ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ಬಾಲ್ಯದ ಗೆಳೆಯ/ಗೆಳತಿಯರ ಗೆಳೆತನ ಸಾಧಾರಣವಾಗಿ ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತದೆ. ಹೆಚ್ಚೆಂದರೆ ಒಂದಿಬ್ಬರ ಗೆಳೆತನ ಕಾಲೇಜಿನವರೆಗೆ ‌ಮುಂದುವರಿದರೆ ಭಾರಿ ಅನಿಸುತ್ತದೆ. ‌ಅದರಲ್ಲೂ ಹೆಚ್.ಎಂ.ಟಿ ಕಾರ್ಖಾನೆಯ ಕಾರ್ಮಿಕರ ಮಕ್ಕಳು ಎಂದರೆ ಮಧ್ಯಮ ‌ವರ್ಗದ ಜನ. ಎಲ್ಲರ ವಾಸ, ಕಾರ್ಖಾನೆಯ ಕಾಲೋನಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ , ಎಲ್ಲಾ ಧರ್ಮದ, ಜನ ಒಂದೇ ಕಡೆ ಒಟ್ಟಾಗಿ ಆಟ, ಪಾಠವಾಡುತ್ತಾ ಒಟ್ಟೊಟ್ಟಿಗೆ ‌ಬೆಳೆಯುವವರು. ಇದೆಲ್ಲಾ ‌ತಮ್ಮ ತಂದೆಯವರು ಕೆಲಸದಿಂದ ನಿವೃತ್ತಿ ಹೊಂದಿದಾಗಲೋ ಇಲ್ಲವೇ ಸ್ವಂತ ಮನೆ ಕಟ್ಟಿಸಿಕೊಂಡು ಹೋಗುವವರೆಗೆ ಇರುತ್ತದೆ. ಅಲ್ಲಿಂದ ಮುಂದೆ ಅವರೆಲ್ಲೋ… ಇವರೆಲ್ಲೋ… ಮಾತಿಲ್ಲಾ… ಕಥೆಯಿಲ್ಲಾ.. ಅನ್ನೋ ಹಾಗೆ.

ಆದರೆ ಇದಕ್ಕೆ ‌ತದ್ವಿರುಧ್ಧವಾಗಿ ಇಲ್ಲೊಂದು ತಂಡವಿದೆ. HMT High School, 1986ರ SSLC ತಂಡ ಇನ್ನೂ ಕೂಡಾ ಆಗ್ಗಿಂದಾಗ್ಗೆ ಒಂದು‌ ಕಡೆ ಸೇರುತ್ತಾ ಯಾವುದಾದರೂ ‌ಒಂದು ಸಮಾಜ ಮುಖೀ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದು ತಮ್ಮ ಶಾಲೆಯ ಉಪಾಧ್ಯಾಯರುಗಳನ್ನು ಗೌರವಿಸುವುದು, ಯಾವುದೇ ರೀತಿಯ ನೆರವಿನ ಅಗತ್ಯ ಇರುವವರೆಗೆ ತಮ್ಮ ‌ಕೈಲಾದ ಸಹಾಯ ಮಾಡುವುದು, ಅನಾಥಾಲಯಗಳಿಗೆ ಅಗತ್ಯವಾದ ಸಹಾಯ ಮಾಡುತ್ತಲೇ ಬರುತ್ತಿದೆ.

