ನೆನ್ನೆ ಸಂಜೆ ತೋಳ ಬಂತು ತೋಳ ಅನ್ನುವ ಹಾಗೆ ಈಗ ಬಿಡುಗಡೆ ಮಾಡ್ತೀವಿ, ಅಗ ಬಿಡುಗಡೆ ಮಾಡ್ತೀವಿ. ಚಿದಂಬರಂ ಮತ್ತು ಮೋಯ್ಲಿಯವರ ತಂಡ ಎಲ್ಲಾ ಸಿದ್ದ ಪಡಿಸ್ತಿದ್ದಾರೆ ಅಂತ ಹೇಳ್ತಾನೇ, ನೆನ್ನೆ ಮಧ್ಯಾಹ್ನ ಕಾಂಗ್ರೇಸ್ ಗಜಗರ್ಭದಂತೆ ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಓದುತ್ತಿದ್ದಂತೆಯೇ ಇದು ನಮ್ಮದೇಶದ ಒಂದು ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಯೋ ಇಲ್ಲವೇ ಪಾಪೀಸ್ಥಾನದ ಉಗ್ರರ ಪ್ರಣಾಳಿಕೆಯೋ ಅನ್ನುವ ಅನುಮಾನ ಮೂಡಿದ್ದಂತೂ ಸತ್ಯ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸಿ ಅವುಗಳ ಜೊತೆ ಜೊತೆಯಲ್ಲಿಯೇ ಭಾರತೀಯ ನೀತಿ ಸಂಹಿತೆ ರಚಿಸಿ ಹಲವಾರು ನೀತಿ ನಿಯಮಗಳನ್ನು ರೂಪಿಸಿದರು. ಅಂತಹ ನೀತಿಗಳಲ್ಲಿ ದೇಶದ್ರೋಹದ ಆರೋಪವಾದ 124A ಪ್ರಮುಖವಾದದ್ದು. ಈ ನೀತಿಯ ಪ್ರಕಾರ ದೇಶದ ಯಾವುದೇ ವ್ಯಕ್ತಿ ಪತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ, ಕೃತಿಯ ಮೂಲಕವೋ ಕ್ರಿಯೆಯ ಮೂಲಕವೋ, ಸಂಜ್ಞೆಯ ಮೂಲಕವೂ ಅಥವಾ ಬೇರಾವುದೇ ಮೂಲಕವಾಗಲೀ ದೇಶದ ವಿರುದ್ಧ ಪ್ರತಿಭಟಿಸುವುದಾಗಲೀ ಪ್ರಚೋದನೆ ಮಾಡಿದಲ್ಲಿ ಅಂತಹ ವ್ಯಕ್ತಿಗೆ ಕಠಿಣ ಶಿಕ್ಷೆಗೆ ಒಳಪಡುತ್ತಾರೆ. ಈಗಾಗಲೇ ಇಂತಹ ಆರೋಪಕ್ಕೆ ದೆಹಲಿಯ ಜೆ.ಎನ್.ಯು ಕಾಲೇಜಿನ ಕನ್ನಯ್ಯ ಮತ್ತು ಆತನ ತುಕುಡೇ ತುಕುಡೇ ತಂಡ ಮತ್ತು ಗುಜರಾತಿನ ಹಾರ್ಧಿಕ್ ಪಟೇಲ್ ಗುರಿಯಾಗಿದ್ದಾರೆ. ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ 124A ರದ್ಧು ಪಡಿಸುತ್ತಾರಂತೆ. ಈ ಮೂಲಕ ಕಾಂಗ್ರೇಸ್ ಪಕ್ಷ ದೇಶ ವಿರೋಧಿಗಳನ್ನು ಕಾನೂನಾತ್ಮಕವಾಗಿ ರಕ್ಷಣೆ ಮಾಡಲು ಹೊರಟಿರುವುದು ಎಷ್ಟು ಸರಿ?
