ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ. ಭಾರತ ಮತ್ತು ಭಾರತೀಯರನ್ನು ವಿದೇಶಿಗರು ನೋಡುವ ರೀತಿಯೂ ವಿಭಿನ್ನವಾಗಿದೆ.
ಆದರೆ ಮೋದಿಯವರು ಒಬ್ಬರು ಮಾತ್ರಾ ಈ ರೀತಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಇಡೀ ದೇಶ ಸುಧಾರಣೆಯಾಗುವುದಿಲ್ಲ. ಅವರ ಸಂಪುಟದಲ್ಲಿ ಇರುವವರು ಮತ್ತು ಅವರ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕರು, ನಗರಪಾಲಿಕೆ ಸದಸ್ಯರು, ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿಯ ಮಟ್ಟದಲ್ಲಿಯೂ ಅವರ ಕಾರ್ಯತತ್ಪರತೆ ಮುಂದುವರೆಯುವಂತಾಗಬೇಕು. ಹಾಗಾದಲ್ಲಿ ಮಾತ್ರವೇ ಜನ ಮೋದಿಯವರ ಜೊತೆ ಬಿಜೆಪಿ ಪಕ್ಷವನ್ನೂ ಇಷ್ಟ ಪಡುತ್ತಾರೆ ಮತ್ತು ಅವರನ್ನು ಎಲ್ಲಾ ಕಡೆಯಲ್ಲಿಯೂ ಬೆಂಬಲಿಸುತ್ತಾರೆ.
ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆಡಳಿತ ಅತ್ಯುತ್ತಮ ನಾಯಕನ ಕೈಯಲ್ಲಿ ಇದೆಯಾದರೂ ಅವರ ಆಜ್ಞೆಗಳನ್ನು ಅನುಶಾಸನಕ್ಕೆ ತರುವುದರಲ್ಲಿ ಅವರ ಮಂತ್ರಿಮಂಡಳದ ಸದಸ್ಯರು ಮತ್ತು ಇತರೇ ರಾಜ್ಯಗಳ ಮುಖ್ಯಮಂತ್ರಿಗಳು ಎಡವುತ್ತಿರುವುದನ್ನು ಸ್ವಪ್ಟವಾಗಿ ಕಾಣಬಹುತದಾಗಿದೆ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತಂತೆ ಎನ್ನುವ ಹಾಗೆ, ನಾ ಖಾವುಂಗಾ ನಾ ಖಾನೇ ದೂಂಗಾ. ನಾನು ತಿನ್ನುವುದಿಲ್ಲ ಮತ್ತು ತಿನ್ನುವುದಕ್ಕೂ ಬಿಡುವುದಿಲ್ಲ ಎಂಬ ತತ್ವವನ್ನು ಅತ್ಯಂತ ಕಟ್ಟುನಿಟ್ಟಾಗಿ ಪ್ರಧಾನಿಗಳು ಪಾಲಿಸುತ್ತಿದ್ದಾರೆ. ಹದಿಮೂರು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಸುಮಾರು ಆರು ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಂತಹ ಉನ್ನತ ಅಧಿಕಾರದಲ್ಲಿದ್ದರೂ, ಆಡಳಿತಲ್ಲಿ ಅವರ ಸಂಬಂಧೀಕರ ಹಸ್ತಕ್ಷೇಪವೇ ಇಲ್ಲ. ಅವರ ಸಂಬಂಧೀಕರಾರೂ ಚುನಾಚಣೆಯಲ್ಲಿ ಸ್ಪರ್ಧಿಸಿಲ್ಲ.
ಆದರೆ ಕೆಳ ಹಂತದಲ್ಲಿ ಈ ರೀತಿಯ ನೀತಿಗಳು ಪಾಲನೆಯಾಗುತ್ತಲೇ ಇಲ್ಲ. ಅಪ್ಪಾ ರಾಜ್ಯದ ಮುಖ್ಯಮಂತ್ರಿಯಾದರೆ, ಹಿರಿಯ ಮಗ ಸಂಸದ, ಕಿರಿಯ ಮಗ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರವೆಲ್ಲವೂ ಒಂದೇ ಕುಟುಂಬಕ್ಕೇ ಸೀಮಿತವಾಗಿಟ್ಟು ಕೊಂಡು ಜನರು ಮಾತ್ರ ಬಿಜೆಪಿಯನೇ ಬೆಂಬಲಿಸಬೇಕು ಎಂದರೆ ಅದು ಹೇಗೆ ಸಾಧ್ಯ?
