ವಿಶ್ವ ಯುವ‌ ದಿನ

 

ಎಲ್ಲರಿಗೂ ವಿಶ್ವ ಯುವ ದಿನದ ಶುಭಾಷಯಗಳು

 

ಇಂದು ಜನವರಿ 12ನೇ ತಾರೀಖು ಇಡೀ ವಿಶ್ವದಯುವ ಜನತೆಗೆ ಒಂದು ವಿಶೇಷ ದಿನ. ಅದರಲ್ಲೂ ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು 157 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863ರ ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.

ಪ್ರಪಂಚದಲ್ಲಿ ಅತ್ಯಂತ ಪುರಾತನ ಇತಿಹಾಸವುಳ್ಳ ಮತ್ತು ಇಂದಿಗೂ ಪ್ರಸ್ತುತವಾಗಿರುವ ದೇಶವೆಂದರೆ ಭಾರತ ದೇಶ ಎಂದು ಹೇಳಲು ಹೆಮ್ಮೆಯಾಗುತ್ತದೆ. ಒಂದು ಕಾಲದಲ್ಲಿ ಏಷ್ಯಾ ಖಂಡದ ಅರ್ಧಕ್ಕೂ ಹೆಚ್ಚಿನ ಭಾಗದಿಂದ ಕೂಡಿದ ವರ್ಷದ ಎಲ್ಲಾ ಋತುಗಳನ್ನೂ ಕಾಣಬಹುದಾಗಿರುವ ಏಕೈಕ ರಾಷ್ಟ್ರ ಎಂದರೆ ಅದು ಭಾರತ ದೇಶ. ಭಾರತೀಯರ ಸಂಸ್ಕೃತಿ, ಆಚಾರ, ವಿಚಾರ, ಕಠಿಣ ಪರಿಶ್ರಮ, ಧರ್ಮ ಸಹಿಷ್ನುತೆ, ವಿದ್ಯೆ ಮತ್ತು ವಿವೇಕಗಳು ಪ್ರಪಂಚದ ಇತರೆ ಯಾವುದೇ ದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಹೆಚ್ಚಿನದಾಗಿತ್ತು. ಚೀನಾ ದೇಶದಿಂದ ಭಾರತಕ್ಕೆ ವಿದ್ಯೆ ಕಲಿಯಲು ಬಂದಿದ್ದ ಪ್ರಖ್ಯಾತ ಇತಿಹಾಸಕಾರ ಪಾಹಿಯಾನ್ ತಿಳಿಸಿರುವಂತೆ ಆತನಿಗೆ ಇಡೀ ಭರತ ಖಂಡದಲ್ಲಿ ಒಬ್ಬನೇ ಒಬ್ಬ ಭಿಕ್ಷುಕನನ್ನು ಕಂಡಿರಲಿಲ್ಲವಂತೆ. ಹೆಚ್ಚಿನ ಭಾರತೀಯರು ಶಾಲೆಗೇ ಹೋಗಿ ಪಾಠ ಕಲಿಯದಿದ್ದರೂ, ಪ್ರಕೃತಿದತ್ತವಾಗಿ ಮತ್ತು ಮನೆಯಲ್ಲಿನ ಸಂಸ್ಕಾರಗಳಿಂದ ಸಾಮಾನ್ಯ ಜ್ಣಾನದಲ್ಲಿ ಅಪ್ರತಿಮರಾಗಿದ್ದು ವಿವೇಕವಂತರಾಗಿದ್ದರಂತೆ. ಇಡೀ ಪ್ರಪ್ರಂಚದ ಇತಿಹಾಸದ ಪುಟ ತೆರೆದು ನೋಡಿದಲ್ಲಿ ಒಬ್ಬನೇ ಒಬ್ಬ ಭಾರತೀಯ ರಾಜ ಇತರೇ ಭೂಭಾಗದ ಮೇಲೆ ದಂಡೆತ್ತಿ ಹೋದದ್ದಾಗಲೀ, ಅನ್ಯ ಧರ್ಮೀಯರ ಮೇಲೆ ಅಕ್ರಮಣ ಮಾಡಿದ ಪುರಾವೆಗಳು ಕಂಡು ಬರುವುದೇ ಇಲ್ಲ. ಆಥಿತಿ ದೇವೋಭವ ಎಂದು ಅಥಿತಿಗಳನ್ನು ಆಪ್ಯತೆಯಂದ ನೋಡಿಕೊಳ್ಳುತ್ತಿದ್ದ ಪರಿಣಾಮವೋ ಅಥವಾ ಪರಮ ಸಹಿಷ್ಣುಗಳಾಗಿದ್ದ ಪರಿಣಾಮವೋ ಏನೋ ಕಳೆದ ಸಾವಿರ ವರ್ಷಗಲ್ಲಿ ನೂರಾರು ಪರಕೀಯರು ಸತತ ಆಕ್ರಮಣ ಮಾಡಿ ದೇಶವನ್ನು ಹತ್ತಾರು ಸಲ ಲೂಟಿ ಮಾಡಿ, ನಮ್ಮಲ್ಲಿದ್ದ ಲಕ್ಷಾಂತರ ಮಠ ಮಂದಿರಗಳನ್ನು ನಾಶ ಮಾಡಿ ನಮ್ಮವರನ್ನು ಅನ್ಯಧರ್ಮಕ್ಕೆ ಆಮಿಷದಿಂದಲೋ, ಆಕ್ರಮಣದಿಂದಲೋ ಮತಾಂತರ ಮಾಡಿದ್ದರೂ ಬಹುಪಾಲು ಭಾರತೀಯರು ಹಿಂದೂಗಳಾಗಿಯೇ ಇದ್ದರು. ನಮ್ಮ ಸಹಿಷ್ಣುತೆಯನ್ನು ಅಪಾರ್ಥ ಮಾಡಿಕೊಂಡಿದ್ದ, ಪರಕೀಯರು, ಭಾರತ ಹಾವಾಡಿಗರ ದೇಶ, ಅಲ್ಲಿಯವರು ಅನಾಗರೀಕರು, ಕಲ್ಲುಗಳನ್ನು ದೇವರೆಂದು ಪೂಜಿಸುತ್ತಾರೆ, ಮಕ್ಕಳನ್ನು ಗಂಗಾ ನದಿಗೆ ಎಸೆಯುತ್ತಾರೆ, ಅವರಲ್ಲಿ ಒಗ್ಗಟ್ಟೇ ಇಲ್ಲ ಎಂದು ಹೀಗೇ ಹಾಗೆ ಹೇಳಿಕೆ ನೀಡುತ್ತಾ ನಮ್ಮ ದೇಶವನ್ನೂ, ನಮ್ಮ ಹಿಂದೂ ಧರ್ಮವನ್ನು ಅಪಹಾಸ್ಯ ಮತ್ತು ಅಪ ಪ್ರಚಾರ ಮಾಡುತ್ತಿದ್ದರ ಪರಿಣಾಮವಾಗಿ ಇಲ್ಲಿನ ಜನಗಳೇ ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ ಆದರೆ, ಹಿಂದೂ ಎಂದು ಮಾತ್ರ ಕರೆಯದಿರಿ ಎನ್ನುವಂತಹ ದುಸ್ಠಿತಿ ಬಂದೊದಗಿತ್ತು. ಅಂತಹ ಸಮಯದಲ್ಲೇ, ಅಮೇರಿಕಾದ ಚಿಕಾಗೂ ನಗರದಲ್ಲಿ ಏರ್ಪಾಡಾಗಿದ್ದ ವಿಶ್ವ ಧರ್ಮ ಸಮ್ಮೇಳನನದಲ್ಲಿ ನಮ್ಮ ಧರ್ಮವನ್ನು ಪ್ರತಿನಿಧಿಸಲು ಯಾವುದೇ ಸಮರ್ಥ ವ್ಯಕ್ತಿ ಕಾಣ ಸಿಗದಂತಹ ಪರಿಸ್ಥಿತಿ ಬಂದೊದಗಿತ್ತು.

