ಕವಲೇ ದುರ್ಗ

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು… Read More ಕವಲೇ ದುರ್ಗ

ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಪರೀಕ್ಷೆ ಮುಗಿದು, ಫಲಿತಾಂಶ ಬಂದು ಬೇಸಿಗೆ ರಜೆ ಬಂದಿತೆಂದರೆ ನಮಗೆ ಖುಷಿಯೋ ಖುಷಿ. ಪರೀಕ್ಷೆ ಮುಗಿದ ತಕ್ಷಣ ಒಂದೋ ಅಮ್ಮನ ಅಮ್ಮ ಅಜ್ಜಿ ಮನೆಗೆ ಹೋಗಬೇಕು ಇಲ್ಲವೇ ತಂದೆಯ ತಂದೆ ತಾತನ ಮನೆಗೆ ಹೋಗಬೇಕು. ಸಾಧಾರಣವಾಗಿ ನಮ್ಮ ಯುಗಾದಿ ಆದ ಹದಿನೈದು ದಿನಕ್ಕೇ ನಮ್ಮ ಊರಿನಲ್ಲಿ ನಮ್ಮೂರ ಜಾತ್ರೆ ಬಹಳ ಅದ್ದೂರಿಯಿಂದ ಜರುಗುತ್ತಿದ್ದ ಕಾರಣ, ಆ ಜಾತ್ರೆಯನ್ನು ಮುಗಿಸಿಕೊಂಡು ಬಂದ ಕೂಡಲೇ ಅಜ್ಜಿ ಮನೆಗೆ ಹೋಗಲು ಸಿದ್ದವಾಗುತ್ತಿದ್ದೆವು. ತಾತನ ಊರಿಗೆ ಹೋಗಲು ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಈಜಾಡುವುದು,… Read More ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಕಳೆದು ಹೋದ ಉಂಗುರ

ಅದು ಎಂಭತ್ತರ ದಶಕ. ಗಮಕ ಕಲೆ ನಮ್ಮ ತಂದೆಯವರಿಗೆ ನಮ್ಮ ತಾತ ಗಮಕಿ ನಂಜುಂಡಯ್ಯನವರಿಂದಲೇ ಬಂದಿತ್ತಾದರೂ, ಶೈಕ್ಷಣಿಕವಾಗಿ ಅಧಿಕೃತವಾದ ಪದವಿಯೊಂದು ಇರಲಿ ಎಂದು ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಗುರುಗಳಾದ ಶ್ರೀ ನಾರಾಯಣ್ ಅವರು ನಡೆಯುತ್ತಿದ್ದ ಗಮಕ ಪಾಠ ಶಾಲೆ ಮೂಲಕ ಗಮಕ ವಿದ್ವತ್ ಪರೀಕ್ಷೆಯನ್ನು ಕಟ್ಟಿದ್ದರು. ಪರೀಕ್ಷೆ ಎಲ್ಲವೂ ಸುಲಲಿತವಾಗಿ ಮುಗಿದು ಎಲ್ಲರೂ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದ ಕಾರಣ ಅದರ ಸಂಭ್ರಮಾಚರಣೆಗೆಂದು ಕುಟುಂಬ ಸಮೇತವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಅದೊಂದು ಭಾನುವಾರ ಬೆಳಿಗ್ಗೆ 9.00ಘಂಟೆಯ… Read More ಕಳೆದು ಹೋದ ಉಂಗುರ

ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ

ಮನೆಯಲ್ಲಿ ಕುಳಿತು ತುಂಬಾನೇ ಬೋರ್ ಆಗ್ತಾ ಇದ್ಯಾ? ಎಲ್ಲಾದ್ರೂ ಹತ್ತಿರದಲ್ಲೇ ಸುತ್ತಾಡಿಕೊಂಡು ಬರೋಣಾ ಅನ್ನಿಸ್ತಾ ಇದ್ಯಾ? ಹಾಗಾರೇ ಇನ್ನೇಕೆ ತಡಾ, ಬನ್ನಿ ನನ್ನ ಸಂಗಡ, ಬೆಂಗಳೂರಿನಿಂದ ದೇವನಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ದಾರಿಯಲ್ಲಿ ಎಡಗಡೆ ದೊಡ್ಡದಾಗಿ MV Solar ಕಂಪನಿ ಕಾಣಿಸುತ್ತದೆ ಅಲ್ಲಿಂದ ಸರ್ವಿಸ್ ರೋಡ್ ತೆಗೆದುಕೊಂಡರೆ ಸಿಗೋದೇ ವಿದ್ಯಾನಗರ. ಬಲಕ್ಕೆ ತಿರುಗಿ ವೆಂಕಟೇಶ್ವರ ಇಂಜೀನಿಯರಿಂಗ್ ಕಾಲೇಜ್ ದಾಟಿಕೊಂಡು ಸುಮಾರು ಎರಡು ಕಿ.ಮೀ, ದೂರ ಕ್ರಮಿಸಿದರೆ ಎಡಗಡೆಗೆ ಸಿಗುವ ಶ್ರೀಕ್ಷೇತ್ರವೇ, ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ. ಇದು… Read More ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ

ದೇವರಮನೆ

ಇತ್ತೀಚೆಗೆ ನೀವು ಕಲರ್ಸ್ ಕನ್ನಡ ಛಾನೆಲ್ಲಿನ ಮಿಥುನರಾಶಿ ಅಥವಾ ಗೀತ ಸೀರಿಯಲ್ಗಳನ್ನು ಕಳೆದ ಎರಡು ಮೂರು ವಾರಗಳಿಂದ ನೋಡಿದ್ರೇ ವಿಹಾರಾರ್ಥವಾಗಿ ನಾಯಕ ನಾಯಕಿಯರು ಒಂದು ಸುಂದರ ಪ್ರಕೃತಿ ತಾಣಕ್ಕೆ ಹೋಗಿದ್ದಾರೆ. ಭೂಲೋಕವೇ ಸ್ವರ್ಗಕ್ಕೆ ಇಳಿದು ಬಂದೆಯೇನೋ ಎನ್ನುವಷ್ಟರ ಮಟ್ಟಿಗಿನ ಎತ್ತರೆತ್ತರದ ಬೆಟ್ಟ ಅಷ್ಟೇ ಮನಮೋಹಕವಾದ ಇಳಿಜಾರು. ಇಡೀ ಬೆಟ್ಟಕ್ಕೆ ಹಸಿರು ಬಣ್ಣದ ಹೊದಿಗೆ ಹಾಸಿದೆಯೇನೋ ಎನ್ನುವಷ್ಟು ಸುಂದರವಾದ ತಾಣ. ಅಲ್ಲಲ್ಲಿ ಕಣ್ಣಿಗೆ ಮುದ ನೀಡುವ ಬಣ್ಣ ಬಣ್ಣದ ಕಾಡು ಹೂವಿನ ಗಿಡಗಳು, ಅತ್ಯದ್ಭುತ ಪರ್ವತಗಿರಿಗಳು, ಪ್ರಪಾತಗಳು, ಕಾಡುಗಳು,… Read More ದೇವರಮನೆ

ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ ಕೆ.ಅರ. ಪೇಟೆ ಯಿಂದ 18.ಕಿ.ಮಿ.,ಮೈಸೂರಿನಿಂದ 43 ಕಿ.ಮಿ. ದೂರದಲ್ಲಿದೆ. ಮೈಸೂರಿನಿಂದ ಕೆ.ಆರ್.ಎಸ್ ಮಾರ್ಗವಾಗಿ ಕನ್ನಂಬಾಡಿ ಊರನ್ನು ದಾಟಿ ಕೆ.ಆರ್.ಎಸ್ ಹಿನ್ನಿರನ್ನು ಅನುಸರಿಸಿಕೊಂಡು ಅರ್ಧ ಮುಕ್ಕಾಲು ಗಂಟೆ ಪ್ರಯಣಿಸಿದರೆ,  ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ನಿರ್ಮಾಣದ ಹಂತದಲ್ಲಿರುವ ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ  ದೇವಾಲಯವನ್ನು ಕಾಣಬಹುದಾಗಿದೆ. ಬೆಂಗಳೂರಿನಿಂದ ಬರುವ ಭಕ್ತಾದಿಗಳು ಮಂಡ್ಯ ಮತ್ತು ಶ್ರೀ ರಂಗಪಟ್ಟಣ ಮಾರ್ಗವಾಗಿ ಬಂದು… Read More ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ. ಸುಮಾರು 60-70 ಸಾವಿರ ಜನಸಂಖ್ಯೆ ಇರುವ… Read More ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ… Read More ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಕೆರೆ ತೊಣ್ಣೂರು/ತೊಂಡನೂರು ಕೆರೆ

ಮಂಡ್ಯಾ ಜಿಲ್ಲೆಯ ಸಕ್ಕರೆನಾಡು ಪಾಂಡವಪುರದಿಂದ ನಾಗಮಂಗಲದ ಕಡೆಗೆ ಸುಮಾರು 10 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಎಡಭಾಗದಲ್ಲಿ ತೊಂಡನೂರು ಎಂಬು ನಾಮಫಲಕ ಕಾಣಿಸುತ್ತದೆ. ನೋಡಲು ಅಷ್ಟೇನೂ ದೊಡ್ಡ ಊರಲ್ಲದಿದ್ದರೂ ಐತಿಹ್ಯವಾಗಿ ಬಹಳ ಪ್ರಮಾಖ್ಯತೆ ಪಡೆದಂತಹ ಊರಾಗಿದೆ. ಕೃಷಿ ಮತ್ತು ಹೈನು ಉದ್ಯಮ ಪ್ರಮುಖ ಉದ್ಯೋಗವಾಗಿದ್ದು ಊರಿಗೆ ಹೋಗುತ್ತಿದಂತೆಯೇ ಹಸುಗಳು ದಾರಿಗೆ ಅಡ್ಡಸಿಗುವುದಲ್ಲದೇ, ಹಾಲಿನ ಸಂಗ್ರಹದ ಕೇಂದ್ರವೂ ಧುತ್ತೆಂದು ಕಣ್ಣಿಗೆ ಬೀಳುತ್ತದೆ. ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು, 11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ… Read More ಕೆರೆ ತೊಣ್ಣೂರು/ತೊಂಡನೂರು ಕೆರೆ