ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದ ಕೆಲವೇ ಕೆಲವೂ ರಾಜ್ಯಗಳಲ್ಲಿ ಒರಿಸ್ಸಾ ರಾಜ್ಯವೂ ಒಂದು. ಇಂದೂ ಸಹ ದೇಶಾದ್ಯಂತ ಅದರಲ್ಲೂ ಬೆಂಗಳೂರಿನ ಅನೇಕ ಸಾಪ್ಘ್ವೇರ್ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಹೆಚ್ಚಿನವರು ಒರಿಸ್ಸಾದವರೇ ಆಗಿರುತ್ತಾರೆ ತಮ್ಮ SSLC ಅಥವಾ PUC ಎಲ್ಲೋ ಕೆಲವರು Degree ಮುಗಿಸಿ ತಕ್ಕ ಮಟ್ಟಿಗಿನ English ಕಲಿತರೆಂದರೆ ಅಲ್ಲಿಂದ ಬೆಂಗಳೂರು, ಹೈದ್ರಾರಾಬಾದ್ ಇಲ್ಲವೇ ಕಲ್ಕತ್ತಾದ ಕಡೆ ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕ್ರಮವಾಗಿ 2004, 2009, 2014 ಮತ್ತು 2019 ರ ಅಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಆಯ್ಕೆಯಾಗುತ್ತಲೇ ಇದ್ದಾರೆ. 2019 ರ ಚುನಾವಣೆಯಲ್ಲಂತೂ ಬಿಜೆಪಿ ಶತಾಯ ಗತಾಯ ಒರಿಸ್ಸಾ ರಾಜ್ಯವನ್ನು ವಶಪಡಿಸಿಕೊಳ್ಳಲೇ ಬೇಕು ಎಂದು ಹರಸಾಹಸ ಮಾಡಿತಾದರೂ ಅಲ್ಲಿಯ ಜನ ಲೋಕಸಭೆಯಲ್ಲಿ ತಕ್ಕ ಮಟ್ಟಿಗೆ ಬೆಂಬಲಿಸಿದರಾದರೂ, ವಿಧಾನಸಭೆಯಲ್ಲಿ ಬಿಜು ಜನತಾದಳದ ಕೈ ಹಿಡಿದರು. ಹೀಗೆ ರಾಜ್ಯ ಮತ್ತು ದೇಶದಲ್ಲಿ ಎರಡು ವಿಭಿನ್ನ ಪಕ್ಷದ ಆಡಳಿತವನ್ನು ನೋಡುವ ಸುಯೋಗ ಒರಿಸ್ಸಾ ಜನರದ್ದು

ಅಂತಹ ಒರಿಸ್ಸಾ ರಾಜ್ಯದ ಮುಖ್ಯಮಂತ್ರಿಗಳು ಇತ್ತೀಚೆಗೆ ತಡರಾತ್ರಿ 12.15 ಕ್ಕೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಕರೆ ಮಾಡಿ, ಇಷ್ಟು ತಡ ಹೊತ್ತಿನಲ್ಲಿ ಕರೆಮಾಡಿದ್ದಕ್ಕಾಗಿ ಮೊದಲು ನಿಮ್ಮ ಕ್ಷಮೆಯಾಚಿಸುತ್ತೇವೆ. ಸಂಧಿಗ್ಧ ಪರಿಸ್ಥಿತಿಯ ಕಾರಣದಿಂದಾಗಿ ಅನಿವಾರ್ಯವಾಗಿ ನಿಮಗೆ ತೊಂದರೆ ಕೊಡುತ್ತಿದ್ದೇನೆ. ನಮ್ಮ ರಾಜ್ಯಕ್ಕೆ ಕರೋನಾ ಪರೀಕ್ಷಾ ಕಿಟ್‌ಗಳು ಮಹಾರಾಷ್ಟ್ರದಿಂದ ಬರಬೇಕಾಗಿತ್ತು. ಆದರೆ ಕೆಲವು ಲಾಜಿಸ್ಟಿಕ್ ಸಮಸ್ಯೆಗಳಿಂದಾಗಿ ಕಿಟ್‌ಗಳನ್ನು ಹೊತ್ತ ಟ್ರಕ್‌ಗಳು ಈಗ ಮುಂಬೈನಲ್ಲಿ ಸಿಲುಕಿಕೊಂಡಿವೆ. ನಮ್ಮ ರಾಜ್ಯದಲ್ಲಿ ತುರ್ತಾಗಿ ಆ ಕಿಟ್ ಗಳ ಅಗತ್ಯವಿದೆ ಎಂದು ಸೂಕ್ಷ್ಮವಾಗಿ ಮೆಲುಧನಿಯಲ್ಲಿ ತಿಳಿಸುತ್ತಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಕೂಡಲೇ ಅರ್ಧೈಸಿಕೊಂಡ ಪ್ರಧಾನಿಗಳು ಅಷ್ಟೇ ಸಮಚಿತ್ತದಿಂದ ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ದಯವಿಟ್ಟು ಚಿಂತಿಸಬೇಡಿ, ನಾನೇ ಖುದ್ದಾಗಿ ವೈಯಕ್ತಿಕವಾಗಿ ಅದರ ಬಗ್ಗೆ ವಿಚಾರಿಸಿ ಆದಷ್ಟು ಶೀಘ್ರದಲ್ಲೇ ಆ ಕಿಟ್ ಗಳು ನಿಮ್ಮ ರಾಜ್ಯದ ರಾಜಧಾನಿಯನ್ನು ತಲುಪುವಂತೆ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ.

