ಪರಿಶ್ರಮ

ಮೊನ್ನೆ RCB ಮತ್ತು MI ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಚೆನ್ನೈ ತಂಡ ಹಿಂದೆ ಮೊದಲನೇ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಅಲೌಟ್ ಆಗಿ ಸುಲಭವಾಗಿ ಪಂದ್ಯ ಸೋತಿದ್ದ ಕೋಹ್ಲಿ ಪಡೆ ಈ ಬಾರಿ ಟಾಸ್ ಗೆದ್ದು ಮುಂಬೈ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಹೇಳಿ 187 ರನ್ ಗಳಿಗೆ ಅವರನ್ನು ನಿರ್ಬಂಧಿಸಿ, ಬ್ಯಾಟ್ ಮಾಡಲು ಬಂದ RCB 20 ಓವರ್ಗಳಲ್ಲಿ ಕೇವಲ 181 ರನ್ ಗಳಿಸಲು ಸಾಧ್ಯವಾಗಿ 6 ರನ್ ಗಳಿಂದ ಪಂದ್ಯ ಸೋತಿರುವುದು ಈಗ ಇತಿಹಾಸ. ಸೋತ ನಂತರ ಕಡೆಯ ಚೆಂಡ್ ನೋಬಾಲ್ ಆಗಿತ್ತು. ಅಂಪೈರ್ ಅದನ್ನು ಸರಿಯಾಗಿ ಗಮನಿಸದ ಕಾರಣ RCB ತಂಡಕ್ಕೆ ಪಂದ್ಯ ಗೆಲ್ಲುವ ಒಂದು ಅವಕಾಶ ತಪ್ಪಿತು ಎಂದರೂ ತಪ್ಪಾಗಲಾರದು. ಒಂದು ಬಾರಿ ನೋಬಾಲ್ ಕೊಟ್ಟಿದ್ದಲ್ಲಿ ನಿಜಕ್ಕೂ ಪಂದ್ಯದ ಗತಿಯೇ ಬೇರೆ ಇರುತ್ತಿತ್ತು ಎಂದು ನಂತರ ನಾಯಕ ಕೋಹ್ಲಿ ಹಲುಬಿದ್ದು ನಿಜಕ್ಕೂ ಶೋಚನೀಯವಾಗಿತ್ತು.

ಬೆಂಗಳೂರಿನ ನಗರ ಪಾಲಿಕೆ ಚುನಾವಣೆಯಲ್ಲಿ ಬೆಂಗಳೂರಿಗರು, ಬಿಜೆಪಿ ಪಕ್ಷದ ಬರೋಬ್ಬರಿ 100 ಸದಸ್ಯರನ್ನು ಆಯ್ಕೆ ಮಾಡಿದ್ದರು. ಬಹುಮತಕ್ಕೆ ಕೇವಲ ಐದು ಸದಸ್ಯರು ಕಡಿಮೆ ಇತ್ತು. ಸಾಕಷ್ಟು ಪಕ್ಷೇತರರು ಆಯ್ಕೆಯಾಗಿದ್ದ ಪರಿಣಾಮ ಇನ್ನೇನು ಬಿಜೆಪಿಯ ಸದಸ್ಯರೇ ಮೇಯರ್ ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಒಂದು ಕ್ಷಣ ಮೈಮರೆತ ಸಮಯದಲ್ಲೇ ಉಳಿದೆಲ್ಲ ಪಕ್ಷಗಳೂ ಪಕ್ಷೇತರರನ್ನು ಒಲಿಸಿಕೊಂಡು ಮೇಯರ್ ಮತ್ತು ಉಪಮೇಯರ್ ಪಟ್ಟವನ್ನು ಬಿಜೆಪಿಯ ಕೈಯಿಂದ ಕಿತ್ತುಕೊಂಡಿದ್ದು ಈಗ ಇತಿಹಾಸ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಿಸಿ ಬಹುಮತಕ್ಕೆ ಕೇವಲ 9 ಸ್ಥಾನಗಳು ಕಡಿಮೆಯಾದಾಗ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂದು ತೀರ್ಮಾನಿಸಿದ ಕಾಂಗ್ರೇಸ್ ಕೇವಲ 38 ಸ್ಥಾನ ಗಳಿಸಿದ್ದ ಜನತಾದಳದೊಂದಿಗೆ ಪಕ್ಷೇತರೊಳಗೊಂಡು ಕೈ ಜೋಡಿಸಿದ ಪರಿಣಾಮ ಜನರ ತೀರ್ಮಾನದ ವಿರುದ್ಧವಾಗಿ ಕೇವಲ ಸಂವಿಧಾನಾತ್ಮಕವಾಗಿ ಸಂಖ್ಯಾಬಲದ ಮೇಲೆ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ.

