ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಸಂಬಂಧವೇನು?

rahul4ಯಾವುದೇ ದೇಶದಲ್ಲಿ ಆಡಳಿತ ಪಕ್ಷ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಮರ್ಥವಾದ ವಿರೋಧ ಪಕ್ಷಗಳ ಅಗತ್ಯವೂ ಇರುತ್ತದೆ. ವಿರೋಧ ಪಕ್ಷಗಳು ಸದಾ ಕಾವಲು ನಾಯಿಯಂತೆ ಕಾಯುತ್ತಾ ಆಡಳಿತ ಪಕ್ಷದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ , ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷದ ನಡೆಗಳನ್ನು ಎಚ್ಚರಿಸುವ ಕಾರ್ಯ ನಿರ್ವಹಿಸುತ್ತದೆ. ದುರಾದೃಷ್ಟವಷಾತ್ ಕಳೆದ ಆರು ವರ್ಷಗಳಿಂದ, ಭಾರತ ದೇಶದಲ್ಲಿ ನಮರ್ಥವಾದ ವಿರೋಧಪಕ್ಷ ಅಥವಾ ನಾಯಕನ ಕೊರತೆ ಎದ್ದು ಕಾಣುತ್ತಿದ್ದೆ. ಪ್ರಾದೇಶಿಕ ಪಕ್ಷಗಳು ಕೇವಲ ತಮ್ಮ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಹೋರಾಡುತ್ತಿವೆಯೇ ಹೊರತು ಸಮಗ್ರ ದೇಶದ ನೇತೃತ್ವ ವಹಿಸಬಲ್ಲ ಸಮರ್ಥ ವಿರೋಧ ಪಕ್ಷದ ನಾಯಕತ್ವ ಇಲ್ಲವಾಗಿದೆ. ಅತ್ಯಂತ ಹಿರಿಯ ಪಕ್ಷವಾದ ಕಾಂಗ್ರೆಸ್ ರಾಹುಲ್ ಗಾಂಧಿಯಂತಹ ಅತ್ಯಂತ ಕಳಪೆ ನಾಯಕತ್ವವನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಈ ವಿಷಯ ಅವರ ತಾಯಿ ಹಾಗೂ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ತಿಳಿದಿರುವುದರಿಂದ ತನ್ನ ಮಗನ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಸಲಹೆಗಾರರನ್ನು ಮತ್ತು ಹಿರಿಯರ ತಂಡವನ್ನು ರಚಿಸಲು ಹೆಣಗಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಕಳೆದ ವಾರದ ರಾಹುಲ್ ಗಾಂಧಿ ಮತ್ತು ಮಾಜೀ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ನಡುವಿನ ಸಂದರ್ಶನ ಒಂದಾಗಿದೆ.

rahuul1ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಇತ್ತೀಚಿನ ಸಂದರ್ಶನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅವರಿಬ್ಬರಿಗೂ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವಂತಹ ಪರಿಸ್ಥಿತಿಯಲ್ಲಿ ಇದ್ದು ಇಬ್ಬರೂ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುವ ಇಲ್ಲವೇ ಪರಸ್ಪರ ಸ್ವಹಿತಾಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತಿದೆ. ಇವರಿಬ್ಬರ ಸಂಬಂಧವನ್ನು ಅತ್ಯಂತ ಕಠಿಣ ರೀತಿಯಲ್ಲಿ ಹೇಳಬೇಕೆಂದರೆ ಶತ್ರುಗಳ ಶತ್ರು ನಮ್ಮ ಸ್ನೇಹಿತ ಮತ್ತು ಶತ್ರುಗಳ ಸ್ನೇಹಿತ ನಮ್ಮ ಶತ್ರು ಎನ್ನುವ ತತ್ವವನ್ನು ಆಧರಿಸಿದಂತಿದೆ. ರಘುರಾಮ್ ರಾಜನ್ ಅವರು ಸೆಪ್ಟೆಂಬರ್ 2013 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ. ಅವರ ಉತ್ತಮ ಸಂಬಂಧವೇ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಕಗೊಳ್ಳಲು ಸಹಾಯ ಮಾಡಿದೆ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ರಿಸರ್ವ್ ಬ್ಯಾಂಕಿನ ಗರರ್ನರ್ ಅವಧಿಯು 3 ವರ್ಷಗಳದ್ದಾಗಿದ್ದು ಅವರ ಮೊದಲ ಒಂದೂವರೆ ವರ್ಷದ ಅಧಿಕಾರಾವಧಿಯು ಕಾಂಗ್ರೆಸ್ ಆಳ್ವಿಕೆಯಲ್ಲಿತ್ತು ಮತ್ತು ಎಲ್ಲವೂ ಸುಗಮವಾಗಿಯೇ ಇತ್ತು. ಕೇಂದ್ರ ಸರ್ಕಾರದೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದರು. ನಂತರದ ಸಮಯದಲ್ಲಿ ಮೋದಿ ಸರ್ಕಾರ ಮತ್ತು ರಘುರಾಮ್ ರಾಜನ್ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗತೊಡಗಿದವು. ಇದರ ಹಿಂದಿನ ಕಾರಣ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಅಥವಾ ನಿರ್ದೇಶನ ಎನ್ನುವುದನ್ನು ಎಲ್ಲರೂ ಗಮಸಿದ ಅಂಶವಾಗಿದೆ.