ಉಳಿದೆಲ್ಲ ಪಕ್ಷಗಳಿಗಿಂತಲು ವಿಭಿನ್ನವಾದ, ಶಿಸ್ತಿನ ಪಕ್ಷ ಎಂದು ಆರಂಭದಲ್ಲಿ ಅನಿಸುತ್ತಿದ್ದರೂ, ಅಧಿಕಾರಕಾರ ಮಧ ತಲೆಗೇರಿದ ಕೂಡಲೇ, ನಾಚಿಕೆ, ಗೀಚಿಕೆ, ಊರಾಚೆಗೇ. ನಾವೂ ಕೂಡಾ ಉಳಿದೆಲ್ಲಾ ಪಕ್ಷಗಳಂತೆಯೇ ಪಕ್ಕಾ ರಾಜಕಾರಣಿಗಳು. ಅಧಿಕಾರದ ಇಲ್ಲದಿದ್ದಾಗ ಮಾತ್ರವೇ ಕಾರ್ಯಕರ್ತರ ಕಾಲು ಹಿಡಿಯೋದು. ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮದ ಪರಿಣಾಮದಿಂದ ಅಧಿಕಾರ ಗಳಿಸಿದ ಮೇಲೆ ಅದೇ ಕಾರ್ಯಕರ್ತರ ಕಾಲು ಎಳೆಯುವ ಕೆಲಸ ಮಾಡಿದರೆ ಯಾರು ತಾನೇ ಇಷ್ಟ ಪಡುತ್ತಾರೆ?
ಕಳೆದ ಒಂದು ತಿಂಗಳಿಂದಲೂ ಪ್ರಪಂಚಾದ್ಯಂತ ಆವರಿಸಿರುವ ಮಾಹಾಮಾರೀ ಕೊರೋನಾ ತಡೆಗಟ್ಟಲು ಪ್ರಧಾನ ಮಂತ್ರಿಗಳಾದಿಯಾಗಿ ಎಲ್ಲಾರೂ ಹಗಲಿರಳೂ ಶ್ರಮಿಸುತ್ತಾ, ಇಡೀ ದೇಶವನ್ನು ಎರಡು ಹಂತದಲ್ಲಿ ಒಂದು ತಿಂಗಳುಗಳು ಕಾಲ ಕಟ್ಟು ನಿಟ್ಟಿನ ಲಾಕ್ ಡೌನ್ ವಿಧಿಸಿದ್ದರೂ, ಆಡಳಿತ ಪಕ್ಷದ ಶಾಸಕರೇ ಅದ್ದೂರಿಯ ಮದುವೆ, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅದರಲ್ಲಿ ಮುಖ್ಯಮಂತ್ರಿಗಳೇ ಭಾಗವಹಿಸಿದಲ್ಲಿ ವಿಭಿನ್ನವಾದ ಶಿಸ್ತಿನ ಪಕ್ಷ ಎಲ್ಲಿಂದ ಬಂತು.?
ಪ್ರಪಂಚದಲ್ಲೇ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದರೂ ಕೂರೋನಾ ಸೋಂಕಿತರು ಮತ್ತು ಕೂರೋನಾದಿಂದ ಸತ್ತವರ ಸಂಖ್ಯೆ ಬೇರೇ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಅಂಕಿ ಅಂಶಗಳು ನಗಣ್ಯವಾಗಿದೆ. ದೇಶದ 85% ಜನರು ಅತ್ಯಂತ ಶಿಸ್ತಿನಿಂದ ಲಾಕ್ ಡೌನ್ ಪಾಲಿಸುತ್ತಿದ್ದಲ್ಲಿ ಕೇವಲ 15% ಜನಾ ಅದರಲ್ಲೂ ಒಂದು ಸಮುದಾಯದ ಜನರು ಧರ್ಮದ ಹೆಸರಿನಲ್ಲಿ ಲಾಕ್ ಡೌನ್ ವಿರೋಧಿಸಿ ಖುಲ್ಲಂ ಖುಲ್ಲಂ ಓಡಾಡುತ್ತಿದ್ದರೆ ಮತ್ತು ಅವರ ಆರೋಗ್ಯವನ್ನು ತಪಾಸಣೆ ಮಾಡಲು ಬಂದ ವೈದ್ಯರು, ದಾದಿಯರು ಮತ್ತು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದರೆ ಅಂತಹವರನ್ನು ಗುರುತಿಸಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಅವರನ್ನೇ ಸಮರ್ಥನೆ ಮಾಡುವುದು ಪೋಲೀಸರು ಅಂತಹ ಪುಂಡರನ್ನು ಶಿಕ್ಷಿಸಬಾರದು ಎಂದು ಅಧಿಕಾರದಲ್ಲಿರುವವರೇ ಪತ್ರಿಕಾಗೋಷ್ಠಿ ಮಾಡಿ ಹೇಳಿದರೆ ಅಂತಹ ಪುಂಡರಿಗೆ, ಮತಾಂಧರಿಗೆ ಇನ್ನೆಂತಹ ಸಂದೇಶ ತಲುಪುತ್ತದೆ?
