ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಕಳೆದ ವಾರಾಂತ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ನಮ್ಮ ಸ್ನೇಹಿತರೊಂದಿಗೆ ಮನೆ ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರಿಗೂ ಮತದಾನದ ಮಹತ್ವವನ್ನು ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಲು ವಿನಂತಿಸಿಕೊಂಡೆವು. ಸಾಧಾರಣವಾಗಿ ಹೀಗೆ ಮತ ಪ್ರಚಾರಮಾಡಲು ಬರುವವರನ್ನು ಎಲ್ಲರೂ ಕೇಳುವ ಪ್ರಶ್ನೆ, ನೀವು ಯಾವ ಪಕ್ಷದವರು? ಯಾರ ಸಮರ್ಥಕರು? ಆದರೆ ನಾವು ಯಾವುದೇ ಪಕ್ಷದ ಪರವಾಗಿರದೆ ಜನಜಾಗೃತಿ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಮತದಾನ ದಿನವನ್ನು ನೆನಪಿಸಿ, ಮತ ಪಟ್ಟಿಯಲ್ಲಿ ಅವರ ಹೆಸರು ಇದೆಯೇ ಎಂದು ಪರೀಕ್ಷಿಸಲು ತಿಳಿಸಿ,ಕಳೆದ ಬಾರೀ ಮತ ಚಲಾವಣೆ ಮಾಡಿದ್ದರೇ ಇಲ್ಲವೇ ಎಂದು ಕೇಳಿ ತಿಳಿದು ಅವರ ಹತ್ತಿರದ ಮತದಾನದ ಕೇಂದ್ರ ವಿಳಾಸ ತಿಳಿಸುತ್ತಿದ್ದದ್ದು ಎಲ್ಲರ ಮೆಚ್ಚುಗೆ ಪಡೆಯಿತು. ಈ ಬಾರಿಯಂತೂ ಸಾಲು ಸಾಲು ರಜಾ ದಿನಗಳು ಇರುವ ಕಾರಣ ಚುನಾವಣೆ ತಪ್ಪಿಸಿ ರಜೆಯ ಮಜವನ್ನು ಅನುಭವಿಸಿದರೆ ಮುಂದಿನ ಐದು ವರ್ಷಗಳು ಪರಿತಪಿಸಬೇಕಾಗುತ್ತದೆ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಮರೆಯಬೇಡಿ ಎಂದು ಎಚ್ಚರಿಸಿ, ಮನೆಯಲ್ಲಿರುವ ಪ್ರತಿಯೊಬ್ಬ ವಯಸ್ಕ ಮತದಾರನೂ ಕಡ್ಡಾಯವಾಗಿ ಮತದಾನ ಮಾಡಲೇ ಬೇಕೆಂಬ ನಮ್ಮ ಕಳ ಕಳಿಯ ಮನವಿ ಅವರ ಮನಕ್ಕೆ ಖಂಡಿತವಾಗಿಯೂ ಮುಟ್ಟುತ್ತಿತ್ತು ಮತ್ತು ಬಹುತೇಕರು, ಇಲ್ಲಾ ಸಾರ್, ಕಳೆದ ಬಾರೀ ನಾನಾ ಕಾರಣಾಂತರಗಳಿಂದ ಮತದಾನ ತಪ್ಪಿಸಿಕೊಂಡಿದ್ದೆವು ಆದರೆ ಈ ಬಾರಿ ತಪ್ಪದೇ ನಮ್ಮ ಮತವನ್ನು ಚಲಾಯಿಸಿಯೇ ತೀರುತ್ತೇವೆ ಎಂಬ ವಾಗ್ದಾನ ನಮ್ಮ ಕೆಲಸಕ್ಕೆ ಸಾರ್ಥಕತೆ ತೋರುತ್ತಿತ್ತು.

