ದೇಶದ ಆಂತರಿಕ ಹಿತಶತ್ರುಗಳು

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರೆಲ್ಲರೂ ಉಗ್ರವಾಗಿ ತೀವ್ರತರವಾದ ಹೋರಾಟ ಮಾಡುತ್ತಿದ್ದರೆ, ಅಲ್ಲೊಬ್ಬ ಸೋಗಲಾಡಿ ಹೋರಾಟಗಾರ, ನೀನು ಹೊಡೆದಹಾಗೆ ಮಾಡು ನಾನು ಅತ್ತಹಾಗೆ ಮಾಡುತ್ತೀನಿ ಎಂದು ಸೆರೆಮನೆಗೆ ಹೋಗಿ ಅಲ್ಲಿನ ಉದ್ಯಾನಗಳಲ್ಲಿ ವಿರಹಿಸಿಸುತ್ತಾ ಐಶಾರಾಮ್ಯ ಜೀವನವನ್ನು ನಡೆಸಿ, ಸ್ವಾತಂತ್ರ್ಯ ಬಂದ ನಂತರ, ಎಲ್ಲಾ ಹೋರಾಟಗಾರ ನಿಲುವಿಗೆ ವಿರುದ್ಧವಾಗಿ ಮಹಾತ್ಮಾಗಾಂಧಿಯವರ ಮೇಲೆ ಒತ್ತಡ ಹಾಕಿ ಹಿಂಬಾಗಿಲಿನಿನಿಂದ ಪ್ರಧಾನ ಮಂತ್ರಿ ಪಟ್ಟಕ್ಕೇರಿದ ನೆಹರು ಅವರ ಇತಿಹಾಸ ಎಲ್ಲರಿಗೂ ತಿಳಿದ ವಿಷಯವಷ್ಟೇ. ಕಷ್ಟ ಪಟ್ಟು ಗೆದ್ದಲು ಹುಳುಗಳು ಕಟ್ಟಿದ ಹುತ್ತದೊಳಗೆ ಹಾವು ಬಂದು ಸೇರಿಕೊಳ್ಳುವಂತೆ ನೂರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯ, ಅನಾಯಾಸವಾಗಿ ಅಪಾತ್ರರ ಕೈ ಸೇರಿದ್ದು ನಿಜಕ್ಕೂ ದೇಶದ ದೌರ್ಭಾಗ್ಯವೇ ಸರಿ.

