ಸಾಮಾನ್ಯವಾಗಿ ಗಮನಿಸಿದರೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯ ಸಂದರ್ಶನವಾಗಲೀ ಅಥವಾ ಚುನಾವಣಾ ಭಾಷಣಗಳಿಗಿಂತ ಟ್ವಿಟರ್ನಲ್ಲಿ ಮಾಡುವ ಅವರ ಟ್ವೀಟ್ ಗಳು ಹೆಚ್ಚು ತೀಕ್ಷ್ಣವಾಗಿರುವುದನ್ನು ಗಮನಿಸಿರ ಬಹುದು. ಇದಕ್ಕೆ ಹಿಂದಿನ ರಹಸ್ಯ ಕಂಡು ಹಿಡಿಯಲು ಹೆಚ್ಚಿನ ಪರಿಶ್ರಮ ಪಡಬೇಕೇನಿಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಕಳಪೆ ನೆನಪಿನ ಶಕ್ತಿಹೊಂದಿರುವ ಸಾಧಾರಣ ವ್ಯಕ್ತಿ. ಅವರ ವಂದಿಮಾಗಧರು ಹೇಳುವಂತೆ ಆತ ಸ್ವಂತ ಬುದ್ಧಿಯನ್ನು ಹೊಂದಿಲ್ಲ. ಮತ್ತು ಭಾರತೀಯ ರಾಜಕೀಯ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕತೆ, ಧಾರ್ಮಿಕ ಆಚರಣೆಗಳು, ಆಚಾರ ವಿಚಾರದ ಬಗ್ಗೆ ಪರಿಪಕ್ವವಾದ ಉತ್ತಮ ಜ್ಞಾನವಿಲ್ಲ. ಹಾಗಾಗಿ ಅವನ ಭಾಷಣದಲ್ಲಿ ಪದೇ ಪದೇ ಒಂದೇ ವಿಷಯವನ್ನೋ ಅಥವಾ ಒಂದೇ ಶಬ್ಧವನ್ನೇ ಹಿಡಿದುಕೊಂಡು ಅದನ್ನೇ ತಿರುಗು ಮುರುಗು ಹೇಳುತ್ತಾ ಸ್ವತಃ ಗೊಂದಲಕ್ಕೆ ಒಳಗಾಗುವುದಲ್ಲದೇ ಇತರರನ್ನೂ ಗೊಂದಲದ ಗೂಡಾಗಿಸುತ್ತಾನೆ. ಅವನ ಭಾಷಣದಲ್ಲಿ ರಫೇಲ್, ಅಕ್ರಮ ಹಣಗಳಿಸುವಿಕೆ, ಪಾಕಿಸ್ತಾನದ ಮೇಲೆ ಭಯೋತ್ಪಾದನೆ ಅಥವಾ ಆರ್ಥಿಕ ದೀವಾಳಿತನ ಮತ್ತು ಇತ್ತೀಚೆಗೆ ಕೊರೋನ ಮುಂತಾದ ವಿಷಯಗಳ ಹೊರತಾಗಿ ಹೆಚ್ಚಿನ ವಿಷಯಗಳ ಕುರಿತಂತೆ ಅತನಿಗೆ ಅರಿವಿಲ್ಲ ಅವನಿಗೆ ಎಂತಹ ಅಧ್ಭುತ ಭಾಷಣವನ್ನೇ ಬರೆದುಕೊಟ್ಟರೂ ಅದನ್ನು ಸರಿಯಾಗಿ ಓದಿ ಜನರಿಗೆ ತಲುಪಿಸುವುದರಲ್ಲಿ ಸಾಕ್ಷಷ್ಟು ಎಡವಿಯಾಗಿದೆ. ವಿಶ್ವೇಶ್ವರಯ್ಯ ಎಂಬ ಪದ, ಬಸವಣ್ಣನವರ ಇವನಾರವ ಇವನಾರವ ಎಂಬ ಸರಳ ವಚನವನ್ನು ಓದಿ ಹೇಳಲೇ ತಡಬಡಾಯಿಸಿ ನಗೆಪಾಟಾಲಾಗಿದ್ದು ಎಲ್ಲರ ನೆನಪಿನಲ್ಲಿ ಹಚ್ಚಹಸಿರಾಗಿದೆ.
