ಭಯೋತ್ಪಾದಕತೆಗೆ ಧರ್ಮವಿಲ್ಲವೇ?

ಏಪ್ರಿಲ್ 21 , 2019 ಭಾನುವಾರ, ವಿಶ್ವಾದ್ಯಂತ ಕ್ರಿಶ್ಚಿಯನ್ನರು ಈಸ್ಟರ್ ಹಬ್ಬವನ್ನು ಅಚರಿಸುತ್ತಿದ್ದರು. ಅದೇ ರೀತಿ ಶ್ರೀಲಂಕಾದ ಕೊಲೊಂಬೋ ನಗರದ ಒಂದು ಚರ್ಚಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಅಚಾನಕ್ಕಾಗಿ ನಡೆಸಿದ ಬಾಂಬ್ ಸ್ಪೋಟದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಕೇವಲ ಚರ್ಚ್ ಅಲ್ಲದೇ ,ಕೊಲೊಂಬೋ ನಗರಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಅನೇಕ ಅಮಾಯಕರು ಮೃತಪಟ್ಟಿರುವುದು ನಿಜಕ್ಕೂ ದುಖಃಕರ ಮತ್ತು ಖಂಡನೀಯ. ಸರಣಿ ಬಾಂಬ್ ಕುಕೃತ್ಯದ ಹಿಂದಿನ ಕೈವಾಡ ಹಿಂದೆ ಉಗ್ರ ಮುಸಲ್ಮಾನರ ಮತಾಂಧತೆಯ ಕರಿನೆರಳು ಇರುವುದು ಸ್ವಷ್ಟವಾಗಿ ಗೋಚರಿಸಲ್ಪಟ್ಟಿದೆ.

ಇನ್ನು ವಯಕ್ತಿಕವಾಗಿ ಈ ಸರಣಿ ಬಾಂಬ್ ಸ್ಪೋಟದಲ್ಲಿ ಅಮಾಯಕರಾದ ನನ್ನ ಉತ್ತಮ ಗೆಳೆಯರೊಬ್ಬರನ್ನು ಕಳೆದುಕೊಂಡಿದ್ದು ಮತ್ತಷ್ಟು ದುಖಃವನ್ನು ತರಿಸಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ನೆಚ್ಚಿನ ಆಭ್ಯರ್ಥಿಯಪರ ಓಡಾಡಿದ್ದ ಆಯಾಸ ಪರಿಹರಿಸಿಕೊಳ್ಳಲು ವಿಶ್ರಾಂತಿಗೆಂದು ಬೆಂಗಳೂರಿನಿಂದ ತಮ್ಮ ಗೆಳೆಯರೊಂದಿಗೆ ಕೊಲೊಂಬೋಗೆ ಹೋಗಿದ್ದ ಕೆಲವು ಜೆಡಿಎಸ್ ಕಾರ್ಯಕರ್ತರಲ್ಲಿ ನನಗೆ ತುಂಬಾ ಪರಿಚಯವಿದ್ದ ಮತ್ತು ಆತ್ಮೀಯರಾಗಿದ್ದ, ನನ್ನ ಜೊತೆ ಜಿಮ್, ಸೈಕಲ್, ಮತ್ತು ವಾಕಿಂಗ್ ಮಾಡುತ್ತಿದ್ದ ಜೆಡಿಎಸ್ ಮುಖಂಡ ರಂಗಪ್ಪನವರು ಮತ್ತು ಅವರ ಸಂಗಡಿಗರು ತಂಗಿದ್ದ ಶಾಂಗ್ರೀಲಾ ಹೋಟೆಲ್ ಮೇಲೂ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ‌ ಶ್ರೀ ರಂಗಣ್ಣನವರು ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾಧವಾಗುತ್ತಿದೆ.

