ತಮಿಳುನಾಡು ಮತ್ತು ಕೇರಳದ ಬಹುತೇಕರ ಶುಭಸಮಾರಂಭಗಳಲ್ಲಿ ಉಣಬಡಿಸುವ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾದ ಅವಿಯಲ್ ಮತ್ತು ಅದರ ಜೊತೆ ಮಸಾಲಾ ಚಪಾತಿ (ಪುದೀನಾ ಪರೋಟ)ಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 5-6 ಜನರಿಗೆ ಸಾಕಾಗುವಷ್ಟು ಅವಿಯಲ್ ತಯಾರಿಸಲು ಬೇಕಾಗುವ ತರಕಾರಿ ಮತ್ತು ಸಾಮಗ್ರಿಗಳು
- ಹುರಳೀಕಾಯಿ – 1 ಬಟ್ಟಲು
- ಸೀಮೇಬದನೇಕಾಯಿ – 1 ಬಟ್ಟಲು
- ಕ್ಯಾರೆಟ್ – 1 ಬಟ್ಟಲು
- ಗೆಡ್ಡೇಕೋಸು – 1 ಬಟ್ಟಲು
- ಎಲೇಕೋಸು – 1 ಬಟ್ಟಲು
- ಬಾಳೇಕಾಯಿ – 1 ಬಟ್ಟಲು
- ನುಗ್ಗೇಕಾಯಿ – 1 ಬಟ್ಟಲು
- ಬದನೇಕಾಯಿ – 1 ಬಟ್ಟಲು
- ಹಸೀ ಬಟಾಣಿ – 1 ಬಟ್ಟಲು
- ಹುರಳೀಕಾಯಿ – 1 ಬಟ್ಟಲು
- ಸೀಮೇಬದನೇಕಾಯಿ – 1 ಬಟ್ಟಲು
- ಕ್ಯಾರೆಟ್ – 1 ಬಟ್ಟಲು
- ಗೆಡ್ಡೇಕೋಸು – 1 ಬಟ್ಟಲು
- ಎಲೇಕೋಸು – 1 ಬಟ್ಟಲು
- ಆಲೂಗೆಡ್ಡೆ – 1 ಬಟ್ಟಲು
- ಬಾಳೇಕಾಯಿ – 1 ಬಟ್ಟಲು
- ನುಗ್ಗೇಕಾಯಿ – 1 ಬಟ್ಟಲು
- ಬದನೇಕಾಯಿ – 1 ಬಟ್ಟಲು
- ಹಸೀ ಬಟಾಣಿ – 1 ಬಟ್ಟಲು
- ತೆಂಗಿನಕಾಯಿ ತುರಿ – 2 ಬಟ್ಟಲು
- ಹಸೀಮೆಣಸಿನಕಾಯಿ 15-20 (ಖಾರಕ್ಕೆ ಅನುಗುಣವಾಗಿ)
- ಚಿಟುಕಿ ಅರಿಶಿನ
- ಚಿಟುಕಿ ಇಂಗು
- ಸಾಸಿವೆ – 1/2 ಚಮಚ
- ಜೀರಿಗೆ – 2 ಚಮಚ
- ಕರಿಬೇವು – 2 ಕಡ್ಡಿ
- ಕೊಬ್ಬರೀ ಎಣ್ಣೆ 3-4 ಚಮಚ
- ಗಟ್ಟಿ ಮೊಸರು = 1/2 ಲೀಟರ್
- ರುಚಿಗೆ ತಕ್ಕಷ್ಟು ಉಪ್ಪು
ಅವಿಯಲ್ ತಯಾರಿಸುವ ವಿಧಾನ
- ಮೇಲೇ ತಿಳಿಸಿರುವ ಎಲ್ಲಾ ತರಕಾರಿಗಳನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡು ಕುಕ್ಕರಿನಲ್ಲಿ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಒಂದು ವಿಷಲ್ ಬರುವವರೆಗೂ ಬೇಯಿಸಿಕೊಳ್ಳಿ
- ಕಾಯಿತುರಿ, ಜೀರಿಗೆ, ಅರಿಶಿನ, ಇಂಗು ಮತ್ತು ಹಸೀಮೆಣಸಿನಕಾಯಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
- ಚೆನ್ನಾಗಿ ಬೆಂದ ತರಕಾರಿಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ತು ಉಪ್ಪನ್ನು ಸೇರಿಸಿ ಕುದಿಯಲು ಬಿಡಿ.
- ಸಣ್ಣ ಬಾಣಲೆಯಲ್ಲಿ ಕೊಬ್ಬರೀ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಇಂಗಿನ ಒಗ್ಗರಣೆಯನ್ನು ಹಾಕಿಕೊಳ್ಳಿ
- ಒಗ್ಗರಣೆಯನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಐದಾರು ನಿಮಿಷಗಳಷ್ಟು ಕುದಿಸಿ ಒಲೆಯನ್ನು ಆರಿಸಿ ಅದಕ್ಕೆ ಕಡೆದ ಮೊಸರನ್ನು ಸೇರಿಸಿದಲ್ಲಿ ಬಿಸಿ ಬಿಸಿಯಾದ ರುಚಿಯಾದ ಮತ್ತು ಆರೋಗ್ಯಕರವಾದ ತರಕಾರಿಗಳ ಅವಿಯಲ್ ಸಿದ್ಧ.
ಮಸಾಲಾ ಚಪಾತಿ ಮಾಡಲು ಬೇಕಾಗುವ ಸಾಮಗ್ರಿಗಳು
- ಗೋಧಿ ಹಿಟ್ಟು – 2 ಬಟ್ಟಲು
- ಅಚ್ಚ ಮೆಣಸಿನ ಪುಡಿ – 1/2 ಚಮಚ
- ಜೀರಿಗೆ – 1/2 ಚಮಚ
- ಸಣ್ಣಗೆ ಹೆಚ್ಚಿದ ಪುದೀನ ಸೊಪ್ಪು – 1/2 ಬಟ್ಟಲು
- ಆಡುಗೆ ಎಣ್ಣೆ 4-5 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಮಸಾಲಾ ಚಪಾತಿ ತಯಾರಿಸುವ ವಿಧಾನ
- ಗೋದಿಹಿಟ್ಟಿಗೆ ಕತ್ತರಿಸಿದ ಪುದೀನ, ಜೀರಿಗೆ, ಅಚ್ಚ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಒಂದೆರಡು ಚಮಚ ಅಡುಗೆ ಎಣ್ಣೆಯನ್ನು ಸೇರಿಸಿ ಚಪಾತಿ ಹದಕ್ಕೆ ಕಲೆಸಿಕೊಳ್ಳಿ
- ಕಲೆಸಿದ ಹಿಟ್ಟನ್ನು ಐದಾರು ನಿಮಿಷಗಳ ಕಾಲ ನೆನೆಯಲು ಬಿಡಿ.
- ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣದಾದ ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯ ರೀತಿಯಲ್ಲಿ ಲಟ್ಟಿಸಿಕೊಳ್ಳಿ
- ಒಲೆಯ ಮೇಲೆ ಕಾವಲಿಯನ್ನು ಇಟ್ಟು ಕಾವಲಿ ಕಾದ ನಂತರ ಲಟ್ಟಿಸಿಕೊಂಡ ಚಪಾತಿಯನ್ನು ಹಾಕಿ ಎರಡೂ ಬದಿಯಲ್ಲಿಯೂ
- ಬಂಗಾರದ ಬಣ್ಣ ಬರುವವರೆಗೂ ಬೇಯಿಸಿದಲ್ಲಿ ಬಿಸಿ ಬಿಸಿಯಾದ ಮತ್ತು ರುಚಿಯಾದ ಮಸಾಲೇ ಚಪಾತಿ (ಪುದೀನ ಪರೋಟ) ಸಿದ್ದ
ಈಗಾಗಲೇ ಮಾಡಿಟ್ಟು ಕೊಂಡಿರುವ ಅವಿಯಲ್ ಜೊತೆ ಈ ಮಸಾಲೇ ಚಪಾತಿ(ಪುದೀನ ಪರೋಟ) ಜೊತೆಗೆ ಸಣ್ಣದಾಗಿ ಕತ್ತರಿಸಿರುವ ಈರುಳ್ಳಿ ಮತ್ತು ಸೌತೇಕಾಯಿಯೊಂದಿಗೆ ಸವಿಯಲು ಮಜವಾಗಿರುತ್ತದೆ.
ಬಿಸಿ ಬಿಸಿಯಾದ ಅವಿಯಲ್ ಮತ್ತು ಮಸಾಲಾ ಚಪಾತಿ (ಪುದೀನಾ ಪರೋಟ) ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
https://youtu.be/pD7iydBLYsM
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಬಹುತೇಕ ಎಲ್ಲಾ ರೀತಿಯ ತರಕಾರಿಗಳು, ಮೊಸರು ಮತ್ತು ಸಾಧಾರಣ ಮಸಾಲೆಗಳನ್ನು ಬಳೆಸಿ ಮಾಡುವ ಈ ಅವಿಯಲ್ ತಮಿಳುನಾಡು ಮತ್ತು ಕೇರಳದ ಪ್ರದೇಶಗಳ ಹಬ್ಬ ಹರಿದಿನಗಳಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಅದರಲ್ಲೂ ಐಯ್ಯರ್ ಪಂಗಡದವರ ಎಲ್ಲಾ ಶುಭಕಾರ್ಯಗಳಲ್ಲಿ ಇದು ಖಡ್ಡಾಯವಾದ ಪರಿಕರವಾಗಿದೆ. ಈ ಆಹಾರ ವಿಧಾನವನ್ನು ಸಾವಕಾಶವಾಗಿ ನಮಗೆ ಮಾಡಿ ತೋರಿಸಿಕೊಟ್ಟ ಬೆಂಗಳೂರಿನ ದೊಡ್ಡಬೊಮ್ಮಸಂದ್ರ ನಿವಾಸಿಗಳಾದ ಶ್ರೀಮತಿ ನಾಗಲಕ್ಷ್ಮೀ ರಮೇಶ್ ಅವರಿಗೆ ನಮ್ಮ ಏನಂತೀರೀ YouTube ಛಾನೆಲ್ಲಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
#ಅನ್ನಪೂರ್ಣ
#ಅವಿಯಲ್
#ಮಸಾಲೆ_ಚಪಾತಿ
#ಪುದೀನಾ_ಪರೋಟ
#ಏನಂತೀರೀ