ಸೋತು ಗೆದ್ದವರು ಸುಷ್ಮಾ ಸ್ವರಾಜ್

1999ರ ಲೋಕಸಭಾ ಚುನಾವಣೆ. ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ತಮ್ಮ ಸ್ವಂತ ಬಲದಿಂದ ಆಡಳಿತದ ಚುಕ್ಕಾಣಿ ಹಿಡಿಯಲು ಜಿದ್ದಾ ಜಿದ್ದಿನಿಂದ ಹೋರಾಟಕ್ಕೆ ನಿಂತಿದ್ದವು. ದಕ್ಷಿಣ ಭಾರತದಲ್ಲಿ ಕಾಂಗ್ರೇಸ್ಸಿಗರ ಬಲ ಹೆಚ್ಚಿಸಲೆಂದೇ ಅಂದಿನ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರು ಉತ್ತರಪ್ರದೇಶದ ಅಮೆಥಿಯ ಜೊತೆಗೆ ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಎಲ್ಲರಿಗೂ ಸೋನಿಯಾ ಗಾಂಧಿಯ ವಿರುದ್ಧ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಯಾರಿರಬಹುದೆಂಬ ಕುತೂಹಲ. ಜನರ ನಿರೀಕ್ಷೆಗೂ ಸಿಲುಕದಂತ ತುಸು ಕಡಿಮೆ ಎತ್ತರದ, ಸದಾ ಬಣ್ಣ ಬಣ್ಣದ ಸೀರೆಯುಟ್ಟು ಹಣೆಯಲ್ಲಿ ಕಾಸಿನಗಲದ ಕುಂಕುಮದ ಬೊಟ್ಟ ಅಪ್ಪಟ ಭಾರತೀಯ ನಾರಿಯ ಪ್ರತೀಕವಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕಿಳಿಸಿದಾಗ, ವಿದೇಶೀ ಸೊಸೆ ಮತ್ತು ಭಾರತೀಯ ಮಗಳಿನ ನಡುವೆಯ ಹೋರಾಟ ಎಂದೇ ಬಿಂಬಿತವಾಗಿತ್ತು. ಆರಂಭದಲ್ಲಿ ಸೋನಿಯಾರವರಿಗೆ ಗೆಲುವು ಸುಲಭದ ತುತ್ತು ಎಂದು ಭಾವಿಸಿದ್ದವರಿಗೆ ದಿನಕಳೆದಂತೆಲ್ಲಾ ಏದುಸಿರು ಬಿಡುವಂತಾಗಿ ತಾಯಿಯ ಪರ ಚುನಾಚಣಾ ಪ್ರಚಾರ ಮಾಡಲು ಪ್ರಪ್ರಥಮ ಬಾರಿಗೆ ಸೋನಿಯಾರವರ ಮಗಳು ಪ್ರಿಯಾಂಕಳೇ ಬರಬೇಕಾಯಿತೆಂದರೆ ಸುಷ್ಮಾರವರ ತಾಕತ್ತು ಎಷ್ಟಿತ್ತೆಂದು ಅರಿವಾಗುತ್ತದೆ. ಕೇವಲ ಎಂಟು ಹತ್ತು ದಿನಗಳಲ್ಲಿಯೇ ಕನ್ನಡ ಕಲಿತು, ಸುಲಲಿತವಾಗಿ ಕನ್ನಡದಲ್ಲಿಯೇ ಭಾಷಣ ಮಾಡಿದ ಹೆಗ್ಗಳಿಗೆ ಸುಷ್ಮಾ ಸ್ವರಾಜ್ ಅವರದ್ದು. ಅಂತಿಮವಾಗಿ ಸೋನಿಯಾ ಗೆಲುವನ್ನು ಕಂಡರೂ, ಜನಮಾನಸದಲ್ಲಿ ಸುಷ್ಮಾ ಸ್ವರಾಜ್ ಸೋತು ಗೆದ್ದವರಾಗಿದ್ದರು ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಂತಹ ಕಾಲದಲ್ಲಿ ಕರ್ನಾಟಕದಲ್ಲಿ ಅಂದು ಆಕೆಯ ಸ್ಪರ್ಧೆ ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿ ಮುಂದಿನ ವಿಧಾನ ಸಭೆ ಚುನಾವಣೆಯ ಹೊತ್ತಿಗೆ ಬಳ್ಳಾರಿಯ ಅಷ್ಟೂ ಕ್ಷೇತ್ರಗಳ ಜೊತೆಗೆ ಕರ್ನಾಟಕಾದ್ಯಂತ ಜಯಭೇರಿ ಭಾರಿಸಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಸರ್ಕಾರ ರಚಿಸುವಂತಾಗಲು ಕಾರಣೀಭೂತರಾದರು ಎಂದರೆ ಅತಿಶಯೋಕ್ತಿಯೇನಲ್ಲ.

