ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

hanumanಮಧ್ಯಪ್ರದೇಶದ ಇಂದೋರಿನ ಪಿತೃಪರ್ವತದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ವೀರಾಂಜನೇಯನ ವಿಗ್ರಹದ ಮುಂದೆ ನಿಂತಿದ್ದೇವೆ. ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗುತ್ತಿರುವ ಈ ಅಷ್ಟಧಾತು ಲೋಹದಿಂದ ತಯಾರಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ಪ್ರತಿಮೆಯ ನಿರ್ಮಾಣ ಭರದಿಂದ ಸಾಗಿದೆ. ಈ ಪ್ರತಿಮೆಯನ್ನು ಹವಾಮಾನದಿಂದ ರಕ್ಷಿಸಲು ವಿಶೇಷವಾಗಿ ಹೊಳಪು ನೀಡಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಈ ವಿಗ್ರಹದ ಬಿಡಿ ಭಾಗಗಳನ್ನು ತಯಾರಿಸಿ ಅದನ್ನು ಈ ಪ್ರದೇಶಕ್ಕೆ ದೊಡ್ಡ ದೊಡ್ಡ ಕ್ರೇನ್ ಮುಖಾಂತರ ತಂದು ಒಂದೊಂದಾಗಿ ಅವುಗಳನ್ನೆಲ್ಲಾ ಜೋಡಿಸಿ ಭವ್ಯವಾದ ಭಜರಂಗ ಬಲಿಯ ಮೂರ್ತಿಯ ಆಕಾರವನ್ನು ನೀಡಿ ಅದನ್ನು ಪ್ರತಿಷ್ಠಾಪನೆ ಮಾಡುವ ಪ್ರಯತ್ನ ಇನ್ನೂ ಜಾರಿಯಲ್ಲಿರುವಾಗಲೇ ಸಹಸ್ರಾರು ಜನರು ಅದನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಇಂದೋರಿನಲ್ಲಿ ನೋಡಲು ಇನ್ನೂ ಹಲವಾರು ಪ್ರಮುಖ ಪ್ರದೇಶಗಳು ಇದ್ದರೂ ನಿಶ್ಚಿತವಾಗಿಯೂ ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಪಿತೃಪರ್ವತ ಇಂದೋರಿನ ಜನಾಕರ್ಷಣಿಯ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ ಎಂದರೂ ಅತಿಸಯೋಕ್ತಿಯಾಗಲಾರದು. ಜೀಜಾಸುರ ಮಂದಿರದಿಂದ ಗೊಮ್ಮಟ ಗಿರಿಯ ಕಡೆಗೆ ಸಾಗುವ ರಸ್ತೆಯಲ್ಲಿ ತುಸು ಮುಂದೆ ಸಾಗಿ ಬಲಕ್ಕೆ ತಿರುಗಿದಲ್ಲಿ ಪಿತೃಪರ್ವತವನ್ನು ತಲುಪಬಹುದಾಗಿದೆ.

ಈ ಪಿತೃ ಪರ್ವತವೇ ಒಂದು ಸುಂದರ ಕಲ್ಪನೆಯಾಗಿದ್ದು ಈ ಪ್ರದೇಶದಲ್ಲಿ, ಇಂದೋರಿನ ಜನ ತಮ್ಮ ಪೂರ್ವಜರ ಮತ್ತು ಪ್ರೀತಿಪಾತ್ರರ ನೆನಪಿಗಾಗಿ, ಈ ಪರ್ವತದ ಮೇಲೆ ವಿವಿಧ ರೀತಿಯ ಗಿಡ ಮರಗಳನ್ನು ನೆಡುವ ಪ್ರಕ್ರಿಯೆಯು ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾಗಿ ಇಂದು, ಲಕ್ಷಾಂತರ ಮರ ಗಿಡಗಳಿಂದ ಆವೃತವಾಗಿ ಇಡೀ ಪ್ರದೇಶವನ್ನು ರಮ್ಯತಾಣವಾಗಿಸಿ ಅಲ್ಲಿಗೆ ಭೇಟಿಕೊಡುವವರ ಹೃನ್ಮನಗಳನ್ನು ಉಲ್ಲಾಸಮಯವಾಗಿಸಿದೆ. ಇಂತಹ ನಿತ್ಯಹರ್ದ್ವರ್ಣದ ಈ ಪಿತೃಪರ್ವತದಲ್ಲಿ ನಿರ್ಮಾಣವಾಗುತ್ತಿರುವ ಬೃಹದಾಕಾರದ ಪವನಸುತನ ವಿಗ್ರಹ ನಿಜಕ್ಕೂ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.

ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮ ಧೂತಂ ಶಿರಸಾ ನಮಾಮಿ ||

ಬುಧ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ
ಹನುಮತ್ ಸ್ಮರಣಾತ್ ಭವೇತ್ ||
ಜೈ ಶ್ರೀ ರಾಮ್.

ಈ ವೀಡೀಯೀ ಇಷ್ಟವಾದಲ್ಲಿ like ಮಾಡಿ, Share ಮಾಡಿ, Subscribe ಆಗೋದನ್ನ ಮರೀಬೇಡಿ

ಏನಂತೀರೀ?

ವಿಶೇಷ ಸೂಚನೆ: ವಾಟ್ಸಾಪ್ಪಿನಲ್ಲಿ ಸ್ನೇಹಿತರಿಂದ ಬಂದ ವಿಡೀಯೋಗೇ ಕನ್ನಡಲ್ಲಿ Voice Over dubbing ಮಾಡಿದ್ದೇನೆ. ಈ ವೀಡಿಯೋ ಸಂಪೂರ್ಣ ಹಕ್ಕು ಅದನ್ನು ತೆಗೆದವರಿಗೇ ಸಲ್ಲುತ್ತದೆ.

ಮಧ್ಯಪ್ರದೇಶದ ಇಂದೋರಿನ ಪಿತೃಪರ್ವತದಲ್ಲಿ ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಾಣವಾಗುತ್ತಿರುವ ಅಷ್ಟಧಾತು ಲೋಹದ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ಮೂರ್ತಿಯನ್ನು ಕಣ್ತುಂಬ ನೋಡಿ ಆನಂದಿಸಿ, ರಘುವೀರ ಸಮರ್ಥನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s