ಶೈಲ ಪಿತಾಮಹ ವಿಷ್ಣು ಶ್ರೀಧರ್ ವಾಕಣ್ಕರ್

16ನೇ ಶತಮಾನದ ಆರಂಭದಲ್ಲಿ ವ್ಯಾಪಾರಕ್ಕೆಂದು ಬ್ರಿಟೀಷರು ಭಾರತೆಕ್ಕೆ ಆಗಮಿಸುವ ವರೆಗೂ ಸುಮಾರು ಒಂದು ಸಾವಿರ ವರ್ಷಗಳ ಕಾಲ ಮುಸಲ್ಮಾನರ ಧಾಳಿ, ಬಲವಂತದ ಬಲಾತ್ಕಾರ, ಮತಾಂತರ , ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳ ಮೇಲೇ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದ್ದರೂ ಭಾರತೀಯರು ಸಮರ್ಥವಾಗಿ ಎದುರಿಸಿ ತಮ್ಮ ಅಸ್ಮಿತೆಯನ್ನು ಅಲ್ಲಲ್ಲಿ ಉಳಿಸಿಕೊಂಡಿದ್ದರು. ಆದರೆ ಯಾವಾಗ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು ನಮ್ಮಲ್ಲಿದ ಸಂಪತ್ತುಗಳನ್ನು ನೋಡಿ ದಂಗಾಗಿ ಹೇಗಾದರೂ ಮಾಡಿ ಇದನ್ನು ಲೂಟಿ ಹೊಡೆಯಲೇ ಬೇಕೆಂದು ನಿರ್ಧರಿಸಿ ಭಾರತೀಯರಲ್ಲಿ ಒಗ್ಗಟ್ಟಿಲ್ಲದ್ದನ್ನು ನೋಡಿ ಅದನ್ನು ಸಮರ್ಥವಾಗಿ ಬಳೆಸಿಕೊಂಡು ಇಡೀ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 18 ಮತ್ತು 19ನೇ ಶತಮಾನದಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತೆಂದರೆ.

 • ಭಾರತ ಎಂದರೆ ಅದೊಂದು ಹಾವಾಡಿಗರ ದೇಶ, ಅನಾಗರೀಕರು ಮತ್ತು ಮೂಡ ನಂಬಿಕೆ ಜನರು ಇರುವಂತಹ ದೇಶ
 • ನಾವು ಪವಿತ್ರವೆಂದು ನಂಬುವ ಮತ್ತು ಪಾಲಿಸುವ ವೇದಗಳೇ ಭಾರತದಲ್ಲ
 • ಅಸಲಿಗೆ ಭಾರತೀಯರೆಂದರೆ ಕೇವಲ ದಕ್ಷಿಣ ಭಾರತದಲ್ಲಿರುವ ದ್ರಾವಿಡರು ಮಾತ್ರ, ಉಳಿದವೆಲ್ಲರೂ ಆರ್ಯರು ಮತ್ತು ಅವರು ಮದ್ಯ ಏಷ್ಯಾದಿಂದ ಭಾರತಕ್ಕೆ ಬಂದವರು ಹಾಗಾಗಿ ಅವರೂ ಸಹಾ ಸ್ಥಳೀಯರಲ್ಲ
 • ಭಾರತವನ್ನು ಇಲ್ಲಿಯ ಜನರ ಮೈಬಣ್ಣಗಳಿಂದ ವಿಭಜಿಸಿ ಕಪ್ಪು ಮೈಬಣ್ಣದವರು ಮಾತ್ರವೇ ಇಲ್ಲಿಯ ಸ್ಥಳಿಯರು, ಗೋದಿ ಮೈ ಬಣ್ಣದವರೆಲ್ಲಾ ಪರಕೀಯರು
 • ನಮ್ಮ ಪುರಾಣ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳು ಕಾಲ್ಪನಿಕ ಕಥೆಗಳು
 • ಗುರುಕುಲ ಶಿಕ್ಷಣ ಪದ್ದತಿ ಪುರೋಹಿತಶಾಹಿ ಪದ್ದತಿಯಾಗಿದ್ದು ಅದು ಕೆಲವೇ ಕಲವರ ಸ್ವತ್ತಾಗಿ ಅವರು ಮಾತ್ರಾ ವಿದ್ಯಾವಂತರಾಗಿ ಉಳಿದವರೆಲ್ಲರನ್ನೂ ದಬ್ಬಾಳಿಕೆಯಿಂದ ತುಳಿಯುತ್ತಿದ್ದಾರೆ.
 • ಇಲ್ಲಿಯ ಶಿಲ್ಪ ಕಲೆ ಮತ್ತು ಲಲಿತ ಕಲೆಗಳೂ ಸಹಾ ಇಲ್ಲಿಯದಾಗಿರದೇ, ಮಧ್ಯ ಪ್ರಾಚ್ಯದಿಂದ ಎರವಲು ಪಡೆದದ್ದಾಗಿದೆ
 • ಭಾರತದ ಪವಿತ್ರ ನದಿಯಾದ ಸರಸ್ವತಿ ಎಂಬುದು ಕಾಲ್ಪನಿಕ ಅಂತಹ ನದಿ ಇರಲೇ ಇಲ್ಲ

ಹೀಗೆ ಹೇಳುತ್ತಾ ಹೋದಲ್ಲಿ ಪುಟಗಟ್ಟಲೆ ಬರೆಯ ಬಹುದಾದಷ್ಟು ರೀತಿಯಲ್ಲಿ ಭಾರತದ ಇತಿಹಾಸವನ್ನು ತಮ್ಮ ಅನುಕೂಲಕ್ಕೆ ಮತ್ತು ಭಾರತೀಯರು ತಮ್ಮನ್ನು ತಾವು ಅಸಹ್ಯಪಟ್ಟುಕೊಳ್ಲುವಷ್ಟರ ಮಟ್ಟಿಗೆ ಮಾರ್ಪಾಡು ಮಾಡಿ ನಮ್ಮನ್ನು ಉದ್ಧಾರ ಮಾಡಲೆಂದೇ ಬಂದಿರುವುದಾಗಿಯೂ ಅವರ ಮತಕ್ಕೆ ಪರಿವರ್ತನೆಯಾಗಿ ಇಲ್ಲವೇ ಅವರ ಶಿಕ್ಷಣ ಪದ್ದತಿಯಲ್ಲಿ ಇಂಗ್ಲೀಷ್ ಕಲಿತಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನ ಮಾನಗಳು ಲಭಿಸುತ್ತವೆ ಎಂಬ ತಪ್ಪು ಕಲ್ಪನೆಯನ್ನೇ ಮೂಡಿಸಿದ್ದವು.

ನಮ್ಮ ಹಿರಿಯರು ರೂಢಿಸಿದ್ದ ಪದ್ದತಿಗಳೆಲ್ಲವೂ ವಿಜ್ಞಾನಿಕ ನಮ್ಮಿ ಇತಿಹಾಸ ಮತ್ತು ಸಂಸ್ಕೃತಿಗಳು ಕೇವಲ ಕೆಲವಾರು ಸಾವಿರ ವರ್ಷಗಳಲ್ಲ,ಅದು ಲಕ್ಷಾಂತರ ಹಿಂದಿನದ್ದು ಎಂದು ಖಡಾಖಂಡಿತವಾಗಿ ಅಧಾರ ಸಹಿತ ಮಂಡಿಸುವಂತಹ ಯಾವುಡೇ ಸಾಕ್ಷಗಳಾಗಲಿ ಅಥವಾ ಸಾಕ್ಷಿಗಳಿದ್ದರೂ ಅದನ್ನು ಎತ್ತಿ ತೋರಿಸುವ ಮಹಾನುಭಾವರ ಕೊರೆತೆ ಎದ್ದು ಕಾಣುತ್ತಿತ್ತು. ಅಂತಹ ಸಮಯದಲ್ಲಿ ಭಾರತಕ್ಕೆ ಆಶಾಕಿರಣವಾಗಿ ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲವನ್ನು ಒಂದೊಂದಾಗಿ ಎಳೆ ಎಳೆಯಾಗಿ ದಾಖಲೆಗಳು ಮತ್ತು ಪುರಾವೆಗಳ ಮೂಲಕ ಇಡೀ ಜಗತ್ತಿಗೆ ತೋರಿಸಿ ಭಾರತದ ಹಿರಿಮೆ ಮತ್ತು ಗತಿಮೆ ತಂದು ಕೊಟ್ಟವರೇ ಶ್ರೀ ವಿಷ್ಣು ಶ್ರೀಧರ್ ವಾಕಣ್ಕರ್ ಅವರನ್ನು ಹರಿಬೌ ವಾಕಂಕರ್ ಎಂದೂ ಕರೆಯುತ್ತಾರೆ. ಆವರು ಭಾರತೀಯ ಖ್ಯಾತ ಪುರಾತತ್ವಶಾಸ್ತ್ರಜ್ಞರಾಗಿದ್ದರು ಮತ್ತು 1957 ರಲ್ಲಿ ಭಿಂಬೆಟ್ಕಾ ಬಂಡೆಯ ಗುಹೆಗಳನ್ನು ಕಂಡುಹಿಡಿದವರು. ಮುಂದೆ 1970 ರಲ್ಲಿ, ಯುನೆಸ್ಕೋ ಈ ಭೀಂಬೆಟ್ಕಾ ಶಿಲಾ ಗುಹೆಗಳನ್ನು ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ.

ಮಧ್ಯಪ್ರದೇಶದ ನೀಮಚ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ವೈದೀಕ ಕುಟುಂಬದ ಶ್ರೀಧರ ಸಿದ್ಧನಾಥ ವಾಕಣ್ಕರ್ ಮತ್ತು ಸೀತಾಬಾಯಿ ದಂಪತಿಗಳ ಎರಡನೇಯ ಮಗನಾಗಿ 4 ಮೇ 1919ರಲ್ಲಿ ಅವರ ಜನಿಸಿದರು. ಚಿಕ್ಕಂದಿನಿಂದಲೇ ಬಹಳ ಚುರುಕಾಗಿದ್ದ ವಿಷ್ಣು ಎಳೆಯ ವಯಸ್ಸಿನಲ್ಲಿಯೇ ತನ್ನನ್ನು ನೋಡಿಕೊಳ್ಳುವ ಆಯಾಳ ಮೂಲಕ ಸುಲಲಿತವಾಗಿ, ನಿರರ್ಗಳವಾಗಿ ಸ್ಥಳೀಯ ಮಾಲವೀ ಭಾಷೆಯ ಪ್ರಾವೀಣ್ಯತೆ ಪಡೆದುಕೊಳ್ಳುತ್ತಾನೆ. ಓದಿನಲ್ಲಿ ಸದಾ ಚುರುಕಾಗಿದ್ದ ಹುಡುಗ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು ತನ್ನ ಕಾಲೇಜು ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ಮೂರನೇ ವರ್ಷದ ಸಂಘಶಿಕ್ಷಾವರ್ಗವನ್ನೂ ಯಶಸ್ವಿಯಾಗಿ ಮುಗಿಸಿ ಕಲಾ ವಿಭಾಗದಲ್ಲಿ ತನ್ನ ಪದವಿಯನ್ನು ಪಡೆದುಕೊಳ್ಳುತ್ತಾರೆ. ಪದವಿ ಮುಗಿಸಿದ ನಂತರ ಕೆಲಕಲ ಸಂಘದ ಪ್ರಚಾರಕರಾಗಿ ಮಧ್ಯಪ್ರದೇಶದಲ್ಲಿಯೇ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾಗ , ಲಲಿತ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಚಾರಣ, ಹಸ್ತಪ್ರತಿಗಳ ಸಂಗ್ರಹ, ಶಾಸನಗಳ ಓದುವಿಕೆ ಹೀಗೆ ಹತ್ತು ಹಲವಾರು ವಿಷಯಗಳ ಕುರಿತಾಗಿ ಮಧ್ಯಪ್ರದೇಶಾದ್ಯಂತ ಓಡಾಡಿ ತಕ್ಕ ಪ್ರಾವೀಶ್ಯತೆಯನ್ನು ಪಡೆದುಕೊಳ್ಳುತ್ತಾರೆ. ಮುಂದೆ ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿಹೆಡಿಯನ್ನೂ ಸಹಾ ಮುಗಿಸುತ್ತಾರೆ. ಇದೇ ಸಮಯದಲ್ಲಿ ಥಾರ್ ಪ್ರದೇಶದ ಹೆಸರಾಂತ ಚಿತ್ರಕಲಾವಿದರಾದ ಫಡ್ಕೆಯವರ ಪರಿಚಯವಾಗಿ ಚಿತ್ರಕಲೆಯಲ್ಲಿಯೂ ತಮ್ಮ ಪ್ರಾವೀಣ್ಯತೆ ಪಡೆಯುತ್ತಾರೆ.

