ಅಗಣಿತ ಅಕ್ಷಯ ತೃತೀಯ

ಬರುವ ಮಂಗಳವಾರ ಅಂದರೆ ಮೇ 7, 2019 ಅಕ್ಷಯ ತೃತೀಯ. ಆ ದಿನದಂದು ಯಾವುದೇ ವಸ್ತುವನ್ನು ಅಥವಾ ಸಂಪತ್ತನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದಲ್ಲಿ ಕಾಲಕ್ರಮೇಣ ಆ ಸಂಪತ್ತು ದ್ವಿಗುಣಗೊಳ್ಳುತ್ತದೆ ಎನ್ನುವುದು ಎಲ್ಲರ ನಂಬಿಕೆ. ಹಾಗಾಗಿ ಇತ್ತೀಚೆಗೆ ಬಹುತೇಕ ಹೆಂಗಳೆಯರು ಅದೇ ಸಮಯದಲ್ಲಿ ಚಿನ್ನಾಭರಣವನ್ನು ಕೊಂಡು ಕೊಳ್ಳುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ. ಇದರ ಹಿಂದೆ ಚಿನ್ನಾಭರಣ ಅಂಗಡಿಗಳ ಕುಮ್ಮಕ್ಕೂ ಇದೆ ಎನ್ನುವುದು ಸತ್ಯ.

ಸ್ವಲ್ಪ ಸಮಯದ ಹಿಂದೆ ಒಂದು ವಾಟ್ಸಾಪ್ ಗುಂಪಿನಲ್ಲಿ ನೋಡಿದ ಈ ಚಿತ್ರ, ನಿಜಕ್ಕೂ ನನ್ನ ಮನ ಕಲಕಿತು. ಕ್ಷಣ ಕಾಲ ಅದೇ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಂತೆಯೇ ಮುಂದೆ ನಮಗೆ ಒದಗಬಹುದಾದ ಕರಾಳ ದಿನಗಳು ಕಣ್ಣ ಮುಂದೆ ಬಂದು ದಿಗ್ಭ್ರಮೆಯಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಭೂಮಿಯನ್ನು ನಾವು ತಾಯಿ ಎಂದು ಸಂಭೋಧಿಸುತ್ತೇವೆ. ಅಂತೆಯೇ ಒಂದು ಹೆಣ್ಣನ್ನೂ ಸಹಾ ತಾಯಿಯೆಂದೇ ಕಾಣುತ್ತೇವೆ. ನಮ್ಮೆಲ್ಲರ ಜನ್ಮಕರ್ತೆ ತಾಯಿಯೇ. ಅಂತಹ ಒಂದು ಹೆಣ್ಣು ಮತ್ತು ಭೂಮಿ ಎರಡೂ ನೀರಿಲ್ಲದೆ ಬರಡಾಗಿ ನೀರಿಗೆ ಬಾಯ್ಬಿಟ್ಟು ಕೊಂಡಿರುವ ಧಾರುಣ ಚಿತ್ರ ನಿಜಕ್ಕೂ ಆಘಾತಕಾರಿಯಾಗಿದೆ.

ಪ್ರಪಂಚದ ಮುಕ್ಕಾಲು ಭಾಗ ನೀರಿನಿಂದಲೇ ಆವೃತವಾಗಿದ್ದರೂ, ವಿಶ್ವಾದ್ಯಂತ ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಕುಡಿಯುವ ನೀರಿಲ್ಲದ ನಗರ ಎಂದು ಘೋಷಿಸಿಯಾಗಿದೆ ಮತ್ತು ಇನ್ನೂ ಹತ್ತಾರು ನಗರಗಳಲ್ಲಿಯೂ ಇದೇ ಪರಿಸ್ಥಿತಿಯೇ ಇದೆ .

ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಸಿಂಧು, ಕಾವೇರಿ, ಕೃಷ್ಣಾ ಮುಂತಾದ ಮಹಾನದಿಗಳು ಇದ್ದರೂ ಭಾರತದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ದುಡ್ದು ಕೊಟ್ಟರೂ ನೀರು ಸಿಗದ ಪರಿಸ್ಥಿತಿ ತಲುಪಿಯಾಗಿದೆ. ಈ ಕುಡಿಯುವ ನೀರಿನ ಸಮಸ್ಯೆಯಂದಾಗಿ ರಾಜ್ಯ ರಾಜ್ಯಗಳ ನಡುವೆ ವೈಮನಸ್ಯ ಉಂಟಾಗಿದೆ.

ಮಾನವ ಪ್ರಕೃತಿಯನ್ನು ಎಗ್ಗಿಲ್ಲದೆ ದುರುಪಯೋಗ ಪಡಿಸಿಕೊಂಡ ಪರಿಣಾವನ್ನು ಇಂದು ಅನುಭವಿಸುತ್ತಿದ್ದೇವೆ. ಹಾಗಾಗಿ ಅಳಿದುಳಿದಿರುವ ಜಲಸಂಪತ್ತನ್ನು ಸಾವಕಾಶವಾಗಿ ಬಳೆಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕಾಗಿದೆ.

ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ. ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸಬೇಕಿದೆ.

ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಬಳೆಸದೆ ಎಷ್ಟು ಬೇಕೋ ಅಷ್ಟನ್ನೇ ಬಳೆಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ.

ಹಾಗೆ ಪಾತ್ರೆತೊಳೆಯಲು ಮತ್ತು ಸ್ನಾನ ಮಾಡಲು ಬಳೆಸಿದ ನೀರನ್ನು ಮೋರಿಗೆ ಹರಿಸಿ ಪೋಲು ಮಾಡದೇ ಮನೆಯ ಮಂದಿನ ಕೈತೋಟಕ್ಕೋ ಇಲ್ಲವೇ ಗಿಡಮರಗಳಿಗೆ ಹಾಕುವ ವ್ಯವಸ್ಥೆ ಮಾಡಿ ಕೊಳ್ಳಬೇಕಿದೆ.

ಅತ್ಯಂತ ಪ್ರಮುಖವಾಗಿ ದೇಶಾದ್ಯಂತ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.

ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿ ಹನಿ ಸರಿಯಾದ ರೀತಿಯಲ್ಲಿ ಬಳಸದೇ, ಉಳಿಸದೇ ಹೋದಲ್ಲಿ , ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವೂ ಹೆಚ್ಚಾಗಿದೆ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳೆಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸಲೇ ಬೇಕಿದೆ.

ಚಿನ್ನಾಭರಣ ಇಲ್ಲದಿದ್ದರೂ ಜೀವನ ನಡೆಸಬಹುದು ಆದರೆ ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಮುಂಬರುವ ಅಕ್ಷಯ ತದಿಗೆಯಂದು ಚಿನ್ನಾಭರಣಗಳನ್ನು ಅಗಣಿತಗೊಳಿಸುವುದಕ್ಕಿಂತ ನೀರನ್ನು ಉಳಿಸುವುದು ಮತ್ತು ಅಗಣಿತಗೊಳಿಸುವುದು ಅತ್ಯಗತ್ಯವಾಗಿದೆ.

ಏನಂತೀರೀ?

5 comments

  1. 👌 👌 ಇದು ಅಕ್ಷರಶಃ ಸತ್ಯ…. ನಾವೆಲ್ಲರೂ ಅರ್ಥೈಸಿಕೊಂಡು ತುರ್ತು ಕಾರ್ಯಗತಗೊಳಿಸಬೇಕಾಗಿದೆ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s