ರಿಸರ್ವ್ ಬ್ಯಾಂಕಿನ ಗವರ್ನರ್ ಅವರ ಆಡಳಿತಾವಧಿಯ 3 ವರ್ಷಗಳು ಪೂರ್ಣವಾದ ನಂತರ ಸಾಮಾನ್ಯವಾಗಿ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ಅನೇಕ ಬಾರಿ ಇದನ್ನೇ ಅನುಸರಿಸಿಕೊಂಡು ಬರಲಾಗಿದೆ. ಆದರೆ, ರಘುರಾಮ್ ರಾಜನ್ ಅವರ ಕೆಲಸದಿಂದ ಮೋದಿ ಸರ್ಕಾರ ತೃಪ್ತರಾಗದ ಕಾರಣ ಅವರಿಗೆ ಸೇವೆ ವಿಸ್ತರಣೆ ಮಾಡಲಿಲ್ಲ. ಈನಡೆಯಿಂದ ತೃಪ್ತರಾಗದ ಕಾಂಗ್ರೆಸ್ ನೇತೃತ್ವದ ಎಲ್ಲಾ ವಿರೋಧ ಪಕ್ಷಗಳು ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದವು ಮತ್ತು ರಘುರಾಮ್ ರಾಜನ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಆಗ್ರಹಪಡಿಸಿದರೂ ಮೋದಿ ಸರ್ಕಾರ ಇದರ ಬಗ್ಗೆ ಮಣೆ ಹಾಕಲಿಲ್ಲ.

ಭಾರತದಲ್ಲಿ, ಅಧಿಕಾರಶಾಹಿ ವರ್ಗವು ಸ್ವಾತಂತ್ರವಾಗಿ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಸಂಪ್ರದಾಯವಿದ್ದರೂ ಬಹುತೇಕ ಅಧಿಕಾರಿಗಳು ಒಂದಲ್ಲಾ ಒಂದು ರಾಜಕೀಯ ಪಕ್ಷದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲು ಬಯಸುತ್ತಾರೆ ಮತ್ತು ಸಂಬಂಧವನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಪಸ್ತುತ ಆಡಳಿತ ಪಕ್ಷದೊಂದಿಗೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ಕಾಂಗ್ರೇಸ್ ಮನಸ್ಸಿನ ರಘುರಾಮ್ ರಾಜನ್, ಬಿಜೆಪಿ ಸರ್ಕಾರದೊಂದಿಗೆ ಇದೇ ಇದೇ ಸಂಪ್ರದಾಯವನ್ನು ಅನುಸರಿಸಲು ಸಾಧ್ಯವಾಗಲಿಲ್ಲವಾದ ಕಾರಣ ಅವರ ವೃತ್ತಿಜೀವನ ಅಲ್ಲಿಗೇ ಮೊಟಕಾಯಿತು.