ಇನ್ನು ಭಾರತ ಮತ್ತು ಪಾಕೀಸ್ಥಾನ ಇಬ್ಭಾಗವಾದಾಗ ಕಾಶ್ಮೀರದ ರಾಜ ಅಂತಿಮ ಗಳಿಗೆಯಲ್ಲಿ ಭಾರತದೊಡನೆ ಸೇರಲು ಒಪ್ಪಿಕೊಂಡರೂ ಪಾಪೀಸ್ಥಾನ ಖ್ಯಾತೆ ತೆಗೆದ ಪರಿಣಾಮ ಕಾಶ್ಮೀರಿಗಳನ್ನು ಮತ್ತು ಶೇಕ್ ಅಬ್ದುಲ್ಲರನ್ನು ಓಲೈಸಲು ಅಂದಿನ ಪ್ರಧಾನಿ ಮಾಡಿದ ಘೋರ ಅಪರಾಧವೇ 370ನೇ ವಿಧಿ. ಈ ವಿಧಿಯ ಪ್ರಕಾರ ಕಾಶ್ಮೀರ ಭಾರತದ ಅಂಗರಾಜ್ಯವಾಗಿದ್ದರೂ ಅಲ್ಲಿ ಭಾರತದ ಸಂವಿಧಾನದ ಬದಲು ಅವರದ್ದೇ ಪ್ರತ್ಯೇಕ ಸಂವಿಧಾನ ಅಲ್ಲಿಗೇ ಪ್ರತ್ಯೇಕ ಪ್ರಧಾನಿಗಳು ಮತ್ತು ಬಾವುಟ ಎಲ್ಲದ್ದಕ್ಕೂ ಮಿಗಿಲಾಗಿ ಕಾಶ್ಮೀರಿಗಳ ಹೊರತಾಗಿ ಬೇರಾರು ಅಲ್ಲಿ ಖಾಯಂ ವಾಸಿಸುವ ಹಾಗಿಲ್ಲ ಮತ್ತು ಸ್ಥಿರಾಸ್ಥಿಗಳನ್ನು ಹೊಂದುವ ಹಾಗಿಲ್ಲ . ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡ ಅಲ್ಲಿಯ ಒಂದು ಕೋಮಿನವರು ಬಹುಸಂಖ್ಯಾತರಾಗಿದ್ದ ಕಾಶ್ಮೀರಿ ಪಂಡಿತರನ್ನು ಏಕಾ ಏಕಿ ದೌರ್ಜನ್ಯದಿಂದ ಕಾಶ್ಮೀರದಿಂದ ಹೊರದೂಡಿ ಅವರ ಎಲ್ಲಾ ಆಸ್ತಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದು ಈಗ ಇತಿಹಾಸ. ಪಾರ್ಸಿ ತಂದೆ ಕ್ರಿಶ್ಚಿಯನ್ ತಾಯಿಯ ಮಗನಾದರೂ ಚುನಾವಣೆಯ ಸಮಯದಲ್ಲಿ ಮಾತ್ರವೇ ದತ್ತಾತ್ರೇಯ ಗೋತ್ರದ ಕಾಶ್ಮೀರಿ ಕೌಲ್ ಬ್ರಾಹ್ಮಣನಾದ ರಾಹುಲ್ ಗಾಂಧಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 370ನೇ ವಿಧಿಯನ್ನು ತೆಗೆದು ಹಾಕುವುದಿಲ್ಲವಂತೆ. ಕಾಶ್ಮೀರೀ ಪಂಡಿತರ ಕಣ್ಣಿಗೆ ಸುಣ್ಣ ಮತ್ತು ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ. ಹೀಗಿದೆ ನೋಡಿ ರಾಹುಲನ ಅಲ್ಪ ಸಂಖ್ಯಾತರ ತುಷ್ಟೀಕರಣ.
ಕಾಶ್ಮೀರೀಗಳಿಗೆ ನೆರೆಯಾದರೆ, ಮಂಜು ಆವೃತವಾದರೆ, ಶತೃಗಳ ಆಕ್ರಮಣವಾದರೆ ಅವರನ್ನು ರಕ್ಷಿಸಲು ನಮ್ಮ ಸೈನ್ಯದ ಅವಶ್ಯತೆ ಬೇಕು. ಆದರೆ ಅದೇ ಸೈನಿಕರ ಮೇಲೆ ಸ್ಥಳೀಯರು ವಿನಾಕಾರಣ ದೌರ್ಜ್ಯನ ನಡೆಸುವುದು, ಕಲ್ಲು ತೂರುವುದು, ಅತ್ಯಾಚಾರದ ಸುಳ್ಳು ಸುಳ್ಳು ಕೇಸ್ ದಾಖಲು ಮಾಡುತ್ತಿದ್ದರು. ಅದಕ್ಕಾಗಿಯೇ ಕಳೆದ ಎರಡು ವರ್ಷಗಳ ಹಿಂದೆ ಪ್ರಸಕ್ತ ಸರ್ಕಾರ ಸೈನ್ಯಕ್ಕೆ ವಿಶೇಷ ಅಧಿಕಾರವನ್ನು ನೀಡಿದರು. ಅದರಂತೆಯೇ ಯಾವಾಗ ಕಲ್ಲು ತೂರುವವರನ್ನೇ ಮಿಲಿಟರಿ ಜೀಪಿಗೆ ಕಟ್ಟಿ ಕಲ್ಲು ತೂರುವವರ ಮುಂದೆ ನಿಲ್ಲಿಸಿದರೋ ಅಲ್ಲಿಂದೀಚೆಗೆ ಕಲ್ಲು ತೂರುವರರ ಸಂಖ್ಯೆ ಕಡಿಮೆಯಾಗಿದೆ. ಒಂದು ವೇಳೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ, ಸೈನ್ಯಕ್ಕೆ ನೀಡಿರುವ ಈ ವೀಶೇಷ ಅಧಿಕಾರವನ್ನು ಹಿಂಪಡೆಯುತ್ತಾರಂತೆ. ಹೇಗಿದೆ ನೋಡಿ ಕಾಂಗಿಗಳ ಸೈನಿಕರ ರಕ್ಷಣೆ?
ಅದೇ ರೀತಿ ಸುಖಾ ಸುಮ್ಮನೆ ರಾಜಕೀಯ ದ್ವೇಷದಿಂದ ಗಾಳಿಯಲ್ಲಿ ಗುಂಡು ಹಾರಿಸುವಂತೆ ಮತ್ತೊಬ್ಬರ ಮೇಲೆ ಸುಳ್ಳು ಆಪಾದನೆ ಮಾಡುವ ಚಾಳಿ ಬಹುತೇಕ ಎಲ್ಲಾ ರಾಜಕಾರಣಿಗಳಿಗೂ ಕರತಲಾಮರಕವಾಗಿದೆ. ಅದರಲ್ಲೂ ಅರವಿಂದ ಕೇಜ್ರಿವಾಲ್ ಮತ್ತು ರಾಹುಲ್ ಮತ್ತವನ ತಂಡದವರದ್ದು ಇದರಲ್ಲಿ ಎತ್ತಿದ ಕೈ. ಇಂತಹವರ ಸುಳ್ಳು ಆಪಾದನೆಗಳಿಗೆ ಬೇಸತ್ತು ಮಾನ ನಷ್ಟ ಮೊಕ್ಕದ್ದಮ್ಮೆ ಹಾಕಿದ ಪರಿಣಾಮವಾಗಿ ಈಗಾಗಲೇ ಕೇಜ್ರಿವಾಲ್, ಅರುಣ್ ಜೇಟ್ಲಿ ಮತ್ತು ಗಡ್ಕರಿಯವರಿಗೆ ಕ್ಷಮೆಯಾಚಿಸಿಯಾಗಿದೆ. ರಾಹುಲ್ ಗಾಂಧಿಯ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನನಷ್ಟ ಮೊಕ್ಕದ್ದಮ್ಮೆ ಇನ್ನೂ ವಿಚಾರಣೆಯಲ್ಲಿದೆ. ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಂತೆ ಅವರು ಅಧಿಕಾರಕ್ಕೆ ಬಂದಲ್ಲಿ ಮಾನ ನಷ್ಟ ಮೊಕ್ಕದ್ದಮ್ಮೆ ಕಾನೂನನ್ನೂ ತೆಗೆದು ಹಾಕುತ್ತಾರಂತೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಲ್ಲಿ ಯಾರನ್ನು ಬೇಕಾದರೂ, ಹೇಗೆ ಬೇಕಾದರೂ, ಎಲ್ಲಿಯೇ ಆದರೂ ಸುಳ್ಳು ಸುಳ್ಳು ಆಪಾದನೆ ಮಾಡಿ ಅವರ ತೇಜೋವಧೆ ಮಾಡಬಹುದಲ್ಲವೇ?
