ಮೊನ್ನೆ ಶುಕ್ರವಾರ ಯಾವುದೋ ಕೆಲಸದ ನಿಮಿತ್ತ ರಜೆ ಹಾಕಿದ್ದೆ. ಸುಮಾರು ಒಂದು ಗಂಟೆ ಸಮಯ ನಮ್ಮ ಏರಿಯಾದಲ್ಲಿಯೇ ಇದ್ದ ಸ್ನೇಹಿತರ ಮನೆಗೆ ದ್ವಿಚಕ್ರ ವಾಹನವೇರಿ ಹೊರಟೆ. ಇಲ್ಲೇ ನಮ್ಮದೇ ಬಡಾವಣೆ ಅಲ್ವಾ ಅನ್ನೂ ನಿರ್ಲಕ್ಷದಿಂದ ಗಾಡಿಯೊಳಗಿದ್ದ ಹೆಲ್ಮೆಟ್ ಕೂಡಾ ಹಾಗದೆ ದಿಮ್ಮಾಲೆ ರಂಗಾ ಎಂದು ಹೋಗುತ್ತಿದ್ದಾಗ, ಇದ್ದಕ್ಕಿಂದಂತೆಯೇ ಹಳೆಯ ತೆಲುಗು ಸಿನಿಮಾದಲ್ಲಿ ರಾಕ್ಷಸರು ಪ್ರತ್ಯಕ್ಷವಾಗೋ ಹಾಗೆ ಅದೆಲ್ಲಿಂದಲೂ ಪೋಲೀಸ್ ಪೇದೆಯೊಬ್ಬರು ನನ್ನ ಮುಂದೆ ಧಗ್ಗನೆ ಪ್ರತ್ಯಕ್ಷರಾಗಿ ಸೀಟಿ ಊದುತ್ತಾ ಎರಡೂ ಕೈಗಳನ್ನೂ ತೋರಿಸುತ್ತಾ ಗಾಡಿ ನಿಲ್ಲಿಸಲು ಹೇಳಿದರು. ಇದೊಳ್ಳೇ ಕಥೆಯಾಯ್ತಲ್ಲಾ ಎಂದು ನಿಧಾನವಾಗಿ ಗಾಡಿ ಪಕ್ಕಕ್ಕೆ ತಂದು ನಿಲ್ಲಿಸುತ್ತಿದ್ದಂತೆಯೇ, ಅಲ್ನೋಡಿ ಸಾಹೇಬ್ರು ಇದ್ದಾರೆ ಅವರ ಬಳಿ ಹೋಗಿ ಡ್ರೈವಿಂಗ್ ಲೈಸನ್ಸ್, ಗಾಡಿ ಡಾಕ್ಯುಮೆಂಟ್ಸ್, ಎಮಿಷನ್ ಟೆಸ್ಟ್ ಎಲ್ಲಾ ತೋರಿಸಿ ಎಂದರು. ಸರಿ ಎಂದು ಕೊಂದು, ಎಲ್ಲಾನೂ ತೋರಿಸಿದ ಮೇಲೆ ಸರಿ ಸರಿ. ತೆಗಿರಿ ತೆಗಿಸಿ ಐದು ನೂರು ತೆಗಿರಿ ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸೋದು ತಪ್ಪು ಎಂದರು ಸಾಹೇಬ್ರು. ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸುವಾಗ ಏನಾದರೂ ಆಗಿ ತಲೆಗೆ ಪೆಟ್ಟು ಬಿದ್ದು ಹೆಚ್ಚು ಕಡಿಮೆ ಆದರೆ ಏನು ಗತಿ ಸಾರ್? ಆಮೇಲೆ ಪೋಲೀಸ್ ಸ್ಟೇಷನ್, ಆಸ್ಪತ್ರೆ ಕೋರ್ಟು ಕಛೇರಿ ಅಂತಾ ಅಲೀ ಬೇಕಾಗುತ್ತದೆ ಎಂದರು. ಏನೋ ತಂಬಾನೇ ಕಾಳಜಿಯಿಂದ ಮಾತಾಡ್ತಾ ಇದ್ದಾರೆ ಸಾಹೇಬ್ರು ಏನಾದ್ರೂ ಕೇಳಿಕೊಂಡ್ರೆ ಬಿಟ್ಟು