ವಯಕ್ತಿಕವಾಗಿ ನನ್ನ ಮತ್ತು ರಂಗಣ್ಣನವರ ನಡುವೆ ಸೈದ್ದಾಂತಿಕವಾದ ಭಿನ್ನಾಭಿಪ್ರಾಯವಿದ್ದರೂ ನಮ್ಮಿಬ್ಬರ ಸಂಬಂಧ ಉತ್ತಮವಾಗಿಯೇ ಇತ್ತು. ಸದಾ ಫಿಟ್ನೆಸ್ ಫ್ರೀಕ್ ಆಗಿದ್ದ ರಂಗಣ್ಣ , ನನ್ನ ವ್ಯಾಯಾಮ ಸಮಯದಲ್ಲಿ ನಾನು ಮಾಡುತ್ತಿದ್ದ ತಪ್ಪುಗಳನ್ನು ತಿದ್ದಿ , ಉತ್ತಮವಾದ ಸಲಹೆಗಳನ್ನು ಕೊಡುತ್ತಿದ್ದವರು ಇನ್ನು ಮುಂದೆ ಇತಿಹಾಸವಾಗಿ ಹೋಗಿರುವುದನ್ನು ನಂಬಲು ಅಸಾಧ್ಯವಾಗಿದೆ. ಸಾಧಾರಣವಾಗಿ ಅಷ್ಟು ಬೇಗ ಯಾರೊಂದಿಗೂ ಬೆರೆಯದ, ಒಮ್ಮೆ ಹಾಗೆ ಸ್ನೇಹಿತರಾದ ಮೇಲೆ ಅವರಿಗೆ ಜೀವಕ್ಕೆ ಜೀವಕೊಡಲೂ ಸಿದ್ಧವಾಗಿದ್ದ ರಂಗಣ್ಣನವರು ನಮ್ಮೊಂದಿಗೆ ಇನ್ನಿಲ್ಲ ಎಂಬುದನ್ನು ನಂಬುವುದಕ್ಕೆ ನಿಜಕ್ಕೂ ಬೇಸರವಾಗುತ್ತಿದೆ. ರಜನೀಕಾಂತ್ ಮತ್ತು ನಿಖಿಲ್ ಸಿನಿಮಾ ರಿಲೀಸ್ ಆದಾಗ ಮಲ್ಟಿಪ್ಲೆಕ್ಸ್ ಒಂದರ ಇಡೀ ಒಂದು ಷೋ ಬುಕ್ ಮಾಡಿ ಎಲ್ಲರನ್ನು ಕರೆದು ಕೊಂಡು ಹೋಗುತ್ತಿದ್ದದ್ದು. ನಂದೀ ಬೆಟ್ಟ, ಶಿವಗಂಗೆ ಬೆಟ್ಟಕ್ಕೆ ಎಲ್ಲರನ್ನೂ ಚಾರಣಕ್ಕೆ ಕರೆದುಕೊಂಡು ಹೋಗಿದ್ದು ಮತ್ತು ದೇಹದಾಡ್ಯ ಸ್ಪರ್ಧೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಏರ್ಪಡಿಸಿ ನಮ್ಮ ಜಿಮ್ ತರಭೇತುದಾರರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿದ್ದದ್ದು ಇನ್ನೂ ಹಚ್ಚಹಸಿರಾಗಿದೆ. ದಾಸರಹಳ್ಳಿ ಮತ್ತು ಎಂಟನೇ ಮೈಲಿಯ ಪ್ರದೇಶಗಳಲ್ಲಿ ನಡೆಯುವ ಅನೇಕ ರಕ್ತದಾನ ಶಿಬಿರ, ಗಣೇಶೋತ್ಸವ ಮತ್ತು ಕನ್ನಡ ರಾಜ್ಯೋತ್ಸವಗಳು ರಂಗಣ್ಣನವರ ಸಾರಥ್ಯದಲ್ಲಿಯೇ ನಡೆಯುತ್ತಿದ್ದದ್ದು ವಿಶೇಷ.

ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ಚಟುವಟಿಕೆಗಳು ನಡೆದರೂ, ಅದನ್ನು ಖಂಡಿಸಿ ಎಲ್ಲರೂ ಹೇಳುವ ಮಾತು ಒಂದೇ, ಭಯೋತ್ಪಾದಕತೆಗೆ ಧರ್ಮ ಇಲ್ಲಾ. ಆದರೆ ಸ್ವಲ್ಪ ಯೋಚಿಸಿ ನೋಡಿದಲ್ಲಿ ಪ್ರಪಂಚಾದ್ಯಂತ ನಡೆಯುತ್ತಿರುವ ಬಹುತೇಕ ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ಇರುವ ಧರ್ಮ ಒಂದೇ ಅಲ್ಲವೇ? ನಮ್ಮ ದೇಶ 1947ರಲ್ಲಿ ಇಬ್ಬಾಗವಾದದ್ದೂ ಅದೇ ಧರ್ಮದ ಆಧಾರದಿಂದಲ್ಲವೇ? ಸ್ವಾತಂತ್ಯ್ರಾನಂತರ ಕಾಶ್ಮೀರದ ಮೇಲಿನ ಧಾಳಿಯಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಪುಲ್ವಾಮ ಧಾಳಿಯ ಹಿಂದೆ ಇರುವ ಶಕ್ತಿ ಅದೇ ಧರ್ಮದ ಅಫೀಮನ್ನು ತಿಂದ ಅಮಲಿನಿಂದಲೇ ಅಲ್ಲವೇ?

ನಾಯಿಯ ಬಾಲ‌ ಸದಾ ಡೊಂಕು ಎನ್ನುವಂತೆ, ತಮ್ಮ ಧರ್ಮದಲ್ಲದ ಅನ್ಯಧರ್ಮೀಯರೆಲ್ಲರೂ ಕಾಫೀರರೆಂದು ಪರಿಗಣಿಸಿ ಅವರನ್ನು ವಿಶ್ವಾದ್ಯಂತ ಸಾಯಿಸುವ ಇಂತಹ ಕುಕೃತ್ಯಕ್ಕೆ ಕೊನೆಯೇ ಇಲ್ಲವೇ? ಅದಕ್ಕೇ ಹಿಂದೊಮ್ಮೆ ನಮ್ಮ ಹಿರಿಯ ನಾಯಕರೊಬ್ಬರು ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸಲ್ಮಾನರೇ ಎಂದು ಹೇಳಿದ್ದದ್ದು ಇಂತಹ ಕೃತ್ಯಗಳನ್ನು ನೋಡಿದಾಗ ನಿಜಕ್ಕೂ ಸತ್ಯ ಅನಿಸುತ್ತದಲ್ಲವೇ? ವಯಕ್ತಿಕವಾಗಿ ನನಗೂ ಅನೇಕ ಮುಸ್ಲಿಂ ಗೆಳೆಯರು ಇದ್ದಾರೆ. ಆದರೆ ನಮ್ಮ ಗೆಳೆತನದ ಮಧ್ಯೆ ಧರ್ಮವೆಂದೂ ಅಡ್ದಿ ಬಂದಿಲ್ಲ.

ತಮ್ಮ ವಯಕ್ತಿಕ ದ್ವೇಷ ಅಥವಾ ಮತಾಂಧ ಕುಕೃತ್ಯಕ್ಕೆ ಅಥವಾ ಸತ್ತ ಮೇಲೆ ದೇವಲೋಕದಲ್ಲಿ ಸುರಸುಂದರಿಯರು ಸಿಗುತ್ತಾರೆ ಎಂಬ ಕಲ್ಪನೆಯೊಂದಿಗೆ ಅವರೊಂದಿಗೆ ಸಂಬಂಧವೇ ಇಲ್ಲದ, ಏನೂ ತಪ್ಪು ಮಾಡದ, ಅನೇಕ ಅಮಾಯಕರ ಮೇಲೆ ಧಾಳಿ ನಡೆಸುವ ಇಂತಹ ನರಹಂತಕರಿಗೆ ಧಿಕ್ಕಾರವಿರಲಿ. ಮೋಜು ಮತ್ತು ಮಸ್ತಿಗಾಗಿ ದೇಶ ವಿದೇಶಗಳಿಂದ ಪ್ರವಾಸಕ್ಕಾಗಿ ಬಂದವರ ಮೇಲೆ ನಡೆದ ಈ ಮುಸ್ಲಿಂ ಉಗ್ರರ ಅಟ್ಟಹಾಸವನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ತಮ್ಮ ಸಂಭಂಧಿಕರನ್ನು ಕಳೆದುಕೊಂಡ ಆ ದುಖಃ ತಪ್ತ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಕೊಡಲಿ ಎಂದು ಪ್ರಾರ್ಥಿಸೋಣ.

ಮತ್ತೊಬ್ಬರ ಜೀವನದಲ್ಲಿ ತಮ್ಮ ಉಪಸ್ಥಿತಿಗಿಂತ, ಅನುಪಸ್ಥಿತಿ ಎದ್ದು ಕಾಣುವಂತೆ ಮಾಡುವವನೇ ನಿಜವಾದ ಗೆಳೆಯ. ಅಂತೆಯೇ ನಮ್ಮ ನೆಚ್ಚಿನ ರಂಗಣ್ಣ ಇನ್ನು ಮಂದೆ ದೈಹಿಕವಾಗಿ ನಮ್ಮೊಂದಿಗೆ ಉಪಸ್ಥಿತರಾಗಿ ಇಲ್ಲದಿರಬಹುದು. ಆದರೆ ಭೌತಿಕವಾಗಿ ನಮ್ಮೊಂದಿಗೆ ಅವರು ಸದಾ ಇದ್ದೇ ಇರುತ್ತಾರೆ. ಅವರ ಅನುಪಸ್ಥಿತಿ ನಮ್ಮನ್ನು ಕಾಡುತ್ತದಾದರೂ ಅವರೊಂದಿಗೆ ಕಳೆದ ಸವಿನೆನಪುಗಳು ಮತ್ತು ಅವರು ಮಾಡಿದ ಸಮಾಜ ಸೇವೆಗಳಿಂದ ರಂಗಣ್ಣ ಸದಾ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇರುತ್ತಾರೆ.

ರಂಗಣ್ಣ ಆದಷ್ಟು ಬೇಗನೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s