ಭಾರತೀಯ ಮತದಾರನ ಹೃದಯಾಂತರಾಳದ ಮಾತು

ನನ್ನ ಹೆಸರು ಮನೀಷ್ ಕುಮಾರ್.  ಜನ್ಮತಃ ನಾನೊಬ್ಬ ಹಿಂದು ಮತ್ತು 2014 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೇ ನನ್ನ ಮತವನ್ನು ನೀಡಿದ್ದೇನೆ . ಗುಜರಾತ್ ಮಾದರಿಯ ಬಗ್ಗೆ ನಾನು ಕೇಳಿದ್ದೆ, ಮೋದಿ ಪ್ರಧಾನಿಯಾದರೆ,ದೇಶಾದ್ಯಂತ ಗೋಧ್ರಾ ಮಾದರಿಯ ಕೋಮು ದಳ್ಳುರಿಯ ಪ್ರಕರಣಗಳು ಹೆಚ್ಚಾಗಬಹುದು ಎಂದು ಎಣಿಸಿದಿದ್ದೆ. ಆದರೆ ಜನರು ಬಹುತದಿಂದ ಮೋದಿಯವರನ್ನು ಅಯ್ಕೆಮಾಡಿ ಪ್ರಧಾನಿಯನ್ನಾಗಿ ಮಾಡಿದಾಗ, ಅಯ್ಯೋ  ನನ್ನ  ಒಂದು  ಮತ ವ್ಯರ್ಥವಾಯಿತಲ್ಲಾ ಎಂದು ವಿಷಾಧಿಸಿದ್ದೆ.

ನನ್ನ ಸ್ನೇಹಿತರೊಂದಿಗೆ  ವಾದಮಾಡುತ್ತಾ  ಮೋದಿ ಜನರಲ್ಲಿ ಹಗೆತನವನ್ನು ಹೆಚ್ಚಿಸುವ ಮತ್ತು ರಾಮ ದೇವಾಲಯದ ನಿರ್ಮಾಣದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಅವರ  ವಿಶ್ವ ಪ್ರವಾಸದಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲಾ ಎಂದು ವಾದಿಶುತ್ತಿದ್ದೆ.  ಸ್ಮಾರ್ಟ್ ನಗರಗಳಿಗೆ ಅವರು ಕೋಟಿ  ಕೋಟಿಗಳನ್ನು ಹಂಚಿಕೊಂಡಾಗ ಅವರು ಭ್ರಷ್ಟರಾಗಿದ್ದಾರೆಂದು ನಾನು ಆರೋಪಿಸಿದೆ. ನೋಟು ಅಮಾನ್ಯೀಕರಣ  ಸಂಭವಿಸಿದಾಗ ನಾನು ಅದನ್ನು   ದ್ವೇಷಿಸಿದೆ. ನಾನು ಜಿಎಸ್ಟಿ ಇಷ್ಟಪಟ್ಟಿದ್ದರೂ ಸಹ ಅದರ ಅನುಷ್ಟಾನದ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ.