ಬಿಡಬಹುದು ಎಂದು ಮನಸ್ಸಿನಲ್ಲಿಯೇ ಯೋಚಿಸಿ, ಸಾರ್, ನಮ್ಮ ಮನೆ ಇಲ್ಲೇ ಮನೆ ಪಕ್ಕದಲ್ಲೇ ಇರೋದು. ಮುಂದಿನ ರಸ್ತೆಯಲ್ಲಿಯೇ ನಮ್ಮ ಸ್ನೇಹಿತನ ಮನೆ ಅಲ್ಲಿಗೆ ಹೋಗ್ತಾ ಇದ್ದೆ ಅಷ್ಟೇ ಅಂತಾ ಹಲ್ಲು ಗಿಂಜಿದೆ. ಸುಂಕದವರ ಮುಂದೆ ಸಂಕಷ್ಟ ಹೇಳಿಕೊಂಡರೆ ಏನು ಪ್ರಯೋಜನ? ಅನ್ನೋ ಹಾಗೇ ಅದೆಲ್ಲಾ ಗೊತ್ತಿಲ್ಲಾ ಸಾರ್ ಸುಮ್ಮನೆ ನಮ್ಮ ಟೈಮ್ ವೇಸ್ಟ್ ಮಾಡಬೇಡಿ. ಸುಮ್ಮನೆ ಫೈನ್ ಕಟ್ಟಿ, ಇಲ್ಲಾ ಚೆಲೆನ್ ಹಾಕ್ತೀನಿ, ಆನ್ ಲೈನ್ನಲ್ಲೋ ಇಲ್ಲವೇ ಕೋರ್ಟ್ಗೆ ಹೋಗಿ ಕಟ್ಟಿ ಎಂದು ಸ್ವಲ ಜೋರು ಧನಿಯಲ್ಲಿಯೇ ಹೇಳಿದರು ಸಾಹೇಬರು. ಆಷ್ಟೇ ಮೆಲು ಧನಿಯಲ್ಲಿ ಸಾರ್ ಇದೊಂದು ಸಲಿ ಏನೋ ಬಿಟ್ಟು ಬಿಡಿ ಸಾರ್ ಇನ್ಮೇಲೆ ಎಲ್ಲಾ ಕಡೇನೂ ಹೆಲ್ಮೆಟ್ ಹಾಕಿಕೊಂಡೇ ಓಡಾಡ್ತೀನಿ ಅಂತಾ ಗೋಗರದೆ.
ಆಷ್ಟ್ರರಲ್ಲಿಯೇ ನಮ್ಮ ಕಣ್ಣ ಮುಂದೇನೇ ಒಂದು ಎರಡ್ಮೂರು ಬೈಕ್ನಲ್ಲಿ ಹೆಲ್ಮೆಟ್ಟೂ ಇಲ್ಲದೇ ತ್ರಿಬಲ್ ರೈಡಿನಲ್ಲಿ ಜೋರಾಗಿ ಕೆಲವರು ಹೋಗುತ್ತಿದ್ದರು. ಆದರೆ ಬಹುತೇಕರು ತಲೆಯ ಮೇಲೆ ಕಿಂಡಿ ಕಿಂಡಿ ಟೋಪಿ ಇತ್ತು. ಪೋಲೀಸರು ಇದನ್ನೂ ನೋಡಿಯೂ ನೋಡದವರಂತೆ ಸುಮ್ಮನಿದ್ದರು. ನನ್ನಂತೆ ಅವರನ್ನೇನ್ನೂ ನಿಲ್ಲಿಸಲು ಪ್ರಯತ್ನಿಸಲೇ ಇಲ್ಲ. ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರೆ ಅಲ್ಲಿ ಅಂತಹ ಘಟನೆಯಾಗಿಯೇ ಇಲ್ಲವೇನೋ ಎಂಬಂತೆ ಪೋಲೀಸ್ ಪೇದೆ ಮತ್ತು ಅವರ ಸಾಹೇಬ್ರು ವರ್ತಿಸಿದ್ದನ್ನು ನೋಡಿ ಆಶ್ವರ್ಯವಾಗಿ, ಇದೇನು ಸಾರ್ ಸುಮ್ಮನಾಗಿ ಬಿಟ್ರಿ. ಅವರೂ ಕೂಡ ಹೆಲ್ಮೆಟ್ ಹಾಕಿರಲಿಲ್ಲ ಅದೂ ತ್ರಿಬಲ್ ರೈಡ್ ಮಾಡ್ಕೊಂಡು ಅಷ್ಟು ಜೋರಾಗಿ ಹೋಗ್ತಾ ಇದ್ದಾರೆ ಅವರಿಗೇನಾದರೂ ಹೆಚ್ಚು ಕಡಿಮೆ ಆದ್ರೆ ಏನು ಗತಿ ಸಾರ್ ಅಂದೆ. ರೀ ಬೇರೆಯವರ ಉಸಾಬರಿ ನಿಮಗೆ ಯಾಕ್ರಿ. ಸುಮ್ಮನೆ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ. ಈಗ ಜಾಸ್ತಿ ಮಾತಾನಾಡದೆ ಫೈನ್ ಕಟ್ಟಿ ಅಂದ್ರು. ಈಗ ಸುಮ್ಮನೆ ಮೆತ್ತಗೆ ಮಾತನಾಡಿದರೆ ಪ್ರಯೋಜನ ಇಲ್ಲಾ ಎಂದು ತಿಳಿದ ನಾನು, ಯಾಕ್ ಸಾರ್ ನಮಗೊಂದು ರೂಲ್ಸ್ ಇನ್ನೊಬ್ಬರಿಗೆ ಒಂದು ರೂಲ್ಸಾ? ಅವರಿಗೂ ಫೈನ್ ಹಾಕಿ ಆಮೇಲೆ ನಾನೂ ಕಟ್ತೀನಿ ಅಂತ ಸ್ವಲ್ಪ ಏರು ಧನಿಯಲ್ಲಿಯೇ ಹೇಳಿದೆ. ನನ್ನ ಜೊತೆ ನನ್ನಂತೆಯೇ ಸಿಕ್ಕಿ ಬಿದ್ದಿದ್ದ ಇತರೇ ಮೂರ್ನಾಲ್ಕು ಜನ ನನ್ನ ಜೊತೆ ಧನಿ ಗೂಡಿಸಿದರು. ಅಷ್ಟರಲ್ಲಿ ಇನ್ನೂ ಕೆಲವು ಗಾಡಿಯಲ್ಲಿ ಅದೇ ರೀತಿ ಜನ ನಮ್ಮ ಕಣ್ಣ ಮುಂದೆಯೇ ಹೋದಾಗಲೂ ಪೋಲಿಸರ ಇದೇ ರೀತಿಯ ದಿವ್ಯ ಮೌನ ನಮ್ಮ ಕೆಚ್ಚನ್ನು ಇನ್ನಷ್ಟೂ ಹೆಚ್ಚಿಸಿತ್ತು. ಸಾರ್ ಇದೇನು ಸಾರ್, ಏನೋ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದು ಸಿಕ್ಕಿ ಬಿದ್ದವರಂತೆ ನಮ್ಮನ್ನು ಹಿಡಿದಿಟ್ಟಿದ್ದೀರಿ. ಅವರನ್ನೆಲ್ಲಾ ಸುಮ್ಮನೆ ಬಿಡ್ತೀರಿ ಅಂತ ಜೊತೆಯಲ್ಲಿ ಇದ್ದವರೊಬ್ಬರು ಕೇಳಿದರು. ಅದಕ್ಕೆ ನಾನೂ ಕೂಡ ಧನಿ ಗೂಡಿಸಿದೆ. ಇದೊಳ್ಳೆ ಗ್ರಹಚಾರವಾಯ್ತಲ್ಲಾ. ಹಾಗೆಲ್ಲ ಅವರನ್ನು ಹಿಡಿಬೇಡಿ ಅಂತ ನಮ್ಮ ಸೀನಿಯರ್ ಹೇಳಿದ್ದಾರೆ. ಸುಮ್ಮನೆ ಒಬ್ಬರನ್ನು ಹಿಡಿದು ಒಳಗೆ ಹಾಕಿದ್ರೆ, ಒಂದೈವತ್ತು ಜನ ಸ್ಟೇಷನ್ ಮುಂದೆ ಗಲಾಟೆ ಮಾಡ್ತಾರೆ. ಅದಕ್ಕೇ ಯಾಕೆ ಸುಮ್ಮನೆ ಅಂತಾ ಅವರನ್ನೇನೂ ಮಾಡಕ್ಕೆ ಹೋಗ್ಬೇಡಿ ಅಂತಾ ಹೇಳಿದ್ದಾರೆ ಅಂತಾ ಬಾಯಿ ತಪ್ಪಿ ಹೇಳಿಯೇ ಬಿಟ್ಟರು ಆ ಪೇದೆ. ಏನ್ರೀ ಅದು ಸುಮ್ಮನೆ ಏನೇನೋ ಹೇಳ್ಬೇಡಿ. ರೂಲ್ಸ್ ಎಲ್ಲರಿಗೂ ಒಂದೇ ಇವತ್ತು ಅವರು ನಮ್ಮ ಕೈಗೆ ಸಿಕ್ಕಿ ಕೊಳ್ಳದೇ ಹೋಗಿದ್ದಾರೆ. ಮುಂದೊಂದು ದಿನ ಸಿಕ್ಕಿ ಹಾಕಿಕೊಳ್ತಾರೆ ಅವಾಗ ನೋಡ್ಕೊಳ್ತೀವಿ ಅಂತ ಏನೂ ಸಮಜಾಯಿಶಿ ಕೊಡಲು ಯತ್ನಿಸಿದರು ಸಾಹೇಬರು. ಏನು ಸಾರ್ ಅವರು ನಿಜ ಹೇಳಿದ್ರೂ ನೀವು ಒಪ್ಕೋಳ್ಳೋಕೆ ತಯಾರಿಲ್ಲ. ಸರಿ ಬಿಡಿ ಸಾರ್. ಒಂದು ಕಣ್ಣಿಗೆ ಸುಣ್ಣ , ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚ ಬಾರದು ನಮ್ಮನ್ನೂ ಈ ಸರಿ ಬಿಟ್ಟು ಬಿಡಿ. ಮುಂದಿನ ಸಲ ಸಿಕ್ಕಿ ಹಾಕ್ಕೊಂಡ್ರೆ ಡಬಲ್ ಫೈನ್ ಹಾಕುವಿರಂತೆ ಎಂದೆ. ಸರಿ ಸುಮ್ಮನೆ ಇವರ ಜೊತೆ ವಾಗ್ವಾದ ಏಕೆ ಎಂದು ಇನ್ನೊಂದು ಸಲ ಈ ರೀತಿಯ ತಪ್ಪು ಮಾಡಬೇಡಿ ಎಂದು ಹೇಳಿ ಯಾರಿಗೂ ಫೈನ್ ಹಾಕದೇ ಕಳುಹಿಸಿ ಕೊಟ್ಟರು. ತುಂಬಾ ಥಾಂಕ್ಸ್ ಸರ್ ಎಂದು ಹೇಳುತ್ತಾ ನಗು ನಗುತ್ತಲೇ ಈಗ ಬಿಟ್ಟು ಆಮೇಲೆ ಮನೆಗೆ ಫೈನ್ ಕಟ್ಟೋ ನೋಟೀಸ್ ಕಳುಹಿಸುವುದಿಲ್ಲಾ ತಾನೇ ಎಂದು ಕೇಳಿದೆ. ರೀ ಏನೋ ಹೋಗ್ಲಿ ಪಾಪ ಎಂದು ಬಿಟ್ಟು ಕಳುಹಿಸಿದ್ರೆ ತಲೆ ಹರಟೆ ಮಾಡ್ತೀರಲ್ರೀ. ಇನ್ನೊಂದು ನಿಮಿಷ ನನ್ನ ಕಣ್ಣ ಮುಂದೆ ನಿಂತಿದ್ರೆ ಅದೂ ಮಾಡ್ಬೇಕಾಗೊತ್ತೆ ಎಂದರು ಸಾಹೇಬ್ರು. ಅಯ್ಯೋ ಸಾರ್ ಸುಮ್ಮನೆ ತಮಾಷಿ ಮಾಡ್ದೇ. ನೀವು ತುಂಬಾ ಒಳ್ಳೇಯವ್ರು. ಹಾಗೆಲ್ಲಾ ಮಾಡೊದಿಲ್ಲಾ ಅಂತಾ ನನಗೆ ಗೊತ್ತು ಸಾರ್, ಎಂದು ನಯಸ್ಸಾಗಿ ಹೇಳುತ್ತಾ ಬದುಕಿದೆಯಾ ಬಡ ಜೀವಾ ಎಂದು ಜಾಗ ಕಾಲಿ ಮಾಡ್ದೆ .
