ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಇಂದಿನ ಕಾಲದಲ್ಲಿ ಲಕ್ಷಾಂತರ ಇಲ್ಲವೇ ಕೋಟ್ಯಾಂತರ ಹಣವನ್ನು ಸಂಪಾದಿಸುವುದು ಬಹಳ ಸುಲಭ ಸಾಧ್ಯವಾಗಿದೆ ಆದರೆ ಆ ರೀತಿಯಾಗಿ ಹಣವನ್ನು ಸಂಪಾದಿಸುವ ಭರದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜೀ ವಹಿಸದೇ ಸಣ್ಣ ವಯಸ್ಸಿನಲ್ಲಿಯೇ ನಾನಾ ರೀತಿಯ ಖಾಯಿಲೆಗಳಿಗೆ ಮತ್ತು ಖಿನ್ನತೆಗಳಿಗೆ ಒಳಗಾಗಿ ತಾವೂ ನರಳುವುದಲ್ಲಿದೇ, ಕುಟುಂಬ, ತಮ್ಮನ್ನು ಅವಲಂಭಿಸಿರುವವರನ್ನು ಮತ್ತು ಇಡೀ ಸಮಾಜವನ್ನೇ ತೊಂದರೆ ಗೀಡುಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಇತ್ತೀಚೆಗೆ ನಮ್ಮ ದೇಶದ ಇಬ್ಬರು ಮಹಾನ್ ನಾಯಕರುಗಳಾದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರ ಸಾವಿನ
ಹಿಂದಿನ ರಹಸ್ಯವೂ ಇದೇ ರೀತಿಯಾದ್ದಾಗಿದೆ. ಆರಂಭದಲ್ಲಿ ಇಬ್ಬರೂ ಮಧುಮೇಹ ಮೇಹ ರೋಗಕ್ಕೆ ತುತ್ತಾಗಿ ಅದನ್ನು ಪರಿಹಾರ ಮಾಡಿಕೊಳ್ಳಲು ತೆಗೆದುಕೊಳ್ಳುತ್ತಿದ್ದ ಔಷಧಿಗಳ ಅಡ್ಡ ಪರಿಣಾಮವೋ ಇಲ್ಲವೇ, ದುಷ್ಪರಿಣಾಮದ ಪರಿಣಾಮವಾಗಿಯೋ ಮೂತ್ರಪಿಂಡದ ಖಾಯಿಲೆಗೆ ತುತ್ತಾಗಿ, ಕಡೆಗೆ ಮೂತ್ರ ಪಿಂಡದ ಕಸಿ ಮಾಡಿಸಿಕೊಂಡರೂ ಅದು ಹೆಚ್ಚು ದಿನ ಬಾಳಲಾಗದೇ ಹೋದದ್ದು ಛೇದಕರ. ಇವರಿಬ್ಬರಲ್ಲಿ ಮತ್ತೊಂದು ಸಾಮ್ಯವಾದ ಅಂಶವೆಂದರೆ ಅತಿಯಾದ ತೂಕ. ಕಾಲಕಾಲಕ್ಕೆ ಸರಿಯಾಗಿ ವ್ಯಾಯಾಮ ಮಾಡದ ಕಾರಣ ದೇಹದ ತೂಕವೂ ಹೆಚ್ಚಾದ ಕಾರಣ ಅನಾರೋಗ್ಯಕ್ಕೆ ತುತ್ತಾಗಿರಲೂ ಬಹುದು. ಇನ್ನು ಅರುಣ್ ಜೇಟ್ಲಿಯವರಂತೂ ತಮ್ಮ ತೂಕ ಇಳಿಸಲು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅದೇ ರೀತಿ ಮೈಸೂರಿನ ಮಾಜಿ ಯುವರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಕೂಡ ತಮ್ಮ ದೇಹದ ತೂಕವನ್ನು ಒಮ್ಮಿಂದೊಮ್ಮೆಲ್ಲೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಫಲಾಕಾರಿಯಾಗದ ಕಾರಣವೇ ಅವರು ದೇಹಾಂತ್ಯವಾದರು ಎಂದು ಓದಿದ ನೆನಪು. ಇನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೂಡಾ ತಮ್ಮ ದೇಹದ ತೂಕವನ್ನು ಅಸಾಂಪ್ರಾದಾಯಕವಾಗಿ ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಮಧ್ಯದಲ್ಲಿಯೇ ಕೋಮಾಕ್ಕೆ ಜಾರಿ ಸುಮಾರು ತಿಂಗಳುಗಳ ನಂತರ ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿ ಬಂದ್ದಿದ್ದು ಈಗ ಇತಿಹಾಸ.

