ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇತ್ತೀಚೆಗೆ  ಪಶ್ಚಿಮ ಬಂಗಳದ  ಕಾಂಗ್ರೇಸ್ ನಾಯಕನೊಬ್ಬ ಭಾರತ್ ಮಾತಾ ಕೀ ಜೈ ಎನ್ನುವುದು ಕಾಂಗ್ರೇಸ್ ಸ್ವತ್ತು ಇದನ್ನು ಬೇರೆಯವರಾರು ಹೇಳಬಾರದು ಎಂಬ ಉದ್ದಟತನವನ್ನು ತೋರಿದರೆ, ಅವರ ಪಕ್ಷದ ರಾಷ್ಟ್ರೀಯ ಆಧ್ಯಕ್ಷರು, ಲೋಕಸಭೆಯ ವಿರೋಧ ಪಕ್ಷದ ನಾಯಕರಿಂದ ಹಿಡಿದು,  ಮಂಡ್ಯಾದ ಪದ್ಮಾವತಿ ರಮ್ಯಾವರೆಗೂ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು ಕಾಂಗ್ರೇಸ್ ಪಕ್ಷ ಮಾತ್ರ.  ಸ್ವಾತಂತ್ಯ್ರ  ಹೋರಾಟ ಸಂದರ್ಭದಲ್ಲಿ ಇತರೇ ಪಕ್ಷದವರ ಕಾಣಿಕೆ ಇಲ್ಲ ಎಂಬ ಹಸೀ ಸುಳ್ಳನೇ  ಬಾರಿ ಬಾರಿ ಹೇಳುತ್ತಾ  ಅದನ್ನೇ ನಿಜವಾಗಿಸಲು ಹೊರಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ನಮ್ಮದು 125 ವರ್ಷಗಳ ಇತಿಹಾಸವಿರುವ  ಪಕ್ಷ ಎಂದು ಕೊಚ್ಚಿಕೊಳ್ಳುವ ಇಂದಿನ ಕಾಂಗಿಗಳಿಗೆ ಅವರ ಪಕ್ಷದ ಇತಿಹಾಸವೇ ಗೊತ್ತಿರದಿರುವುದು ನಿಜಕ್ಕೂ ಅವಮಾನಕರವಾಗಿದೆ. ಭಾರತೀಯರ ಮೇಲಿನ   ಭ್ರಿಟಿಷರ ದೌರ್ಜನ್ಯದ  ವಿರುದ್ಧ ಹೋರಾಡಲು 1885 ರಲ್ಲಿ   ಅಲೆನ್ ಆಕ್ಟಾವಿನ್ ಹ್ಯುಮ್ ಎನ್ನುವ ವಿದೇಶಿ ವ್ಯಕ್ತಿ ಹುಟ್ಟುಹಾಕಿದ ಸಂಸ್ಥೆಯೇ ಕಾಂಗ್ರೇಸ್.  ಕಾಂಗ್ರೇಸ್ ಎಂದರೆ ಒಟ್ಟು ಸೇರುವಿಕೆ, ಇಲ್ಲವೇ ಸಮ್ಮೇಳನ ಅಥವಾ ಪ್ರತಿನಿಧಿಗಳ ಸಭೆ ಎಂದರ್ಥ. ಬ್ರಿಟಿಷರ ವಿರುಧ್ಧ  ಯಾವುದೇ ಜಾತಿ, ಮತ ಪಂಥಗಳ ಬೇಧವಿಲ್ಲದೆ ಸಮಾನ ಮನಸ್ಕರೆಲ್ಲಾ ಸೇರಿ ಕಟ್ಟಿ ಕೊಂಡ ಗುಂಪೇ ಕಾಂಗ್ರೇಸ್. ಇದರ ಅಡಿಯಲ್ಲೇ ದೇಶಾದ್ಯಂತ ನಾನಾ ರೀತಿಯಾಗಿ ತನು ಮನ ಧನ ಅರ್ಪಿಸಿ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟರು.   