ಯಾವುದೇ ಪಕ್ಷದ ಹೆಸರಿಲ್ಲದೆ ಜನಜಾಗೃತಿ ಎಂಬ ಹೆಸರಿನಲ್ಲಿ ಮನೆ ಮನೆ ಭೇಟಿ ನೀಡಿದಾಗ ಜನರ ನಾಡಿ ಮಿಡಿತ ಚೆನ್ನಾಗಿಯೇ ಅರಿವಾಯಿತು. ಹೆಚ್ಚಿನವರು ನಾವು ಯಾರಿಗೆ ಪ್ರಚಾರ ಮಾಡುತ್ತಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ ಹೌದು ಸಾರ್. ದೇಶ ಇನ್ನಷ್ಟು ಉದ್ದಾರವಾಗ ಬೇಕಿದ್ದರೆ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಗಬೇಕು ಎಂದರೆ ಬಹಳಷ್ಟು ಜನ. ಸಾರ್ ಈ ಸರೀನೂ ಮೋದಿನೇ ಬರೋದು ಸಾರ್. ಅವರನ್ನ ಬಿಟ್ಟರೆ ಬೇರೆ ಯಾರಿದ್ದಾರೆ ಹೇಳಿ? ಎಂದು ನಮ್ಮನ್ನೇ ಪ್ರಶ್ನಿಸಿದಾಗ ನಿಜ ಸಾರ್. ಎಲ್ಲರಿಗೂ ಈ ವಿಷಯವನ್ನು ತಪ್ಪದೆ ತಿಳಿಸಿ ಮೋದಿಯವರನ್ನೇ ಬೆಂಬಲಿಸಲು ತಿಳಿಸಿ ಎಂದಾಗ ಖಂಡಿತವಾಗಿಯೂ ಹೇಳುತ್ತಿದ್ದೇವೆ ಸಾರ್ ಎನ್ನುತ್ತಿದರು. ಸಾರ್ ನಮಗೂ ಮೋದಿಯವರ ಪರವಾಗಿ ಕೆಲಸಮಾಡಲು ಇಷ್ಟ ಸಾರ್. ನಮ್ಮನ್ನೂ ನಿಮ್ಮ ಜೊತೆ ಜೋಡಿಸಿಕೊಳ್ಳಿ ಎಂದು ಅನೇಕರು ನಮ್ಮೊಂದಿಗೇ ಪ್ರಚಾರಕ್ಕೆ ಬಂದು ಅದುವರೆಗೆ ಕೇವಲ ಹಿತೈಷಿಗಳಾಗಿದ್ದವರು ಈಗ ಸಕ್ರೀಯ ಕಾರ್ಯಕರ್ತರಾಗಿ ಮಾರ್ಪಾಟಾಗಿರುವುದು ಅಚ್ಚೇ ದಿನ್ ಆಗಯೇ ಹೈ ಎಂಬುದರ ಸಂಕೇತವೇ ಹೌದು.

ರಾಜಕೀಯ ವಿಷಯಗಳಲ್ಲಿ ಹೆಂಗಸರ ಆಸಕ್ತಿ ತುಸು ಕಡಿಮೆ ಎಂದು ಭಾವಿಸಿದ್ದ ನಮಗೆ ನಾವೆಲ್ಲರೂ ಹುಬ್ಬೇರಿಸುವಂತೆ ಅನೇಕ ಗೃಹಿಣಿಯರು ಮತ್ತು ವಯಸ್ಸಾದವರು ಸಹಾ ಈ ಸಲ ನಮ್ಮನೆಯ ಎಲ್ಲರ ಓಟ್ ಬಿಜೆಪಿಗೇ ಎಂದು ಹೇಳುತ್ತಿದ್ದದ್ದು ನಮ್ಮೆಲ್ಲರಿಗೂ ಅಚ್ಚರಿ ಮೂಡಿಸುತ್ತಿತ್ತು. ಇನ್ನು ಅನೇಕರು ಮೋದಿಯವರ ಪರ ಪ್ರಚಾರ ಮಾಡಲು ಹಿಂಜರಿಯುವುದೇಕೆ. ನೇರವಾಗಿಯೇ ಮೋದಿಯವರನ್ನು ಸಮರ್ಥನೆ ಮಾಡಿ ಎಂದು ನಮಗೆ ಸಲಹೆ ಕೊಟ್ಟಿದ್ದೂ ಉಂಟು.

