ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

arnab2ಸೋನಿಯಾಗಾಂಧಿಯವರ ಮೂಲ ಹೆಸರನ್ನು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ಣಾಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದನ್ನೇ ಸಹಿಸಿಕೊಳ್ಳದ ಕಟ್ಟರ್ ಕಾಂಗ್ರೇಸ್ಸಿಗರು ಕೂಡಲೇ ವ್ರಗ್ರರಾಗಿ ದೇಶಾದ್ಯಂತ ಅರ್ಣಾಬ್ ವಿರುದ್ಧ ನೂರಾರು ಕೇಸ್ಗಳನ್ನು ಹಾಕಿದ್ದಲ್ಲದೇ, ಆತನ ಮೇಲೆ ಹಲ್ಲೆಗಳನ್ನು ಮಾಡಿದ್ದು ಇನ್ನೂ ಮಾಸದಿರುವ ಸಂದರ್ಭದಲ್ಲಿಯೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು PMcare ಬಗ್ಗೆ ಅಪಮಾನಿಸಿ ದೇಶದ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಸೋನಿಯಾ ಗಾಂಧಿ ವಿರುದ್ದ ಸಾಗರ ಪೋಲಿಸ್ ಠಾಣೆಯಲ್ಲಿ FIR ದಾಖಲು ಮಾಡಿರುವ ವಕೀಲರು ಮತ್ತು ಅದೂರನ್ನು ದಾಖಲು ಮಾಡಿಕೊಂಡ ಪೋಲೀಸ್ ಸಿಬ್ಬಂಧಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಎರಡೂ ಪ್ರಕರಣಗಳನ್ನು ಗಮನಿಸಿದಲ್ಲಿ, ಎಲ್ಲರಿಗೂ ಕಾಡುವ ಪ್ರಶ್ನೆಯೆಂದರೆ, ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

DKSನಿಂದನೆ ಮತ್ತು ಟೀಕೆ ಎರಡೂ ಪದ ಮತ್ತು ಕ್ರಿಯೆಗಳಿ ನಡುವೆ ಬಹಳಷ್ಟು ವೆತ್ಯಾಸವಿದೆ. ಆಕೆ ಭಾರತೀಯ ಸಂಜಾತಳಲ್ಲದೇ ಇಟಾಲಿಯನ್ ಅಥವಾ ಕಾಂಗ್ರೆಸ್ ಅಧ್ಯಕ್ಷೇ ಎಂಬ ಕಾರಣಕ್ಕಾಗಿ ಯಾರೂ ಆಕೆಯನ್ನು ನಿಂದಿಸುತ್ತಿಲ್ಲ ಆದರೆ ಬಹಳಷ್ಟು ಜನಾ ಆಕೆಯ ಜವಾಬ್ಧಾರಿ ನಿರ್ವಹಣೆಯ ಕುರಿತಾಗಿ ಟೀಕಿಸುತ್ತಾರೆ. ಸಾರ್ವಜನಿಕವಾಗಿರುವ ವ್ಯಕ್ತಿಗಳಿಗೆ ಮತ್ತು ರಾಜಕಾರಣಿಗಳಿಗೆ ಇಂತಹ ಟೀಕೆಗಳು ಸಹಜ ಮತ್ತು ಅದನ್ನು ಸರಿಯಾಗಿ ನಿಭಾಯಿಸುವವರೇ ನಿಜವಾದ ನಾಯಕರು. ಜನರು ಆಕೆಯನ್ನು ಟೀಕಿಸತ್ತಿರುವ ವಿಷಯಗಳೇನು ಎಂಬುದರ ಕುರಿತಂತೆ ಒಂದೊಂದಾಗಿ ವಿಶ್ಲೇಷಿಸಿ ನೋಡೋಣ.

 

 

ವಾಜಪೇಯಿಯವರ ದಕ್ಷ ಆಡಳಿತದಿಂದ ನಿಜವಾಗಿಯೂ ಭಾರತ ಪ್ರಜ್ವಲಿಸುತ್ತಿದ್ದರೂ, 2009ರ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರವನ್ನೇರಲು ಅಗತ್ಯವಿದ್ದ ಸಂಖ್ಯಾಬಲ ದೊರೆಯದಿದ್ದಾಗ, ಎರಡನೇ ಅತಿದೊದ್ಡ ಪಕ್ಷವಾದ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಇತರೇ ಎಲ್ಲಾ ವಿರೋಧ ಪಕ್ಷಗಳ ಬೆಂಬಲದಿಂದ ಪ್ರಧಾನಿ ಹುದ್ದೆಗೆ ಏರಲು ಅಂದಿನ ರಾಷ್ತ್ರಪತಿಗಳಾದ ಅಬ್ದುಲ್ ಕಲಾಂ ಅವರ ಬಳಿ ಏಕಾಏಕಿ ತಮ್ಮ ಹಕ್ಕನ್ನು ಮಂಡಿಸಿದರು. ಅದೃಷ್ಟವಶಾತ್, ಸುಬ್ರಹ್ಮಣ್ಯಸ್ವಾಮಿಯವರು ಕೂಡಲೇ ಮಧ್ಯಪ್ರವೇಶಿಸಿ ಆಕೆಯ ಪೌರತ್ವದ ಸಂಬಂಧಿತವಾದ ಕಾರಣಗಳಿಂದಾಗಿ ಆಕೆ ಭಾರತದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ಮಂಡಿಸಿದ ಕಾರಣ ಮತ್ತು ಅದನ್ನು ಕಲಾಂರವರು ಕಾನೂನಾತ್ಮಕವಾಗಿ ಕೂಲಂಕುಶವಾಗಿ ಪರಿಶೀಲಿಸಿದ ನಂತರ ಸೋನಿಯಾಗಾಂಧಿಯವರನ್ನು ಕರೆಸಿ, ಕಾನೂನಾತ್ಮಕವಾದ ತೊಡಕುಗಳಿಂದಾಗಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದಾಕ್ಷಣವೇ, ಆಕೆಯ ಗೊಸುಂಬೆ ತನ ಜಗಜ್ಜಾಹೀರಾಯಿತು.

ರಾಷ್ಟ್ರಪತಿಗಳು ಕಾನೂನಾತ್ಮಕವಾದ ಕಾರಣದಿಂದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಚ್ಚಿಟ್ಟು ಈ ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿಯಂತೆ ತಾನೂ ಸಹಾ ಅಧಿಕಾರವನ್ನು ದೇಶಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ನನ್ನ ಬದಲಾಗಿ ಶ್ರೀ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತಿದ್ದೇನೆ ಎಂದು ಎಲ್ಲರ ಮುಂದೆ ಹೇಳುತ್ತಾ ಜನರ ಅನುಕಂಪ ತೆಗೆದುಕೊಳ್ಳಲು ಹೋದದ್ದನ್ನೇ ಬುದ್ಧಿವಂತ ಜನ ಟೀಕಿಸಿದ್ದು.

2009 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಳ್ವಿಕೆಯಲ್ಲಿ ಹೆಸರಿಗಷ್ಟೇ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದರು. ಅವರನ್ನು ಕೈಗೊಂಬೆ ರೀತಿಯಲ್ಲಿ ಹಿಂದೆನಿಂದ ರಿಮೋಟ್ ಕಂಟ್ರೋಲರ್ ರೀತಿಯಲ್ಲಿ ಇಡೀ ದೇಶವನ್ನು ಆಳಿದ್ದು ಇದೇ ಸೋನಿಯಾ ಕುಟುಂಬವೇ ಆಲ್ಲವೇ? ಅವರ ಅನೇಕ ತಪ್ಪು ನಿರ್ಧಾರಗಳಿಂದ ದೇಶವನ್ನು ದಾರಿ ತಪ್ಪಿಸಿದ ಈ ರೀತಿಯ ಅನೇಕ ಉದಾಹರಣೆಗಳು ಕಣ್ಣ ಮುಂದಿದೆ .

