ಸುಮಾರು 5-6 ಜನರಿಗೆ ಸಾಕಾಗುವಷ್ಟು ಸಾಂಪ್ರದಾಯಿಕ ರೀತಿಯಲ್ಲಿ ಅಮೃತಸರೀ ಚೆನ್ನಾ ಚೋಲೇ ಬತೂರ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ.
ನೆನೆಸಿದ ಕಾಬೂಲ ಕಡಲೇ | 1/2 ಕೆಜಿ |
ಅಚ್ಚ ಖಾರದ ಪುಡಿ | 3 ಟೇಬಲ್ ಸ್ಪೂನ್ |
ದನಿಯಾ ಪುಡಿ | 3 ಟೇಬಲ್ ಸ್ಪೂನ್ |
ಚೆನ್ನಾ ಮಸಾಲ | 3 ಟೇಬಲ್ ಸ್ಪೂನ್ |
ಲವಂಗ | 4-5 |
ಏಲಕ್ಕಿ | 3-4 |
ದೊಡ್ಡ ಏಲಕ್ಕಿ | 2 |
ಅಡುಗೆ ಎಣ್ಣೆ | 4 ಟೇಬಲ್ ಸ್ಪೂನ್ |
ಶುಂಠಿ ಬೆಳ್ಳುಳ್ಳಿ ಪೇಸ್ಟ್ | 2 ಟೇಬಲ್ ಸ್ಪೂನ್ |
ತುರಿದ ಶುಂಠಿ | 2 ಟೇಬಲ್ ಸ್ಪೂನ್ |
ಈರುಳ್ಳಿ | 3 ದ್ದೊಡ್ಡ ಗಾತ್ರದ್ದು |
ಟೊಮ್ಯಾಟೋ | 4 ದೊಡ್ಡ ಗಾತ್ರದ್ದು |
ಕತ್ತರಿಸಿದ ಕೊತ್ತಂಬರಿ ಸೊಪ್ಪು | 1/4 ಕಪ್ |
ರುಚಿಗೆ ತಕ್ಕಷ್ಟು ಉಪ್ಪು |
ಬತೂರಾ ಮಾಡಲು ಬೇಕಾಗುವ ಸಾಮಗ್ರಿಗಳು
ಮೈದಾ | 1 ಬಟ್ಟಲು |
ಗೋದಿ ಹಿಟ್ಟು | 1 ಬಟ್ಟಲು |
ಚಿರೋಟಿ ರವೆ. | 1 ಬಟ್ಟಲು |
ಗಟ್ಟಿ ಮೊಸರು | 2 ಟೇಬಲ್ ಸ್ಪೂನ್ |
ರುಚಿಗೆ ತಕ್ಕಷ್ಟು ಉಪ್ಪು | |
ಕರಿಯಲು ಅಡುಗೆ ಎಣ್ಣೆ |
ಚೋಲೇ ಮಾಡುವ ವಿಧಾನ
- ನೆನೆಸಿದ ಕಾಬೂಲು ಕಡಲೇ ಕಾಳನ್ನು ಸ್ವಲ್ಪ ಉಪ್ಪು ಬೆರೆಸಿ ಐದಾರು ವಿಷಿಲ್ ಬರುವಷ್ಟರ ಮಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು
- ಬಾಣಲೆಯಲ್ಲಿ ನಾಲ್ಕು ಸ್ಪೂನ್ ಎಣ್ಣೆ ಹಾಕಿ ಅದು ಕಾದ ಮೇಲೆ ರುಬ್ಬಿಟ್ಟು ಕೊಂಡ ಈರುಳ್ಳಿ ಪೇಸ್ಟ್ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅದಕ್ಕೆ ಸೇರಿಸಿ ಹಸೀ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು.
- ಮಸಾಲೆ ಪದಾರ್ಥಗಳಾದ ಅಚ್ಚ ಖಾರದ ಪುಡಿ, ದನಿಯಾ ಪುಡಿ ಮತ್ತು ಚೋಲೇ ಮಸಾಲಾ ಪುಡಿಯನ್ನು ಸೇರಿಸಿ ಬಾಡಿಸಿಕೊಳ್ಳಬೇಕು
- ಸಿದ್ದ ಪಡಿಸಿಟ್ಟು ಕೊಂಡಿದ್ದ ಟೊಮ್ಯಾಟೋ ಪ್ಯೂರಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಕುದಿ ಬರುವವರೆಗೂ ಕುದಿಸಿಕೊಳ್ಳಬೇಕು
- ಕುಕ್ಕರಿನಲ್ಲಿ ಈಗಾಗಲೇ ಬೇಯಿಸಿಟ್ಟು ಕೊಂಡಿದ್ದ ಕಾಬೂಲ್ ಕಡಲೇ ಕಾಳಿಗೆ ಈಗ ಸಿದ್ದ ಪಡಿಸಿಕೊಂಡ ಮಸಾಲಾ ಮಿಶ್ರಣವನ್ನು ಸೇರಿಸಿ ಒಂದು ವಿಶಲ್ ಬರುವರೆಗೂ ಕೂಗಿಸಿದರೆ ರುಚಿಕರವಾದ ಚೋಲೇ ಸಿದ್ಧ.
- ತುರಿದಿಟ್ಟು ಕೊಂಡಿದ್ದ ಶುಂಠಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿದಲ್ಲಿ ಚೋಲೆಯ ರುಚಿಯೂ ಹೆಚ್ಚುತ್ತದೆ ಮತ್ತು ನೋಡಲು ಅಲಂಕಾರವಾಗಿಯೂ ಕಾಣುತ್ತದೆ.
ಬತೂರಾ ಮಾಡುವ ವಿಧಾನ
- ಸಮಪ್ರಮಾಣದಲ್ಲಿ ಗೋದಿ ಹಿಟ್ಟು, ಚಿರೋಟಿ ರವೇ ಮತ್ತು ಮೈದಾ ಹಿಟ್ಟಿಗೆ ಎರಡು ಸ್ಪೂನ್ ಮೊಸರು ಮತ್ತು ಚಿಟಿಕೆ ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಿಸಿ, ನಾದಬೇಕು
- ಕಲೆಸಿಟ್ಟ ಹಿಟ್ಟನ್ನು ಅರ್ಧ ಗಂಟೆಯಾದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟು ಕೊಂಡು ಬೇಕಾದ ಆಕಾರದಲ್ಲಿ ಲಟ್ಟಿಸಿ ಕಾಯ್ದ ಎಣ್ಣೆಯಲ್ಲಿ ಕರಿದಲ್ಲಿ ಬತೂರಾ ಸಿದ್ದ
ಈ ಚೋಲೇ ಬತೂರದ ಜೊತೆ ಕರಿದ ಹಸೀ ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಮತ್ತು ನಿಂಬೇಹಣ್ಣಿನ ಜೊತೆ ಸವಿಯಲು ಚೆನ್ನಾಗಿರುತ್ತದೆ
ಸಾಂಪ್ರದಾಯಿಕವಾಗಿ ಅಮೃತಸರೀ ಚೆನ್ನಾ ಚೋಲೇ ಬತೂರಾ ಮಾಡುವುದನ್ನು ತಿಳಿಸಿದ್ದೇವೆ. ಇದನ್ನು ಮಾಡುವ ವಿಧಾನವನ್ನು ಈ ವೀಡಿಯೋ ಮೂಲಕವೂ ಕಲಿತುಕೊಳ್ಳಬಹುತಾಗಿದೆ https://youtu.be/d-QdDpJ7CrE
ಇನ್ನೇಕೆ ತಡಾ, ಓದ್ಕೋಳೀ, ನೋಡ್ಕೋಳಿ, ಮಾಡ್ಕೋಳಿ, ತಿನ್ಕೋಳಿ
ಏನಂತೀರೀ?
ಈ ಪಾಕ ವಿಧಾನವನ್ನು ತಿಳಿಸಿಕೊಟ್ತವರು : ಶ್ರೀಮತಿ ಮೀನಾಕ್ಷೀ ಗುರುರಾಜ್, ವಿದ್ಯಾರಣ್ಯಪುರ, ಬೆಂಗಳೂರು