ಕೆಲ ವರ್ಷಗಳ ಹಿಂದೆ ಶೇಷಾದ್ರೀಪುರಂ ಮಲ್ಲಿಗೆ ಆಸ್ಪತ್ರೆಯ ಬಳಿ ಕನ್ನಡ ಚಿತ್ರರಂಗದಲ್ಲಿ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಕವಿರಾಜ್ ಮತ್ತು ತಿಭುವನ್ ಮಾಸ್ತರ್ ಇಬ್ಬರೂ ನಮ್ಮ ಮುಂದೆ ನಡೆದುಕೊಂಡು ಬರುತ್ತಿದ್ದರು. ಅರೇ, ಇವರನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಒಂದು ಕ್ಷಣ ಯೋಚಿಸುತ್ತಿದ್ದಂತೆಯೇ, ಅವರಿಬ್ಬರೂ ನಮ್ಮ ಮುಂದೆಯೇ ಬಂದಾಗ ಪರಿಚಯಸ್ಥರ ಹಾಗೆ ಒಂದು ನಗೆ ಚೆಲ್ಲಿದೆ. ಅದಕ್ಕೆ ಪ್ರತ್ಯುತ್ತರವಾಗಿ ಅವರೂ ಸಹಾ ನಕ್ಕಾಗಲೇ ಅವರು ಕವಿರಾಜ್ ಎಂದು ನೆನಪಿಗೆ ಬಂದು, ನಮಸ್ಕಾರ. ಹೇಗಿದ್ದೀರೀ? ಎಂದಾಗಾ, ಅವರಿಬ್ಬರೂ ತಕ್ಷಣವೇ ನಿಂತು ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿ ಸಜ್ಜನಿಕೆಯನ್ನು ತೋರಿ ಅವರಿಬ್ಬರ ಬಗ್ಗೆ ನಮ್ಮ ಮನಸ್ಸಿನಲ್ಲಿ ಸದ್ಭವನೆ ಮೂಡಿಸಿದರು.
ಸರ್ ನೀವು ಹಾಡುಗಳನ್ನು ಚೆನ್ನಾಗಿ ಬರೆಯುತ್ತಿದ್ದೀರಿ. ತಾಯಿ ಶಾರದೇ ನಿಮಗೆ ಚೆನ್ನಾಗಿ ಒಲಿದಿದ್ದಾಳೆ ಎಂದು ಪೀಠಿಕೆ ಹಾಕುತ್ತಲೇ, ಸರ್ ನಿಮ್ಮ ಬಗ್ಗೆ ನನ್ನದೊಂದು ಗಂಭೀರವಾದ ಆರೋಪವಿದೆ. ಕಣ ಕಣದೀ ಶಾರದೇ ಎನ್ನುವಂತಹ ಕ್ಲಾಸ್ ಹಾಡನ್ನು ಬರೆದ ನೀವು ಚಿತ್ರಾನ ಚಿತ್ರಾನಾ, ಎನ್ನುವಂತಹ ಚಿತ್ರಾನ್ನ ಹಾಡನ್ನು ಬರೆದದ್ದು ನನ್ನ ಮನಸ್ಸಿಗೆ ಸರಿ ಕಾಣಲಿಲ್ಲ ಎಂದೆ. ಬಹುಶಃ ಈ ರೀತಿಯಾದ ಆರೋಪವನ್ನು ನಿರೀಕ್ಷಿಸದಿದ್ದ ಕವಿರಾಜ್ ಒಮ್ಮಿಂದೊಮ್ಮೆಲ್ಲೆ ಪೆಚ್ಚಾದಂತೂ ಸುಳ್ಳಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲೆಂದೇ ನಮ್ಮಾಕಿ ನನ್ನ ಕೈ ಹಿಡಿದು ಜಗ್ಗಿ, ಹಾಗೇನಿಲ್ಲಾ ಸರ್, ನನಗಂತೂ ನಿಮ್ಮ ಚಿತ್ರಾನ್ನಾ ಹಾಡೇ ಇಷ್ಟ ಆಯ್ತು ಎಂದಾಗ, ಸದ್ಯ ನಮ್ಮನ್ನು ಸಮರ್ಥಿಸಿಕೊಳ್ಳಲು ಒಬ್ಬರಾದರೂ ಸಿಕ್ಕರಲ್ಲಾ ಎಂದು ಸಮಾಧಾನ ಪಟ್ಟುಕೊಂಡ ಕವಿರಾಜ್ , ನೋಡಿ ಸಾರ್, ನಿಮ್ಮ ಮನೆಯಲ್ಲಿಯೇ ವೈರುಧ್ಯವಿದೆ. ನಿಮಗೆ ಕ್ಲಾಸ್ ಹಾಡುಗಳು ಇಷ್ಟವಾದರೇ, ನಿಮ್ಮಾಕಿಗೆ ಮಾಸ್ ಹಾಡುಗಳು ಇಷ್ಟವಾಗುತ್ತದೆ. ಅಣ್ಣಾವ್ರು ಹೇಳಿದ ಹಾಗೆ ಎಲ್ಲಾ ರೀತಿಯ ಅಭಿಮಾನಿ ದೇವರುಗಳನ್ನು ಸಂತೃಪ್ತಿಗೊಳಿಸ ಬೇಕಾಗುತ್ತದೆ. ಬರೀ ಕ್ಲಾಸ್ ಹಾಡುಗಳಿಗೇ ಬ್ರಾಂಡ್ ಆಗಿಹೋದರೇ, ಹೊಟ್ಟೇ ತುಂಬುವುದಿಲ್ಲ. ಹಾಗಾಗಿ ಹೊಟ್ಟೇ ಪಾಡಿಗೆ ಈ ರೀತಿಯ ಮಾಸ್ ಹಾಡುಗಳನ್ನು ಆಗ್ಗಾಗ್ಗೆ ಬರೆಯುವುದು ನಮಗೆ ಅನಿವಾರ್ಯ. ಹಾಗಾಗಿ ದಯವಿಟ್ಟು ಕ್ಷಮೆ ಇರಲಿ ಎಂದು ವಿನಮ್ರವಾಗಿ ಕೈ ಮುಗಿದಾಗ, ಅಂತಹ ಮುಜುಗರದ ಪ್ರಶ್ನೆ ಕೇಳಿದ್ದಕ್ಕೆ ನನಗೇ ಬೇಸರವಾಗಿ, ಸರ್ ನಿಮ್ಮ ಮನಸ್ಸನ್ನು ನೋಯಿಸಿದ್ದಲ್ಲಿ ಕ್ಷಮೆ ಇರಲಿ ಎಂದು ಹೇಳಿ ಬೀಳ್ಕೊಟ್ಟೆವು.
ಅವರಿಬ್ಬರೂ ಆ ಕಡೆ ಹೊರಟಾಗಾ, ನಾವಿಬ್ಬರೂ ಅರೇ, ಎಲ್ಲರೂ ನಮ್ಮಂತೆಯೇ ಇರಬೇಕು ಎಂದು ಆಲೋಚಿಸುವುದು ತಪ್ಪು. ಎಲ್ಲರಿಗೂ ಅವರದ್ದೇ ಆದ ಆದ್ಯತೆಗಳು ಇರುತ್ತವೆ. ಅಪರಿಚಿತರಾದ ನಮ್ಮೊಂದಿಗೂ ಅಷ್ಟು ಸೌಜನ್ಯಯುತವಾಗಿ ಮಾತನಾಡಿಸಿದ ಕವಿರಾಜ್ ಬಗ್ಗೆ ನಮ್ಮ ಮನಸ್ಸಿನ ಬಲೂನ್ ತುಂಬಿ ಹೋಯಿತು. ವರ್ಷಗಳು ಉರುಳಿದಂತೆಲ್ಲಾ ಅವರ ಪ್ರಬುದ್ಧತೆಯಿಂದಾಗಿ ಆ ಬಲೂನ್ ದೊಡ್ಡದಾಗುತ್ತಲೇ ಹೋಯಿತು. ಪ್ರತೀ ಬಾರಿ ಅವರನ್ನು ಯಾವುದಾದರೂ ಟಿವಿ ಛಾನಲ್ಲಿನಲ್ಲಿ ನೋಡಿದಾಗಲೀ ಅಥವಾ ಅವರ ಬಗ್ಗೆ ಯಾವುದೇ ಮುದ್ರಣ ಮಾಧ್ಯಮದಲ್ಲಿ ಬರೆದಿದ್ದಾಗ ಅರೇ ನಮ್ಮವರು ಎನ್ನುವ ಭಾವನೆಯಿಂದ ಬಹಳ ಆಸ್ಥೆಯಿಂದ ಓದುತ್ತಿದ್ದೆ.