4 ವರ್ಷಗಳ ಬಳಿಕ ಮೋದಿಯವರ ಮೇಲಿನ  ನನ್ನ ಪೂರ್ವಾಗ್ರಹ ಪೀಡಿತ ಸಂದೇಹ  ಕಡಿಮೆಯಾಗತೊಡಗಿತು.  ನಾನು ಗಡಿಭಾಗದಲ್ಲಿ ಭಯೋತ್ಪಾದಕರ ಧಾಳಿಯನ್ನು ನಿಭಾಯಿಸುವುದರಲ್ಲಿ  ಮೋದಿ ಸರ್ಕಾರ ಹೇಗೆ ಯಶಸ್ವಿಯಾಗಿದೆಯೆಂಬುದನ್ನು ಅರಿತುಕೊಂಡೆ. ಅಭಿನಂದನ್ ಪ್ರಕರಣದಲ್ಲಿ ಪಾಕಿಸ್ತಾನವನ್ನು ದಂಡಿಸುವಲ್ಲಿ ಅವರ ವಿಶ್ವ ಪ್ರವಾಸಗಳು ಹೇಗೆ ನೆರವಾದವು ಎಂಬುದನ್ನು ಕಂಡು ಕೊಂಡೆ. ನೋಟು  ಅಮಾನ್ಯೀಕರಣ  ಕಾಶ್ಮೀರದ ಸೈನಿಕರ ಮೇಲೆ  ಕಲ್ಲು ತೂರಾಟವನ್ನು ಹೇಗೆ  ಕಡಿಮೆ ಮಾಡಿತು ಮತ್ತು ಇಂದು  ದೈನೇಸಿಯಾಗಿ ಪಾಕ್  ವಿದೇಶಗಳಿಂದ ಹೇಗೆ ಹಣವನ್ನು  ಭಿಕ್ಷೇ ಬೇಡುತ್ತಿದೆ  ಎಂಬುದನ್ನೂ ಅರ್ಥೈಸಿಕೊಂಡೆ. ಒಳನಾಡಿನ ಜಲಮಾರ್ಗಗಳು, ಎಲ್ಲಾ  ವ್ಯವಹಾರಗಳ ಡಿಜಿಟೈಸೇಷನ್ ಮತ್ತು ನಾಗರಿಕ ಹಡಗು ಮಸೂದೆ ಮುಂತಾದ ದೀರ್ಘಕಾಲೀನ ಬದ್ಧತೆಗಳು ದೇಶಕ್ಕೆ ಪ್ರಯೋಜನಕಾರಿಯಾಗಿವೆ ಮತ್ತು  ಇವುಗಳಿಂದ  ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳೂ  ಸಹ ಕಡಿಮೆಯಾಗಿದೆ  ಎಂಬುದನ್ನು ತಿಳಿದುಕೊಂಡೆ.

ನಾವು ಬಿಸಿ ಬಿಸಿ ಸಮೋಸಾವನ್ನು  ಒಮ್ಮೆಲೆ ಬಾಯಿಗೆ ಇಟ್ಟು ಕೊಂಡರೆ ನಾಲಿಗೆ ಸುಟ್ಟು ಹೋಗುತ್ತದೆ. ಆದರೆ ಅದರ ಒಂದೊಂದೇ  ಹೊರ ಭಾಗವನ್ನು  ನಿಧಾನವಾಗಿ ತಿನ್ನುತ್ತಾ ಹೋದಂತೆ ಸಮೋಸಾ ಬಿಸಿಯೂ ಕಡಿಮೆಯಾಗುತ್ತದೆ ಮತ್ತು ರುಚಿಯನ್ನೂ ಚೆನ್ನಾಗಿ ಸವಿಯಬಹುದು ಅದೇ ರೀತಿ ಮೋದಿಯವರೂ  ಕೂಡಾ ಪಾಕಿಸ್ತಾನದೊಂದಿಗೆ ನೇರವಾಗಿ ಯುದ್ಧ ಮಾಡುತ್ತಿಲ್ಲ.  ಆದರೆ ಅದರ ತೋಳುಗಳನ್ನು ಒಂದೊಂದಾಗಿ  ಕತ್ತರಿಸುತ್ತಿದ್ದಾರೆ. ಅವರಿಗೆ  ಬರಿತ್ತಿದ್ದ  ವಿದೇಶಿ  ನಿಧಿಯನ್ನು ನಿಲ್ಲಿಸುತ್ತಿದ್ದಾರೆ, ವಿಶ್ವಸಂಸ್ಥೆಯಲ್ಲಿ ಪಾಪೀಸ್ಥಾನ  ಒಂದು ಭಯೋತ್ಪಾದಕ ದೇಶ ಎಂಬುದನ್ನು ಸಮರ್ಥವಾಗಿ ಎತ್ತಿ ತೋರಿಸಿಕೊಟ್ಟಿದ್ದಾರೆ ಮತು ಇದರಿಂದಾಗಿ ಇತರೇ ದೇಶಗಳಿಂದ ಭಾರತಕ್ಕೆ ಬೆಂಬಲವನ್ನು ಪಡೆಯುತ್ತಿದ್ದಾರೆ, ಅಕಸ್ಮಾತ್ ಯುದ್ಧದ ಪರಿಸ್ಥಿತಿ ಸಂಭವಿಸಿದಲ್ಲಿ ಪಾಪೀಸ್ಥಾನದ ಮೇಲೆ ಒಂದೇ ಒಂದು ಗುಂಡು ಹಾರಿಸದೇ  ಯುದ್ಥವನ್ನು ಗೆಲ್ಲುವ ಪರಿಸ್ಥಿತಿಯಲ್ಲಿಟ್ಟಿದ್ದಾರೆ.