 • ಈ ಅವಧಿಯಲ್ಲಿಯೇ ಕಾಶ್ಮೀರ ಪರಿಸ್ಥಿತಿ ತೀವ್ರತರವಾಗಿ ಹದಗೆಟ್ಟಿತಲ್ಲದೇ, ಉಗ್ರರ ಕೈಯಲ್ಲಿ ಕಾಶ್ಮೀರ ಅಕ್ಷರಶಃ ನಲುಗಿತು
 • ಉಗ್ರರ ವಿರುದ್ಧ ದಿಟ್ಟ ಎದೆಗಾರಿಕೆ ತೋರದ ಪರಿಣಾಮವಾಗಿ ಪಾಕೀಸ್ಥಾನೀ ಪ್ರೇರಿತ ಭಯೋತ್ಪಾದಕರು ಅತ್ಯಂತ ಸುಲಭವಾಗಿ ಮುಂಬೈ ಅಂತಹ ನಗರಕ್ಕೆ ನುಸುಳಿ 26/11 ಅಂತಹ ಭೀಕರ ಭಯೋತ್ಪಾದಕ ಕೃತ್ಯವನ್ನು ಎಸೆಗಳು ಸಾಧ್ಯವಾಯಿತು.
 • ದೇಶದ ವಿವಿಧ ಪ್ರದೇಶಗಳ ಗಡಿರೇಖೆಯ ಭಯೋತ್ಪಾದನೆಯಿಂದ ಸೈನಿಕರಲ್ಲದೇ, ಹೆಚ್ಚಿನ ಸಂಖ್ಯೆಯ ಮುಗ್ಧ ಭಾರತೀಯ ನಾಗರಿಕರು ಕೊಲ್ಲಲ್ಪಟ್ಟಿದ್ದೂ ಇದೇ ಸಮಯದಲ್ಲಿಯೇ
 • ಪಾಕಿಸ್ತಾನ (ಐಎಸ್‌ಐ) ಈ ಹಲವಾರು ಪ್ರಜ್ಞಾಶೂನ್ಯ ಹತ್ಯೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವುದು ಎಲ್ಲರಿಗೂ ತಿಳಿದಿತ್ತಾದರೂ ಅದನ್ನು ಪ್ರಶ್ನಿಸುವ ಇಲ್ಲವೇ ಎದುರಿಸುವ ಎದೆಗಾರಿಕೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ತೋರಲೇ ಇಲ್ಲ. ಹಾಗಾಗಿ ಬಹಿರಂಗವಾಗಿಯೇ ಪಾಕಿಸ್ತಾನದ ಅನೇಕ ರಾಜಕಾರಣಿಗಳು ಮತ್ತು ಉಗ್ರರು ಮತ್ತೆ ಕಾಂಗ್ರೇಸ್ ಸರ್ಕಾರವೇ ಭಾರತದಲ್ಲಿ ಅಧಿಕಾರಕ್ಕೆ ಬರಲಿ ಎಂದು ಹೇಳುವಷ್ಟರ ಮಟ್ಟಿಗಿನ ಉದ್ಧಟತನವನ್ನು ತೋರಿದರು.
 • ದೇಶದಲ್ಲಿ ಆಗುತ್ತಿದ್ದ ಭಯೋತ್ಪಾದನಾ ಕೃತ್ಯದ ಹಿಂದಿರುವವರನ್ನು ಕಂಡು ಹಿಡಿದು ಶಿಕ್ಷಿಸುವ ಬದಲು ಹಿಂದೂ ಭಯೋತ್ಪಾದನೆ ಎಂಬ ಹೊಸಾ ಕಪೋಲ ಕಲ್ಪಿತ ವಿಷಯವನ್ನು ತೇಲಿಬಿಟ್ಟು ಗಡಿಯಾಚೆಗಿನ ಭಯೋತ್ಪಾದನೆಯ ದುಷ್ಕೃತ್ಯಗಳಲ್ಲಿ ಪಾಕಿಸ್ತಾನ ಮತ್ತದರ ಉಗ್ರರತಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವಂತಾಯಿತು.
 • ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕಲ್ಮಾಡಿಕರ್, ಚಿದಂಬರಂ, ಡಿಎಂಕೆ ಯ ಎ.ರಾಜ, ಕನಿಮೋಳಿ, ಎನ್‌ಪಿಸಿಯ ಪ್ರೊಫುಲ್ಲಾ ಪಟೇಲ್ ಸೇರಿದಂತೆ ಅನೇಕರು ಎಗ್ಗಿಲ್ಲದಂತೆ ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದನ್ನು ತಡೆಯುವ ದಿಟ್ಟತನವನ್ನು ತೋರಲೇ ಇಲ್ಲ.
 • ಆರೋಗ್ಯ ಸಂಬಂಧಿತವಾಗಿ ಆಕೆ ಆಗ್ಗಗ್ಗೆ ಗುಪ್ತವಾಗಿ ವಿದೇಶಗಳಿಗೆ ಹೋಗುವುದನ್ನು ಯಾರೂ ಟೀಕಿಸುವುದಿಲ್ಲವಾದರೂ, ಆರೋಗ್ಯದ ಹೆಸರಿನಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತರಗಿರುವ ವಿಚ್ಛಿದ್ರಕಾರಿ ಶಕ್ತಿಗಳ ಸದಸ್ಯರನ್ನು ಭೇಟಿ ಮಾಡುವುದು ಎಷ್ಟು ಸರಿ?
