ರಾಗಿ ಹಾಲ್ಬಾಯಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ ಮತ್ತು ಅಷ್ಟೇ ರುಚಿಕರವಾದ ಸಿಹಿ ಪದಾರ್ಧವಾದ ರಾಗಿ ಹಾಲ್ಬಾಯಿಯನ್ನು ಬಾಯಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸುಕೊಳ್ಳೋಣ.

ಸುಮಾರು 8-10 ಜನರಿಗೆ ಸಾಕಾಗುವಷ್ಟು ರಾಗಿ ಹಾಲ್ಬಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಕೆಂಪು ರಾಗಿ- 1 ಪಾವು
• ಉಂಡೇ ಬೆಲ್ಲ – 1 ಪಾವು
• ತುಪ್ಪ – 1 ಬಟ್ಟಲು
• ಏಲಕ್ಕಿ ಪುಡಿ – 1 ಚಮಚ
• ಹುರಿದು ಪುಡಿ ಮಾಡಿದ ಬಾದಾಮಿ ಮತ್ತು ಗೊಡಂಬಿ – 1/2 ಕಪ್

ರಾಗಿ ಹಾಲ್ಬಾಯಿ ಮಾಡುವ ವಿಧಾನ :

halbai2

  • ಕೆಂಪು ಬಣ್ಣದ ರಾಗಿಯನ್ನು ಚೆನ್ನಾಗಿ ತೊಳೆದು ರಾತ್ರಿ ಇಡೀ ನೆನೆಸಿಡ ಬೇಕು
  • ಹಾಲ್ಬಾಯಿ ಮಾಡುವ ಕೆಲ ಸಮಯಕ್ಕೆ ಮಂಚೆ ಮಿಕ್ಸಿಯಲ್ಲಿ ನೆನಸಿದ ರಾಗಿಯನ್ನು ಚೆನ್ನಾಗಿ ರುಬ್ಬಿಕೊಂಡು ರಾಗಿ ಹಾಲನ್ನು ಶೋಧಿಸಿಟ್ಟು ಕೊಳ್ಳಬೇಕು.
  • ಒಂದು ದಪ್ಪ ತಳದ ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ತುಪ್ಪವನ್ನು ಹಾಕಿ ಕಾಯಿಸಬೇಕು
  • ತುಪ್ಪ ಸ್ವಲ್ಪ ಬಿಸಿಯದ ನಂತರ ರುಬ್ಬಿಟ್ಟುಕೊಂಡಿದ್ದ ರಾಗೀ ಹಾಲನ್ನು ಬಾಣಲೆಗೆ ಹಾಕಿ ಅದಕ್ಕೆ ಸಮಪ್ರಮಾಣದಲ್ಲಿ ಪುಡಿ ಮಾಡಿದ ಉಂಡೆ ಬೆಲ್ಲವನ್ನು ಸೇರಿಸಿ ದೊಡ್ಡ ಉರಿಯಲ್ಲಿ ಕುದಿಯಲು ಬಿಡಬೇಕು
  • ಕಾಲ ಕಾಲಕ್ಕೆ ಮಿಶ್ರಣ ಗಂಟಾಗದಂತೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಕೈ ಆಡಿಸುತ್ತಲೇ ಇರಬೇಕು
  • ಮಧ್ಯ ಮಧ್ಯದಲ್ಲಿ ಒಂದೆರಡು ಬಾರಿ ಎರೆಡೆರಡು ಚಮಚ ತುಪ್ಪವನ್ನು ಸೇರಿಸುತ್ತಿರ ಬೇಕು
  • ಸುಮಾರು ಅರ್ಧ ಮುಕ್ಕಾಲು ಗಂಟೆಗಳಷ್ಟು ಕಾಲ ಸಣ್ಣ ಉರಿಯಲ್ಲಿ ಮಿಶ್ರಣವನ್ನು ಕೈಯಾಡಿಸುತ್ತಲೇ ಕುದಿಸುತ್ತಿದ್ದಲ್ಲಿ ಬಾಣಲಿಯಲ್ಲಿ ಕುದಿಯುತ್ತಿರುವ ಮಿಶ್ರಣ ಗಟ್ಟಿಯಾಗುತ್ತಾ ಪಾಕದ ರೂಪಕ್ಕೆ ಬರುತ್ತದೆ.
  • ಒಂದು ಅಗಲವಾದ ತಟ್ಟೆಗೆ ತುಪ್ಪಾ ಸವರಿ ಗಟ್ಟಿಯಾದ ಪಾಕವನ್ನು ಸುರಿದು ಐದು ನಿಮಿಷಗಳ ನಂತರ ಬೇಕಾದ ಆಕಾರದಲ್ಲಿ ಚಾಕುವಿನ ಸಹಾಯದಿಂದ ಕತ್ತರಿಸಿದಲ್ಲಿ ರುಚಿ ರುಚಿಯಾದ ರಾಗಿ ಹಾಲ್ಬಾಯ್ ಸಿದ್ದ.

ಸಾಂಪ್ರದಾಯಿಕವಾಗಿ ರಾಗಿ ಹಾಲ್ಬಾಯಿ ತಯಾರಿಸುವುದನ್ನು ಈ ವೀಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ

ಇಷ್ಟ ಲೇಖನ ಮತ್ತು ವೀಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ Like ಮಾಡಿ. Share ಮಾಡಿ, Subscribe ಆಗಿ

ಏನಂತೀರೀ?

ಮನದಾಳದ ಮಾತು : ಕೇವಲ ರಾಗಿಯಲ್ಲದೆ, ಗೋಧಿ, ಚಿರೋಟಿ ರವೆ ಮತ್ತು ಅಕ್ಕಿಯನ್ನು ಬಳಸಿಯೂ ರುಚಿಕರವಾದ ಹಾಲ್ಬಾಯಿಯನ್ನು ಇದೇ ರೀತಿಯಲ್ಲಿ ತಯಾರಿಸಬಹುದಾಗಿದೆ. ರಾಗಿ ಮತ್ತು ಬೆಲ್ಲವನ್ನು ಬಳೆಸಿ ಮಾಡಿದ ಈ ರುಚಿಯಾದ ಸಿಹಿ ಪದಾರ್ಥವನ್ನು ಎಲ್ಲರೂ ತಿನ್ನ ಬಹುದಾಗಿದೆ

#ಅನ್ನಪೂರ್ಣ
#ರಾಗಿ ಹಾಲ್ಬಾಯಿ
#ಹಾಲ್ವಾಯಿ
#ಏನಂತೀರೀ YouTube

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s