ಮುಂದೆ ಗಾಲೀ ಜನಾರ್ಧನ ರೆಡ್ಡಿ ಮತ್ತು ಯಡೆಯೂರಪ್ಪನವವರ ಮಧ್ಯೆ ವಿರಸದಿಂದಾಗಿ ಸರ್ಕಾರ ಬಿದ್ದು ಹೋಗುವ ಪರಿಸ್ಥಿತಿ ತಲುಪಿದ್ದಾಗ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಸಂಧಾನದ ಮೂಲಕ ಸರ್ಕಾರವನ್ನು ತಹಬದಿಗೆ ತಂದ ಶ್ರೇಯವೂ ಸುಷ್ಮಾ ಸ್ವರಾಜ್ ಅವರಿಗೇ ತಲುಪುತ್ತದೆ.

ಉತ್ತರ ಭಾರತದ ಹರಿಯಾಣದಲ್ಲಿ ಜನಿಸಿ,ವಿಧ್ಯಾರ್ಥಿ ನಾಯಕರಾಗಿ ನಂತರ ಜಯಪ್ರಕಾಶರ ಆಂಧೋಲನ ಮುಖಾಂತರ ರಾಜಕೀಯ ಪ್ರವೇಶಿಸಿ ಅತ್ಯಂತ ಕಿರಿಯ 25ರ ವಯಸ್ಸಿನಲ್ಲಿಯೇ ವಿಧಾನಸಭಾ ಸದಸ್ಯೆಯಾಗಿ ವಿವಿಧ ಇಲಾಖೆಗಳ ಮಂತ್ರಿಯಾಗಿ 1980ರಲ್ಲಿ ಜನತಾ ಪರಿವಾರದಿಂದ ಜನಸಂಘದ ಕಾರ್ಯಕರ್ತರು ಹೊರಬಂದು ವಾಜಪೇಯಿ ಮತ್ತು ಲಾಲ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ಭಾರತೀಯ ಜನತಾಪಕ್ಷ ಆರಂಭವಾದಾಗ ಬಿಜೆಪಿ ಸೇರಿದ ಸುಷ್ಮ ಸ್ವರಾಜ್ ದೇಶಾದ್ಯಂತ ಪಕ್ಷ ಕಟ್ಟಿ ಬೆಳೆಸುವುದರಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು. ಮುಂದೆ ವಾಜಪೇಯಿಯವರ ಸರ್ಕಾರ ಆಡಳಿತಕ್ಕೆ ಬಂದ ಎರಡು ಬಾರಿಯೂ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಅಪಾರ ಜನ ಮೆಚ್ಚಿಗೆ ಪಡೆದದ್ದಲ್ಲದೆ, ವಾಜಪೇಯಿ ಮತ್ತು ಅಡ್ವಾಣಿಯವರ ನಂತರದ ಎರಡನೇಯ ಸಾಲಿನ ನಾಯಕರುಗಳಾದ ಪ್ರಮೋದ್ ಮಹಾಜನ್, ಅನಂತ್ ಕುಮಾರ್, ನಿತಿನ್ ಗಡ್ಗರಿ, ಅರುಣ್ ಜೇಟ್ಲಿಯವರ ಸಾಲಿನಲ್ಲಿ ಸುಷ್ಮಾರವರ ಹೆಸರೂ ಸೇರಿಕೊಂಡಿತ್ತು. ಪಕ್ಷದ ಅಧಿಕೃತ ವಕ್ತಾರೆಯಾಗಿ ಪಕ್ಷದ ನಿಲುಗಳನ್ನು ಮತ್ತು ವಿರೋಧಿಗಳ ಅರೋಪಕ್ಕೆ ದಿಟ್ಟ ಉತ್ತರೆ ನೀಡುತ್ತಾ ಭಾವೀ ಪಕ್ಷಾಧ್ಯಕ್ಷೆ ಪ್ರಧಾನಿಯ ಮಟ್ಟಕ್ಕೇ ಏರುವಂತಹ ಸಾಮಥ್ಯವನ್ನು ಪಡೆದುಕೊಂಡಿದ್ದಂತೂ ಸುಳ್ಳಲ್ಲ.