ಇದೇ ಕಾರಣಕ್ಕಾಗಿಯೇ ಲೋಕಸಭೆಯಲ್ಲಿ ಆತನನ್ನು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿಲ್ಲ ಎಂಬುದು ಗಮನಾರ್ಹವಾದ ಅಂಶ. ಕಳೆದ ಲೋಕಸಭೆಯಲ್ಲಿ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರೆ ಈ ಬಾರಿ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆಯಲ್ಲಿ ನಾಯಕರನ್ನಾಗಿ ಆಯ್ಕೆಮಾಡಲಾಗಿದೆ. ಲೋಕಸಭೆಯಲ್ಲಿ ಎಂತಹ ಚರ್ಚೆಯ ಸಮಯದಲ್ಲೂ ಅಟ ಮುಂದಿನ ಸಾಲಿನಲ್ಲಿ ಕುಳಿತದ್ದನ್ನು ಎಂದೂ ನೋಡಿಯೇ ಇಲ್ಲ. ಎಲ್ಲೋ ಎರಡನೆಯ ಸಾಲಿನ ಮೂಲೆಯೊಂದರಲ್ಲಿ ಅಸಹ್ಯಕರವಾಗಿ ಕಣ್ಣು ಹೊಡೆಯುತ್ತಾ (Mr. Been ನೆನಪಿಸುವಂತೆ) ಕುಳಿತುಕೊಂಡಿರುವುದೇ ಹೆಚ್ಚು.
ರಫೇಲ್ ಚರ್ಚೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ನಿರ್ಭಿಡೆಯಾಗಿ ನಿರ್ಮಲಾ ಸೀತಾರಾಮನ್ ಅವರು ಒಂದು ಗಂಟೆಗೂ ಅಧಿಕವಾಗಿ ಸಕಲ ಅಂಕಿ ಅಂಶಗಳ ಜೊತೆಗೆ ಮಾತನಾಡುತ್ತಿದ್ದರೆ ಈ ಮನುಷ್ಯ ಅದು ತನ್ನ ಪ್ರಶ್ನೆನೆಗೆ ನೀಡುತ್ತಿರುವ ಉತ್ತರ ಎಂದು ಗಮನಿಸಿಸದೇ ತನಗೆ ಸಂಬಂಧವೇ ಇಲ್ಲದಂತೆ ಒಂದೂ ಮರು ಪ್ರಶ್ನೆಯನ್ನೂ ಕೇಳದೆ ಸುಮ್ಮನಿದ್ದದ್ದನು ನೋಡಿದರೆ ಅತನಿಗೆ ಮುಂದೆ ಏನು ಮಾಡಬೇಕು ಎಂಬುದನ್ನು ಅವನ ಸ್ಕ್ರಿಪ್ಟಿನಲ್ಲಿ ಬರೆದುಕೊಟ್ಟಿರಲಿಲ್ಲ ಎಂಬುದು ಸ್ಪಷವಾಗಿ ಅರಿವಾಗುತ್ತದೆ ಮತ್ತು ಆತನಿಗೆ ರಫೇಲ್ ಒಪ್ಪಂದದ ಕುರಿತಾಗಿ ತಲೆ ಅಥವಾ ಬಾಲವೂ ಗೊತ್ತಿಲ್ಲ ಎಂಬುದು ಮತ್ತೊಂದು ಅಂಶ. ರಫೇಲ್ ಕುರಿತಂತೆ ಆತ ಮಾಡಿದ ಪ್ರತಿಯೊಂದು ಭಾಷಣದಲ್ಲಿಯೋ ಆ ಕ್ಷಣದಲ್ಲಿ ಮನಸ್ಸಿಗೆ ಬಂದಂತಹ ಒಂದೊಂದು ಅಂಕಿ ಅಂಶವನ್ನು ಹೇಳಿದನೇ ವಿನಃ ಎಲ್ಲೂ ಸರಿಯಾದ ಅಂಕಿ ಅಂಶ ಹೇಳಲೇ ಇಲ್ಲ ಎಂಬು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಅದೊಮ್ಮೆ ನೇಪಾಳಕ್ಕೆ ಭೇಟಿ ನೀಡಿದಾಗ ಅಲ್ಲಿ ಸಂದರ್ಶಕರ ಪುಸ್ತಕದಲ್ಲಿ ತನ್ನ ಸ್ವಂತ ಪ್ರತಿಕ್ರಿಯೆಯನ್ನು ಬರೆಯಲೂ ಸಾಧ್ಯವಾಗದೇ ಯಾರೋ ಬರೆದು ಕೊಟ್ಟದ್ದನ್ನು ಮೊಬೈಲಿನಿಂದ ನೋಡಿ ನೋಡಿ ಬರೆಯುತ್ತಿದ್ದ ವೀಡೀಯೋ ಅಕಾಲದಲ್ಲೇ ಸಾಕಷ್ಟು ವೈರಲ್ ಆಗಿ ರಾಹುಲ್ ಗಾಂಧಿ ಮತ್ತು ಆ ಕಾಲದ ಮಿತ್ರ ಜೋತೀರಾಧ್ಯಾ ಸಿಂಧ್ಯಾರನ್ನು ಮುಗುಜರಕ್ಕೀಡು ಮಾಡಿತ್ತು.
ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಕಳೆದ ಲೋಕಸಭೆಯಲ್ಲಿ ಏನೇನೋ ಬಡಬಡಾಯಿಸಿ ಕೊನೆಗೆ ಮೋದಿಯವರು ತನ್ನನ್ನು ಎಷ್ಟೇ ದ್ವೇಷಿಸಿದರೂ ನಾನು ವಯಕ್ತಿಕವಾಗಿ ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ತೋರಿಸಲು ಇದ್ದಕ್ಕಿದ್ದಂತೆಯೇ ಮೋದಿಯವರನ್ನು ಎಲ್ಲರ ಸಮ್ಮುಖದಲ್ಲಿ ಅಪ್ಪಿಕೊಂಡು ನಗೆಪಾಟಾಲು ಆಗಿದ್ದು ಇದೇ ವ್ಯಕ್ತಿಯೇ.
ಇನ್ನು ಪ್ರತಿಯೊಂದು ಸಂದರ್ಶನಗಳಲ್ಲಿಯೂ ಒಂದೇ ಪದವನ್ನು ಹಿಡಿದು ಅದನ್ನೇ ಜಗ್ಗಿ ಜಗ್ಗೀ ಹೇಳುವ ಚಾಳಿ ಬಲು ಮೋಜಾಗಿರುತ್ತದೆ. ಅರ್ನಾಬ್ ಗೋಸ್ವಾಮಿಯ ಸಂದರ್ಶನವೊಂದರಲ್ಲಿ ಯಾವುದೇ ಪ್ರಶ್ಣೆಯನ್ನು ಕೇಳಿದರೂ ಮಹಿಳಾ ಸಬಲೀಕರಣ (women empowerment) ಎಂದು ಬಡಬಡಾಯಿಸಿದರೆ, ಒಂದು ವಾರದ ಕೆಲಗೆ ನಡೆಸಿದ online ಪತ್ರಿಕಾ ಗೋಷ್ಟಿಯಲ್ಲಿ strategy ಪದದ ಹೊರತಾಗಿ ಇನ್ನೇನೂ ಹೇಳಿದ್ದು ಅರ್ಥವೇ ಆಗಲಿಲ್ಲ.