ಮಹಾತ್ಮಾ ಗಾಂಧಿಯವರೂ ಸಹಾ ಸ್ವಾತಂತ್ರ್ಯ ಬಂದ ಕೂಡಲೇ ಈ ಕಾಂಗ್ರೇಸ್ಸನ್ನು ವಿಸರ್ಜಿಸಬೇಕು ಎಂದೇ ಹೇಳಿದ್ದರು. ಆದರೆ ನೆಹರು ಮತ್ತವರ ಕುಟುಂಬಸ್ತರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ, ಗಾಂಧಿಯ ಹೆಸರನ್ನೂ ಮತ್ತು ಕಾಂಗ್ರೇಸ್ಸನ್ನು ತಮ್ಮ ಕುಟುಂಬದ ಜಹಾಗೀರು ಎಂಬಂತೆಯೇ ಬಳೆಸಿಕೊಂಡಿರುವುದು ಈ ದೇಶದ ದೌರ್ಭಾಗ್ಯವೇ ಸರಿ.  ಅದೂ ಅಲ್ಲದೇ ಎಪ್ಪತ್ತರ ದಶಕದಲ್ಲಿ  ಇದೇ ಕಾಂಗ್ರೇಸ್ ವಿಭಜನೆ ಹೊಂದಿ  ನಿಜಲಿಂಗಪ್ಪನವರ ನೇತೃತ್ವದಲ್ಲಿ ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಅವರ ಸಾರಥ್ಯದಲ್ಲಿ ಇಂದಿರಾ ಕಾಂಗ್ರೇಸ್ ಎಂದು ಹೋಳಾಗಿದ್ದದ್ದು ಈಗ ಇತಿಹಾಸ.   ಈಗ  ಇರುವುದು  ಕೇವಲ ಇಂದಿರಾ ಕಾಂಗ್ರೇಸ್ ಮಾತ್ರವೇ ಹೊರತು ಅಂದು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರ ಸೇನಾನಿಗಳ ಗುಂಪಾದ ಕಾಂಗ್ರೇಸ್ ಇದಲ್ಲಾ ಎನ್ನುವುದನ್ನು ಎಲ್ಲರೂ ಆವಶ್ಯವಾಗಿ  ತಿಳಿಯಲೇ ಬೇಕಾಗಿದೆ.

ಅಂದು ತಮ್ಮ ಪ್ರಾಣವನ್ನು ಒತ್ತೆ ಇಟ್ಟು  ಸ್ವಾತಂತ್ಯ್ರಕ್ಕೆ ಹೋರಾಡಿದ   ಕಾಂಗ್ರೇಸ್ ನಾಯಕರುಗಳಾದ ಸುಭಾಸ್ ಚಂದ್ರ ಬೋಸ್, ತಿಲಕರು, ಸರ್ದಾರ್ ವಲ್ಲಭಾಯಿ ಪಟೇಲರು ಎಲ್ಲಕ್ಕಿಂತ ಹೆಚ್ಚಾಗಿ ಮೋಹನದಾಸ್ ಕರಮ್ ಚಂದ್ ಗಾಂಧಿಯವರ ಕೊಡುಗೆಗಳು ನಗಣ್ಯವಾಗಿ  ತಮ್ಮ ಜೀವಮಾನದುದ್ದಕ್ಕೂ  ಐಶಾರಾಮ್ಯವಾಗಿಯೇ ಲೋಲೊಪತನದಿಂದಲೇ ಕಳೆದ, ತಮ್ಮ ವಯಕ್ತಿಕ ಹಿತಾಸಕ್ತಿಗೆ ದೇಶವನ್ನೇ ತುಂಡರಿಸಿ  ಅಧಿಕಾರವನ್ನು ಪಡೆದು ನಂತರ ಇಡೀ ದೇಶವೇ ತಮ್ಮ ಕುಟುಂಬದ ಆಸ್ತಿಯೇನೋ ಅನ್ನುವಂತೆ, ತಾತ, ಮಗಳು, ಮೂಮ್ಮಗ  ಈಗ ಮರಿಮಗನೂ  ಪ್ರಧಾನಿಯ ಪಟ್ಟಕ್ಕೇರಲು ಹಕ್ಕೊತ್ತಾಯ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಅಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೀರ ಮರಣ ಹೊಂದಿದ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಬಲಿದಾನಗಳು ಬದಿಗೊತ್ತಿ, ಇಂದಿರಾ ಮತ್ತು ರಾಜೀವ್ ಅವರುಗಳು ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳಿಂದಾಗಿ ತಮ್ಮವರಿಂದಲೇ ಹತರಾಗಿದ್ದನ್ನೇ ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನ ಎಂದು ಹೇಳಿ ಕೊಂಡು ತಿರುಗಾಡುತ್ತಿರುವುದು ಹಾಸ್ಯಾಸ್ವದವಲ್ಲದೇ ನಿಜವಾಗಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರಿಗೆ ಅವಮಾನ ಮಾಡಿದಂತಾಗಿರುವುದು ಕಠು ಸತ್ಯವೇ ಸರಿ. ದೇಶದ  ಮುಖ್ಯ ನಗರಗಳ ಮುಖ್ಯ ರಸ್ತೆಗಳಿಗಷ್ಟೇ ಮಹಾತ್ಮಾ ಗಾಂಧಿ ಹೆಸರು ಮೀಸಲಾಗಿಟ್ತರೆ, ಬಹುತೇಕ ಕೊಳಚೆ ಪ್ರದೇಶಗಳು ಅಂಬೇಡ್ಕರ್ ಕಾಲೋನಿಗಳಾಗಿವೆ. ಆದರೆ  ದೇಶ ಸುಮಾರು ನಾಲ್ಕು ನೂರಕ್ಕೂ ಅಧಿಕ ಯೋಜನೆಗಳು ನೆಹರು ಕುಟುಂಬದ ಹೆಸರಿನಲ್ಲಿರುವುದನ್ನು ಎಲ್ಲರೂ ಗಮನಿಸಿಬೇಕಾದ ಆಂಶವಾಗಿದೆ.  ಬೇರೆ ಎಲ್ಲವನ್ನೂ ಬಿಡಿ   ಶೌಚಾಲಯಗಳಿಂದ ಹಿಡಿದು ಕ್ಯಾಂಟೀನ್ ಗಳೂ ಇಂದಿರಾಮಯವಾಗಿರುವುದು ಭಟ್ಟಂಗಿ ತನದ ಪರಮಾವಧಿಯಾಗಿದೆ.

ಕೆಲ ದಿನಗಳ ಹಿಂದೆ ನಮ್ಮ ಕಛೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿ ಬೋಲೋ ಭಾರತ್ ಮಾತಾ ಕೀ ಜೈ ಎಂದು  ನಾನು ಜೋರಾಗಿ ಘೋಷಣೆ ಮಾಡಿದ್ದೇ ತಡ ಆಗಷ್ಟೇ  ಕೆಲಸಕ್ಕೇ ಸೇರಿದ್ದ ಹೊರ ರಾಜ್ಯದ ಸಹೋದ್ಯೋಗಿಯೊಬ್ಬ  ನನ್ನ ಬಳಿ ಓಡಿ ಬಂದು ಸಾರ್ ನೀವು ಸಂಘದ ಸ್ವಯಂಸೇವಕರಾ? ನಾನೂ ಕೂಡ ಸ್ವಯಂ ಸೇವಕನೇ ಅಂದಾಗ  ನಾನು ಆಶ್ವರ್ಯ ಚಕಿತನಾಗಿ ನಾನು ಸ್ವಯಂ ಸೇವಕ ಎಂದು ನಿನಗೆ ಹೇಗೆ ತಿಳಿಯಿತು ಎಂದಾಗ, ಸಾರ್, ಸಂಘದ ಸ್ವಯಂಸೇವರಲ್ಲದೆ  ಈ ದೇಶದಲ್ಲಿ ಬೇರಾರು ಭಾರತ ಮಾತೆಯನ್ನು ನೆನಪಿಸಿಕೊಳ್ಳುವುದಿಲ್ಲ ಎಂದಾಗ ಹೌದು ನಿಜ. ಎಂದು ಇನ್ನೂ ಅನೇಕರು ಮಿತ್ರರುಗಳು ಅದನ್ನೇ ಅನುಮೋದಿಸಿದಾಗ ನನ್ನ ಮನಸ್ಸಿಗೆ ಸಂತೋಷದ ಜೊತೆಗೆ ದುಃಖವೂ ಆಯಿತು.  ನಿಜವಾದ ಭಕ್ತರು ಸದಾ ಕಾಲ ದೇಶವನ್ನು  ಹೃದಯದಲ್ಲಿಟ್ಟು ಪೂಜಿಸುತ್ತಿದ್ದರೆ,  ಕೆಲವರು ಚುನಾವಣಾ ಸಮಯದಲ್ಲಿ ಮಾತ್ರ ದೇಶವನ್ನು ನೆನಪಿಸಿಕೊಳ್ಳುವುದು ವಿಷಾಧನೀಯವೆನಿಸಿತು.