ಹೀಗೆ ಸಕಲಕಲಾ ವಲ್ಲಭರಾಗಿದ್ದ ವಾಕಣ್ಕರ್ ಅವರು 1957 ರ ಮಾರ್ಚ್ 23 ರಂದು,  ಭೋಪಾಲ್‌ನಿಂದ ನಾಗ್‌ಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಾರ್ಗದ ಮಧ್ಯದಲ್ಲಿದ್ದ ಬಹು ದೊಡ್ಡ ಬೆಟ್ಟ ಗುಡ್ಡಗಳ ಸಾಲು ಅವರ ಮನಸನ್ನು ಸೆಳೆಯುತ್ತದೆ ಹಾಗೆಯೇ ಕುತೂಹಲದಿಂದ ಈ ಪ್ರದೇಶ ಯಾವುದು ಎಂದು ಸಹ ಪ್ರಯಾಣಿಕರೊಂದಿಗೆ ವಿಚಾರಿಸಿದಾಗ ಅದು ಪ್ರಾಚೀನ ಗುಹೆಗಳ ಭೀಂಬೆಟ್ಕಾ ಬೆಟ್ಟಗುಡ್ಡಗಳು ಎಂದು ತಿಳಿಸಿ ರೈಲಿನಿಂದ ಇಳಿಯಲು ಸಿದ್ಧರಾಗುತ್ತಾರೆ. ಆಗ ಅರೇ ಮುಂದಿನ ನಿಲ್ದಾಣವಿರುವುದು ಇಲ್ಲಿಂದ ಬಹುದೂರದಲ್ಲಿರುವ ಹೋಶಂಗಾಬಾದಿನಲ್ಲೇ ಅಲ್ಲವೇ ಎಂದಾಗ, ಹೌದು ಆದರೆ ಇಲ್ಲೇ ಇರುವ ಬರಖೇಡದ ತಿರುವಿನ ಬಾರೆಯಲ್ಲಿ ರೈಲಿನ ವೇಗ ಸ್ವಲ್ಪ ಕಡಿಮೆಯಾಗುತ್ತದೆ ಆಗ ನಾವುಗಳು ಧುಮುಕುತ್ತೇವೆ ಎಂದು ಹೇಳಿದಾಗ, ಹಿಂದೂ ಮುಂದೇ ನೋಡದೇ ವಾಕಣ್ಕರ್ ಅವರೂ ಕೂಡಾ ಆ ಸಹಪ್ರಯಾಣಿಕರ ಜೊತೆ ಚಲಿಸುವ ರೈಲಿನಿಂದ ಧುಮುಕುತ್ತಾರೆ. ಹಾಗೆ ಧುಮುಕುವ ಭರದಲ್ಲಿ ಕಾಲು ಜಾರಿ ಬಿದ್ದು ಮೈಕೈ ಎಲ್ಲಾ ತರಚಿ ಗಾಯಗಾಳಾದರೂ ಅದನ್ನು ಲೆಖ್ಖಿಸದೇ ಹರಿಯುತ್ತದೆ ಅವರ ಚಿತ್ತ ಭೀಂಬೆಟ್ಕಾದತ್ತ.

ಮಧ್ಯಪ್ರದೇಶ ರಾಜಧಾನಿ ಭೂಪಾಲದಿಂದ ಕೇವಲ 28 ಕಿ.ಮೀ. ದೂರದಲ್ಲಿರುವ ಈ ಗುಹೆಗಳ ಸಾಲಿಗೆ ಶಿಲಾಯುಗದ ನಂಟಿದೆ. ಈ ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಕ್ಕೂ ಸಹ ಆ ಗುಹೆಗಳ ಜೊತೆ ಸಂಬಂಧವಿದೆ. ಹಾಗಾಗಿ ಈ ಗುಹೆಯ ಹೆಸರು ಭೀಮ್ ಬೆಟ್ಕ ! ಅಂದರೆ ಭೀಮನ ಬೆಟ್ಟಗಳು ಎಂಬುದಾಗಿದೆ. ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇದೇ ಗುಹೆಯಲ್ಲಿಯೇ ಕಳೆದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕಾರಣಕ್ಕೆ ಈ ಜಾಗಕ್ಕೆ ಭೀಮ್‌ಬೈತ್ಕಾ ಎಂಬ ಹೆಸರು ಬಂದಿದ್ದು ಎನ್ನಲಾಗಿದೆ. ಭೀಮ್‌ಬೈತ್ಕಾ ಎಂದರೆ ಭೀಮ ಕುಳಿತ ಜಾಗ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಬಂಡೆಯಲ್ಲಿ ಭೀಮ ಕುಳಿತಿದ್ದಂತಹ ಗುರುತು ಸಹಾ ಇದೆ.

ಶಿಲಾಯುಗದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಆದಿವಾಸಿ ಜನಾಂಗಳ ಆವಾಸ ಸ್ಥಾನ ಎನಿಸಿಕೊಂಡಿರುವ ಆ ಗುಹೆಗಳು ನಮ್ಮ ಪರಂಪರೆ ಹಾಗೂ ಇತಿಹಾಸದ ಪಳಯುಳಿಕೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಹಾಗಾಗಿ ಇಲ್ಲಿ ಆದಿಮಾನವರು ಇದ್ದರು ಎಂಬುದು ಸ್ಪಷ್ಟ. ಅದಕ್ಕೆ ಇಲ್ಲಿರುವ ಕುರುಹುಗಳೇ ಸಾಕ್ಷಿ. ಅದಕ್ಕೆ ಪುರಾವೆಗಳೆಂಬಂತೆ ಅಂದಿನ ಕಾಲದ ಚಿತ್ರಣವನ್ನು ವಿವರಿಸುವ ಬಣ್ಣ ಬಣ್ಣದ ಚಿತ್ರಗಳನ್ನು ಬಂಡೆಗಳ ಮೇಲೆ ಮೂಡಿಸಿದ್ದಾರೆ. ಎಷ್ಟೋ ಸಹಸ್ರ ವರ್ಷಗಳ ಹಿಂದೆ ಬಿಡಿಸಿದ ಬಣ್ಣದ ಚಿತ್ರಗಳು ಇಂದಿಗೂ ಮಾಸಿಲ್ಲವೆಂದರೆ ಅವರಿಗೆ ಬಣ್ಣಗಳ ರಾಸಾಯನಿಕ ಮಿಶ್ರಣ ಸಂಪೂರ್ಣ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಬಣ್ಣಗಳನ್ನು Carbon dating (ಸಾವಯವ ವಸ್ತುಗಳ ವಯಸ್ಸು ಅಥವಾ ದಿನಾಂಕವನ್ನು ನಿರ್ಧರಿಸುವುದು) ವಿಧಾನದ ಮೂಲಕ ಪರೀಕ್ಷೆ ಮಾಡಿದಾಗ ಈ ಬಣ್ಣಗಳ ಕಾಲಮಾನ ಹತ್ತು ಸಾವಿರಕ್ಕೂ ಅಧಿಕ ವರ್ಷವೆಂದೇ ಗೊತ್ತಾಗಿದೆ. .

ಶಿಲಾಯುಗದ ಕಥೆ ಹೇಳುವ ಇಲ್ಲಿ ಭಿತ್ತಿ ಚಿತ್ರಗಳಿಗೆ ಸುಮಾರು 8000 ವರ್ಷಗಳಾಗಿವೆ ಎಂದು ಅಂದಾಜಿಸಲಾಗಿದೆ. ಪ್ರಾಣಿಗಳನ್ನ ಬೇಟೆ ಆಡುತ್ತಿರೋ ಮನುಷ್ಯರು, ವಿಚಿತ್ರವಾದ ಆಕಾರದ ನಿಗೂಢ ಜೀವಿಗಳು, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು, ನೃತ್ಯ ಮಾಡುತ್ತಿರುವ ನರ್ತಕಿಯರು, ಸಂಗೀತದ ಚಿಹ್ನೆಗಳು, ಹಲ್ಲಿ, ಆನೆ, ಸಿಂಹ, ಹುಲಿ, ಜಿಂಕೆ, ಹಸು, ಮೊಸಳೆ ಹೀಗೆ ಇಲ್ಲಿನ ಬಂಡೆಗಳಲ್ಲಿ ಚಿತ್ರಿಸಲ್ಪಟ್ಟಿರುವ ಭಿತ್ತಿಚಿತ್ರಗಳು ಶಿಲಾಯುಗದಲ್ಲಿ ಬಾಳಿ ಹೋದ ಮಾನವರ ಕಥೆಗಳನ್ನು ನಮ್ಮ ಕಣ್ಣ ಮುಂದೆ ತರುತ್ತವೆ. ಕೆಲವು ಇತಿಹಾಸಕಾರರ ಪ್ರಕಾರ ಭೀಂಬೇಟ್ಕ ಗುಹೆಗಳಲ್ಲಿರುವ ವರ್ಣಚಿತ್ರಗಳಿಗೆ ಸುಮಾರು 30 ಸಾವಿರ ವರ್ಷಗಳಾಗಿವೆಯಂತೆ. ಇಷ್ಟೆಲ್ಲ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರೋ ಭೀಮನ ಗುಹೆಗಳನ್ನು ಪ್ರಪ್ರಥಮಬಾರಿಗೆ ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರಿ ವಿಷ್ಣು ವಾಕಣ್ಕರ್ ಆವರಿಗೆ ಸಲ್ಲುತ್ತದೆ. ಈ ಮೂಲಕ ಭಾರತದ ಇತಿಹಾಸ ಸಂಸ್ಕೃತಿ ಮತ್ತು ಪಳಿಯುಳಿಕೆಗಳು ಕೇವಲ ಕೆಲವೇ ಸಾವಿರವರ್ಷಗಳ ಹಳೆಯದಾಗಿರದೇ ಇದನ್ನು ಸರಿಯಾಗಿ ವಿಶ್ಲೇಷಿಸಿ ಇಲ್ಲಿನ ಗುಹೆಗಳಿಗೆ ಬರೋಬರಿ 1 ಲಕ್ಷ ವರ್ಷಗಳಾಗಿವೆ ಎಂಬ ಅಚ್ಚರಿಯ ಮಾಹಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟರು. ಭಾರತೀಯ ನಾಗರೀಕತೆ ಇಷ್ಟೋಂದು ಹಳೆಯದ್ದು ಎಂದು ತಿಳಿದ ಮೇಲೆ ಇಡೀ ಜಗತ್ತೇ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿ ತೋರಿಸಿದರು ಶ್ರೀ ವಾಕಣ್ಕರ್. ಇದಕ್ಕೂ ಮೊದಲು 1888 ರಲ್ಲಿ, ಶ್ರೀ ಕಿಂಕ್ಡ್; ಎಂಬ ಬ್ರಿಟಿಷ್ ಸರ್ವೇಯರ್ ಇಲ್ಲೊಂದು ಚಿತ್ರಗಳುಳ್ಳ ಬಂಡೆಗಳಿವೆ ಎಂಬ ಮಾಹಿತಿಯನ್ನು ದಾಖಲಿಸಿದ್ದರೇ ಹೊರತು ಈ ಪರಿಯಾದ ಆಧ್ಯಯನ ಮಾಡಿರಲಿಲ್ಲ. ಹಾಗಾಗಿ 1970 ರಲ್ಲಿ ಯುನೆಸ್ಕೋ ಭೀಂಬೆಟಕ ಗುಹೆಗಳನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು ಮತ್ತು ವಾಕಣ್ಕರ್ ಅವರನ್ನು ಶೈಲಾ ಪಿತಾಮಹ ಎಂದು ಬಣ್ಣಿಸಿತು. ಅಂದಿನಿಂದ ಈ ಪ್ರದೇಶ ವಿಶ್ವದ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿ ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಇದು ಸ್ಥಾನ ಪಡೆದುಕೊಂಡಿದೆ.

