರಲು ಬಿಡಿ
  • ಒಂದು ಗಟ್ಟಿ ತಳದ ಬಾಣಲಿಯಲ್ಲಿ ತುಪ್ಪಾ ಹಾಕಿಕೊಂಡು ತುಪ್ಪಾ ಕಾದ ನಂತರ ಸಾಸಿವೆ ಹಾಕಿ ಸಿಡಿಸಿಕೊಳ್ಳಿ
  • ಆದಾದ ನಂತರ ಕಡಲೇ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕೆಂಪಗೆ ಬರುವಂತೆ ಹುರಿದುಕೊಳ್ಳಿ
  • ಈಗ ಅದಕ್ಕೆ ಒಣಮೆಣಸಿಕಾಯಿ, ಇಂಗು, ಕಾಳು ಮೆಣಸಿನ ಪುಡಿ ಮತ್ತು ಕರಿಬೇವನ್ನು ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಿ
  • ಈಗ  ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದಲ್ಲಿ ತುಪ್ಪಾನ್ನದ ಒಗ್ಗರಣೆ ಸಿದ್ಧ.
  • ಆರಿದ ಅನ್ನಕ್ಕೆ ಮಾಡಿಟ್ಟು ಕೊಂಡ ಒಗ್ಗರಣೆಯನ್ನು ಸೇರಿಸಿ ಅದಕ್ಕೆ ತುರಿದ ತೆಂಗಿನಕಾಯಿಯನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಿ
  • ಈಗ ಕರಿದ ಹಪ್ಪಳವನ್ನು ಹುಡಿ ಮಾಡಿಕೊಂಡು ಕಲೆಸಿಟ್ಟುಕೊಂಡ ಅನ್ನಕ್ಕೆ ಬೆರೆಸಿದಲ್ಲಿ ಬಿಸಿ ಬಿಸಿಯಾದ ಮತ್ತು ಅಷ್ಟೇ ರುಚಿಯಾದ ಸಾಂಪ್ರದಾಯಕ ತುಪ್ಪಾನ್ನ ಸವಿಯಲು ಸಿದ್ಧ.

ತುಪ್ಪಾನ್ನ ಮಾಡುವುದನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?