ನಿಮ್ಮೀ ಸಹಾಯಾಕ್ಕೆ ಧನ್ಯವಾದಗಳು. ಆದರೆ ಆ ಕಿಟ್ ಗಳು ಬೆಳಿಗ್ಗೆ ಹೊತ್ತಿಗೆ ತಲುಪಿದರೆ ಉತ್ತಮ. ಪರಿಸ್ಥಿತಿಯನ್ನು ತಹಬದಿಗೆ ತರಲು ಈ ಕಿಟ್ಗಳು ಮುಂದಿನ ಮುಂದಿನ 6 ಗಂಟೆಗಳಲ್ಲಿ ನಮಗೆ ತಲುಪಿದರೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಕೋರಿಕೊಳ್ಳುತ್ತಾರೆ

ಕೆಲ ಕ್ಷಣಗಳ ಕಾಲ ಮೌನರಾದ ಮೋದಿಯವರು, ಮುಂದಿನ ಆರು ಗಂಟೆಗಳಲ್ಲಿ ನಿಮಗೆ ತಲುಪಬೇಕೆ? ಎಂದಾಗ, ದಯವಿಟ್ಟು ಮುಂಬೈ, ಪುಣೆ ಅಥವಾ ನಾಸಿಕ್ ವಿಮಾನ ನಿಲ್ದಾಣವನ್ನು ತುರ್ತಾಗಿ ನಮಗಾಗಿ ತೆರೆದು ವಾಯುಪಡೆಯ ವಿಮಾನಗಳ ಮೂಲಕ ಕಿಟ್‌ಗಳನ್ನು ಭುವನೇಶ್ವರಕ್ಕೆ ತಲುಪಿಸಿದರೆ ಉತ್ತಮ ಎಂಬ ಸಲಹೆಯನ್ನು ನೀಡುತ್ತಾರೆ ನವೀನರು

ಸರಿ. ಚಿಂತಿಸಿದದಿರಿ ಇಂದು ಸೂರ್ಯ ಉದಯಿಸುವ ಮೊದಲೇ ನಿಮ್ಮ ಕಾರ್ಯವನ್ನು ಪೂರೈಸುವ ಜಬಾಬ್ಧಾರಿ ನಮ್ಮದು. ನೀವೀಗ ವಿಶ್ರಾಂತಿ ಪಡೆಯಿರಿ. ಶುಭ ರಾತ್ರಿ ಎಂದು ತಿಳಿಸಿ ಮೋದಿಯವರು ಕರೆಯನ್ನು ಕತ್ತರಿಸುತ್ತಾರೆ

ಆ ಕರೆ ಕತ್ತಿರುಸುತ್ತಿದ್ದಂತೆಯೇ ಪ್ರಧಾನ ಮಂತ್ರಿಗಳ ಕಛೇರಿ ಅಕ್ಷರಶಃ ಕಾರ್ಯಪ್ರವೃತ್ತವಾಗುತ್ತದೆ, ಒಂದು ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಜನರ ಹಿತದೃಷ್ಟಿಯಿಂದ ಈ ಪರಿಯಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾಗ, ದೇಶದ ಪ್ರಧಾನಿಗಳಾಗಿ ಅವರನ್ನು ನಿರಾಸೆ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಆ ಕೂಡಲೇ ಸಂಬಂಧ ಪಟ್ಟವರಿಗೆ ಅನೇಕ ಕರೆಗಳನ್ನು ಮಾಡಲಾಯಿತು. ಕೂಡಲೇ ಅಗತ್ಯವಿದ್ದ ಆದೇಶಗಳನ್ನು ಟೈಪ್ ಮಾಡಿ ನಂತರ ವಿವಿಧ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಫ್ಯಾಕ್ಸ್ ಮಾಡಲಾಯಿತು ಮತ್ತು ಅತ್ಯಂತ ದೊಡ್ಡ ಮಟ್ಟದಲ್ಲಿ ಅವಸರದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ಮಾಡಲು ಸೂಚನೆಗಳನ್ನು ನೀಡಲಾಯಿತು.

ಪಿಎಂಓ ನಿಂದ ಕರೆ ಮತ್ತು ಆದೇಶಗಳು ಸಿಗುತ್ತಿದ್ದಂತೆಯೇ ಸಂಬಂಧ ಪಟ್ಟವರೆಲ್ಲರೂ ಈ ತುರ್ತು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಆ ಮಧ್ಯರಾತ್ರಿಯಲ್ಲಿ ನಾಸಿಕ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಪುನಃ ತೆರೆಯಲಾಯಿತು. ವಾಯುಪಡೆಯ ಫ್ಲೈಟ್ ಅಲ್ಲಿಗೆ ಲ್ಯಾಂಡ್ ಆಗಿ ಪರೀಕ್ಷಾ ಕಿಟ್‌ಗಳನ್ನು ಲೋಡ್ ಮಾಡಿಕೊಂಡು ತಕ್ಷಣವೇ ಭುವನೇಶ್ವರಕ್ಕೆ ತಲುಪಿ ಅಲ್ಲಿಯ ವಿಮಾನ ನಿಲ್ದಾಣದಲ್ಲಿ ಕಿಟ್‌ಗಳನ್ನು ತಲುಪಿಸಿ ಮತ್ತೆ ಸ್ವಸ್ಥಾನಕ್ಕೆ ಯಶಸ್ವಿಯಾಗಿ ಹಿಂದಿರುಗಿತು.

ಓರಿಸ್ಸಾದಲ್ಲಿ ಬೆಳಿಗ್ಗೆ ಸೂರ್ಯ ಉದಯಿಸಿ ಮುಖ್ಯಮಂತ್ರಿಗಳು ಹಾಸಿಗೆಯನ್ನು ಬಿಟ್ಟು ಏಳುತ್ತಿದ್ದಂತೆಯೇ ಕೂರೋನಾ ಪರೀಕ್ಷಾ ಪರಿಕರಗಳು ಯಶಸ್ವಿಯಾಗಿ ತಲುಪಿದ ವಿಚಾರ ತಿಳಿಯಿತು, ಕೂಡಲೇ ಸರ್ಕಾರಿ ವಾಹನಗಳು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದವು ಮತ್ತು ಅಗತ್ಯವಿರುವ ಕಡೆ ಅಗತ್ಯವಿದ್ದಷ್ಟು ಕಿಟ್‌ಗಳನ್ನು ತಮ್ಮ ತಮ್ಮ ನಿಗಧಿತ ಸ್ಥಳಗಳಿತ್ತ ನಿರ್ಗಮಿಸಿದವು.

ಈಗ ಒರಿಸ್ಸಾ ರಾಜ್ಯದ ಮುಖ್ಯ ಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರು ತಮ್ಮ ರಾಜ್ಯ ಜನರನ್ನು ಕೋವಿಡ್ 19 ರಿಂದ ರಕ್ಷಿಸಲು ನಿರಾಳವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಭಾರತದ ಎಲ್ಲಾ ರಾಜ್ಯಗಳಿಗೆ ಸಂಪನ್ಮೂಲಗಳನ್ನು ಸಹಾಯ ಮಾಡಲು ಮತ್ತು ಸುಗಮಗೊಳಿಸಲು ಪ್ರಧಾನ ಮಂತ್ರಿಗಳು ಮತ್ತು ಅವರ ಕಛೇರಿ 24×7 ರೀತಿಯಲ್ಲಿ ಕೆಲಸ ಮಾಡುತ್ತಿರುವ ಪರಿ.