ಈ ಎಲ್ಲಾ ಉದಾಹರಣೆಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದರೆ, ಇದರ ಹಿಂದಿನ ರಹಸ್ಯ ಬಹಳ ಸರಳ ಅದರೇ ಆಷ್ಟೇ ಕಠು ಸತ್ಯವೂ ಹೌದು. ಅದೇನೆಂದರೇ ಇವರೆಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ, ಕಾಲಕಾಲಕ್ಕೆ ಸರಿಯಾಗಿ ಊಟ ಮಾಡದೆ, ನಿದ್ದೆ ಮಾಡದೇ , ನಿಯಮಿತ ವ್ಯಾಯಾಮ ಮಾಡದೇ, ಇನ್ನೂ ಕೆಲವರು ಕೆಲ ಚೆಟಗಳಿಗೆ ಬಲಿಯಾಗಿ, ತಮ್ಮದೇ ಆರೋಗ್ಯದ ಕಡೆ ಸರಿಯಾಗಿ ಗಮನ ಹರಿಸದ ಕಾರಣವೇ, ರೋಗವು ಉಲ್ಬಣಗೊಂಡು ವೈದ್ಯರ ಕೈ ಮೀರಿ, ಕೆಲವರು ಸಾವನ್ನಪ್ಪಿರುವುದು ನಿಜಕ್ಕೂ ದುಃಖಕರ ವಿಷಯವಾಗಿದೆ.

ಪ್ರೊಫೆಸರ್ ಹಕ್ಸಲೆ ಎಂಬ ಪಾಶ್ಚಾತ್ಯ ಪಂಡಿತರು ಹೇಳಿದ ಹಾಗೆ Be careful, your body is the living temple of God ಅಂದರೆ, ನಿಮ್ಮ ದೇಹವು ಜೀವಂತ ದೇವರು ಇರುವ ದೇವಾಲಯ ಹಾಗಾಗಿ ಜಾಗರೂಕರಾಗಿರಿ ಎಂದು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ನಮ್ಮ ದೇಹ ಯಾವುದೇ ಪತ್ರವನ್ನೇ ಆಗಲಿ ಸ್ವೀಕಾರ ಮಾಡುವ ಅಂಚೆ ಪೆಟ್ಟಿಗೆ (Post box) ಅಥವಾ ಎಲ್ಲಾರೀತೀಯ ಗಲೀಜನ್ನು ಹಾಕಲು ಬಳೆಸುವ ಕಸದ ಡಬ್ಬ( Dust bin) ಅಂತೂ ಅಲ್ಲವೇ ಅಲ್ಲ. ಹಾಗಾಗಿ ಮೊದಲು ನಾವೇ ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿಮಾಡಿಕೊಳ್ಳಬೇಕು. ನಮ್ಮ ದೇಹ ಸುಸ್ಥಿತಿಯಲ್ಲಿರಲು ಏನು ಬೇಕು? ಏನು ಬೇಡ? ಏನನ್ನು? ಎಷ್ಟು ತಿನ್ನಬೇಕು? ಯಾವುದನ್ನು ಬಿಡಬೇಕು? ನಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ಹೊತ್ತು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಯಾವ ರೀತಿಯಾಗಿ ನಮ್ಮ ಜೀವನ ಶೈಲಿ ಇರಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಬೇಕು.

ಸಾಧಾರಣವಾಗಿ ಇಡೀ ದಿನ ಪೂರ್ತಿ ಮಹಿಳೆಯರು 1200-1500 Calories ಮತ್ತು ಪುರುಷರು 1500-1800 Calories ವರೆಗೂ ಆಹಾರ ಸ್ವೀಕರಿಸ ಬೇಕು ಮತ್ತು ಇಬ್ಬರೂ ಕಡ್ಡಾಯವಾಗಿ 800 caliries ವರೆಗೂ ದೈಹಿಕ ವ್ಯಾಯಾಮದ ಮೂಲಕ ತಿಂದ್ದದ್ದನ್ನು ಕರಗಿಸಬೇಕು ಉಳಿದ caliries ದೈನಂದಿನ ಚಟುವಟಿಕೆಗಳ ಮೂಲಕ ಕರಗಿಹೋಗುತ್ತದೆ. ನಮ್ಮ ಪೂರ್ವಜರು ಇದನ್ನು ಅಕ್ಷರಶಃ ಪಾಲಿಸುತ್ತಿದ್ದರು. ಆರೋಗ್ಯಕರವಾಗಿ ಸಾಂಪ್ರದಾಯಕವಾಗಿ, ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಪರ್ದಾರ್ಥಗಳಿಂದ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು ಮತ್ತು ಮೈ ಬಗ್ಗಿಸಿ, ರೆಟ್ಟೆ ಮುರಿಯುವ ವರೆಗೂ ಬೆವರು ಸುರಿಸಿ ಹೊಲ ಗದ್ದೆಗಳಲ್ಲಿ ಡುಡಿಯುತ್ತಾ ತಿಂದದನ್ನು ಕರಗಿಸುತ್ತಿದ್ದರು. ಆದರೆ ಇಂದಿನ ಯುವ ಜನತೆಯ ಜೀವನ ಶೈಲಿ ಸಂಪೂರ್ಣ ಪಾಶ್ವಾತ್ಯೀಕರಣವಾಗಿ ಹೊತ್ತಲ್ಲದ ಹೊತ್ತಿಗೆ ಏಳುವುದು, ಮಲಗುವುದು ಯಾವುದೋ ಸಮಯದಲ್ಲಿ ಜಂಕ್ ಆಹಾರದ ಸೇವನೆ ಮಾಡುವುದು, ಕೆಲವೇ ಜನರ ಹೊರತಾಗಿ ಯಾವುದೇ ವ್ಯಾಯಾಮವನ್ನು ಮಾಡದಿರುವುದು ಎಲ್ಲಾ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಹಾಗಾಗಿ ಮೊದಲು ನಮ್ಮ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಅಧಿಕ ಕ್ಯಾಲರಿಗಳು ಕೊಬ್ಬು, ಕೊಲೆಸ್ಟ್ರಾಲ್ ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತದೊತ್ತಡ ಮತ್ತು ಮಧುಮೇಹ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ನಾರು ಅಧಿಕವಾಗಿರುವ ಹಾಗೂ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಆರೋಗ್ಯವಂತರಾಗಿರಬಹುದು. ಕಂಠ ಪೂರ್ತಿ ತಿನ್ನುವ ಬದಲು ಹೊಟ್ಟೆ ತುಂಬುವುದಕ್ಕೆ ಒಂದು ತುತ್ತು ಕಡೆಮೆ ತಿನ್ನುವುದು ಉತ್ತಮ ಅಭ್ಯಾಸ. ಜೀವಿಸುವುದಕ್ಕಾಗಿ ತಿನ್ನಬೇಕೆ ಹೊರತು, ತಿನ್ನುವುದಕ್ಕಾಗಿಯೇ ಜೀವಿಸುವುದು ಬಹಳ ಅಪಾಯಕಾರಿಯಾಗಿದೆ.

 

ಸ್ಥೂಲಕಾಯ ಎಲ್ಲಾ ರೋಗಗಳಿಗೆ ಅತ್ಯಂತ ಮಾರಕವಾಗಿದೆ ಹಾಗಾಗಿ ಯಾವುದೇ ರೀತಿಯ ನಿಯಮಿತವಾದ ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯಕರವಾದ ತೂಕವನ್ನು ಕಾಯ್ದುಕೊಂಡಲ್ಲಿ ಯಾವುದೇ ರೀತಿಯ ರೋಗ ರುಜಿನಗಳಿಂದ ಮುಕ್ತರಾಗಿರಬಹುದು. Something is better than nothing ಎನ್ನುವಂತೆ, ಯಾವುದೇ ರೀತಿಯ ವ್ಯಾಯಾಮವಿಲ್ಲದೇ ಇರುವುದಕ್ಕಿಂತ, ಅಲ್ಪ ಸ್ವಲ್ಪವಾದರೂ ವ್ಯಾಯಾಮ ಮಾಡುವುದು ಉತ್ತಮ. ವಾರದಲ್ಲಿ ಕನಿಷ್ಠ ಪಕ್ಷ ನಾಲ್ಕೈದು ದಿನಗಳಾದರೂ ದಿನದಲ್ಲಿ 30-60 ನಿಮಿಷ ವ್ಯಾಯಾಮ ಮಾಡುವುದು ಅತ್ಯುತ್ತವಾದ ಅಭ್ಯಾಸ. ಯಾವುದೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ದೇಹವನ್ನು ದಂಡಿಸಲು ಮತ್ತು ಸುಸ್ಥಿತಿಯಲ್ಲಿಡಲು ದೀರ್ಘ ನಡಿಗೆ ಮತ್ತು ಯೋಗಸಾನ ಮತ್ತು ಪ್ರಾಣಾಯಾಮಗಳು ಅತ್ಯುತ್ತಮ ವಿಧಾನಗಳಾಗಿವೆ. ಅದರಲ್ಲೂ ಸೂರ್ಯ ನಮಸ್ಕಾರದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚಿನ Calories burn ಮಾಡಬಹುದಾಗಿದೆ. ಕೇವಲ ಒಂದು ನಿಮಿಷದೊಳಗೆ 10 ಅಂಕಗಳ ಒಂದು ಸೂರ್ಯ ನಮಸ್ಕಾರ ಮಾಡದರೆ ಸರಿ ಸುಮಾರು 14 Calories burn ಮಾಡ ಬಹುದಾಗಿದೆ.

Fit4

ಇಂದಿನ ಜನರ ಪರಿಸ್ಥಿತಿ ಹೇಗಿದೆ ಎಂದರೆ,

ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು
ಬೈಕ್ ಓಡಿಸಿ ಬೆನ್ನು ನೋವಾಗಿ ಕಾರ್ ಬಂತು
ಕಾರ್ ಓಡಿಸುವಾಗ ಕೈಕಾಲು ಆಡಿಸದ ಕಾರಣ ಹೊಟ್ಟೆ ಬಂತು
ಆ ಹೊಟ್ಟೆ ಕರಗಿಸಲು ಮತ್ತೆ ಜಿಮ್ಮಿನಲ್ಲಿ ಸೈಕಲ್ ತುಳಿಯುವ ಹಾಗಾಯ್ತು

ಅದೇ ರೀತಿ ಪ್ಲಾಸ್ಟಿಕ್ ಕಂಟೈನರ್ ಗಳಲ್ಲಿ ಆಹಾರವನ್ನು ಶೇಖರಿಸಿಡುವುದು, ಬಿಸಿಯಾದ ಆಹಾರ ಅಥವಾ ನೀರನ್ನು ಪ್ಲಾಸ್ಟಿಕ್ ತಟ್ಟೆ ಲೋಟಗಳಲ್ಲಿ ಹಾಕಿದಾಗ ಟಾಕ್ಸಿಕ್ ರಾಸಾಯನಿಕವು ಉತ್ಪತ್ತಿಯಾಗಿ ಅದನ್ನೇ ನಾವು ದೀರ್ಘಾಕಾಲ ಸೇವಿಸುತ್ತಾ ಹೋದಲ್ಲಿ ನಾನಾ ರೀತಿಯ ಆರೋಗ್ಯದ ಸಮಸ್ಯೆಗೆ ಉಂಟಾಗಬಹುದು.

ಅದೇ ರೀತಿ ಜಿಡ್ಡು ರಹಿತ ಆಹಾರ ತಯಾರಿಸಲು ನಾನ್ ಸ್ಟಿಕ್ ಕುಕ್ ವೇರ್ ಬಳೆಸುವ ಪಾತ್ರೆಗಳ ಟೆಫ್ಲಾನ್ ಕೋಟಿಂಗ್ ನಲ್ಲಿ ಕಾರ್ಸಿನೊಜೆನ್ ಎನ್ನುವ ಅಂಶವಿರುವ ಕಾರಣ ದೀರ್ಘಕಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ. ಇದರ ಬದಲು ಗಾಜು, ಮಣ್ಣು ಅಥವಾ ಸ್ಟೈನ್ ಲೆಸ್ ಸ್ಟೀಲನ್ನು ಬಳಸುವುದು ಉತ್ತಮವಾದ ಅಭ್ಯಾಸವಾಗಿದೆ.

