ರವೇ ಉಪ್ಪಿಟ್ಟು, ರವೇ ದೋಸೆ

uppittu
ರವೇ ಉಪ್ಪಿಟ್ಟು

 

ರವೆ, ಹಸೀಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕಾಯಿತುರಿ, ತುರಿದ ಶುಂಠಿ, ಜೀರಿಗೆ,  ರುಚಿಗೆ ತಕ್ಕಷ್ಟು ಉಪ್ಪು , ತುಪ್ಪಾ ಹಾಕಿ ಘಮ್ ಅಂತಾ ಉಪ್ಪಿಟ್ಟು ಮಾಡಿದ್ರೇ, ಉಪ್ಪಿಟ್ಟಾ ಅಂತಾ ಕ್ಕೆಕರಿಸಿ ನೋಡ್ತಾರೆ ನಮ್ಮ ಮಕ್ಕಳು.

 

 

WhatsApp Image 2020-03-30 at 11.47.43 AM

 

ಅದೇ ರವೆಗೆ ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸ್ವಲ್ಪ ಹುಳಿ ಮೊಸರಿನೊಂದಿಗೆ ಕಲಸಿ,ಗರಿ ಗರಿಯಾಗಿ ಬರಲು ಸ್ವಲ್ಪ ಅಕ್ಕಿಹಿಟ್ಟು ಬೆರೆಸಿ, ಕಾವಲಿ ಮೇಲೆ ತುಪ್ಪ ಹಾಕಿ ಚುರ್ ಅಂತಾ ದೋಸೆ ಹುಯ್ದು, ಜೊತೆಗೆ ಕಾಯಿ, ಮೆಣಸಿನಕಾಯಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಜರ್ ಅಂತಾ ರುಬ್ಬಿ ಚಟ್ನಿ ಮಾಡಿ ತಟ್ಟೆಗೆ ಹಾಕಿ ಕೊಟ್ರೇ, ಅಹಾ ಬಿಸಿ ಬಿಸಿ ರವೇ ದೋಸೇನಾ ಅಂತಾ ಚಪ್ಪರಿಸಿ ಗಬ ಗಬಾ ಅಂತ ನಾಲ್ಕು ದೋಸೆ ತಿನ್ನುತ್ತವೆ ಮಕ್ಕಳು.

 

thali_pattu
ಥಾಲಿ ಪಟ್ಟು

 

ಅದೇ ರವೇ ದೋಸೇ ಪರಿಕಗಳ ಜೊತೆಗೆ ಸ್ವಲ್ಪ ಕಡಲೆ ಹಿಟ್ಟು ಬೆರೆಸಿ ಗೊಟಾಯಿಸಿ, ಬಿಸಿ ಬಿಸಿ ಕಾವಲಿ ಮೇಲೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಿ ಬೇಯಿಸಿದರೆ ರುಚಿ ರುಚಿಯಾದ ಬಿಸಿ ಬಿಸಿಯಾದ ಉತ್ತರ ಕರ್ನಾಟಕದ ಥಾಲಿಪಟ್ಟು ಸಿದ್ಧ.

 

ಅದೇ ಪರಿಕರಗಳು, ಮಾಡುವ ಕೈ ಕೂಡಾ ಅದೇ ಅದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮನಸ್ಸು ಮಾಡಿದಲ್ಲಿ ತಿಂಡಿಯೂ ಭಿನ್ನ. ರುಚಿಯೂ ವಿಭಿನ್ನ. ಮಕ್ಕಳ ತಿಂಡಿಯ ಸಮಸ್ಯೆಯೂ ಬಗೆ ಹರಿಯುತ್ತದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಪರಿಕರವೊಂದೇ ಮಾಡುವ ವಿಧಾನದಲ್ಲಿ ಸ್ವಲ್ಪ ಬದಾವಣೆ ಮಾಡಿಕೊಂಡಲ್ಲಿ ರುಚಿರುಚಿಯಾದ ವಿಭಿನ್ನವಾದ ತಿಂಡಿಗಳನ್ನು ತಯಾರಿಸಬಹುದು.

