ಶೂನ್ಯದಿಂದ ಸಾಧನೆಯವರೆಗೆ

ನನ್ನ ಹಿಂದಿನ ಲೇಖನದಲ್ಲಿ ಖ್ಯಾತ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕುರಿತಂತೆ ಲೇಖನದಲ್ಲಿ ವಯಕ್ತಿಕ ಸಮಸ್ಯೆಯಿಂದ ಹೊರಬರಲಾರದೇ, ಖಿನ್ನತೆಗೆ ಒಳಗಾಗಿ ಬದುಕನ್ನೇ ಅಕಾಲಿಕವಾಗಿ  ಅಂತ್ಯ ಮಾಡಿಕೊಂಡ ದುರಂತ ಕಥೆಯ ಕುರಿತಂತೆ ಅನೇಕ ಓದುಗರು ವಿವಿಧ ರೀತಿಯ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರು. ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ ಆದರೆ ಅದನ್ನು  ಸವಾಲಾಗಿ ಸ್ವೀಕರಿಸಿ ಅದರಿಂದ  ಹೇಗೆ ಹೊರಬಂದು ಸಾಧನೆಯ ಮಟ್ಟಲುಗಳನ್ನು ಏರಿ ಯಶಸ್ವಿಯಾಗಿರುವ ಕೆಲವು ಅಧ್ಬುತ ಪ್ರಸಂಗಗಳು ಇದೋ ನಿಮಗಾಗಿ.

ಕ್ರಿಕೆಟ್ ವೀಕ್ಷಕವಿವರಣಾಗಾರ ಶ್ರೀ ಹರ್ಷ ಭೋಗ್ಲೆ ತಮ್ಮ ಬಹುತೇಕ ಕಾರ್ಯಕ್ರಮಗಳಲ್ಲಿ ಪದೇ ಪದೇ ಹೇಳುವ ಶ್ರೀಲಂಕಾದ ಕ್ರಿಕೆಟಿಗ ಮಾರ್ವಾನ್ ಅಟ್ಟಪಟ್ಟು ಅವರ ಅದ್ಭುತ ಶೂನ್ಯದಿಂದ ಸಾಧನೆಯವರೆಗಿನ ಸಾಹಸ ಕಥೆಯನ್ನು ಮೊದಲು ತಿಳಿಯೋಣ

attapattuಆತ ಓದಿನನಲ್ಲಿ ಅತ್ಯಂತ ಬುದ್ಧಿವಂತ ಹಾಗಾಗಿ ಅತ್ಯಂತ ಕಠಿಣವಾದ  ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತನ್ನ ಪರಿಶ್ರಮದಿಂದ ಪಾಸು ಮಾಡಿದರೂ ಆತನ ಗಮನವೆಲ್ಲಾ ಕ್ರಿಕೆಟ್ ಮೇಲೆಯೇ. ದೇಶೀಯ ಕ್ರಿಕೆಟ್ಟಿನಲ್ಲಿ ರನ್ನುಗಳ ಸುರಿಮಳೆ ಗರಿಸಿದ ಮೇಲಿಯೇ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ಗೆ ಬಹಳ ನೀರೀಕ್ಷೆಯಿಂದ ಪಾದಾರ್ಪಣೆ ಮಾಡಿದ ಮಾರ್ವಾನ್ ಆಟಪಟ್ತು  ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಬಾತುಕೋಳಿ ಗಳಿಸಿದರು. ಮೊದಲನೇ ಇನ್ನಿಂಗ್ಸ್ ಅಲ್ವಾ ಒಮ್ಮೊಮ್ಮೆ ಹೀಗಾಗುತ್ತದೆ ಎಂದರೆ, ಮತ್ತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶೂನ್ಯವೇ!!.

ಈ ರೀತಿಯಾಗಿ ಕೊಟ್ಟ ಅವಕಾಶವನ್ನು ಸಹುಪಯೋಗಿಸಿಕೊಳ್ಳದೇ, ಎರಡೂ ಇನ್ನಿಂಗ್ಸಿನಲ್ಲಿ ಶೂನ್ಯ ಸುತ್ತಿದ ಅವನನ್ನು ಅಯ್ಕೆದಾರದು ಕೈಬಿಟ್ಟರೂ ಮರ್ವಾನ್  ಪುನಃ ನೆಟ್ಸ್ ಗೆ ಮರಳಿ  ಹೆಚ್ಚಿನ ಅಭ್ಯಾಸ ಮಾಡುತ್ತಾ ಮತ್ತೆ  ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ ರನ್ನುಗಳ ಸುರಿಮಳೆಗರೆದು ಆಯ್ಕೆದಾರರ ಗಮನ ಸೆಳೆದರ.

