ಅಮೆರಿಕದಲ್ಲಿದ್ದರೂ ತನ್ನ ಭಾರತದಲ್ಲಿನ ಹುಟ್ಟೂರಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಯುವಕ ದತ್ತ ಪಾಟೀಲ. ಭಾರತದ ಬರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು 800 ಅಡಿಯಿಂದ 100 ಅಡಿಗೆ ತಂದ ಯುವಕನ ಸಾಹಸಗಾಥೆ. ಸರ್ಕಾರಗಳು ಇದನ್ನು ಅರಿತು ಕೆಲಸ ಮಾಡಬೇಕು.
2016ರಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಬರವನ್ನು ಕಂಡಿತ್ತು. ಜನರು ಕುಡಿಯುವ ನೀರಿಗೂ ಪರದಾಡಿದ್ದರು. ಈತನ ಉಳಿದಿದ್ದ ಕ್ಯಾಲಿಫೋರ್ನಿಯ ಕೂಡ ಕಳೆದ ಐದು ವರ್ಷದಿಂದ ನೀರಿನ ಬರ ಕಂಡಿತ್ತು. ಭಾರತಕ್ಕೆ ಪ್ರವಾಸಕ್ಕೆಂದು ಬಂದ ದತ್ತ ಪಾಟೀಲ ಬರೀ ಕಂಡಿದ್ದು ಇವನ ಗ್ರಾಮದಲ್ಲಿ ಬರ. ಇವನ ಗ್ರಾಮ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಹಲ್ಗಾರ. ಹಲ್ಗಾರದಲ್ಲಿ ವರ್ಷಕ್ಕೆ 800mm ಮಳೆಬಿದ್ದು ಕ್ಯಾಲಿಫೋರ್ನಿಯಾದಲ್ಲಿ ಮಳೆ ಬಿದ್ದಿದ್ದು 400mm ಆದರೂ ಕ್ಯಾಲಿಫೋರ್ನಿಯಾದಲ್ಲಿ ನೀರಿಗೆ ಬರ ಇರಲಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಅಂತರ್ಜಲ 70 ಅಡಿಯಲ್ಲಿ ಸಿಕ್ಕರೆ ಹಲ್ಗಾರದಲ್ಲಿ 800 ಅಡಿ ಮಟ್ಟದಲ್ಲಿ ಹೋದರೂ ಸಿಗುತ್ತಿರಲಿಲ್ಲ.
ಕಾರಣ ಇಷ್ಟೇ ಕ್ಯಾಲಿಫೋರ್ನಿಯಾದಲ್ಲಿ ಪ್ರತಿಯೊಂದು ಮಳೆಯ ನೀರಿನ ಹನಿಯನ್ನು ಹಿಡಿದಿಟ್ಟು ಶೇಖರಿಸಲಾಗುತ್ತದೆ. ಆದ್ದರಿಂದ ಭಾರತಕ್ಕೆ ಬಂದವನೇ ಹಲ್ಗಾರದಲ್ಲಿ ಶುರುಮಾಡಿದ್ದು ಪ್ರತಿಯೊಂದು ಮಳೆಹನಿಯನ್ನು ಹಿಡಿದಿಡುವ ಕಾರ್ಯ. ಮೊದಲಿಗೆ ತನ್ನ ಸ್ವಂತ 3ಲಕ್ಷ ಖರ್ಚು ಮಾಡಿ ಹಲ್ಗಾರದಲ್ಲಿ 20 ಕಿಲೋಮೀಟರ್ ನಷ್ಟು ಉದ್ದದ ಕಾಲುವೆಯಲ್ಲೀ ಹೂಳೆತ್ತುವ ಕಾರ್ಯ ಮಾಡಿದ್ದು. ನಂತರದ ದಿನಗಳಲ್ಲಿ ಅಷ್ಟು ಹಣ ಸಾಕಾಗಲಿಲ್ಲ ಆದರೆ ಹಲ್ಗಾರ ಗ್ರಾಮದ ಜನರು 5 ಲಕ್ಷದವರೆಗೂ ಹಣ ನೀಡುವ ಆಶ್ವಾಸನೆ ನೀಡಿದರು. ಇದರ ನಂತರ ಅಮೆರಿಕಕ್ಕೆ ವಾಪಸ್ ತಿರುಗಿದ ದತ್ತ ಪಾಟೀಲ ತನ್ನ ಕಂಪನಿಯಾದ ಯಾಹೂ ಸಾಫ್ಟ್ವೇರ್ ಅವರಿಗೆ ಒಂದು ಪ್ರಾಜೆಕ್ಟ್ ಬರೆದು ತೋರಿಸಿದ. ಅದನ್ನು ಮೆಚ್ಚಿ ಮುಂದಿನ ಮೂರು ವರ್ಷದಲ್ಲಿ ಯಾಹೂ ಕಂಪನಿಯು ಒಂದು ಕೋಟಿ ಬಿಡುಗಡೆ ಮಾಡಿತು.
ಇಲ್ಲಿಯವರೆಗೂ ತನ್ನ ಸ್ವಂತ 22 ಲಕ್ಷ ಗಳನ್ನು ಖರ್ಚು ಮಾಡಿ ಜೊತೆಗೆ ಯಾಹೂ ಕಂಪನಿ ಹಣದಲ್ಲಿ ಹಲ್ಗಾರ ಗ್ರಾಮದಲ್ಲಿ 26 ಚೆಕ್ ಡ್ಯಾಮ್ ಗಳು ನಿರ್ಮಾಣವಾಗಿವೆ. ಎರಡು ವರ್ಷದ ನಂತರ ಇಂದು ಹಲ್ಗಾರ ಗ್ರಾಮದ ಅಂತರ್ಜಲಮಟ್ಟ 800 ಅಡಿಯಿಂದ 100 ಅಡಿಗೆ ತಲುಪಿದೆ. ಹಲ್ಗಾರ ಗ್ರಾಮದಲ್ಲಿ ಹಸಿರು ಕೂಡ ಎದ್ದು ಕಾಣುತ್ತಿದೆ. ದತ್ತ ಪಾಟೀಲರು ಈ ಕಾರ್ಯಗಳನ್ನು ಮಾಡಲು ಹಿಡಿದ ದಾರಿ ಒಂದಲ್ಲ-ಎರಡಲ್ಲ. ದೇವಸ್ಥಾನಗಳಿಂದ ಹಿಡಿದು ಸಿನಿಮಾ ಥಿಯೇಟರ್ ಗಳಲ್ಲೂ ಓನರ್ ಗಳಿಂದ ಅನುಮತಿ ಪಡೆದು ಎಲ್ಲರ ಮುಂದೆ ಮಾತನಾಡಿ ಯುವಕರನ್ನು ಒಗ್ಗೂಡಿಸಿ ಇಂತಹ ಒಂದು ಮಹಾ ಸಾಧನೆಯನ್ನು ಮಾಡಿದ್ದಾರೆ. ಇದು ಎಲ್ಲಾ ಯುವಕರಿಗೂ ಸ್ಫೂರ್ತಿಯಾಗಬೇಕು. ಇಂದು ಗೂಗಲ್ ಮ್ಯಾಪ್ ನಲ್ಲಿ ಹಲ್ಗಾರ ಮ್ಯಾಪ್ ನೋಡಿದಾಗ ಅಲ್ಲಿರುವ ಹಸಿರು ನೋಡಿದರೆ ಅವರ ಸಾರ್ಥಕ ಪ್ರಯತ್ನ ಎಲ್ಲರಿಗೂ ತಿಳಿಯುತ್ತದೆ.
ಪ್ರತೀ ಕೆಲಸಾನೂ ಸರ್ಕಾರವೇ ಮಾಡ್ಬೇಕು ಅಂತೇನಿಲ್ಲ. ಹಾಗೇ ಪ್ರತೀ ಕೆಲಸ ಮಾಡುವುದಕ್ಕೇ ಅಲ್ಲಿಯೇ ಇರಬೇಕು ಅಂತಾನೂ ಇಲ್ಲಾ. ಎಲ್ಲೂ ದೂರದ ಅಮೇರಿಕಾದಲ್ಲಿ ಕುಳಿತುಕೊಂಡು ಅಲ್ಲಿಯ ಕಂಪನಿಯ CSR ಹಣದಲ್ಲಿ ತನ್ನ ಹುಟ್ಟೂರಿನ ನೀರಿನ ಬವಣೆಯನ್ನು ನೀಗಿಸಬಹುದಾದರೇ, ಇಲ್ಲೇ ಇರುವ ನಾವುಗಳು ಕೈ ಚೆಲ್ಲಿ ಕುಳಿತು ಶಾಸಕರನ್ನೋ ಇಲ್ಲವೇ ಸಂಸದರನ್ನೋ ಇಲ್ಲವೇ ಅಧಿಕಾರಿಗಳನ್ನು ದೂಷಿಸುವ ಬದಲು ಹೊಸಾ ಪ್ರಯತ್ನಗಳತ್ತ ಹರಿಸಬೇಕು ನಮ್ಮ ಚಿತ್ತ. ಮನಸ್ಸಿದ್ದಲ್ಲಿ ಖಂಡಿತವಾಗಿಯೂ ಮಾರ್ಗವಿದೆ.
ಮತ್ತು ಮಳೆನೀರು ನೀರು ಕೊಯ್ಲು ಬಹಳ ಮುಖ್ಯ ಎಂದು ಅರಿವಾಗುತ್ತದೆ.ಎಲ್ಲ ಓದಿರೋ ಜನ ಹಳ್ಳಿಗಳಿಗೆ ಹೋಗಿ ಈ ತರ ಕೆಲ್ಸ ಮಾಡಿದ್ರೆ ಹಳ್ಳಿಗಳು ಉದ್ದರವಾಗೋದ್ರಲ್ಲಿ ಅನುಮಾನ ಇಲ್ಲ. ಭಾರತದ ಯುವಕರಲ್ಲಿ ಅಗಾಧ ಶಕ್ತಿಯಿದೆ. ಹೆಚ್ಚು ಜನರಿಗೆ ಶೇರ್ ಮಾಡಿ ಪ್ರೇರಣೆ ನೀಡಿ
ಏನಂತೀರೀ?
ಚಿತ್ರಗಳು ಮತ್ತು ವಿಷಯ ವಾಟ್ಸಾಪ್ ಕೃಪೆ
Excellent gesture. God Bless Dutta Patil. May his tribe increase.
LikeLike
Super
LikeLike