ಸಂಸಾರ V/S ಸಂಸ್ಕಾರ

2019ರ ಲೋಕಸಭಾ ಚುನಾವಣೆಯ ಕಾವು ದೇಶಾದ್ಯಂತ ಚುರುಕಾಗುತ್ತಿದೆ. ನಮ್ಮ ರಾಜ್ಯದಲ್ಲಿ ಏಪ್ರಿಲ್ ತಿಂಗಳಿನ 18 ಮತ್ತು 23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿದೆ. ಪ್ರಸಕ್ತ ದೋಸ್ತಿ ಸರ್ಕಾರಗಳು ನಾಲ್ಕೈದು ವಾರಗಳವರೆಗೆ ಕಿತ್ತಾಡಿ ಕೊನೆಗೆ 20 ಕಾಂಗ್ರೇಸ್ಸಿಗೆ ಮತ್ತು 12 ಕ್ಕೆ ಜೋತು ಬಿದ್ದು ಕೊನೆಗೆ 8 ಸ್ಥಾನಗಳಿಗೆ ಜೆಡಿಎಸ್ ಒಪ್ಪಿಕೊಂಡಿತಾದರೂ, ಅದಕ್ಕೆ 4 ಸ್ಥಾನಕ್ಕಿಂತಲೂ ಅಧಿಕ ಅಭ್ಯರ್ಥಿಗಳನ್ನು ಹಾಕಲು ಪರದಾಡಿದ್ದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಹಾಗೆ ನಾಮ ಪತ್ರ ಸಲ್ಲಿಸಿದ 4 ಸ್ಥಾನಗಳಲ್ಲಿ ಒಂದೇ ಕುಟುಂಬದ ಮೂರು ಮಂದಿ ಸ್ಪರ್ಧಿಸುತ್ತಿದ್ದ್ರರೆ ಉಳಿದೊಂದು ಕ್ಷೇತ್ರದಲ್ಲಿ ಅಪ್ಪನ ಹೆಸರಿನ ಬಲದಲ್ಲಿ ಮತ್ತೊಬ್ಬ ಸ್ಪರ್ಧಿಸುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ರಾಜಧಾನಿಯಲ್ಲಿ ಒಬ್ಬ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲಾಗದೆ ಬೆಂಗಳೂರು ಉತ್ತರ ಕ್ಷೇತ್ರವನ್ನು ಪುನಃ ಕಾಂಗ್ರೇಸ್ಸಿಗೇ ಹಿಂದುರಿಗಿಸಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಮತ್ತು ಅಭ್ಯರ್ಥಿಯ ಸ್ಥಿತಿ, ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವಹಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಬಾಗಿಲು ತಟ್ಟಿ ನಿರಾಶರಾಗಿ ಕೊನೆಗೆ ಕಾಂಗ್ರೇಸ್ ಪಕ್ಷದಿಂದಲೇ ಸ್ವರ್ಧಿಸಿ ಸೋತು ಹೋಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈಗ ಕಾಂಗ್ರೇಸ್ಸಿನಲ್ಲಿದ್ದುಕೊಂಡೇ ಜೆಡಿಎಸ್ ಅಭ್ಯರ್ಥಿ. ಒಟ್ಟಿನಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಟವೆಲ್ ಹಾಕಿ ಕುಳಿತಿರುವ ಪಕ್ಷಕ್ಕೆ ತಮ್ಮದೇ ಪಕ್ಷದ ಕೇವಲ ಎಂಟು ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಲು ಆಗದಿರುವುದು ನಿಜಕ್ಕೂ ಆ ಪಕ್ಷದ ದೀವಾಳಿತನವನ್ನು ತೋರಿಸುತ್ತಿದೆ ಮತ್ತು ಮತ್ತೊಮ್ಮೆ ತಮ್ಮ ಪಕ್ಷ ಹಳೇ ಮೈಸೂರು ಪ್ರಾಂತ್ಯಕ್ಕೇ ಮಾತ್ರವೇ ಸೀಮಿತವಾದ ಮತ್ತು ಒಂದೇ ಜಾತಿಯನ್ನು ಅವಲಂಭಿಸಿದ ಪಕ್ಷ ಎಂದು ಮತ್ತೊಮ್ಮೆ ಜಗಜ್ಜಾಹೀರಾತು ಪಡಿಸಿದೆ.