ಸುಷ್ಮಾರವರ ನಿಜವಾದ ಸಾಮಥ್ಯ, ಮಾತೃತ್ವ, ನೇತೃತ್ವ , ಕರ್ತೃತ್ವ, ಅನನ್ಯ ದೇಶಭಕ್ತಿ, ವಾಗ್ಪಟುತ್ವ, ಇವೆಲ್ಲವೂ ಹೆಚ್ಚಿಗೆ ಪ್ರವರ್ಧಮಾನಕ್ಕೆ ಬಂದದ್ದು 2014ರ ನಂತರವೇ ಎನ್ನಬಹುದು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಸ್ವಪ್ಟ ಬಹುತಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಾಗ, ಪ್ರಧಾನ ಮಂತ್ರಿಯ ಸ್ಥಾನದಲ್ಲಿ ತಮ್ಮ ರಾಜಕೀಯ ಗುರು ಲಾಲ ಅಡ್ವಾಣಿಯವರನ್ನು ಸ್ಥಾಪಿಸಬೇಕೆಂದು ಧನಿಯೇರಿಸಿದ ಪ್ರಮುಖರಲ್ಲಿ ಸುಷ್ಮಾರವರೂ ಒಬ್ಬರು. ನಂತರ ನಡೆದ ವಿದ್ಯಮಾನಗಳಿಗೆ ಅನುಗುಣವಾಗಿ ಪಕ್ಷದ ಆಣತಿಯಂತೆ ತಮಗಿಂತಲೂ ವಯಸ್ಸಿನಲ್ಲಿ ಮತ್ತು ರಾಜಕೀಯ ಅನುಭವದಲ್ಲಿ ಕಿರಿಯರಾದ ನರೇಂದ್ರ ಮೋದಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವೆಯೂ ಆದರು. ವಿದೇಶಾಂಗ ಸಚಿವೆ ಎಂದರೆ ಕೇವಲ ದೇಶ ವಿದೇಶ ಸುತ್ತುತ್ತಾ, ಪರಸ್ಪರ ಸೌಹಾರ್ಧತೆಗಳನ್ನು ಬೆಳೆಸುವ ಕಾರ್ಯವಲ್ಲದೇ, ವಿದೇಶಾಂಗ ಸಚಿವಾಲಯವನ್ನೂ ಹೀಗೂ ನಡೆಸಬಹುದು ಎಂದು ಎತ್ತಿ ತೋರಿಸಿದರು ಸುಷ್ಮಾ ಸ್ವರಾಜ್. ಪ್ರಪಂಚದ ಯಾವುದೋ ಮೂಲೆಯಲ್ಲಿ ಪ್ರವಾಸಕ್ಕೆ ಹೋಗಿ ತಮ್ಮ ಪಾಸ್ ಪೋರ್ಟ್ ಕಳೆದು ಕೊಂಡು ಅಲ್ಲಿಯ ಸೆರೆಮನೆಯಲ್ಲಿ ಕೊಳೆಯುವಂತಾದವರು ಕಡೆಯ ಆಸರೆಯಂತೆ ಭಾರತದ ವಿದೇಶಾಂಗ ಸಚಿವೆಗೆ ಮಾಡಿದ ಒಂದು ಟ್ವೀಟ್ ಅಧಾರವಾಗಿಟ್ಟು ಕೊಂಡು ತಕ್ಷಣವೇ ಅದಕ್ಕೆ ಸ್ಪಂದಿಸಿ ಸೂಕ್ತ ಅಧಿಕಾರಿಗಳನ್ನು ಆ ಕೆಲಸಕ್ಕೆ ನಿಯೋಜಿಸಿ ಆ ಭಾರತೀಯ ಪ್ರವಾಸಿಗನಿಗೆ ಪಾಸ್ ಪೋರ್ಟ್ ಒದಗಿಸಿಕೊಟ್ಟ ಹೆಗ್ಗಳಿಗೆ ಆವರದ್ದು. ಯಮನ್ ದೇಶದಲ್ಲಿ ಕೆಲೆಸಕ್ಕೆಂದು ಹೋಗಿ ಸಿಕ್ಕಿಹಾಕಿಕೊಂಡಿದ್ದ 6700+ ಅಧಿಕ ಭಾರತೀಯರನ್ನು ಭಾರತಕ್ಕೆ ಕರೆತಂದು ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುವಂತಹ ಕಾರ್ಯ ಸಾಧಿಸಿದ್ದರು. ದೇಶದ ನಾಗರೀಕರು ಪಾಸ್ ಪೋರ್ಟ್ ಪಡೆಯಲು ಬಹು ದೂರದ ಪಟ್ಟಣಗಳಿಗೆ ತಿಂಗಳಾನುಗಟ್ಟಲೆ ಅಲೆಯುವುದನ್ನು ನೋಡಿ ಕೂಡಲೇ ಬಹುತೇಕ ಸಣ್ಣ ಸಣ್ಣ ನಗರಗಳಲ್ಲಿಯೂ ಪ್ರಾದೇಶಿಕ ಪಾಸ್ ಪೋರ್ಟ್ ಸೇವಾಕೇಂದ್ರಗಳನ್ನ್ನು ತೆರೆದು, ಪೋಲೀಸ್ ಪರೀಶೀಲನೆ ಮತ್ತಿತರ ವಿಷಯಗಳಲ್ಲಿ ತಡವಾಗುತ್ತಿದ್ದನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಕಾನೂನುಗಳನ್ನು ಸರಳೀಕರಿಸಿ, ಅಗತ್ಯವಿದ್ದಡೆ ಮಾರ್ಪಾಟು ಮಾಡಿ ಎಲ್ಲರಿಗೂ ಸುಲಭವಾಗಿ ಮತ್ತು ಶೀಘ್ರವಾಗಿ ಪಾಸ್ ಪೋರ್ಟ್ ಸಿಗುವಂತಾಗಲು ಸುಷ್ಮಾರವರು ಕಾರಣರಾದರು.