ಮೇಲೆ ತಿಳಿಸಿದ ಮೂರೂ ಸಂಧರ್ಭಗಳಲ್ಲಿಯೂ ಫಲಿತಾಂಶ ಹೊರಬಿದ್ದ ನಂತರ ಎಲ್ಲರ ಬಾಯಿಯಲ್ಲಿ ಬಂದ ಉದ್ಗಾರ ಒಂದೇ, ಛೇ, ಇನ್ನೂ ಸ್ವಲ್ಪ ಪರಿಶ್ರಮ ಪಟ್ಟಿದ್ದರೆ ಅಂತಿಮ ಗೆಲುವು ನಮ್ಮದೇ ಆಗಿರುತ್ತಿತ್ತು. ಇನ್ನೂ ಸ್ವಲ್ಪ ಯೋಜನೆ ಮಾಡಿದ್ದರೆ ನಾವೇ ಗೆಲ್ಲುತ್ತಿದ್ದೆವು. ಸೋತಿದ್ದೆಲ್ಲಾ ಕೇವಲ ಕೆಲವೇ ಕೆಲವು ರನ್ ಅಥವಾ ಓಟ್ ಗಳಿಂದ. 188 ರನ್ ಗಳಿಸಲು 20ನೇ ಓವರಿನ ಕಡೆಯ ಬಾಲ್ ವರೆಗೂ ಕಾಯುವ ಬದಲು 18ನೇ ಓವರ್ನಲ್ಲೇ ಗೆಲ್ಲುವ ಹಾಗೆ ಯೋಚಿಸಿ ಅದಕ್ಕೆ ತಕ್ಕಂತೆ ಆಡಿದ್ದರೆ ಏನಾದರೂ ಹೆಚ್ಚು ಕಡೆಮೆ ಆಗಿದ್ದಲ್ಲಿ ಕಡೆಯ 2 ಓವರ್ಗಳಲ್ಲಿ ಸರಿ ಪಡಿಸಿಕೊಳ್ಳ ಬಹುದಿತ್ತು. ಅದೇ ರೀತಿ ಎಲ್ಲ ಕಾರ್ಯಕರ್ತರೂ ಇನ್ನೂ ಸ್ವಲ್ಪ ಹೆಚ್ಚಿನ ಪರಿಶ್ರಮ ಪಟ್ಟು ಕೆಲಸ ಮಾಡಿದ್ದಲ್ಲಿ 5 ನಗರ ಸಭಾ ಸದಸ್ಯರು ಅಥವಾ 9 ವಿಧಾನ ಸಭಾ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದಲ್ಲಿ ಯಾರನ್ನೂ ಆಶ್ರಯಿಸದೆ, ಯಾವ ಆಪರೇಷನ್ಗೂ ಕೈ ಹಾಕದೇ ಸ್ವಸಾಮರ್ಥ್ಯದಿಂದ ಅಧಿಕಾರವನ್ನು ಪಡೆಯ ಬಹುದಾಗಿತ್ತು.