ಒಮ್ಮೆ ದೇಶದ ಪ್ರಧಾನಿಯಾಗಿದ್ದೇ ತಡಾ, ಆತನಿಗೆ ಜಾಗತೀಕ ಮಟ್ಟದಲ್ಲಿ ಮಹಾನ್ ನಾಯಕನಾಗುವ ಶೋಕಿಗಾಗಿ ಅಂಗೈಯಲ್ಲಿ ಹೊಸಕಿಹಾಗಬಹುದಾಗಿದ್ದ ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ಇಂದಿಗೂ ಅದು ಜ್ವಲಂತ ಸಮಸ್ಯೆಯಾಗಿಯೇ ಉಳಿಸಿ ಹೋದ ಪುಣ್ಯಾತ್ಮ ಪಂಚಶೀಲದ ಹೆಸರಿನಲ್ಲಿ ಹಿಂದೀ ಚೀನಿ ಭಾಯಿ ಭಾಯಿ ಎಂದು ಮೈಮರೆತಿದ್ದಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಳ್ವಾಲ್ಕರ್ (ಗುರೂಜಿ)ಯವರು ಎಚ್ಚರಿಸಿದ್ದು ಕೇಳಿಸಲೇ ಇಲ್ಲ. ಇದೇ ಸಂಧರ್ಭವನ್ನು ಬಳೆಸಿಕೊಂಡು 1962 ರಲ್ಲಿ ಚೀನಾ ಭಾರತದ ಮೇಲೆ ಹಠಾತ್ ಧಾಳಿ ನಡೆಸಿದಾಗ, ಯಾವುದೇ ಪೂರ್ವ ಸಿದ್ಧತೆ ಇಲ್ಲದೇ, ಸೈನ್ಯಕ್ಕೂ ಮುಸ್ಸೂಚನೆ ಕೊಡದೇ ಯುದ್ಧವನ್ನು ಘೋಷಿಸಿ, ತನ್ನ ತೆವಲಿಗಾಗಿ (ಅದನ್ನು ಇಲ್ಲಿ ಹೇಳಲು ಅಸಹ್ಯವೆನಿಸುತ್ತದೆ) ತನ್ನ ಪಾಡಿಗೆ ತಾನು ಪೂರ್ವನಿಯೋಜಿತ ವಿದೇಶಿ ಪ್ರವಾಸಕ್ಕೆ ಹೋದಾಗಾ, ತಮ್ಮ ಎಚ್ಚರಿಕೆಯನ್ನು ಧಿಕ್ಕರಿಸಿದ್ದರೂ ದೇಶದ ಹಿತದೃಷ್ಟಿಯಂದ ಗುರೂಜಿಯವರು 1962 ರ ಚೀನಾದ ಯುದ್ಧದ ಸಮಯದಲ್ಲಿ, ಆರ್ಎಸ್ಎಸ್ ನಾಗರಿಕ ಆಡಳಿತಕ್ಕೆ ಸಕ್ರಿಯ ಸಹಾಯವನ್ನು ನೀಡಿತ್ತಾದರೂ ಚೀನಾದ ಬಲಾಢ್ಯತೆ ಮುಂದೆ ಸಿದ್ಧವಾಗಿರದಿದ್ದ ನಮ್ಮ ಸೈನಿಕರು ಸೋಲು ಒಪ್ಪಿಕೊಳ್ಳಬೇಕಾಯಿತಲ್ಲದೇ ಸಾವಿರಾರು ಕಿಮೀ ಗಡಿ ಪ್ರದೇಶವನ್ನು ಕಳೆದುಕೊಳ್ಳಬೇಕಾಯಿತು. ಅದುವರೆಗೂ ಆರ್ಎಸ್ಎಸ್ ಅವರನ್ನು ದ್ವೇಷಿಸುತ್ತಿದ್ದ ಮತ್ತು ಮಹಾತ್ಮಾ ಗಾಂಧಿಯವರ ಹತ್ಯೆಯಾದಾಗ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಖುದ್ದಾಗಿ ಆರ್ಎಸ್ಎಸ್ ಮೇಲೆ ನಿಷೇಧ ಹೇರಿದ್ದವರೇ, ದೇಶದ ಹಿತ ದೃಷ್ಟಿಯಿಂದ ಯುದ್ದ ಸಮಯದಲ್ಲಿ ಆರ್ಎಸ್ಎಸ್ ವಿಸ್ತರಿಸಿದ ಸಹಾಯದಿಂದ ಪ್ರಭಾವಿತರಾಗಿದ್ದಲ್ಲದೇ 1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ 100 ಸ್ವಯಂ ಸೇವಕರ ತಂಡವನ್ನು ಪಥಸಂಚನದಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ಗೆ ಅವಕಾಶ ನೀಡಿದ್ದದ್ದು ಈಗ ಇತಿಹಾಸ.

1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿಯೂ ಗಣವೇಷಧಾರಿಗಳಾಗಿ ಆರ್ಎಸ್ಎಸ್ ನೀಡಿದ ಕೊಡುಗೆಗಾಗಿ ಅಂದಿನ ಪ್ರಧಾನಿಗಳಾಗಿದ್ದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಭಾರತೀಯ ಸೇನೆಯ ಜನರಲ್ ಖುಷ್ವಂತ್ ಸಿಂಗ್ ಅವರು ಶ್ಲಾಘಿಸಿದ್ದರು. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ನಡೆದ 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿಯೂ ಸೈನಿಕರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದಾಗ ಮೊದಲು ರಕ್ತದಾನ ಮಾಡಿದವರೂ ಆರ್ಎಸ್ಎಸ್ ಸ್ವಯಂಸೇವಕರೇ ಎಂಬುದನ್ನು ಯಾರು ಬೇಕಾದರೂ Google ಮಾಡಿ ತಿಳಿದುಕೊಳ್ಳಬಹುದಾಗಿದೆ.

ಪ್ರಸಕ್ತ ಸಮಯದಲ್ಲಿ ಪ್ರಪಂಚಾದ್ಯಂತ ಕೂರೋನಾ ಮಾಹಾಮಾರಿಯಿಂದ ತತ್ತರಿಸಿ, ಪ್ರಜೆಗಳ ಆರೋಗ್ಯದ ಹಿತದೃಷ್ಟಿಯಿಂದ ಮುಚ್ಚೆಚ್ಚರಿಕೆಯ ಪರಿಣಾಮವಾಗಿ ಅನಿವಾರ್ಯವಾಗಿ ಲಾಕ್ ಡೌನ್ ಮಾಡಬೇಕಾದಂತಹ ಸಂದರ್ಭ ಬಂದೊದಗಿತ್ತು. ಇಡೀ ಪ್ರಪಂಚವೇ ಎರಡು ಮೂರು ತಿಂಗಳುಗಳ ಕಾಲ ಸ್ಥಬ್ಧವಾದಾಗ ಆರ್ಥಿಕ ಪರಿಸ್ಥಿತಿ ಹದಗೆಡುವುದು ಸಹಜ ಮತ್ತು ಒಮ್ಮೆ ಈ ಸಂಕಷ್ಟಗಳೆಲ್ಲವೂ ಪರಿಹಾರವಾದಲ್ಲಿ ಮತ್ತೆ ಆರ್ಥಿಕ ಪರಿಸ್ಥಿತಿ ಪುಟಿದೇಳುವುದರಲ್ಲಿ ಸಂದೇಹವೇ ಇಲ್ಲ. ಇದೆಲ್ಲದರ ನಡುವೆಯೇ ಒಂದು ಕಡೆ ಪಾಕೀಸ್ಥಾನ ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕತ ಕೃತ್ಯಗಳಲ್ಲಿ ನಿರಂತರವಾಗಿದ್ದರೆ ಮತ್ತೊಂದು ಕಡೆ ಚೀನಾದೇಶ ತಾನೂ ಖ್ಯಾತೆ ತೆಗೆದದ್ದಲ್ಲದೇ, ನೆರೆ ರಾಷ್ಟ್ರ ನೇಪಾಳವನ್ನೂ ಪ್ರಚೋದಿಸಿ ಗಡಿ ಖ್ಯಾತೆಯನ್ನು ಮಾಡಿಸುತ್ತಿದೆ

ಈ ಎಲ್ಲಾ ಸಮಸ್ಯೆಗಳನ್ನೂ ದಿಟ್ಟವಾಗಿ ಮತ್ತು ಸಮರ್ಥವಾಗಿ ಎದಿರಿಸುತ್ತ ವಿಶ್ವದ ಎಲ್ಲಾ ರಾಷ್ಟ್ರಗಳೂ ಭಾರತವನ್ನು ಹೊಗಳುತ್ತಿದ್ದರೆ, ನಮ್ಮ ದೇಶದ ವಿರೋಧ ಪಕ್ಷಗಳು ಮಾತ್ರಾ ದೇಶದ ಹಿತದೃಷ್ಟಿಯನ್ನು ಮರೆತು ಕ್ಷುಲ್ಲಕ ರಾಜಕಾರಣ ಮಾಡುತ್ತಾ ದೇಶದಲ್ಲಿ ಒಂದು ರೀತಿಯ ಅರಾಜಕತೆಯನ್ನು ತರಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆಕ್ಷೇಪಾರ್ಹವಾದ ಸಂಗತಿ.

WhatsApp Image 2020-07-05 at 10.35.57 PMಇಷ್ಟೆಲ್ಲಾ ಪೀಠಿಕೆ ಏಕೆ ಹೇಳಬೇಕಾಯಿತು ಎಂದರೆ ಈ ಒಂದು ಚಿತ್ರ ನಿಜಕ್ಕೂ ಮನಸ್ಸಿಗೆ ಬಹಳವಾಗಿ ದುಃಖವನ್ನು ಉಂಟುಮಾಡುತ್ತಿದೆ. ನೆಹರೂ ಕುಟುಂಬದಲ್ಲಿ ಜನಿಸಿದ್ದೇ ಪ್ರಧಾನಿಪಟ್ಟಕ್ಕೆ ಅರ್ಹತೆ ಎಂದು ಭ್ರಮೆಯಲ್ಲಿರುವ ರಾಹುಲ್ ಗಾಂಧಿ ಒಬ್ಬ ಜವಾಬ್ಧಾರಿ ವಿರೋಧ ಪಕ್ಷದ ನಾಯಕನಾಗಿ ತಮ್ಮ ಎಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ವಿಪತ್ತಿನಿಂದಲೂ ಮತ್ತು ಶತ್ರುಗಳ ವಿನಾಶಕ್ಕೆ ಸಹಕರಿಸ ಬೇಕಾದದ್ದು ಆತನ ಮೂಲಭೂತ ಕರ್ತವ್ಯವೇ ಹೌದು. ಆದರೆ ಮೂರ್ಖತನದ ಪರಮಾವಧಿಯಂತೆ ಆತ ಹೋದ ಬಂದ ಕಡೆಯಲ್ಲೆಲ್ಲಾ ಪ್ರಧಾನಿಗಳನ್ನು ಛೇಡಿಸುತ್ತಾ, ಸುಳ್ಳು ಸುಳ್ಳು ವಿಡಿಯೋಗಳನ್ನು ಹರಡುತ್ತಿರುವುದು ಎಷ್ಟು ಸರಿ? ಕೂರೋನಾ ವಿರುದ್ಧ ತಮ್ಮ ಜೀವವನ್ನೇ ಫಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಲು ಚಪ್ಪಾಳೆ ತಟ್ಟಿ ದೇವರ ಮುಂದೆ ದೀಪ ಹಚ್ಚಿ ಎಂದರೆ ಆತ ತನ್ನ ಕಾರ್ಯಕರರ್ತರನ್ನೇ ನರ್ಸ್ ರೂಪದಲ್ಲಿ ತೋರಿಸಿ ಇಲ್ಲದ ಸಲ್ಲದ ಬಿಲ್ಡಪ್ ಕೊಟ್ಟಿದ್ದಲ್ಲದೇ, ನಮ್ಮ ಗಡಿಯೊಳಗೆ ನುಗ್ಗಿ, ನಮ್ಮ 20 ಸೈನಿಕರ ಹತ್ಯೆಗೈದದ್ದಕ್ಕೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿ ಚೀನಾದ 40 ಸೈನಿಕರನ್ನು ಬಲಿಹಾಕಿದ್ದಾರೆ ಮತ್ತು ಇದನ್ನು ಪರೋಕ್ಷವಾಗಿ ಚೀನಾವೂ ಒಪ್ಪಿಕೊಂಡಿರುವುದು ಈಗ ಜಗಜ್ಜಾಹೀರಾಗಿದ್ದರೆ, ರಾಹುಲ್ ಗಾಂಧಿ ಮತ್ತವನ ಪಟಾಲಂ ಚೀನಾ ಭಾರತದ ಭೂ-ಭಾಗವನ್ನು ಆಕ್ರಮಿಸಿದೆ ಎಂಬ ನಕಲಿ ವಿಡಿಯೋ ಬಿಡುಗಡೆ ಮಾಡುವುದು ಎಷ್ಟು ಸರಿ? ಎಂದು ಯೋಚಿಸಬೇಕಾದ ಅಂಶ.  ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಹೊಡೆದ ಈ ನಕಲೀ ಗಾಂಧಿಗಳ ವಂಶ ದೇಶದ ಹಿತಾಸಕ್ತಿಯಿಂದ ತಮ್ಮ ಸ್ವಂತ ಪರಿಶ್ರಮದ ಹಣದಿಂದಾಗಲೀ, ತಮ್ಮ ಬುದ್ಧಿ ಮತ್ತೆಯಿಂದಾಗಲೀ, ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿರುವ ಉದಾಹರಣೆಯನ್ನು ತೋರಿಸಲು ಸಾಧ್ಯವೇ?

yachuryಇನ್ನು ದೇಶದ ಬಗ್ಗೆ ಸದಾ ಕಮ್ಮಿ ನಿಷ್ಟೆ ತೋರಿಸೋ ಕಮ್ಯೂನಿಷ್ಟರು ಸದಾಕಾಲವೂ ಟೌನ್ ಹಾಲ್ ಮುಂದೆ ಒಂದಲ್ಲಾ ಒಂದು ಪ್ರತಿಭಟನೆ ನಡೆಸುತ್ತಾಲೋ ಇಲ್ಲವೇ ತುಕ್ಡೇ ತುಕ್ದೇ ಗ್ಯಾಗಳ ಮೂಲಕ ದೇಶಾದ್ಯಂತ ಗಲಭೆ ಎಬ್ಬಿಸುವ ಕಾರ್ಯನಿರತರಾಗಿರುವವರನ್ನು ಈ ಕರೋನಾ ಪರಿಸ್ಥಿತಿಯಲ್ಲಿ ಯಾರನ್ನಾದರು ಸಂತೈಸುವುದನ್ನು ಎಲ್ಲಿಯಾದರೂ ಕಂಡಿದ್ದೀರಾ? ಖಂಡಿತವಾಗಿಯೂ ನೋಡಿರುವುದಕ್ಕೆ ಸಾಧ್ಯವೇ ಇರಲಿಲ್ಲವಾದರೂ ಯಾವಾಗ ಭಾರತದ ಸೈನಿಕರು ಚೀನಿಯರಿಗೆ ಪಾಠ ಕಲಿಸಿದರೋ ಕೂಡಲೇ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದ್ದಲ್ಲದೇ, ಅವರ ಮುಖಂಡ ಸೀತಾರಾಂ ಯಚೂರಿ ಇದೆಲ್ಲವೂ ಭಾರತ ಸೈನಿಕರದ್ದೇ ತಪ್ಪು ಹಾಗಾಗಿ ಸಿಪಿಎಂ ಸದಾಕಾಲವೂ ಚೀನಾದ ಬೆಂಬಲಕ್ಕೆ ಇರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವಷ್ಟರ ಮಟ್ಟಿನ ನೀಚತನ ತೋರಿಸಿದ್ದು ಅಕ್ಷಮ್ಯ ಅಪರಾಧ.

WhatsApp Image 2020-07-05 at 9.06.36 PMಪ್ರಧಾನ ಮಂತ್ರಿಗಳಾಗಿ ನಮ್ಮ ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಲು ಲಢಾಕ್ ಪ್ರದೇಶಕ್ಕೆ ಹೋಗಿ ಅವರ ಬೆನ್ನು ತಟ್ಟಿದ್ದಲ್ಲದೇ, ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರಿಂದ ಘಾಯಗೊಂದಿದ್ದ ಯೋಧರನ್ನು ಮಿಲಿಟರೀ ಆಸ್ಪತ್ರೆಯಲ್ಲಿ ಭೇಟಿ‌ ಮಾಡಿದ್ದನ್ನೂ ನಕಲಿ ಎಂದು ದೇಶದ ಸೈನಿಕರ ನಿಷ್ಟೆಯನ್ನೂ ಅನುಮಾನಿಸುವ ಮತ್ತು ಅವಮಾನಿಸುತ್ತಿರುವ ಕಾಂಗಿಗಳ ಮನಸ್ಥಿತಿ ನಿಜಕ್ಕೂ ಅಹಹ್ಯಕರವೇ ಸರಿ.

 

WhatsApp Image 2020-07-05 at 10.20.16 PMಸೈನಿಕರನ್ನು ಹುರಿದುಂಬಿಸಲು ಪ್ರಧಾನಿಗಳು ನಮಗೆ ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ ಮತ್ತು ಅನುಸರಿಸುವ ಜನರೂ ನಾವೇ. ನಮಗೆ ಕೊಳಲು ಊದಲೂ ಗೊತ್ತಿದೆ, ಸುದರ್ಶನ ಚಕ್ರ ಪ್ರಯೋಗಿಸಲೂ ಗೊತ್ತಿದೆ. ಎಂದು ನಮ್ಮ ಗಡಿ ಕಾಯುವ ಸೈನಿಕರ ಮುಂದೆ ಹೇಳಿದ್ದನ್ನು ಬಾಲನ್ ಎನ್ನುವ ಕಮ್ಯೂನಿಷ್ಟ್ ಮನಸ್ಥಿತಿಯ ವಕೀಲನೊಬ್ಬ ಕೋಮುವಾದ ಎಂದು ಜರಿದದ್ದಲ್ಲದೇ, ಸೈನಿಕರು ಹೇಳಿದ ಬೋಲೋ ಭಾರತ ಮಾತಾ ಕೀ ಜೈ ಎನ್ನುವುದೂ ಅಸಂವಿಧಾನಿಕ ಮತ್ತು ಕೋಮುವಾದ ಪದ ಎಂದು ಟಿವಿ ಛಾನಲ್ಲೊಂದರ ನೇರಪ್ರಸಾರದ ಚರ್ವೆಯೊಂದರಲ್ಲಿ ಹೇಳುತ್ತಾನೆಂದರೆ, ಇಂತಹವರ ಮನಸ್ಸಿನಲ್ಲಿ ದೇಶದ ಬಗ್ಗೆ ಇನ್ನೆಂತಹ ಭಾವನೆ ಇದೆ ಎಂಬುದು ತಿಳಿಯುತ್ತದೆ.

WhatsApp Image 2020-07-06 at 12.27.35 PMಇನ್ನು ಆರ್ಥಿಕವಾಗಿ ಚೀನಾದೇಶವನ್ನು ಬಗ್ಗು ಬಡಿಯುವ ಸಲುವಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿರುವ ಸರ್ಕಾರ ಜನಸಾಮಾನ್ಯರು ತಮ್ಮ ತಮ್ಮ ಮೊಬೈಲ್ಗಳಲ್ಲಿ ಬಳೆಸುತ್ತಿದ್ದ ಟಿಕ್ ಟಾಕ್ ಒಳಗೊಂಡಂತೆ 59 ತಂತ್ರಾಶಗಳನ್ನು ನಿರ್ಭಂಧಿಸಿದರೆ ಅದರ ವಿರುದ್ದ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ಪ್ರಶಾಂತ್ ಭೂಷಣ್ ಎಂಬ ಪ್ರಭೂತಿಯ ಬಗ್ಗೆ ಏನು ತಾನೇ ಹೇಳಬೇಕು?