ಹೀಗೆ ಎಲ್ಲಕಡೆಯಲ್ಲೂ ಬಿಜೆಪಿಯದ್ದೇ ಸದ್ದಾಗುತ್ತಿದ್ದರೆ ಅತ್ತ ಕಡೆ ರಾಜ್ಯದ ಮುಖ್ಯಮಂತ್ರಿ ಎಂಬುದನ್ನೂ ಮರೆತು ತಮ್ಮ ಕುಟುಂಬದ ಮೂರು ಸದಸ್ಯರನ್ನು ಕಣಕ್ಕಿಳಿಸಿ ಮತ್ತು ಸಮ್ಮಿಶ್ರ ಸರ್ಕಾರದ ಭಾಗವಾಗಿ ಉಳಿದ 27 ಲೋಕಸಭಾ ಕ್ಷೇತ್ರಗಳಲ್ಲಿಯೂ ತಮ್ಮ ಪ್ರಭಾವ ಬೀರಬೇಕು ಎಂಬುದನ್ನು ಮರೆತು, ಕೇವಲ ತಮ್ಮ ಮಗನ ಕ್ಷೇತ್ರದಲ್ಲಿಯೇ ಝಾಂಡ ಹೂಡಿ ಆವರ ಪ್ರತಿಸ್ಪರ್ಧಿ ಒಬ್ಬ ಹೆಣ್ಣು ಮಗಳು ಎಂಬುದನ್ನೂ ಲೆಕ್ಕಿಸದೆ, ತಮ್ಮ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ನಾಯಕರನ್ನು ಒಳಗೊಂಡು ಎಲ್ಲರೂ ಒಬ್ಬಹೆಣ್ಣು ಮಗಳನ್ನು ಸಾರ್ವತ್ರಿಕವಾಗಿ, ಅದೂ ವಯಕ್ತಿವಾಗಿ ಏಕವಚನದಲ್ಲಿ ನಿಂದಿಸುತ್ತಿರುವುದು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಾಡಿನ ಜನರ ಮನಸ್ಸಿಗೆ ಬೇಸರ ತರಿಸುತ್ತಿದೆ.

ಸ್ವಾತಂತ್ರ್ಯ ಬಂದಾಗಲಿಂದಲೂ ಅಧಿಕಾರಕ್ಕಾಗಿ ಒಂದು ಧರ್ಮದವರನ್ನೇ ಓಲೈಸುತ್ತಾ ಬಂದ ಪಕ್ಷ ಮತ್ತು ಅದರ ನಾಯಕ ಇತ್ತೀಚಿನ ಚುನಾವಣಾ ಸಮಯಗಳಲ್ಲಿ ಮಂದಿರಗಳನ್ನು ಸುತ್ತುತ್ತಾ, ತನ್ನನ್ನು ಹಿಂದೂ ಎಂದೂ ಅದರಲ್ಲೂ ಕಾಶ್ಮೀರೀ ಬ್ರಾಹ್ಮಣ ಎಂದು ಅಂಗಿಯ ಮೇಲೆ ಜನಿವಾರ ಹಾಕಿಕೊಂಡು ಮೆರೆಡಾಡುತ್ತಿದ್ದವ ತನ್ನ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಲುವ ಭಯದಿಂದ ಅಲ್ಪಸಂಖ್ಯಾತರೇ ಬಹು ಸಂಖ್ಯಾತರಾಗಿರುವ ಕೇರಳದ ವೈನಾಡಿನಿಂದ ಸ್ಪರ್ಧೆ ಮಾಡುತ್ತಾ ತನ್ನ ನಿಜವಾದ ಬಣ್ಣವನ್ನು ಜಗಜ್ಜಾಹೀರಾತು ಮಾಡಿದ್ದಾನೆ. ಮಹಾಭಾರತದ ವಿರಾಟ ಪರ್ವದಲ್ಲಿ ಹೆಂಗಳೆಯರ ಸುತ್ತ ಮುತ್ತವೇ ಜಂಬ ಕೊಚ್ಚುತ್ತಾ ಕಾಣ ಸಿಗುವ ಉತ್ತರ ಕುಮಾರನಂತೆ ತನ್ನ ಕೈಯಲ್ಲಿ ಪಕ್ಷವನ್ನು ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ತನ್ನ ತಂಗಿಯನ್ನು