ಇನ್ನು ನನಗೇ ತಿಳಿದಿರುವಂತೆ ನಮ್ಮ ಭಾಗದ ಹಿರಿಯ ಯೋಗಪಟುವೊಬ್ಬರು ಚೀನಾದಲ್ಲಿ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಮತ್ತೊಂದು ಕಠಿಣ ಸ್ಲರ್ಧೆಯಲ್ಲಿ ಭಾಗವಹಿಸಿ ಸಂಭಾಗಣದಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದಾಗ, ನಮ್ಮ ಭಾಗದ ಸಾಂಸದರು ಮತ್ತು ಕೇಂದ್ರ ಮಂತ್ರಿಗಳ ಮುಖಾಂತರ ಸುಷ್ಮಾರವರನ್ನು ಸಂಪರ್ಕಿಸಿದಾಗ, ಕೂಡಲೇ ಅದಕ್ಕೆ ಸ್ಪಂದಿಸಿ ಅವರ ಪಾರ್ಥಿವ ಶರೀರವನ್ನು ಆವರ ಮನೆಗೆ ತರಲು ನೆರೆವಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ.

ತಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಸುಷ್ಮಾರವರು ಆಗ್ಗಿಂದ್ದಾಗೆ ಅನಾರೋಗ್ಯಕ್ಕೆ ತುತ್ತಾಗ ತೊಡಗಿದರು. ಎರಡು ವರ್ಷಗಳ ಹಿಂದೆ ಮೂತ್ರಕೋಶದ ಖಾಯಿಲೆಗೆ ತುತ್ತಾಗಿ ದಾನಿಗಳ ಸಹಾಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಕೋಶವನ್ನು ಬದಲಾಯಿಸಿಕೊಂಡು ಲಕ್ಷಾಂತರ ಭಾರತೀಯರ ಆಭಿಮಾನಪೂರ್ವಕ ಆಶೀರ್ವಾದದ ಫಲವಾಗಿ ಅತೀ ಶೀಘ್ರದಲ್ಲಿಯೇ ಗುಣಮುಖರಾಗಿ ಮತ್ತೊಮ್ಮೆ ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸತೊಡಗಿದರು. ಮನಸ್ಸು ಎಷ್ಟೇ ದೃಢವಾಗಿದ್ದರೂ ದೇಹ ಅದಕ್ಕೆ ಸ್ಪಂದಿಸಿದಿದ್ದಾಗ ಅದನ್ನು ಕೂಡಲೇ ಅರಿತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಚುನಾವಣೆಗಳಿಂದ ತಮ್ಮನ್ನು ದೂರವಿಡಬೇಕೆಂದು ಸ್ವಯಂ ಪ್ರೇರಿತರಾಗಿ ಪಕ್ಷಾಧ್ಯಕ್ಷರಿಗೆ ಪತ್ರಮುಖೇನ ತಿಳಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಮತ್ತು ಮೋದಿಯವರ ಎರಡನೇ ಅವಧಿಯಲ್ಲಿ ಅವರ ಸಚಿವ ಸಂಪುಟದಲ್ಲಿಯೂ ಭಾಗವಹಿಸದೆ ಪ್ರಸ್ತುತ ರಾಜಕಾರಣಿಗಳಿಗೆ ಮೇಲ್ಪಂಕ್ತಿಯಾದರು. ತಮ್ಮ ಇಳೀ ವಯಸ್ಸಿನಲ್ಲಿಯೂ, ಅನಾರೋಗ್ಯದ ನಡುವೆಯೂ ಅಧಿಕಾರಕ್ಕೆ ಹಪಾಹಪಿ ಪಡುವ ನೂರಾರು ರಾಜಕಾರಣಿಗಳ ಮಧ್ಯೆ ಸುಷ್ಮಾರವರು ನಿಜವಾಗಿಯೂ ವಿಭಿನ್ನ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದರು.

ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವುದು ಬಹಳ ಕಷ್ಟ. ಅಂತಹದ್ದರಲ್ಲಿ ಕೇವಲ ಬೆರಳೆಣಿಯಷ್ಟು ಹೆಣ್ಣುಮಕ್ಕಳಾದ ಸೋನಿಯಾ ಗಾಂಧಿ, ಜಯಲಲಿತ, ಮಮತಾ ಬ್ಯಾನರ್ಜಿ, ಮಾಯಾವತಿಯಂತಹವರು ಮಹಿಳಾ ರಾಜಕಾರಣಿಗಳು ಹೆಣ್ತನವನ್ನು ಮರೆತು ಕೇವಲ ಕೂಗುಮಾರಿಗಳಾಗಿ ರಾಜಕಾರಣದಲ್ಲಿ ಕಳಂಕಿತರಾದರೆ, ಇಂತಹ ಸಮಕಾಲೀನರರ ಮಧ್ಯೆ ಕೆಸರಿನಲ್ಲಿದ್ದರೂ ಮೈಗೆ ಕೆಸರನ್ನು ಮೆತ್ತಿಕೊಳ್ಳದ ಕಮಲದಂತೆ ಸುಷ್ಮಾರವರರು ತಮ್ಮ ಸಮಚಿತ್ತರಾಗಿ, ಮಾತೃಹೃದಯಿಯಾಗಿ ಯಾವುದೇ ದ್ವೇಷ ರಾಜಕಾರಣ ಮಾಡದೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಪ್ರಧಾನಿಗಳ ಆಶಯದಂತೆ ರಾಷ್ಟ್ರ ರಾಜಕಾರಣದಲ್ಲಿ ಅರಳಿದರು ಮತ್ತು ಅಜಾತ ಶತೃವಾಗಿ ವಿರಾಜಮಾನರಾದರು. ಎಳು ಬಾರಿ ಸಂಸದರಾಗಿ,ಮೂರು ಬಾರಿ ಶಾಸಕರಾಗಿ,ಹರಿಯಾಣದ ಮಂತ್ರಿಯಾಗಿ,ದೆಹಲಿಯ ಮುಖ್ಯಮಂತ್ರಿಯಾಗಿ,ದೇಶದ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆಯಾಗಿ, ವಿದೇಶಾಂಗ ಸಚಿವೆಯಾಗಿ,ವಿರೋಧಪಕ್ಷದ ನಾಯಕಿಯಾಗಿದ್ದ ಸುಷ್ಮಾರವರು ತಮಗೆ ಪಕ್ಷ ಮತ್ತು ನಾಯಕರು ವಹಿಸಿದ್ದ ಎಲ್ಲಾ ಜವಬ್ದಾರಿಗಳನ್ನೂ ಯಶಸ್ವಿಯಾಗಿಯೇ ನಿರ್ವಹಿಸಿದರು. ಇನ್ನು ವಿದೇಶಾಂಗ ಸಚಿವೆಯಾಗಿದ್ದಾಗಲಂತೂ, ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಭಾರತೀಯರಿಗೆ ತಾನು ಯಾವುದೇ ರೀತಿಯ ರಾಜತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿಕೊಂಡಲ್ಲಿ ನನ್ನ ದೇಶ ನನ್ನ ಜೊತೆ ಸಹಾಯಕ್ಕೆ ಖಂಡಿತವಾಗಿಯೂ ನಿಂತು ತನ್ನ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬ ಆತ್ಮವಿಶ್ವಾಸಕ್ಕೆ ಬರಲು ಕಾರಣವಾದಾಕೆ ಎನ್ನುವ ಹೆಗ್ಗಳಿಗೆ ಸುಷ್ಮ ಸ್ವರಾಜ್ ಅವರದ್ದು.

