ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ.

ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕಡಲೆಕಾಯಿ ಬೀಜ – 2 ಬಟ್ಟಲು
ಎಳ್ಳು – 1 ಚಮಚ (ಬಿಳಿ ಅಥವಾ ಕಪ್ಪು ಯಾವುದಿದ್ದರೂ ಸರಿ)
ಬೆಲ್ಲ – 2 ಚಮಚ
ಸಾಸಿವೆ – 1/4 ಚಮಚ
ಕಡ್ಲೆ ಬೇಳೆ -1/2 ಚಮಚ
ಉದ್ದಿನ ಬೇಳೆ 1/2 ಚಮಚ
ಒಣ ಮೆಣಸಿನಕಾಯಿ – 8-10 (ನಿಮ್ಮ ಖಾರಕ್ಕೆ ಅನುಗುಣವಾಗಿ)
ಹುಣಸೇ ಹಣ್ಣಿನ ರಸ – 1/4 ಬಟ್ಟಲು
ಚಿಟುಕಿ ಅರಿಶಿನ ಪುಡಿ
ಚಿಟುಕಿ ಇಂಗು
ಅಡುಗೆ ಎಣ್ಣೆ – 2-3 ಚಮಚ
ಬೆಳ್ಳುಳ್ಳಿ ಎಸಳು – ೩-೪ (ಐಚ್ಛಿಕ)
ಕರಿಬೇವಿನ ಸೊಪ್ಪು – 10-15 ಎಲೆಗಳು
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

ಕಡಲೇಕಾಯಿ ಬಾತ್ ತಯಾರಿಸುವ ವಿಧಾನ

WhatsApp Image 2020-06-22 at 11.51.14 PM

  • ಒಂದು ಗಟ್ಟಿ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು, ಬಾಣಲಿ ಕಾದ ನಂತರ ಕಡಲೇಕಾಯಿ ಬೀಜ, ಎಳ್ಳು, ಒಣ ಮೆಣಸಿನಕಾಯಿಯನ್ನು ಮತ್ತು ಬೇಕಿದ್ದಲ್ಲಿ ಬೆಳ್ಳುಳ್ಳಿ ಎಸಳನ್ನು ಸೇರಿಸಿ ಚೆನ್ನಾಗಿ ಹಸಿ ಹೋಗಿ ಕೆಂಪಗಾಗುವರೆಗೂ ಹುರಿದುಕೊಳ್ಳಿ
  • ಆದು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ
  • ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೇಕಾಯಿ ಬೀಜ, ಕಡಲೇಬೇಳೆ, ಉದ್ದಿನಬೇಳೆ, ಚಿಟುಕಿ ಇಂಗು, ಆರಿಶಿನ ಮತ್ತು ಕರಿಬೇವನ್ನು ಹಾಕಿ ಒಗ್ಗರಣೆ ಹಾಕಿಕೊಳ್ಳಿ.
  • ಈ ಒಗ್ಗರಣೆಗೆ ಪುಡಿ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
    ಈಗ ಕಿವಿಚ್ಚಿಟ್ಟುಕೊಂಡಿದ್ದ ಹುಣಸೇ ರಸವನ್ನು ಅದಕ್ಕೆ ಸೇರಿಸಿ, ಒಂದು ಕುದಿ ಬರುತ್ತಿದ್ದಂತೆಯೇ, ಪುಡಿ ಮಾಡಿದ ಬೆಲ್ಲ ಮತ್ತು ರುಚಿಗೆ ತಕ್ಕಷ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ
  • ಉದುರು ಉದುರಾಗಿ ಮಾಡಿಟ್ಟು ಕೊಂಡ ಅನ್ನಕ್ಕೆ ಆರಿದ ಕಡಲೇಕಾಯಿ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕಲೆಸಿ ಅದರ ಮೇಲೆ ಕತ್ತರಿಸಿದ ಕೊತ್ತಂಬರೀ ಸೊಪ್ಪನ್ನು ಹಾಕಿದಲ್ಲಿ ಬಿಸಿ ಬಿಸಿಯಾ, ರುಚಿ ರುಚಿಯಾದ ಕಡಲೇಕಾಯಿ ಬಾತ್ ತಿನ್ನಲು ಸಿದ್ಧವಾಗುತ್ತದೆ.

ರುಚಿಕರವಾದ ಕಡಲೇಕಾಯಿ ಬಾತ್ ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ ಮತ್ತು ಈ ರುಚಿಯನ್ನು ನಿಮ್ಮ ಮನೆಯವರೆಲ್ಲರೂ ಮೆಚ್ಚಿದ ನಂತರ ನಮಗೆ ತಿಳಿಸುವುದನ್ನು ಮಾತ್ರ ಮರೆಯಬೇಡಿ.

ಏನಂತೀರೀ?

WhatsApp Image 2020-06-22 at 11.52.31 PM

ಮನದಾಳದ ಮಾತು : ಎಲ್ಲರಿಗೂ ಮನೆಯಲ್ಲಿ ಪುಳಿಯೋಗರೆ ಮಾಡುವುದಕ್ಕೆ ಬರುವುದಿಲ್ಲ. ಅದೇ ರೀತಿ ಬಹಳಷ್ಟು ಮಂದಿಗೆ ಒರಳುಕಲ್ಲು ಚಿತ್ರಾನ್ನ ಅಥವಾ ಕಾಯಿ ಸಾಸಿವೆ ಅನ್ನದ ರುಚಿಯೇ ತಿಳಿದಿರುವುದಿಲ್ಲ. ಈಗ ನಾನು ತಿಳಿಸಿರುವ ಕಡಲೇಕಾಯಿ ಬಾತ್ ಪುಳಿಯೋಗರೇ ಮತ್ತು ಒರಳು ಕಲ್ಲು ಚಿತ್ರಾನ್ನ ಎರಡೂ ಸೇರಿದರೆ ಹೇಗೆ ಇರುತ್ತದೆಯೋ ಹಾಗೆಯೇ ಇರುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಈ ಕಡಲೇಕಾಯಿ ಬಾತ್ ಜೊತೆ ಮೊಸರು ಬಜ್ಜಿ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಒಮ್ಮೆ ನಿಮ್ಮ ಮನೆಗಳಲ್ಲಿ ಪ್ರಯತ್ನಿಸಿ ನೋಡಿ ಅಭಿಪ್ರಾಯ ತಿಳಿಸಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s