ಉತ್ತರ ಭಾರರದ ಕಡೆ ಎಲ್ಲೇ ಹೋದರೂ ಊಟಕ್ಕೆ ನಮಗೆ ರೊಟಿ ಮತ್ತು ದಾಲ್ ಸಿಗುತ್ತದೆ. ಅನ್ನ ತಿನ್ನಬೇಕು ಎಂದು ಬಯಸಿದಲ್ಲಿ ಥಟ್ ಅಂತ ಅವರು ಮಾಡಿಕೊಡುವುದೇ ದಾಲ್ ಕಿಚಡಿ. ಅದೇ ಉತ್ತರ ಭಾರತದ ದಾಲ್ ಖಿಚಡಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸುಕೊಳ್ಳೋಣ.
ಸಾ ಸುಮಾರು 2-3 ಜನರಿಗೆ ಸಾಕಾಗುವಷ್ಟು ದಾಲ್ ಖಿಚಡಿ ತಯಾರಿಸಲು
ಬೇಕಾಗುವ ಸಾಮಗ್ರಿಗಳು
• ತೊಗರಿ ಬೇಳೆ- ½ ಬಟ್ಟಲು
• ಹೆಸರು ಬೇಳೆ- ½ ಬಟ್ಟಲು
• ಅಕ್ಕಿ / ಡಾಲಿಯ – 1 ಬಟ್ಟಲು
• ಜೀರಿಗೆ – 1 ಚಮಚ
• ಸಾಸಿವೆ- 1/4 ಚಮಚ
• ಅಚ್ಚ ಖಾರದ ಪುಡಿ 1 ಚಮಚ
• ಗರಂ ಮಸಾಲ ಪುಡಿ 1 ಚಮಚ
• ಚಿಟಿಕೆ ಅರಿಶಿನದ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ತುಪ್ಪ-2 ಚಮಚ
ಬೇಕಾಗುವ ತರಕಾರಿಗಳು
• ಮಧ್ಯಮ ಗಾತ್ರದ ಕತ್ತರಿಸಿದ ಈರುಳ್ಳಿ-1
• ಮಧ್ಯಮ ಗಾತ್ರದ ಕತ್ತರಿಸಿದ ಟೊಮ್ಯಾಟೋ-1
• ಹೆಚ್ಚಿದ ಕ್ಯಾರೆಟ್ – 1/2
• ಕತ್ತರಿಸಿದ ಹಸೀ ಮಣಸಿನಕಾಯಿ – 3-4
• ಒಣ ಮಣಸಿನಕಾಯಿ – 2-3
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಯ
• ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
• ಕರಿಬೇವಿನ ಸೊಪ್ಪು – 2 ಕಡ್ಡಿ
ಮಾಡುವ ವಿಧಾನ :
• ತೊಗರೀ ಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು.
• ಕುಕ್ಕರಿಗೆ ಎರಡು ಚಮಚ ತುಪ್ಪಾ ಹಾಕಿ ಅದು ಕಾದ ನಂತರ ಒಂದು ಚಮಚ ಸಾಸಿವೆ ಹಾಕಿ ಚಟ ಪಟ ಸಿಡಿದ ನಂತರ ಕಾಲು ಚಮಚ ಜೀರಿಗೆ ಹಾಕಬೇಕು
• ಈಗ ಕತ್ತರಿಸಿಟ್ಟು ಕೊಂಡಿದ್ದ ಹಸೀಮೆಣಸಿನಕಾಯಿ, ಕರಿಬೇವು ಸೊಪ್ಪು ಮತ್ತು ಒಣಮೆಣಸಿನಕಾಯಿ ಹಾಕಿ ಕೊಂಡು ಬಾಡಿಸಿಕೊಳ್ಳಬೇಕು
• ಈಗ ಚಿಟಿಕೆ ಅರಿಶಿನ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಬಾಡಿಸಿಕೊಂಡು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿಕೊಳ್ಳಬೇಕು
• ಈಗ ಹೆಸರುಬೇಳೆಯನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು
• ಈಗ ಕತ್ತರಿಸಿಟ್ಟುಕೊಂಡಿದ್ದ ಕ್ಯಾರೆಟ್ ಮತ್ತು ಟೊಮ್ಯಾಟೋ ಹಾಕಿ ಬಾಡಿಸಿ ಕೊಳ್ಳಬೇಕು.
• ಈಗ ಕಾಲು ಚಮಚ ಗರಂ ಮಸಾಲ ಮತ್ತು ಅರ್ಧ ಚಮಚ ಅಚ್ಚ ಖಾರದ ಪುಡಿ ಹಾಕಿ ಬಾಡಿಸಿಕೊಳ್ಳ ಬೇಕು.
• ಈಗ ತೊಳೆದಿಟ್ಟು ಕೊಂಡಿಡ್ದ ತೊಗರೀ ಬೇಳೆ ಬಾಡಿಸಿಕೊಂಡು ಎರಡು ನಿಮಿಷಗಳ ನಂತರ ತೊಳೆದಿಟ್ಟುಕೊಂಡಿದ್ದ ಅಕ್ಕಿಯನ್ನು ಹಾಗಬೇಕು.
• ಸುಮಾರು ಮೂರ್ನಾಲ್ಕು ಲೋಟ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕತ್ತರಿಸಿಕೊಂಡಿದ್ದ ಕೊತ್ತಂಬರಿ ಸೊಪ್ಪು ಸೇರಿಸಿ ಐದಾರು ವಿಶಿಲ್ ಬರುವ ವರೆಗೂ ಕುಕ್ಕರ್ ಕೂಗಿಸಿದಲ್ಲಿ ರುಚಿ ರುಚಿಯಾದ ದಾಲ್ ಖಿಚಡಿ ಸಿದ್ದ.
ಸಾಂಪ್ರದಾಯಿಕವಾಗಿ ಉತ್ತರ ಭಾರತದ ದಾಲ್ ಖಿಚಡಿ ಈ ವೀಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಇಷ್ಟ ಲೇಖನ ಮತ್ತು ವೀಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ Like ಮಾಡಿ. Share ಮಾಡಿ, Subscribe ಆಗಿ
ಏನಂತೀರೀ?
ಮನದಾಳದ ಮಾತು : ಮನೆಯಲ್ಲಿಯೇ ಲಭ್ಯವಿರುವಂತಹ ಪದಾರ್ಥಗಳನ್ನೇ ಬಳೆಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ಮಾಡುವ ಮಾಡಬಹುದಾದ ರುಚಿ ರುಚಿಯಾದ ಅಡುಗೆಯೇ ದಾಲ್ ಖಿಚಡಿ. ತುಪ್ಪ ಅಕ್ಕಿ, ತೋಗರೀ ಬೇಳೆ, ಹೆಸರು ಬೇಳೆ ಜೀರಿಗೆ ಸೇರಿಸಿ ಮಾಡುವ ಈ ಆಡುಗೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಠಿಕಕರವೂ ಹೌದು. ಇದನ್ನು ಮೊಸರು ಬಜ್ಜಿ (ರಾಯತ)ದೊಡನೆ ನೆಂಚಿಕೊಂಡು ತಿಂದರೆ ಇನ್ನೂ ಮಜವಾಗಿರುತ್ತದೆ.
#ಅನ್ನಪೂರ್ಣ
#ದಾಲ್ ಖಿಚಡಿ
#ದಾಲ್-ಖಿಚಡಿ
#ಏನಂತೀರೀ YouTube