ಇದಕ್ಕೆ ತದ್ವಿರುದ್ಧವಾಗಿ ಕಳೆದ ಎರಡು ದಿನಗಳಲ್ಲಿ ನಡೆದ ಸಂಗತಿಯನ್ನು ಗಮನಿಸಲೇಬೇಕಿದೆ. ಕೇಂದ್ರ ಸಚಿವರಾಗಿದ್ದುಕೊಂಡೇ ಕೆಲವು ತಿಂಗಳುಗಳ ಹಿಂದೆ ನಿಧನರಾದ ಶ್ರೀ ಅನಂತ್ ಕುಮಾರರ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಮತ್ತು ಸಮಾಜ ಸೇವಕಿ, ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೇ ಮೀಸಲಾಗಿಡಬೇಕೆಂದು ಹಲವರ ಅಪೇಕ್ಷೆಯಾಗಿತ್ತು ಮತ್ತು ರಾಜ್ಯದ ಪಕ್ಷದ ವತಿಯಿಂದ ಕೇಂದ್ರಕ್ಕೆ ಶಿಫಾರಸು ಮಾಡಿ ಕಳುಹಿಸುವ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅವರ ಹೆಸರನ್ನು ಮಾತ್ರವೇ ನಮೂದಸಲಾಗಿತ್ತು. ಆದರೆ ಇತರೇ ಪಕ್ಷಕ್ಕಿಂತಲೂ ವಿಭಿನ್ನವಾದ ಭಾರತೀಯ ಜನತಾ ಪಕ್ಷ ಅಳೆದು ತೂಗಿ ಪಕ್ಷದ ಬಲವರ್ಧನೆ ಮತ್ತು ಎರಡನೇ ಸಾಲಿನ ಸಮರ್ಥ ಯುವ ನಾಯಕರನ್ನು ಬೆಳೆಸುವ ದೂರ ದೃಷ್ಟಿಯಿಂದ ಸಂಘದ ಸಾಮಾನ್ಯ ಕಾರ್ಯಕರ್ತ, ಉತ್ತಮ ವಾಗ್ಮಿ, ಸಂಸ್ಕಾರವಂತ, ವಕೀಲ ನಾದಂತಹ ತೇಜಸ್ವೀ ಸೂರ್ಯರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಎಲ್ಲರ ಹುಬ್ಬನ್ನು ಏರಿಸಿತು ಎಂದರೆ ತಪ್ಪಾಗಲಾರದು. ಇಂತಹ ಸಂದರ್ಭಕ್ಕೇ ಕಾಯುತ್ತಿರುವ ಕೆಲ ವಿರೋಧಿಗಳು ಮತ್ತು ಕೆಲ ಮಾಧ್ಯಮಗಳು ತೇಜಸ್ವಿ ಮತ್ತು ತೇಜಸ್ವಿನಿ ಮಧ್ಯೆ ಸಂಬಧಕ್ಕೆ ಹುಳಿ ಹಿಂಡುವ ಪ್ರಯತ್ನವನ್ನು ಮಾಡುಲು ಪ್ರಯತ್ನಿಸಿ, ತೇಜಸ್ವಿನಿಯವರಿಗೆ ಪಕ್ಷದ ಟಿಕೆಟ್ ಸಿಕ್ಕಿಲ್ಲವಾದ್ದರಿಂದ ನಿಮ್ಮ ಮುಂದಿನ ನಡೆಯೇನು? ಪಕ್ಷದ ವಿರುದ್ಧವಾಗಿ ಸ್ಪರ್ಧೆ ಮಾಡುತ್ತೀರಾ ಎಂದು ಕೆಣಕಿ ಕೆಣಕಿ ಕೇಳಿದಾಗ, ಅತ್ಯಂತ ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ತೇಜಸ್ವಿ ನಮ್ಮ ಮನೆಯಲ್ಲಿ ಅನಂತ್ ಕುಮಾರ ಅವರ ಗರಡಿಯಲ್ಲಿ ಬೆಳೆದ ಹುಡುಗ. ಅವನಿಗೆ ಪಕ್ಷದ ವತಿಯಿಂದ ಸ್ಪರ್ಥಿಸಲು ಅನುಮತಿ ಸಿಕ್ಕಿರುವುದು ಸಂತೋಷಕರವಾದ ವಿಷಯ. ಪಕ್ಷದ ಸಿದ್ಧಾಂತಕ್ಕೆ ಕಟಿ ಬದ್ಧರಾಗಿ ಮೋದಿ ಮತ್ತೊಮ್ಮೆ ಎನ್ನುವ ಧ್ಯೇಯ ವಾಕ್ಯದಂತೆ ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಹೇಳಿ ಟೀಕಾಕಾರರ ಬಾಯಿ ಮುಚ್ಚಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ತದನಂತರ ಎಂದು ಹೇಳಿ ಚಿಕ್ಕದಿಂದಲೂ ಸಂಘಪರಿವಾರದ ಸದಸ್ಯೆಯಾಗಿ ಪಡೆದ ಸಂಸ್ಕಾರವನ್ನು ಎತ್ತಿ ತೋರಿಸಿದ್ದು ಅನನ್ಯ ಮತ್ತು ಅನುಕರಣೀಯ.