ಸರ್ಕಾರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಒಬ್ಬ ಅಧಿಕಾರಿ ಎಷ್ಟು ಚೆನ್ನಾಗಿ ವೃತ್ತಿ ಜೀವನದಲ್ಲಿ ಮುಂದುವರೆಯಬಲ್ಲರು ಎನ್ನುವುದಕ್ಕೆ ಮನ್ ಮೋಹನ್ ಸಿಂಗ್ ಅವರೇ ಉತ್ತಮ ಉದಾಹರಣೆ. ಅವರು ಹಣಕಾಸು ಕಾರ್ಯದರ್ಶಿ, ರಿಸರ್ವ್ ಬ್ಯಾಂಕಿನ ರಾಜ್ಯಪಾಲರು, ಯೋಜನಾ ಆಯೋಗದ ಉಪಾಧ್ಯಕ್ಷರು, ಮತ್ತು ನಂತರ ಹಣಕಾಸು ಸಚಿವರು ಮತ್ತು ಅಂತಿಮವಾಗಿ ಪ್ರಧಾನ ಮಂತ್ರಿಯ ಹುದ್ದೆಯನ್ನೂ ಅಲಂಕರಿಸಿದರು. ಅವರು ನಿರ್ವಹಿಸಿದ ಯಾವುದೇ ಹುದ್ದೆಗಳಲ್ಲಿಯೂ ಎಂದಿಗೂ ಸರ್ಕಾರದೊಂದಿಗೆ ಯಾವುದೇ ವಿವಾದಗಳನ್ನು ಮಾಡಿಕೊಂಡಿರಲಿಲ್ಲ. ಅವರ ನಡವಳಿಕೆಯಲ್ಲಿ ನಮ್ರತೆ ಮತ್ತು ಸ್ವಾಮಿಭಕ್ತಿ ಗಮನಾರ್ಹವಾಗಿದ್ದ ಕಾರಣವೇ ಅವರು ಯಶಸ್ಸಿನ ತುತ್ತ ತುದಿಯನ್ನು ಮುಟ್ಟಿದರು.

ರಘುರಾಮ್ ರಾಜನ್ ನಿಸ್ಸಂಶಯವಾಗಿ ಬಹಳ ಬುದ್ಧಿವಂತ ವ್ಯಕ್ತಿ ಮತ್ತು ಉತ್ತಮ ಅರ್ಥಶಾಸ್ತ್ರಜ್ಞ, ಆದರೆ ಅವರು ದೇಶದ ಆರ್ಥಿಕತೆಗಿಂತ ಅರ್ಥಶಾಸ್ತ್ರಜ್ಞರಾಗಿ ತಮ್ಮ ಚಿತ್ರ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಬ್ಯಾಂಕಿಂಗ್ ಸಮುದಾಯವು ಸಾಮಾನ್ಯವಾಗಿ ಯಾವುದೇ ಒಳ್ಳೆಯ ಕೆಲಸಕ್ಕಾಗಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಸಮತೋಲಿತ ಮತ್ತು ನಿಷ್ಪಕ್ಷಪಾತವಾಗಿ ಉಳಿಯುವುದು ಅವನಿಗೆ ತಿಳಿದಿಲ್ಲ ಎಂಬುದು ಒಂದು ವಿಷಯ ಬಹಳ ಸ್ಪಷ್ಟವಾಗಿದೆ. ಇದನ್ನೆಲ್ಲ ಅವರು ತಿಳಿದಿದ್ದರೆ, ಬಹುಶಃ ಇಂದು ಅವರು ದೇಶದ ಹಣಕಾಸು ಮಂತ್ರಿಯಾಗಬಹುದಿತ್ತು?