ರಾಜ್ಯದ ಉಪಮುಖ್ಯಮಂತ್ರಿಗಳೇ ಎಲ್ಲರ ಸಮ್ಮುಖದಲ್ಲಿ ಪೋಲೀಸ್ ಕಮೀಶ್ನರ್ ಕಾನೂನು ಸುವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ ನಿಮಗೆ ಬೇಕಾದವರಿಗೆ ಕಾನೂನು ಸಡಿಲ ಗೊಳಿಸುತ್ತಿದ್ದೇರಿ ಎಂದು ಜರಿಯುತ್ತಾರೆ. ನಂತರದ ದಿನಗಳಲ್ಲಿ ಅದೇ ಮಂತ್ರಿಗಳೇ ಯಾರದೋ ಒತ್ತಡಕ್ಕೆ ಮಣಿದು ಕೆಂದ್ರ ಸರ್ಕಾರ ಮೇ 30ರ ವರೆಗೂ ಕಟ್ಟು ನಿಟ್ಟಾದ ಲಾಕ್ ಡೊನ್ ಮುಂದುವರಿಸಿದ್ದರೂ ಐಟಿ ಬಿಟಿಯವರು ಕೆಲಸಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬಹುದು. ದ್ವಿಚಕ್ರ ವಾಹನ ಸವಾರರಿಗೆ ಪಾಸ್ ಕಡ್ಡಾಯ ವಿಲ್ಲ ಎಂದು ಹೇಳುತ್ತಾರೆ ಮತ್ತು ಅದನ್ನು ಮುಖ್ಯಮಂತ್ರಿಗಳೂ ಅನುಮೋದಿಸುತ್ತಾರೆ. ಅದಾದ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತದೇ ಮುಖ್ಯಮಂತ್ರಿಗಳು ಮತ್ತೊಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಲಾಕ್ ಡೊನ್ ಯಥಾಸ್ಥಿತಿಯಂತೆ ಜಾರಿಗೆಯಲ್ಲಿದೆ ಎಂದು ಹೇಳುತ್ತಾರೆ. ನಾವೆಲ್ಲರೂ ಇತಿಹಾಸದಲ್ಲಿ ತುಘಲಕ್ ಎಂಬ ರಾಜನ ಆಡಳಿತದ ಬಗ್ಗೆ ಓದಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಆಡಳಿತವನ್ನು ಕಣ್ಣಾರೆ ಕಾಣುತ್ತಿದ್ದೇವೆ.