ಈ ಬಾರಿ ಸ್ವಲ್ಪ ‌ವಿಭಿನ್ನವಾಗಿ ಸುಮಾರು ಹತ್ತು ಹದಿನೈದು ‌ಜನರ‌‌ ತಂಡ ದೊಡ್ಡಬಳ್ಳಾಪುರದ ಘಾಟೀ ಸುಬ್ರಹ್ಮಣ್ಯದ ಕೆರೆಯಂಗಳದ ಬಳಿ ಇಂದು ವಿವಿಧ ಪ್ರಭೇದದ ಮರಗಳ ಸುಮಾರು ಐದು ನೂರು ಬೀಜ ದುಂಡೆಗಳನ್ನು ನೆಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಎತ್ತಿ ‌ತೋರಿಸಿದ್ದಾರೆ. ಇಂದು ಅವರು ಅವರು ಇಂದು ಬಿತ್ತಿದ ಐದು ನೂರು ಬೀಜದುಂಡೆಗಳಲ್ಲಿ ಸುಮಾರು ಅರ್ಧದಷ್ಟಾದರೂ ಮಳೆಗಾಲದಲ್ಲಿ ಮೊಳಕೆಯೊಡೆದು, ಗಿಡವಾಗಿ, ಮರವಾಗಿ, ಹೆಮ್ಮರವಾಗಿ ನಿಸ್ವಾರ್ಥವಾಗಿ ನೂರಾರು ವರ್ಷಗಳ ಕಾಲ ಸ್ವಚ್ಛವಾದ ಆಮ್ಲಜನಕ ನೀಡುವುದಲ್ಲದೆ ನಾನಾ ಪಶು ಪಕ್ಷಿಗಳಿಗೆ ‌ಆಶ್ರಯ ತಾಣವಾಗಿತ್ತದೆ ಮತ್ತು ಮಳೆಯನ್ನು ಆಕರ್ಷಿಸಿ, ಮಣ್ಣನ್ನು ಹಿಡಿದಿಟ್ಟುಕೊಳ್ಳುವ ‌ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು‌ ಸಹಾಯ .ಮಾಡುತ್ತದೆ. ಅವುಗಳ ಫಲ ಲಕ್ಷಾಂತರ ಮನುಷ್ಯರ, ಪ್ರಾಣಿ, ಪಕ್ಷಿಗಳ ಹಸಿವನ್ನು ಇಂಗಿಸುತ್ತದೆ.

ಒಬ್ಬ ಹಸಿದವರಿಗೆ‌ ಒಂದು ಹಣ್ಙನ್ನು ಅಥವಾ ಹಣವನ್ನು ಕೊಟ್ಟಲ್ಲಿ ಅದು ಅರಗುವ ಇಲ್ಲವೇ ಕರಗುವ ತನಕ ಮಾತ್ರವೇ ನೆನಪಿನಲ್ಲಿ ಇರುತ್ತದೆ. ‌ಅದೇ ಒಂದು ಮರ‌ ನೆಟ್ಟಲ್ಲಿ ಅದು ತಲೆತಲಾಂತರಗಳವರೆಗೂ ಇಡೀ ಪರಿಸರವನ್ನು, ಪ್ರಾಣಿ ಪಶು ಸಂಕುಲವನ್ನು ಕಾಪಾಡುತ್ತದೆ.

ಭಗವಂತನ ಅನುಗ್ರಹ ಆ ಇಡೀ‌ ತಂಡಕ್ಕೆ ಸದಾಕಾಲವೂ ಹೀಗೆಯೇ ಮುಂದುವರಿದು ‌ಅವರಿಂದ ಇಂತಹ ಅನೇಕ ‌ಸಮಾಜ‌ಮುಖೀ‌ ಕಾರ್ಯಗಳನ್ನು ‌ಮಾಡಿಸಲಿ.

ಅವರ ‌ಈ‌ ಪರಿಸರದ ಪ್ರೇಮ‌ ಅಭಿನಮಧನೀಯ‌ ಮತ್ತು ಅನುಕರಣೀಯ. ನಮ್ಮಂತಹ ಅನೇಕ‌ರಿಗೆ ಪ್ರೇರಣಾದಾಯಕ.‌ ಮುಂದೆ ‌ದಿಟ್ಟ ಗುರಿ, ಹಿಂದೆ‌ ದಕ್ಷ ಗುರುವಿದ್ದು ಒಗ್ಗಟ್ಟಿನಲ್ಲಿ ‌ಕೆಲಸ‌ ಮಾಡಿದಲ್ಲಿ‌ ಇಡೀ‌ ಸಮಾಜ ಬದಲಿಸಬಹುದು ಎನ್ನುವುದಕ್ಕೆ ‌ಈ‌‌ ತಂಡ ನಿಜಕ್ಕೂ ಎತ್ತಿ‌ ತೋರಿಸಿದ್ದಾರೆ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

2 thoughts on “ಪ್ರಾಣ ಸ್ನೇಹಿತರ ಪರಿಸರ ಪ್ರೇಮ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s