 • ಪದೇ ಪದೇ ಚೀನಾ ಭಾರತದ ಆಂತರಿಕ ವಿಷಯಗಳಲ್ಲಿ ತೊಂದರೆ ನೀಡುತ್ತಾ ಒಂದು ರೀತಿಯ ಶತೃರಾಷ್ಟ್ರವೇ ಆಗಿರುವಾಗ, ಸಂವಿಧಾನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಯಾವುದೇ ಹುದ್ದೆಯಲ್ಲಿ ಇಲ್ಲದ ಆಕೆಯ ಮಗ ರಾಹುಲ್ ಮತ್ತು ಆಕೆಯ ಅಳಿಯ ರಾಬರ್ಟ್ ವಾದ್ರ ಗುಟ್ಟಾಗಿ ಚೀನಾ ರಾಜತಾಂತ್ರಿಕರನ್ನು ಭೇಟಿ ಮಾಡಿದ ಔಚಿತ್ಯವಾದರೂ ಏನು?
 • ಇದಕ್ಕೂ ಮಿಗಿಲಾಗಿ ವಿಪರೀತ ಪುತ್ರ ವ್ಯಾಮೋಹದಿಂದಾಗಿ ರಾಜಕೀಯವಗಿ ಅಸಮರ್ಥ ಎಂಬುದು ಜಗಜ್ಜಾಹೀರಾತಾಗಿದ್ದರೂ, ತನ್ನ ರಾಜವಂಶದ ಆಳ್ವಿಕೆಯ ಬಿಗಿಯಾದ ಹಿಡಿತವನ್ನು ಸಡಿಲಗೊಳಿಸಲು ಇಚ್ಚಿಸದೇ, ತನ್ನ ಮಗ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಪಟ್ಟಕ್ಕೇರಿಸಲು ಶತಪ್ರಯತ್ನ ಮಾಡುತ್ತಿರುವುದು ಅಕೆಯ ಮೂರ್ಖತನಕ್ಕೆ ತೋರಿದ ಕೈಗನ್ನಡಿಯಾಗಿದೆ. ಪ್ರಪ್ರಥಮವಾಗಿ ಸ್ವಂತ ಯೋಚನಾಶಕ್ತಿ ಇಲ್ಲದ ಸರಿಯಾದ ವಿದ್ಯಾರ್ಹತೆಯೂ ಇಲ್ಲದ, ಅನೇಕ ಬಲ್ಲ ಮೂಲಗಳೇ ಹೇಳುವ ಪ್ರಕಾರ ಮಾದಕದ್ರವ್ಯ ವ್ಯಸನಿಯಾಗಿರುವ ದೇಶದ ಆಡಳಿತದ ಮೂಲಭೂತ ಸಮಸ್ಯೆಗಳನ್ನು ಸಹ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲವನನ್ನು ಶತಾಯ ಗತಾಯ ದೇಶದ ಪ್ರಧಾನಿಯನ್ನಾಗಿ ಮಾಡಲು ಹೊರಟಿರುವುದು ಸಹಾ  ದೇಶದ  ಹಿತದೃಷ್ಟಿಯಿಂದ  ಅಕ್ಷಮ್ಯ ಅಪರಾಧವೇ ಸರಿ.
 • ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ನಂತರವೂ ಕಾಂಗ್ರೆಸ್ ಅಧಿಕಾರದಲ್ಲಿರುವ ಅಥವಾ ಮೈತ್ರಿಯಲ್ಲಿರುವ ರಾಜ್ಯಗಳಲ್ಲಿ ಅವಳ ನಕಾರಾತ್ಮಕ ಮತ್ತು ಅವ್ಯವಹಾರ ಮುಂದುವರಿಯುತ್ತಲೇ ಇದೆ. ದೇಶದ ಹಿತದೃಷ್ಟಿಯಿಂದ ಸಂವಿಧಾನಾತ್ಮಕವಾಗಿ ಕಾನೂನುಗಳನ್ನು ಜಾರಿಗೆ ತಂದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಅಥವಾ ಮೈತ್ರಿಯಲ್ಲಿರುವ ರಾಜ್ಯಗಳಲ್ಲಿ ಅದನ್ನು ವಿರೋಧಿಸುವ ಮನೋಭಾವನೆ ದೇಶದ ಹಿತದೃಷ್ಟಿಯಿಂದ ಮಾರಕ ಎನ್ನುವ ಕಠು ಸತ್ಯದ ಅರಿವು ಆಕೆಗೆ ಇಲ್ಲದಾಗಿದೆ.
 • ದೇಶದಲ್ಲಿ ಎಲ್ಲಿಯಾದರೂ ಹಿಂದೂಗಳ ಹೊರತಾದ ಅನ್ಯಧರ್ಮೀಯರ ವಿಷಯದಲ್ಲಿ ಯಾವುದಾದರೂ ಧಾರ್ಮಿಕ ರೀತಿಯ ಹಲ್ಲೆಗಳಾದಲ್ಲಿ ಮೊತ್ತ ಮೊದಲಿಗೆ ಖಂಡನಾತ್ಮಕ ಹೇಳಿಕೆಯನ್ನು ನೀಡಿ ಸರ್ಕಾರದ ವಿರುದ್ಧ ದೇಶಾದ್ಯಂತ ಜನಾಂದೋಲನವನ್ನು ನಡೆಸಲು ಕರೆ ನೀಡುವ ಅಮ್ಮಾ ಮತ್ತು ಮಗ ಅದೇ ಹಿಂದೂಗಳ ವಿಚಾರದಲ್ಲಿ ಧಾಳಿಗಳು ,ಹಲ್ಲೆಗಳಾದಾಗ ದಿವ್ಯ ಮೌನ ತೋರುವುದನ್ನೇ ಜನರು ಟೀಕಿಸುವುದು.

dks2ಆಕೆ ದೇಶದ ಅತ್ಯಂತ ಹಳೆಯ ಮತ್ತು ಲೋಕಸಭೆಯಲ್ಲಿ ಎರಡನೇ ದೊಡ್ಡ ಪಕ್ಷ (ಅಧಿಕೃತ ವಿರೋಧ ಪಕ್ಷವಲ್ಲ) ವಾಗಿರುವ ಕಾಂಗ್ರೆಸ್ಸಿನ ಕಾರ್ಯಕಾರಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯಾಗಿ ಅಕೆಯ ಕಾರ್ಯವಿಧಾನವನ್ನು ಟೀಕಿಸುತ್ತಾರೆಯೇ ಹೊರತು ವ್ಯಕ್ತಿಗತವಾಗಿ ಅಕೆಯನ್ನು ಯಾರೂ ನಿಂದಿಸುತ್ತಿಲ್ಲ ಎನ್ನುವುದು ಗಮನಾರ್ಹವಾಗಿದೆ. ಸೈದ್ಧಾಂತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ವಿಪತ್ತಿನ ಸಂದರ್ಭದಲ್ಲಿ ಅವೆಲ್ಲವನ್ನೂ ಬದಿಗೊತ್ತಿ ದೇಶವನ್ನು ವಿಪತ್ತಿನಿಂದ ಹೊರತರುವುದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಇದಕ್ಕೆ ಸೋನಿಯಾ, ಅವರ ಕುಟುಂಬ ಮತ್ತವರ ಪಕ್ಷವೂ ಹೊರತಾಗಿಲ್ಲ ಅಲ್ಲವೇ?

ಏನಂತೀರೀ?

One thought on “ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s