ಸುಷ್ಮಾರವರ ಪ್ರಮುಖ ಸಾಧನೆಗಳು

  • 1977 1977 ರಲ್ಲಿ, ತನ್ನ 25 ನೇ ವಯಸ್ಸಿನಲ್ಲಿ, ಸುಷ್ಮಾ ಸ್ವರಾಜ್ ಭಾರತದ ಅತ್ಯಂತ ಕಿರಿಯ ಕ್ಯಾಬಿನೆಟ್ ಮಂತ್ರಿಯಾದರು
  • 1979 ರಲ್ಲಿ, ತನ್ನ 27 ನೇ ವಯಸ್ಸಿನಲ್ಲಿ, ಅವರು ಹರಿಯಾಣದಲ್ಲಿ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದರು
  • ರಾಷ್ಟ್ರೀಯ ಮಟ್ಟದ ರಾಜಕೀಯ ಪಕ್ಷದ ಮೊದಲ ಮಹಿಳಾ ವಕ್ತಾರರಾದರು.
  • ಸುಷ್ಮಾ ಸ್ವರಾಜ್ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಅವರು ಮೊದಲ ಮಹಿಳಾ ಕೇಂದ್ರ ಕ್ಯಾಬಿನೆಟ್ ಮಂತ್ರಿ.
  • ಸುಷ್ಮಾ ಸ್ವರಾಜ್ ಅವರು ಪ್ರತಿಪಕ್ಷದ ಮೊದಲ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸುಷ್ಮಾರವರಿಗೆ ಸಂದ ಪ್ರಶಸ್ತಿ ಮತ್ತು ಪುರಸ್ಕಾರಗಳು

  • ಹರಿಯಾಣ ರಾಜ್ಯ ವಿಧಾನಸಭೆಯಿಂದ ಆಕೆಗೆ ಅತ್ಯುತ್ತಮ ವಾಗ್ಪಟು ಪ್ರಶಸ್ತಿ ನೀಡಲಾಯಿತು.
  • 2008 ಮತ್ತು 2010 ವರ್ಷಗಳಲ್ಲಿ ಸುಷ್ಮಾ ಸ್ವರಾಜ್ ಅತ್ಯುತ್ತಮ ಸಂಸದೀಯ ಪ್ರಶಸ್ತಿಯನ್ನು ಎರಡು ಬಾರಿ ಪಡೆದರು.
  • ಅತ್ಯುತ್ತಮ ಸಂಸದೀಯ ಪ್ರಶಸ್ತಿಯನ್ನು ಪಡೆದ ಮೊದಲ ಮತ್ತು ಏಕೈಕ ಮಹಿಳಾ ಸಂಸದರು.

ಈ ಮೇಲ್ಕಂಡ ಪ್ರಶಸ್ತಿಗಳನ್ನು ಸುಷ್ಮಾ ಸ್ವರಾಜ್ ಪಡೆದಿದ್ದಾರೆ ಎನ್ನುವುದಕ್ಕಿಂತ ಆ ಪ್ರಶಸ್ತಿಗಳೇ ಸುಷ್ಮಾರವರನ್ನು ಹುಡುಕಿ ಬಂದಿವೆ ಮತ್ತು ಸುಷ್ಮಾರವರಿಗೆ ಈ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಆ ಪ್ರಶಸ್ತಿಗಳ ಮೌಲ್ಯವೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದೇನೋ?