ಇನ್ನೇನು ಕೆಲವೇ ದಿನಗಳಲ್ಲಿ ದೇಶಾದ್ಯಂತ ಈಗ ಲೋಕಸಭಾ ಚುನಾವಣೆ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ದೇಶ ಅಭಿವೃದ್ಧಿ ಹೊಂದುತ್ತಲಿದೆ. ಪ್ರಧಾನಿಗಳು ತಮ್ಮ ಸತತ ವಿದೇಶೀ ಪ್ರವಾಸಗಳಿಂದ ವಿಶ್ವಾದ್ಯಂತ ಎಲ್ಲರೊಂದಿಗಿನ ಸ್ನೇಹ ಸಂಪಾದನೆ ಮಾಡಿರುವ ಪರಿಣಾಮ ಇಂದು ವಿಶ್ವದಲ್ಲಿ ಭಾರತ ದೇಶದ ಗರಿಮೆ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಪ್ರಧಾನಿಗಳು ನಾನೂ ತಿನ್ನುವುದಿಲ್ಲ ಮತ್ತು ಮತ್ತೊಬ್ಬರನ್ನು ತಿನ್ನಲು ಬಿಡುವುದಿಲ್ಲ ಎನ್ನುವ ನೀತಿಯ ಪರಿಣಾಮ ಕಳೆದ ಐದು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರವೂ ಇಲ್ಲದೇ, ದಿಟ್ಟ ಆರ್ಥಿಕ ನಿರ್ಣಯಗಳಿಂದ ದೇಶದ ಬಹುತೇಕ ಸಾಲಗಳನ್ನು ಹಿಂದಿರುಗಿಸಿ ದೇಶದ ಆರ್ಥಿಕ ಪರಿಸ್ಥಿತಿ ಸಧೃಡವಾಗಿದೆ. ಸೇನೆಗಳಿಗೆ ಹೆಚ್ಚಿನ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟು, ಅವರಿಗೆ ಗುಂಡು ನಿರೋಧಕ ಕವಚಗಳ ಜೊತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿ ಅವರನ್ನು ಸಧೃಡ ಪಡಿಸಿದ ಪರಿಣಾಮ ಇಂದು ಶತೃದೇಶಗಳ ದೇಶಕ್ಕೂ ನುಗ್ಗಿ ಭಯೋತ್ಪಾದಕರನ್ನೂ ಬಗ್ಗು ಬಡಿಯುವ ಸಾಮರ್ಥ್ಯಕ್ಕೆ ನಮ್ಮ ಹೆಮ್ಮೆಯ ಪ್ರಧಾನಿಗಳು ತಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಹೀಗೆಯೇ ದೇಶದ ಅಭಿವೃಧ್ಧಿ ಇನ್ನಷ್ಟು ಮುಂದುವರೆಯ ಬೇಕಿದ್ದಲ್ಲಿ ಇಂತಹ ಹೆಮ್ಮೆಯ ಪ್ರಧಾನಿಗಳನ್ನೇ ಮತ್ತೊಮ್ಮೆ ಆಯ್ಕೆ ಮಾಡುವುದು ನಮಗೆಲ್ಲರಿಗೂ ಅನಿವಾರ್ಯವಾಗಿದೆ. ಸದ್ಯಕ್ಕಂತೂ ಆ ಪಟ್ಟವನ್ನು ಅಲಂಕರಿಸಲು ಬೇರಾವುದೇ ಅಭ್ಯರ್ಥಿಗಳು ನಮ್ಮ ಮುಂದೆ ಇಲ್ಲವಾಗಿದೆ. ದೇಶದ ಪ್ರಧಾನಿಗಳಾಗಬೇಕು ಎಂದು ಈಗಾಗಲೇ ಸಾಲಿನಲ್ಲಿ ನಿಂತಿರುವ ಎಲ್ಲರನ್ನೂ ಒಂದು ತಕ್ಕಡಿಗೆ ಹಾಕಿ ಮೋದಿಯವರನ್ನು ಮತ್ತೊಂದು ತಕ್ಕಡಿಗೆ ಹಾಕಿ ನೋಡಿದಲ್ಲಿ ಮೋದಿಯವರ ಸಾಧನೆ ಮತ್ತು ಸಾಮರ್ಥ್ಯಗಳ ಮುಂದೇ ಅಷ್ಟೂ ಜನರು ಸೇರಿದರೂ ಅರ್ಧದಷ್ಟು ತೂಗಲಾರರು ಎನ್ನುವುದು ಜಗಜ್ಜಾಹೀರಾತಾಗಿದೆ. ಹಾಗಾಗಿ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಗಳನ್ನಾಗಿ ಮಾಡಲು ಬಿಜೆಪಿ ಪಕ್ಷವನ್ನು ಬಹುಮತದಿಂದ ಆಯ್ಕೆ ಮಾಡಿದಲ್ಲಿ ಮಾತ್ರವೇ ಸಾಧ್ಯವಾಗುತ್ತದೆ . ಕೇವಲ ಮೋದಿಯವರೇ ಪ್ರಧಾನಿಯಾಗಬೇಕೆಂದು ಬಯಸುವ ನಾವು ಮಾಡ ಬೇಕಾದ ಎಕೈಕ ಕೆಲಸವೆಂದರೆ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳಿಗೇ ಮತ ಹಾಕಿ ಮತ್ತು ಹಾಕಿಸಿ ಅವರನ್ನು ಬಾರೀ ಬಹುಮತದಿಂದ ಗೆಲ್ಲಿಸಬೇಕಿದೆ. ನಮ್ಮ ಲಕ್ಷ್ಯ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಗಳನ್ನಾಗಿ ಮಾಡಬೇಕು ಎನ್ನುವುದಾಗಿರುವುದರಿಂದ, ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಯಾರೇ ಆಗಿರಲಿ ಅವರನ್ನು ಗೆಲ್ಲಿಸುವ ಜವಾಬ್ಧಾರಿ ನಮ್ಮದೇ ಆಗಿದೆ. ನಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಮೋದಿಯಷ್ಟೇ ಸಾಮರ್ಥ್ಯ ಇಲ್ಲದಿರಬಹುದು. ಅವರ ಜನಪ್ರಿಯತೆ, ಪ್ರಾಮಾಣಿಕತೆ ಮತ್ತು ಕಾರ್ಯವೈಖರಿ ಮೋದಿಯವರಷ್ಟು ಆಕ್ರಮಣಕಾರಿ ಇಲ್ಲದಿರಬಹುದು ಆದರೆ ನಮ್ಮ ಉದ್ದೇಶ ಏನಿದ್ದರೂ ಮೋದಿಯನ್ನು ಮತ್ತೊಮ್ಮೆ ಸ್ವ ಸಾಮರ್ಥ್ಯದಿಂದ ಯಾವುದೇ ಮಿತ್ರ ಪಕ್ಷಗಳ ಬೆಂಬಲವಿಲ್ಲದೆ ಪ್ರಧಾನಿಯಾಗಿಸಬಲ್ಲಷ್ಟು ಸಂಖ್ಯಾ ಬಲ ಕೊಡುವುದಷ್ಟೇ. ಆ ನಂತರದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಈ ಲೋಕಸಭಾ ಸದಸ್ಯರನ್ನು ಬಳೆಸಿಕೊಳ್ಳುವ ಮತ್ತು ಅವರಿಂದ ಸರಿಯಾದ ಕೆಲಸ ತೆಗೆಯುವ ಸಾಮರ್ಥ್ಯ ಮೋದಿಯವರಲ್ಲಿದೆ. ಈ ಶಕ್ತಿ ಸಾಮರ್ಥ್ಯವನ್ನು ಈಗಾಗಲೇ ಹಲವಾರು ಬಾರಿ ಮೋದಿಯವರು ಪ್ರದರ್ಶಿಸಿದ್ದಾರೆ. ಹಾಗಾಗಿ, ಶ್ರೀ ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿರುವಂತೆ ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡೋಣ. ನಮ್ಮ ಕ್ಷೇತ್ರದ ಬಿಜೆಪಿ ಆಭ್ಯರ್ಥಿಗಳನ್ನು ಗೆಲ್ಲಿಸಿಸೋಣ. ಫಲಾ ಫಲಗಳನ್ನು ಮೋದಿಯವರ ಮೇಲೇ ಬಿಡೋಣ.