ಸುಮಾರು 21 ತಿಂಗಳ ನಂತರ, ಅವರಿಗೆ ಪುನಃ ಎರಡನೇ ಅವಕಾಶ ಸಿಕ್ಕಿತು.

ಈ ಸಮಯದಲ್ಲಿ, ಬಹಳ ಎಚ್ಚರದಿಂದ ಆಡಲು ಪ್ರಯತ್ನಿಸಿದರಾದರೂ ಮೊದಲ ಇನ್ನಿಂಗ್ಸ್‌ನಲ್ಲಿ 0 ಹಾಗೂ ಎರಡನೇ ಇನ್ನಿಂಗ್ಸಿನಲ್ಲಿ ಹಾಗೂ ಹೀಗೂ ಪ್ರಯತ್ನಿಸಿದ ಕಾರಣ ಟೆಸ್ಟ್ ಕ್ರಿಕೆಟ್ಟಿನಲ್ಲಿ ಮೊದಲ ರನ್ ಗಳಿಸಿ 1 ರನ್ನಿಗೆ ಔಟ್ ಆದ ಪರಿಣಾಮ ಅವರನ್ನು ಮತ್ತೆ ಕೈಬಿಡಲಾಯಿತು. ಛಲಬಿಡದ ತ್ರಿವಿಕ್ರಮನಂತೆ ಮರ್ವಾನ್  ಮತ್ತೆ ಮೈದಾನಕ್ಕೆ ಮರಳಿದ್ದಲ್ಲದೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಟನ್ ಗಟ್ಟಲೆ ರನ್ ಗಳಿಸಿ,  ಮೊದಲ ಎರಡು ಟೆಸ್ಟ್ ಗಳಲ್ಲಿ ಆದ ವೈಫಲ್ಯಗಳ ನೋವಿನ ನೆನಪುಗಳನ್ನು ಅಳಿಸಿ ಹಾಕಲು ಸಮರ್ಥರಾದರು.

ಇದಾದ 17 ತಿಂಗಳ ನಂತರ, ಅವರಿಗೆ ಅವಕಾಶವು ಮತ್ತೊಮ್ಮೆ ತಟ್ಟಿ, ಆ ಟೆಸ್ಟಿನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಮಾರ್ವಾನ್, ಮತ್ತೆ  0 ಮತ್ತು 0 ಗೆ ಔಟ್ ಆಗುವ ಮೂಲಕ,  ದೊಡ್ಡ ಮಟ್ಟದ ಕ್ರಿಕೆಟ್ಟಿನಲ್ಲಿ ಆಡುವ ಮನೋಧರ್ಮವನ್ನು ಹೊಂದಿಲ್ಲದ ಕಾರಣ ಆಯ್ಕೆದಾರರು ಈತನಿಗೆ  ಮತ್ತೊಂದು ಅವಕಾಶವನ್ನು ಏಕೆ ನೀಡಬೇಕು? ಎಂಬ ಚರ್ಚೆಯೂ ಆಯಿತು.

