ರವೇ ಉಪ್ಪಿಟ್ಟು, ರವೇ ದೋಸೆ

uppittu
ರವೇ ಉಪ್ಪಿಟ್ಟು

 

ರವೆ, ಹಸೀಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕಾಯಿತುರಿ, ತುರಿದ ಶುಂಠಿ, ಜೀರಿಗೆ,  ರುಚಿಗೆ ತಕ್ಕಷ್ಟು ಉಪ್ಪು , ತುಪ್ಪಾ ಹಾಕಿ ಘಮ್ ಅಂತಾ ಉಪ್ಪಿಟ್ಟು ಮಾಡಿದ್ರೇ, ಉಪ್ಪಿಟ್ಟಾ ಅಂತಾ ಕ್ಕೆಕರಿಸಿ ನೋಡ್ತಾರೆ ನಮ್ಮ ಮಕ್ಕಳು.

 

 

WhatsApp Image 2020-03-30 at 11.47.43 AM

 

ಅದೇ ರವೆಗೆ ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸ್ವಲ್ಪ ಹುಳಿ ಮೊಸರಿನೊಂದಿಗೆ ಕಲಸಿ,ಗರಿ ಗರಿಯಾಗಿ ಬರಲು ಸ್ವಲ್ಪ ಅಕ್ಕಿಹಿಟ್ಟು ಬೆರೆಸಿ, ಕಾವಲಿ ಮೇಲೆ ತುಪ್ಪ ಹಾಕಿ ಚುರ್ ಅಂತಾ ದೋಸೆ ಹುಯ್ದು, ಜೊತೆಗೆ ಕಾಯಿ, ಮೆಣಸಿನಕಾಯಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಜರ್ ಅಂತಾ ರುಬ್ಬಿ ಚಟ್ನಿ ಮಾಡಿ ತಟ್ಟೆಗೆ ಹಾಕಿ ಕೊಟ್ರೇ, ಅಹಾ ಬಿಸಿ ಬಿಸಿ ರವೇ ದೋಸೇನಾ ಅಂತಾ ಚಪ್ಪರಿಸಿ ಗಬ ಗಬಾ ಅಂತ ನಾಲ್ಕು ದೋಸೆ ತಿನ್ನುತ್ತವೆ ಮಕ್ಕಳು.

 

thali_pattu
ಥಾಲಿ ಪಟ್ಟು

 

ಅದೇ ರವೇ ದೋಸೇ ಪರಿಕಗಳ ಜೊತೆಗೆ ಸ್ವಲ್ಪ ಕಡಲೆ ಹಿಟ್ಟು ಬೆರೆಸಿ ಗೊಟಾಯಿಸಿ, ಬಿಸಿ ಬಿಸಿ ಕಾವಲಿ ಮೇಲೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಿ ಬೇಯಿಸಿದರೆ ರುಚಿ ರುಚಿಯಾದ ಬಿಸಿ ಬಿಸಿಯಾದ ಉತ್ತರ ಕರ್ನಾಟಕದ ಥಾಲಿಪಟ್ಟು ಸಿದ್ಧ.

 

ಅದೇ ಪರಿಕರಗಳು, ಮಾಡುವ ಕೈ ಕೂಡಾ ಅದೇ ಅದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮನಸ್ಸು ಮಾಡಿದಲ್ಲಿ ತಿಂಡಿಯೂ ಭಿನ್ನ. ರುಚಿಯೂ ವಿಭಿನ್ನ. ಮಕ್ಕಳ ತಿಂಡಿಯ ಸಮಸ್ಯೆಯೂ ಬಗೆ ಹರಿಯುತ್ತದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಪರಿಕರವೊಂದೇ ಮಾಡುವ ವಿಧಾನದಲ್ಲಿ ಸ್ವಲ್ಪ ಬದಾವಣೆ ಮಾಡಿಕೊಂಡಲ್ಲಿ ರುಚಿರುಚಿಯಾದ ವಿಭಿನ್ನವಾದ ತಿಂಡಿಗಳನ್ನು ತಯಾರಿಸಬಹುದು.

ಎಲ್ಲರ ಜೀವನದಲ್ಲಿಯೂ ಸಹಾ ರವೇ ಉಪ್ಪಿಟ್ಟಿನ ತರಹ ಕಷ್ಟಗಳೂ ಇದ್ದೇ ಇರುತ್ತದೆ. ಆದರೆ ಅದೇ ಪರಿಕರಗಳನ್ನೇ ಉಪಯೋಗಿಸಿ ರವೇ ದೋಸೆ, ಥಾಲಿಪಟ್ಟು ಮಾಡಿದಂತೆ, ಸ್ವಲ್ಪ ತಾಳ್ಮೆವಹಿಸಿ ಜಾಗ್ರತೆಯಿಂದ ಸಮಸ್ಯೆಗಳಿಂದ ಹೊರಬರುವವುದನ್ನು ಅಳವಡಿಸಿಕೊಳ್ಳೋಣ. ನೆಮ್ಮದಿ ಜೀವನವನ್ನು ನಡೆಸೋಣ.

ಏನಂತೀರೀ?

ನಮ್ಮಾಕಿ ಇವತ್ತು ಮನೇಲೀ ರವೇ ದೋಸೆ ಮಾಡಿದ್ದನ್ನು ತಿನ್ನುತಿದ್ದಾಗ ಈ ಜೀವನದ ಕಠು ಸತ್ಯ ನೆನಪಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯ್ತು.