ಪ್ರಧಾನಿ ಮೋದಿಯವರೂ ಸಹಾ ಹಲವಾರು ವ್ಯಕ್ತಿಗಳಿಂದ ಸಲಹೆ ಸೂಚನೆಯನ್ನು ಸ್ವೀಕರಿಸುತ್ತಾರಾದರೂ ಅವರು ವ್ಯಕ್ತಿ ಆರಾಧನೆಯನ್ನು ತೋರಿಸಿದ ಉದಾಹರಣೆ ಎಲ್ಲೂ ಕಾಣಸಿಗುವುದಿಲ್ಲ. ಅವರು ಬುದ್ಧಿವಂತ ಮತ್ತು ಸಮರ್ಥ ಜನರಿಗೆ ಸಾಕಷ್ಟು ಗೌರವವನ್ನು ನೀಡುತ್ತಾರೆ ಹಾಗಾಗಿ ಕಾಂಗ್ರೆಸ್ ಸರ್ಕಾರದ ಅನೇಕ ನಿವೃತ್ತ ದಕ್ಷ ಮತ್ತು ಸಮರ್ಥ ಅಧಿಕಾರಿಗಳನ್ನು ಬದಲಿಸದೇ, ಅವರನ್ನು ಕರೆದು ಅವರನ್ನು ಮಾತನಾಡಿಸಿ ಅವರಲ್ಲಿ ಸ್ಪೂರ್ತಿ ತುಂಬಿ ಅದೇ ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸಿದರು ಇಲ್ಲವಛೆಚ್ಚಿನ ಅಧಿಕಾರವನ್ನು ನೀಡಿದರು. ಮಾಜೀ ಕೇಂದ್ರ ಸಚಿವ ಅಲ್ಫೋನ್ಸ್ ಜೋಸೆಫ್ ಕಣ್ಣಂತನಂ ಮತ್ತು ಪ್ರಸ್ತೃತ ವಿದೇಶಾಂಗ ಸಚಿವ ಶ್ರೀ ಕೆ ಜೈಶಂಕರ್ ಇದಕ್ಕೆ ಅತ್ಯುತ್ತಮ ಉದಾಹರಣೆ.

raghu1ರಘುರಾಮ್ ರಾಜನ್ ಹೇಗಾದರೂ ಮಾಡಿ ಭಾರತಕ್ಕೆ ಮರಳಿ ಕೆಲವು ಪ್ರಮುಖ ಸ್ಥಾನದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಿದ್ದಾರೆ ಹಾಗಾಗಿ ಅವರು ತಾವು ಹೈಲೈಟ್ ಮಾಡಿಕೊಳ್ಳಲು ನಾನಾರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇದ್ದಾರೆ. ಅಂತಹ ಕಸರತ್ತುಗಳಲ್ಲಿ ಕಳೆದ ವಾರ ರಾಹುಲ್ ಗಾಂಧಿಯವರ ಜೊತೆಗಿನ ಸಂದರ್ಶನವೂ ಒಂದಾಗಿದೆ. ಅವರು ಭಾರತದ ಆರ್ಥಿಕತೆಯನ್ನು ಸುಧಾರಿಸಲು ರಾಹುಲ್ ಗಾಂಧಿ ಅವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಎಲ್ಲರಲ್ಲೂ ಏಳುವ ಪ್ರಶ್ನೆಯೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಯಾರು? ಆತನಿಗಿರುವ ಅಧಿಕಾರವೇನು? ಅವರು ಸರ್ಕಾರದ ಭಾಗವಾಗಿಲ್ಲ ಪ್ರತಿಪಕ್ಷದ ನಾಯಕ ಅಥವಾ ಯಾವುದೇ ರಾಜಕೀಯ ಪಕ್ಷದ ಅಧ್ಯಕ್ಷರೂ ಅಲ್ಲ ಆತನ ಆಲೋಚನೆಗಳು ಮತ್ತು ಸಾಮರ್ಥ್ಯದ ಬಗ್ಗೆ ದೇಶದ ಯಾವುದೇ ಜನರಿಗೂ ಆಶಾಭಾವನೆ ಇಲ್ಲ. ಹಾಗಾಗಿ ರಘುರಾಮನ್ ಅವರ ಈ ಕಸರತ್ತು ನಿಸ್ಸಂದೇಹವಾಗಿ ವಿಫಲವಾಗಿದೆ

ಸಗಣಿ ಜೊತೆ ಸರಸಾಟಕ್ಕಿಂತ ಗಂಧದೊಡನೆ ಗುದ್ದಾಟ ಲೇಸು ಎಂಬ ಕನ್ನಡದ ಗಾದೆಯನ್ನು ರಘುರಾಮನ್ ಅವರಿಗೆ ಯಾರಾದರೂ ತಿಳಿಸಬೇಕಾಗಿದೆ. ರಾಜಕೀಯವಾಗಿ ಯಾವುದೇ ಪ್ರಭುದ್ಧತೆಯನ್ನು ತೋರದ ರಾಹುಲ್ ಗಾಂಧಿಯ ಜೊತೆ ಸರಸಕ್ಕಿಂತ ದೇಶದ ಮೇಲೆ ನಿಜಕ್ಕೂ ಕಾಳಜಿ ಇದ್ದಲ್ಲಿ ಮೋದಿಯವರ ಸರ್ಕಾರದ ಜೊತೆ ರಘು ರಾಮ್ ರಾಜನ್ ಆರೋಗ್ಯಕರ ಚರ್ಚೆನಡೆಸಿದಲ್ಲಿ ಉತ್ತಮ ಎನಿಸುತ್ತದೆ. ರಘುರಾಮ್ ರಾಜನ್ ಅವರ ಮಾತುಗಳನ್ನು ಆಧರಿಸಿ, ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತೊಂದರೆಗೊಳಿಸಲು ಪ್ರಯತ್ನ ಪಡುವುದಾದರೇ ಅದಕ್ಕಿಂತಲೂ ದೊಡ್ಡ ಭ್ರಮೆ ಮತ್ತೊಂದಿಲ್ಲ. ಕಾರಣ ಸ್ವಂತ ಬುದ್ದಿ ಇಲ್ಲದ ರಾಹುಲ್ ತಮಗೆ ಯಾರೋ ಬರೆದು ಕೊಟ್ಟಿದ್ದಷ್ಟನ್ನು ಮಾತ್ರವೇ ಗಿಳಿ ಪಾಠದಂತೆ ಹೇಳಬಲ್ಲರೇ ಹೊರತು ಅದಕ್ಕೆ ಹೊರತಾಗಿ ಯಾರಾದರೂ ಪ್ರಶ್ನಿಸಿದಲ್ಲಿ ತಡಬಡಾಯಿಸುವುದನ್ನು ಬಹಳ ಬಾರಿ ಎಲ್ಲರೂ ನೋಡಿಯಾಗಿದೆ.

rahul2ಒಬ್ಬ ವಿರೋಧ ಪಕ್ಷದ ನಾಯಕ ತನ್ನ ಸಲಹೆಗಾರಿಂದ ಸಲಹೆಗಳನ್ನು ಪಡೆದುಕೊಳ್ಳುವುದು ಸಹಜ ಪ್ರಕ್ರಿಯೆ ಮತ್ತು ಅದು ನಡೆದು ಬಂದ ಸಂಪ್ರದಾಯವೇ ಹೌದಾದರೂ ಅದನ್ನು ಬಹಿರಂಗವಾಗಿ ಎಲ್ಲೂ ತೋರಿಸಿಕೊಳ್ಳುವುದಿಲ್ಲ. ಹಾಗೆ ತೋರಿಸಿಕೊಂಡಲ್ಲಿ ಅತನೇ ತನ್ನ ಸಾಮರ್ಥ್ಯತೆಯನ್ನು ಜಗಜ್ಜಾಹೀರಾತು ಮಾಡಿಕೊಂಡಂತೆ ಆಗುತ್ತದೆ ಎಂಬ ಸಾಮಾನ್ಯ ಅರಿವೂ ಇಲ್ಲದಂತೆ ರಾಹುಲ್ ಮತ್ತು ರಘು ರಾಮ್ ರಾಜನ್ ಅವರ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡು ನಗೆಪಾಟಲಾಯಿತು. ಈ ಎಲ್ಲಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ಅವರ ಈ ಎಲ್ಲಾ ಕಸರತ್ತುಗಳು ರಾಜಕೀಯ ಪ್ರಸಹನವಾಗಿರುವುದಲ್ಲದೇ ಪದೇ ಪದೇ ರಘುರಾಮ್ ರಾಜನ್ ತನ್ನನ್ನು ತಾನು ಕಾಂಗ್ರೇಸ್ ವ್ಯಕ್ತಿ ಎಂದು ಜಗ್ಗಜ್ಜಾಹೀರಾತು ಮಾಡಿಕೊಳ್ಳುವ ಮೂಲಕ ತನ್ನ ಭವಿಷ್ಯದ ಎಲ್ಲಾ ಬಾಗಿಲುಗಳನ್ನು ತಮ್ಮ ಕೈಯ್ಯಾರೆ ತಾವೇ ಮುಚ್ಚಿಕೊಳ್ಳುತ್ತಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s