ಅವರು ಸೋನಿಯಾ ಮತ್ತು ಇನ್ನಿತರರನ್ನು ಜೈಲಿಗೆ ಕಳುಹಿಸಿವ ದ್ವೇಷದ ರಾಜಾಕಾರಣ ಮಾಡುತ್ತಿಲ್ಲ. ಆದರೆ ಅವರಿಗೆ  ವಿದೇಶದಿಂದ ಮತ್ತು ದೇಶದ  ಒಳಗಿನಿಂದ ಬರುತ್ತಿರುವ ಒಂದೊಂದೇ  ಸಹಾಯವನ್ನು ತೆಗೆದುಹಾಕುತ್ತಿದ್ದಾರೆ. ಅವರ  ಒಂದೊಂದೇ ಪ್ರಕರಣಗಳನ್ನು ಬಯಲಿಗೆಳೆಯುತ್ತಿದ್ದಾರೆ   ಮತ್ತು ಕಾನೂನು ರೀತಿಯಲ್ಲಿಯೇ  ತನಿಖೆ ನಡೆಸಿ ಇನ್ನು ಕೆಲವೇ ದಿನಗಳಲ್ಲಿ ಅವರೆಲ್ಲರೂ  ತಮ್ಮ ಕೊನೇ ದಿನಗಳನ್ನು  ಜೈಲಿನಲ್ಲಿಯೇ ಕಡೆಗೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.  ಲಾಲೂ ಪ್ರಸಾದ್ ಯಾದವ್ ಮತ್ತು ಶಶಿಕಲಾ ಈಗಾಗಲೇ ಜೈಲಿನಲ್ಲಿ ಮುದ್ದೇ ಮುರಿಯುತ್ತಿದ್ದಾರೆ ಮತ್ತು ಅವರ ಜೊತೆ ಸೇರಿಕೊಳ್ಳಲು ಹಲವಾರು ಜನ ಸರತಿಯಲ್ಲಿ ಈಗಾಗಲೇ ನಿಂತಿದ್ದಾರೆ.

ನಾನು ಬಿಜೆಪಿ ಬೆಂಬಲಿಗನಲ್ಲ ಮತ್ತು ನರೇಂದ್ರ ಮೋದಿಯ ಅಂಧ ಭಕ್ತನಂತೂ ಅಲ್ಲವೇ ಅಲ್ಲ. ಒಂದು ಪಕ್ಷ ಕಾಂಗ್ರೆಸ್ ನರೇಂದ್ರ ಮೋದಿಯವರಿಗಿಂತ ಉತ್ತಮ ವ್ಯಕ್ತಿಯನ್ನು ಕಂಡುಕೊಂಡರೆ , ಖಂಡಿತವಾಗಿಯೂ ಮತ್ತೇ ನಾನು ಕಾಂಗ್ರೆಸ್ ಪಕ್ಷಕ್ಕೇ ಮತ ಚಲಾಯಿಸುತ್ತೇನೆ.