ಅದೇ ರೀತಿ ಜನಸಂಘದ ಕಾಲದಿಂದಲೂ ಮತ್ತು ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಮತ್ತು ಕೇವಲ ಎರಡು ಸಾಂಸದರಿಂದ ಈ ಮಟ್ಟಿಗೆ ಪಕ್ಷ ಬೆಳೆಯಲು ತಮ್ಮ ತನು ಮನ ಧನವನ್ನು ಮುಡಿಪಾಗಿಟ್ಟ ಶ್ರೀ ಲಾಲ ಕೃಷ್ಣ ಅಡ್ವಾಣಿಯವರು ತಮ್ಮ ಇಳಿ ವಯಸ್ಸಿನ ಕಾರಣದಿಂದ ಈ ಬಾರಿ ಲೋಕಸಭಾ ಟಿಕೆಟ್ ಬೇಡ ಅಂದಾಗ, ಅವರ ಬದಲಿಗೆ ಗುಜರಾತಿನ ಗಾಂಧೀನಗರದ ಕ್ಷೇತ್ರವನ್ನು ಅವರ ಮಗಳು ಪ್ರಣೀತಾಗ ಮೀಸಲಿಟ್ಟು, ಅಡ್ವಾಣಿಯವರ ಮನೆಗೆ ಸ್ವತಃ ಪ್ರಧಾನಮಂತ್ರಿಗಳೇ ಬಿ-ಫಾರ್ಮ್ ಕೊಡಲು ಹೋದಾಗ, ವಂಶ ಪಾರಂಪರ್ಯ ತಮಗೆ ಇಷ್ಟವಿಲ್ಲ ಹಾಗಾಗಿ ಬೇರೆಯ ಸಮರ್ಥರಿಗೆ ಅವಕಾಶ ಮಾಡಿ ಕೊಡಿ ಎಂದಾಗ ನೆರೆದಿದ್ದ ಎಲ್ಲರೊಂದಿಗೆ ಮೋದಿಯವರೂ ಭಾವುಕರಾದ ಸಂಗತಿ ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಇದೇ ಅಲ್ಲವೇ ಸಂಘಪರಿವಾರದಿಂದ ಬಂದ ನಮ್ಮ ನಾಯಕರುಗಳ ಪ್ರಾಮಾಣಿಕತೆ. ನಮ್ಮ ಕಾರ್ಯಕರ್ತರು, ಬರೀ ಕಾರ್ಯಕರ್ತರಲ್ಲ ಅವರು ನಿಜವಾದ ದೇಶ ಭಕ್ತರು. ಅವಶ್ಯಕತೆ ಬಂದಾಗಲೆಲ್ಲಾ ದೇಶದ ಹಿತಕ್ಕಾಗಿ ತಮ್ಮ ವಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ , ಪಕ್ಷಕ್ಕೆ ತಮ್ಮನ್ನೇ ಧಾರೆ ಎರೆದು ಕೊಂಡು, ಸಂಘದ ಪ್ರಾರ್ಥನೆಯಲ್ಲಿ ನಾವೆಲ್ಲಾ ಹೇಳುವಂತೆ ಪರಂ ವೈಭವಂ ನೇತುಮೇತ್ ಸ್ವರಾಷ್ಟ್ರಂ, ಅಂದರೆ ದೇಶವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲು ಸದಾ ಸಿದ್ದ ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಮತ್ತು ಬಿಜೆಪಿಯ ಭೀಷ್ಮ ಶ್ರೀ ಲಾಲ ಕೃಷ್ಣ ಅಡ್ವಾಣಿಯವರಿಗೂ ನಮ್ಮ ನಿಮ್ಮಮ್ಮೆಲ್ಲರ ಪರವಾಗಿ ಹೃದಯ ಪೂರ್ವಕ ಸಲಾಂ….

ಇಂತಹ ಕೊಟ್ಯಾಂತರ ನಿಸ್ವಾರ್ಥ, ದೇಶಭಕ್ತರ ಬೆಂಬಲವಿದ್ದರೆ ಕೇವಲ ಮೋದಿ ಮತ್ತೊಮ್ಮೆ ಏಕೆ? ಮೋದಿ ಮತ್ತೊಮ್ಮೆ, ಮಗದೊಮ್ಮೆ, ಮತ್ತೆ ಮತ್ತೆ ಮಗದೊಮ್ಮೆ ಪ್ರಧಾನಿಗಳಾಗಿಯೇ ಇದ್ದು ಭಾರತವನ್ನು ಜಗತ್ತಿನ ಶಕ್ತಿಶಾಲಿ ವಿಶ್ವಗುರುವನ್ನಾಗಿಸುವುದರಲ್ಲಿ ಸಂದೇಹವೇ ಇಲ್ಲ. ಇದನ್ನೇ ಸರಿಯಾಗಿ ಅರ್ಥೈಸಿಕೊಂಡಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೋದಿ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಿದರೆ ಮುಂದೊಮ್ಮೆ ಇತರರಿಗೆ ಪ್ರಧಾನಿಯಾಗುವ ಅವಕಾಶವೇ ಸಿಗುವುದಿಲ್ಲ ಎಂದು ಹಲುಬುತ್ತಿರುವುದು.

ಈ ಇಳಿವಯಸ್ಸಿನಲ್ಲಿಯೂ ತಮ್ಮ ಸಂಸಾರದ ಉನ್ನತಿಗಾಗಿಯೇ ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಲೋಕಸಭಾ ಚುನಾವಣೆಗೆ ಸ್ಪರ್ಥಿಸುತ್ತಿರುವ ದೇವೇಗೌಡರನ್ನು ನೋಡಿದಾಗ, ಹಿಂದೊಮ್ಮೆ ವಾಯಪೇಯಿಯವರ ಸರ್ಕಾರ ಉರುಳಿ ಹೋಗಿ ದೇವೇಗೌಡರು ಹಿಂಬಾಗಿಲಿನಿಂದ ಅನಿವಾರ್ಯವಾಗಿ ಮತ್ತು ಅಷ್ಟೇ ಆಶ್ವರ್ಯವಾಗಿ ಸಾಂಧರ್ಭಿಕ ಶಿಶುವಾಗಿ ಪ್ರಧಾನಿಗಳಾಗಿದ್ದಾಗ ಖ್ಯಾತ ಪತ್ರಕರ್ತ ಶ್ರೀ ರವಿ ಬೆಳಗರೆಯವರು ಹೇಳಿದ್ದ ಮಾತು ಸಂಸ್ಕಾರವೇ ಇಲ್ಲದ ದೇವೇಗೌಡ ಮತ್ತು ಸಂಸಾರವೇ ಇಲ್ಲದ ವಾಜಪೇಯಿ ಎತ್ತಲಿಂದ ಎತ್ತ ಸಂಬಂಧ ಎನ್ನುವ ಮಾತು ನೆನಪಿಗೆ ಬಂತು. ಪಕ್ಷಕ್ಕಾಗಿ ತೇಜಸ್ವಿನಿ ಅನಂತ ಕುಮಾರ್ ಮತ್ತು ಲಾಲ ಕೃಷ್ಣ ಅಡ್ವಾಣಿಯವರ ಚುನಾವಣೆಗೆ ಸ್ಪರ್ಥಿಸದೆ ತ್ಯಾಗ ಮಾಡುತ್ತಿರುವಾಗ ರವಿ ಬೆಳಗೆರೆ ಹೇಳಿದ್ದನ್ನು ಸ್ವಲ್ಪ ಬದಲಾಯಿಸಿ ಸಂಸಾರಕ್ಕಾಗಿ ಸಂಸ್ಕಾರವೇ ಇಲ್ಲದ ಹಾಗೆ ಕುಟುಂಬ ರಾಜಕಾರಣ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸುವ ಸಂಧರ್ಭ ಬಂದಿದೆ ಎನ್ನಬಹುದಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s