ಕೂರೋನಾ ಲಾಕ್ ಡೌನ್ ಸಮಯದಲ್ಲಿ ತನ್ನೂರಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಂಡಲೆಯುತ್ತಿದ್ದ ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ, ತನ್ನೂರಿನ ಎಣ್ಣೆ ತೆಗೆಯುವ ಗಾಣದಲ್ಲಿ ಎತ್ತುಗಳು ತಮ್ಮ ಪಾಡಿಗೆ ತಾವು ಸುತ್ತುತ್ತಿದ್ದರೆ, ರೈತನೊಬ್ಬ ಆರಾಮವಾಗಿ ನಿದ್ರಿಸುತ್ತಿದ್ದನ್ನು ನೋಡಿ ಆಶ್ಚರ್ಯ ಚಕಿತನಾದ.
ನಿದ್ರಿಸುತ್ತಿದ್ದ ರೈತನನ್ನು ಎಬ್ಬಿಸಿ, ಈ ಎತ್ತುಗಳು ಗಾಣವನ್ನು ಅರೆಯುವುದನ್ನು ನಿಲ್ಲಿಸಿದರೆ ನಿಮಗೆ ಹೇಗೆ ತಿಳಿಯುತ್ತದೇ?ಎಂದು ಕುತೂಹಲದಿಂದ ಕೇಳಿದ.
ರೈತ ಕೂಡಾ ಹಾಗೆಯೇ ಕಣ್ತೆರೆಯದೇ, ಸ್ಚಾಮೀ, ಎತ್ತುಗಳು ಸುತ್ತುವುದನ್ನು ನಿಲ್ಲಿಸಿದರೆ ಅವುಗಳ ಕತ್ತಿನಲ್ಲಿರುವ ಗಂಟೆಯ ಶಬ್ಧ ನಿಲ್ಲುತ್ತದೆ ಎಂದ.
ಬುದ್ಧಿವಂತ ಸಾಫ್ಟ್ ವೇರ್ ಇಂಜೀನಿಯರ್ ಒಂದು ಕ್ಷಣ ಯೋಚಿಸಿ, ಅಕಸ್ಮಾತ್ ಈ ಎತ್ತುಗಳು ಒಂದೇ ಸ್ಥಳದಲ್ಲಿ ನಿಂತು ಕೇವಲ ಕುತ್ತಿಗೆಯನ್ನು ಮಾತ್ರಾ ಆಡಿಸುತ್ತಿದ್ದರೇ? ಎಂದ.
ಆಗ ರೈತ ಮತ್ತೇ ಅಷ್ಟೇ ನಿರ್ಲಿಪ್ತನಾಗಿ ನಮ್ಮ ಎತ್ತುಗಳ ನಿಯತ್ತು ನಿಮಗೇನು ಗೊತ್ತು? ಅವುಗಳು ನಿಮ್ಮಂತೆ ಮನೆಯಿಂದ ಕೆಲಸ ಮಾಡುವುದಿಲ್ಲ ಸ್ವಾಮಿ ಎಂದ. 😆😆😆😆😆
ಪ್ರಾಣಿಗಳೇ ಗುಣದಲಿ ಮೇಲು! ಮಾನವ ಅದಕಿಂತ ಕೀಳು
ಏನಂತೀರೀ?
ವಾಟ್ಸಾಪ್ಪಿನಿಂದ ಸ್ಪೂರ್ತಿ ಪಡೆದು ಬರೆದದ್ದು
ಸೂಪರ್
LikeLiked by 1 person