ನಾನು ಅಂದು ಮಾಡಿದ್ದು ಸರಿ ಎಂದು ಸಮರ್ಥನೆ ಮಾಡಿಕೊಳ್ತಾ ಇಲ್ಲಾ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲಾ. ನಮ್ಮ ಆಚರಣೆಗಳು ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆಯಲ್ಲೋ , ದೇವರ ಮನೆಯಲ್ಲೋ , ದೇವಸ್ಥಾನಗಳಲ್ಲೋ ಅಥವಾ ಧಾರ್ಮಿಕ ಕ್ಶೇತ್ರಗಳಿಗಷ್ಟೇ ಸೀಮಿತವಾಗಿದ್ದು ಸಾರ್ವಜನಿಕ ಸ್ಧಳಗಳಲ್ಲಿ ಎಲ್ಲರಿಗೂ ಒಂದೇ ನ್ಯಾಯ ಮತ್ತು ಕಾನೂನು ಅನ್ವಯವಾಗ ಬೇಕು ಎನ್ನುವುದೇ ನನ್ನ ಆಶಯ. ಏಕೆಂದರೆ ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ ಆಲ್ಲವೇ? ತಪ್ಪು ಯಾರು ಮಾಡಿದರೂ ತಪ್ಪೇ. ಸುಮ್ಮನೆ ಕೆಲವರು ಗಲಾಟೆ ಮಾಡ್ತಾರೆ ಅಂತಾ ಅವರನ್ನು ಶಿಕ್ಶಿಸದೇ ಹಾಗೆಯೇ ಬಿಡ್ತಾ ಹೋದ್ರೆ, ತಪ್ಪುಗಳು ಹೆಚ್ಚಾಗಿ ಹೋಗುತ್ತವೇ ಹೊರತು ಕಡಿಮೆ ಆಗುವುದಿಲ್ಲ ಅಲ್ಲವೇ? ಇಂತಹ ಪುಂಡರಿಗೆ, ಮತಾಂಧರಿಗೆ, ದೇಶಕ್ಕಿಂತ ಧರ್ಮನೇ ಹೆಚ್ಚು ಅಂತಾ ದೇಶದ ಕಾನೂನುಗಳನ್ನು ಧಿಕ್ಕರಿಸಿ ಹೋಗುವವರನ್ನು ಸಂರಕ್ಷಿಸುತ್ತಾ ಹೋದರೆ, ಅವರೇ ಮಗ್ಗುಲ ಮುಳ್ಳಾಗಿ ಒಂದು ದಿನ ಪೋಲಿಸರನ್ನೇ ಆಟ್ಟಾಡಿಸಿ ಹೊಡೆದರೂ ಆಶ್ಚರ್ಯ ಪಡಬೇಕಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ನಾ ಪೋಲೀಸರು ಎಚ್ಚರಿತ್ತು ಕೊಂಡು ಒಂದು ನಾಲ್ಕು ಜನರಿಗೆ ತಮ್ಮ ಬೆತ್ತದ ರುಚಿ ತೋರಿಸಿದರೂ ಸಾಕು ಉಳಿದವರೆಲ್ಲರೂ ತಾನಾಗಿಯೇ ಸರಿ ಮಾರ್ಗಕ್ಕೆ ಬರುತ್ತಾರೆ. ಹಾಗೆ ಬೆತ್ತ ಬೀಸುವ ಗಂಡೆದೆಯ ಪೋಲೀಸ್ ಅಧಿಕಾರಿಗಳು ಇದ್ದಾರಾದರೂ ಕೆಲವು ಪಟ್ಟ ಬಧ್ರರ ಕಪಿಮುಷ್ಟಿಯಿಂದ ಹೊರಬರಲಾಗದೇ ಸುಮ್ಮನಿದ್ದಾರಷ್ಟೇ. ಒಮ್ಮೆ ಅವರಿಗೆ ಮುಕ್ತ ಅವಕಾಶ ಕೊಟ್ಟು ನೋಡಿ ಎಲ್ಲವೂ ಸರಿ ಹೋಗುತ್ತದೆ.
