ಕಾಯಿಹಾಲು

ಸುಮಾರು 20-25 ಲೋಟಗಳಷ್ಟು ಸಾಂಪ್ರದಾಯಿಕ ರೀತಿಯಲ್ಲಿ ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ.

ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು
WhatsApp Image 2020-04-04 at 10.40.40 AMತೆಂಗಿನ ಕಾಯಿ ತುರಿ 2 ಕಪ್
ಬೆಲ್ಲ 1/2 ಕೆಜಿ
ಅಕ್ಕಿ 1/4 ಕಪ್
ದ್ರಾಕ್ಷಿ 1/4 ಕಪ್
ಗೋಡಂಬಿ 1/4 ಕಪ್
ಬಾದಾಮಿ 1/4 ಕಪ್
ಗಸಗಸೆ 4 ಚಮಚ
ಏಲಕ್ಕಿ ಪುಡಿ. 1 ಚಮಚ

ಕಾಯಿ ಹಾಲು ಮಾಡುವ ವಿಧಾನ
• ಮೊದಲು ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು
• ಅಕ್ಕಿ ಮತ್ತು ಗಸಗಸೆಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಬೇಕು.
• ಅರ್ಧ ಗಂಟೆಯಾದ ನಂತರ ನೆನೆದ ಅಕ್ಕಿ , ಗಸಗಸೆಯೊಂದಿಗೆ ದಾಕ್ಷಿ, ಗೋಡಂಬಿ ಮತ್ತು ಬಾದಾಮಿಯನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಟ್ಟು ಕೊಳ್ಳಬೇಕು
• ಅದಾದ ನಂತರ ತೆಂಗಿನ ಕಾಯಿ ತುರಿಯನ್ನು ಚೆನ್ನಾಗಿ ನೀರು ಹಾಕಿ ರುಬ್ಬಿಕೊಳ್ಳಬೇಕು
• ಜರಡಿಯೊಂದರಲ್ಲಿ ಅದನ್ನು ಶೋಧಿಸಿ ಕೇವಲ ಕಾಯಿಹಾಲು ಮಾತ್ರವೇ ತೆಗೆದಿಟ್ಟು ಕೊಳ್ಳಬೇಕು
• ಕಾಯಿ ಹಾಲು ಶೋಧಿಸಿದ ನಂತರ ಉಳಿದ ಕಾಯಿ ಚರಟವನ್ನು ಪಲ್ಯ , ಕೋಸಂಬರಿ, ಕಾಳು ಹುಸ್ಲಿ ಇಲ್ಲವೇ ಬೇಳೆಸಾರಿಗೆ ಬಳೆಸಿಕೊಳ್ಳಬಹುದಾಗಿದೆ

ಕಾಯಿಹಾಲು ತಯಾರಿಸಲು ನಾಲ್ಕು ಪರಿಕರಗಳನ್ನು ಸಿದ್ಧ ಪಡಿಸಿಕೊಳ್ಳಬೇಕು
• ತೆಂಗಿನ ಕಾಯಿ ತುರಿಯನ್ನು ನುಣ್ಣಗೆ ರುಬ್ಬಿ ಶೋಧಿಸಿದ ತೆಂಗಿನ ಹಾಲು
• ನುಣ್ಣಗೆ ರುಬ್ಬಿಕೊಂಡ ಒಣದ್ರಾಕ್ಷಿ ಪದಾರ್ಥಗಳು
• ನೆನೆಸಿದ ಬೆಲ್ಲ ಪಾಕ
• ರುಚಿ ಹೆಚ್ಚಿಸಲು ಏಲಕ್ಕಿ ಪುಡಿ

ಕಾಯಿ ಹಾಲು ಮಾಡುವ ವಿಧಾನ
• ಅಗಲವಾದ ಪಾತ್ರೆಯಲ್ಲಿ ರುಬ್ಬಿಟ್ಟುಕೊಂಡ ಕಾಯಿ ಹಾಲನ್ನು ಹಾಗಿ ಸಣ್ಣ ಉರಿಯಲ್ಲಿ ಕಾಯಲು ಇಡಬೇಕು
• ಆ ಮಿಶ್ರಣಕ್ಕೆ ನೆನೆಸಿದ ಬೆಲ್ಲ ಪಾಕವನ್ನು ಸೇರಿಸಬೇಕು ಅದಾದ ನಂತರ ನುಣ್ಣಗೆ ರುಬ್ಬಿಕೊಂಡ ಒಣದ್ರಾಕ್ಷಿ ಪದಾರ್ಥಗಳನ್ನು ನಿಧಾನವಾಗಿ ಗಂಟಾಗದಂತೆ ಆ ಮಿಶ್ರಣಕ್ಕೆ ಬೆರಸಬೇಕು.
• ಆದಾದ ನಂತರ ರುಚಿ ಹೆಚ್ಚಿಸಲು ಏಲಕ್ಕಿ ಪುಡಿಯನ್ನು ಅದಕ್ಕೆ ಬೆರೆಸಿ ಸುಮಾರು 15 -20 ನಿಮಿಷಗಳಷ್ಟು ಸಣ್ಣ ಉರಿಯಲ್ಲಿ ಹೊತ್ತು ಕುದಿಸಿದರೆ ರುಚಿ ರುಚಿಯಾದ ಬಿಸಿ ಬಿಸಿಯಾದ ಕಾಯಿ ಹಾಲು ಸಿದ್ಧ

ಈ ಕಾಯಿ ಹಾಲನ್ನು ಇಡ್ಲಿ, ತಟ್ಟೆ ಇಡ್ಲಿ, ಉದ್ದಿನ ಕಡುಬು, ದೋಸೆ, ಒತ್ತು ಶ್ಯಾವಿಗೆಯ ಜೊತೆ ತಿನ್ನಲು ಮಜಬೂತಾಗಿರುತ್ತದೆ.

ಈ ಪಾಕವಿಧಾನನವನ್ನು ತಿಳಿಸಿಕೊಟ್ಟ ಶ್ರೀಮತಿ ಶ್ರೀಲಕ್ಷ್ಮೀ ಮೂರ್ತಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s