ವೆಜ್ ಮಂಚೂರಿಯನ್. ಇದು ಈಶಾನ್ಯ ಭಾರತ ಮತ್ತು ಚೀನಿಯರ ಸಾಂಪ್ರದಾಯಿಕ ಅಡುಗೆಯಾಗಿದೆ. ಸರಳ ತರಕಾರಿಗಳನ್ನು ಬಳೆಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ತಿನಿಸಾಗಿದೆ. ಈಗಂತೂ ಭಾರತದ್ಯಂತ ಸಂಜೆ ಹೊತ್ತಿನಲ್ಲಿ ತರ ತರಹದ ಮಂಚೂರಿಯನ್ ಗಳು ಜನಪ್ರಿಯವಾದ ರಸ್ತೆ ಬದಿಯ ಆಹಾರವಾಗಿ ಎಲ್ಲರ ನಾಲಿಗೆ ಬರವನ್ನು ತಣಿಸುತ್ತಿದೆ.
ವೆಜ್ ಮಂಚೂರಿಯನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಸಣ್ಣಗೆ ಕತ್ತರಿಸಿದ ಎಲೇ ಕೋಸು – 3 ಕಪ್
- ಸಣ್ಣಗೆ ಕತ್ತರಿಸಿದ ಕ್ಯಾರೆಟ್ – 2 ಕಪ್
- ಸಣ್ಣಗೆ ಕತ್ತರಿಸಿದ ಈರುಳ್ಳಿ – 1 ಕಪ್
- ಸಣ್ಣಗೆ ಕತ್ತರಿಸಿದ ದೊಣ್ಣೇ ಮೆಣಸಿನಕಾಯಿ – 1 ಕಪ್
- ಸಣ್ಣಗೆ ಕತ್ತರಿಸಿದ ಹಸೀ ಮೆಣಸಿನಕಾಯಿ- 2-3
- ಶುಂಠಿ – ಬೆಳ್ಳುಳ್ಳಿ ಪೇಸ್ಟ್ – ½ ಚಮಚ
- ಚಿಲ್ಲಿ ಸಾಸ್ – 1 ಚಮಚ
- ಸೋಯಾ ಸಾಸ್- 2 ಚಮಚ
- ಟೊಮೆಟೊ ಸಾಸ್- 2 ಚಮಚ
- ಮೈದಾ – 1 ಕಪ್
- ಜೋಳದ ಹಿಟ್ಟು- 1 ಕಪ್
- ಕರಿಯಲು ಆಡುಗೆ ಎಣ್ಣೆ
- ಅಚ್ಚಖಾರದ ಪುಡಿ – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ವೆಜ್ ಮಂಚೂರಿಯನ್ ತಯಾರಿಸುವ ವಿಧಾನ
- ಸಣ್ಣಗೆ ಕತ್ತರಿಸಿದ ಕ್ಯಾರೆಟ್ & ಎಲೆಕೋಸಿಗೆ ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಬೇಯಿಸಿಕೊಂಡು ತಣ್ಣಗಾದ ನಂತರ ನೀರನ್ನು ಶೋಧಿಸಿಟ್ಟು ಕೊಳ್ಳಿ.
- ಸಮಪ್ರಮಾಣದಲ್ಲಿ ಮೈದಾ ಮತ್ತು ಜೋಳದ ಹಿಟ್ಟಿಗೆ ಒಂದು ಚಮಚಾ ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ ಗಂಟಾಗಂತೆ ಗಟ್ಟಿಯಾಗಿ ಕಲೆಸಿ ಅದಕ್ಕೆ ಕತ್ತರಿಸಿದ ಕ್ಯಾರೆಟ್, ಬೇಯಿಸಿಟ್ಟು ಕೊಂಡಿದ್ದ ಕ್ಯಾರೆಟ್ & ಎಲೇಕೋಸನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು
- ಅಗಲವಾದ ಬಾಣಲೆಯನ್ನು ಸ್ವವ್ ಮೇಲಿಟ್ಟು ಅದಕ್ಕೆ ಕರಿಯಲು ಸಾಕಾಗುವಷ್ಟು ಅಡುಗೆ ಎಣ್ಣೆ ಹಾಕಬೇಕು
- ಎಣ್ಣೆ ಕಾದ ನಂತರ ಸಣ್ನ ಉರಿಯಲ್ಲಿ ಕಲೆಸಿಟ್ಟು ಕೊಂಡಿದ್ದ ಮಿಶ್ರಣವನ್ನು ಸಣ್ಣ ಸಣ್ಣ ನಿಂಬೇಗಾತ್ರದಷ್ಟು ಆಕಾರದಲ್ಲಿ ಎಣ್ಣೆಯಲ್ಲಿ ನಿಧಾನವಾಗಿ ಹಾಕಿ ಚೆನ್ನಾಗಿ ಗರಿ ಗರಿಯಾಗುವಂತೆ ಬೇಯಿಸಿಕೊಳ್ಳಬೇಕು.