ಆದರೇ, ಮೊನ್ನೆ ಕೊತ್ಮೀರೀ ಸೊಪ್ಪು ಕುರಿತಂತೆ ಸಮರ್ಥಿಸಿಕೊಳ್ಳುವ ಅವರ ಸುಧೀರ್ಘವಾದ ಲೇಖನವನ್ನು ಓದುತ್ತಿದ್ದಂತೆಯೇ ಮನಸ್ಸಿನ ಬೆಲೂನ್ ಇದ್ದಕ್ಕಿಂದ್ದಂತೆಯೇ ಡುಬ್ ಎಂದು ಒಡೆದು ಹೋಯಿತು. ನಿಜ ಎಲ್ಲರಿಗೂ ಅವರವರದ್ದೇ ಆದ ಭಾವನೆಗಳು ಇರುತ್ತವೆ. ಅದರೆ ದಾನ ಮಾಡುವಾಗಲೂ ಅಪಾತ್ರ ದಾನ ಮಾಡಬಾರದು ಎಂದು ನಮ್ಮ ಹಿರಿಯರು ಹೇಳಿರುವುದು ನಮ್ಮ ಬುದ್ಧಿವಂತ ಕವಿರಾಜ್ ಅವರಿಗೆ ತಿಳಿದಿಲ್ಲವೇ? ಈ ಬಾರಿ ಪೋಲೀಸರು ಬಹಳ ವೈಜ್ಞಾನಿಕವಾದ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಗಲಭೆ ನಡೆದ ಸಮಯದಲ್ಲಿ ಆ ಸ್ಥಳದಲ್ಲಿದ್ದ ಮೊಬೈಲ್ ಟವರ್ಗಳ ವ್ಯಾಪ್ತಿಯಲ್ಲಿ ಕರೆ ಮಾಡಿದ ಇಲ್ಲವೇ ಸ್ವೀಕರಿಸಿದ ಆಧಾರದ ಮೇಲೇ ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಅವರು ನಿಜವಾಗಿಯೂ ತಪ್ಪಿತಸ್ಥರೇ ಇಲ್ಲವೇ ಎಂದು ಕೂಲಂಕುಶವಾಗಿ ತನಿಖೆ ನಡೆಸುತ್ತಿದ್ದಾಗ ಒಬ್ಬ ಜವಾಬ್ಧಾರೀ ದೇಶದ ನಾಗರೀಕನಾಗಿ ಪೋಲಿಸರನ್ನು ಸಮರ್ಥಿಸುವುದನ್ನು ಬಿಟ್ಟು ಆ ಪುಂಡರ ಪರ ಪುಂಖಾನುಪುಂಖವಾಗಿ ಲೇಖನ ಬರೆಯುವ ಔಚಿತ್ಯವೇನಿತ್ತು?
ಕೆಲವೇ ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ CAA & NRC ಜಾರಿಗೆ ತರಲು ಮುಂದಾದಾಗಲೂ ತಮ್ಮ ಬಳಿ ಸೂಕ್ತ ದಾಖಲೆಗಳು ಇಲ್ಲಾ ಎಂದು ದೊಂಬಿ ಎಬ್ಬಿಸಿದ ಇದೇ ಪಂಗಡವರು, ಈಗ ತಮ್ಮ ಅಮಾಯಕ ಸಂಬಂಧೀಕರನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಅವರ ಆಧಾರ್ ಕಾರ್ಡ್ ಮತ್ತು ಇತರೇ ದಾಖಲೆಗಳನ್ನು ಕೈಯ್ಯಲ್ಲಿ ಹಿಡಿದು ತಂದಿರುವುದು ಅವರ ದ್ವಿಮುಖ ಮಾನದಂಡಗಳು (double standards) ಜಗಜ್ಜಾಹೀರಾತು ಪಡಿಸಿರುವವರನ್ನು ಹೇಗೆ ತಾನೆ ಸ್ವಘೋಷಿತ ಬುದ್ದಿ ಜೀವಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂಬುದು ತಿಳಿಯದಾಗಿದೆ.