ಸಾಂವಿಧಾನಿಕವಾಗಿ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳ ಪದವಿಯನ್ನು ಹೊರತು ಪಡಿಸಿದರೆ ಗೃಹಖಾತೆ ಮತ್ತು ಗೃಹಮಂತ್ರಿಗಳ ಅಧಿಕಾರದ ವ್ಯಾಪ್ತಿ ಹೆಚ್ಚೇ ಇರುತ್ತದೆ. ದೌರ್ಭಾಗ್ಯವೆಂದರೆ ಈ ಕೂರೋನಾ ವಿಪತ್ತಿನ ಸಮಯದಲ್ಲಿ ದೇಶದ ಮತ್ತು ರಾಜ್ಯದ ಗೃಹಖಾತೆ ಮತ್ತು ಗೃಹಮಂತ್ರಿಗಳನ್ನು ಒಮ್ಮೆಯೂ ಕಾಣುವಂತಹ ಸೌಭಾಗ್ಯವೇ ನಮಗೆ ಲಭಿಸಿಲ್ಲ. ಬಹುಶಃ ದೇಶದ ಗೃಹಮಂತ್ರಿಗಳು CAA ಮತ್ತು NRC ಹೇಗೆ ಕಾರ್ಯರೂಪಕ್ಕೆ ತರುವುದು ಎಂಬುದರಲ್ಲಿಯೋ ಅಥವಾ ಕರ್ನಾಟಕ, ಮಧ್ಯಪ್ರದೇಶದ ಅಧಿಕಾರವನ್ನು ಆಪರೇಷನ್ ಕಮಲದಲ್ಲಿ ಗಳಿಸಿದಂತೆ ರಾಜಸ್ಥಾನದಲ್ಲೂ ಹೇಗೆ ಪಡೆಯಬಹುದು ಎಂಬುದರಲ್ಲಿ ಮಗ್ನರಾಗಿರಬಹುದು ಎಂದು ಭಾವಿಸಿದರೆ, ರಾಜ್ಯದ ಗೃಹಮಂತ್ರಿಗಳು ಈ ಕೂರೋನಾ ಸಮಯದಲ್ಲಿ ಸ್ವಗೃಹದಿಂದ ಹೊರಬಾರದಿರುವುದು ಜನರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ದೇಶದಲ್ಲೇ ಅತೀ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ಮುಖ್ಯಮಂತ್ರಿಗಳ ನೇರ, ದಿಟ್ಟ ಮತ್ತು ನಿರಂತರ ಕಾರ್ಯತತ್ಪರತೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಯಾರೇ ಹಾಳು ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಅವರನ್ನು ಬಂಧಿಸಿ ಕಾನೂನಾತ್ಮಕವಾಗಿ ವಿಚಾರಣೆ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗಾದ ನಷ್ಟವನ್ನು ಅವರಿಂದಲೇ ಮುಟ್ಟುಗೋಲು ಹಾಕಿಸಿ ಅವರಿಗೆ ಶಿಕ್ಷೆ ಕೊಡಿಸುತ್ತಿರುವ ಅವರ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಲ್ಲರ ಮನ್ನಣೆ ಗಳಿಸುತ್ತಿದೆ ಎಂದರೆ ಅತಿಶಯೋಕ್ತಿ ಏನಲ್ಲ.
ಚುನಾವಣಾ ಸಮಯದಲ್ಲಿ ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸಿಯೋ ಇಲ್ಲವೇ ಪಾಕೀಸ್ಥಾನದ ಮೇಲೆ ಅಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುತ್ತಾ, ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಮೋದಿಯವರ ಹೆಸರನ್ನೇ ಹಿಡಿದು ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಿರುಕನ ಕನಸೇ ಸರಿ. ದೇಶದಲ್ಲಿ ಹೇಗೆ ಸಮರ್ಥ ನಾಯಕತ್ವ ಇದೇಯೇ ಅದೇ ರೀತಿಯಲ್ಲಿಯೂ ಸ್ಥಳೀಯವಾಗಿ ಅಷ್ಟೇ ಸಮರ್ಥ ನಾಯಕತ್ವವನ್ನು ಬೆಳೆಸಬೇಕು ಮತ್ತು ಪ್ರತಿಯೊಂದಕ್ಕೂ ಹೈಕಮ್ಯಾಂಡ್ ಕಡೆಗೆ ಹೋಗದೇ ಸ್ಥಳೀಯರಿಗೇ ಮುಕ್ತವಾಗಿ ಅಧಿಕಾರವನ್ನು ನಡೆಸುವಂತಹ ಆರೋಗ್ಯಕರ ಪರಿಸರವನ್ನು ಬೆಳೆಸಬೇಕು.
ನಾಯಕ ಎಷ್ಟೇ ಒಳ್ಳೆಯವನಾಗಿದ್ದರೂ, ಸಂಭಾವಿತನಾಗಿದ್ದರೂ, ಕಾರ್ಯಕರ್ತರ ನಿಲುವನ್ನು ಸಮರ್ಥಿಸಿದ ಪಕ್ಷ ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ಭಾರತೀಯರು ವ್ಯಕ್ತಿಗತವಾಗಿಯೂ ಮತ್ತು ಪ್ರಧಾನಿಗಳಾಗಿಯೂ ಶ್ರೀ ನರೇಂದ್ರ ಮೋದಿಯವರನ್ನು ಮೆಚ್ಚುತ್ತಾರಾದರೂ, ಪಕ್ಷವಾಗಿ ಬಿಜೆಪಿಯನ್ನು ಒಪ್ಪಿಕೊಳ್ಳಲು ಮತ್ತು ಅಪ್ಪಿ ಕೊಳ್ಳಲು ಹಿಂಜರಿಕೆ ತೋರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಪ್ಪು ಒಪ್ಪಿಕೊಂಡು, ಪಕ್ಷ, ಪಕ್ಷದ ನಿಲುವು, ಆಡಳಿತ ಮತ್ತು ಕಾರ್ಯಕರ್ತರಿಗೆ ಮನ್ನಣೆಯನ್ನು ಕೊಡುವುದರ ಮೂಲಕ ಸರಿ ದಾರಿಗೆ ಬರಲು ಕಾಲ ಇನ್ನೂ ಮಿಂಚಿಲ್ಲ.
ಏನಂತೀರೀ?
Superb realisation of truth. I fully agree… Being a Kannadiga, I have started disliking the actions of our CM in particular and Karnataka BJP in general.
Specifically the way the government is handling lockdown so callously.
LikeLike
Superb realisation of truth. I fully agree… Being a Kannadiga, I have started disliking the actions of our CM in particular and Karnataka BJP in general.
Specifically the way the government is handling lockdown so callously.
We both are confined at home, kicking away our lucrative career. But people and vehicles are moving in front of our house without any guilt or hesitation.
LikeLike
ನಮ್ಮ CM ಹೊಸದಾಗಿ ತಲೆ ಉಪಯೋಗಿಸುವ ಅವಶ್ಯಕತೆ ಇಲ್ಲವೆ ಇಲ್ಲ, ರೋಗ ನಿಯಂತ್ರಿಸಲು ಕೇರಳ ಹಾಗೂ ದಂಗೆಯ ಜನರನ್ನು ನಿಯಂತ್ರಿಸಲು UP ಮಾದರಿಯ ಕಣ್ಣು ಮುಚ್ಚಿ ಪಾಲಿಸಿದರೆ ಸಾಕು… ಆದರೆ ತಾನು ತುಘಲಕ್ ನೀತಿಯ ಪಾಲಿಸಿಯೇ ತೀರುವೆ ಎನ್ನು ಅವರ ಮೋದಿ ತಾನೆ ಏನು ಮಾಡಲು ಸಾದ್ಯ?
ಎಲ್ಲ ಜಾತಿ – ಧರ್ಮದ ರಾಜಕಾರಣದಿಂದ, ನಮ್ಮ ದೇಶ ಮೇಲೆ ಬರಲು ಆಗುತ್ತಿಲ್ಲ.
ಒಂದು ರಾಜ್ಯದ CM ನಿಂದ MLA Corporator Panchayathi ticket ಅವನ ಜಾತಿ ಬಲದಿಂದ ಹೊರತು ಅವನ ಸಾರ್ಮತ್ಯದಿಂದ ಆರಿಸುವುವುದೆ ಇಲ್ಲ, ಹೀಗಿರಲು ಸಾರ್ಮತ್ಯಗೆ ಬೆಲೆ ಎಲ್ಲಿ ಇರುವುದಿಲ್ಲ ಅಲ್ಲಿ ನಾಯಕನ ಪಾತ್ರ ಸುಮ್ಮನೆ ಇಂತ ದಡ್ಡ ಶಿಖಾಮಣಿಗಳನ್ನು ನಿಭಾಯಿಸುವುದರಲ್ಲೆ ಕಳೆದು ಹೋಗುತ್ತದೆ
LikeLiked by 1 person
ತಿಲಕ್ ಆವರೆ ಸರಿಯಾಗಿ ಹೇಳಿದ್ರಿ. ಜಾತಿ ಬಲ ಮತ್ತು ಹಣ ಬಲದಿಂದ ಅಧಿಕಾರಕ್ಕೆ ಬಂದವರು ಖಂಡಿತವಾಗಿಯೂ ಪ್ರಜಾಪ್ರಭುತ್ವದ ಮೂಲ ತತ್ವವಾದ ಜನ ಬಲವನ್ನೇ ಮರೆತಾಗ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ. ತುಷ್ಟೀಕರಣಕ್ಕೂ ಒಂದು ಮಿತಿ ಇರಬೇಕಲ್ಲವೇ?
LikeLike