ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು 53ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ… Read More ಮದುವೆಯ ಈ ಬಂಧ ಅನುರಾಗದ ಅನುಬಂಧ

ಬಾಳಗಂಚಿ ಚೋಮನ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು… Read More ಬಾಳಗಂಚಿ ಚೋಮನ ಹಬ್ಬ

ಅತ್ತೆ ಮನೆ ಕೆನೆ ಮೊಸರು

ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ… Read More ಅತ್ತೆ ಮನೆ ಕೆನೆ ಮೊಸರು

ಅಪ್ಪಾ ಹಾಕಿದ ಆಲದ ಮರ

ಅದು 80ರ ದಶಕ SSLC ಆದ ನಂತರ Computer Science Diploma ಮಾಡಿದರೆ ಜೀವನದಲ್ಲಿ ಬೇಗ ನೆಲೆಗೊಳ್ಳಬಹುದು ಎನ್ನುವುದು ನನ್ನಾಸೆಯಾಗಿತ್ತು. ಆದರೆ ಅಮ್ಮನೇಕೋ ಮಗ ಇನ್ನೂ ಚಿಕ್ಕ ಹುಡುಗ. ಹೊರೆಗಿನ ಪ್ರಪಂಚದ ಜ್ಞಾನ ತಿಳಿಯೋದಿಲ್ಲ. ಹೇಗೂ ಇಲ್ಲೇ BEL college ಇದೆಯಲ್ಲಾ ಇಲ್ಲೇ ಪಿಯೂಸಿ ಮಾಡ್ಲಿ ಬಿಡಿ. ಆ ಮೇಲೆ ನೋಡಿದರಾಯ್ತು ಎಂಬ ತೀರ್ಮಾನ ತೆಗೆದುಕೊಂಡು ಬಿಇಎಲ್ ಕಾಲೇಜಿನಲ್ಲಿ ವಿಜ್ಞಾನದ ವಿಷಯಕ್ಕೆ ಅರ್ಜಿ ಹಾಕಿಸಿದರು. ಮೊದಲನೇ ಲಿಸ್ಟಿನಲ್ಲಿಯೇ ನನ್ನ ಹೆಸರಿದ್ದದ್ದು ನೋಡಿ ಸ್ವರ್ಗಕ್ಕೆ ಮೂರೇ ಗೇಣು. ಕೆಲವೇ… Read More ಅಪ್ಪಾ ಹಾಕಿದ ಆಲದ ಮರ

ಅಮ್ಮನ ಮಡಿಲು

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಪರ್ಯಾಯ ಸಿಗಬಹುದೇನೋ ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತೀಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಜನ್ಮ‌ ಕೊಟ್ಟ ತಾಯಿ ಮತ್ತು ಆಶ್ರಯ ನೀಡುತ್ತಿರುವ ಭೂಮಿ ತಾಯಿಗೆ ಪರ್ಯಾಯವೇ ಇಲ್ಲ‌. ಹಾಗಾಗಿ ಅವರಿಬ್ಬರೂ ಸದಾಕಾಲವೂ ಪೂಜ್ಯರು‌ ವಂದಿತರು ಮತ್ತು ಆದರಣೀಯರೇ ಸರಿ. ಒಂಭತ್ತು ತಿಂಗಳು ತನ್ನ… Read More ಅಮ್ಮನ ಮಡಿಲು

ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ. ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ… Read More ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನೋಕು ಕೂಲಿ

ಕಳೆದ ಭಾನುವಾರ ಸೆಪ್ಟಂಬರ್ -5 ರಂದು ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರದಿಂದ ಆಚರಿಸುತ್ತಿದ್ದರೆ, ದೂರದ ಕೇರಳದ ತಿರುವನಂತಪುರದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಇಲಾಖೆ (IRRO)ದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ (VSSC) ಮಾತ್ರಾ ಅದೊಂದು ಘನಘೋರ ಘಟನೆಯೊಂದು ನಡೆಯುವ ಮೂಲಕ ವಿದ್ಯಾವಂತರ ನಾಡು ಎಂದು ಕರೆಸಿ ಕೊಳ್ಳುವ ಕೇರಳದ ಮರ್ಯಾದೆಯನ್ನು ಮೂರುಕಾಸಿಗೆ ಹಾರಾಜು ಹಾಕಿರುವುದು ನಿಜಕ್ಕೂ ಖಂಡನೀಯವಾಗಿದೆ. ಭಾನುವಾರದ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತಿರುವನಂತಪುರಂನ ತುಂಬಾದಲ್ಲಿರುವ ಭಾರತೀಯ… Read More ನೋಕು ಕೂಲಿ

ಪೇಪರ್.. ಪೇಪರ್…

ತಾಜಾ ತಾಜಾ ಬಿಸಿ ಬಿಸಿ ಸುದ್ದಿ. ರಾಜ್ಯದ ಹಿರಿಯ ನಾಯಕರೊಬ್ಬರ ರಾಸಲೀಲೆ, ಕಾವಿಧಾರಿ ಮಠಾಧಿಪತಿಗಳ‌ ಪಲ್ಲಂಗ ಪುರಾಣ ಬಹಿರಂಗ ,ಲಜ್ಜೆಗೆಟ್ಟ ಸರ್ಕಾರ ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ವಿರೋಧ ಪಕ್ಷಗಳ ಆಗ್ರಹ. ಓಲಂಪಿಕ್ಸಿನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ. ಭಾರತದ ವಿರುದ್ಧ ಪಾಕ್ ಗೆ ಕ್ರಿಕೆಟ್‌ ನಲ್ಲಿ ಮತ್ರೊಮ್ಮೆ ಸೋಲು ಎಂದು ಒಂದು ಕೈಯಲ್ಲಿ ಪೇಪರ್ಗಳ ಬಂಡಲ್ ಹಿಡಿದುಕೊಂಡು ಮತ್ತೊಂದು ಕೈಯ್ಯಲ್ಲಿ ಕೇವಲ ಶೀರ್ಷಿಕೆ ಕಾಣುವ ಹಾಗೆ ಪೇಪರ್ ಕಾಣುವ ಹಾಗೆ ಹಿಡಿದುಕೊಂದು ಜೋರಾಗಿ ಕೂಗುವ ಸಣ್ಣ… Read More ಪೇಪರ್.. ಪೇಪರ್…

ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..