ಇಂಡಿಯನ್ ಕೌನ್ಸಿಲ್ ಆಫ್ ಜ್ಯೋತಿಷ್ಯ ವಿಜ್ಞಾನದಲ್ಲಿ (1997) ಎಮ್ಎ ಮಾಡಿರುವಂತಹ ವೈದಿಕ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ, ಶ್ರೀಯುತರಾದ ರಾಜೀವ್ ಸೇಥಿ ಅವರು ಹೇಳುವ ಪ್ರಕಾರ
ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು 6/4/1980 ರಂದು ದೆಹಲಿಯಲ್ಲಿ ಬೆಳಿಗ್ಗೆ 11.45 ಕ್ಕೆ ರಚನೆಯಾಯಿತು ಎಂದು ತಿಳಿಯಬರುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ಲೆಕ್ಕ ಹಾಕಿದಲ್ಲಿ, ಬಿಜೆಪಿ 23/02/2019 ರಿಂದ 16/08/2020 ರವರೆಗೆ ಚಂದ್ರ ಮಹಾದಾಶ-ರಾಹು ಭುಕ್ತಿ ನಡೆಸುತ್ತಿದೆ. ಚಂದ್ರ ಮತ್ತು ರಾಹು ಪರಸ್ಪರ ಶತೃಗಳು ಮತ್ತು ಅವರ ದಶಾ-ಅಂತರ್ದಶಾ ಸರಿಯಾಗಿಲ್ಲದ ಕಾರಣ, ನಿರೀಕ್ಷಿತ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇದುವೇ 2019 ರ ಆರಂಭದಿಂದ ಪಕ್ಷಕ್ಕೆ ಕೆಲವು ಹಿನ್ನಡೆ ಉಂಟಾಗಲು ಕಾರಣವಾಗಿದೆ. ಈ ಅವಧಿ ಮುಗಿಯುತ್ತಿದ್ದಂತೆ ಮತ್ತು ಗುರು ಅಂತರ್ದಶೆ ಪ್ರಾರಂಭವಾಗುತ್ತಿದ್ದಂತೆ ಈ ಹಿನ್ನಡೆಗಳೇ ಮೆಟ್ಟಿಲುಗಳಾಗುತ್ತವೆ. 16/08/2020 ರಿಂದ 09/12/2021 ರವರೆಗಿನ ಚಂದ್ರ-ಗುರು ಅವಧಿಯು ರಾಜಕೀಯವಾಗಿ ಮತ್ತು ಚುನಾವಣಾ ದೃಷ್ಟಿಯಿಂದ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ತಮ್ಮದೇ ಆದ ಆಂತರಿಕ ಸಂಕಷ್ಟಗಳ ಮೂಲಕ ಪತನಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದೇ ಅವಧಿಯಲ್ಲಿ ಬಹುಸಂಖ್ಯಾತ ಹಿಂದುಗಳು ದೀರ್ಘಕಾಲದಿಂದಲೂ ನಿರೀಕ್ಷಿಸುತ್ತಿದ್ದ ಹಲವು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗುತ್ತದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಅಲ್ಪಸಂಖ್ಯಾತರ ತುಷ್ಟೀಕರಣ ಕೊನೆಗೊಂಡು ದೇಶಾದ್ಯಂತ ಎಲ್ಲರಿಗೂ ಒಂದೇ ದೇಶ ಮತ್ತು ಒಂದೇ ಕಾನೂನು ಅನ್ವಯವಾಗುವಂತಹ ದಿನಗಳು ಬರಲಿವೆ. ರಾಜ್ಯ ಸರ್ಕಾರಗಳ ಹಿಡಿತದಿಂದ ಪ್ರಮುಖ ದೇವಾಲಯಗಳನ್ನು ಮುಕ್ತಗೊಳಿಸುವ ಮುಖಂತರ ಹಿಂದೂ ದೇವಸ್ಥಾನಗಳ ಆದಾಯಗಳನ್ನು ಅಲ್ಪಸಂಖ್ಯಾತರ ಹಿತಕ್ಕಾಗಿ ಬಳಸುವುದನ್ನು ನಿರ್ಭಂಧಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿಯೂ ಅನಗತ್ಯವಾದ ಪಾಶ್ವಾತ್ಯೀ ಸಂಸ್ಕೃತಿಗಳ ಅಂಧಾನುಕರಣೆಗೆ ತಡೆ ಒಡ್ದಿ ಹಿಂದೂ ಸಂಪ್ರದಾಯಗಳ ಅಚರಣೆಯೂ ಮುಖ್ಯವಾಹಿನಿಗೆ ಬರಲಿದೆ ಇದರಿಂದ ಮದರಸಾಗಳು, ಕಾನ್ವೆಂಟ್ಗಳು ಮತ್ತು ಹಿಂದೂ ಶಾಲೆಗಳನ್ನು ಒಂದೇ ರೀತಿಯಲ್ಲಿ ನಡೆಸುಕೊಂಡು ಹೋಗುವಂತಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೇಲ್ಕಂಡ ಅಭಿಪ್ರಾಯಗಳು ಜ್ಯೋತಿಷಿ ಶ್ರೀ ರಾಜೀವ್ ಸೇಥಿಅವರ ಅಭಿಪ್ರಾಯಗಳಾಗಿದ್ದು ಅವರ ಮಾತು ಸತ್ಯವಾದಲ್ಲಿ ಭಾರತೀಯ ಸನಾತನ ಸಂಸ್ಕೃತಿಗಳು ಪುನಃ ಮುಖ್ಯವಾಹಿನಿಯ ಭಾಗವಾಗಿ, ಭಾರತ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಹವೇ ಇಲ್ಲ.. ಅಂತಹ ಸುಧಿನಕ್ಕಾಗಿ ಎಲ್ಲಾ ಭಾರತೀಯರೂ ಕಾಯುತ್ತಿರುವುದಂತೂ ಸುಳ್ಳಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೆಸರಿನಲ್ಲಿ ಹುದುಗಿರುವ ಕಮಲ ಮತ್ತೊಮ್ಮೆ ಕೆಸರನ್ನು ಬದಿಗೊತ್ತಿ ಶುಭ್ರವಾದ ನೀರಿನಲ್ಲಿ ಸ್ವಚ್ಚವಾಗಿ, ದೇಶಾದ್ಯಂತ ಸ್ವಚ್ಚಂದವಾಗಿ ಅರಳಲಿ ಮತ್ತು ವಿರಾಜಮಾನವಾಗಲಿ.
ಏನಂತೀರೀ?