modi2

ದೇಶ ವಿಪತ್ತಿನಲ್ಲಿದ್ದಾಗ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕ್ಷುಲ್ಲಕ ರಾಜಕಾರಣ ಮಾಡದಿರುವುದು ನಿಜವಾದ ನಾಯಕತ್ವದ ಗುಣ. ಅದೇ ರೀತಿ ಸಹಾಯ ಅವಶ್ಯಕತೆ ಇರುವಾಗ ತಮ್ಮ ಹಮ್ಮು ಬಿಮ್ಮು ಬಿಟ್ಟು ನಿರ್ಭಿಡೆಯಿಂದ ಸಹಾಯ ಕೇಳುವುದು ಉತ್ತಮ ನಾಯಕತ್ವ ಗುಣವೇ. ಇಡೀ ಪ್ರಸಂಗವನ್ನು ಗಮನಿಸಿದಲ್ಲಿ ಇಬ್ಬರೂ ನಾಯಕರುಗಳಲ್ಲಿಯೂ ಸ್ವಾರ್ಥದ ವಿಚಾರಗಳಿರಲಿಲ್ಲ. ಅನಾವಶ್ಯಕ ವಾದ ವಿವಾದಗಳಿಗೆ ಆಸ್ಪದ ಕೊಡಲಿಲ್ಲ. ಏನು ಬೇಕೋ ಅದನ್ನು ಸ್ವಷ್ಟವಾಗಿ ಮತ್ತು ಅಷ್ಟೇ ವಿನಮ್ರವಾಗಿ ನವೀನರು ಕೇಳಿದರೆ ಅವರ ಪರಿಸ್ಥಿತಿಯನ್ನು ಆ ಹೊತ್ತಿನಲ್ಲಿಯೂ ನರೇಂದ್ರರು ಅರ್ಥಮಾಡಿಕೊಂಡು ಕೂಡಲೇ ಸ್ಲಂದಿಸಿ ಅದನ್ನು ಯಶ‍ಸ್ವಿಯಾಗಿ ನಿರ್ಧಾರಿತ ಸಮಯದಲ್ಲೇ ಮುಗಿಸಿ ತಮ್ಮ ಮುಂದಿನ ಕೆಲಸಗಳತ್ತ ಗಮನಹರಿಸಿದರು.

ಯಾವುದೇ ಸಮಯದಲ್ಲಿಯೇ ಆಗಲೀ ಯಾರೇ ಆಗಲಿ ಸಹಾಯವನ್ನು ಬೇಡಿ ಬಂದಾಗ, ಎಷ್ಟೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ಕರ್ತವ್ಯವನ್ನು ನಿರ್ವಹಿಸುವ ಇಂತಹ ನಾಯಕರುಗಳ ಸಂಖ್ಯೆ ಅಗಣಿತವಾಗಿ ಈ ಕೊರೋನಾ ಮಾಹಾ ಮಾರೀ ಆದಷ್ಟು ಶೀಘ್ರವೇ ಮರೆಯಾಗಿ ಜನ ಸಾಮಾನ್ಯರ ಬದುಕು ಎಂದಿನಂತೆ ಸುಗಮವಾಗಿ, ದೇಶದ ಆರ್ಥಿಕ ಪರಿಸ್ಥಿತಿ ಮತ್ತೊಮ್ಮೆ ಉತ್ತಮಗೊಳ್ಳಲಿ.

ಏನಂತೀರೀ?

ವಾಟ್ಯಾಸ್ ನಲ್ಲಿ ಬಂದ ಆಂಗ್ಲ ಲೇಖನವನ್ನು ಕನ್ನಡೀಕರಿಸಿದ್ದೇನೆ.

2 thoughts on “ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

  1. “ದೇಶ ವಿಪತ್ತಿನಲ್ಲಿದ್ದಾಗ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕ್ಷುಲ್ಲಕ ರಾಜಕಾರಣ ಮಾಡುವುದು ನಿಜವಾದ ನಾಯಕತ್ವದ ಗುಣ”

    ಮೇಲಿನ ವಾಕ್ಯದಲ್ಲಿ “ಕ್ಷುಲ್ಲಕ ರಾಜಕಾರಣ ‘ಮಾಡದಿರುವುದು’” ಎಂದಿರಬೇಕಿತ್ತು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s