ಹೋಗ್ಲಿ ಬಿಡಿ ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾ ನನಗೇಕೆ ಇನ್ನೊಬ್ಬರ ಉಸಾಬರಿ. ನನ್ನ ಪಾಡಿಗೆ ನಾನು ಇರ್ತೀನಪ್ಪಾ. ನಿಮಗೆ ನಾನೇನು ಹೇಳಲಿಲ್ಲಾ. ನೀವೇನೂ ಕೇಳಲಿಲ್ಲಾ ಅಲ್ವೇ.
ಏನಂತೀರೀ?
ಪೋಟೋಗಳು : ಅಂತರ್ಜಾಲದಿಂದ ಎರವಲು ಪಡೆದದ್ದು
hmmmm this is there in my mind past 25 years, andu ugadi…polices are chasing like anything… after few days ramzan so many people are not wearing helment…what ever rules are there everything they will break they dont see them…how can it be possible in the same country different laws for different religion this is wrong…
LikeLike
ಏನು ಮಾಡೋದು ಜಾತ್ಯಾತೀತತೆ ಹೆಸರಿನಡಿಯಲ್ಲಿ ವಿಪರೀತವಾಗಿ ತುಷ್ಟೀಕರಣ ಮಾಡಿಯೇ ಇಂದು ಕಾಶ್ಮೀರ ಹೊತ್ತಿ ಉರಿಯುತ್ತಿದೆ.
LikeLike
ಸರಿಯಾದ ವ್ಯಕ್ತಿಗಳನ್ನ ಆರಿಸಿದರೆ ಮಾತ್ರ ಈ ರೀತಿಯ ಉಡಾಫೆ, ದಿವ್ಯ ನಿರ್ಲಕ್ಷ್ಯ ಗಳಿಗೆ ಉತ್ತರ ಕೊಡಬಹುದು. ಮೋದಿ ಮತ್ತೊಮ್ಮೆ ಕೇಂದ್ರದಲ್ಲಿ ಬಂದರೆ ಕಾನೂನು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ.
LikeLike
ಸತ್ಯವಾದ ಮಾತು ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತ ಹೇಳಿದ್ರೆ, ಕೆಲವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಬ್ರುಕೇ ಸಾಥ್, ಸಾಬ್ರು ಕೇ ವಿಕಾಸ್ ಅಂತಾ ಹೊರಟಿರುವುದು ದುರ್ದೈವದ ಸಂಗತಿ
LikeLike