ಆದರೇ ಟ್ವೀಟರ್ ಹ್ಯಾಂಡಲ್ ಮಾಡುವ ವಿಷಯದಲ್ಲಿ ಇದೇ ರೀತಿಯಾಗಿ ತೆಗಳಲು ಸಾಧ್ಯವಿಲ್ಲ. ನಮ್ಮ ಹಳೆಯ ಕಂಪನಿಯಲ್ಲಿದ್ದ ಮ್ಯಾನೇಜರ್ ಒಬ್ಬರು ಕಛೇರಿಯಲ್ಲಿ ಮೀಟಿಂಗಿನಲ್ಲಿ ಮಾತನಾಡುವಾಗ ಅಥವಾ ಕಛೇರಿಯಲ್ಲಿದ್ದಾಗ ಕಳುಹಿಸುತ್ತಿದ್ದ ಈ ಮೇಲ್ ಮತ್ತು ಮನೆಗೆ ಹೋದ ಮೇಲೆ ಕಳುಹಿಸುತ್ತಿದ್ದ ಈ ಮೇಲ್ ಗಳಲ್ಲಿ ಅಜಗಜಾಂತರ ವೆತ್ಯಾಸ ವಿರುತ್ತಿತ್ತು. ಕಭೇರಿಯಲ್ಲಿದ್ದಾಗ ಅವರ ಸಂವಹನೆ ಅತ್ಯಂತ ಪೇಲವವಾಗಿದ್ದರೆ, ತಡರಾತ್ರಿಗಳಲ್ಲಿ ಕಳುಹಿಸುತ್ತಿದ್ದ ಈ ಮೇಲ್ ಗಳು ಉತ್ತಮ ಅಂಶಗಳಿಂದ ಕೂಡಿರುತ್ತಿದ್ದವು. ಕೆಲವು ದಿನಗಳ ನಂತರ ತಿಳಿದು ಬಂದ ವಿಷಯವೇನೆಂದರೆ, ರಾತ್ರಿ ಕಳುಹಿಸುತ್ತಿದ್ದ ಬಹುತೇಕ ಈ ಮೇಲ್ ಗಳನ್ನು ಅವರ ಧರ್ಮಪತ್ನಿಯವರು ಇವರ ಪರವಾಗಿ ಬರೆಯುತ್ತಿದ್ದರು. ಇದೇ ಸಂಗತಿ ರಾಹುಲ್ ಅವರ ಟ್ವಿಟರ್ ಖಾತೆಯ ವಿಷದಲ್ಲೂ ನಿಜವಾಗಿದೆ. ಸ್ವಂತ ಬುದ್ಧಿಯಿಂದ ಒಂದು ಸಂತಾಪ ಸೂಚಕ ವಾಕ್ಯಗಳನ್ನು ಬರೆಯಲು ಬಾರದ ರಾಹುಲ್ ಟ್ವಿಟರ್ ಖಾತೆಯನ್ನು ಹೇಗೆ ಸಂಬಾಳಿಸಬಲ್ಲ?
ಆತನ ಟ್ವಿಟರ್ ಖಾತೆಯನ್ನು ಸಂಬಾಳಿಸಲೆಂದೇ ಕೆಲವು ಅದ್ಭುತ ಸಹಾಯಕರನ್ನು ನೇಮಕಮಾಡಿಕೊಂಡಿದ್ದಾನೆ. ಕೆಲವು ವರ್ಷಗಳ ಹಿಂದೆ ಕನ್ನಡದ ಸಿನಿಮಾ ನಟಿ ರಮ್ಯಾಳ ನೇತೃತ್ವದ ತಂಡ ಅದನ್ನು ನೋಡಿಕೊಳ್ಳುತ್ತಿತ್ತು. ಆಕೆ ಆರಂಭದಲ್ಲಿ ಅತ್ಯಂತ ತೀಕ್ಷ್ಣವಾಗಿ ಒಂದರ ಮೇಲೊಂದು ಟ್ವೀಟ್ ಮಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದಳಾದರೂ ತನ್ನ ಆಕ್ರಮಣಕಾರೀ ಧೋರಣೆಯಿಂದ ಅನಗತ್ಯ ವಿಚಾರಗಳನ್ನು ಮೈಮೇಲೆ ಎಳೆದುಕೊಂಡು ತಾನೂ ವಿವಾದಕ್ಕೊಳಗಾಗಿದ್ದಲ್ಲದೇ ರಾಹುಲ್ ಮರ್ಯಾದೆಯನ್ನೂ ಹಾಳು ಮಾಡಿದ ಪರಿಣಾಮ ಬಂದ ದಾರಿಗೆ ಸುಂಕವಿಲ್ಲದಂತೆ ಆಕೆಯನ್ನು ಹೊರಗೆ ಕಳುಹಿಸಲಾಯಿತು. ಈಗಂತೂ ಆಕೆಯ ಇರುವಿಕೆಯೇ ಯಾರಿಗೂ ಅರಿವಿಲ್ಲ.
