ದೇಶದ ಬೆನ್ನೆಲುಬಾಗಿರುವ ಸಮಸ್ತ ಅನ್ನದಾತರಿಗೆ ಡಿಸೆಂಬರ್ 23, ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು.
ನಮ್ಮ ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುವುದರ ಮೂಲಕ ಅವರ ಜೀವನ ಹಸನಾಗಿ ಆತ್ಮಹತ್ಯೆ ನಿಲ್ಲಲಿ.
ಟ್ರಾಕ್ಟರ್ ಸಗಣಿ ಹಾಕೋದಿಲ್ಲ, ಗೋವುಗಳು ಹೊಗೆ ಉಗುಳೋದಿಲ್ಲ.
ಅನ್ನದಾತ
ಇವನೆ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೇ ಸವನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ
ಹೊಂದಿಕೊಂಡು ನಡೆವರು
(ಕವಿ : ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ)



ಗೋವಿನ ಪ್ರತಿಯೊಂದು ಉತ್ಪನ್ನಗಳು ಉಪಯೋಗಕಾರಿ. ಹಾಗಾಗಿ ದೇಸೀ ಗೋವುಗಳ ತಳಿಯನ್ನು ಉಳಿಸೋಣ ಮತ್ರು ಬೆಳೆಸೋಣ. ಆರೋಗ್ಯವಂತರಾಗಿರೋಣ.
ಏನಂತೀರೀ??
#farmersDay