ದೇವರಜೀವನ ಹಳ್ಳಿಯ ಗಲಭೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಸ್ಥಳೀಯ ಶಾಸಕರ ಸೋದರಳಿಯ ನವೀನ್ ಎಂಬ ಯುವಕ ಮುಖಪುಟದಲ್ಲಿ ಮುಸ್ಲಿಂ ಧರ್ಮಗುರುಗಳ ವಿರುದ್ದ ಆಕ್ಷೇಪಾರ್ಹ ಲೇಖನವನ್ನು ಪ್ರಕಟಿಸಿದ ವಿರುದ್ಧವಾಗಿ ನಡೆದ ಪ್ರಕ್ರಿಯೆಯಾಗಿದ್ದು ಆತನನ್ನು ಪ್ರಮುಖ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅದರೆ ಆತ ಆ ರೀತಿಯಾಗಿ ಲೇಖನ ಪ್ರಕಟಿಸಲು ಉದ್ರೇಕಿಸಿದ ಮುಸ್ಲಿಂ ಯುವಕನ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ? ನ್ಯಾಯ ಎಂದ ಮೇಲೇ ಎಲ್ಲರಿಗೂ ಒಂದೇ ನ್ಯಾಯ ಮತ್ತು ಕಾನೂನು. ನವೀನ್ ಮನೆಯ ಮುಂದೆ ಬೆಂಕಿ ಇರುವುದನ್ನು ಬೆಟ್ಟು ಮಾಡಿ ತೋರುಸುತ್ತಿರುವವರು, ಅಲ್ಲಿ ಬೆಂಕಿ ಹಚ್ಚಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸದೆ ಅವರು ಅಮಾಯಕರು ಎಂದು ಬಿಂಬಿಸಿ ಅವರನ್ನು ಸಮರ್ಥನೆ ಮಾಡುತ್ತಿರುವುದು ದೇಶಕ್ಕೆ ಮಾರಕವೇ ಸರಿ.
ಅಪರಾಧಕ್ಕೆ ಧರ್ಮವಿಲ್ಲ ಹಾಗೆಯೇ ಆರೋಪಿಗಳೆಲ್ಲರೂ ತಪ್ಪಿತಸ್ಥರಲ್ಲ. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ಅದರ ಅಡಿಯಲ್ಲಿ ಕಾನೂನನ್ನು ಕೈಯ್ಯಲ್ಲಿ ತೆಗೆದುಕೊಳ್ಳದೇ ಹೋದಲ್ಲಿ ಇಂತಹ ಅವಗಡಗಳೇ ಸಂಭವಿಸುತ್ತಿರಲಿಲ್ಲ ಅಲ್ಲವೇ?
ಕಟ್ಟ ಕಡೆಯದಾಗಿ ಕಾಡುತ್ತಿರುವ ಒಂದು ಪ್ರಶ್ನೆಯೆಂದರೆ, ಸಂಜೆಯಿಂದಲೇ ಆ ಪ್ರದೇಶವಿಡೀ ಕರ್ಫ್ಯೂಗೆ ಒಳಗಾಗಿದ್ದು ಕಂಡಲ್ಲಿ ಗುಂಡು ಆಜ್ಞೆ ಇರುವುದನ್ನು ಪೋಲೀಸರು ಬಾರಿ ಬಾರಿ ಧ್ವನಿವರ್ಧಕದ ಮೂಲಕ ಹೇಳುತ್ತಿದ್ದರೂ, ರಾತ್ರೀ ಒಂದು ಗಂಟೆಯ ಸಮಯದಲ್ಲಿ ನಿಜವಾದ ವ್ಯಾಪಾರಿ ಯಾರಾದರೂ, ಗಲಭೆ ನಡೆಯುತ್ತಿರುವ ಸ್ಥಳದಲ್ಲಿ ಕೊತ್ಮೀರೀ ಸೊಪ್ಪು ತರಲು ಹೋಗುತ್ತಾರಾ?
ಏನಂತೀರೀ?
ಯಾರಾದರೂ ಆಗಲಿ, ಯಾರನ್ನಾದರೂ ಆಗಲಿ, ಸಮರ್ಥಿಸುವ ಮುನ್ನ ವಿಷಯದ ಬಗ್ಗೆ ಅರಿವಿರಬೇಕು.
ಮುಂದೆ ಸತ್ಯಂಶ ಬಯಲಾದಾಗ ಯಾವ ಮುಖ ತೋರಿಸುತ್ತಾರೆ.
LikeLiked by 1 person
ಸತ್ಯವಾದ ಮಾತು. ಅಂಗೈಯ್ಯಲ್ಲಿ ಆದ ಗಾಯ ನೋಡಿಕೊಳ್ಳಲು ಕನ್ನಡಿ ಏಕೆ ಬೇಕು. ಮತಾಂಧ ಪುಂಡರ ಪುಂಡಾಟಿಕೆಗಳಿಗೆ ಸಾಕಷ್ಟು ಪುರಾವೆಗಳಿವೆ.
LikeLike