ದೇಶಾದ್ಯಂತ ನರೇಂದ್ರ ಮೋದಿ ಮತ್ತು ಅಮಿತ್ ಶಾ ಒಂದದ ಮೇಲೊಂದು ಚುನಾವಣೆಗಳನ್ನು ಗೆದ್ದು ದೇಶವನ್ನು ಪರಮ ವೈಭವದತ್ತ, ವಿಶ್ವಗುರುವಾಗುವತ್ತ ಕೊಂಡೊಯ್ಯುತ್ತಿದ್ದರೆ ಅತ್ತ ಜವರಾಯನಿಗೂ ತನ್ನ ಪ್ರಾಂತದಲ್ಲಿ ಬಿಜೆಪಿಯ ಹಿರಿಯ ನಾಯಕರುಗಳ ಅವಶ್ಯಕತೆ ಕಂಡು ಅದಕ್ಕಾಗಿಯೇ ಕಳೆದ ಒಂದು ವರ್ಷಗಳಲ್ಲಿ ಬಿಜೆಪಿಯ ಹಿರಿಯ ನಿಸ್ವಾರ್ಥ ಮತ್ತು ಸಮರ್ಥ ನಾಯಕರುಗಳಾದ ಶ್ರೀ ಅಟಲ್ ಬಿಹಾರೀ ವಾಜಪೇಯಿ, ಅನಂತ ಕುಮಾರ್, ಪರಿಕ್ಕರ್ ಅವರುಗಳನ್ನು ತನ್ನತ್ತ ಸೆಳೆದುಕೊಂಡಿದ್ದ. ಈಗ ಸುಷ್ಮಾರವರನ್ನೂ ಮರಳಿ ಬಾರದಿರುವ ದೇವಲೋಕಕ್ಕೆ ಕರೆದುಕೊಂಡು ದೇವಲೋಕದಲ್ಲೂ ಬಿಜೆಪಿ ಸರ್ಕಾರವನ್ನು ಮಾಡಲು ಹೊರಟಿರಬಹುದೇನೋ? ಹಾಗಾಗಿ ಭಗವಂತನಲ್ಲಿ ಸಕಲ ಭಾರತೀಯರ ಪರವಾಗಿ ನನ್ನದೊಂದು ಕೋರಿಕೆ. ಕಳೆದ ಅರವತ್ತು ವರ್ಷಗಳಿಂದ ಕುಂಠಿತವಾಗಿದ್ದ ದೇಶದ ಪ್ರಗತಿ ಈಗ ತಾನೇ ಸ್ವಲ್ಪ ಪ್ರಗತಿಯನ್ನು ಕಾಣುತ್ತಿದ್ದೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರುತ್ತಿದ್ದ ಭಾರತೀಯರ ಮನೋಭಾವ ಕಳೆದು ಹೋಗಿ ತನ್ನ ಒಂದು ಕೆನ್ನೆಗೆ ಹೊಡೆದರೆ ಎದುರಾಳಿಯ ಎರಡೂ ಕೆನ್ನೆಗಳಿಗೆ ಬಾಸುಂಡೆ ಬರುವಂತೆ ಬಾರಿಸುವ ಛಾತಿಯನ್ನು ಹೊಂದುತ್ತಿದ್ದಾನೆ. ಹಾಗಾಗಿ ಇನ್ನು ಸ್ವಲ್ಪ ವರ್ಷಗಳು ನಮ್ಮ ದೇಶದ ಯಾವುದೇ ರಾಜಕೀಯ ನಾಯಕರತ್ತ ಕಣ್ಣು ಹಾಯಿಸದಿರುವಂತೆ ಕೋರೋಣಾ. ನಮ್ಮ ಎಲ್ಲಾ ಕೆಲಸ ಮುಗಿಸಿದ ನಂತರ ನಾವೇ ಅವರನ್ನೆಲ್ಲಾ ಹೋಲ್ ಸೇಲಾಗಿ ಚಂದ್ರಯಾನ-5-6ರ ನೌಕೆಯಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಯೋಚನೆ ಮಾಡಬಹುದು.

ಏನಂತೀರೀ?

Sushma.jpg

One thought on “ಸೋತು ಗೆದ್ದವರು ಸುಷ್ಮಾ ಸ್ವರಾಜ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s