ರಾಜಕೀಯಕ್ಕೆ ಕರೆತಂದು ಆಕೆಯನ್ನು ಗುರಾಣಿಯಂತೆ ಬಳೆಸಿಕೊಳ್ಳುತ್ತಿರುವುದು ಆತನ ಅಸಹಾಯಕತೆಗೆ ಹಿಡಿದ ಕನ್ನಡಿಯಾಗಿದೆ. ಸಾಲ ಮನ್ನ ಎನ್ನುವ ಕಣ್ಣೊರೆಸುವ ತಂತ್ರದಿಂದ ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿರುವ ದೇಶದ ಜನರಿಗೆ ದೇಶದ 20ಕೋಟಿ ಜನ ಬಡವರಿಗೆ ಪ್ರತೀವರ್ಷವೂ ಸರ್ಕಾರದ ಕಡೆಯಿಂದ 72000ರೂಪಾಯಿಗಳನ್ನು ಜೀವನಾಂಶವಾಗಿ ಕೊಡುತ್ತೇನೆ ಎಂದು ಘೋಷಿಸಿರುವುದು, ನಿಜವಾಗಿಯೂ ಬೆವರು ಸುರಿಸಿ ಸಂಪಾದಿಸಿ ತೆರಿಗೆ ಕಟ್ಟುವ ಮಂದಿಯ ಆಕ್ರೋಶಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ತಮ್ಮ ರಾಜಕೀಯ ತೆವಲುಗಳನ್ನು ತೀರಿಸಿಕೊಳ್ಳಲು ಜನರ ತೆರಿಗೆ ಹಣವನ್ನು ಈ ರೀತಿಯಾಗಿ ಪೋಲು ಮಾಡುತ್ತಾ ಹೋದಲ್ಲಿ ದೇಶದ ಜನರು ಸೋಮಾರಿಗಳಾಗಿಯೇ ಉಳಿದು ಹೋದಲ್ಲಿ ಅವರನ್ನು ನಾವೇಕೆ ಸಾಕಬೇಕು ಎಂಬ ಅವರ ಪ್ರಶ್ನೆಗೆ ಉತ್ತರ ಕೊಡದೆ, ಹೋದ ಬಂದ ಕಡೆಯಲ್ಲೆಲ್ಲಾ ಉಡಾಫೆ ಮಾತನಾಡುತ್ತಿರುವದನ್ನು ಜನ ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅಣ್ಣಾ ಹಜಾರೆಯವರ ಚಳುವಳಿಯನ್ನೇ ತನ್ನ ರಾಜಕೀಯ ದಾಳವನ್ನಾಗಿ ಪರಿವರ್ತಿಸಿಕೊಂಡು ಹಲವಾರು ಉಚಿತ ಸೇವೆಗಳ ಆಮೀಷಗಳನ್ನು ತೋರಿಸಿ ದೆಹಲಿಯಲ್ಲಿ ಆಧಿಕಾರಕ್ಕೆ ಬಂದು ಮೋದಿಯವರ ಎದುರು ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಹೀನಾಯವಾಗಿ ಸೋಲುಂಡ ಅರವಿಂದನ ಮುಖಾರವಿಂದ ಎಲ್ಲರಿಗೂ ಜನರಿಗೆ ಬೇಸರ ಮೂಡಿಸಿದೆ. ಇತರೇ ರಾಜ್ಯಗಳನ್ನು ಬಿಡಿ ದೆಹಲಿಯಲ್ಲೇ ಕಾಂಗ್ರೇಸ್ ಕೂಡ ಆತನೊಂದಿಗೆ ಸಖ್ಯ ಬೆಳೆಸಲು ಮುಂದಾಗದೇ ಯಾರಿಗೂ ಬೇಡದ ವ್ಯಕ್ತಿಯಾಗಿ ಅಂಡು ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಅಲೆಯುತ್ತಿರುವುದು ನೋಡಲು ಮಜವಾಗಿದೆ.

