ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುವಂತೆ ಸುಧೀರ್ಘ ಮಾತುಕತೆ ನಡೆಯುತ್ತಲೇ ಇವೆ.
ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಲು, ಪೂರ್ವನಿರ್ಧಾರಿತವಾಗಿದ್ದಂತೆ ಜನರಲ್ ಎಂ.ಎಂ.ನರವಣೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್ ಪ್ರಾಂತ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಕಳೆದ ಸಂಜೆ ಕಡೆಯ ನಿಮಿಷದ ಬೆಳವಣಿಗೆಯಲ್ಲಿ ರಾಜನಾಥ್ ಸಿಂಗ್ ಅವರ ಲೇಹ್ ಭೇಟಿ ಮುಂದೂಡಿದ್ದದ್ದು ಎಲ್ಲರಿಗೂ ಅಚ್ಚರಿ ಮೂಡಿಸುತ್ತು.
ಚೀನಾ ದೇಶದ ಸೈನಿಕರ ಈ ಉದ್ಧಟತನದ ದುಷ್ಕೃತ್ಯವನ್ನು ನಮ್ಮ ಸೈನಿಕರು ಆ ಕ್ಷಣದಲ್ಲಿಯೇ ಮಟ್ಟಹಾಕಿ, ಅವರನ್ನು ಭಾರತದ ಗಡಿಯೊಳಗೆ ಒಂದಿಚೂ ಆಕ್ರಮಣ ಮಾಡದಂತೆ ತಡೆದಿದ್ದರೂ, ನಮ್ಮ ದೇಶದ ವಿರೋಧ ಪಕ್ಷಗಳಾದ ಕಾಂಗ್ರೇಸ್ ಮತ್ತು ಸದಾ ಚೀನಾದ ಪರವಾಗಿರುವ ಕಮ್ಯೂನಿಷ್ಟರು ದೇಶದ ರಕ್ಷಣೆಯ ಬಗ್ಗೆ ಕಿಂಚಿತ್ತೂ ಗಂಭಿರವಿಲ್ಲದೇ, ತಪ್ಪೆಲ್ಲವೂ ನಮ್ಮ ಸೈನಿಕರದ್ದೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶತ್ರುಗಳಿಗೆ ನೆರವಿನ ಹಸ್ತವನ್ನು ಚಾಚಿದ್ದರು ಎಂದರೂ ತಪ್ಪಾಗಲಾರದು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ರಾಹುಲ್ ಗಾಂಧಿ, ಭಾರತ ಮತ್ತು ಚೀನಾದ ನಡುವೆ ದೇವೇಗೌಡುರು ಮತ್ತು ಮನ್ಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಆದ ಗಡಿ ಒಪ್ಪಂದದ ಅರಿವಿಲ್ಲದೇ, ಗಡಿ ಕಾಯುವ ಸೈನಿಕರು ನಿಶ್ಯಸ್ತ್ರರಾಗಿ ಹೋರಾಡಿದ್ದು ಏಕೆ? ಚೀನಾ ಸೈನಿಕರು ಭಾರತದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದರೂ 56 ಇಂಚಿನ ನಮ್ಮ ಪ್ರಧಾನಿಗಳು ಏಕೆ ಮಾತನಾಡುತ್ತಿಲ್ಲ? ಎಂದು ಬಹಿರಂಗವಾಗಿಯೇ ಪ್ರಧಾನಿಗಳನ್ನು ಪ್ರಶ್ನಿಸಿದ್ದರು.
ಒಬ್ಬ ಸಮರ್ಥ ನಾಯಕನಾದವನ್ನು ಪರಿಸ್ಥಿತಿಯನ್ನು ಕೂಲಂಕುಶವಾಗಿ ಸಾಧಕ ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸಮಯೋಜಿತವಾಗಿ ಉತ್ತರಿಸಬೇಕೇ ಹೊರತು, ಕತ್ತೆ ಎಲ್ಲೆಂದರಲ್ಲಿ ಉಚ್ಚೆ ಹುಯ್ದಂತೆ ಆ ಕೂಡಲೇ ಉತ್ತರಿಸಬಾರದು ಎಂಬುದನ್ನು ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ಲೇಹ್ ಪ್ರಾಂತ್ಯಕ್ಕೆ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಭೂ ಸೇನಾ ಪಡೆ ಮುಖ್ಯಸ್ಥ ಜ. ಎಂ. ಎನ್ ನರವಣೆ ಯವರ ಸಹಿತ ಭೇಟಿ ನೀಡಿ ತಮ್ಮ ಪ್ರಭುದ್ಧತೆಯನ್ನು ಮೆರೆದಿದ್ದಾರೆ ಎಂದರೆ ತಪ್ಪಾಗಲಾರದು.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದಾಗ ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ ಮತ್ತು ಅನುಸರಿಸುವ ಜನರೂ ನಾವೇ. ನಮಗೆ ಕೊಳಲು ಊದಲೂ ಗೊತ್ತಿದೆ, ಸುದರ್ಶನ ಚಕ್ರ ಪ್ರಯೋಗಿಸಲೂ ಗೊತ್ತಿದೆ. ಎಂದು ನಮ್ಮ ಗಡಿ ಕಾಯುವ ಸೈನ್ಯಕರಿಗೆ ಹುರಿದುಂಬಿಸಿ, ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಸ್ನೇಹಕ್ಕೆ ಬದ್ಧ. ಸಮರಕ್ಕೂ ಸಿದ್ಧ ಎಂಬ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನ ಮಂತ್ರಿಗಳು ತಮ್ಮ ಇತ್ತೀಚಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಲಡಾಖ್ ಗಡಿಯಲ್ಲಿ ನಮ್ಮ ನೆಲ ಕಬಳಿಸಲು ಬಂದಿದ್ದ ಚೀನಾ ಸೇನೆಗೆ ನಮ್ಮ ಸೇನೆ ತಕ್ಕದಾದ ಉತ್ತರವನ್ನು ನೀಡಿದ್ದಾರೆ. ಈ ಸಂಘರ್ಷದಲ್ಲಿ ನಮ್ಮ ದೇಶಕ್ಕಾಗಿ ಮಡಿದ ಆ 20 ಸೈನಿಕರ ಬಲಿದಾನ ಖಂಡಿತವಾಗಿಯೂ ನಾವು ವ್ಯರ್ಥವಾಗಲು ಎಂದಿಗೂ ಬಿಡುವುದಿಲ್ಲ ಎಂದಿದ್ದರು. ಪ್ರಧಾನಿ ಮೋದಿಯವರ ಇಂದಿನ ಲೇಹ್ ಭೇಟಿ ಆ ಮಾತಿಗೆ ಪುಷ್ಟಿ ಕೊಡುವಂತಿದೆಯಲ್ಲದೇ, ಭಾರತೀಯ ಸೈನಿಕರಿಗೆ ಮತ್ತಷ್ಟೂ ಹುರುಪು ನೀಡುವುದರಲ್ಲಿ ಸಂದೇಹವೇ ಇಲ್ಲ.
ಪ್ರಧಾನಿಗಳು ಲಡಾಖ್ಖಿನ ನಿಮುನಲ್ಲಿರುವ ಫಾರ್ವರ್ಡ್ ಲೊಕೇಶನ್ ಪ್ರದೇಶದಲ್ಲಿ ಸೈನ್ಯ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದ್ದಾರೆ. ಸಮುದ್ರ ಮಟ್ಟಕ್ಕಿಂತ ಸುಮಾರು 11,000 ಅಡಿ ಎತ್ತರದಲ್ಲಿರುವ ಈ ನಿಮು, ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ಒಂದಾಗಿದೆ. ಸಿಂಧೂ ನದಿಯ ತೀರದಲ್ಲಿರುವ ಈ ನಿಮು ಪ್ರದೇಶ ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದೆ. ಪ್ರಧಾನಿಗಳೇ ಇಂತಹ ದುರ್ಗಮ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೈನಿಕರು ಮತ್ತು ಸೈನ್ಯಾಧಿಕಾರಿಗಳನ್ನು ಮುಖಃತಹ ಭೇಟಿ ನೀಡಿ ಭಾರತ ಮತ್ತು ಚೀನಾ ನಡುವಿನ ಪ್ರಸಕ್ತ ಸಂಘರ್ಷದ ಸ್ಥಿತಿಗತಿಗಳನ್ನು ಅವರ ಬಾಯಿಯಿಂದಲೇ ಕೇಳಿ ಅರ್ಥ ಮಾಡಿಕೊಂಡಿರುವುದು ಮುಂದಿನ ದಿನಗಳಲ್ಲಿ ಅಲ್ಲಿ ನಡೆಯ ಬಹುದಾದ ಒಂದು ಭಾರೀ ಯೋಜನೆಗೆ ಈ ಭೇಟಿ ಪುಷ್ಠಿಯಾಗಲಿದೆ ಎಂದರೂ ತಪ್ಪಾಗಲಾರದು.
ಯಾವುದೇ ಮುನ್ಸೂಚನೆ ನೀಡದೇ ಸ್ವತಃ ಪ್ರಧಾನಿಗಳೇ ಗಡಿ ಭಾಗಕ್ಕೆ ಭೇಟಿ ನೀಡಿ ಸೈನಿಕರ ಸ್ಥಿತಿಗತಿಗಳನ್ನು ಅರಿತು, ಭಯಪಡದಿರಿ. ನಾವು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಸುಖಃ ದುಃಖಗಳಿಗೆ ಭಾಜನರಾಗುತ್ತೇವೆ ಎಂದು ಬೆನ್ನು ತಟ್ಟಿ ಹೇಳಿದರೆ ನಮ್ಮ ಸೈನಿಕರ ಹುಮ್ಮಸ್ಸು ಮತ್ತು ಮನಸ್ಥೈರ್ಯ ಖಂಡಿತವಾಗಿಯೂ ಹೆಚ್ಚುತ್ತಲ್ಲದೇ, ನಮ್ಮ ಪ್ರಧಾನಿಗಳು ಈ ಸಂಘರ್ಷವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂದಿದ್ದಾರೆ ಎಂಬುದನ್ನು ನಮ್ಮ ಶತ್ರುದೇಶಗಳಿಗೂ ಒಂದು ಎಚ್ಚರಿಕೆಯ ಗಂಟೆಯಾಗಿ ತಿಳಿಸಿದಂತಾಗುತ್ತದೆ.
ಕೆಲವೊಮ್ಮೆ ಗಡಿಭಾಗದಲ್ಲಿ ದೇಶದ ಅತ್ಯುನ್ನತ ನಾಯಕರ ಈ ರೀತಿಯ ಮೌನವಾದ ಧಿಢೀರ್ ಭೇಟಿಗಳನ್ನು ಗಮನಿಸಿ ಅದರ ತೀಕ್ಷಣತೆಯನ್ನು ಅಥವಾ ತೀವ್ರತೆಯನ್ನು ಅರ್ಥೈಸಿಕೊಳ್ಳುವ ಶತ್ರುರಾಷ್ಟಗಳು ಸಂಘರ್ಷವನ್ನು ಬದಿಗೊತ್ತಿ ಶಾಂತಿ ಸುವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗವಂತೆ ಮಾಡುವ ಒಂದು