ಅಂದು ಇಡೀ ವಿಶ್ವದಲ್ಲಿ ಭಾರತ ಎಂದರೆ ಹಾವಾಡಿಗರ ನಾಡು. ಭಾರತೀಯರೆಂದರೆ ಮೂಢನಂಬಿಗೆಯವರು, ಅನಾಗರೀಕರು, ಅವಿದ್ಯಾವಂತರು ಎಂದು ನಂಬಿದ್ದ ಕಾಲದಲ್ಲಿ ಸೆಪ್ಟೆಂಬರ್ 11, 1893 ರಂದು ಅಮೇರಿಕಾದ ಚಿಕಾಗೂ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣ ಆರಂಭಸಿ ಇಡೀ ವಿಶ್ವಕ್ಕೇ ಭಾರತದೇಶ ಮತ್ತು ಹಿಂದೂಗಳ ಬಗ್ಗೆ ಇದ್ದ ಅಪನಂಬಿಕೆಯನ್ನು ಹೋಗಲಾಡಿಸಿದ ಮಹಾನ್ ಚೇತನ.

ಹಿಂದೂ ಎದ್ದಲ್ಲಿ ದೇಶ ಎದ್ದೀತು. ಹಿಂದೂಗಳು ನಮ್ಮ ಸನಾತನ ಧರ್ಮದ ಅಧ್ಯಾತ್ಮವನ್ನು ಮರೆತು ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡಿದಲ್ಲಿ ಇನ್ನು ಎರಡು ಮೂರು ತಲೆಮಾರುಗಳಲ್ಲಿ ವಿಶ್ವದಲ್ಲಿ ಹಿಂದೂಗಳು ಮತ್ತು ಭಾರತ ದೇಶ ಇತ್ತು ಎನ್ನುವ ಕುರುಹೇ ಇಲ್ಲದಂತಾಗುತ್ತದೆ ಎಂದು ಅಂದು ಎಚ್ಚರಿಸಿದ್ದದು ಇಂದಿಗೂ ಪ್ರಸ್ತುತವಾಗುತ್ತಿದೆ. ಅದಕ್ಕಾಗಿಯೇ ಜನವರಿ 12ನೇ ತಾರೀಖು ವಿಶ್ವ ಯುವದಿನ ಎಂದು ಆಚರಿಸಲಾಗುತ್ತಿದೆ. ಆದರೆ ಇದನ್ನು ಮರೆತ ನಮ್ಮ ಭಾರತದ ಯುವಜನತೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ಹೋಗಿ ಸುಮಾರು 72 ವರ್ಷಗಳಾದರೂ ಇಂದಿಗೂ ಅವರು ಬಿಟ್ಟು ಹೋದ ಪಾಶ್ವಾತ್ಯ ಸಂಸ್ಕೃತಿಗೇ ಜೋತು ಬಿದ್ದು ಮೋಜು ಮಸ್ತಿಗಳಲ್ಲಿಯೇ ಕಾಲ ಕಳೆಯುವಂತಾಗಿರುವುದು ವಿಪರ್ಯಾಸವೇ ಸರಿ. ಬನ್ನಿ ಇನ್ನೂ ಕಾಲ ಮಿಂಚಿಲ್ಲ. ವಿವೇಕಾನಂದರೇ , ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ಹೇಳಿರುವಂತೆ ಸೆಟೆದೆದ್ದು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಕಟಿಬದ್ದರಾಗೋಣ.

ಏನಂತೀರೀ?

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s