- ಬಾಣಲಿಗೆ ಎರಡು ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಬೇಕು
- ಹೆಚ್ಚಿಟ್ಟು ಕೊಂಡಿದ್ದ ಈರುಳ್ಳಿಹಾಕಿ, ಅದು ಕಂದು ಬರುವವರೆಗೂ ಬಾಡಿಸಿಕೊಳ್ಳಬೇಕು
- ಹೆಚ್ಚಿಟ್ಟು ಕೊಂಡಿದ್ದ ದೊಣ್ಣೇ ಮೆಣಸಿನಕಾಯಿಯನ್ನು ಅದಕ್ಕೆ ಸೇರಿಸಿ ಅದು ಬೇಗನೆ ಬೇಯಲು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿ ಕೊಳ್ಳಬೇಕು
- 1 ಚಮಚ ಚಿಲ್ಲಿ ಸಾಸ್, 2 ಚಮಚ ಸೋಯಾ ಸಾಸ್, 2 ಚಮಚ ಟೊಮೆಟೊ ಸಾಸ್ ಹಾಕಿ ಎರಡು ನಿಮಿಷಗಳಷ್ಟು ದೊಡ್ಡ ಉರಿಯಲ್ಲಿ ಕುದಿಸಿ.
- ಈಗ ಕರಿದ ವೆಜ್ ಚೆಂಡುಗಳನ್ನು ನಿಧಾನವಾಗಿ ಸೇರಿಸಿ, ಚೆನ್ನಾಗಿ ಮಿಶ್ರಣವಾಗುವಂತೆ ಮೂರ್ನಾಲ್ಕು ನಿಮಿಷಗಳಷ್ಟು ಬಾಡಿಸಿದಲ್ಲಿ ರುಚಿ ರುಚಿಯಾದ ವೆಜ್ ಮಂಚೂರಿಯನ್ ಸಿದ್ಧ.
ಕ್ಯಾರೇಟ್ ಮತ್ತು ಎಲೇ ಕೋಸಿನ ಹೊರತಾಗಿಯೂ, ಹೋಕೋಸು(ಗೋಬಿ), ಬೇಬಿ ಕಾರ್ನ್, ಅಣಬೆ, ಪನೀರ್ ಬಳೆಸಿಯೂ ಸಹಾ ಇದೇ ರೀತಿ ಮಂಚೂರಿಯನ್ ತಯಾರಿಸ ಬಹುದಾಗಿದೆ
ಈ ವೆಜ್ ಮಂಚೂರಿಯನ್ ಟೊಮ್ಯಾಟೋ ಸಾಸ್ ಮತ್ತು ಚಿಲ್ಲಿ ಸಾಸ್ ನೊಂದಿಗೆ ಬಿಸಿ ಬಿಸಿಯಾಗಿದ್ದಾಗಲೇ ತಿನ್ನುವುದಕ್ಕೆ ಮಜವಾಗಿರುತ್ತದೆ
ರುಚಿಯಾದ ಶುಚಿಯಾದ ವೆಜ್ ಮಂಚೂರಿಯನ್ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ.
ಓದ್ಕೋಳ್ಳಿ , ಮಾಡ್ಕೋಳ್ಳಿ, ತಿಂದ್ಕೋಳ್ಳಿ
ಏನಂತೀರೀ?
ಮದದಾಳದ ಮಾತು : ಮೊದಲೇ ತಿಳಿಸಿದಂತೆ ರಸ್ತೆ ಬದಿಗಳಲ್ಲಿ ಮತ್ತು ಚಾಟ್ ಸೆಂಟರ್ ಗಳಲ್ಲಿ ಕೈಕೆಟುಕುವ ಬೆಲೆಯಲ್ಲಿ ಬಗೆ ಬಗೆಯ ಮಂಚೂರಿಯನ್ ಗಳು ಸಿಗುತ್ತವಾದರೂ ಅವುಗಳನ್ನು ತಿನ್ನುವ ಮೊದಲು ಅವರು ಬಳೆಸುವ ಕೃತಕ ಬಣ್ಣ, ಕರಿಯಲು ಬಳೆಸುವ ಎಣ್ಣೆ ಮತ್ತು ಸಾಸ್ ಗಳತ್ತ ಒಮ್ಮೆ ಪರೀಕ್ಷಿಸಿ ತಿನ್ನುವುದು ಒಳಿತು. ಅನೇಕ ಕಡೆ ಅಗ್ಗದ ಆರೋಗ್ಯಕ್ಕೆ ಹಾನಿಯಾಗಬಹುದಾದ ಬಣ್ಣಗಳು ಮತ್ತು ಸಾಸ್ ಗಳನ್ನು ಬಳೆಸುವುದರಿಂದ ಮನೆಯಲ್ಲಿಯೇ ಯಾವುದೇ ಕೃತಕ ಬಣ್ಣವನ್ನು ಬೆರೆಸದೇ ಆರೋಗ್ಯಕರವಾಗಿ ಬೇಕಾದ ಹಾಗೆ ಮಂಚೂರಿಯನ್ ಮಾಡಿಕೊಂಡು ಸವಿದರೆ ಒಳಿತು.