ಅರವಿಂದನಂತೆಯೇ ಮತ್ತೊಬ್ಬ ವಿಲಕ್ಷಣ ಗೋಸುಂಬೆ ರಾಜಕಾರಣಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಎಂದರೆ ತಪ್ಪಾಗಲಾರದು. ಸದಾ ತನ್ನ ಹಿತಕ್ಕಾಗಿ ಪರಾವಲಂಬಿಯಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನೇ ಆಶ್ರಯಿಸಿ ಹತ್ತುವ ವರೆಗೂ ಏಣಿ ಹತ್ತಿದ ನಂತರ ಏಣಿಯನ್ನು ಒದೆಯುವ ಚಾಳಿಯನ್ನೇ ಮುಂದುವರಿಸಿದ್ದಾನೆ. ಕಳೆದ ನಾಲ್ಕು ವರ್ಷಗಳವರೆಗೂ ಮೋದಿಯವರ ಸರ್ಕಾರದಲ್ಲಿ ಭಾಗಿಯಾಗಿ, ಯಾವಾಗ ಮೋದಿಯವರು ಆಂಧ್ರಕ್ಕೆ ನೀಡಿದ ಅನುದಾನದ ಲೆಕ್ಕವನ್ನು ಕೇಳಲು ಆರಂಭಿಸಿದಾಗ ಮೋದಿಯವರನ್ನು ತೆಗಳುತ್ತಾ ಅವರ ವಿರುದ್ಧ ಶತೃಗಳ ಶತೃ ತನ್ನ ಮಿತ್ರ ಎನ್ನುವಂತೆ ಮೋದಿಯವರ ವಿರೋಧಿಗಳನ್ನೆಲ್ಲಾ ಒಗ್ಗೂಡಿಸಿ ಮಹಾಘಟ್ವಂಧನ್ ಕಟ್ಟಲು ಹೋಗಿ ಈಗ ಅಕ್ಷರಶಃ ಯಾರಿಗೂ ಬೇಡವಾಗಿ ಏಕಾಂಗಿಯಾಗಿ ಚುನಾವಣೆಗಿಂತಲೂ ಮುಂಚೆ ಸೋಲನ್ನು ಒಪ್ಪಿಕೊಂಡಂತಾಗಿದೆ.

ಸಾವಿರಾರು ಕೋಟಿ ಮೇವಿನ ಹಗರಣದ ಆರೋಪ ಸಾಬೀತಾಗಿ ಜೈಲಿನಲ್ಲಿ ಬಂಧಿಯಾಗಿರುವ ಲಾಲು ಪ್ರಸಾದ್ ಯಾದವ್ ಕುಟುಂಬ ರಾಜಕಾರಣ ಮತ್ತೊಮ್ಮೆ ತಮ್ಮ ಯಾದವೀ ಕಲದಿಂದ ಇಬ್ಬಾಗವಾಗಿ ಅಣ್ಣಾ ತಮ್ಮಂದಿರೇ ಪರಸ್ಪರ ವಿರೋಧಿಗಳಾಗಿ ಚುನಾವಣೆ ಎದುರಿಸುತ್ತಿದ್ದರೆ ಅತ್ತ ಉತ್ತರ ಪ್ರದೇಶದಲ್ಲಿನ ಅಖಿಲೇಶ್ ಯಾದವ್ ಅವರ ಪಕ್ಷ ಮೂರು ಹೋಳಾಗಿ ಅಪ್ಪಾ, ಮಗ ಮತ್ತು ಚಿಕ್ಕಪ್ಪಂದಿರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಅರ್ಹತೆ ಇಲ್ಲದಿದ್ದರೂ ಕೇವಲ ತನ್ನ ಜಾತೀಯ ಅಸ್ತ್ರವನ್ನು ಝಳಿಪಿಸುತ್ತಾ ಪ್ರಧಾನಿಯಾಗುವ ಕನಸನ್ನು ಕಾಣುತ್ತಿದ್ದ ಮಾಯಾವತಿಗೆ ತನ್ನ ಸೋಲಿನ ಅರಿವಾಗಿ ಈ ಬಾರಿ ಚುನಾವಣೆಗೇ ಸ್ಪರ್ಥಿಸದೇ ಅದೃಷ್ಟದ ಆಟದತ್ತ ಚಿತ್ತಹರಿಸಿರುವುದು ಸ್ಪಷ್ಟವಾಗಿದೆ.

ಕಮ್ಯೂನಿಷ್ಟರ ದಬ್ಬಾಳಿಕೆಗೆ ಎದೆ ಒಡ್ಡಿ ಅವರನ್ನು ನಿರ್ನಾಮ ಮಾಡಿ ಒಳ್ಳೆಯ ರಾಜ್ಯಾಭಾರ ನೀಡುತ್ತಾಳೆ ಎಂದು ಭಾವಿಸಿದ್ದ ಪಶ್ಚಿಮ ಬಂಗಾಳದ ಜನರಿಗೆ ಮಮತಾ ಬ್ಯಾನರ್ಜಿಯ ಕರಾಳ ಮುಖ ಅರಿವಾಗಲು ಇಷ್ಟು ಕಾಲ ತೆಗೆದುಕೊಂಡಿದ್ದು ನಿಜಕ್ಕೂ ದೌರ್ಭಾಗ್ಯವೇ ಸರಿ. ಸ್ವತಃ ಹಿಂದೂವಾಗಿದ್ದು, ಸದಾ ಅನ್ಯಧರ್ಮೀಯರನ್ನೇ ಓಲೈಕೆ ಮಾಡುತ್ತಾ ತನ್ನ ಓಟ್ ಬ್ಯಾಂಕ್ ವೃಧ್ದಿಗಾಗಿ ಅಕ್ರಮ ಸುಸುಳುಗೋರ ಬಾಂಗ್ಲಾದೇಶಿಯರನ್ನು ಸಕ್ರಮ ಮಾಡುತ್ತಾ, ಹಿಂದೂಗಳ ಹಬ್ಬಕ್ಕೆ ತಡೆ ಒಡ್ಡುತ್ತಿದ್ದನ್ನು ನೋಡಿ ಬಂಗಾಲಿಗಳ ಸಹನೆಯ ಕಟ್ಟೆ ಒಡೆದು ನಿಚ್ಚಳವಾಗಿ ಈ ಬಾರಿ ಬಿಜೆಪಿಯನ್ನು ಅಭೂತಪೂರ್ವವಾಗಿ ಬೆಂಬಲಿಸಲು ನಿರ್ಧರಿಸಿರುವುದು ಮತ್ತು ಆಕೆಯ ಪಕ್ಷದ ಅನೇಕ ಹಾಲೀ ಸಾಂಸದರೂ ಬಿಜೆಪಿಗೆ ಸೇರ್ಪಡೆಯಾಗಿರುವುದು ಮಮತಾಳ ನಿದ್ದೆಗೆಡಿಸಿರುವುದು ಸುಳ್ಳಲ್ಲ.

ಹೀಗೆ ಮೋದಿಯವರು ಸದ್ದಿಲ್ಲದೆ ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ತಮ್ಮ ವಿರೋಧಿಗಳ ಮೇಲೂ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಾ ಮಹಾ ಘಟ್ಬಂಧನ್ ಎಂಬ ದುಷ್ಟಕೂಟವನ್ನು ನುಚ್ಚು ನೂರು ಮಾಡಿ ವಿಜಯದತ್ತ ದಿಟ್ಟವಾಗಿ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗೆ ಮೋದಿಯವರ ಮೋಡಿ ಮನ ಮನೆಗಳಿಗೂ ತಲುಪಿ ಮೋದಿ ಮತ್ತೊಮ್ಮೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಆರಾಧನೆಯಾಗದೆ, ಮೋದಿ ಮತ್ತೊಮ್ಮೆ ಎನ್ನುವುದು ಒಂದು ಆಂದೋಲನದ ರೀತಿಯ ಮಾರ್ಪಟ್ಟಿದೆ ಎಂದರೂ ತಪ್ಪಾಗಲಾರದು. ಇದೇ ಗತಿಯನ್ನು ಮತ್ತು ಮನೋಭಾವವನ್ನು ಚುನಾವಣೆಯವರೆಗೂ ಕಾಯ್ದುಕೊಂಡಲ್ಲಿ ಮೋದಿ ಮತ್ತೊಮ್ಮೆ ಭಾರೀ ಬಹುತದಿಂದ ಪ್ರಧಾನಿಗಳಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಹಾಗೆಂದ ಮಾತ್ರಕ್ಕೇ ನಾವೆಲ್ಲರೂ ಸುಮ್ಮನೆ ಕೂರಲು ಸಾಧ್ಯವಿಲ್ಲ. ಚುನಾವಣೆ ಮುಗಿಯುವವರೆಗೂ ನಮ್ಮ ಕ್ಷೇತ್ರದಲ್ಲಿ ಮೋದಿಯವರೇ ಸ್ಪರ್ಥಿಸುತ್ತಿದ್ದಾರೆ ಎನ್ನುವಂತೆಯೇ ಕೆಲಸ ಮಾಡಿ ನಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವುದರ ಮುಖಾಂತರ ಮೋದಿ ಮತ್ತೊಮ್ಮೆ ಆಂದೋಲನದಲ್ಲಿ ಭಾಗಿಯಾಗೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s