ಮತ್ತೊಮ್ಮೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ, ದೇಶದ 20% ಬಡವರಿಗೆ ತಿಂಗಳಿಗೆ 6000ರೂನಂತೆ ವರ್ಷಕ್ಕೆ 72000ರೂಪಾಯಿಗಳನ್ನು ಸರ್ಕಾರದ ವತಿಯಿಂದಲೇ ಜೀವನಾಂಶದ ರೀತಿಯಲ್ಲಿ ಕೊಟ್ಟು 2030ನೇ ಇಸ್ವಿಯೊಳಗೆ ಭಾರತವನ್ನು ಬಡವರ ಮುಕ್ತರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೇ 1971ರ ಇಂದಿರಾ ಗಾಂಧಿಯ ಕಾಲದಿಂದಲೂ ಗರೀಬೀ ಹಟಾವ್ ಕಾರ್ಯಕ್ರಮದ ಅಡಿಯಲ್ಲಿ ನಡೆಸುತ್ತಲೇ ಇದ್ದು, ಇಂದಿಗೂ ದೇಶದ ಕೊಟ್ಯಾಂತರ ಜನ ಬಡತನದ ರೇಖೆಯ ಕೆಳಗೇ ಇದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾವ ರೀತಿಯಾಗಿ ಕ್ರೂಡೀಕರಿಸುತ್ತಾರೆ ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ. ಹೀಗೆ ಸುಮ್ಮನೆ ಕುಳಿತಲ್ಲಿಯೇ ಅನಾಯಾಸವಾಗಿ ಹಣ ಬರುತ್ತಿದ್ದರೆ, ಜನ ಸೋಮಾರಿಗಳಾಗುತ್ತಾರೆಯೇ ಹೊರತು ದುಡುಯುವ ಮನಸ್ಸೇ ಮಾಡುವುದಿಲ್ಲ ಅಲ್ಲವೇ? ಇವರುಗಳ ತೆವಲಿಗೆ ಇನ್ನೊಬ್ಬರು ಬೆವರು ಸುರಿಸಿ ತೆರಿಗೆ ಕಟ್ಟಿದ ಹಣವನ್ನು ಬಳಸುವುದು ಯಾವ ನ್ಯಾಯ?
ಒಟ್ಟಿನಲ್ಲಿ ಮೋದಿಯವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದರೆ, ಕಾಂಗಿಗಳು ಸಾಬ್ರುಕೇ ಸಾಥ್, ಸಾಬ್ರಕಾ ವಿಕಾಸ್ ಎನ್ನುವಂತೆ ಕೇವಲ ಒಂದು ಪಂಗಡದ ಓಲೈಕೆಯನ್ನೇ ಮಾಡುತ್ತಿರುವುದು ಜಗಜ್ಜಾಹೀರಾತಾಗಿದೆ. ಇದಕ್ಕೇ ಪುಷ್ಟಿ ಕೊಡುವಂತೆ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಲುವ ಭಯದಿಂದ ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ಕೇರಳದ ವೈನಾಡಿನಿಂದ ರಾಹುಲ್ ಸ್ಪರ್ಧಿಸುತ್ತಿದ್ದಾನೆ ಎನ್ನುವುದನ್ನು ಎಲ್ಲರೂ ಗಮನಿಸಬೇಕಾದ ಅಂಶವಾಗಿದೆ.
ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಸುಳ್ಳು ಪೊಳ್ಳುಗಳನ್ನೇ ಹೇಳುತ್ತಾ, ಶಿವ ಭಕ್ತ, ಜನಿವಾರ ಧಾರಿ ಬ್ರಾಹ್ಮಣ ಎನ್ನುತ್ತಾ ಹಿಂದೂಗಳ ತಲೆ ಸವರಿ ಕೂದಲೆಳೆಯಲ್ಲಿ ಅಧಿಕಾರ ಪಡೆದು ಈಗ ಕೊಟ್ಟ ಆಶ್ವಾಸನೆಗಳನ್ನು ಪೂರೈಸಲು ಹೆಣಗಾಡುತ್ತಿರುವ ಕಾಂಗಿಗಳು ಮತ್ತದೇ ತಂತ್ರಗಾರಿಕೆಯಿಂದ ಮತ್ತೊಂದು ಕೋಮಿನ ಜನರನ್ನು ತುಷ್ಟೀಕರಣ ಮಾಡುತ್ತಾ ಅಧಿಕಾರಕ್ಕೆ ಬರಲು ಹಾತೊಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಯಾವುದೇ ಜಾತಿ ಧರ್ಮದ ಬೇಧ ಭಾವವಿಲ್ಲದೇ, ಒಂದೇ ರಾಷ್ಟ್ರ ಒಂದೇ ಕಾನೂನು ಎಂಬುದನ್ನು ತರಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ವಿರುದ್ಧವಾಗಿ ದೇಶವನ್ನೇ ತುಂಡರಿಸಲು ಹೊರಟಿರುವ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಸುಸಂಧರ್ಭ ಈಗ ಬಂದಿಗೆ. ದೇಶ ಮೊದಲು ಧರ್ಮ ಆನಂತರ. ದೇಶ ಮೊದಲು ಪಕ್ಷ ಆನಂತರ ಎಂಬುದನ್ನು ಕಾಂಗ್ರೇಸ್ಸಿಗರಿಗೆ ತಿಳಿಸಲೇ ಬೇಕಿದೆ.
ಏನಂತೀರೀ?