marvan2ಆದರೆ ಈ ಸತತ ವೈಫಲ್ಯಗಳ ಕುರಿತಂತೆ ಹೆಚ್ಚಿಗೆ ಗಾಬರಿಗೆ ಒಳಗಾಗದ ಮರ್ವಾನ್ ತಮ್ಮ ಬ್ಯಾಟಿಂಗ್ ಕೌಶಲ್ಯದತ್ತ ಹೆಚ್ಚಿನ ಗಮನ ಹರಿಸಿ, ಅಂಜಿಕೆಯಿಲ್ಲದೇ, ಸುಲಲಿತವಾಗಿ ರನ್ ಗಳಿಸುವತ್ತಲೇ ಚಿತ್ತ ಹರಿಸಿದ ಪರಿಣಾಮವಾಗಿಯೇ ಮೂರು ವರ್ಷಗಳ ನಂತರ, ಅವರಿಗೆ ಮತ್ತೊಂದು ಅವಕಾಶ ಸಿಕ್ಕಿತು. ಕಳೆದ ಮೂರು ಬಾರಿಯ ವೈಫಲ್ಯಗಳು ನಡದೇ ಇಲ್ಲವೇನೂ ಎನ್ನುವಂತೆ  ಈ ಬಾರಿ ಅವರು ರನ್ ಗಳಿಸಿದ್ದಲ್ಲದೇ ಪಂದ್ಯದಿಂದ ಪಂದ್ಯದಲ್ಲಿ ಅವರ ಏಕಾಗ್ರತೆ, ವಿಶ್ವಾಸ ಹೆಚ್ಚುತ್ತಾ ಹೋಗಿದ್ದಲ್ಲದೇ,  ಮಾರ್ವಾನ್ 16ಶತಕಗಳು ಮತ್ತು 6 ದ್ವಿಶತಕಗಳು ಸೇರಿದಂತೆ ಶ್ರೀಲಂಕಾ ಪರ ಟೆಸ್ಟಿನಲ್ಲಿ 5000 ರನ್ ಗಳಿಸಿದ ಪ್ರಪ್ರಥಮ ಆಟಗಾರರಾದರು.

ಅಲ್ಲಿಂದ ಮತ್ತೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಆಟಗಾರನಾಗಿ ಪ್ರವೇಶ ಪಡೆಲು ಪರೆದಾಡುತ್ತಿದ್ದ ಆಟಪಟ್ಟು, ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಎರಡನೇ ರನ್ ಗಳಿಸಲು ಆರು ವರ್ಷಗಳನ್ನು ತೆಗೆದುಕೊಂಡರೂ, ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎನ್ನುವ ಛಲದಿಂದ  ಶ್ರೀಲಂಕಾ ದೇಶದ ಕ್ರಿಕೆಟ್ ತಂಡ ನಾಯಕನಾದರು.

dravidಭಾರತ ಕ್ರಿಕೆಟ್ ತಂಡವೇಕೆ ಇಡೀ ವಿಶ್ವದ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟಿಂಗ್ ತಾಂತ್ರಿಕ ಕೌಶಲ್ಯದಲ್ಲಿ ಪ್ರಖ್ಯಾತವಾಗಿರುವ ಭಾರತದ ಕ್ರಿಕೆಟ್ ತಂಡದ ಗೋಡೆ (wall) ಎಂಬ ಹೆಗ್ಗಳಿಕೆಗೆ ಗುರಿಯಗಿರುವ ಟೆಸ್ಟ್ ಕ್ರಿಕೆಟ್ಟಿನಲ್ಲಿ ಸಚಿನ್ ತೆಂಡೂಲ್ಕರ್, ಮತ್ತು ರಿಕಿ ಪಾಂಟಿಂಗ್ ನಂತರ  ಅಧಿಕ ರನ್ ಗಳಿಸಿ ಮೂರನೇ ಸ್ಥಾನ ಪಡೆದ  ಕನ್ನಡಿಗ ರಾಹುಲ್ ದ್ರಾವಿಡ್ ಅವರ ಆರಂಭವೂ ಮರ್ವಾನ್ ಆಟಪಟ್ಟುವಿನ ಕಥೆಗಿಂತ ಭಿನ್ನವಾಗಿರಲಿಲ್ಲ.

ಕರ್ನಾಟಕದ ಪರ ಯುವ ಆಟಗಾರನಾಗಿ ದೇಸೀ ಕ್ರಿಕೆಟ್ಟಿನಲ್ಲಿ ಸಹಸ್ರಾರು ರನ್ ಗಳಿಸಿದ ಪರಿಣಾಮ ವಿಲ್ಸ್ ವರ್ಲ್ಡ್ ಸೀರೀಸ್‌ನ ಕೊನೆಯ ಎರಡು ಪಂದ್ಯಗಳಿಗೆ 1994 ರ ಅಕ್ಟೋಬರ್‌ನಲ್ಲಿ ಭಾರತದ ಪರ ಆಡಲು ಆಯ್ಕೆಯಾದರೂ ಪಂದ್ಯ  ಆಡುವ ಹನ್ನೊಂದರ ಬಳಗದಲ್ಲಿ ಇರಲಾಗದೇ, ಮತ್ತೆ   ದೇಶೀಯ ಪಂದ್ಯಾವಳಿಗೆ ಮರಳಿ ಇಲ್ಲಿ ರನ್ ಗಳ ಸುರಿಮಳೆ ಗರೆಯತೊಡಗಿದ ಪರಿಣಾಮ 1996ರ ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾದರೂ ಅಲ್ಲಿಯೂ ಬೆಂಚ್ ಕಾಯುವ ಪರಿಸ್ಥಿತಿ. ವಿಶ್ವಕಪ್ ನಂತರ ಸಿಂಗಪುರದಲ್ಲಿ ನಡೆದ ಸಿಂಗರ್ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ  ಪ್ರಪ್ರಥಮ ಏಕದಿನ ಪಂದ್ಯದಲ್ಲಿ ಆಡುವ ಅವಕಾಸ ಪಡೆದ ದ್ರಾವಿಡ್ ಕೇವಲ 3 ರನ್ ಗಳಿಸಿ ಮತ್ತೊಬ್ಬ ಮಹಾನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರಿಗೆ ಔಟಾದರು. ಆದಾದ ನಂತರದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿದ್ದಾಗ ದುರಾದೃಷ್ಟ ರೀತಿಯಲಿ ರನ್ ಔಟ್ ಆಗುವ ಮೂಲಕ ಈತ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಅಸಮರ್ಥ ಎಂದು ಜರಿಯತೊಡಗಿದರು.