ಕಬ್ಬಿಣ ಕಾದಾಗಲೇ ಬಗ್ಗಿಸಲು ಸಾಧ್ಯ ಅನ್ನುವ ಹಾಗೆ ಈ  ಚುನಾಚಣಾ ಸಮಯದಲ್ಲಿ ಮಾತ್ರವೇ ಇಂತಹ ಸ್ವಾರ್ಥಿಗಳಿಗೆ  ತಕ್ಕ ಪಾಠ ಕಲಿಸಲು ಸಾಧ್ಯ.  ಕಳೆದ  ಅರವತ್ತಕ್ಕೂ ಹೆಚ್ಚಿನ ವರ್ಷ ಒಂದೇ ಕುಟುಂಬ ಮತ್ತವರ ಪರಿವಾರವೇ ದೇಶವನ್ನು ಆಳಿದ್ದೂ ಇನ್ನೂ ನಮ್ಮ ದೇಶದಲ್ಲಿ ಬಡತನ ನೀಗಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಗುವಂತಾಗಿಲ್ಲ. ಹೊಗಲೀ  ಈ ನಾಯಕರುಗಳು ದೇಶವನ್ನು ಮುನ್ನಡೆಸುವ ಸಾಮರ್ಧ್ಯವಿದೆಯೇ ಎಂದು ನೋಡಿದರೆ, ಇತರರು ಬರೆದು ಕೊಟ್ಟಿದ್ದನ್ನೂ ಸರಿಯಾಗಿ ಓದಲು ಬರುವುದಿಲ್ಲ. ಚೀಟಿಯ ಸಹಾಯವಿಲ್ಲದೆ ಒಂದು ಸಂತಾಪ ಸೂಚಕ ವಾಕ್ಯವನ್ನೂ ಬರೆಯಲು ಸಾಧ್ಯವಿಲ್ಲ. ಏನೂ ಗೊತ್ತಿಲ್ಲದವರಿಗೆ ಹೇಳಿ ಕೊಡಬಹುದು. ಇಲ್ಲವೇ ಬಹಳ ತಿಳಿದುಕೊಂಡವರಿಗೆ ಅರ್ಥ ಮಾಡಿಸಬಹುದು ಆದರೆ  ಅರೆ ಬರೆ ತಿಳಿದುಕೊಂಡವರಿಗೆ ಏನನ್ನೂ ಹೇಳಿ ಕೊಡಲು ಸಾಧ್ಯವಿಲ್ಲ, ಇವರುಗಳು  ಅಲ್ಪ ವಿದ್ಯೆ ಮಹಾ ಗರ್ವಿ ಎನ್ನುವಂತಹವರು. ಇಂತಹ ಸಮಯ ಸಾಧಕರಿಗೆ  ಮತ್ತು ಸದಾ ಸುಳ್ಳನ್ನೇ ನಿಜಮಾಡಲು ಹೊರಟಿರುವವರಿಗೆ ಸರಿಯಾದ ಸುಸಂಧರ್ಭ ಒದಗಿ ಬಂದಿದೆ.

ಬರುವ ಏಪ್ರಿಲ್ 18  ಮತ್ತು 23 ರಂದು ನಮ್ಮ ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ನಿಜವಾದ ದೇಶಭಕ್ತರನ್ನು ಆಯ್ಕೆ ಮಾಡುವ ಮೂಲಕ ದೇಶದ ಹಿರಿಮೆ ಗರಿಮೆಯನ್ನು ದೇಶ ವಿದೇಶಗಳಲ್ಲಿ ಎತ್ತಿ ಹಿಡಿಯೋಣ. ನಾವು ನಿಜವಾದ ಭಾರತೀಯರು. ಭಾರತ ಮಾತೆಗೆ ಜೈಕಾರ ಹಾಕುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಅದು ಯಾರಪ್ಪನ ಸ್ವತ್ತೂ ಅಲ್ಲಾ. ಭಾರತೀಯರಾದ ನಾವು ಭಾರತಮಾತೆಗೆ ಜೈಕಾರ ಹಾಕುವುದಕ್ಕೆ  ಸರ್ವ ಸ್ವತಂತ್ರರು. ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಫೂರ್ವಜರ ಪಾಲೂ ಇದ್ದೇ ಇದೆ  ಅಲ್ಲವೇ?

ಬೋಲೋ….. ಭಾರತ್ ಮಾತಾ.. ಕೀ ಜೈ  🇮🇳 🇮🇳 🇮🇳 🇮🇳 🇮🇳 🇮🇳

ವಂದೇ… ಮಾತರಂ….. 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s