ಆದೊಂದು ರಾಜನ ಅರಮನೆಯಲ್ಲಿ ಪಟ್ಟದಾನೆ ಮತ್ತು ಅರಮನೆಯಲ್ಲಿದ್ದ ನಾಯಿ ಎರಡೂ ಒಂದೇ ಸಮಯದಲ್ಲಿ ಗರ್ಭಿಣಿಯಾದವು. ಅದಾಗಿ ಮೂರು ತಿಂಗಳ ನಂತರ ಆ ನಾಯಿ ಆರು ನಾಯಿಮರಿಗಳಿಗೆ ಜನ್ಮ ನೀಡಿತು. ಮತ್ತೆ ಆರು ತಿಂಗಳ ನಂತರ ಅದೇ ನಾಯಿ ಪುನಃ ಗರ್ಭಿಣಿಯಾಗಿ ಆರು ಮರಿಗಳಿಗೆ ಜನ್ಮ ನೀಡಿ ಒಟ್ಟು ಒಂಬತ್ತು ತಿಂಗಳುಗಳೊಳಗೆ ಒಂದು ಡಜನ್ ನಾಯಿಮರಿಗಳಿಗೆ ಜನ್ಮ ನೀಡಿತು ಮತ್ತು ಅದರ ಹೆರಿಗೆಯ ಕಾರ್ಯ ಹಾಗೇ ಮುಂದುವರೆಯಿತು.
ಆನೆ ಗರ್ಭಿಣಿಯಾಗಿ ಹದಿನೆಂಟು ತಿಂಗಳು ಕಳೆದರೂ ಪ್ರಸವವಾಗದಿದ್ದನ್ನು ನೋಡಿದ ನಾಯಿಗೆ ಅನುಮಾನ ಬಂದು, ಆನೆಯನ್ನು ಪ್ರಶ್ನಿಸುತ್ತಾ, ನೀವು ನಿಜವಾಗಿಯೂ ಗರ್ಭಿಣಿಯಾಗಿದ್ದೀರಿ ಎಂದು ನಿಮಗೆ ಖಚಿತವಾಗಿದೆಯೇ? ಏಕೆಂದರೇ ಹದಿನೆಂಟು ತಿಂಗಳ ಹಿಂದೆ ನಾವಿಬ್ಬರೂ ಒಟ್ಟಿಗೆ ಗರ್ಭಿಣಿಯಾದೆವು. ಈ ಸಮಯದಲ್ಲಿ ನಾನು ಡಜನ್ ಗಳಿಗೂ ಅಧಿಕ ಸಂಖ್ಯೆಯ ಮರಿಗಳಿಗೆ ಮೂರು ಬಾರಿ ಜನ್ಮ ನೀಡಿದ್ದೇನೆ ಮತ್ತು ಆ ಮರಿಗಳು ಈಗ ದೊಡ್ಡ ದೊಡ್ಡ ನಾಯಿಗಳಾಗಿ ಬೆಳೆದು ಬಿಟ್ಟಿವೆ. ಆದರೆ ನೀವಿನ್ನೂ ಗರ್ಭಿಣಿಯಾಗಿಯೇ ಇದ್ದೀರಿ. ಏನಾಗುತ್ತಿದೆ ಇಲ್ಲಿ? ಎಂದು ಕೇಳಿತು.
ನಾಯಿಯ ಪ್ರಶ್ನೆಯಿಂದ ಒಂದು ಚೂರೂ ವಿಚಲಿತವಾಗದ ಆನೆ, ನಾನು ಹೊತ್ತಿರುವುದು ಆನೆ. ನಾಯಿಮರಿಗಳನ್ನಲ್ಲ. ಎಂದು ತಿಳಿಯಪಡಿಸುತ್ತೇನೆ. ಗಜಗರ್ಭದ ಪ್ರಸವ ಏನಿದ್ದರೂ ಸುಮಾರು ಎರಡು ವರ್ಷಗಳಾಗಿರುತ್ತವೆ ಮತ್ತು ಒಮ್ಮೆ ನಮ್ಮ ಮರಿ ನನ್ನ ಗರ್ಭದಿಂದ ಭೂಮಿಯ ಮೇಲೆ ಬೀಳುತ್ತಿದ್ದಂತೆಯೇ ಆ ಕ್ಷಣದಲ್ಲಿ ಅಲ್ಲಿ ಸಣ್ಣದಾಗಿ ಭೂಕಂಪನವಾಗುತ್ತದೆ. ಭೂದೇವಿಗೂ ಕೂಡಾ ನನ್ನ ಮರಿಯ ಆಗಮನದ ಅರಿವಾಗುತ್ತದೆ. ನನ್ನ ಮಗು ನೆಲಕ್ಕೆ ಬಡಿದಾಗ, ಭೂಮಿಯು ಅದನ್ನು ಅನುಭವಿಸುತ್ತದೆ. ಯಾವಾಗ ನನ್ನ ಮಗು ರಸ್ತೆ ದಾಟಲು ಆರಂಭಿಸುತ್ತದೆಯೋ, ಆಗ ಮಾನವರೂ ಸಹಾ ತಮ್ಮ ಕೆಲಸವನ್ನು ನಿಲ್ಲಿಸಿ ಪಕ್ಕಕ್ಕೆ ನಿಂತು ಮೆಚ್ಚುಗೆಯಿಂದ ನಾವು ಹೋಗುವುದನ್ನು ನೋಡುತ್ತಾರೆ. ಹಾಗಾಗಿ ನಾನು ಹೊತ್ತುಕೊಂಡಿರುವುದು ಇಡೀ ಜಗತ್ತನ್ನೇ ಗಮನವನ್ನು ಸೆಳೆಯುವ ಅದ್ಭುತವಾದ ಮತ್ತು ಆಷ್ಟೇ ಪ್ರಬಲವಾದ ಕಂದನನ್ನು ಎಂದು ಹೇಳಿ ನಾಯಿಯ ಬಾಯಿಯನ್ನು ಮುಚ್ಚಿಸಿತು.
ಇತರ ಅಲ್ಪ ಯಶಸ್ಸನ್ನೇ ಮಹಾ ಸಾಧನೆ ಎಂದುಕೊಂಡು ನಮ್ಮ ನಮ್ಮ ನಂಬಿಕೆಯನ್ನು ಕಳೆದುಕೊಳ್ಳಬಾರದು. ಅವರ ಕ್ಷಣಿಕ ಫಲಿತಾಂಶಗಳ ಬಗ್ಗೆ ಅಸೂಯೆ ಪಡಬಾರದು ಮತ್ತು ನಿರಾಶೆಯಾಗ ಬಾರದು.
ನನ್ನ ಸಮಯ ಬಂದೇ ಬರುತ್ತದೆ ಮತ್ತು ಆಗ ಇಡೀ ವಿಶ್ವವೇ ನಮ್ಮ ಕಡೆ ಗಮನ ಹರಿಸುತ್ತದೆ ಎಂಬುದನ್ನು ಸದಾಕಾಲಾವೂ ಮನಸ್ಸಿನಲ್ಲಿ ಇಟ್ಟು ಕೊಂಡು ಕಾರ್ಯನಿರತರಾಗಬೇಕು ಎಂಬುದು ಈ ಕಥೆಯ ಸಾರವಾಗಿದೆ
ಆನೆ ಅಂಬಾರಿ ಹೋಗ್ತಾ ಇದ್ರೇ ಜನ ಗೌರವದಿಂದ ನಿಂತು ಕೈ ಮುಗಿತಾರೆ. ಅದನ್ನು ನೋಡಿ ಬೊಗಳುವ ನಾಯಿಗಳಿಗೆ ಹಚ್ಚಾ ಎಂದು ಕಲ್ಲು ಒಗೀತಾರೆ. ಇದಕ್ಕೇ ಅಲ್ವೇ ಹೇಳೋದು ಗಜ ಗಾಂಭೀರ್ಯ ಎಂದು?
ಯಾಕೋ ಏನೂ? ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವರ್ಷದಲ್ಲಿ ಹತ್ತಾರು ದಿನಗಳ ಕಾಲ ಬಂದ್ ಕರೆ ನೀಡಿ ಅದನ್ನು ಬಲವಂತದಿಂದ ಜನರ ಮೇಲೇ ಹೇರಲು ಹೋಗುವವರ ಮಧ್ಯೆ , ದೇಶವಾಸಿಗಳ ಹಿತಕ್ಕಾಗಿ ಮತ್ತು ಅವರ ಆರೋಗ್ಯಕ್ಕಾಗಿ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಸಹಕರಿಸಲು ಸಾರ್ವಜನಿಕರನ್ನು ಕೇಳಿ ಕೊಂಡಲ್ಲಿ , ಜನರೇ ಸ್ವಪ್ರೇರಣೆಯಿಂದ ಕೇವಲ 14 ಗಂಟೆಗಳೇಕೆ 36 ಗಂಟೆ ಕಾಲ ಸಹಕರಿಸುತ್ತೇವೆ ಎಂದು ನಭೂತೋ ನಭವಿಷ್ಯತಿ ಮಾದರಿಯಲ್ಲಿ ಜನತಾ ಕರ್ಫ್ಫೂವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸಿದ ಸಮಯದಲ್ಲಿ ಎಂದೋ ಕೇಳಿದ ಆಥವಾ ಓದಿದ ಈ ಆನೆ ಮತ್ತು ನಾಯಿಯ ಕಥೆ ಈಗ ನೆನಪಿಗೆ ಬಂದಿತು.
ಈ ಕಥೆ ಓದಿದ ಮೇಲೆ ಆನೆ ಯಾರು ನಾಯಿ ಯಾರು? ಎಂಬುದನ್ನು ನಿಮ್ಮಗಳ ಅರಿವಿಗೇ ಬಿಟ್ಟಿದ್ದೇನೆ. ಅವರವರ ಭಾವಕ್ಕೆ ಅವರವರ ಭಕುತಿ.
ಏನಂತೀರೀ?
ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ
LikeLiked by 1 person
ಧನ್ಯೋಸ್ಮಿ
LikeLiked by 1 person
ಸಮಯೋಚಿತ ಬರಹ ಧನ್ಯವಾದಗಳು
LikeLiked by 1 person