ತಂತ್ರಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. . ಇಲ್ಲಾ ಆನೇ ನಡೆದದ್ದೇ ಹಾದಿ ಎಂದು ನಮ್ಮ ಮೇಲೇ ಆಕ್ರಮಣ ಮಾಡಿದರೇ ಈಗಾಗಲೇ ಶಸ್ತ್ರ ಸನ್ನದ್ಧರಾಗಿರುವ ಮತ್ತು ಪ್ರಧಾನಿಗಳ ಭೇಟಿಯಿಂದ ಪ್ರೇರೇಪಿತರಾಗಿರುವ ಸೈನಿಕರ ಗುಂಡೇಟಿಗೆ ಬಲಿಯಾಗುವುದು ನಿಶ್ವಿತ. ಇದು ಖಂಡಿತವಾಗಿಯೂ 1962ರಲ್ಲಿ ಇದ್ದ ಸರ್ಕಾರವಲ್ಲ. ಈಗಾಗಲೇ ನಮ್ಮ ಸೈನಿಕರಿಗೆ ಅಗತ್ಯವಾದ ಶಸ್ತ್ರಾಸ್ತ್ಯಗಳು ಮತ್ತು ಯುದ್ದೋಪಕರಣಗಳನ್ನು ಗಡಿ ಪ್ರದೇಶಕ್ಕೇ ರವಾನಿಸಲಾಗಿದೆ ಮತ್ತು ಮತ್ತಷ್ಟನ್ನು ಅತೀ ಶೀಘ್ರದಲ್ಲಿ ತಲುವಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದೆ. ಎಲ್ಲದ್ದಕ್ಕೂ ಮಿಗಿಲಾಗಿ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳದಲ್ಲಿಯೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಸೇನೆಗಳಿಗೇ ನೀಡಲಾಗಿರುವುದು ಗಮನಾರ್ಹವಾದ ಅಂಶ.
ನಿಜ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ದಲ್ಲಿ ಯುದ್ದವೇ ಎಲ್ಲದಕ್ಕು ಪರಿಹಾರವಲ್ಲವಾದರೂ ಕಾಲು ಕೆರೆದುಕೊಂಡು ನಮ್ಮ ಮೇಲೇ ಆಕ್ರಮಣ ಮಾಡುವವರನ್ನು ಹಿಂದಿನಂತೆ ಎಷ್ಟು ದಿನ ಎಂದು ಸಹಿಸಿಕೊಳ್ಳುವುದು? ಸುಮ್ಮನಿದ್ದಲ್ಲಿ ನಾಯಿ ಬೊಗುಳುತ್ತಲೇ ಹೋಗುತ್ತದೆ. ತಿರುಗಿ ನಿಂತು ಒಂದು ಕಲ್ಲನ್ನು ಒಗೆಯದೇ, ಸುಮ್ಮನೆ ಒಗೆದ ಹಾಗೇ ಮಾಡಿದರೂ ಸಾಕು. ನಾಯಿ ಬಾಲ ಮುದುರಿಕೊಂಡು ಹೋಗುತ್ತದೆ. ಪ್ರಧಾನಿಗಳ ಇಂದಿನ ಭೇಟಿ ಅಂತಹದ್ದೇ ಇಂದು ದಿಟ್ಟ ಉತ್ತರವಾಗಿದೆ. ಗಡಿಗಳಲ್ಲಿ ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಹೋರಾಡುತ್ತಿರುವಾಗ ಒಬ್ಬ ಜವಾಬ್ಧಾರೀ ನಾಗರೀಕರಾಗಿ ನಾವೂ ನೀವು ಬಾಯಿ ಚಪಲಕ್ಕೆ ಏನೇನೋ ಒದರದೇ, ದೇಶ ಮತ್ತು ಸೈನಿಕರ ಧೈರ್ಯ ಮತ್ತು ಸ್ಥೈರ್ಯವನ್ನು ಹೆಚ್ಚಿಸುವ ಮಾತುಗಳನ್ನೇ ಆಡೋಣ. ಆ ಮಾತುಗಳನ್ನು ಆಡಲು ಬಾರದಿದ್ದಲ್ಲಿ ಕನಿಷ್ಟ ಪಕ್ಷ ಸುಮ್ಮನಾಗಿದ್ದರೂ ಸಾಕು.
ಏನಂತೀರೀ?
ನಿಮ್ಮ ಲೇಖನ ತುಂಬ ಚೆನ್ನಾಗಿದೆ ಅಣ್ಣ
LikeLiked by 1 person
ಧನ್ಯೋಸ್ಮಿ
LikeLike