dra_gang1996ರಲ್ಲಿ ಇಂಗ್ಲೇಂಡ್ ಪ್ರವಾಸಕ್ಕೆ ಆಯ್ಕೆಯಾಗಿ ಅಭ್ಯಾಸ ಪಂದ್ಯಾವಳಿಗಳಲ್ಲಿ ಸರಾಸರಿ ರನ್ನುಗಳನ್ನು ಗಳಿಸಿದರಾದರೂ, ಬೆಂಚ್ ಕಾಯುವ ಪರಿಸ್ಥಿತಿಯಾಗಿತ್ತು. ಜೂನ್ 20 ರಂದು ಲಾರ್ಡ್ಸ್‌ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯದಲ್ಲಿ ಅನೀರೀಕ್ಷಿತವಾಗಿ ಸಂಜಯ್ ಮಂಜ್ರೇಕರ್ ಅನಾರೋಗ್ಯಕ್ಕೆ ತುತ್ತಾದಾಗ ಕಡೆಯ ಕ್ಷಣದಲ್ಲಿ ತಂಡ 11ರ ಬಳಗಕ್ಕೆ ಸೇರಿಕೊಂಡು 7ನೇ ಕ್ರಮಂಕದಲ್ಲಿ ಬ್ಯಾಟಿಂಗ್ಗಿಗೆ ಇಳಿದು ಅವರ ಜೊತೆ ಚೊಚ್ಚಲು ಪಂದ್ಯವನ್ನಾಡುತ್ತಿದ್ದ ಮತ್ತೊಬ್ಬ ಆಟಗಾರ ಸೌರವ್ ಗಂಗೂಲಿಯ ಜೊತೆ ಭರ್ಭರಿ ಬ್ಯಾಟಿಂಗ್ ಮಾಡಿ 95 ರನ್ ಗಳಿಸಿ ಕೇವಲ 5 ರ ನಿಂದ ಶತಕ ವಂಚಿತರಾದರೂ ಭಾರತದ ಕ್ರಿಕೆಟ್ ತಂಡಲ್ಲಿ ಖಾಯಂ ಸದಸ್ಯತ್ವವನ್ನು ಉಳಿಸಿಕೊಂಡಿದ್ದಲ್ಲ್ದೆ 25,000 ಕ್ಕೂಅಧಿಕ ಅಂತರಾಷ್ಟ್ರೀಯ ರನ್ನುಗಳನ್ನು ಗಳಿಸುವುದ್ರರಲ್ಲಿ ಯಶಸ್ವಿಯಾಗಿದ್ದಲ್ಲದೇ ಕೆಲಕಾಲ ಭಾರತದ ಕ್ರಿಕೆಟ್ ತಂಡವನ್ನು ನಾಯಕನಾಗಿಯೂ ಮುನ್ನೆಡಿಸಿದರು. 2003 ವಿಶ್ವಕಪ್ ಸಮಯದಲ್ಲಿ ತಂಡದಲ್ಲಿ ಸ್ಥಾನಗಳಿಸಲು ವಿಕೆಟ್ ಕೀಪಿಂಗ್ ಕೂಡಾ ಮಾದಿ ಅದರಲ್ಲೂ ಯಶಸ್ಸನ್ನು ಪಡೆದು ಸವ್ಯಸಾಚಿಗಳಾಗಿ ಪ್ರಸ್ತುತ  ಬೆಂಗಳೂರಿನಲ್ಲಿರುವ  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ, ಭಾರತ ಎ ಮತ್ತು ಭಾರತ 19 ವರ್ಷದೊಳಗಿನ ಕ್ರಿಕೆಟ್ ತಂಡಗಳ ಮೇಲ್ವಿಚಾರಣೆ ಮಾಡುವ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಇನ್ನೂ ಭಾರತದ ಕ್ರಿಕೆಟ್ಟಿನ ಇತಿಹಾಸವನ್ನು ಬದಲಿಸಿದ, ಭಾರತದ ಅತ್ಯಂತ ಅಕ್ರಮಣಕಾರಿ ಮತ್ತು  ಯಶಸ್ವೀ ನಾಯಕ ಎಂದು ಖ್ಯಾತವಾಗಿರುವ ಸೌರವ್ ಗಂಗೂಲಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲ್ಲಿಲ್ಲ. ತನ್ನ 20ನೇ ವರ್ಷದಲ್ಲಿಯೇ ಕಲ್ಕತ್ತಾ ಪರ ದೇಸೀ ಕ್ರಿಕೆಟ್ಟಿನಲ್ಲಿ ಮಾಡಿದ ಸಾಧನೆಗಳಿಂದಾಗಿ ಗಂಗೂಲಿ 1992 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿ ತಮ್ಮ ಚೊಚ್ಚಲ ಏಕದಿನ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕೇವಲ 3 ರನ್ ಗಳಿಸಿ ಔಟಾಗಿ ಆತ ಬಹಳ ಸೊಕ್ಕಿನ ಮನುಷ್ಯ ಎಂಬ ಕುಖ್ಯಾತಿಗೆ ಬಲಿಯಾಗಿ, ಪಂದ್ಯದ ಸಮಯದಲ್ಲಿ ಸಹ ಆಟಗಾರರಿಗೆ  ಗಂಗೂಲಿ ಪಾನೀಯಗಳನ್ನು ಕೊಂಡೊಯ್ಯಲು ನಿರಾಕರಿಸಿದನೆಂದು ವದಂತಿ ಹರಡಿ, ಹಾಗೆ ಮಾಡುವುದು ತನ್ನ ಕೆಲಸವಲ್ಲ ಎಂದು ಪ್ರತಿಕ್ರಿಯಿಸಿದ ಎಂಬ ಕಾರಣ ನೀಡಿ ತಕ್ಷಣವೇ ಆತನನ್ನು ತಂಡದಿಂದ ಕೈಬಿಡಲಾಯಿತು.

gangulyತನ್ನದಲ್ಲದ ತಪ್ಪಿಗಾಗಿ ತಂಡದಿಂದ ಹೊರಬಂದರೂ, ಗಂಗೂಲಿ,  ದೇಶೀಯ ಕ್ರಿಕೆಟ್‌ನಲ್ಲಿ ಶ್ರಮವಹಿಸಿ 1993–94 ಮತ್ತು 1994-95 ರಣಜೀ ಪಂದ್ಯಾವಳಿಗಳಲ್ಲಿ ಅತೀ ಹೆಚ್ಚು ರನ್ನುಗಳನ್ನು ಗಳಿಸಿದ್ದಲ್ಲದೇ, 1995-96ರ ಡುಲೀಪ್ ಟ್ರೋಫಿಯಲ್ಲಿ ಗಳಿಸಿದ 171 ರನ್ ಅವರನ್ನು  1996ರ  ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಪುನಃ ಆಯ್ಕೆಯಾಗಲು ಸಹಕಾರಿಯಾಯಿತು. ಆಲ್ಲಿ  ಒಂದೇ ಏಕದಿನ ಪಂದ್ಯದಲ್ಲಿ ಆಡಿಸಿ ಮೊದಲನೇ ಟೆಸ್ಟಿನಲ್ಲಿ ಅವರನ್ನು ಪರಗಣಿಸಲೇ ಇಲ್ಲ. ಆದರೆ ನಾಯಕ ಮೊಹಮ್ಮದ್ ಅಜರುದ್ದೀನ್ ವಿರುದ್ದದ ವೈಮನಸ್ಯದಿಂದ ಯಾರಿಗೂ ಹೇಳದೇ ಕೇಳದೇ ಇಂಗ್ಲೇಂಡಿನಿಂದ ಭಾರತಕ್ಕೆ ಮರಳಿದ  ನವಜೋತ್ ಸಿಂಗ್ ಸಿಧು ಸ್ಥಾನದಲ್ಲಿ ಜೂನ್ 20 ರಂದು ಲಾರ್ಡ್ಸ್‌ನ ಟೆಸ್ಟ್ ಪಂದ್ಯದಲ್ಲಿ ಅನೀರೀಕ್ಷಿತವಾಗಿ ಗಂಗೂಲಿ ಸ್ಥಾನ ಪಡೆದು ಮತ್ತೊಬ್ಬ ಚೊಚ್ಚಲು ಪಂದ್ಯವನ್ನಾಡುತ್ತಿದ್ದ ರಾಹುಲ್ ದ್ರಾವಿಡ್ ಜೊತೆಯಲ್ಲಿ ಅಮೋಘವಾಗಿ ಆಟವಾಡಿ 131ರನ್ ಗಳಿಸುವ ಮೂಲಕ  ಹ್ಯಾರಿ ಗ್ರಹಾಂ ಮತ್ತು ಜಾನ್ ಹ್ಯಾಂಪ್‌ಶೈರ್ ನಂತರ ಲಾರ್ಡ್ಸ್‌ನಲ್ಲಿ ಚೊಚ್ಚಲ ಪಂದ್ಯವೊಂದರಲ್ಲಿ ಶತಕದ ಸಾಧನೆ ಮಾಡಿದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ ಮುಂದೇ ಭಾರತದ ತಂಡ ನಾಯಕರಾಗಿ ಭಾರೀ ಬದಲಾವಣೆ ತಂದರು. ಅವರ ನಾಯಕತ್ವದಲ್ಲಿಯೇ ಅನೇಕ ಪ್ರತಿಭಾನ್ವಿತ ಯುವಕರುಗಳು ಭಾರತದ ಪರವಾಗಿ ಪಾದರ್ಪಾಣೆ ಮಾಡುವ ಅವಕಾಶ ಲಭ್ಯವಾಗಿ 2002 ನ್ಯಾಟ್ವೆಸ್ಟ್  ಪಂದ್ಯಾವಳಿಯ  ಫೈನಲ್ ಪಂದ್ಯದಲ್ಲಿ ಇಂಗ್ಲೇಂಡ್ ವಿರುದ್ಧವೇ ಅದೇ ಲಾರ್ಡ್ಬ್ ನಲ್ಲಿ 325 ರನ್ನುಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಛೇದಿಸಿದ್ದದ್ದು ಈಗ ಇತಿಹಾಸ.

gang_dravidಮುಂದೆ ಕೋಚ್ ಗ್ರೇಗ್ ಚಾಪೆಲ್ ಜೊತೆಗೆಗಿನ ವಿರಸದಿಂದ ಕೆಲ ಕಾಲ ತಂಡದಿಂದ ಹೊರಬಿದ್ದರೂ ಮತ್ತೆ ತಂಡಕ್ಕೆ ಮರಳಿ ತಮ್ಮ ಬ್ಯಾಟನ್ನು ಬೀಸಿ ಅತೀ ವೇಗವಾಗಿ ಏಕದಿನ ಕ್ರಿಕೆಟ್ಟಿನಲ್ಲಿ 11,000 ಗಳಿಸಿ ಆಟಗಾರ ಎಂಬ ಕೀರ್ತಿಗೆ  ಪಾತ್ರರಾಗಿದ್ದಲ್ಲದೇ, ಪ್ರಸ್ತುತ BCCI ಅಧ್ಯಕ್ಷರಾಗಿದ್ದಾರೆ ಮತ್ತು ಮುಂದೆ ICC ಅಧ್ಯಕ್ಷರಾಗುವ ಪಟ್ಟಿಯಲ್ಲಿ ಅಗ್ರಗಣ್ಯರಾಗಿದ್ದಾರೆ. 

DGMಸತತ ವೈಫಲ್ಯಗಳ ನಡುವೆಯೂ ಆರು ವರ್ಷಗಳ ನಿರಂತರ  ಪ್ರಯತ್ನದ ಮೂಲಕ ಯಶಸ್ವಿಯಾದ ಮರ್ವಾನ್ ಆಟಪಟ್ಟು, ಐದು ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ಆಡಿ ರಾಷ್ತ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿ ಮೆರೆದ ರಾಹುಲ್ ದ್ರಾವಿಡ್, ದುರಹಂಕಾರಿ ಎಂಬ ಹಣೆಪಟ್ಟಿ ಪದೆದುಕೊಂಡು ತಂಡದಿಂದ ಹೊರಬಿದ್ದಿದ್ದ ಗಂಗೂಲಿ ಮತ್ತೆ ಭರ್ಜರಿ ಪ್ರದರ್ಶನದೊಂದಿಗೆ ತಂಡಕ್ಕೆ ಮರಳಿ, ಅಕ್ರಮಣಕಾರಿ ಯಶಸ್ವಿ ನಾಯಕನಾದ ಸೌರವ್ ಗೌಂಗೂಲಿಯರ ಈ ಅನುಭವಗಳು, ವೈಫಲ್ಯವನ್ನು ನಿಭಾಯಿಸಿ ಮೆಟ್ತಿ ನಿಲ್ಲಬಲ್ಲಲು ಹೆಣಗಾಡುತ್ತಿರುವ ಇಂದಿನ ಯುವಕರುಗಳಿಗೆ ಪ್ರೇರಣೆಯಾಗಬಲ್ಲದು. There is no shortcut to success and one can achieve their goal only through hard work and dedicationಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಾತ್ರವೇ  ಗುರಿಯನ್ನು ಸಾಧಿಸಬಹುದು. ಯಶಸ್ವಿಯಾಗಬಹುದು ಎನ್ನುವುದಕ್ಕೆ ಈ ಮೇಲಿನ ಪ್ರಸಂಗಗಳೇ ಜ್ವಲಂತ ಸಾಕ್ಷಿ.

ಇದ್ದನ್ನೇ ಅಂದಿನ ಕಾಲದಲ್ಲಿಯೇ, ಸ್ವಾಮೀ ವಿವೇಕಾನಂದರು ಅತ್ಯಂತ ಸರಳವಾಗಿ  ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಜನತೆಯನ್ನು ಬಡಿದೆಬ್ಬಿಸಿದರು. ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಸಾವಿನ ಹೊರತಾಗಿಯೂ, ಯಶಸ್ವಿಯಾಗಲು  ಅನೇಕ ಮಾರ್ಗಗಳಿವೆ. ಆ ಮಾರ್ಗಗಳನ್ನು ಹುಡುಕುವ ಮನಸ್ಥಿತಿಯನ್ನು ಗಳಿಸಬೇಕಷ್ಟೇ.

ಗೆಳೆಯ ಮಹೇಶ್ ಮರಾಠೆ ಮರ್ವಾನ್ ಅಟಪಟ್ತು ಬಗ್ಗೆ ಆಂಗ್ಲ ಭಾಷೆಯಲ್ಲಿ ಕಳುಹಿಸಿದ ವ್ಯಾಟ್ಯ್ಶಾಪ್ ಸಂದೇಶವನ್ನು ಕನ್ನಡೀಕರಿಸಿ ಅದರ ಜೊತೆಗೆ ದ್ರಾವಿಡ್ ಮತ್ತು ಗಂಗೂಲಿಯರ ಯಶೋಗಾಥೆಯ ಒಗ್ಗರಣೆಯನ್ನೂ ಸೇರಿಸಿ ನಿಮಗೆ ಉಣಬಡಿಸಿದ್ದೇನೆ.

ನನ್ನೀ ಪ್ರಯತ್ನ ನಿಮಗೆ ಇಷ್ಟವಾಗಿದ್ದಲ್ಲಿ, ದಯವಿಟ್ಟು Like ಮಾಡಿ. Share ಮಾಡಿ, Subscribe ಆಗಿ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s