ಎಲ್ಲರ ಜೀವನದಲ್ಲಿಯೂ ಸಹಾ ರವೇ ಉಪ್ಪಿಟ್ಟಿನ ತರಹ ಕಷ್ಟಗಳೂ ಇದ್ದೇ ಇರುತ್ತದೆ. ಆದರೆ ಅದೇ ಪರಿಕರಗಳನ್ನೇ ಉಪಯೋಗಿಸಿ ರವೇ ದೋಸೆ, ಥಾಲಿಪಟ್ಟು ಮಾಡಿದಂತೆ, ಸ್ವಲ್ಪ ತಾಳ್ಮೆವಹಿಸಿ ಜಾಗ್ರತೆಯಿಂದ ಸಮಸ್ಯೆಗಳಿಂದ ಹೊರಬರುವವುದನ್ನು ಅಳವಡಿಸಿಕೊಳ್ಳೋಣ. ನೆಮ್ಮದಿ ಜೀವನವನ್ನು ನಡೆಸೋಣ.

ಏನಂತೀರೀ?

ನಮ್ಮಾಕಿ ಇವತ್ತು ಮನೇಲೀ ರವೇ ದೋಸೆ ಮಾಡಿದ್ದನ್ನು ತಿನ್ನುತಿದ್ದಾಗ ಈ ಜೀವನದ ಕಠು ಸತ್ಯ ನೆನಪಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯ್ತು.

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

6 thoughts on “ರವೇ ಉಪ್ಪಿಟ್ಟು, ರವೇ ದೋಸೆ”

  1. ಅದೇ ಪರಿಕರಗಳು, ಮಾಡುವ ಕೈ ಕೂಡಾ ಅದೇ ಅದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮನಸ್ಸು ಮಾಡಿದಲ್ಲಿ ತಿಂಡಿಯೂ ಭಿನ್ನ. ರುಚಿಯೂ ವಿಭಿನ್ನ. ಮಕ್ಕಳ ತಿಂಡಿಯ ಸಮಸ್ಯೆಯೂ ಬಗೆ ಹರಿಯುತ್ತದೆ.

   Like

 1. ನೀವು ಹೇಳಿರುವುದು ನಿಜ. ಸಾಮಾನ್ಯವಾಗಿ ಬಹಳ ಜನ ಉಪ್ಪಿಟ್ಟು ಎಂದರೆ ಮುಖ ಸೊಟ್ಟ ಮಾಡಿಕೊಳ್ಳುತ್ತಾರೆ. ಅದೇ ಪರಿಕರಗಳನ್ನು ಉಪಯೋಗಿಸಿಕೊಂಡು ರವೆ ದೋಸೆ ಮಾಡಿದರೆ ಆಹಾ ರವೆದೋಸೆ ಎಂದು ಚಪ್ಪರಿಸಿಕೊಂಡು ತಿನ್ನುತ್ತಾರೆ. ಉಪ್ಪಿಟ್ಟು ಕೂಡ ತರಕಾರಿಗಳನ್ನು ಹಾಕಿ ಮಾಡಿದರೆ ರುಚಿಕರ ತಿಂಡಿಯೇ. ಆದರೆ ಮಾಡುವ ರೀತಿ ಮುಖ್ಯ. ಡಾ: ಹೆಚ್.ನರಸಿಂಹಯ್ಯನವರು ವಿದೇಶಕ್ಕೆ ಹೋಗಿದ್ದಾಗ ಮೂರು ವರ್ಷಗಳ ಕಾಲ (ಅವರು ಶುದ್ಧ ಸಸ್ಯಾಹಾರಿಯಾಗಿದ್ದರಿಂದ) ಉಪ್ಪಿಟ್ಟು ಮಾಡಿಕೊಂಡು ತಿಂದುಕೊಂಡು ಡಾಕ್ಟರೇಟ್ ತೆಗೆದುಕೊಂಡು ಬಂದರು ಎಂಬುದನ್ನು ನೆನೆಸಿಕೊಳ್ಳಬೇಕು.

  Liked by 1 person

 2. ಅಬ್ಬಾ ಎಂತಾ ಅನುಸಂಧಾನ, ಇನ್ನೂ ನಿನ್ನ ಅನುಭವದ ಮೂಸೆಯಲ್ಲಿ ಎನೇನಿದೆಯಪ್ಪ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಮನೆಯಲ್ಲಿ ನಿತ್ಯ ಬೆಳಿಗ್ಗೆ ೧೧:೦೦ ಕ್ಕೆ ಊಟ ಸಂಜೆ ೦೭:೦೦ ಕ್ಕೆ ಬಿಸಿಬಿಸಿಯಾದ ಮೆತ್ತನೆಯ ಉಪ್ಪಿಟ್ಟು , ಈ ಆಹಾರ ಪದ್ಧತಿಯನ್ನು ಜೀವನ ಪರ್ಯಂತ ಪಾಲಿಸಿದ್ದರು. ನನ್ನ ತಾಯಿ ಮಾಡುತ್ತಿದ್ದ ಅಕ್ಕಿ ತರಿಯ ಮೆತ್ತನೆಯ ಅವರೆ ಕಾಳು ಉಪ್ಪಿಟ್ಟು ನೆನಪಾಯಿತು. ಉದುರುದುರಾದ ಹೆಚ್ಚು ಈರುಳ್ಳಿ ಹಾಕಿದ ಬನ್ಸಿರವೆ ಉಪ್ಪಿಟ್ಟು ನನ್ನ ಮೆಚ್ಚಿನ ತಿನುಸುಗಳಲ್ಲಿ ಒಂದು. ಜ್ವರ ಬಂದಾಗ ನನ್ನ ತಾಯಿ ಒಣಮೆಣಸಿನಕಾಯಿ, ಜೀರಿಗೆ, ಸಾಸಿವೆ, ಕರಿಬೇವು ತುಪ್ಪದ ಒಗ್ಗರಣೆಯಲ್ಲಿ ಹುರಿದ ಒಣಕೊಬ್ಬರಿ ಮಿಶ್ರಿತ ಚಿರೋಟಿ ರವೆ ಉಪ್ಪಿಟ್ಟು ಮಾಡೋರು ಆಹಾ… ತಿಂದು ನಂತರ ಸುಮಾರು ಘಂಟೆಗಳ ಕಾಲ ಅದರ ಪರಿಮಳ ಕೈಯಲ್ಲಿರುತ್ತಿತ್ತು. ನನ್ನ ದೊಡ್ಡಮ್ಮ ( ತಾಯಿಯ ಅಕ್ಕಿ) ಮಾಡುತ್ತಿದ್ದ ಉಪ್ಪಿಟ್ಟು ನನಗೆ ಪಂಚಪ್ರಾಣ. ನೀನೇನೆ ಹೇಳು ಸಮಾರಂಭಗಳಲ್ಲಿ ಅಡುಗೆಯವರು ಮಾಡುವ ಉಪ್ಪಿಟ್ಟು ಕಾಯಿಚಟ್ನಿ ತನ್ನದೇ ವಿಶೇಷ ಸ್ಥಾನ ಪಡೆದಿದೆ. ಬೆಳ್ಳಂಬೆಳಗ್ಗೆ ಉಪ್ಪಿಟ್ಟಿನ ಪುರಾಣ ಹೇಳಿ ತಿನ್ನಲು ಬಯಸಿ ನನ್ನಾಕೆಗೆ ತಿಂಡಿಗೆ ಉಪ್ಪಿಟ್ಟು ಮಾಡಲು ಹೇಳಿದೆ. ಒಮ್ಮೆ ನೆಟ್ಟ ದೃಷ್ಟಿಯಿಂದ ನೋಡಿ ಮಕ್ಕಳಿಗೆ ಬೇರೆ ತಿಂಡಿ ಮಾಡಬೇಕು ಅಂತ ನಿಟ್ಟುಸಿರು ಬಿಟ್ಟು ಅಡುಗೆ ಮನೆಗೆ ನಡೆದಳು.

  Liked by 1 person

  1. ವಾರೆ ವಾಹ್!! ಬಾಯಲ್ಲಿ ನೀರೂರಿಸುತ್ತಿದೆ ಈ ನಿನ್ನ‌ ಈ ಉಪ್ಪಿಟ್ಟಿನ ವರ್ಣನೆ.

   ನೆನ್ನೆ ರವೇ ದೋಸೆ ಆಯಿತು ಕಾಕಾತಾಳಿಯವೋ ಎನ್ನುವಂತೆ ಇವತ್ತು ನಮ್ಮ ಮನೆಯಲ್ಲಿ ತರಕಾರಿ ಹಾಕಿದ ಉಪ್ಪಿಟ್ಟು. 😃😃

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s