ಕಳೆದ ಐದು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಆಭಿವೃಧ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಮುಂದಿನ 10 ವರ್ಷಗಳು ಬಹಳ ಪ್ರಮುಖವಾಗಿದೆ. ಅದಕ್ಕೆ ದಕ್ಷ, ಪ್ರಾಮಾಣಿಕ ಮತ್ತು ಸಮರ್ಥ ನಾಯಕತ್ವದ ಅವಶ್ಯಕತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಬಿಡಿ, ಬೇರಾವುದೇ ಪಕ್ಷಗಳ ಪ್ರಧಾನಿ ಪಟ್ಟದ ಆಕಾಂಕ್ಷಿಗಳೂ ನರೇಂದ್ರ ಮೋದಿಯವರ ಮಟ್ಟದಲ್ಲಿ ಇಲ್ಲದಿರುವ ಕಾರಣ ನಾನು ಈ ಬಾರಿ ಹೃದಯಪೂರ್ವಕವಾಗಿ ಬಿಜೆಪಿಗೇ ಮತ ಹಾಕುತ್ತಿದ್ದೇನೆ ಮತ್ತು ನರೇಂದ್ರ ಮೋದಿಯವನ್ನೇ ಮತ್ತೊಮ್ಮೆ ಪ್ರಧಾನಿಗಳನ್ನಾಗಿ ನೋಡಲು ಬಯಸುತ್ತಿದ್ದೇನೆ. ಅವರ ನಾಯಕತ್ವದ ಅಡಿಯಲ್ಲಿ ಭಾರತ ವಿಶ್ವಗುರುವಾಗುವುದನ್ನು ನೋಡಲು ಕಾಯುತ್ತಿದ್ದೇನೆ.

ಇದು ಕೇವಲ ಒಬ್ಬ ಮನೀಷ್ ಕುಮಾರ್ ಹೃದಯಾಂತರಾಳದ ಮಾತಾಗಿರದೇ ಕೋಟ್ಯಾಂತರ ಭಾರತೀಯ ಮತದಾರನ ಅಳಲಾಗಿದೆ. ಯಾವುದೇ ಆಮೀಷಗಳಿಗೆ ಒಳಗಾಗದೆ, ನಮ್ಮ ಮತಗಳನ್ನು ಮಾರಿಕೊಳ್ಳದೆ, ನಿರ್ಭಯವಾಗಿ ನಿಶ್ಚಯವಾಗಿ ಸುಭದ್ರ ಮತ್ತು ಸಂವೃದ್ಧ ಭಾರತಕ್ಕಾಗಿ, ಯಾವುದೇ ಸಮೂಬು ನೀಡದೆ, ತಪ್ಪದೇ ಮತದಾನ ಮಾಡೋಣ. ಇಂದು ನಮ್ಮ ಬೆರಳಿಗೆ ಮಸಿ ಅಂಟದಿದ್ದರೆ, ನಾಳೆ ದೇಶದ ಭವಿಷ್ಯಕ್ಕೇ ಮಸಿ ಅಂಟೀತು. ಹಾಗಾಗಿ ಪ್ರಜ್ಞಾವಂತರಾದ ನಾವೆಲ್ಲಾ ನೋಟಿಗೂ, ನೋಟಾಗೂ ಅಲ್ಲದೇ ಕೇವಲ ಭಾರತದ ಉಜ್ವಲ ಭವಿಷ್ಯದ ನೋಟಕ್ಕಾಗಿ ತಪ್ಪದೇ ನರೇಂದ್ರ ಮೋದಿಯವರ ಬಿಜೆಪಿ ಪಕ್ಷವನ್ನೇ ಬೆಂಬಲಿಸೋಣ.voter

ಮೋದಿ ಮತ್ತೊಮ್ಮೆ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s