ಎರಡು ದಿನಗಳ ಮಂಚೆ ಆರೋಗ್ಯ ಸೇತು ಆ್ಯಪ್ ಬಗ್ಗೆ ಭದ್ರತಾ ಕಳವಳ ವ್ಯಕ್ತಪಡಿಸುವ ಟ್ವೀಟ್ ಮಾಡಿದ ರಾಹುಲ್, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಖಾಸಗಿ ಆಪರೇಟರ್‌ಗೆ ಹೊರಗುತ್ತಿಗೆ ನೀಡುವ ಮೂಲಕ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ. ಇದರಿಂದ ಗಂಭೀರವಾಗಿ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಯನ್ನು ಹೆಚ್ಚಿಸಿದೆ ಎಂದಿದ್ದಲ್ಲದೇ, ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ, ಆದರೆ ನಾಗರಿಕರನ್ನು ಅವರ ಒಪ್ಪಿಗೆಯಿಲ್ಲದೆ ಪತ್ತೆಹಚ್ಚಲು ಭಯವನ್ನು ಬಳಸಬಾರದು ಎಂದು ಹೇಳಿದರು
ನಿಜ ಹೇಳಬೇಕೆಂದರೆ ಕೋವಿಡ್ -19 ಸೋಂಕಿನ ಅಪಾಯವಿದೆಯೇ ಎಂದು ಗುರುತಿಸಲು ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಆರೋಗ್ಯಸೇತು ಆಪ್ ಬಹಳಷ್ಟು ಸಹಾಯ ಮಾಡುತ್ತದೆ. ಕರೋನವೈರಸ್ ಮತ್ತು ಅದರ ರೋಗಲಕ್ಷಣಗಳನ್ನು ತಪ್ಪಿಸುವ ಮಾರ್ಗಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಇದು ಜನರಿಗೆ ಒದಗಿಸುತ್ತದೆ. ಈ ಆಪ್ ಜನರು ಸ್ವಪ್ರೇರಿತವಾಗಿ ಅಳವಡಿಸಿಕೊಂಡಿದ್ದಾರೆ ಹೊರತು ಯಾವುದೇ ಬಳವಂತದ ಪ್ರಕ್ತಿಯೆಯಿಂದಲ್ಲಾ ಎಂದು ಕೇಂದ್ರ ಸರ್ಕಾರದ ಹಿರಿಯ ಮಂತ್ರಿಯೊಬ್ಬರು ಹೇಳುತ್ತಿದ್ದಂತೆಯೇ ಅದರ ಬಗ್ಗೆ ರಾಹುಲ್ ಗಪ್ ಚುಪ್.
ಸ್ವಂತ ಬುಧ್ದಿ ಇಲ್ಲದೇ ಕಂಡವರು ಬರೆದುಕೊಟ್ಟಿದ್ದನ್ನೋ ಇಲ್ಲವೇ ಯಾರೋ ಹೇಳಿಕೊಟ್ಟಿದ್ದನ್ನೇ ಗಿಳಿ ಪಾಠದಂತೆ ಒಪ್ಪಿಸುತ್ತಾ ಎಷ್ಟು ದಿನ ಅಂತಾ ಜನರನ್ನು ಬೇಸ್ತು ಗೊಳಿಸಬಹುದು? ಇನ್ನೂ ಹತ್ತಾರು ತಲೆಮಾರು ಕೂತು ತಿಂದರೂ ಕರಗಲಾರದಷ್ಟು ಆಸ್ತಿ ಪಾಸ್ತಿ ಇದೆ. ಸುಮ್ಮನೆ ಒಗ್ಗಿಬಾರದ ರಾಜಕಾರಣದಲ್ಲಿ ಮುಂದುವರಿಯುವ ಬದಲು ನೆಮ್ಮದಿಯಾಗಿ ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ದೇಶ ವಿದೇಶ ಸುತ್ತುತ್ತಾ ಕಾಲ ಕಳೆದರೆ ಅತನಿಗೂ ನೆಮ್ಮದಿ ದೇಶಕ್ಕೂ ಸಂವೃದ್ದಿ.
ಏನಂತೀರೀ?