ಮೊನ್ನೆ ಹೈದರಾಬಾದಿನ ಬಳಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯ ಮೇಲೆ ನಡೆದೆ ಅಮಾವೀಯವಾದ ಅತ್ಯಾಚಾರ ಮತ್ತು ಬರ್ಬರವಾದ ಹತ್ಯೆ ನಿಜಕ್ಕೂ ದೇಶಾದ್ಯಂತ ತಲ್ಲಣ ಎಬ್ಬಿಸಿದೆ. ಗಾಂಧೀಜೀಯವರು ಕಂಡ ರಾಮ ರಾಜ್ಯ ಕನಸಿನಲ್ಲಿ ನಿರ್ಜನ ಪ್ರದೇಶದಲ್ಲಿ ರಾತ್ರಿ 12ಗಂಟೆಯ ಹೊತ್ತಿಗೂ ಒಬ್ಬ ಹೆಂಗಸು ಹೋಗುವಂತಾದಾಗ ಮಾತ್ರವೇ ನಿಜವಾದ ಸ್ವಾತಂತ್ಯ್ರ ಎಂದಿದ್ದಾರೆ. ರಾತ್ರಿ 12ಗಂಟೆ ಬಿಡಿ, ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಹೊರಗೆ ಹೋದ ಹೆಣ್ಣುಮಗಳು ಸುರಕ್ಷಿತವಾಗಿ ಹಿಂದುರಿಗಿ ಬರುವುದೂ ಈಗ ದುಸ್ತರವಾಗಿದೆ. ನಮ್ಮ ಇಂದಿನ ಶಿಕ್ಷಣ ಪದ್ದತಿ, ಅತಿಯಾದ ಪಾಶ್ವಾತ್ಯ ಅಂಧಾನುಕರಣೆ, ಟಿವಿ ಮತ್ತು ಸಿನಿಮಾಗಳ ಪ್ರಭಾವದ ಜೊತೆಗೆ ನಿಧಾನಗತಿಯ ಕಾನೂನು ವ್ಯವಸ್ತೆಯೂ ಕಾರಣವಾಗಿರುವುದು ಬೇಸರ ಸಂಗತಿ.
ಪ್ರಿಯಾಂಕರೆಡ್ಡಿ ಆತ್ಮಕ್ಕೆ ಶಾಂತಿ ಕೋರೋಣ. ದುಖಃ ತಪ್ತ ಆಕೆಯ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ, ಮುಂದೆ ಈ ರೀತಿಯಾಗದಂತೆ ತಡೆಯದರಿರಲು ನಮ್ಮ ನಮ್ಮ ಮಕ್ಕಳಿಗೆ ಅದು ಹೆಣ್ಣಾಗಿರಲಿ, ಗಂಡಾಗಿರಲಿ, ಸರಿಯಾದ ನೀತಿ ಪಾಠವನ್ನು ಹೇಳಿಕೊಡೋಣ. ಕಂಡೋರ ಮಕ್ಕಳೆಲ್ಲರೂ ಸಹೋದರ ಮತ್ತು ಸಹೋದರಿಯರು ಎನ್ನುವ ಮಾತನ್ನು ಸಾರಿ ಸಾರಿ ತಿಳಿ ಹೇಳೋಣ. ಸಮಾಜದ ಬದಲಾವಣಿಗೆ ಕಾರಣರಾಗೋಣ.
ಸರ್ಕಾರ ಮತ್ತು ಕಾನೂನೂ ಪಾಲಕರೂ ಕೂಡಾ ಇಂತಹ ದುರ್ಘಟನೆಗಳು ನಡೆದಾಗ ವೃಥಾ ವಿಳಂಬ ಮಾಡದೇ, ಅತೀ ಶೀಘ್ರದಲ್ಲಿಯೇ ವಿಚಾರಣೆ ನಡೆಸಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಆ ಕೂಡಲೇ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಬೇರೆಯವರು ಇಂಥ ಕುಕೃತ್ಯಕ್ಕೆ ಇಳಿಯುವ ಮೊದಲು ನೂರಾರು ಬಾರಿ ಯೋಚಿಸುವಂತಾಗಿ, ಕಠಿಣ ಶಿಕ್ಷೆಯ ಭಯದಿಂದಾಗಿಯಾದರೂ ಈ ಕುಕೃತ್ಯಗಳು ನಿಲ್ಲಬಹುದು ಎನ್ನುವುದು ನನ್ನ ವಯಕ್ತಿಕ ಆಭಿಪ್ರಾಯ. ನೀವೂ ಇದನ್ನು ಸಮರ್ಥಿಸುತ್ತೀರೀ ಎಂದು ನನ್ನ ಭಾವನೆ.
ಏನಂತೀರೀ?
ವೀಡೀಯೋ: