ಈ ಬಂಗಲೆಯ ವಿಳಾಸ ಓದಿದ ಕೂಡಲೇ ಬಹುತೇಕ ಭಾರತೀಯರಿಗೆ ಗೊತ್ತಿರುವ ಸಂಗತಿಯೇನೆಂದರೆ, ಆ ಬಂಗಲೆಯಲ್ಲಿ ಸದ್ಯಕ್ಕೆ ವಾಸಿಸುತ್ತಿರುವವರು, ಅರ್ಹತೆ ಇಲ್ಲದಿದ್ದರೂ, ನಮ್ಮ ಸರ್ಕಾರದಲ್ಲಿ ಯಾವುದೇ ಉನ್ನತ ಹುದ್ದೆ ಹೊಂದಿರದಿದ್ದರೂ, ನಮ್ಮ ದೇಶದ ಅನೇಕ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತರಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಹೌದು ನಿಮ್ಮ ಉಹೆ ಸರಿ. ನಾನೀಗ ಹೇಳ ಹೊರಟಿರುವುದು ನಮ್ಮ ಸರ್ಕಾರದ ಭಾಗವಾಗಿರದ ಕೇವಲ ಸಾಂಸದೆಯಾಗಿರುವ ಸೋನಿಯಾ ಗಾಂಧಿ ಅವರು ಹೇಗೆ ಈ ಬಂಗಲೆಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ? ಇನ್ನೂ ಆ ಬಂಗಲೆಯನ್ನೇಕೆ ಖಾಲಿ ಮಾಡುತ್ತಿಲ್ಲ?
ನಮ್ಮ ದೇಶದ ದೌರ್ಭಾಗ್ಯ ಎಂದರೆ ದೇಶದ ಯಾವುದೇ ಕಾನೂನು ಕಟ್ಟಲೆಗಳು ಈ ನಕಲೀ ಗಾಂಧಿಗಳಿಗೆ ಅನ್ವಯಿಸುವುದಿಲ್ಲ. ಇಡೀ ದೇಶವೇ ಅವರ ಜಹಾಗೀರು. ನಮ್ಮ ದೇಶಕ್ಕೆ ಸ್ವಾತಂತ್ಯ್ರ ಬಂದಿರುವುದು ಮತ್ತು ಇಷ್ಟು ವರ್ಷ ದೇಶ ಈ ರೀತಿಯಾಗಿ ಇರುವುದು ಕೇವಲ ಅವರ ಕುಟುಂಬದ ತ್ಯಾಗ ಮತ್ತು ಬಲಿದಾನಗಳಿಂದ ಎಂದು ಭಾರತೀಯರನ್ನು ನಂಬಿಸಲಾಗಿರುವುದರಿಂದ, ಇಷ್ಟು ವರ್ಷ ದೇಶದ ಸಂಪತ್ತನ್ನು ಆ ಕುಟುಂಬ ಲೂಟಿ ಹೋಡೆಯುತ್ತಿದೆಯಲ್ಲದೆ ಸರ್ಕಾರೀ ಬಂಗಲೆಗಳನ್ನು ಬಿಡಲು ನಿರಾಕರಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ನಮ್ಮ ದೇಶದಲ್ಲಿ ಸಾಮಾನ್ಯ ಜನರು ಸಣ್ಣದಾಗಿ ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದಲ್ಲಿ ಅಥವಾ ಕಳ್ಳತನ ಮಾಡಿ ಸಿಕ್ಕಿ ಹಾಗಿಕೊಂಡಲ್ಲಿ ಹತ್ತಾರು ವರ್ಷಗಳವರೆಗೆ ಬೇಲ್ ಪಡೆಯಲೂ ಆಗದೇ ಸರೆಮನೆಯಲ್ಲಿಯೇ ಕಾಯಬೇಕಾಗುತ್ತದೆ. ಅದರೆ, ಹಾಡ ಹಗಲಲ್ಲಿಯೇ ರಾಜಾರೋಷವಾಗಿ ಸಾವಿರಾರು ಕೋಟಿಗಳನ್ನು ಲೂಟಿ ಮಾಡಿದವರಿಗೆ ಕೇವಲ ಎಂಟೇ ನಿಮಿಷಗಳಲ್ಲಿ ಜಾಮೀನು ಪಡೆದು ಧಿಮ್ಮಲೆ ರಂಗಾ ಎಂದು ಓಡಾಡುವುದಲ್ಲದೇ ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ(ಕಳ್ಳನೇ ಪೊಲೀಸರನ್ನು ಬೆದರಿಸಿದಂತೆ) ಎನ್ನುವಂತೆ ತಾಯಿ ಮೌತ್ ಕಾ ಸೌದಾಗರ್ (ಸಾವಿನ ವ್ಯಾಪಾರಿ) ಎಂದರೆ, ಮಗ ಚೌಕೀದಾರ್ ಚೋರ್ ಹೈ ಎಂದು ಪ್ರಾಮಾಣಿಕರಾದ ಪ್ರಧಾನಿ ಮೋದಿಯವರನ್ನು ಮರ್ಯಾದೆ ಇಲ್ಲದೇ ಹಂಗಿಸಲು ಹೋಗಿ ಜನರ ಮುಂದೆ ಮರ್ಯಾದೆ ಕಳೆದುಕೊಳ್ಳುತ್ತಾರೆ.

ನಿಜ ಹೇಳ ಬೇಕೆಂದರೆ #10, ಜನಪಥ್ ಬಂಗಲೆ ಸರ್ಕಾರಿ ಬಂಗಲೆಗಳಲ್ಲಿ ಅತಿದೊಡ್ಡ ಮನೆಗಳಲ್ಲಿ ಒಂದಾಗಿದೆ ಮತ್ತು ಪ್ರಧಾನ ಮಂತ್ರಿಗಳು ವಾಸಿಸುತ್ತಿರುವ ಬಂಗಲೆಗಿಂತಲೂ ದೊಡ್ಡದಾಗಿದೆ. ನಕಲಿಗಾಂಧಿ ಕುಟುಂಬವು ಇದನ್ನು ಕಳೆದ ಮೂರು ದಶಕಗಳಿಂದಲೂ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದರೂ ತಪ್ಪಾಗಲಾರದು. ಈ ನಕಲಿ ಗಾಂಧಿಗಳು ತಮ್ಮನ್ನು ಈ ದೇಶದ ರಾಜರು ಎಂಬ ಭ್ರಮೆಯಲ್ಲಿರುವುದರಿಂದ ಅವರಿಗೆ ಅರ್ಹರಲ್ಲದಿದ್ದರೂ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಒಂದು ಪಕ್ಷ ಸರ್ಕಾರವು ಆಕೆಯನ್ನು ಈ ಬಂಗಲೆಯನ್ನು ಖಾಲಿ ಮಾಡಲು ಕೇಳಿದರೆ, ಅವರ ಪಕ್ಷದ ಹಿಂಬಾಲಕರು ಖಂಡಿತವಾಗಿಯೂ ಒಬ್ಬ ಮಾಜೀ ಪ್ರಧಾನಿಗಳ ಹೆಂಡತಿ,ಮಾಜೀ ಪ್ರಧಾನಿಗಳ ಸೊಸೆಯ ಮೇಲೇ ನಡೆಸುತ್ತಿರುವ ದೌರ್ಜನ್ಯ ಎಂದು ಬೀದಿಗಿಳಿದು ದೊಂಬಿ ಎಬ್ಬಿಸುತ್ತಾರಲ್ಲದೇ ಸಮಾಜದಲ್ಲಿ ಆಕೆಯ ಬಗ್ಗೆ ಅನಾವಸ್ಯಕ ಸಹಾನುಭೂತಿಯುವ ಆಶಾಡಭೂತನ ತೋರುತ್ತಾ ಸಮಸ್ಯೆಯನ್ನು ಸೃಷ್ಟಿಸುತ್ತಾರೆ ಎಂಬ ಆತಂಕದಲ್ಲಿ ಸುಮ್ಮನಿದೆ ಎಂದೆನಿಸುತ್ತದೆ.
ವಾಸ್ತವವಾಗಿ ಈ ಬಂಗಲೆಯನ್ನು ನೆಹರು ಅವರ ನಂತರ ಪ್ರಧಾನ ಮಂತ್ರಿಗಳಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕೊಡಲಾಗಿತ್ತು. ಅವರ ನಂತರ ಹಲವಾರು ಮಂತ್ರಿ ಮಾಗಧರ ನಿವಾಸವಾಗಿ ಎಂಭತ್ತರ ದಶಕದಲ್ಲಿ ಸಫ್ದರ್ಜಂಗ್ ನಿವಾಸದಲ್ಲಿ ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ನಂತರ ಅರ್ಹತೆ ಇಲ್ಲದಿದ್ದರೂ ಅಚಾನಕ್ಕಾಗಿ ಪ್ರಧಾನಿಯಾದ ಶ್ರೀ ರಾಜೀವ್ ಗಾಂಧಿಯವರಿಗೆ 10, ನೇ ಜನಪಥ ಬಂಗಲೆಯನ್ನು ನೀಡಲಾಯಿತು. ಆದರೆ ರಾಜೀವ್ ಗಾಂಧಿಯವರು ಈ ಬಂಗಲೆಯಲ್ಲಿರಲು ಇಚ್ಚಿಸದೇ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಉಳಿಯಲು ನಿರ್ಧರಿಸಿದ ಕಾರಣ ಈ ಈ 10, ಜನಪಥ್ ಬಂಗಲೆಯನ್ನು ಪಕ್ಷದ ಕೆಲಸಗಳಿಗಾಗಿ ಮತ್ತು ಸಭೆಗಳಿಗಾಗಿ ಬಳಸಿಕೊಳ್ಳಲಾರಂಭಿಸಿದ್ದರಿಂದ ಈ ಜನಪಥ್ ಬಂಗಲೆ ರಾಜೀವ್ ಗಾಂಧಿ ಅವರ ಹೆಸರಲ್ಲೇ ಉಳಿಯಿತು. ರಾಜೀವ್ ಅಧಿಕಾರ ಕಳೆದುಕೊಂಡು ವಿ ಪಿ ಸಿಂಗ್ ಸರಕಾರ ಬಂದರೂ ಸಹಾ , 10, ನೇ ಜನಪಥ್ ಬಂಗಲೆಯನ್ನು ರಾಜೀವ್ ಗಾಂಧಿಯ ಹೆಸರಿನಲ್ಲೇ ಉಳಿಸಿ, 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಬಂಗಲೆಯನ್ನು ಪ್ರಧಾನ ಮಂತ್ರಿಯ ಅಧಿಕೃತ ನಿವಾಸವನ್ನಾಗಿ ಮಾಡಲಾಯಿತು.
ಅಧಿಕಾರವನ್ನು ಕಳೆದುಕೊಂಡ ಬಹುತೇಕರು ಕೆಲವೇ ಸಮಯದಲ್ಲಿ ಸರ್ಕಾರೀ ಬಂಗಲಿಯನ್ನು ಖಾಲಿ ಮಾಡುತ್ತಾರಾದರೂ, ಪ್ರಧಾನಮಂತ್ರಿಗಳಿಗೆಂದೇ ಮೀಸಲಾಗಿದ್ದ ಜನಪಥ್ ಬಂಗಲೆ ಅನಧಿಕೃತವಾಗಿ ನಕಲೀ ಗಾಂಧಿಗಳ ಪಾಲಾಯಿತು. ಯಾವ ಲೆಕ್ಕದಲ್ಲಿಯೂ ನೋಡಿದರೂ ಸೋನಿಯಾ ಗಾಂಧಿ ಆ ಬಂಗಲೆಯನ್ನು ಬಳಸಲು ಅರ್ಹತೆಯೇ ಇಲ್ಲವಾದರೂ ಸಹ, ಅದೆಷ್ಟೋ ದಶಕಗಳಿಂದ ಆಕೆಯನ್ನು ಯಾರೂ ಸಹ ಪ್ರಶ್ನಿಸದಿರುವುದು ದುರಂತವೋ?, ಆಡಳಿತ ಪಕ್ಷದವರು ತೋರಿದ ಉದಾರತೆಯೋ? ಅಥವಾ ಹೊಂದಾಣಿಕೆ ರಾಜಕೀಯವೋ? ಒಟ್ಟಿನಲ್ಲಿ ಸೋನಿಯಾ ಗಾಂಧಿ ಮಾತ್ರ ಆ ಬಂಗಲೆಯನ್ನು ಬಿಟ್ಟು ಹೊರಡಲಿಲ್ಲ! ರಾಜೀವ್ ಗಾಂಧಿ ಹೆಸರಿನಲ್ಲಿಯೇ ಉಳಿದಿದ್ದ ಆ ಬಂಗಲ್ಲಿದ್ದ ಆಕೆ ಯಾವುದೇ ಆಂತರಿಕ ಚುನಾವಣೆಯೂ ಇಲ್ಲದೇ, ರಾಜೀವ್ ಗಾಂಧಿಯವರ ಪತ್ನಿ ಎಂಬ ಸಹಾನುಭೂತಿಯಡಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನೇರಿದನಂತರ ಪತಿಯ ಹೆಸರು ಹೇಳುತ್ತಲೇ ಜನಪಥ್ ಬಂಗಲೆಯಲ್ಲಿಯೇ ಉಳಿದು ಬಿಟ್ಟರು. ನಂತರ ಆವರದ್ದೇ ಕಾಂಗ್ರೇಸ್ ಸರ್ಕಾರ ಬಂದ ಮೇಲಂತೂ ಆಕೆಯನ್ನು ಕೇಳುವ ಧೈರ್ಯ ಯಾರಿಗೂ ಬರಲೇ ಇಲ್ಲ. ಆ ಮನೆಯ ಅಂಗಳದಲ್ಲಿ ರಾಜೀವ್ ಗಾಂಧಿಯ ಪಾರ್ಥೀವ ಶವವನ್ನು ಇಡಲಾಗಿತ್ತು ಎಂಬ ಒಂದೇ ಒಂದು ಭಾವನಾತ್ಮಕ ಕಾರಣವೂ ಇದರ ಹಿಂದೆ ಕೆಲಸ ಮಾಡಿರಬಹುದೇನೋ?
ಹೋಗಲೀ ಪಾಪಾ ಸೋನಿಯಾ ಗಾಂಧಿ ಪತಿಯನ್ನು ಕಳೆದುಕೊಂಡ ಒಬ್ಬಂಟಿ ಹೆಣ್ಣು ಮಗಳು. ವಿಧವೆ. ಎಂಬೆಲ್ಲ ಉದಾರತೆಯಿಂದ ಆ ಬಂಗಲೆಯಲ್ಲಿಯೇ ಉಳಿಯಲು ಅವಕಾಶ ಕೊಟ್ಟಿರ ಬಹುದು ಎಂದು ಕೊಂಡರೆ, 2004 ರಲ್ಲಿ ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗ ಆತನಿಗೂ ಸಹ ಒಬ್ಬ ಸಂಸದನಿಗಿಂತ ಹೆಚ್ಚಿನದೇ ಕಿಮ್ಮತ್ತಿನ ದೊಡ್ಡ ಬಂಗಲೆಯೊಂದನ್ನು ನೀಡಲಾಯಿತು. ಸರಿ ಅವರಿಬ್ಬರೂ ಜನರಿಂದ ಆಯ್ಕೆಯಾದ ಸಾಂಸದರು ಎಂದು ಪರಿಗಣಿಸೋಣ. ಆದರೆ, ಕೇವಲ ಸೋನಿಯಾಳ ಮಗಳು ಮತ್ತು ಅಳಿಯನೆಂಬ ಕಾರಣಕ್ಕಾಗಿ ಸುರಕ್ಷತೆ ಮತ್ತು ಭಧ್ರತೆಯ ನೆಪವೊಡ್ದಿ ಪ್ರಿಯಾಂಕ ಮತ್ತು ಆಕೆಯ ಪತಿ ರಾಬರ್ಟ್ ವಾದ್ರಾನಿಗೆ ದೆಹಲಿಯ ಹೃದಯ ಭಾಗದಲ್ಲಿರುವ ಸರಕಾರದ ಉನ್ನತ ಹುದ್ದೆಗಳಲ್ಲಿರುವವರಿಗೆ ಮಾತ್ರವೇ ಇರುವಂತಹ ಬಂಗಲೆಯನ್ನು ನೀಡಲಾಯಿತು. ಆ ಕುಟುಂಬದ ದಾಸ್ಯತನಕ್ಕೇ ಒಗ್ಗಿಹೋಗಿರುವ ಅಂದಿನ ಕಾಂಗ್ರೇಸ್ ಸರ್ಕಾರದ ಯಾರಿಗೂ ಇದು ಯಾವ ಪುರುಷಾರ್ಥಕ್ಕೆ ಕೊಟ್ಟಿರಿ ಸ್ವಾಮಿ? ಎಂದು ಕೇಳುವ ಪೌರುಷವನ್ನು ತೋರದಿರುವುದು ಗುಲಾಮೀತನದ ಪರಮಾವಧಿ ಎಂದರೂ ತಪ್ಪಾಗಲಾರದು.
ಈ ಬಂಗಲೆಗಳ ಬಾಡಿಗೆಯನ್ನು ಅಲ್ಲಿ ಉಳಿಯುವ ರಾಜಕಾರಣಿಗಳು ಕಟ್ಟುವುದಿಲ್ಲ. ಈ ಬಂಗಲೆಗಳು ಸಾಮಾನ್ಯ ಬಂಗಲೆಗಳಾಗಿರದೇ ಐಷಾರಾಮಿ ಬಂಗಲೆಗಳು. 6 – 7 ಶಯನಗೃಹಗಳು! ಸಭಾಂಗಣಗಳು, ಜಿಮ್ ಮತ್ತು ಮನೋರಂಜನೆಯ ಸೌಕರ್ಯಗಳು, ಬೃಹತ್ತಾದ ಲಾನು, ಮತ್ತು ಅದೆಷ್ಟೋ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ! ಬಂಗಲೆಗಳಲ್ಲಿ ಕೆಲಸ ಮಾಡುವ ಮಾಲಿಯಿಂದ ಹಿಡಿದು, ಬಾಣಸಿಗನವರೆಗೂ ಸಹ ಸರಕಾರವೇ ಸಂಬಳವನ್ನು ಭರಿಸುತ್ತವೆ! ಈ ಪ್ರತೀ ಬಂಗಲೆಯ ಬಾಡಿಗೆ 5 ಲಕ್ಷಕ್ಕಿಂತ ಹೆಚ್ಚು ಮತ್ತು, ವರ್ಷದ ನಿರ್ವಹಣಾ ವೆಚ್ಚವೊಂದು 30 – 30 ಲಕ್ಷಕ್ಕೂ ಜಾಸ್ತಿ. ಈಗ ಊಹಿಸಿಕೊಳ್ಳಿ ಕೇವಲ ನಾಲ್ಕು ಜನರಿರುವ ಒಂದು ಕುಟುಂಬಕ್ಕಾಗಿ ಮೂರು ಉಚಿತ ಐಷಾರಾಮಿ ಬಂಗಲೆಗಳು ಮತ್ತು ಅದರ ನಿರ್ವಣೆಗಾಗಿ ಪ್ರಜೆಗಳು ಬೆವರು ಸುರಿಸಿ ಕಟ್ಟಿದ ಕೋಟ್ಯಾಂತರ ತೆರಿಗೆ ಹಣ ಖರ್ಚಾಗುತ್ತಿದೆ.
ಈ ಕಾಂಗ್ರೆಸ್ ಸರ್ಕಾರದ ಬೇಕಾ ಬಿಟ್ಟಿ ವ್ಯವಹಾರ ಇಲ್ಲಿಗೇ ಮುಗಿಯಿತೆಂದು ಕೊಳ್ಳಬೇಡಿ. ಸ್ವಲ್ಪ ಹೃದಯ ಗಟ್ಟಿ ಮಾಡಿಕೊಂಡು ಮುಂದಿನದ್ದನ್ನು ಓದಿ. ಹತ್ತು ವರ್ಷಗಳ UPA 1 & 2 ಆಡಳಿತಾವಧಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಭೂಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ, ಯಾವ ದಿಕ್ಕಿನಲ್ಲಿ ನೋಡಿದರೂ ರಾಜಕೀಯಕ್ಕೆ ಸಂಬಂಧಿಸಿರದ, ಕೇವಲ ಸೋನಿಯಾ ಗಾಂಧಿ ಅಳಿಯನಾದ ರಾಬರ್ಟ್ ವಾದ್ರಾನ ತಾಯಿಯಾದ ಮೌರೀನ್ ವಾದ್ರಾಳಿಗೂ ಸಹ ಸರ್ಕಾರಿ ಬಂಗಲೆಯನ್ನು ಉಚಿತವಾಗಿ ನೀಡಿದ್ದಲ್ಲದೇ, ಆಕೆಗೆಗೂ ಸಹಾ ಗುಪ್ತವಾಗಿ ಭದ್ರತೆಯನ್ನೂ ಒದಗಿಸಿತ್ತು! ಆಕೆ ನಕಲೀ ಗಾಂಧಿಗಳ ಹತ್ತಿರದ ಸಂಬಂಧಿತ ವ್ಯಕ್ತಿ ಎಂಬ ಉದ್ದೇಶ ಮಾತ್ರಕ್ಕೇ ಆಕೆಗೆ ಸಕಲ ಸರಕಾರೀ ಸೌಲಭ್ಯವನ್ನು ನೀಡಲಾಗಿತ್ತು!
ಕಾಂಗ್ರೇಸ್ ಪಕ್ಷದ ಬಂಗಲೇ ರಾಜಕಾರಣ ಇಲ್ಲಿಗೇ ಮುಗಿಯುವುದಿಲ್ಲ. ಸರ್ವೋಚ್ಛ ನ್ಯಾಯಾಲಯ ಕಾಂಗ್ರೆಸ್ ಕಚೇರಿಗೆ ಹೊಸ ಭೂಮಿಯನ್ನು ಘೋಷಿಸಿ, ಸದ್ಯಕ್ಕೆ ಅಕ್ಬರ್ ರಸ್ತೆಯಲ್ಲಿರುವ ತನ್ನ ಹೆಚ್ಚುವರಿ ಕಚೇರಿಯನ್ನು ಆರು ವರ್ಷದ ಹಿಂದೆಯೇ ಬಿಟ್ಟು ಕೊಡಬೇಕು ಎಂದು ಆದೇಶಿಸಿದ್ದರೂ, ಇವತ್ತಿನವರೆಗೂ ಅಕ್ಬರ್ ರಸ್ತೆಯಲ್ಲಿರುವ ಆ ಬಂಗಲೆಯೂ ಸಹ ಇನ್ನೂ ಕಾಂಗ್ರೆಸ್ಸಿನ ಅಧೀನದಲ್ಲಿದೆ. ಆರು ವರ್ಷಗಳಾದರೂ ಸಹ ಕಚೇರಿಯನ್ನು ಬಿಟ್ಟು ಕೊಡದೇ ಆ ಬಂಗಲೆಯನ್ನೂ ತನ್ನ ಸುಪರ್ದಿಗೆ ಶಾಶ್ವತವಾಗಿ ತೆಗೆದುಕೊಳ್ಳುವ ಹುನ್ನಾರ ತೆರೆಮರೆಯಲ್ಲಿ ನಡೆಸಿದೆ.
ಇದಷ್ಟೇ ಅಲ್ಲದೇ, ಕಾಂಗ್ರೇಸ್ಸಿನ ಪರವಾಗಿದ್ದ ಅನೇಕ ಬುದ್ಧಿ ಜೀವಿಗಳಿಗೆ ಮತ್ತು ಪತ್ರಕರ್ತರಿಗೂ ಸಹಾ ಅಂದಿನ ಸರ್ಕಾರ ಅನೇಕ ಬಂಗಲೆಗಳನ್ನು ಉಚಿತವಾಗಿ ನೀಡಿತ್ತು. ಯಾವಾಗ ಮೋದಿ ಸರಕಾರ ಮೊದಲಬಾರಿಗೆ ಅಸ್ತಿತ್ವಕ್ಕೆ ಬಂದಿತೋ, ಆಗ ಮಂತ್ರಿಗಳಾಗಿದ್ದ ವೆಂಕಯ್ಯನಾಯ್ಡುರವರು ಇಂತಹ ಅದೆಷ್ಟೋ ಜನರನ್ನು ಬಂಗಲೆಯಿಂದ ಹೊರ ಹಾಕಿದಾಗ ದೆಹಲಿಯಲ್ಲಿ ಕೆಲ ಕಾಲ ದೊಂಬಿ ಎಬ್ಬಿಸಿ ನಂತರ ತಣ್ಣಗಾಯಿತು.
ಕಟ್ಟ ಕಡೆಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ, ಸರ್ಕಾರದ ಯಾವುದೇ ಉನ್ನತ ಹುದ್ದೆಯಲ್ಲಿರದ ಸೋನಿಯಾ ಗಾಂಧಿ ಅದು ಹೇಗೆ ಇಂದಿಗೂ 10 ನೇ ಜನಪಥ್ ನಿವಾಸದಲ್ಲಿ ವಾಸಿಸುತ್ತಿದ್ದಾರೇ? ಉಳಿದ 542 ಸಂಸತ್ ಸದಸ್ಯರಿಗೆ ನೀಡಲಾಗಿರುವ ಬಂಗಲೆಯೊಂದನ್ನೇ ಆಕೆಗೆ ಮತ್ತು ಆಕೆಯ ಮಗನಿಗೆ ನೀಡಬಹುದಲ್ಲವೇ? ಸುಮ್ಮನೆ ಸದ್ದಿಲ್ಲದೇ ತೆರಿಯನ್ನಂತೂ ನಾವು ಕಟ್ಟುತ್ತಿದ್ದೇವೆ ಆದೆರೇ ಈ ಸರ್ಕಾರಿ ಬಂಗಲೇ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಏನಂತೀರೀ?