ಖಾರಾ ಅವಲಕ್ಕಿ (ಚೂಡಾ)

ಈಗಂತೂ ಮಳೆಗಾಲ. ಸಂಜೆ ಧೋ ಎಂದು ಮಳೆ ಬೀಳುತ್ತಿದ್ದರೆ, ನಾಲಿಗೆ ಬಿಸಿ ಬಿಸಿಯಾದ ಮತ್ತು ಖಾರವಾದ  ಕುರುಕಲನ್ನು ಬಯಸುತ್ತದೆ. ಚಹಾದ ಜೊತೆ ಚೂಡಾ ಹಂಗಾ ಎನ್ನುವಂತೆ ಬಿಸಿಬಿಸಿಯಾದ ಕಾಫೀ/ಟೀ  ಜೊತೆ ಖಾರದ ಅವಲಕ್ಕಿ ಅರ್ಥಾತ್ ಚೂಡ ತಿನ್ನಲು ಮಜವಾಗಿರುತ್ತದೆ. ಹಾಗಾಗಿ ನಮ್ಮ ನಳಪಾಕ ಮಾಲಿಕೆಯಲ್ಲಿ ಖಾರದ ಅವಲಕ್ಕಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಖಾರ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ತೆಳು(ಪೇಪರ್) ಅವಲಕ್ಕಿ 4 ಬಟ್ಟಲು
  • ಕಡಲೆಬೀಜ – 2 ಚಮಚ
  • ಹುರಿಗಡಲೆ –  2 ಚಮಚ
  • ಸಾಸಿವೆ – 1/2 ಚಮಚ
  • ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ – 1/2 ಬಟ್ಟಲು
  • ಸಕ್ಕರೆ – 1/2 ಚಮಚ
  • ಚಿಟುಕಿ ಅರಿಶಿಣ
  • ಚಿಟುಕಿ ಇಂಗು
  • ಗೋಡಂಬಿ – 10 (ಐಚ್ಚಿಕ)
  • ಒಣದ್ರಾಕ್ಷಿ – 2 ಚಮಚ (ಐಚ್ಚಿಕ)
  • ಒಣಮೆಣಸಿನಕಾಯಿ – 4-6
  • ಹೆಚ್ಚಿದ ಹಸೀ ಮೆಣಸಿನಕಾಯಿ – 4-6
  • ಕರಿಬೇವಿನ ಎಸಳು 10-15
  • ಬೆಳ್ಳುಳ್ಳಿ – 4-6 ಎಸಳು (ಐಚ್ಚಿಕ)
  • ಅಡುಗೆ ಎಣ್ಣೆ – 4 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ಖಾರದ ಅವಲಕ್ಕಿ ತಯಾರಿಸುವ ವಿಧಾನ

  • WhatsApp Image 2020-07-10 at 9.48.52 AMಮೊದಲು ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ ಒಂದೆರಡು ದಿನಗಳ ಇಟ್ಟು ಚೆನ್ನಾಗಿ ಒಣಗಿಸಿಕೊಳ್ಳಿ
  • ಒಂದು ಅಗಲ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಳ್ಳಿ
  • ಈಗ ಕಡಲೇಕಾಯಿ ಜೀಜ, ಗೋಡಂಬಿ ಚೆನ್ನಾಗಿ ಕೆಂಪಗೆ ಬರುವಂತೆ ಹುರಿದುಕೊಂಡು ಅದಕ್ಕೆ ಹುರಿಗಡಲೆ ಮತ್ತು ದ್ರಾಕ್ಷಿಯನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ
  • ಈಗ ಕರಿಬೇವು, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ, ಒಣಮೆಣಸಿನಕಾಯಿ ಕತ್ತರಿಸಿ ಹಾಕಿ, ಬೆಳ್ಳುಳ್ಳಿಯನ್ನೂ ಸೇರಿಸಿ ಹಸೀ ಹೋಗುವವರೆಗೂ ಹುರಿದುಕೊಳ್ಳಿ
  • ತೆಳ್ಳಗೆ ಕತ್ತರಿಸಿದ ಒಣ ಕೊಬ್ಬರಿ ಚೂರುಗಳನ್ನು ಅದಕ್ಕೆ ಹಾಕಿ ಕೆಂಪಗೆ ಬರುವವಎಗೂ ಹುರಿದುಕೊಳ್ಳಿ
  • ಕಡೆಗೆ ಸಕ್ಕರೆ, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೈಯ್ಯಾಡಿಸಿ.
  • ಈ ಮಿಶ್ರಣಕ್ಕೆ  ತೆಳು ಅವಲಕ್ಕಿ ಸೇರಿಸಿ ಚೆನ್ನಾಗಿ ಕಲೆಸಿ ಸುಮಾರು ಐದಾರು ನಿಮಿಷಗಳಷ್ಟು ಕಾಲ ಕೈಯ್ಯಾಡಿಸಿದಲ್ಲಿ ಬಿಸಿ ಬಿಸಿಯಾದ ಮತ್ತು ಅಷ್ಟೇ ರುಚಿ ರುಚಿಯಾದ ಖಾರದ ಅವಲಕ್ಕಿ (ಚೂಡಾ ಅವಲಕ್ಕಿ) ಸಿದ್ಧ

ಇದನ್ನು ಗಾಳಿಯಾಡದಂತಹ ದಬ್ಬದಲ್ಲಿ ಮುಚ್ಚಿಟ್ಟು ಸುಮಾರು ಒಂದು ವಾರಗಳ ಕಾಲ ಇಟ್ಟು ತಿನ್ನಬಹುದು. ಇದನ್ನು ಹಾಗೆಯೂ ತಿನ್ನಬಹುದು ಇಲ್ಲವೇ ಕಾಫೀ ಅಥವಾ ಚಹಾದ ಜೊತೆ ತಿನ್ನಲು ಮಜವಾಗಿರುತ್ತದೆ.

ರುಚಿಕರವಾದ ಖಾರದ ಅವಲಕ್ಕಿ (ಚೂಡಾ ಅವಲಕ್ಕಿ)  ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ ಮತ್ತು ಈ ರುಚಿಯನ್ನು ನಿಮ್ಮ ಮನೆಯವರೆಲ್ಲರೂ ಮೆಚ್ಚಿದ ನಂತರ ನಮಗೆ ತಿಳಿಸುವುದನ್ನು ಮಾತ್ರ ಮರೆಯಬೇಡಿ.

ಏನಂತೀರೀ?

ಮನದಾಳದ ಮಾತು : ನಮ್ಮ ಸಂಪ್ರದಾಯದಲ್ಲಿ ಅವಲಕ್ಕಿಗೆ ಬಹಳ ಮಹತ್ವವಿದೆ. ಮಡಿ, ಹುಡಿ ನೈವೇದ್ಯ, ತಿಂಡಿ, ಫಲಹಾರ ಎಲ್ಲದಕ್ಕೂ ಅವಲಕ್ಕಿ ಸೈ. ಕೃಷ್ಣನ ಮನೆಗೆ ಸಹಾಯ ಬೇಡಲು ಬಂದ ಪರಮಾಪ್ತ ಕುಚೇಲನೂ ಹಿಡಿಯವಲಕ್ಕಿಯನ್ನೇ ತನ್ನ ಶಲ್ಯದಲ್ಲಿ ತಂದಿದ್ದ ಎಂದು ಹೇಳುತ್ತದೆ ನಮ್ಮ ಪುರಾಣಗಳು.  ಹಾಗಾಗಿ ಅವಲಕ್ಕಿಯನ್ನು ಯಾರೂ ಬೇಡಾ ಎನ್ನುವುದಿಲ್ಲ ಮತ್ತು ಬೇಡ ಎನ್ನಬಾರದೂ ಎನ್ನುತ್ತದೆ ನಮ್ಮ ಶಾಸ್ತ್ರ. ಒಮ್ಮೆ ನಿಮ್ಮ ಮನೆಗಳಲ್ಲಿ ಈ ಖಾರದ ಅವಲಕ್ಕಿಯನ್ನು ಪ್ರಯತ್ನಿಸಿ ನೋಡಿ ಅಭಿಪ್ರಾಯ ತಿಳಿಸಿ.

One thought on “ಖಾರಾ ಅವಲಕ್ಕಿ (ಚೂಡಾ)

  1. ಶ್ರೀಕಂಠ ಬಾಳಗಂಚಿಯವರೆ, ಖಾರಾ ಅವಲಕ್ಕಿ (ಚೂಡಾ) ಮಾಡುವ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಈ ಖಾರಾ ಅವಲಕ್ಕಿ ಮತ್ತು ಒಗ್ಗರಣ್ಣೆ ಹಾಕಿದ ಪುರಿಯನ್ನು ಮಾಡಿ ಒಂದು ಡಬ್ಬದಲ್ಲೋ ಪಾತ್ರೆಯಲ್ಲೋ ಮುಚ್ಚಿಟ್ಟು ಸಂಜೆ ವೇಳೆ ಕಾಫಿ-ಟೀ ಜೊತೆಗೆ ತಿನ್ನುತ್ತಾರೆ. ಅಲ್ಲದೆ ಮನೆಗಳಿಗೆ ಯಾರಾದರೂ ನೆಂಟರು ಇಷ್ಟರು ಬಂದಾಗಲೂ ಕಾಫಿ ಟೀ ಜೊತೆ ನೀಡುತ್ತಾರೆ. ಉತ್ತರ ಕರ್ನಾಟಕದ ಮನೆಗಳಲ್ಲಿ ಇದು ಸ್ವಲ್ಪ ಹೆಚ್ಚು. ಅಲ್ಲಿ ಈ ಚೂಡಾ ಜೊತೆ ಮಿರ್ಚಿ ಬಜ್ಜಿ ಅಂತ ಮೆಣಸಿನಕಾಯಿ ಬಜ್ಜಿಯನ್ನೂ ಮಾಡಿ ಒಟ್ಟಿಗೆ ತಿನ್ನುವುದನ್ನು ನೋಡುತ್ತೇವೆ. ಇಲ್ಲಿ ಮಾಡುವಹಾಗೆ ಖಾರಾ ಇಲ್ಲದ ದೊಡ್ಡ ಮೆಣಸಿನಕಾಯಿ ಉಪಯೋಗಿಸುವುದಿಲ್ಲ ಅಲ್ಲಿ. ಖಾರಾ ಇರುವಂಥ ದೊಡ್ಡ ಮೆ ಣಸಿನ ಕಾಯಿಯಿಂದಲೇ ಬಜ್ಜಿ ಮಾಡುತ್ತಾರೆ. ಚೂಡಾ ಜೊತೆ ಖಾರಾ ಮೆಣಸಿನಕಾಯಿ ಬಜ್ಜಿ ಜೊತೆ ಕೆ-ಟೀ ಕುಡಿಯುವುದು ಆ ಕಡೆಯ ಅಭ್ಯಾಸ. ಮಳೆಗಾಲ ಪ್ರಾರಂಭವಾಗಿರುವ ಈ ಹೊತ್ತಿನಲ್ಲಿ ಈ ಖಾರಾ ಅವಲಕ್ಕಿ ಬಗ್ಗೆ ನೆನಪು ಮಾಡಿರುವುದು ಸಕಾಲಿಕವಾಗಿದೆ. ಧನ್ಯವಾದಗಳು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s