ಬಹುತೇಕರ ಮನೆಗಳಲ್ಲಿ ಅತೀ ಶೀಘ್ರದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ಅಥವಾ ಬಿಸಿ ಮಾಡಲು ಓವನ್ ಬಳೆಸುವ ಪದ್ದತಿ ರೂಢಿಯಲ್ಲಿದೆ. ಓವನ್ಗಳಲ್ಲಿ ಸಾಂಪ್ರದಯಿಕವಾಗಿ ಬಿಸಿಮಾಡುವ ಪದ್ದತಿಯಲ್ಲಿರದೆ ವಿಕಿರಣಗಳನ್ನು ಸೂಸಿ ಬಿಸಿ ಮಾಡುವುದರಿಂದ ಅದೂ ಕೂಡಾ ದೇಹಕ್ಕೆ ಮಾರಕವಾಗ ಬಲ್ಲದು.

ಇನ್ನು ಮನೆಗಳು ತಂಪಾಗಿರಲು ಏರ್ ಕೂಲರ್, ಏರ್ ಫ್ರೆಶ್ನರ್ ಮತ್ತು ಏಸಿಗಳನ್ನು ಬಳೆಸುವುದೂ ದೇಹಕ್ಕೆ ಮಾರಕ. ಅದರ ಬದಲು ಮನೆಯ ಸುತ್ತ ಮುತ್ತಲು ಗಿಡ ಮರಗಳಿದ್ದು ಅಲ್ಲಿಂದ ಸ್ವಚ್ಛವಾದ ಗಾಳಿ ಮತ್ತು ಬೆಳಕು ವಿಶಾಲವಾದ ಕಿಟಕಿ ಮತ್ತು ಬಾಗಿಲುಗಳ ಮೂಲಕ ಬರುವಂತಹ ವ್ಯವಸ್ಥೆ ಅತ್ಯುತ್ತಮವಾಗಿದೆ.

ನಮ್ಮ ಪೂರ್ವಜರು ಒಂದು ಸಮಯಕ್ಕೆ ಬೇಕಾಗುವಷ್ಟು ಮಾತ್ರವೇ ಆಹಾರವನ್ನು ತಯಾರಿಸಿ ಬಿಸಿ ಬಿಸಿಯಾಗಿ ಆಹಾರವನ್ನು ಸೇವಿಸುವ ಒಳ್ಳೆಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡಿದ್ದರು. ಹಿಂದಿನ ದಿನ ಮಾಡಿದ ಅಡುಗೆಯನ್ನು ತಂಗಳು ಎಂದು ಸೇವಿಸದೆ ಅದನ್ನು ಜಾನುವಾರುಗಳಿಗೆ ಹಾಕುತ್ತಿದ್ದರು. ಆದರೆ ಇಂದು ತಂಗಳು ಪೆಟ್ಟಿಗೆ ಅರ್ಥಾತ್ ಫ್ರಿಡ್ಜ್ ಹೊಂದಿರುವುದು ಮನೆಯ ಪ್ರತಿಷ್ಠೆಯ ಸಂಕೇತ ಮತ್ತು ಅತ್ಯಂತ ಅಗತ್ಯ ವಸ್ತುಗಳ ಭಾಗವಾಗಿದೆ. ಹಾಲು, ಹಣ್ಣು ಮತ್ತು ತರಕಾರಿ ಕೆಲ ದಿನಗಳ ಕಾಲ ಕೆಡದಂತೆ ಇಡಲು ಬಳೆಸಬಹುದಾದರೂ ಎಂದೋ ಮಾಡಿದ ಅಳಿದುಳಿದ ಆಹಾರಗಳನ್ನು ಸಂಗ್ರಹಿಸಿ ಮತ್ತೆಂದೋ ಸೇವಿಸುವುದೂ ದೇಹಕ್ಕೆ ಹಾನಿಕರವಾಗಿದೆ.

Fit8

ಆಗಸ್ಟ್ 29 ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟು ಹಬ್ಬ. ಅದನ್ನು ಹೆಮ್ಮೆಯಿಂದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ . ಧ್ಯಾನ್ ಚಂದ್ ಅವರ 114ನೇ ಜಯಂತಿಯ ಅಂಗವಾಗಿ ನಮ್ಮೆ ಹೆಮ್ಮೆಯ ಪ್ರಧಾನಿಗಳು ದೇಶದ ಜನತೆಗಾಗಿ ಫಿಟ್ ಇಂಡಿಯಾ (FIT INDIA) ಅಭಿಯಾನ ಆರಂಭಿಸಿ , ಯುವಜನತೆಗೆ ಹೊಸಾ ಚೈತನ್ಯ ಮತ್ತು ಹೊಸ ಹುರುಪು ತುಂಬಿದ್ದಾರೆ. ಆರೋಗ್ಯ ಸುಧಾರಣೆ ಹಾಗೂ ಸದೃಢ ದೇಹದಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ದೇಶಾದ್ಯಂತ ತಿಳಿಸಲು ಈ ಅಭಿಯಾನ ಆರಂಭಿಸಲಾಗಿದೆ. ಹಾಗಾಗಿ ಮೇಲೆ ತಿಳಿಸಿದ ಅಂಶಗಳನ್ನು ಮನಸ್ಸಿನಲ್ಲಿಟ್ಟು ಕೊಂಡು ಉತ್ತಮ ಆಹಾರ ಸೇವಿಸುತ್ತಾ , ಅದಕ್ಕೆ ತಕ್ಕಷ್ಟು ವ್ಯಾಯಾಮ ಮಾಡುತ್ತ ಆರೋಗ್ಯವಂತರಾಗಿ ಧೃಡಕಾಯರಾಗಿರುವ ಸಂಕಲ್ಪವನ್ನು ಇಂದೇ ಮಾಡೋಣ ಮತ್ತು ಈಗಿನಿಂದಲೇ ಈ ವಿಷಯವನ್ನು ನಮ್ಮ ಎಲ್ಲಾ ಬಂಧು ಮಿತ್ರರಿಗೂ ತಿಳಿಸೋಣ.

Fit3

 

ಸಧೃಡ ಜನತೆಯೇ ದೇಶದ ಸಂಪತ್ತು. ಅದುವೇ ದೇಶದ ತಾಕತ್ತು. ಜನ ಕೃಶಕಾಯರಾಗಿದ್ದರೆ ದೇಶಕ್ಕೆ ಅದುವೇ ಆಪತ್ತು. ಹಾಗಾಗಿ ಎಲ್ಲರೂ ಎಚ್ಚೆತ್ತು , ದಿನಕ್ಕೊಮ್ಮೆಯಾದರೂ ಮಾಡೋಣ ಕಸರತ್ತು. ಅದರಿಂದ ತಡೆಯೋಣ ದೇಶದ ವಿಪತ್ತು. ಆಗ ನೋಡಿ ಗಮ್ಮತ್ತು. ಯಾವ ಶತ್ರುಗಳೂ ನಮ್ಮೊಂದಿಗೆ ಮಾಡೋದಿಲ್ಲ ಮಸಲತ್ತು.

ಏನಂತೀರೀ?

2 thoughts on “ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

  1. We blindly ape westerners. Pizza,Noodles, Lasagne,Pasta were unknown a few decades back and the present day youngsters this k its below their dig ity to eat traditional Indian food.Unfortunately present day Parents dont listen to their Parents. We brushed our teeth with Charcoal and Salt,Drank water from the Tap,Ate only traditional foods like Ragi rotti,dose,mudde,Ottu shavige,kadamba, nuchhina unde etc.Once in fifteen days a spoonful of castor oil before going to bed,during summer left over rice with curd was our breakfast.The fansy vegetables like Carrot,Peas,Capsicum,Brocolli, Red cabbage etc were unknown to us.Always walked on Hawaii chappals and few safety pins were hung to Udidara as a safety measure to instantly repair Hawaii chappal. Spending time in Sun really helped us,today it’s a luxury

    Liked by 1 person

    1. ಭರತ್ ಅವರೇ, ಸತ್ಯವಾದ ಮಾತುಗಳನ್ನು ಹೇಳಿದ್ದೀರಿ. ಉಡುದಾರ ಮತ್ತು ಒತ್ತು ಶಾವಿಗೆ ಬಗ್ಗೆಯೇ ನನ್ನ ಬ್ಗಾಗ್ನಲ್ಲಿ ಲೇಖನವನ್ನು ಬರೆದಿದ್ದೇನೆ. ಸಮಯವಿದ್ದಾಗ ಓದಿ ನಿಮ್ಮ ಅಭಿಪ್ರಾಯ ತಿಳಿಸಿ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s