ಹನಿ ಹನಿ ಗೂಡಿದರೆ ಹಳ್ಳ. ತೆನೆ ತೆನೆ ಗೂಡಿದರೆ ಬಳ್ಳ ಎನ್ನುವಂತೆ, ನಮ್ಮ ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ. ನಮ್ಮ ಒಂದೊಂದು ತಪ್ಪು ನಿರ್ಧಾರದ ಮತ ಚಲಾವಣೆ ದೇಶವೇ ಸೋಲಬಹುದಾಗಿದೆ. ಹಾಗಾಗಿ 2004 ರಲ್ಲಿ ನಭೂತೋ ನಭವಿಷ್ಯತಿ ಎನ್ನುವ ಹಾಗೆ ಆಡಳಿತ ನಡೆಸಿದ್ದರೂ ತಮ್ಮ ಕ್ಷೇತ್ರದ ಸಾಂಸದರಿಗೆ ಬುದ್ದಿ ಕಲಿಸಲು ಹೋಗಿ ವಾಜಪೇಯಿಯವರನ್ನು ಸೋಲಿಸಿ, 10 ವರ್ಷ ಒಬ್ಬ ಮೌನಿ ಪ್ರಧಾನಿಯನ್ನು ಆಯ್ಕೆ ಮಾಡಿದಂತೆ, ಈ ಬಾರಿ ಆಗದಿರಲಿ ಎಂದು ಆಶೀಸೋಣಈ ಬಾರಿ ಯೋಚಿಸಿ ಮತ ಚಲಾಯಿಸೋಣ. ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸೋಣ. 

ಮೊಳಗಲಿ ಒಮ್ಮೆ, ಮೋದಿ ಮತ್ತೊಮ್ಮೆ


ಮೋದಿ ಮತ್ತೊಮ್ಮೆ, ಅದುವೇ ದೇಶದ ಹೆಮ್ಮೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s