ಚೀನಾ ದೇಶದ ವುಹಾನ್ ಪ್ರದೇಶದಲ್ಲಿ ಮೊತ್ತ ಮೊದಲಬಾರಿಗೆ ಕಾಣಿಸಿಕೊಂಡ ಕೂರೋನಾ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚವನ್ನೆಲ್ಲಾ ಆಕ್ರಮಿಸಿ ಲಕ್ಷಾಂತರ ಸಾವು ನೋವು ಸಂಭವಿಸಿದ್ದಲ್ಲದೇ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಭಾರತವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಯತ್ನ ಪಡುತ್ತಿದ್ದರೆ, ಯುದ್ಧೋನ್ಮತ್ತ ಚೀನಾ ದೇಶ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಜೂನ್16 ರಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಏಕಾಏಕಿ ಭಾರತದ ಸೇನೆಯ ಮೇಲೆ ಲಾಠಿ ಮತ್ತು ಕಲ್ಲುಗಳ ಧಾಳಿಯನ್ನು ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತದ ಸುಮಾರು 20 ಮಂದಿ ಸೈನಿಕರು ಹುತಾತ್ಮರಾಗಿದ್ಧಾರೆ. ಭಾರತದ ಸೈನಿಕರೂ ಸಹಾ ನಡೆಸಿದ ಪ್ರತಿದಾಳಿಯನ್ನು ನಡೆಸಿ ಚೀನಾದ ಸುಮಾರು 43 ಸೈನಿಕರಿಗೆ ನರಕವನ್ನು ತೋರಿಸಿ ದಿಟ್ಟತನವನ್ನು ತೋರಿಸಿದ್ದಾರಾದರೂ, ಗಡಿ ಪ್ರದೇಶದಲ್ಲಿ ಅಲ್ಲದೇ, ಇಡೀ ದೇಶಾದ್ಯಂತ ಒಂದು ರೀತಿಯ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಈ ಮಧ್ಯೆ ಭಾರತ-ಚೀನಾ ಗಡಿಭಾಗದಲ್ಲಿ ಆಗುತ್ತಿರುವ ಸಾವು-ನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಲ್ಲಾ ರಾಷ್ಟ್ರಗಳೂ ಆದಷ್ಟೂ ಶೀಘ್ರವಾಗಿ ಹಿಂಸಾಚಾರ ನಿಲ್ಲಿಸಿ ಎಂದಿನಂತೆ ಎರಡೂ ದೇಶಗಳ ನಡುವೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿಕೊಂಡಿವೆ. ಶಾಂತಿಪ್ರಿಯವಾದ ನಮ್ಮ ದೇಶದ ರಕ್ಷಣಾಮಂತ್ರಿಗಳು ಈಗಾಗಾಲೇ ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಚೀನಾ ದೇಶಕ್ಕೆ ಕರೆ ನೀಡಿ ಚೀನಾದ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಗಳು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತಾನಾಡಿದ ಸಂದರ್ಭದಲ್ಲಿ ನಮಗೆ ಈ ದೇಶದ ಅಖಂಡತೆ ಬಹಳ ಮುಖ್ಯ. ಆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವೇ ಇಲ್ಲ. ದೇಶದ ಅಖಂಡತೆಯ ರಕ್ಷಣೆಗಾಗಿ ಈ ಹಿಂದೆ ಹಲವು ಬಾರಿ ನಾವು ನಮ್ಮ ಸಾಮರ್ಥ್ಯ ಪ್ರದರ್ಶನವನ್ನು ತೋರಿಸಿದ್ದೇವೆ. ನಮ್ಮ ಸೈನಿಕರ ಈ ತ್ಯಾಗ ಖಂಡಿತವಾಗಿಯೂ ವ್ಯರ್ಥವಾಗಲಾರದು. ಭಾರತ ದೇಶವು ಶಾಂತಿಯನ್ನು ಬಯಸುವ ದೇಶ. ಹಾಗೆಂದು ಕೆಣಕಲು ಬಂದಲ್ಲಿ ನಾವು ನಮ್ಮ ಅಖಂಡ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇವೆ.ನಮ್ಮ ಸಾಮರ್ಥ್ಯ ಮತ್ತು ಪ್ರತ್ಯುತ್ತರದ ಬಗ್ಗೆ ಯಾರು ಕೂಡ ಸಂದೇಹದಲ್ಲಿರುವ ಅಗತ್ಯವಿಲ್ಲ. ನಮ್ಮ ದಿವಂಗತ ವೀರ ಸೈನಿಕರು ಎದುರಾಳಿಯನ್ನು ಕೊಲ್ಲುತ್ತಾ ಕೊಲ್ಲುತ್ತಾ ವೀರ ಮರಣವನ್ನು ಹೊಂದಿದ್ದಾರೆ. ಅವರ ತ್ಯಾಗವು ಖಂಡಿತವಾಗಿಯೂ ವ್ಯರ್ಥವಾಗದು ಎಂದು ಮೋದಿಯವರು ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ನುಡಿದಂತೆ ನಡೆಯುವ ಮತ್ತು ನಡೆಸಲು ಸಾಧ್ಯವಾದದ್ದನ್ನೇ ನುಡಿಯುವ ನಮ್ಮ ಪ್ರಧಾನಿಗಳ ಬಗ್ಗೆ ನಮಗೆ ನಂಬಿಕೆ ಮತ್ತು ವಿಶ್ವಾಸ ಎರಡೂ ಇದೆ. ಪ್ರಧಾನಿಗಳ ಈ ದಿಟ್ಟ ಹೇಳಿಕೆ ದೇಶವಾಸಿಗಳಲ್ಲಿ ತುಸು ನೆಮ್ಮದಿ ಮತ್ತು ಸಮಾಧಾನವನ್ನು ತಂದಿದೆಯಲ್ಲದೇ, ಈ ಬಿಗು ವಾತಾವರಣ ಇನ್ನು ಕೆಲವೇ ದಿನಗಳಲ್ಲಿ ಸುಗಮವಾಗುವ ಲಕ್ಷಣಗಳು ಕಾಣತೊಡಗಿದೆ.
ಇಡೀ ದೇಶವೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಕೆಲಸಕ್ಕೆ ಕರೀ ಬೇಡಿ ಊಟಕ್ಕೆ ಮರೀ ಬೇಡಿ ಅಂತ ಎಲ್ಲೋ ತಲೆಮರೆಸಿಕೊಂದಿದ್ದ ಕೆಲವು ಮಂದಿ ಇದ್ದಕ್ಕಿದ್ದಂತೆಯೇ ಚಾಗೃತರಾಗಿಹೋಗಿದ್ದಾರೆ. ಅದರಲ್ಲೂ ಈ ದೇಶದ ಅತೀ ದೊಡ್ಡ ಬಫೂನ್ ಮತ್ತವನ ಛೇಲಾಗಳು ಗಡಿ ಪ್ರದೇಶದಲ್ಲಿ ಏನಾಗುತ್ತಿದೆ? ನಮ್ಮ ಪ್ರಧಾನಿಗಳೇಕೆ ಮೌನವಾಗಿದ್ದಾರೆ? ಹೊರಗೆ ಬನ್ನಿ ಪ್ರತಿಪಕ್ಷಗಳನ್ನು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಪುಂಖಾನು ಪುಂಖವಾಗಿ ಸರಣಿ ಟ್ವೀಟ್ ಮಾಡುವ ಮುಖಾಂತರ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ತೋರಪಡಿಸುತ್ತಿದ್ದಾರೆಯೇ ಹೊರತು ಇದರಿಂದ ಯಾವುದೇ ಪ್ರಯೋಜನವಿಲ್ಲ. ಸುಖಾ ಸುಮ್ಮನೆ ದೇಶದಲ್ಲಿ ಆಂತರಿಕ ಭೀತಿಯನ್ನು ಮತ್ತು ಭಯದ ವಾತಾವರಣವನ್ನು ಹುಟ್ಟುಹಾಕುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಒಪ್ಪಂದಗಳು ನಡೆದರೂ ಅವು ಎರಡು ಎರಡು ದೇಶಗಳ ನಡುವೆ ರಾಜತಾಂತ್ರಿಕ ಹುದ್ದೆಯನ್ನು ಜೊಂದಿರುವ ಅಧಿಕಾಕಾರಿಗಳ ಸಮಕ್ಷಮದಲ್ಲಿ ನಡೆಯುತ್ತದೆ. ಅಚ್ಚರಿ ಎನ್ನುವಂತೆ ಸೋನಿಯಾ ನೇತೃತ್ವದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ UPA 1 ಸಮಯದಲ್ಲಿ ಚೀನಾ ದೇಶದ ಕಮ್ಯುನಿಸ್ಟ್ ಪಕ್ಷ ಮತ್ತು ನಮ್ಮ ದೇಶದ ಕಾಂಗ್ರೇಸ್ ಪಕ್ಷ. ಹೀಗೆ ಎರಡೂ ದೇಶಗಳ ರಾಜಕೀಯ ಪಕ್ಷಗಳ ನಡುವೆ 2008 ರಲ್ಲಿ ರಾಹುಲ್ ಗಾಂಧಿಯವರು ತನ್ನ ತಾಯಿಯ ಸಮಕ್ಷಮದಲ್ಲಿ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ಅಂದಿನ ಉಪಧ್ಯಕ್ಷ ಮತ್ತು ಪ್ರಸ್ತುತ ಚೀನಾದ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್ ಒಪ್ಪಂದಕ್ಕೆ ಸಹಿ ಹಾಕಿರುತ್ತಾರೆ.
Bilateral, regional ಮತ್ತು international development ವಿಚಾರದಲ್ಲಿ ಈ ಎರಡು ಪಕ್ಷಗಳು ಒಬ್ಬರಿಗೊಬ್ಬರು consult ಮಾಡಿಕೊಳ್ಳುವ ಉದ್ದೇಶದಿಂದ ಚೀನಾದ ಕಮ್ಯುನಿಸ್ಟ್ ಮತ್ತು ಭಾರತದ ಕಾಂಗ್ರೇಸ್ ಪಕ್ಷದ ನಡುವೆ ಈ ಒಪ್ಪಂದ ಮಾಡಿಕೊಂಡಿದ್ದು ನಿಜಕ್ಕೂ ಆಶ್ವರ್ಯಕರ, ವಿಚಿತ್ರ ಮತ್ತು ದೇಶದ ಭಧ್ರತೆಯಿಂದ ಸಂದೇಹಾಸ್ಪದವೇ ಸರಿ. ಇದರ ಮುಂದುವರಿದ ಭಾಗವಾಗಿ ಡೋಕ್ಲಾಂ ಬಿಕ್ಕಟಿನ ಸಂದರ್ಭದಲ್ಲಿ ಯಕ್ಕಶ್ಚಿತ್ ಕಾಂಗ್ರೇಸ್ ಸಂಸದನಾಗಿರುವ ರಾಹುಲ್ ಗಾಂಧಿ, ದೇಶದ ರಾಜಕೀಯದಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿರದ ಪ್ರಿಯಾಂಕಾ ಮತ್ತು ಅಕೆಯ ಪತಿ ರಾಬರ್ಟ್ ವಾದ್ರಾ ಎಲ್ಲರೂ ಸೇರಿ ರಹಸ್ಯವಾಗಿ ಚೀನಾ ರಾಯಭಾರಿಯನ್ನು ಭೇಟಿಯಾಗಿ, ಅಲ್ಲಿ ಯಾವ ಮಾತು ಕಥೆ ನಡೆಸಿದರೆಂದು ಇದುವರೆಗೂ ಬಾಯಿ ಬಿಡದ ರಾಹುಲ್ ಈಗ ಏಕಾಏಕಿ ಪ್ರಧಾನಿಗಳ ವಿರುದ್ಧ How dare ಎಂದು ಕೂಗಾಡುತ್ತಿದ್ದರೆ ಅನುಮಾನದ ಹುತ್ತ ಏಳುವುದು ಸಹಜವಲ್ಲವೇ?
ಕಮ್ಯೂನಿಷ್ಟರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಮ್ಮ ದೇಶದ ಸೈನಿಕರೇ ಜೀನಾದ ಮೇಲೆ ಆಕ್ರಮಣಮಾಡಿದ್ದಾರೆ ಹಾಗಾಗಿ ನಮ್ಮ ಬೆಂಬಲ ಚೀನಾಕ್ಕೆ ಎಂದು ಪ್ರತಿಭಟನೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಉಚ್ಚ ನ್ಯಾಯಾಲಯದ ಮಾಜೀ ನ್ಯಾಯಾಧೀಶ ಮಾರ್ಕಂಡೇಯ ಕಾಡ್ಜುನಂತಹ ಬುದ್ಧಿ ಜೀವಿಗಳೂ ಅದೇ ರೀತಿ ಟ್ವೀಟ್ ಮಾಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ನಮ್ಮ ಸೈನಿಕರು ಬಾಹ್ಯ ಶತ್ರುಗಳನ್ನು ಸುಲಭವಾಗಿ ಕಂಡು ಹಿಡಿದು ಅವರನ್ನು ಬಗ್ಗು ಬಡಿದು ಬಿಡಬಹುದು ಆದರೆ ಈ ರೀತಿಯ ಆಂತರಿಕ ಹಿತಸತ್ರುಗಳು ನಮ್ಮೊಂದಿಗೆಯೇ ನಮಗೇ ಅರಿವಿಲ್ಲದಂತೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವವರನ್ನು ಕಂಡು ಹಿಡಿದು ಬಗ್ಗು ಬಡಿಯುವುದು ತುಸು ಕಷ್ಟವೇ ಸರಿ.
ಇತಿಹಾಸವನ್ನು ಒಮ್ಮೆ ಅವಲೋಕಿಸಿದಲ್ಲಿ ಪ್ರಪಂಚದ ಎಲ್ಲಾ ರಾಷ್ಟ್ರಗಳೂ ತಮ್ಮ ಅಕ್ಕ ಪಕ್ಕದ ನೆರೆರಾಷ್ಟ್ರಗಳೊಂದಿಗೆ ಮಾಡಿಕೊಂಡ ಗಡಿ ಒಪ್ಪಂದವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಲ್ಲಿ, ಚೀನಾ ದೇಶ ಮಾತ್ರ, ಪದೇ ಪದೇ ತನ್ನ ನೆರೆರಾಷ್ಟ್ರಗಳೊಂದಿಗೆ ಕಾಲು ಕೆರೆದುಕೊಂಡು ಕ್ಯಾತೆ ತೆಗೆದು ತನ್ನ ರೇಖೆಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಇದಕ್ಕೆ ಪುರಾವೆ ಎಂಬಂತೆ ಹಿಂದೂ ಚೀನೀ ಬಾಯಿ ಬಾಯಿ ಎಂದು ಹೇಳುತ್ತಲೇ 1962 ರಲ್ಲಿ ಏಕಾಏಕಿ ಭಾರತದ ಮೇಲೆ ಧಾಳಿ ನಡೆಸಿ ಭಾರತದ ಸಾವಿರಾರು ಮೈಲಿಗಳನ್ನು ಅಕ್ರಮಿಸಿಕೊಂಡಿದೆ.
- ಅಕ್ಸಾಯಿ ಚಿನ್ನ್ -(1962 ರಲ್ಲಿ )
- ಕಾರಕೊರ್ರಾಮ್ ಪಾಸ್-(1963 ರಲ್ಲಿ)
- ಚಬ್ಜಿವ್ಯಾಲಿ -(2008 ರಲ್ಲಿ)
- ತಾಯಿ ಪಂಗನೋಕ್- (2008 ರಲ್ಲಿ)
- ಡೋಮ್ ಚಾಲಿ- (2009 ರಲ್ಲಿ)
- ಡೀಮ್ ಜೋಕ್ -(2012 ರಲ್ಲಿ)
- ರಾಕಿ ನೋವುಲಾ (2013 ರಲ್ಲಿ)
ಭಾರತದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶದ ಮೇಲೂ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಲೂ ಇದೆ. ಇನ್ನೂ ಭೂತಾನ್ ಗಡಿಭಾಗದದ ಡೊಕ್ಲಾಮ್ ಪ್ರಾಂತ್ಯ, ಪಲಗಾಂವ್ ಪೀಎಸ್ ವ್ಯಾಲಿ ಮತ್ತು ಗಲವಾನ್ ವ್ಯಾಲಿಗಳಲ್ಲಿಯೂ ಪದೇ ಪದೇ ಅಪ್ರೋಚೋದಿತವಾಗಿ ಸೈನಿಕರ ಜಮಾವಣೆ ಮಾಡಿ ಬೆರರಿಸುತ್ತಲೇ ಇದೆ.
1962 ರಲ್ಲಿ ಭಾರತದ ಸಾವಿರಾರು ಮೈಲಿಗಳನ್ನು ಅಕ್ರಮಿಸಿಕೊಂಡಿದ್ದರ ಕುರಿತು ಸಂಸತ್ತಿನಲ್ಲಿ ಅಂದಿನ ಪ್ರಧಾನಿಗಳಾಗಿದ್ದ ನೆಹರು, ಆ ನೆಲದಲ್ಲಿ ಏನೂ ಬೆಳೆಯುತ್ತಿರಲಿಲ್ಲ ,ಒಂದು ಹಸಿರು ಹುಲ್ಲುಕಡ್ಡಿಯೂ ಬೆಳೆಯುತ್ತಿರಲಿಲ್ಲ ಬಿಡಿ. ಆ ಪ್ರದೇಶ ಹೋದ್ರೆ ಹೋಯ್ತು ಅದರ ಬಗ್ಗೆ ಏಕೆ ತಲೆ ಕೆಡಿಸಿಕೊಂಡಿದ್ದೀರಿ? ಎಂಬಂತಹ ಉದ್ಧಟತನದ ಮಾತುಗಳನ್ನು ಆಡಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಮಹಾವೀರ್ ತ್ಯಾಗಿಯವರು ಆಕ್ರೋಶ ಭರಿತರಾಗಿ ಪಂಡಿತ್ ಜೀ, ದಯವಿಟ್ಟು ಒಮ್ಮೆ ನಿಮ್ಮ ತಲೆಯ ಮೇಲಿನ ನಿಮ್ಮ ಟೋಪಿಯನ್ನ ತೆಗೆದು ನೋಡಿ. ಅಲ್ಲಿಯೂ ಕೂಡ ಏನೂ ಬೆಳೆದಿಲ್ಲ ಮತ್ತೇಕೆ ಆ ಭಾಗ ಬೇಕು ಕಿತ್ತು ಎಸೆದುಬಿಡಿ ಎಂದು ಹೇಳುವ ಮೂಲಕ ನೆಹರೂವಿನ ಅಸಮರ್ಥನೆಯನ್ನು ಜಗಜ್ಜಾಹೀರು ಪಡಿಸುತ್ತಾರೆ. ಇಂತಹ ನಾಲಾಯಕ್ ನಾಯಕರ ಸ್ವಾರ್ಧ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿಯೇ ಪಾಕೀಸ್ಥಾನ ಮತ್ತು ಚೀನಾದ ಗಡಿ ಸಮಸ್ಯೆಗಳು ಪದೇ ಪದೇ ನಮ್ಮನ್ನು ಕಾಡುತ್ತಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಗಡಿ ಭಾಗದಲ್ಲಿ ನಮ್ಮ ಸೈನಿಕರೇನೋ ದಿಟ್ಟತನದಿಂದ ಹೋರಾಡುತ್ತಾರೆ ಎಂಬ ನಂಬಿಕೆ ನಮಗಿದೆ ಆದರೆ ಪ್ರಭಲ ಚೈನಾದ ವಿರುದ್ಧ ಕೇವಲ ನಮ್ಮ ಸೈನಿಕರು ಹೋರಾಡಿದರೆ ಮಾತ್ರ ಸಾಲದು ನಾವುಗಳು ಕೂಡಾ ಹೋರಾಡುವಂತಹ ಸಂದರ್ಭ ಬಂದೊದಗಿದೆ. ನಮ್ಮ ಸೈನಿಕರು bullet ಮೂಲಕ ಹೋರಾಡಿದರೆ ಪ್ರಜೆಗಳಾದ ನಾವೆಲ್ಲರೂ ನಮ್ಮ wallet ಮೂಲಕ ಚೀನಾ ದೇಶವದ ವಿರುದ್ಧ ಹೋರಾಡ ಬೇಕಿದೆ. ತಿಳಿದೋ ತಿಳಿಯದೇ, ಸೂಜಿಯಿಂದ ಸೂರಿನವರೆಗೂ, ಆಟಿಕೆಗಳಿಂದ ಹಿಡಿದೂ ಆಟಂ ಬಾಂಬುಗಳವರೆಗೂ ನಾವು ಸ್ವಾವಲಂಭಿಗಳಾಗದೇ, ಚೀನಾ ದೇಶದ ಉತ್ಪನ್ನಗಳನ್ಬೇ ಆಮದು ಮಾಡಿಕೊಂಡು ಉಪಯೋಗಿಸಿಕೊಳ್ಳುವ ಮೂಲಕ ನಮಗೇ ಅರಿವಿಲ್ಲದಂತೆ ವಾರ್ಷಿಕವಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಆದಾಯವನ್ನು ಚೀನಿಯರಿಗೆ ಮಾಡಿಕೊಡುತ್ತಿದ್ದೇವೆ.
ಹಾಗಾಗಿ ನಾವೆಲ್ಲರೂ ಈ ಕೂಡಲೇ ಚೀನೀ ಉತ್ಪನ್ನಗಳನ್ನು ವಿರೋಧಿಸುವ ಸಂಕಲ್ಪವನ್ನು ಮಾಡುವ ಮೂಲಕ ಚೀನಿಯರಿಗೆ ಆರ್ಥಿಕವಾಗಿ ಪೆಟ್ಟನ್ನು ನೀಡೋಣ. ನಾವು ಚೀನೀ ಉತ್ಪನ್ನಗಳನ್ನು ವಿರೋಧಿಸಿ ಎಂದು ಕರೆ ನೀಡುತ್ತಿದ್ದಂತೆಯೇ ಕೆಲ ಪ್ರಭೂತಿಗಳು ಈ ಸಂದೇಶ ನೀಡಿದ ಮೊಬೈಲ್, ಕಂಪ್ಯೂಟರ್ ಎಲ್ಲವೂ ಚೀನೀ ನಿರ್ಮಿತ ಅವುಗಳನ್ನು ಬಳಿಸಿ ಚೀನೀ ಉತ್ಮನ್ನಗಳನ್ನು ನಿಶೇಧಿಸಿ ಎಂದು ಕರೆ ನೀಡುವುದು ಎಷ್ಟು ಸರಿ ಎಂಬ ಕುಚೋದ್ಯವನ್ನು ಮಾಡುತ್ತಾರೆ. ಇಂತಹ ಅತೀ ಬುದ್ಧಿವಂತರಿಗೆ ನಾವು ಹೇಳಬೇಕಾದದ್ದು ಇಷ್ಟೇ, ಹೌದು. ನಾವು ಈಗಾಲೇ ತಿಳಿದೋ ತಿಳಿಯದೋ ಸಾವಿರಾರು ರೂಪಾಯಿಗಳನ್ನು ವ್ಯವಿಸಿ ಈ ಉತ್ಪನ್ನಗಳನ್ನು ಖರೀದಿಸಿದ್ದೇವೆ. ಅದನ್ನು ಏಕಾಏಕೀ ಬಿಸಾಕಿ ಹೊಸದನ್ನು ಕೊಂಡು ಕೊಳ್ಳುವಷ್ಟು ಆರ್ಥಿಕ ಪರಿಸ್ಥಿತಿಯಲ್ಲಿ ಸದ್ಯಕ್ಕೆ ನಮ್ಮಲ್ಲಿಲ್ಲ. ಹಾಗಾಗಿ ನಮ್ಮ ಮುಂದಿನ ಮೊಬೈಲ್ ಮತ್ತು ಕಂಪ್ಯೂಟರ್ ಉಪಕರಣಗಳು ಚೀನೀ ಕಂಪನಿಯದ್ದಾಗಿರದೇ ಅದು ಸ್ವದೇಶಿ ನೀರ್ಮಿತವವಾಗಿರಲಿ. ಮೇಲಾಗಿ ಎಲೆಕ್ತ್ರಾನಿಕ್ಸ್ ಬಿಡಿ ಭಾಗಗಳ ತಯಾರಿಕೆಯಲ್ಲಿ ನಮ್ಮದೇಶ ಅಷ್ಟೊಂದು ಸಧೃಡವಾಗಿಲ್ಲ ಆದರೆ ಚೀನಾ ನಿರ್ಮಿತ ಸೋಪು, ದಿಟರ್ಜೆಂಟ್ ಪೌಡರ್ಗಳು, ಸೌಂದರ್ಯವರ್ಧಕ ಉತ್ಪನ್ನಗಳು, ಮಕ್ಕಳ ಆಟಿಕೆಗಳು, ಬಟ್ಟೆಗಳನ್ನು ಕೊಳ್ಳುವುದನ್ನು ಈ ಕ್ಷಣದಿಂದಲೇ ನಿಷೇಧಿಸಿ ಸ್ವದೇಶೀ ಉತ್ಪನ್ನಗಳನ್ನೇ ಕೊಂಡು ಕೊಳ್ಳಬಹುದಲ್ಲವೇ? ಒಂದೋಂದೇ ಮೆಟ್ಟಿಲುಗಳನ್ನು ಏರುತ್ತಾ ಹೋದಲ್ಲಿಗ ಆಕಾಶವನ್ನೂ ಸುಲಭವಾಗಿ ಮುಟ್ಟಬಹುದು. ಹಾಗಾಗಿ ಹಂತ ಹಂತವಾಗಿ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸೋಣ.
ಇನ್ನು ತಿಳಿದೋ ತಿಳಿಯದಯೋ ನಮ್ಮ ಮೋಬೈಲ್ಗಳಲ್ಲಿ ಚೀನಾದ ಅನೇಕ ಅಪ್ಲಿಕೇಷನ್ಗಳನ್ನು ಅಳವಡಿಸಿಕೊಂಡಿದ್ದೇವೆ. ಈ ಅಪ್ಲಿಕೇಶನ್‌ಗಳಿಂದ ಚೀನಾ ದೇಶ ಪ್ರತೀ ದಿನವೂ ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಿದೆ. ಹಾಗಾಗಿ ಈ ಕೂಡಲೇ ಚೀನೀ ಅಪ್ಲಿಕೇಷನ್ಗಳನ್ನು ನಮ್ಮ ಮೊಬೈಲ್ಗಳಿಂದ ಅಳಿಸುವ ಮೂಲಕ ಚೀನಾದೇಶದ ಬೆನ್ನು ಮುರಿಯುವ ಮೊದಲ ಹೆಜ್ಜೆಯನ್ನು ಇರಿಸಬಹುದಲ್ಲವೇ?
ಮನಸ್ಸಿದ್ದಲ್ಲಿ ಮಾರ್ಗವಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವವರ ಮಾತಿಗೆ ಮರುಳಾಗದೇ, 130 ಕೋಟಿ ಜನರೂ ಒಗ್ಗೂಡಿ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವ ಸಂಕಲ್ಪ ತೊಡೋಣ. ಗಡಿಯಲ್ಲಿ ನಮ್ಮ ಸೈನಿಕರು bullet ಮೂಲಕ ಚೀನಿಯರನ್ನು ನಾಶ ಪಡಿಸಿದರೆ, ನಾವುಗಳು ಕುಳಿತಲ್ಲಿಯೇ wallet ಮುಖಾಂತರ ಪರೋಕ್ಷವಾಗಿ ಆರ್ಥಿಕವಾಗಿ ಚೀನಿಯರ ಬೆನ್ನು ಮುರಿಯೋಣ. ನೆನಪಿಡಿ ಚೀನಾ ದೇಶಕ್ಕೆ ಭಾರತವೇ ಅತೀ ದೊಡ್ಡ ಮಾರುಕಟ್ಟೆ. ಒಮ್ಮೆ ಈ ಮಾರುಕಟ್ಟೆ ಅಲುಗಾಡಿಸಿದಲ್ಲಿ ಚೀನಾ ತನ್ನಷ್ಟಕ್ಕೆ ತಾನೇ ಭಾರತದ ಮುಂದೆ ಬಾಲ ಮುದಿರಿಕೊಂಡು ತಲೆ ಬಗ್ಗಿಸುವ ಸಮಯ ಬಂದೇ ಬರುತ್ತದೆ. ಅಂತಹ ಪರಿಸ್ಥಿತಿಯನ್ನು ನಿರ್ಮಿಸುವ ಎಲ್ಲಾ ಸುವರ್ಣಾವಕಾಶಗಳೂ ನಮ್ಮ ಕೈಯ್ಯಲ್ಲೇ ಇದೆ. ನಾವು ಅಂಗಡಿಗೆ ಹೋದಾಗ ಹೇಗೆ ಕೊಳ್ಳುವ ವಸ್ತುವಿನ expire date ನೋಡುತ್ತೇವೋ ಹಾಗೆಯೇ Made in China ಅಥವಾ PRC ಎಂದು ನಮೂದಿಸಿರುವ ವಸ್ತುಗಳನ್ನು ಕಂಡ ಕೂಡಲೇ, ಆ ವಸ್ತುಗಳನ್ನು ನಾವು ಖರೀದಿಸುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡುವ. ಮೂಲಕ ಸ್ವಾವಲಂಬಿ ಭಾರತೀಯರಾಗೋಣ. ನಾವು ಚೀನಿ ವಸ್ತುಗಳ ಮೇಲೆ ಖರ್ಚು ಮಾಡುವ ಒಂದೊಂದು ರೂಪಾಯಿಯೂ ನಮಗೇ ಅಸ್ತ್ರಗಳ ರೂಪದಲ್ಲಿ ನಮ್ಮ ಮೇಲೆಯೇ ಪ್ರಯೋಗವಾಗುವುದನ್ನು ತಡೆಯೋಣ.
ಈ ಮಾಹಿತಿಯನ್ನು ನಮ್ಮ ಎಲ್ಲಾ ಬಂಧು ಮಿತ್ರರಿಗೂ ಆದಷ್ಟು ಶೀಘ್ರವಾಗಿ ತಿಳಿಸೋಣ. ಚೀನಾದೇಶವನ್ನು ಆರ್ಥಿಕವಾಗಿ ಬಗ್ಗು ಬಡಿಯುವಲ್ಲಿ ಮತ್ತು ನಮ್ಮದೇಶವನ್ನು ಸಧೃಡ ಪಡಿಸುವ ಮಹಾನ್ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಇಂದಿನಿಂದಲೇ ಆರಂಭಿಸೋಣ. ನಾಳೆ ಎಂದರೆ ಹಾಳು ಹಾಗಾಗಿ ಇಂದಿನ ಕೆಲಸವನ್ನು ಈಗಲೇ ಮಾಡೋಣ. ನಾಳೆಯ ಕೆಲಸವನ್ನು ಇಂದೇ ಮಾಡೋಣ.
ಏನಂತೀರೀ?