ನಿಜವಾಗಿ & ಖಡಾಖಂಡಿತವಾಗಿ ಹೇಳಬೇಕೆಂದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ ಅಷ್ಟೇನೂ ಉತ್ತಮವಾಗಿಲ್ಲ ಮತ್ತು ಅದನ್ನು ಉತ್ತಮ ಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಲೇ ಇಲ್ಲ. ಅವರ ಸದ್ಯದ ಮನೋಸ್ಥಿತಿ ಹೇಗಿದೆಯೆಂದರೆ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಸಹಾ ತಾವು ಪ್ರಧಾನ ಮಂತ್ರಿಯಾಗಲೆಂದೇ ಹುಟ್ಟಿದವರು ಎಂದೇ ನಂಬಿದ್ದಾರೆ ಅಥವಾ ಅವರ ಸುತ್ತಮುತ್ತಲಿರುವ ಅವರ ವಂದಿಮಾಗದರು ಅವರನ್ನು ಹಾಗೇ ನಂಬಿಸಿದ್ದಾರೆ. ಅವರ ಮುತ್ತಾತ, ಅಜ್ಜಿ ಮತ್ತು ಅಚಾನಕ್ಕಾಗಿ ಅವರ ತಂದೆ ಪ್ರಧಾನಿಯಾಗಿದ್ದರಿಂದ ಪ್ರಧಾನಮಂತ್ರಿಯ ಹುದ್ದೆ ತಮ್ಮ ಕುಟುಂಬದ ಜಹಾಗೀರು ಹಾಗಾಗಿ ತಮ್ಮಲ್ಲೊಬ್ಬರು ನಿಶ್ವಿತವಾಗಿ ಪ್ರಧಾನ ಮಂತ್ರಿಗಳಾಗಲೇ ಬೇಕು ಎಂದು ತಿಳಿದಂತಿದೆ.
ದೇಶದ ಯಾವುದೇ ಪ್ರಜೆ, ಪ್ರಧಾನ ಮಂತ್ರಿಯಂತಹ ಹುದ್ದೆಗೆ ಏರಬೇಕೆಂದು ಬಯಸುವುದು ತಪ್ಪಲ್ಲ. ಈ ಪ್ರಜಾಪ್ರಭುತ್ವ ಪದ್ದತಿಯಲ್ಲಿ ಜನರಿಂದ ಆಯ್ಕೆಯಾಗಿ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ. ಆದರೆ ಒಂದಿಬ್ಬರನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ಹಲವಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ನಾನಾ ವಿಧದ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಜನರ ಮನ್ನಣೆಗಳಿಸಿ ಪ್ರಧಾನಿಗಳಾಗಿದ್ದರು. ಹಾಗೆ ಪ್ರಧಾನಿಗಳಾದವರಲ್ಲಿ ಕೆಲವೇ ಕಲವರು ಯಶಸ್ವಿಯಾದರೆ ಹಲವರು ಜನರ ನಂಬಿಕೆಗಳನ್ನು ಹುಸಿಗೊಳಿಸಿದ್ದನ್ನು ರಾಜಕಾರಣದ ಕುಟುಂಬದಲ್ಲಿರುವ ರಾಹುಲ್ ಮತ್ತು ಪ್ರಿಯಾಂಕ ಗಮನಿಸಿಲ್ಲವೆನಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ಸದಾಕಾಲವೂ ಜನರ ಜೊತೆ ನೇರವಾದ ಸಂಪರ್ಕವನ್ನು ಇಟ್ಟುಕೊಂಡಿರ ಬೇಕು ಅವರ ಕಷ್ಟ ಸುಖಃಗಳಲ್ಲಿ ಭಾಗಿಯಾಗ ಬೇಕು ಮತ್ತು ಕಠಿಣ ಸವಾಲನ್ನು ಎದುರಿಸಲು ಮತ್ತು ಪಕ್ಷವನ್ನು ಅಭಿವೃದ್ಧಿಪಡಿಸಲು ಸ್ವಸಾಮರ್ಥ್ಯವಿರಬೇಕು. ಆದರೆ ಸುಮಾರು ಐವತ್ತರ ಆಸುಪಾಸಿನಲ್ಲಿರುವ ಅಣ್ಣ ತಂಗಿಯರಿಬ್ಬರಲ್ಲೂ ಯಾವುದೇ ಸ್ವಂತಿಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ಯಾರೋ ಬರೆದು ಕೊಟ್ಟದ್ದನ್ನೂ ಸಹಾ ಸರಿಯಾಗಿ ಓದಲಾಗದೇ ಅನೇಕ ಜನರ ಮುಂದೆ ನಗಪಾಟಲಾಗಿರುವ ಉದಾಹರಣೆಗಳು ಸಾಕಷ್ಟಿವೆ.
2014 ಮತ್ತು 2019 ರಲ್ಲಿ ಪ್ರಧಾನ ಮಂತ್ರಿಯ ಹುದ್ದೆಗೆ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರೊಂದಿಗೆ ನೇರಾ ನೇರವಾಗಿ ಸ್ಪರ್ಧಿಸಿ ವಿಫಲರಾದರು. ಎರಡೂ ಬಾರಿಯೂ ಕನಿಷ್ಠ ಪಕ್ಷ ಅಧಿಕೃತ ವಿರೋಧಪಕ್ಷವಾಗಲು ಬೇಕಾದ 10% ಅಂದರೆ 54 ಸಂಸದರನ್ನು ತಮ್ಮ ನಾಯಕತ್ವದಲ್ಲಿ ಗೆಲ್ಲಿಸಿಕೊಂಡು ಬರುವುದರಲ್ಲಿ ವಿಫಲರಾದರು. 2019ರಲ್ಲಂತೂ ತಮ್ಮ ಪರಂಪರಾಗತ ಕ್ಷೇತ್ರ ಅಮೇಠಿಯಿಂದಲೇ ಬಾರೀ ಅಂತರದಿಂದ ಸೋತು, ವೈನಾಡಿನಲ್ಲಿ ಗೆಲ್ಲುವ ಮೂಲಕ ಅಲ್ಪ ಸ್ವಲ್ಪ ಮರ್ಯಾದೆಯನ್ನು ಕಾಪಾಡಿಕೊಂಡರು. ಇನ್ನು 2014 ರ ಚುನಾವಣೆಯಲ್ಲಿ ಮೋದಿಯವರನ್ನು ಚಾಯ್ ವಾಲ ಎಂದು ಮೂದಲಿಸಿದರೆ, 2019 ರಲ್ಲಿ ಚೊಕೀದಾರ್ ಚೋರ್ ಹೈ ಎಂಬ ವಯಕ್ತಿಕ ನಿಂದನೆ ಮತ್ತು ರಫೇಲ್ ಕುರಿತಾದ ಸುಳ್ಳು ಆರೋಪದ ಹೊರತಾಗಿ ಇನ್ನಾವುದರ ಕುರಿತಾಗಿ ಮಾತನಾಡಲು ಅಥವಾ ಅರೋಪ ಮಾಡಲು ಸಾಧ್ಯವಾಗಲೇ ಇಲ್ಲ. ಮೋದಿಯವರಿಗೆ ಹೋಲಿಸಿದಲ್ಲಿ ರಾಹುಲ್ ಅವರ ರಾಜಕೀಯ ಭಾಷಣಗಳೆಂದೂ ಪ್ರಭಾವಶಾಲಿಯಾಗಿರಲೇ ಇಲ್ಲ. ಅವರ ಸ್ವಂತ ಯೋಚನಾ ಲಹರಿ ಇಲ್ಲದೇ ಯಾರೋ ಬರೆದು ಕೊಟ್ಟದ್ದನ್ನು ಗಿಳಿ ಪಾಠದಂತೆ ಓದಿ ಜನರನ್ನು ಮರಳು ಮಾಡಬಹುದೆಂಬ ಅವರ ನಂಬಿಕೆ ಸುಳ್ಳಾಯಿತು. ಇನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂದರ್ಶನಗಳಲ್ಲಿ ಪೆದ್ದು ಪೆದ್ದಾದ ಹಾವ ಭಾವಗಳನ್ನು ಪ್ರದರ್ಶಿಸುತ್ತಾ, ಅವರು ಕೇಳಿದ ಪ್ರಶ್ನೆಗಳಿಗೆ ಅಸಂಬದ್ದ ಉತ್ತರಗಳನ್ನು ನೀಡುತ್ತಾ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ತಾವೇ ಜಗಜ್ಜಾಹೀರಾತು ಪಡಿಸಿಕೊಂಡಿದ್ದಲ್ಲದೇ ದೇಶದ ಮಾನವನ್ನು ವಿದೇಶಗಳಲ್ಲಿ ಹರಾಜು ಹಾಕಿದರು ಎಂದರೂ ತಪ್ಪಾಗಲಾರದು. ಎಲ್ಲರಿಗೂ ಎಲ್ಲಾ ವಿಷಯಗಳ ಬಗ್ಗೆ ತಿಳಿದಿರಬೇಕು ಎಂದೇನೂ ಇಲ್ಲ ಮತ್ತು ತನಗೆ ಗೊತ್ತಿಲ್ಲ ವಿಷಯವಾಗಿದ್ದರೆ ಅದು ಗೊತ್ತಿಲ್ಲ ಎಂದು ಹೇಳಿದರೆ ತಪ್ಪೇನಿಲ್ಲ. ತನಗೆ ಗೊತ್ತಿಲ್ಲದಿದ್ದರೂ ಗೊತ್ತಿರುವ ಹಾಗೆ ನಟಿಸುತ್ತಾ ಅಸಂಬದ್ಧವಾಗಿ ಉತ್ತರವನ್ನು ನೀಡಿದಲ್ಲಿ ಅವ್ಯಕ್ತಿ ಜನರ ಮುಂದೆ ಹಾಸ್ಯಾಸ್ಪದವಾಗುತ್ತಾನೆ. ಇದು ರಾಹುಲ್ ಗಾಂಧಿಯ ವಿಷಯದಲ್ಲಿ ಅನೇಕ ಬಾರಿ ಸತ್ಯವಾಗಿದೆ.
ಇನ್ನು ನೋಡಲು ಸ್ವಲ್ಪ ಇಂದಿರಾ ಗಾಂಧಿಯ ಹೋಲಿಕೆ ಇರುವ ಪ್ರಿಯಾಂಕಾ ಗಾಂಧಿ ಅದೊಂದೇ ತಮ್ಮನ್ನು ರಾಜಕೀಯವಾಗಿ ಪ್ರವರ್ಧಮಾನಕ್ಕೆ ತರುತ್ತದೆ ಎಂದು ಅತೀಯಾಗಿ ನಂಬಿಕೊಂಡು ವಿಫಲರಾದರು. ಆಕೆಯ ಈ ವರ್ಚಸ್ಸು ಅಮೆಥಿಯಲ್ಲಿ ತನ್ನ ಅಣ್ಣ ರಾಹುಲ್ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಮತ್ತು ದೇಶಾದ್ಯಂತ ಕಾಂಗ್ರೆಸ್ ಮುಖವನ್ನು ಉಳಿಸುವಲ್ಲಿಯೂ ವಿಫಲವಾಯಿತು. ಆರಂಭದಲ್ಲಿ ಮೋದಿಯವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುವ ಭರವಸೆಗೆ ಹುಟ್ಟಿಸಿದರೂ ನಂತರ ತಮ್ಮ ಸಾಮರ್ಥ್ಯ ಅರಿವಾಗಿ ಚುನಾವಣಾ ಕಣಕ್ಕೇ ಇಳಿಯದೇ ರಣಹೇಡಿಯಾದದ್ದಂತೂ ಸುಳ್ಳಲ್ಲ. ಅದಕ್ಕಿಂತಲೂ ಹೆಚ್ಚಾಗಿ ಯಾವುದೇ ಅಧಿಕಾರವಿಲ್ಲದಿದ್ದರೂ ಕೇವಲ ಅವರ ಕುಟುಂಬದ ಸದಸ್ಯನಾಗಿ ಅಕೆಯ ಗಂಡಾ ರಾಬರ್ಟ್ ವಾದ್ರಾ ಮಾಡಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಹಗರಣಗಳು ಒಂದೊಂದಾಗಿ ಬೀದಿಗೆ ಬರುತ್ತಿರುವುದು ಪ್ರಿಯಾಂಕಾ ರಾಜಕೀಯ ಭವಿಷ್ಯಕ್ಕೆ ಮಾರಕವಾಗಿದೆ.
ಸಾರ್ವಜನಿಕ ಜೀವನದಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಮೊದಲು ತನ್ನ ಗುರುತನ್ನು ಜನಮಾನಸದಲ್ಲಿ ಛಾಪು ಮೂಡಿಸಬೇಕು ಮತ್ತು ನಂತರ ಅದೇ ಛಾಪನ್ನು ವಿಸ್ತರಿಸಿಕೊಂಡು ಹೋಗಬೇಕು. ದುರಾದೃಷ್ಟವಷಾರ್ ರಾಹುಲ್ ಗಾಂಧಿ ಈ ವಿಷಯದಲ್ಲಿ ಎಡವಿದ್ದಾರೆ. ಮುತ್ತಾತ ಕಾಶ್ಮೀರೀ ಬ್ರಾಹ್ಮಣ (ಅದರ ಬಗ್ಗೆಯೂ ಅನೇಕ ವಿವಾದಗಳಿವೆ) ಅವರ ಮಗಳು ಇಂದಿರಾ ಪಾರ್ಸೀ ಮೂಲದ ಫಿರೋಜ್ ಗಾಂದಿಯನ್ನು ಮದುವೆಯಾಗಿ ಇಲ್ಲಿಯ ಕಾನೂನು ಕಟ್ಟಳೆಯ ಪ್ರಕಾರ ಪಾರ್ಸಿಯಾದರು ಇವರಿಬ್ಬರ ಮಗ ರಾಜೀವ್ ಗಾಂಧಿ, ಇಟಲಿಯ ಮೂಲದ ರೋಮನ್ ಕ್ಯಾಥೋಲಿಕ್ ಧರ್ಮೀಯರಾದ ಸೋನಿಯಾರನ್ನು ಮದುವೆಯಾದರು. ಅವರಿಬ್ಬರಿಗೆ ಹುಟ್ಟಿದವರು ರಾಹುಲ್ ಮತ್ತು ಪ್ರಿಯಾಂಕ. ಹೀಗೆ ಅವರ ವಂಶವಾಹಿನಿಯನ್ನು ನೋಡುತ್ತಾ ಹೋದಲ್ಲಿ ಸರ್ವಧರ್ಮ ಸಮ್ಮಿಳಿತವಾಗಿದೆ. ಹಾಗಾಗಿ ಅವರು ತಮ್ಮನ್ನು ಜಾತ್ಯಾತೀತರೆಂದು ಗುರುತಿಸಿಕೊಂಡಿದ್ದಲ್ಲಿ ಅವರಿಗೆ ಅನುಕೂಲವಾಗಿರುತ್ತಿತ್ತು. ಆದರೆ ಸಮಯಕ್ಕೆ ಬಣ್ಣ ಬದಲಿಸುವ ಗೋಸುಂಬೆಯಂತೆ ಗುಜರಾತ್ ಚುನಾವಣಾ ಸಮಯದಲ್ಲಿ ತಾವು ಜನಿವಾರಧಾರಿ ದತ್ತಾತ್ರೇಯ ಗೋತ್ರದ ಕಾಶ್ಮೀರೀ ಕೌಲ್ ಬ್ರಾಹ್ಮಣ ಎಂದು ಗುರುತಿಸಿಕೊಂಡು ಜನರನ್ನು ಮರುಳು ಮಾಡಲು ಪ್ರಯತ್ನಿಸಿದರು. ಇನ್ನು ಗೋವಾ ಚುನವಣಾ ಸಮಯದಲ್ಲಿ ಅಣ್ಣಾ ತಂಗಿಯರಿಬ್ಬರೂ ಕತ್ತಿನಲ್ಲಿ ಶಿಲುಬೆ ಧರಿಸಿ ತಾವು ರೋಮನ್ ಕ್ಯಾಥೋಲಿಕ್ ಎಂದು ಜನರನ್ನು ನಂಬಿಸಲು ಪ್ರಯತ್ನಿಸಿದರೆ, ತಮ್ಮ ರಾಜಕೀಯ ಅಸ್ಥಿತ್ವ ಮತ್ತು ಅಸ್ಮಿತೆಗಾಗಿ ಮುಸಲ್ಮಾನರೇ ಹೆಚ್ಚಾಗಿರುವ ಕೇರಳದ ವೈನಾಡಿನಲ್ಲಿ ಸ್ಪರ್ಥಿಸಿದಾಗ ತಲೆಯಮೇಲೆ ಟೋಪಿ ಧರಿಸಿ ಪರೋಕ್ಷವಾಗಿ ತಾವು ಮುಸ್ಲಿಂ ಎಂದು ತೋರಿಸಿಕೊಂಡು ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ತಮ್ಮ ಅಸ್ತಿತ್ವವನ್ನೇ ಬದಲಿಸಿಕೊಳ್ಳುವವರನ್ನು ಜನಾ ಹೇಗೆ ತಾನೇ ನಂಬುತ್ತಾರೆ.
ಒಬ್ಬ ನಾಯಕ ರಾಜಕೀಯವಾಗಿ ಯಶಸ್ವಿಯಾಗಲು, ಮೊದಲು ಆತನಿಗೆ ತನ್ನ ಸ್ವಸಾಮರ್ಥ್ಯದ ಅರಿವಿನೊಂದಿಗೆ ತನ್ನ ವಿರೋಧಿಗಳ ಶಕ್ತಿ ಮತ್ತು ಸಾಮರ್ಥ್ಯದ ಅರಿವಿರಬೇಕು. ಹಾಗಾದಲ್ಲಿ ಮಾತ್ರವೇ ಬರುವ ಸವಾಲುಗಳನ್ನು ಎದುರಿಸಲು ತನ್ನದೇ ಆದ ರೀತಿಯಲ್ಲಿ ಯೋಜನೆಯನ್ನು ಮಾಡುತ್ತಾ ವಿರೋಧಿಗಳನ್ನು ಮಣಿಸಲು ಅಥವಾ ಸಮರ್ಥವಾಗಿ ಪ್ರತಿರೋಧವನ್ನು ಒಡ್ಡಲು ಸಹಕಾರಿಯಾಗುತ್ತದೆ. ತನ್ನ ಪಕ್ಷವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗಲು ಆತನ ಜೊತೆ ಸದಾಕಾಲವೂ ಒಂದು ಸಮರ್ಥವಾದ ಬುದ್ಧಿವಂತ ತಂಡವಿರಬೇಕು. ಆ ತಂಡ ತನ್ನ ನಾಯಕನ ಎಲ್ಲಾ ಆಗುಹೋಗುಗಳನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಅಕಸ್ಮಾತ್ ತನ್ನ ನಾಯಕ ಎಲ್ಲಿಯಾದರೂ ಎಡವಿದಲ್ಲಿ ಅಥವಾ ತಪ್ಪು ಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಹೇಳುವಂತಿರ ಬೇಕು. ದುರದೃಷ್ಟವಷಾತ್ ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಜೊತೆ ಅಂತಹ ಸಾಮರ್ಥ್ಯ ಹೊಂದಿರುವ ಮಿತ್ರವೃಂದ ಇಲ್ಲವಾಗಿದೆ. ರಾಜಕೀಯವಾಗಿ ಏನೂ ತಿಳಿಯದಿದ್ದ ಅವರ ತಂದೆ ರಾಜೀವ್ ಗಾಂಧಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಲು ಅವರ ಜೊತೆಗಿದ್ದ ಮಾಧವ್ ರಾವ್ ಸಿಂಧ್ಯಾ ಮತ್ತು ರಾಜೇಶ್ ಪೈಲೆಟ್ ಅರುಣ್ ನೆಹರು ಅವರುಗಳ ಉಪಯುಕ್ತ ಸಲಹೆಗಳು ಕಾರಣವಾಗಿದ್ದವು. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ರಾಜೀವ್ ಗಾಂಧಿಯವರಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿತ್ತು.
ಆರಂಭದಲ್ಲಿ ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರ ಜೊತೆ ಜೋತಿರಾಧ್ಯ ಸಿಂಧ್ಯ ಮತ್ತು ಸಚಿನ್ ಪೈಲಟ್ ಇದ್ದರಾದರೂ, ನಂತರದ ದಿನಗಳಲ್ಲಿ ತಮ್ಮ ಅಸ್ಥಿತ್ವವನ್ನು ಹುಡುಕಿಕೊಂಡು ಸಿಂಧ್ಯಾ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದರೆ, ಒಲ್ಲದಿದ್ದರೂ, ಸದ್ಯಕ್ಕೆ ಸಚಿನ್ ಪೈಲಟ್ ರಾಜಾಸ್ಥಾನದ ಅಶೋಕ್ ಗೆಹ್ಲಾಟ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಪ್ರಿಯಾಂಕಾ ಮತ್ತು ರಾಹುಲ್ ಸಖ್ಯವನ್ನು ತೊರೆದಿದ್ದಾರೆ,. ರಾಹುಲ್ ಮತ್ತು ಪ್ರಿಯಾಂಕ ಅವರಿಗೆ ಯಾರಾದರೂ ಏನಾದಾರೂ ಬುದ್ದಿವಾದ್ವನ್ನು ಹೇಳಿದಲ್ಲಿ ಅಥವಾ ಅವರ ತಪ್ಪನ್ನು ತಿದ್ದಿ ಹೇಳಿದಲ್ಲಿ ಅದನ್ನು ಅವರ ತಂದೆ ರಾಜೀವರಂತೆ ಒಪ್ಪಿಕೊಳ್ಳುವ ಮನೋಭಾವ ಅವರಿಬ್ಬರಲ್ಲಿಯೂ ಇಲ್ಲವಾಗಿದೆ. ಎರಡು ಅವಧಿಯಲ್ಲಿ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರ ಅನೇಕ ನಿರ್ಣಯಗಳನ್ನು ರಾಹುಲ್ ಗಾಂಧಿ ಬಹಿರಂಗವಾಗಿಯೇ ಟೀಕಿಸಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.
ರಾಹುಲ್ ನಿಜವಾಗಿಯೂ ಪ್ರಧಾನ ಮಂತ್ರಿಯಾಗಬೇಕಿದ್ದಲ್ಲಿ ಆತ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದ ಮಂತ್ರಿಮಂಡಳದಲ್ಲಿ ಯಾವುದಾದರೂ ಪ್ರಭಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ತನ್ನ ನಾಯಕತ್ವವನ್ನು ಮತ್ತು ಆಡಳಿತದ ಸಾಮರ್ಥ್ಯವನ್ನು ಎಲ್ಲರಿಗೂ ಪರಿಚಯಿಸಿದ್ದಲ್ಲಿ ಅವರಿಗೇ ಒಳ್ಳೆಯದಾಗುತ್ತಿತ್ತು. ಆದರೆ ತಾನು ಹುಟ್ಟಿರುವುದೇ ಭಾರತ ದೇಶದ ಪ್ರಧಾನಿಯಗಲು ಎಂದು ರಾಹುಲ್ ತಲೆಯಲ್ಲಿ ಹೊಕ್ಕಿರುವುದರಿಂದ ತನ್ನ ನಾಯಕತ್ವ ಮತ್ತು ತಮ್ಮ ಪಕ್ಷವನ್ನು ಬಲಪಡಿಸಲು ಏನನ್ನೂ ಮಾಡಲಾಗುತ್ತಿಲ್ಲ ಮತ್ತು ಮಾಡುತ್ತಿಲ್ಲ. ಬದಲಾಗಿ ತಮ್ಮನ್ನು ತಾವು ಅಗ್ಗದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದಲ್ಲದೆ,ಯಾವುದಾದರೂ ಅದೃಷ್ಟದ ಬಲದಿಂದ ಅಧಿಕಾರವನ್ನು ಗಳಿಸಲು ಬಯಸುತ್ತಿದ್ದಾರೆ. ಆದರೆ ಪರಿಶ್ರಮ ಪಡದೇ ಯಾವುದೇ ಫಲವೂ ಸಿಗದು ಎಂಬ ಸಾಮಾನ್ಯ ಸಂಗತಿಯನ್ನು ಅವರಿಗೆ ತಿಳಿಯ ಪಡಿಸಬೇಕಾಗಿದೆ. ಹಾಗಾಗಿ ಈಗ ಬೆಕ್ಕಿಗೆ ಗಂಟೆ ಕಟ್ಟುವವರಾರು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ ತೊಡಗಿದೆ. ಹಾಗಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮುಂದಿನ ರಾಜಕೀಯ ಭವಿಷ್ಯ ಅಷ್ಟೇನೂ ಆಶಾದಾಯಕವಾಗಿರದೇ ಮಸುಕಾಗಿದೇ ಎಂದೇ ನಿಶ್ಚಯವಾಗಿ ಹೇಳಬಹುದಾಗಿದೆ
ಏನಂತೀರೀ?
ಸುಂದರ ಬರಹ. ವಸ್ತುನಿಷ್ಠ ವಿಮರ್ಶೆ. 👌👌👌
LikeLiked by 1 person
ಧನ್ಯೋಸ್ಮಿ
LikeLike
ವಸ್ತು ನಿಷ್ಠ ವಾಗಿದೆ. ದೇಶವನ್ನು ಆಳುವ ಹಕ್ಕು ನಮ್ಮ ಡಿಎನ್ಎ ಯಲ್ಲಿಯೇ ಇದೆ ಅನ್ನೋ ಮನೋಭಾವ ಇವರಿಬ್ಬರದು. ಏನೂ ಅನುಭವ ಇರದೇ ಯಾರು ಬೇಕಾದರೂ ಈ ಬಹುದೊಡ್ಡ ಪ್ರಜಾಭುತ್ವದ ಪ್ರಧಾನಿ ಆಗಬಹುದು ಎನ್ನುವುದು ಇವರ ಅನಿಸಿಕೆ. ಬಾಲಿಶ ವಾಗಿ ಮಾತನಾಡಿಕೊಂಡು ವಂದಿಮಾಗದರ ಜೊತೆ ತಿರುಗಾಡಿಕೊಂಡು ಆಗ್ಗಾಗ್ಗೆ ಅಜ್ಞಾತವಾಸ ಕ್ಕೆ ಹೋಗಿ (ಸಾಮಾನ್ಯವಾಗಿ ಚುನಾವಣೆ ಫಲಿತಾಂಶ ದ ಸಮಯದಲ್ಲಿ) ನಂತರ ವಾಪಸ್ಸು ಬಂದು ಮತ್ತದೇ ಚಾಳಿ ಮುಂದುವರಿಸೋದು ನೋಡಿ ಜನ ರೋಸಿಹೋಗಿದ್ದರೆ.
ಸದ್ಯದ ಕರೋನ ಮಹಾಮಾರಿ ಸಮಯದಲ್ಲಿ ರಾಗಾ ನ ನೇತೃತ್ವದಲ್ಲಿ ದೇಶ ಇದ್ದರೇ ಏನಾಗುತ್ತಿತ್ತು ಎನ್ನುವದನ್ನು ಊಹಿಸಿಕೊಂಡರೆ ಸಣ್ಣಗೆ ನಡುಕ ಉಂಟಾಗುತ್ತದೆ.
ನಿಮ್ಮ ಈ ರೀತಿಯ ಬರವಣಿಗೆ ಮುಂದುವರೆಸಿ. ಧನ್ಯವಾದಗಳು
ಲಕ್ಷ್ಮೀಶ ಎಸ್
LikeLiked by 1 person