ರಾಕ್ಷಸೀ ಗುಣವುಳ್ಳ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ಸಂಗೀತಗಾರ, ಶಿವನನ್ನು ಒಲಿಸಿಕೊಳ್ಳುವ ಸಲುವಾಗಿ ತನ್ನ ಕರಳುಗಳನ್ನೇ ಹೊರತೆಗೆದು ರುದ್ರ ವೀಣೆಯನ್ನಾಗಿಸಿ ನುಡಿಸಿ ಶಿವನನ್ನು ಒಲಿಸಿಕೊಂಡು ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು.
ರಾಮ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು ಲಂಕೆಯಲ್ಲಿ ಪುರೋಹಿತರು ಯಾರೂ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ರಾಮ ಲಕ್ಷ್ಮಣರಿಗೆ ಕಂಕಣ ಕಟ್ಟಿ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನೇ ಮೆರೆದವನು. ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಲು ಸೀತಾಮಾತೆಯನ್ನು ಅಪರಣದನೇ ಹೊರದ ಕಪ್ಪು ಚುಕ್ಕೆಯ ಹೊರತಾಗಿ ಬೇರಾವ ಗಹನವಾದ ಆರೋಪಗಳು ರಾವಣನ ಮೇಲೆ ಕಾಣಸಿಗುವುದಿಲ್ಲ.
ಹಾಗೆಯೇ ರಾಮನ ಯುಧ್ಧದಲ್ಲಿ ರಾವಣನ್ನು ಸೋಲಿಸಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ, ಸೀತಾಮಾತೆಯ ಪಾತಿವ್ರತ್ಯವನ್ನು ಪರೀಕ್ಷಿಸುವ ಸಲುವಾಗಿ ಅಗ್ನಿಪರೀಕ್ಷೆಗೆ ಒಡ್ಡಿದ್ದು ಸುಳ್ಳಲ್ಲ. ನಂತರ ಕೆಲವು ವರ್ಷಗಳು ಸುಖಃ ಸಂಸಾರ ನಡೆಸಿದ ಫಲವಾಗಿ ಸೀತಾ ಮಾತೆಯು ಗರ್ಭಿಣಿಯಾಗಿದ್ದಾಗ, ಅರಮನೆಯ ಅಗಸರ ದಾಂಪತ್ಯದಲ್ಲಿ ಬಿರುಕಿನ ಸಮಸ್ಯೆ ಪರಿಹರಿಸುತ್ತಿದ್ದಾಗ, ಅಚಾನಕ್ಕಾಗಿ ಅಗಸ ಬಾಯಿ ತಪ್ಪಿ ಆಡಿದ ಮಾತು ಕಂಡವರ ಮನೆಯಲ್ಲಿದ್ದ ಹೆಂಡತಿಯನ್ನು ಮರಳಿ ಸ್ವೀಕರಿಸಲು ನಾನೇನೂ ಪ್ರಭು ಶ್ರೀರಾಮನಲ್ಲಾ ಎಂಬ ಮಾತಿನ ಕಟ್ಡು ಪಾಡಿಗೆ ಬಿದ್ದು ಸೀತೆಗೆ ಏನನ್ನೂ ತಿಳಿಸದೆ ನಟ್ಟ ನಡು ರಾತ್ರಿಯಲ್ಲಿ ಲಕ್ಷ್ಮಣನ ಮೂಲಕ ಕಾಡಿನಲ್ಲಿ ಬಿಟ್ಟದ್ದೂ ಸುಳ್ಳಲ್ಲ.
ಒಟ್ಡಿನಲ್ಲಿ ನನ್ನ ಬರಹದ ಹಿಂದೆ ರಾಮನನ್ನು ತೆಗಳಿ ರಾವಣನನ್ನು ವೈಭವೀಕರಿಸುವ ಉದ್ದೇಶವಿರದೆ. ರಾಕ್ಷಸೀ ಗುಣವುಳ್ಳ ರಾವಣನಂತಹ ಮನುಷ್ಯನೇ ಸೀತಾಮಾತೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರ ಮಾಡದಿದ್ದಾಗ,
ರಾಮನಂತಹ ಮರ್ಯಾದೆಗೆ ಆಂಜುವ ನರ ಮನುಷ್ಯರು ಮುಗ್ಧ ಹಸು ಕಂದಮ್ಮಗಳ ಅತ್ಯಾಚಾರ ಮಾಡುತ್ತಿರುವುದು ಎಷ್ಟು ಸರಿ?
ಅಂತಹ ಅತ್ಯಾಚಾರಿಗಳನ್ನು ಧರ್ಮದ ಹೆಸರಿನಲ್ಲಿ ರಕ್ಷಿಸುತ್ತಿರುವುದು ಎಷ್ಟು ಸರಿ?
ಇಂತಹ ಕೆಲವು ಅತ್ಯಾಚಾರಿಗಳಿಗೆ ಯಾವುದೇ ವಿಚಾರಣೆಯಿಲ್ಲದೆ ಗಲ್ಲು ಶಿಕ್ಷೆಯನ್ನು ನೀಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸದ ಹೊರತಾಗಿ ಇಂತಹ ಪಿಡುಗನ್ನು ತಪ್ಪಿಸಲಾಗದು ಎನ್ನುವ ಭಾವನೆಯಿಂದ ಬರೆದದ್ದಷ್ಟೆ.
ನಾನು ಮಂಡಿಸಿದ ವಿಚಾರಗಳಿಗೆ ಬದ್ದ. ಆರೋಗ್ಯಕರ ಚರ್ಚೆಗೆ ಸಿದ್ಧ.
ಏನಂತೀರೀ?