ಹೀಗೆ ಆಂತರಿಕ ದೇಶದ್ರೋಹಿಗಳ ಪಟ್ಟಿ ಮತ್ತು ಅವರು ದೇಶಾದ್ಯಂತ ನಡೆಸುತ್ತಿರುವ ದೇಶವಿರೋಧಿ ಕೃತ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಇಡೀ ದಿನವೇ ಸಾಲದು. ಬಿಜೆಪಿಯವರನ್ನು. ಮೋದಿಯವರನ್ನು ವಿರೋಧಿಸುವ ಬರದಲ್ಲಿ ದೇಶವನ್ನೇ ವಿರೋಧಿಸುತ್ತಾ ಪರೋಕ್ಷವಾಗಿ ಶತ್ರುರಾಷ್ಟ್ರಗಳಿಗೆ ನೆರವಾಗುತ್ತಿದ್ದೇವೆ ಎಂಬುದು ಇವರಿಗೆ ಏಕೆ ಅರ್ಥವಾಗುತ್ತಿಲ್ಲ.? ದೇಶ ಎಂದರೆ ಕೇವಲ ಆಡಳಿತ ನಡುಸುತ್ತಿರುವ ಸರ್ಕಾರವಲ್ಲ. ಅವರ ತಪ್ಪು ಒಪ್ಪುಗಳನ್ನು ಸಾಂವಿಧಾನಾತ್ಮಕವಾಗಿ ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ. ಆಡಳಿತ ನಡೆಸುತ್ತಿರುವ ಕೆಲ ನಾಯಕರ ವಿರುದ್ಧ ಸೈದ್ಧಾಂತಿಕ ಭಿನ್ನಭಿಪ್ರಾಯಗಳು ಇರಲೂ ಬಹುದು ಆದರೆ ಅದಕ್ಕೂ ಒಂದು ಸಮಯ ಸಂದರ್ಭ ಎಂಬುದು ಇರುತ್ತದೆ ಅಲ್ಲವೇ? ದೇಶ ವಿಪತ್ತಿನಲ್ಲಿದ್ದಾಗ ಎಲ್ಲಾ ರೀತಿಯ ವಿರೋಧಾಭಾಸಗಳನ್ನು ಬದಿಗಿಟ್ಟು ದೇಶದ ಪರವಾಗಿ ಒಗ್ಗಟ್ಟಾಗಿ ವಿಪತ್ತನ್ನು ಎದುರಿಸ ಬೇಕೇ ಹೊರತು ದೇಶವಿರೋಧಿ ಕೃತ್ಯವನ್ನು ಎಸೆಗುತ್ತಾ ಶತ್ರುಗಳಿಗೆ ನೆರವಾಗುವವನು ಖಂಡಿತವಾಗಿಯೂ ಭಾರತೀಯನಾಗಿರಲಾರ ಅವನು ದೇಶದ ಆಂತರಿಕ ಹಿತಶತ್ರುವೇ ಸರಿ.

ಸದ್ಯದ ಪರಿಸ್ಥಿತಿಯಲ್ಲಿ ಹೊರಗಿನ ಶತ್ರುಗಳನ್ನು ತಕ್ಷಣವೇ ಗುರುತಿಸಿ ಗುಂಡಿಕ್ಕಿ ಗುಂಡಿ ಮುಚ್ಚುವ ಸಾಮರ್ಥ್ಯ ನಮ್ಮ ಸೈನಿಕರಿಗೆ ಇದೆ. ಅದನ್ನು ಅವರು ಸಮರ್ಥವಾಗಿ ಮಾಡಲು ಒಬ್ಬ ಜವಾಬ್ಧಾರೀ ಭಾರತೀಯರಾಗಿ ಸರ್ಕಾರ ಮತ್ತು ಸೈನ್ಯದ ಬೆಂಬಲಕ್ಕೆ ನಿಲ್ಲೋಣ. ಸದ್ಯದ ಸಮಯದಲ್ಲಿ 4C ಅಂದರೆ Corona, Congress, Communist & China ವಿರುದ್ಧ ಹೋರಾಡುವ ಧೃಡ ಸಂಕಲ್ಪವನ್ನು ಮಾಡೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s