wak2ಈ ಸಾಧನೆ ಕೇವಲ ಒಂದೆರಡು ವರ್ಷದ್ದಲ್ಲ. ಇದರ ಸಮಗ್ರ ಅಧ್ಯಯನಕ್ಕಾಗಿ ಆವರು ಸತತವಾಗಿ ಸುಮಾರು 17 ವರ್ಷಗಳ ಕಾಲ ಆ ಪ್ರದೇಶದಲ್ಲಿ ಒಬ್ಬಂಟಿಯಾಗಿ ಅಲೆದು ಎಲ್ಲಾ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಗೆಡ್ಡೆ ಗೆಣೆಸುಗಳೇ ಅಕ್ಷರಶಃ ಅವರ ಅಹಾರ. ಆಗಸದ ಅಡಿಯಲ್ಲಿ ನಕ್ಷತ್ರಗಳನ್ನು ಎಣಿಸುತ್ತಲ್ಲೇ ಅವರ ನಿದ್ದೆ. ರಾತ್ರಿಯ ಹೊತ್ತು ನೆಲವನ್ನು ಸ್ವಲ್ಪ ಅಗೆದು ಅದರೊಳಗೆ ಆಲೂಗೆದ್ಡೆ ಮತ್ತಿತರ ಗೆಡ್ಡೇ ಗೆಣಸುಗಳನ್ನು ಹೂತಿಟ್ತು ಅದರೆ ಮೇಲೆ ಬೆಂಕಿ ಹಚ್ಚಿಡುತ್ತಿದ್ದರು. ರಾತ್ರಿ ಇಡೀ ಉರಿಯುತ್ತಿರುವ ಬೆಂಕಿ ಕಾಡು ಪ್ರಾಣಿಗಳಿಂದ ರಕ್ಷಿಸುತ್ತಿದ್ದಲ್ಲದೇ, ಅದರ ಶಾಖಕ್ಕೆ ಅದರಡಿಯಲ್ಲಿ ಹೂತಿಟ್ಟಿದ್ದ ಗೆಡ್ಡೆಗಳು ಬೇಯುತ್ತಿದ್ದವು. ಬೆಳಗಿನ ಹೊತ್ತು ಅಲ್ಲಿಯೇ ಹರಿಯುತ್ತಿದ್ದ ಝರಿಗಳಲ್ಲಿ ಸ್ನಾನ ಇದೇ ಆಹಾರ ಹೀಗಿತ್ತು ಅವರ ಜೀವನ.

ಇದಾದ ನಂತರ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಿರುವಂತಹ ಸರಸ್ವತಿ ನದಿಯ ಪಾತ್ರವನ್ನು ಕಂಡುಹಿಡಿಯುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಪುರಾಣ ಕಾಲದಲ್ಲಿ ಸರಸ್ವತಿ ನದಿ ಸಿಹಿನೀರಿನ ಪ್ರಮುಖ ಮೂಲವಾಗಿತ್ತು ಎಂದರೆ ಅಂದಿನ ಕಾಲದ ಬ್ರಿಟಿಷ್ ಮತ್ತು ಕಮ್ಯೂನಿಷ್ಟ್ ಇತಿಹಾಸಕಾರರು ಸರಸ್ವತಿ ನದಿಯ ಹಿಂದಿನ ಅಸ್ತಿತ್ವವನ್ನೇ ನಿರಾಕರಿಸಿ ಅದೊಂದು ಕಾಲ್ಕನಿಕ ಕಟ್ಟು ಕಥೆಗಳ ಪುರಾಣ ಜರಿದಿದ್ದರು.

ಛಲಬಿಡದ ತ್ರಿವಿಕ್ರಮನಂತೆ ವಾಕಣ್ಕರ್ ಆಮೂಲಾಗ್ರವಾಗಿ ನಮ್ಮ ಹಿಂದೂ ಧರ್ಮದ ಪುರಾಣಗಳನ್ನು ಓದಿ ಅನೇಕ ವಿಷಯಗಳನ್ನು ಸಂಗ್ರಹಿಸಿಕೊಂಡು 1983 ರಲ್ಲಿ, ಆರ್ಎಸ್ಎಸ್ ನ ಅನುಭವಿ ಮೊರೊಪಂತ್ ಪಿಂಗಲೆ ಮತ್ತು ಇತರೇ 18 ಸದಸ್ಯರ ತಂಡದೊಂದಿಗೆ ಸರಸ್ವತಿ ನದಿಯ ಹುಡುಕಾಟದ ಅಭಿಯಾನವನ್ನು ವಾಯುವ್ಯ ಭಾರತದ ರಾಜ್ಯಗಳಲ್ಲಿ (ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್) ಆರಂಭಿಸಿದರು.

ಸರಸ್ವತಿಯ ಹರಿವು ವಾಯುವ್ಯ ಭಾರತದಲ್ಲೇ ಅತಿ ದೊಡ್ದದ್ದಾಗಿತ್ತು ಮತ್ತು ಸಿಂಧೂ ಕಣಿವೆಯ ನಾಗರಿಕತೆಯು ಸರಸ್ವತಿಯ ಮೇಲೆ ಅವಲಂಬಿತವಾಗಿದೆ ಎಂದು ಕಂಡು ಕೊಂಡರು.ಸುಮಾರು 3500 ವರ್ಷದ ಹಿಂದೆ ಸರಸ್ವತಿ ನದಿ ರಭಸವಾಗಿ ಹರಿಯುತ್ತಿತ್ತು. ಅದರ ಅಗಲವೇ 20 ಕಿ.ಮೀ.ಗಳಷ್ಟಿತ್ತು. ಆಗ ಸಂಭವಿಸಿದ ಪ್ರಬಲ ಭೂಕಂಪದಿಂದ ನದಿಯ ಅರ್ಧಭಾಗ ಮುಚ್ಚಿ ಆಗ್ನೇಯ ಭಾಗಕ್ಕೆ ಹರಿಯ ತೊಡಗಿ ಅದು ಗಂಗೆ ಮತ್ತು ಯಮುನಾ ನದಿಗಳ ಭಾಗವಾಯಿತು ಮತ್ತು 2ನೇ ಸಲ ಭೂಕಂಪ ಸಂಭವಿಸಿದಾಗ ಇನ್ನುಳಿದ ಭಾಗ ಮುಚ್ಚಿಹೋಯಿತು ಎಂಬುದನ್ನು ಎತ್ತಿ ತೋರಿಸಿ ಸರಸ್ವತಿ ನದಿಯ ಅಸ್ತಿತ್ವವನ್ನು ಜಗತ್ತಿಗೆ ಸಾರಿ ಹೇಳಿದರು.

ಇನ್ನು ಮಧ್ಯ ಏಷ್ಯದಿಂದ ಆರ್ಯರು ಆಕ್ರಮಣಕಾರರಾಗಿ ಭಾರತಕ್ಕೆ ಬಂದರು ಎಂದು ಅಂದಿನ ಕಾಲದ ಇತಿಹಾಸಕಾರರು ಬಣ್ಣಿಸಿದರೆ,
ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಒಂದು ರಾಖಿಗಾರ್ಹಿ ಎಂಬ ಹಳ್ಳಿಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಡಿಎನ್‌ಎ ಅಧ್ಯಯನವು ಸ್ಪಷ್ಟವಾಗಿ ಇದು ಸಿಂಧೂ ನದಿಯ ನಾಗರೀಕತೆಯಲ್ಲಿದ್ದ ಹರಪ್ಪಾ ಮತ್ತು ಮಹೆಂಜದರೋ ನೊಂದಿಗೆ ಸರಿಹೊಂದುವ ಕಾರಣ ಅವರು ಸ್ಥಳೀಯರು ಮತ್ತು ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದರು ಎನ್ನುವ ಇತಿಹಾಸವೇ ತಪ್ಪು ಎಂಬುದನ್ನು ತೋರಿಸಿಕೊಟ್ಟರು ಶ್ರೀ ವಿಷ್ಣು ವಾಕಣ್ಕರ್.

ಹೀಗೆ ಭಾರತೀಯರಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ಬರೆಯುವುದೂ ಸಹ ಗೊತ್ತಿಲ್ಲ ಎಂದು ಎಂದು ಮೂದಲಿಸುತ್ತಿದ್ದ ವಿದೇಶಿಗರಿಗೆ ಅವರು ಹೇಳುತ್ತಿರುವ ಇತಿಹಾಸವೇ ಸುಳ್ಳು. ಇತಿಹಾಸಕ್ಕೆ ಅರ್ಥ ಹಾಗೂ ವಿವರಣೆ ಕೊಟ್ಟವರೇ ಭಾರತೀಯರು. ಪ್ರತಿಯೊಂದು ವಂಶವೃಕ್ಷದ ಬಗ್ಗೆ ಬರೆಯುವುದು ಭಾರತೀಯರಿಗೆ ಗೊತ್ತಿತ್ತು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಶ್ರೀ ವಿಷ್ಣು ವಾಕಣ್ಕರ್.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ 1975 ರಲ್ಲಿದ್ದ ಶ್ರೀಮತಿ ಇಂದಿರಾ ಗಾಂಧಿಯವರ ಕಾಂಗ್ರೇಸ್ ಸರ್ಕಾರ ಶ್ರೀ ವಿಷ್ಣು ವಾಕಣ್ಕರ್ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲು ಮುಂದಾಯಿತು. ಪ್ರಶಸ್ಥಿ ಪ್ರಧಾನ ಸಮಾರಂಭದಕ್ಕೆ ಆರ್.ಎಸ್.ಎಸ್ ಗಣವೇಶದ ಕರೀ ಟೋಪಿಯನ್ನು ಧರಿಸಿ ಹೋಗಿದ್ದ ವಾಕಣ್ಕರ್ ಅವರನ್ನು ಅಲ್ಲಿಯ ಅಧಿಕಾರಿಗಳು ಆ ಟೋಪಿಯನ್ನು ತೆಗೆಯಲು ಸೂಚಿಸಿದರು. ಆದರೆ ತಮ್ಮೆಲ್ಲಾ ಈ ಸಾಧನೆಗಳಿಗೆ ಮೂಲ ಪ್ರೇರಣೆಯೇ ಸಂಘ. ಹಾಗಾಗಿ ಒಬ್ಬ ಸಂಘದ ಸ್ವಯಂಸೇವಕನಾಗಿ ಈ ಟೋಪಿ ನನ್ನ ಉಡುಗೆಯ ಭಾಗವಾಗಿದೆ. ಈ ಟೋಪಿಯಿಂದಾಗಿ ನನಗೆ ಪ್ರಶಸ್ತಿ ಕೊಡಲು ಸಾಧ್ಯವಿಲ್ಲವೆಂದಲ್ಲಿ ಅಂತಹ ಪ್ರಶಸ್ತಿಯೇ ಬೇಡ ಎಂದು ಸಮಾರಂಭದಿಂದ ಹೊರನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ ಎಂಬುದನ್ನು ಅರಿತ ಅಧಿಕಾರಿಗಳು ಸಂಘದ ಟೋಪಿಯೊಂದಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ವಾಕಣ್ಕರ್ ಅವರ ಸಂಶೋದನೆ ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗಿರದೇ ಅಮೇರಿಕಾ, ರಷ್ಯಾ ಸ್ಪೇನ್, ಇಟಲಿ, ಇಂಗ್ಲೇಂಡ್ , ಸಿಂಗಾಪುರ್ ಮುಂತಾದ ದೇಶಗಳಿಗೆ ಹೋಗಿ ಅಲ್ಲಿ ಹಲವಾರು ಉಪನ್ಯಾಸಗಳನ್ನು ಮಾಡಿದ್ದಲ್ಲದೇ ಅಲ್ಲಿ ಕೆಲವೊಂದು ಕಡೆ ಉತ್ಕತನ ನಡೆಸಿ ಅಲ್ಲಿ ಸಿಕ್ಕಿದ ಕನ್ನಡಿಯ ಚೌಕಟ್ಟು ಮತ್ತು ಅದರಲ್ಲಿದ್ದ ಲಕ್ಷಿಯ ವಿಗ್ರಹವನ್ನು ತೋರಿಸಿ ಅಂದಿನ ಕಾಲದಲ್ಲಿಯೇ ಭಾರತ ಮತ್ತು ರೋಮ್ ನಡುವೆ ವ್ಯಾಪಾರ ವಹಿವಾಟುಗಳು ನದೆಯುತ್ತಿತ್ತು ವಾಸ್ಕೋಡಿಗಾಮಾ ಭಾರಕ್ಕೆ ಬಂದ ಮೊದಲ ವ್ಯಾಪಾರಿ ಎಂಬುದು ಸತ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದರು.

1984 ರಲ್ಲಿ ದಕ್ಷಿಣ ಅಮೇರಿಕಾ ಪ್ರವಾಸ ಮಾಡಿ ಅಲ್ಲಿಯ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಆಚಾರ ಪದ್ದತಿಗಳಿಗೂ ನಮ್ಮ ಸನಾತನ ಹಿಂದೂ ಪದ್ದತಿಗಳಿಗೂ ಅನೇಕ ಸಾಮ್ಯತೆಗಳನ್ನು ತೋರಿಸಿಕೊಟ್ಟರು ನಾವು ಹೋಮ ಮಾಡುವಾಗ ಸ್ವಾಹಾ ಎಂದರೆ ಅವರು ಮಾಡುವ ಹೋಮದಲ್ಲಿ ಹವಾಹ ಎಂಬುದಾಗಿದೆ. ಸ್ವಾಹಾ ಎಂಬುದೇ ಅಪಭ್ರಂಷವಾಗಿ ಹವಾಹ ಆಗಿದೆ ಎಂದು ಹೇಳಿದಾಗ ಯಾರೂ ಸಹಾ ಅಲ್ಲಗಳಿಯಲಾಗಲಿಲ್ಲ. ಇಷ್ಟೇಲ್ಲಾ ತಿರುಗಾಟಗಳಿಂದಾಗಿ ಜರ್ಜರಿತವಾಗಿದ್ದ ಅವರ ದೇಹಕ್ಕೆ ಪಾರ್ಶ್ವವಾಯು ಬಡಿಯಿತು. ಆದರೆ ಚೈತ್ಯನದ ಚಿಲುಮೆ ಮತ್ತು ಧೃಢ ಸಂಕಲ್ಪದವರಾದ ವಾಕಣ್ಕರ್ ಬಹುಬೇಗನೆ ಚೇತರಿಸಿಕೊಂಡು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು.

ಕಡೆಯದಾಗಿ ಅವರು ಪ್ರಪಂಚದ ಕಾಲಘಟ್ಟವನ್ನು ನಿರ್ಧರಿಸಲು ಅಕ್ಷಾಂಶ ಮತ್ತು ರೇಖಾಂಶಗಳ ಆಧಾರವಾಗಿ ಪ್ರಪಂವದ ಮಧ್ಯ ಭಾಗ ಎಂದು ಗ್ರೀನಿಜ್ ಟೈಮ್ ಅಳವಡಿಸಿಕೊಂಡಿದೆ. ಆದರೆ ನಿಜವಾಗಿಯೂ ಭಾರತದ ಉಜ್ಜೈನಿಯೇ ಕಾಲಗಣನೆಯ ಪ್ರಖಾರ ಶೂನ್ಯ ರೇಖಾಂಶ ಸ್ಥಾನ ಎಂಬುದನ್ನು ಲೆಖ್ಖಾಚಾರ ಮತ್ತು ಭಾರತೀಯ ಪುರಾಣಗಳ ಮೂಲಕ ಸ್ಪಷ್ಟವಾಗಿ ನಿರೂಪಿಸಿದರು.

ಭಾರತೀಯರಲ್ಲಿಯೇ, ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದನ್ನು ಮನಗಂಡು ಲಲಿತ ಕಲಾ ಕ್ಷೇತ್ರದಲ್ಲಿ ಭಾರತೀಯರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತಾಗ ಬೇಕು ಎಂದು ನಿರ್ಧರಿಸಿ 1981ರಲ್ಲಿ ಸಂಘ ಪರಿವಾರದ ಲಲಿತಕಲೆಯ ಅಂಗವಾಗಿ ಸಂಸ್ಕಾರ ಭಾರತೀ ಆರಂಭವಾದಾಗ ಶ್ರೀ ವಿಷ್ಣು ವಾಕಣ್ಕರ್ ಅವರೂ ಸಹಾ ಅದರ ಸಂಸ್ಥಾಕರಲ್ಲಿ ಒಬ್ಬರಾಗಿದ್ದರು.

wak31988ರಲ್ಲಿ ಸಿಂಗಾಪುರಕ್ಕೆ ಉಪನ್ಯಾಸ ಮಾಡಲು ಹೋಗಿದ್ದಾಗ ಏಪ್ರಿಲ್3 ರಂದು ಅಲ್ಲಿ ಪೆಸಿಫಿಕ್ ಹೋಟೆಲ್ ಒಂದರಲ್ಲಿ ತಮ್ಮ ನೆಚ್ಚಿನ ತೈಲ ಚಿತ್ರವನ್ನು ಬಿಡಿಸುತ್ತಿದ್ದಾಗಲೇ ಸ್ವರ್ಗಸ್ಥರಾದರು. ಇಂದು ಮೇ 4, 2020, ಇಂದಿಗೆ ಸರಿಯಾಗಿ 4 ಮೇ 1919ರಲ್ಲಿ ಜನಿಸಿದ ವಾಕಣ್ಕರ್ ಅವರಿಗೆ 100 ಪೂರ್ಣವಾಗುತ್ತದೆ. ಕಳೆದ ವರ್ಷವಿಡೀ ಸಂಸ್ಕಾರ ಭಾರತಿ ಆಶ್ರಯದಲ್ಲಿ ದೇಶಾದ್ಯಂತ ಶ್ರೀ ವಿಷ್ಣು ಶ್ರಿಧರ ವಾಕಣ್ಕರ್ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಸಾಧನೆಗಳನ್ನು ಕೋಟ್ಯಾಂತರ ಜನರಿಗೆ ಪರಿಚಯಿಸಿದ್ದಾರೆ. ಶ್ರೀ ವಿಷ್ಣು ಶ್ರೀಧರ ವಾಕಣ್ಕರ್ ತಮ್ಮ ಕಾರ್ಯ ಸಾಧನೆಗಳ ಮೂಲಕ ಭಾರತೀಯರು ಎಂದರೆ ಸಾಮಾನ್ಯರಲ್ಲ. ನಾವು ಅಸಮಾನ್ಯರು. ಇಡೀ ಪ್ರಪಂಚಕ್ಕೇ ನಾಗರೀಕತೆಯನ್ನು ಪರಿಚಯಿಸಿದ ವಿಶ್ವಗುರುವೇ ಹೌದು ಎಂಬುದನ್ನು ಎತ್ತಿ ಸಾರುವ ಮೂಲಕ ಪ್ರತಿಯೊಬ್ಬ ಭಾರತೀಯರೂ ಪ್ರತಿ ದಿನವೂ ನೆನೆಸಿಕೊಳ್ಳುವಂತಹ ಪ್ರಾತಃ ಸ್ಮರಣೀಯರಾಗಿದ್ದಾರೆ.

ಹಿಂದೂ ಧರ್ಮ ಆಧ್ಯಾತ್ಮಿಕ ಅಂಶಗಳನ್ನು ಜಗತ್ತಿಗೆ ಪರಿಚಯಿಸುವ ಮುಖಾಂತರ ಭಾರತವದ ಕೀರ್ತಿಪತಾಕೆಯನ್ನು ವಿದೇಶದಗಳಲ್ಲಿ ಸ್ವಾಮಿ ವಿವೇಕಾನಂದರು ಹಾರಿಸಿದರೆ, ತಮ್ಮ ಪುರಾತತ್ತ್ವ ಸಂಶೋಧನೆಗಳ ಮುಖಾಂತರ ಭಾರತದ ಗರಿಮೆಯನ್ನು ಜಗತ್ತಿಗೇ ತೋರಿಸಿದ ದಿಗ್ಗಜರು ಶ್ರೀ ವಾಕಣ್ಕರ್ ಎಂದರೆ ಅತಿಶಯೋಕ್ತಿಯಲ್ಲ

 

ಏನಂತೀರೀ?

ಈ ಲೇಖನ ಬರೆಯಲು ಥಟ್ ಅಂತ ಹೇಳಿ ಖ್ಯಾತಿಯ ಶ್ರೀ ನಾ ಸೋಮೇಶ್ವರ್ ಅವರ ವಿದ್ಯಾರಣ್ಯಪುರದಲ್ಲಿ ಮಾಡಿದ ಮಂಥನ ಕಾರ್ಯಕ್ರಮ ಮತ್ತು ಸಂಸ್ಕಾರ ಭಾರತಿಯ ಶ್ರೀ ಜಯಸಿಂಹ ಅವರು ನೀಡಿದ ಕೆಲವು ವಿಷಯಗಳು ಸಹಕಾರಿಯಾದವು. ಈ ಇಬ್ಬರು ಮಹನೀಯರಿಗೆ ತುಂಬು ಹೃದಯದ ಧನ್ಯವಾದಗಳು.

ಫೋಟೋಗಳನ್ನು ಅಂತರ್ಜಾಲದಿಂದ ನಕಲು ಮಾಡಲಾಗಿದೆ.

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ ಡಾ. ಅಣ್ಣಾಜಪ್ಪನವರ ಮೊಮ್ಮಗ ಮತ್ತು ಇಂದಿನ ಅರಮನೆಯ ಕೂಗಳತೆಯ ದೂರದಲ್ಲಿ ರಾಜರ ಕೃಪಾಶೀರ್ವಾದದಿಂದಲೇ ಪಡೆದಂತಹ ಮನೆಯಲ್ಲಿ ಜನಿಸಿ, ಇಂದಿಗೂ ಅಲ್ಲಿಯೇ ಅವರ ಕುಟುಂಬಸ್ತರು ವಾಸವಾಗಿರುವ ಮತ್ತು ಅರಮನೆಯ ಮುಂಭಾಗದಲ್ಲಿಯೇ ಕಣ್ಣಾ ಮುಚ್ಚಾಲೆ, ಲಗೋರಿ, ಕ್ರಿಕೆಟ್ ಆಟವಾಡಿರುವ ಮತ್ತು ಇಂದಿಗೂ ಮೈಸೂರು ಒಡೆಯರ್ ಮತ್ತು ದಿವಾನರುಗಳ ಕುಟುಂಬದೊಡನೆ ಅತ್ಯಂತ ಪ್ರೀತಿಪಾತ್ರವಾದ ಒಡನಾಟ ಇಟ್ಟುಕೊಂಡಿರುವ, ಅರಮನೆಯ ಬಗ್ಗೆ ಇಂಚಿಂಚಿನ ವಿವರದ ಜೊತೆಗೆ ಮೈಸೂರಿನ ಇತಿಹಾಸದ ಬಗ್ಗೆ ಅಧಿಕಾರಯುತವಾಗಿ ವಿಷಯ ಮಂಡನೆ ಮಾಡಬಲ್ಲ ಶ್ರೀಯುತ ಧರ್ಮೇಂದ್ರ ಕುಮಾರ್ ಅವರ ವರ್ಣನೆಯಲ್ಲಿ ಮೈಸೂರಿನ ಇತಿಹಾಸ ಮತ್ತು ಮಹಾರಾಜರ ಕೊಡುಗೆಗಳನ್ನು ಕೇಳುವುದು ನಿಜಕ್ಕೂ ಆನಂದವೇ ಸರಿ. ಪ್ರತಿಯೊಂದು ವಿಷಯವನ್ನು ಸರಿಯಾದ ಕಾಲಘಟ್ಟದೊಡನೆ ಹೇಳುತ್ತಿದ್ದರೆ, ನಮಗೇ ಅರಿವಿಲ್ಲದಂತೆಯೇ ನಾವುಗಳೇ ಆ ಕಾಲಘಟ್ಟದಲ್ಲಿ ಇದ್ದೇವೆಯೋ ಏನೋ? ನಮ್ಮ ಕಣ್ಣ ಮುಂದೆಯೇ ಯುದ್ದ ನಡೆಯುತ್ತಿದೆಯೇನೋ? ಇಲ್ಲವೇ ನಾವೇ ಅರಮನೆಯ ದರ್ಬಾರ್ ಹಾಲಿನಲ್ಲಿ ಸಂಗೀತವನ್ನು ಕೇಳುತ್ತಿದ್ದೇವೆಯೋ ಏನೋ? ಮೈಸೂರಿನ ಮರದ ಅರಮನೆ ನಮ್ಮ ಕಣ್ಣ ಮಂದೆಯೇ ಸುಟ್ಟು ಭಸ್ಮವಾಯಿತೇನೋ? ಎನ್ನುವಂತೆ ಕ್ರಿ.ಶ. 1400-1947ರ ವರೆಗೂ ಸರಿ ಸುಮಾರು 550 ವರ್ಷಗಳ ಇತಿಹಾಸದಲ್ಲಿ ನಾವುಗಳೇ ಭಾಗಿಗಳಾಗಿದ್ದೆವೇನೋ ಅಥವಾ ನಮ್ಮ ಕಣ್ಣ ಮುಂದೆಯೇ ನಡೆಯಿತೇನೋ ಎನ್ನುವಂತಾಯಿತು ಎಂದರೆ ಅತಿಶಯೋಕ್ತಿಯೇನಲ್ಲ.

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ಟಿದರು ಅಲ್ಲಿಂದ ಆಳಿದ ಸುಮಾರು 7 ರಾಜರುಗಳು ಅದನ್ನೇ ಮುಂದುವರಿಸಿಕೊಂಡು ಹೋದರು. 1529ರಲ್ಲಿ ಶ್ರೀ ಕೃಷ್ಣದೇವರಾಯರ ಕಾಲಾವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದು ವಿಜಯನಗರದಿಂದ ಮೈಸೂರಿಗೆ ತರುತ್ತಾರೆ. ಮುಂದೆ 1610 ರಲ್ಲಿ ಆಳ್ವಿಕೆಯಲ್ಲಿದ್ದ ಒಡೆಯರ್ ಅವರು ಮತ್ತೆ 30 ಗ್ರಾಮಗಳನ್ನು ಗೆದ್ದು ಮೈಸೂರು ಸಂಸ್ಥಾನವನ್ನು 60 ಗ್ರಾಮಗಳ ವರೆಗೆ ವಿಸ್ತರಿಸಿದ್ದರು. ಆಗ ಮೈಸೂರು ಎಂದರೆ ಈಗಿನ ಅರಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವಾಗಿದ್ದು ಉಳಿದ ಕನ್ನೇಗೌಡನ ಕೊಪ್ಪಲು, ಒಂಟೀಕೊಪ್ಪಲು ಮುಂತಾದ ಊರುಗಳಿಂದ ಸುತ್ತುವರಿದಿತ್ತು. ವಿಜಯನಗರಲ್ಲಿ ಬನ್ನಿ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಹಬ್ಬ 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ಆಚರಣೆಗೆ ಈ ಕಾಲದಲ್ಲಿಯೇ ರೂಢಿಗೆ ಬಂದಿತು.

ಶ್ರೀ ರಣಧೀರ ಕಂಠೀರವ ಅವರ ಆಳ್ಚಿಕೆಯಲ್ಲಿ ರಾಜ ಮನೆತನ ಮತ್ತಷ್ಟೂ ಪ್ರಾಭಲ್ಯಕ್ಕೆ ಬಂದು. ಸ್ವತಃ ಅಜಾನುಬಾಹು ಮತ್ತು ಶೂರರಾಗಿದ್ದ ಮತ್ತು ಜಟ್ಟಿಯಾಗಿದ್ದ ರಣಧೀರ ಕಂಠೀರವ ಅವರು ಆಗಿನ ಕಾಲದಲ್ಲಿಯೇ ತಿರುಚನಾಪಳ್ಳಿಯ ಜಟ್ಟಿಯವರು ಕಟ್ಟಿದ್ದ ಚೆಲ್ಲವನ್ನು ಕಿತ್ತೊಗೆದು ಅವರನ್ನು ಸೋಲಿಸಿ ಬಂದಿದ್ದವರು. ಅವರನ್ನು ಮೋಸದಿಂದ ಸಾಯಿಸಲು ದೊಡ್ಡಮ್ಮಣ್ಣಿ ಎಂಬ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ಬಂದಿದ್ದ ಸುಮಾರು 26ಕ್ಕೂ ಅಧಿಕ ಜಟ್ಟಿಗಳನ್ನು ತಮ್ಮ ವಿಜಯನಾರಸಿಂಹ ಎಂಬ ಬಾಕುವಿನಿಂದ ಇರಿದು ಕೊಂದು ದೊಡ್ಡಮ್ಮಣ್ಣಿಯವರನ್ನು ವಿದ್ಯುಕ್ತವಾಗಿ ಮದುವೆಯಾಗಿ ಆಕೆಯ ಹೆಸರಿನಲ್ಲಿಯೇ, ಬಂಗಾರದ ದೊಡ್ಡಿ ನಾಲೆಯನ್ನು ಕಟ್ಟಿ ಕಾವೇರೀ ನದಿಯ ನೀರನ್ನು ತಮ್ಮ ಪ್ರಾಂತದ ರೈತರ ಅಗತ್ಯಗಳಿಗೆ ಪೂರೈಸುತ್ತಾರೆ.

ಅಲ್ಲಿಂದ ಸುಮಾರು ನೂರೈವತ್ತು ವರ್ಷಗಳ ಕಾಲ ಹಾಗೂ ಹೀಗೂ ಆಳ್ವಿಕೆ ನಡೆಸಿದ ನಂತರ ಆಳ್ವಿಕೆ ಬಂದ ದೊಡ್ಡ ದೇವರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟದಲ್ಲಿ ಶ್ರೀ ಯದುರಾಯರು ಕಟ್ಟಿಸಿದ್ದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನಕ್ಕೆ, ಜನಸಾಮಾನ್ಯರು ದರ್ಶನ ಪಡೆಯಲು ಸುಲಭವಾಗುವಂತೆ ಮೆಟ್ಟಿಲುಗಳನ್ನು ಕಟ್ಟಿಸಿ ಮಾರ್ಗದ ಮಧ್ಯದಲ್ಲಿ ದೊಡ್ಡದಾದ ಏಕಶಿಲಾ ನಂದಿಯನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಯವರೆಗೂ ನರಬಲಿ ಮತ್ತು ಪ್ರಾಣಿಬಲಿಗಳನ್ನು ಕೊಡುತ್ತಿದ್ದ ಕಾಪಾಲಿಕರನ್ನು 1760ರಲ್ಲಿ ಬಲಿಹಾಕಿ, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಬಲಿಗಳನ್ನು ನಿಷೇಧಿಸಿ ಅದನ್ನು ಅಲ್ಲೇ ಸ್ವಲ್ಪ ದೂರದ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಸ್ಥಳಾಂತರಿಸುತ್ತಾರೆ.

ಇದಾದ ನಂತರ ಆಳ್ವಿಕೆಗೆ ಬಂದ ಚಿಕ್ಕ ದೇವರಾಜ ಒಡೆಯರು ಅತ್ಯಂತ ಧೈರ್ಯವಂತ ಮತ್ತು ಬಲಶಾಲಿಯಾದ ರಾಜರಾಗಿದ್ದರು. ಅವರ ಆಡಳಿತ ಕಾಲದಲ್ಲಿ ಸುಮಾರು 40ಕ್ಕೂ ಅಧಿಕ ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. 1674-1704ರ ವರೆಗೆ ದೆಹಲಿಯನ್ನು ಆಳ್ವಿಕೆ ನಡೆಸಿದ ಔರಂಗಜೇಬ್ ನಡೆಸುತ್ತಿದ್ದ ಅದೊಮ್ಮೆ ಮೈಸೂರಿನ ಸೈನಿಕರು ತಂಜಾವೂರಿನಲ್ಲಿ ಇದ್ದಾಗ ಶಿವಾಜಿಯ ಮೊಮ್ಮಗ ಮೈಸೂರು ಸಂಸ್ಥಾನದ ಮೇಲೆ ದಂಡೆತ್ತಿ ಬಂದಿದ್ದಾಗ ಧೃತಿಗೆಡದ ಚಿಕ್ಕ ದೇವರಾಜರು ಅವರ ಬಳಿ ಇದ್ದ ಸುಮಾರು 26000 ಅಮೃತಮಹಲ್ ತಳಿಯ ಗೋವುಗಳ ಕೊಂಬುಗಳಿಗೆ ಪಂಜನ್ನು ಕಟ್ಟಿ ಕತ್ತಲಾದ ಮೇಲೆ ಮರಾಠಾ ಸೈನಿಕರತ್ತ ಕಳುಹಿಸುತ್ತಾರೆ. ವಿಶ್ರಾಂತ ಸಮಯದಲ್ಲಿ ಈ ರೀತಿಯ ಧಾಳಿಯಿಂದ ದಂಗಾದ ಸೈನಿಕರು ದಿಕ್ಕಾಪಾಲಾಗಿ ಓಡಿ ಹೋಗುವ ಸಂದರ್ಭದಲ್ಲಿ ಗೋವುಗಳ ಕಾಲ್ತುಳಿತಕ್ಕೆ ಸಿಕ್ಕು ನಲುಗಿಹೋಗಿ ಸೋತು ಓಡಿಹೋಗುತ್ತಾರೆ. ಈ ರೀತಿಯಾಗಿ ನಿರಾಯಾಸವಾಗಿ ಬುದ್ಧಿವಂತ ತನದಿಂದ ವಿಜಯಿಶಾಲಿಯಾಗಿದ್ದನ್ನು ಗಮನಿಸಿದ ಔರಂಗಜೇಬ್ ಚಿಕ್ಕದೇವರಾಜರನ್ನು ದೆಹಲಿಗೆ ಅರೆಸಿಕೊಂಡು ಅವರ ಸಿಂಹಾಸನಕ್ಕೆ ಸರಿಯಾಗಿ ಇವರಿಗೂ ಒಂದು ಸಿಂಹಾಸನ ಮಾಡಿಸಿ ಅವರಲ್ಲಿ ಅವರನ್ನು ಕುಳ್ಳರಿಸಿ ಅವರಿಗೆ ಸನ್ಮಾನಿಸಿ ಅವರಿಗೆ ರಾಜ ಜಗದೇವ ಎಂಬ ಬಿರುದನ್ನೂ ಕೊಟ್ಟು ಅವರಿಬ್ಬರ ಗೆಳೆತನವನ್ನು ಗಟ್ಟಿ ಮಾಡಿಕೊಳ್ಳುತ್ತಾನೆ.

ಇದೇ ಸಮಯದಲ್ಲಿ ಔರಂಗಜೇಬನ ಕಡೆ ಖಾಸಿಂ ಖಾನ್ ಎಂಬುವನ ಉಸ್ತುವಾರಿಯಲ್ಲಿ ಬೆಂಗಳೂರು ನಗರವಿರುತ್ತದೆ. ಆ ಖಾಸೀಂ ಖಾನ್ ನನ್ನು ಸೋಲಿಸಿ ಬೆಂಗಳೂರನ್ನು ವಶಪಡಿಸಿಕೊಂಡರೂ ಕೊನೆಗೆ ಒಪ್ಪಂದ ಮಾಡಿಕೊಂಡು ಅಂದಿನ ಕಾಲಕ್ಕೇ ಸುಮಾರು 3,00,000 ರೂಗಳಿಗೆ ಖಾಸೀಂ ನಿಂದ ಬೆಂಗಳೂರನ್ನು ಕೊಂಡು ಕೊಳ್ಳುತ್ತಾರೆ. ಹಾಗೆ ಒಪ್ಪಂದ ಮಾಡಿಕೊಂಡರೂ ಸುಮಾರು ಎರಡು ಮೂರು ವರ್ಷಗಳನಂತರವೇ ಬೆಂಗಳೂರಿನಲ್ಲಿ ಇದ್ದದ್ದು ಬದ್ದದ್ದನ್ನು ದೋಚಿಕೊಂಡು ಬಿಟ್ಟು ಹೋಗುತ್ತಾನೆ. ಚಿಕ್ಕ ದೇವರಾಜ ಕಾಲದಲ್ಲೇ ಆಡಳಿತದ ಅನುಕೂಲಕ್ಕಾಗಿ ಹದಿನೆಂಟು ಕಛೇರಿಗಳನ್ನು ಒಂದು ಕಡೆ ಇರುವಂತೆ ಆಠಾರ ಕಛೇರಿಯನ್ನು ಕಟ್ಟಿಸುತ್ತಾರೆ. ಅದೇ ಅಠಾರ ಕಚೇರಿಯೇ ಇಂದು ಉಚ್ಚನ್ಯಾಯಾಲಯವಾಗಿ ಪರಿವರ್ತಿತವಾಗಿದೆ. ಇವರ ಕಾಲದಲ್ಲಿಯೇ ವ್ಯವಸ್ಥಿತವಾದ ಅಂಚೆ ಇಲಾಖೆ ಸ್ಥಾಪಿಸಲ್ಪಡುತ್ತದೆ. ಇವರ ಕಾಲದಲ್ಲಿ ಸಾಲಕ್ಕೆ ಶಿಕ್ಷೇ ಎಂಬ ವಿಭಿನ್ನವಾದ ಶಿಕ್ಷೆ ಜಾರಿಗೆಯಲ್ಲಿತ್ತು. ಅದರ ವಿಶಿಷ್ಟ್ಯತೆ ಏನೆಂದರೆ ಸಂಸ್ಥಾನದ ಅಧಿನದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬ ನೌಕರನು ಅವನ ಅದಾಯ ತಕ್ಕಂತೆ ಖರ್ಚು ಮಾಡಬೇಕಿತ್ತು. ಅದಕ್ಕಿಂತ ಹೆಚ್ಚಿನ ಕರ್ಚು ವೆಚ್ಚ ಮಾಡಿದ್ದು ಕಂಡು ಬಂದಿದ್ದಲ್ಲಿ ಅವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದರು. ಉದಾ. ಒಬ್ಬ ಸೈನಿಕ ತನ್ನ ಆದಯಕ್ಕಿಂತ ಹೆಚ್ಚಿನ ಹಣ ವ್ಯಯಿಸಿದಲ್ಲಿ ಆತನನ್ನು ಕರೆಸಿ ಕೇಳಿದಾಗ, ಆತ ಸೇನಾಧಿಪತಿಗಳ ಬಳಿ ಸಾಲ ಮಾಡಿದೆ ಎಂದರೆ, ಆಗ ಸೇನಾಧಿಪತಿಯನ್ನು ಕರೆಸಿ ಆವರಿಗೆ ಬರುವ ಆದಾಯದಲ್ಲಿ ಅದು ಹೇಗೆ ಸಾಲ ಕೊಟ್ಟಿರಿ ಎಂದು ವಿಚಾರಿಸಿ ಅನುಮಾನ ಬಂದಲ್ಲಿ ಆ ಸೈನಿಕ ಮತ್ತು ಅವನ ಸೇನಧಿಪತಿಗಳಿಗೆ ಶಿಕ್ಷೆಯನ್ನು ಕೊಡುಬ ಪದ್ದತಿಯಿತ್ತು . ಹಾಗಾಗಿ ಸರ್ಕಾರಿ ವೃತ್ತಿಯಲ್ಲಿದ್ದವರು ಅತ್ಯಂತ ಪ್ರಾಮಾಣಿಕರಾಗಿ ಆದಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸುವ ದುರ್ಮಾರ್ಗವನ್ನು ಅನುಸರಿಸುತ್ತಿರಲಿಲ್ಲ. ಇವರ ಕಾಲದಲ್ಲೇ 9 ಕೋಟಿ ಚಿನ್ನದ ವರಹಗಳನ್ನು ಖಜಾನೆಯಲ್ಲಿಟ್ಟಿದ್ದರಂತೆ. ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಕಾವೇರಿಂದ ಗೋದಾವಿಯವರೆಗೆ ಇದ್ದ ಕನ್ನಡ ನಾಡು ಎಂಬುದನ್ನು ಅಕ್ಷರಶಃ ಕಾರ್ಯರೂಪಗೊಳಿಸಿದ್ದ ವೀರಾಗ್ರಣಿಯಾಗಿದ್ದರು. ಅಂದಿನ ಕಾಲದಲ್ಲಿಯೇ ಇಡೀ ಭಾರತದ ಅಷ್ಟೂ ಸಂಸ್ಥಾನಗಳ ಹಣ ಬೆಂಗಳೂರಿನಲ್ಲಿ ಚಲಾವಣೆಯಾಗುವಂತಹ ಸುಸ್ಥಿತಿಯಲ್ಲಿಟ್ಟಿದ್ದರು. ಆದರೆ 1700-1800ರ ವರೆಗೆ ದೇಶಾದ್ಯಂತ ಯುದ್ಧಗಳೇ ನಡೆಯುತ್ತಿದ್ದಂತಹ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಮೂವರು ರಾಜರು ಆಳಿದರು. ಆದರೆ ಅವರಾರು ಬಲಶಾಲಿಗಳಾಗಿರದ ಕಾರಣ, ನಂಜನಗೂಡಿನ ಬಳಿಯ ಕಳಲೆಯ ದಳವಾಯಿಗಳು ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕೋಶದಲ್ಲಿದ್ದ 9 ಕೋಟಿ ಚಿನ್ನದ ವರಹಗಳನ್ನು ಬರಿದು ಮಾಡಿ ಮೈಸೂರು ಸಂಸ್ಥಾನವನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಿಬಿಡುತ್ತಾರೆ. ಮೈಸೂರು ಸಂಸ್ಥಾನವು ಪ್ರತೀ ಬಾರಿ ಯುದ್ದದಲ್ಲಿ ಸೋತಾಗಲು ಸಂಧಾನ ರೂಪದಲ್ಲಿ ಒಂದೊಂದೇ ಪ್ರದೇಶಗಳನ್ನು ಬಿಟ್ಟು ಕೊಡುತ್ತಾ ಹೋಗಿ ಕಡೆಗೆ ಏನೂ ಉಳಿಯದೇ ಹೋಗಿ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸುತ್ತಾರೆ.ಿ ಇಂತಹ ಸಂದರ್ಭದಲ್ಲಿಯೇ ಪೈಲ್ವಾನ್ ಮತ್ತು ಕುದುರೆಯನ್ನು ನೋಡಿಕೊಳ್ಳುವ ಸಹಾಯಕನಾಗಿ ಬಂದು ಕಡೆಗೆ ತನ್ನ ಶೌರ್ಯ ಮತ್ತು ಪರಾಕ್ರಮದಿಂದ ರಾಜರ ಮೆಚ್ಚುಗೆ ಗಳಿಸಿ ಸೇನಾಧಿಪತಿಯಗಿದ್ದ ಹೈದರ್ ಅಲಿಯ ಸುಪರ್ಧಿಗೆ ಮೈಸೂರು ಸಂಸ್ಥಾನ ಜಾರಿ ಹೋಗಿ ಅವನ ನಂತರ ಅಧಿಕಾರ ಅವನ ಮಗ ಟಿಪ್ಪು ಸುಲ್ತಾನನ ಕೈವಶವಾಗಿಹೋಗುತ್ತದೆ. 1799ರಲ್ಲಿ ಬ್ರಿಟಿಷರು ಟಿಪ್ಪು ಸುಲ್ತಾನನ್ನು ಯುದ್ದದಲ್ಲಿ ಹತ್ಯೆಮಾಡಿದ ನಂತರ ಕರ್ನಲ್ ವೆಲ್ಲೆಸ್ಲಿ ಇಡೀ ಸಂಪತ್ತನ್ನು ದೋಜಿಕೊಂಡು ಹೋಗುತ್ತಾನೆ. ಅವರು ದೋಚಿಕೊಂಡು ಹೋದ ಸಂಪತ್ತು ಎಷ್ಟು ಇರಬಹುದು ಎಂದು ಅಂದಾಜು ಮಾಡಲು ಹೊರಟರೇ ಇಂದಿಗೂ ಇಂಗ್ಲೇಂಡಿನ ಎಡಿನ್ ಬರ್ಗ್ನಲಿ ಇರುವ ರಾಬರ್ಟ್ ಕ್ಲೈವ್ ಅವರ ಎಂಟು-ಹತ್ತನೇ ತಲೆಮಾರಿನ ಸಂಬಧೀಕರು ಮೈಸೂರು ಸಂಸ್ಥಾನದಿಂದ ಲೂಟಿ ಮಾಡಿಕೊಂಡು ಹೋದ ಹಣದಿಂದಲೇ ಜೀವನ ಮಾಡುತ್ತಿದ್ದಾರೆ. ಅದೇನೋ ಕರುಣೆಯಿಂದ ಲಾರ್ಡ್ ಮಾರ್ನಿಂಗ್ಟನ್ ಬ್ರಿಟೀಶ್ ಸಾಮ್ರಾಜ್ಯದ ತೆಕ್ಕೆಗೆ ಮೈಸೂರು ಸಂಸ್ಥಾನವನ್ನು ತೆಗೆದು ಕೊಳ್ಳಲು ಬಯಸದ ಕಾರಣ. ಐದು ವರ್ಷದ ಮಗುವಾಗಿದ್ದ 3ನೇ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ತೆಂಗಿನಸೋಗೆಯ ಚಪ್ಪರದ ಅಡಿಯಲ್ಲಿ ಮೇ 30, 1799 ರಂದು ಲಕ್ಷ್ಮೀ ಅಮ್ಮಣ್ಣಿಯವರ ಸಾರಥ್ಯದಲ್ಲಿ ನಡೆಯುತ್ತದೆ.

poorr
ಅದಾದ ನಂತರ ಮೈಸೂರಿಗೆ ವಾಸ್ತವ್ಯ ಬದಲಿಸಿ ದಿವಾನ್ ಪೂರ್ಣಯ್ಯನವರು ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿರುತ್ತಾರೆ. ಅದೇ ಸಂದರ್ಭದಲ್ಲಿಯೇ ಮರದ ಅರಮನೆಯನ್ನೂ ಮತ್ತೆ ದಿವಾನ್ ಪೂರ್ಣಯ್ಯನವರ ನೇತೃತ್ವದಲ್ಲಿ ಕೇವಲ ಎರಡೇ ವರ್ಷಗಳಲ್ಲಿ ನಿರ್ಮಾಣ ವಾಗುತ್ತದೆ. ಹೈದರ್ ಅಲಿ, ಟಿಪ್ಪುಸುಲ್ತಾನ್ ಮತ್ತು 3ನೇ ಕೃಷ್ಣರಾಜ ಒಡೆಯರ್ ಹೀಗೆ ಮೂರು ಜನರ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಪೂರ್ಣಯ್ಯನವರ ಕೀರ್ತಿ ಇಡೀ ಪ್ರಪಂವಾದ್ಯಂತ ಹರಡಲ್ಪಟ್ಟು ಅಂದಿನ ಕಾಲಕ್ಕೇ ಜಾಗತಿಕವಾಗಿ ಅತ್ಯುತ್ತಮ ಆಡಳಿತಗಾರ ಎಂಬ ಗೌರವಕ್ಕೆ ಪಾತ್ರರಾಗಿರುತ್ತಾರೆ. ಜಾತಸ್ಯ ಮರಣಂ ಧೃವಂ ಎನ್ನುವ ಹಾಗೆ ಹುಟ್ಟಿದವನು ಸಾಯಲೇ ಬೇಕು ಎಂಬ ಜಗದ ನಿಯಮದಂತೆ 1815ರಲ್ಲಿ ದಿವಾನ್ ಪೂರ್ಣಯ್ಯನವರು ಕಾಲವಾಗುತ್ತಾರೆ.

ಭಾರತ ದೇಶದ ಇತಿಹಾಸದಲ್ಲಿ 1857 ಸಿಪಾಯಿ ದಂಗೆ ಎಂದೇ ಪ್ರಸಿದ್ದವಾಗಿದೆ. ಆದರೆ ಅದಕ್ಕೂ ಮೊದಲು 1807 ರಲ್ಲಿಯೇ ಶ್ರೀರಂಗ ಪಟ್ಟಣದಲ್ಲಿ ಸಿಪಾಯಿ ದಂಗೆ ನಡೆದಿತ್ತು ಎಂದರೆ ಎಲ್ಲರಿಗೂ ಆಶ್ವರ್ಯವಾಗಬಹುದು. ಟಿಪ್ಪು ಸುಲ್ತಾನನ ಮರಣಾನಂತರ ಬ್ರಿಟಿಷರ ಅಧೀನದಲ್ಲಿಯೇ ಇದ್ದ ಮೈಸೂರು ಸಂಸ್ಥಾನದಲ್ಲಿ ಸೈನಿಕರಿಗೆ ನಿರಂತವಾಗಿ ಯುದ್ದ ಭತ್ಯೆಯನ್ನು (War allowance) ಕೊಡುತ್ತಲೇ ಇರುತ್ತಾರೆ. ಅದೊಮ್ಮೆ ಇಂಗ್ಲೇಂಡಿನಿಂದ ಬಂದ ಲೆಕ್ಕ ಪರಿಶೋಧಕರು ಯುದ್ಧ ಮುಗಿದು ಏಳು ವರ್ಷಗಳು ಕಳೆದರೂ ಇನ್ನೂ ಏಕೆ ಭತ್ಯೆ ಕೊಡುತ್ತಿದ್ದೀರೀ ಎಂದು ಆಕ್ಷೇಪಣೆ ಎತ್ತಿದಾಗ ಎಚ್ಚೆತ್ತು ಕೊಂಡ ಲಾರ್ಡ್ ವೆಲ್ಲೆಸ್ಲಿ ಯಾವುದೇ ಮುನ್ಸೂಚನೆಯನ್ನೂ ಕೊಡದೇ ಸೈನಿಕರ ಯುದ್ದ ಭತ್ಯೆಯನ್ನು ನಿಲ್ಲಿಸುತ್ತಾನೆ. ಇದ್ದಕ್ಕಿದ್ದಂತೆಯೇ ತಮ್ಮ ಆದಾಯ ಕಡಿತಗೊಂಡ ಪರಿಣಾಮ ಸೈನಿಕರು ಬಂಡೆದ್ದು ಶ್ರೀರಂಗ ಪಟ್ಟಣಕ್ಕೇ ಸುಮಾರು ದಿನಗಳ ಕಾಲ ಮುತ್ತಿಗೆ ಹಾಕುತ್ತಾರೆ. ಆಗ ಪರಿಸ್ಥಿಯನ್ನು ತಹಬದಿಗೆ ತರಲು ಮಹಾರಾಣಿ ಅಮ್ಮಣ್ಣಿಯವರು ಮೈಸೂರಿನಿಂದ 1000 ಯೋಧರನ್ನು ಕಳುಹಿಸಿ ಸೈನಿಕರನ್ನು ಹತ್ತಿಕ್ಕೆ ಶಾಂತಿ ಸುವ್ಯವಸ್ಥೆಯನ್ನು ತಂದು ಬ್ರಿಟಿಷರನ್ನು ರಕ್ಷಿಸುತ್ತಾರೆ. ಆದದ ನಂತರವೇ ಶ್ರೀರಂಗ ಪಟ್ಟಣ ತಮಗೆ ಸುರಕ್ಷಿತ ಸ್ಥಳವಲ್ಲವೆಂದು ಬ್ರಿಟಿಷರು ಭಾವಿಸುತ್ತಾರೆ.

ಆಷ್ಟು ಹೊತ್ತಿಗೆ ಬೆಳೆದು ದೊಡ್ಡವರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸತತ ಯುದ್ದದಿಂದ ಜರ್ಜರಿತವಾಗಿ ಭೂಮಿ ಫಲವತ್ತಾಗಿದ್ದರೂ ಯಾವುದೇ ಬೆಳೆಗಳನ್ನೂ ಬೆಳೆಯದೇ ಬೆಂಗಾಡಾಗಿದ್ದ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲು ಅಕ್ಕ ಪಕ್ಕದ ರಾಜ್ಯಗಳಿಂದ ಅತ್ಯುತ್ತಮ ಕೃಷಿಕರನ್ನು ಕರೆತಂದು ಅವರಿಗೆ ಉಚಿತವಾಗಿ ನೂರಾರು ಎಕರೆ ಜಮೀನುಗಳನ್ನು ಕೊಟ್ಟು ಅವರಿಗೆ ಬೆಳೆಯನ್ನು ಬೆಳೆಯಲು ಸಹಾಯ ಮಾಡಿ ಮೈಸೂರು ಸಂಸ್ಥಾನದಲ್ಲಿ ಅಹಾರ ಕ್ರಾಂತಿಗೆ ಕಾರಣೀಭೂತರಾಗುತ್ತಾರೆ. ಸ್ವತಃ ವೇದಪಾರಂಗತರೂ ಸಂಗೀತಗಾರರೂ ಆಗಿದ್ದ ಮಹಾರಾಜರೂ ದೇಶವಿದೇಶಗಳಿಗೆ ಪ್ರವಾಸ ಮಾಡಿ ಅಲ್ಲಿದ್ದ ಅತ್ಯುತ್ತಮ ಕಲಾವಿದರುಗಳನ್ನು ಮೈಸೂರಿಗೆ ಕರೆತಂದು ಮೈಸೂರನ್ನು ಸಾಂಸ್ಕೃತಿಕ ಕಲಾನಗರಿಯನ್ನಾಗಿ ಮಾಡುತ್ತಾರೆ. ಈ ಪ್ರೋತ್ಸಾಹದ ಪರಿಣಾಮವಾಗಿಯೇ ಇಂದೂ ಕೂಡಾ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಅದೇ ರೀತಿ ಅವರ ದರ್ಬಾರ್ ಹಾಲಿನಲ್ಲಿ ಸಂಗೀತ ಕಛೇರಿ ಇದೆ ಎಂದರೇ ಅದು ಸಭಾ ಕಛೇರಿ ಎಂದೇ ಖ್ಯಾತಿ ಪಡೆದಿರುತ್ತದೆ. ದೇಶದ ಎಲ್ಲಾ ಕಲಾವಿದರಿಗೂ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ಕೊಡುವುದೇ ಒಂದು ಹೆಮ್ಮೆಯ ಮತ್ತು ಗೌರವಯುತ ಸಂಗತಿಯಾಗಿರುತ್ತದೆ.

ಮಹಾರಾಜರ ಸಂಗೀತ ನೈಪುಣ್ಯತೆಗೆ ಸಾಕ್ಷಿಯಾಗಿ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು. ಅದೋಂದು ಬಾರಿ ತಮಿಳುನಾಡಿನ ಖ್ಯಾತ ಸಂಗೀತ ತಂಡವೊಂದು ಮೈಸೂರಿನ ಅರಮನೆಯಲ್ಲಿ ರಾಜರ ಸಮ್ಮುಖದಲ್ಲಿ ಸುಮಾರು ಮೂರು ಗಂಟೆಗೂ ಅಧಿಕ ಹೊತ್ತು ಸಂಗೀತ ಕಾರ್ಯಕ್ರಮ ಕೊಟ್ಟು ಎಲ್ಲರ ಮೆಚ್ಚಿಗೆ ಗಳಿಸುತ್ತಾರೆ. ಸಾಥಾರಣವಾಗಿ ಕಾರ್ಯಕ್ರಮ ಮುಗಿದ ನಂತರ ಮಹಾರಾಜರು ಮೆಚ್ಚಿಗೆ ಸೂಚಿಸಿ ಯಾವುದಾದರೂ ಬಹುಮಾನ ಕೊಡುವ ಸಂಪ್ರದಾಯ ಇರುತ್ತದೆ. ಆದರೆ ಅಂದೇಕೂ ಮಹಾರಾಜರೂ ಏನೂ ಹೇಳದೇ ಸುಮ್ಮನೆ ಒಳಗೆ ಹೊರಟುಹೋದಾಗ ಸಂಗೀತಗಾರರಲ್ಲಿ ಅಸಮಧಾನವಾಗುತ್ತದೆ. ಅದಾದ ಸ್ವಲ್ಪ ಸಮಯದ ನಂತರ ರಾಜರ ಆಡಳಿತಗಾರರು ಬಂದು ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಇದೇ ಸಭಾಂಗಣದಲ್ಲಿ ಮಹಾರಾಜರು ನಿಮ್ಮನ್ನು ಭೇಟಿಯಾಗುತ್ತಾರಂತೆ ಇಂದು ನೀವು ವಿಶ್ರಾಂತಿ ಪಡೆದುಕೊಳ್ಳಿ ಎಂದು ಸೂಚಿಸಿದರು. ಮಾರನೆಯ ದಿನ ಹತ್ತು ಗಂಟೆಗೆ ಸರಿಯಾಗಿ ಸಂಗೀತಗಾರರು ಮತ್ತವರ ತಂಡ ದರ್ಬಾರ್ ಹಾಲಿಗೆ ಹೋಗಿ ನೋಡಿದರೆ ಸ್ವತಃ ಮಹಾರಾಜರೇ ಸಂಗೀತಗಾರ ಮಧ್ಯದಲ್ಲಿ ಕುಳಿತಿರುವುದನ್ನು ನೋಡಿ ಸಂಗೀತಗಾರಗಿಗೆ ಆಶ್ವರ್ಯವಾಗುತ್ತದೆ. ಅದನ್ನು ಸಾವರಿಸಿಕೊಂಡು ಅವರೆಲ್ಲರೂ ಅಲ್ಲೇ ಕುಳಿತಾಗ ಮಹಾರಾಜರು ತನ್ಮಯರಾಗಿ ಸುಮಾರು ಮೂರು ಘಂಟೆಗಳಿಗೂ ಅಧಿಕ ಸಮಯ ಸುಶ್ರಾವ್ಯವಾಗಿ ಸಭಿಕರೆಲ್ಲರೂ ತಲೆ ತೂಗುವಂತೆ ಕಛೇರಿ ನಡೆಸಿಕೊಟ್ಟು ಹಿಂದಿನ ದಿನ ಆ ಸಂಗೀತಗಾರರು ಹಾಡಿದ್ದ ಪ್ರತಿಯೊಂದು ತಪ್ಪನ್ನೂ ಸರಿಯಾಗಿ ಹೇಗೆ ಹಾಡಬೇಕೆಂದು ತೋರಿಸಿಕೊಟ್ಟು, ಇನ್ನು ಮುಂದೆ ಯಾವುದೇ ಕಛೇರಿಗೆ ಹೋಗುವ ಮೊದಲು ಸರಿಯದ ತಾಲೀಮು ಮಾಡಿಕೊಳ್ಳದೇ ಹೋಗದಿರೆಂದು ಸಲಹೆ ಕೊಟ್ಟು ಅವರಿಗೆ ಕೈ ತುಂಬಾ ಸಂಭಾವನೆ ಕೊಟ್ಟು ಕಳುಹಿಸಿದ ಮಹಾನುಭಾವರಾಗಿದ್ದರು ನಮ್ಮ ನಾಲ್ವಡೀ ಕೃಷ್ಣರಾಜ ಒಡೆಯರ್ ಅವರು.

ಹೇಗಾದರೂ ಮಾಡಿ ಮೈಸೂರನ್ನು ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲ. ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ವಶಪಡಿಸಿಕೊಳ್ಳುತ್ತಾರೆ ಬ್ರಿಟೀಷರು. ತಾಳ್ಮೆವಂತರಾದ ನಮ್ಮ ರಾಜರು ಅದಕ್ಕೆ ಸ್ವಲ್ಪವೂ ಪ್ರತಿರೋಧ ತೋರದೇ, ಶಾಂತಿಯಂದ ಬಗೆಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಾರೆ. ಇಂತಹ ಪತ್ರ ವ್ಯವಹಾರ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಲೇ ಇಲ್ಲ.

ಇಷೃರ ಮಧ್ಯದಲ್ಲಿಯೇ ಬ್ರಿಟೀಷರು ಶ್ರೀರಂಗ ಪಟ್ಟಣದಲ್ಲಿದ್ದ ಹಲವಾರು ಅರಮನೆಗಳನ್ನು ನಾಶಗೊಳಿಸಿ ಅಲ್ಲಿಯ ಮರ ಮುಟ್ಟುಗಳನ್ನು ಊಟಿಗೆ ಸಾಗಿಸಿ ಅಲ್ಲಿ ಸೆಂಟ್ ಸ್ಟೀಫನ್ ಚರ್ಚ್ ಕಟ್ಟುವ ಸಮಯದಲ್ಲಿ ಬಳೆಸಿಕೊಳ್ಳುತ್ತಾರೆ ಮತ್ತು ಆಡಳಿತಕ್ಕೆ ಬಂದ ಎಲ್ಲಾ ಬ್ರಿಟೀಷ್ ಅಧಿಕಾರಿಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿಯ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗುತ್ತಾರೆ.

ಇಷ್ಟರಲ್ಲಿ ಪರ್ಷಿಯಾದಿಂದ ಕುದುರೇ ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದ ಅಲಿ ಅಸ್ಗರ್ ನಮ್ಮ ರಾಜರಿಗೆ ಪರಮಾಪ್ತರಾಗಿರುತ್ತಾರೆ. ಅಸ್ಗರ್ ಅವರಿಗೆ ನಮ್ಮ ಮಹಾರಾಜರಲ್ಲದೇ ದೇಶದ ಉಳಿದ ಸಂಸ್ಥಾನದ ಮಹಾರಾಜರು ಮತ್ತು ಬ್ರಿಟಿಷರ ನಡುವೆಯೂ ಉತ್ತಮ ಬಾಂಧವ್ಯವಿದ್ದು ಅವರೊಂದಿಗೂ ಕುದುರೆಯ ವ್ಯಾಪಾರವನ್ನು ಮಾಡಿ ಗೆಳೆತನ ಸಂಪಾದಿಸಿರುತ್ತಾರೆ. ಅಂದು ಅಲೀ ಅಸ್ಗರ್ ಅವರೇ ಕಟ್ಟಿಸಿದ ಭವನವನ್ನು ಅಂದಿನ ಕಾಲದ 10000ರೂಗಳಿಗೆ ಮೈಸೂರು ಮಹಾರಾಜರು ಖರೀದಿಸಿರುತ್ತಾರೆ ಸ್ವಾತಂತ್ರ್ಯಾನಂತರ ಅದೇ ಬಂಗಲೆ ರಾಜಭವನವಾಗಿ ಮಾರ್ಪಾಟಾಗುತ್ತದೆ.

ಅದೇ ರೀತಿ ದಖನ್ನಿನ ಕೇಂದ್ರ ಕಚೇರಿಯಾಗಿದ್ದ ಮದರಾಸು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಿನಸಿಗಳನ್ನು ಸರಬರಾಜು ಮಾಡುತ್ತಿದ್ದ ಮತ್ತು ಅಗ್ಗಾಗ್ಗೆ ಸಾಲ ಕೊಡುತ್ತಿದ್ದ ಮತ್ತೊಬ್ಬ ಮಹಾನುಭಾವನೇ ಶ್ರೀ ಲಕ್ಷ್ಮೀನರಸೂ ಚೆಟ್ಟಿ. ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದು ಬದುಕಿದ ಚೆಟ್ಟಿ ಮೂಲತಃ ಬಹುದೊಡ್ಡ ಕಿರಾಣಿ ವ್ಯಾಪಾರಿಯಾಗಿದ್ದ… ಈತನ ವ್ಯಾಪಾರೀ ಜಾಲ ಎಷ್ಟು ದಿವಿನಾಗಿತ್ತೆಂದರೆ ಅಲ್ಲಿಯೇ ಕುಳಿತು ಮದರಾಸಿನ ಈಸ್ಟ್ ಇಂಡಿಯಾ ಕಂಪನಿಗೂ ಮೈಸೂರಿನ ಅರಮನೆಗೂ ಏಕಕಾಲಕ್ಕೆ ಕಿರಾಣಿ ಒದಗಿಸುತ್ತಿದ್ದ ಚತುರ… ಇಡೀ ದಖನ್ನಿನ ಸಿರಿವಂತರ , ಪಾಳೇಗಾರರ , ಬ್ರಿಟಿಷ ಅಧಿಕಾರಿಗಳ ಸ್ನೇಹ ಅವನಿಗಿತ್ತು… ಅಂತೆಯೇ…

ಮೈಸೂರು ಸಂಸ್ಥಾನದ ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರ ಸ್ನೇಹಸುಮವೂ ಅವನ ತೋಟದಲ್ಲಿ ಅರಳಿತ್ತು… ಬ್ರಿಟಿಷರು ಕುಂಟುನೆಪವೊಡ್ಡಿ ರಾಜ್ಯ ಕಸಿದುಕೊಂಡಾಗಲಿನಿಂದ ಅಧಿಕಾರವಿಲ್ಲದಿದ್ದರೂ ಅವರು ಮಾಡುತ್ತಿದ್ದ ಜನಸೇವೆ… ಅವರಿಗಿದ್ದ ಪ್ರಜಾಪ್ರೀತಿ… ಹಗಲಿರುಳೂ ಅವರು ಚಿಂತಿಸುತ್ತಿದ್ದ ರಾಜ್ಯದ ಅಭ್ಯುದಯ… ಈ ಎಲ್ಲವನ್ನೂ ಹತ್ತಿರದಿಂದ ನೋಡುವ ಭಾಗ್ಯ ಚೆಟ್ಟಿಯದಾಗಿತ್ತು…

ಪದೇ ಪದೇ ದೇಶದ ನಾನಾ ಪ್ರಾಂತ್ಯಗಳ ಮೇಲೆ ನಡೆಯುತ್ತಿದ್ದ ಯುದ್ಧಗಳಿಂದ ಬ್ರಿಟಿಷರ ಕೈ ಖಾಲಿಯಾಗಿತ್ತು… ಹಣ ನೀರಿನಂತೆ ಹರಿದುಹೋಗಿತ್ತು. ಆನೆಗಾತ್ರದಂತೆ ಬೆಳೆಯುತ್ತಿದ್ದ ಬ್ರಿಟಿಷ್ ಸೈನ್ಯವನ್ನು ಸಲಹಲು ಮದರಾಸಿನ ಈಸ್ಟ್ ಇಂಡಿಯಾ ಕಂಪನಿಗೆ ಹಣದ ಅವಶ್ಯಕತೆ ಹೆಚ್ಚಿತ್ತು… ದಾಹದಿಂದ ಗುಳ್ಳೆನರಿ ನೀರಿಗಾಗಿ ಅತ್ತಿತ್ತ ಅಲೆದಾಡುತ್ತಾ ಹುಡುಕುವಾಗ ಕಣ್ಣಿಗೆ ಕಂಡಿದ್ದೇ ಈ ಕಿರಾಣಿ ವ್ಯಾಪಾರಿ ಚೆಟ್ಟಿ… ಸಣ್ಣ ಮೊತ್ತದಿಂದ ಶುರುವಾದ ಸಾಲ ಕೆಲವರ್ಷಗಳನ್ನು ಕಳೆಯುವ ಹೊತ್ತಿಗೆ ಲಕ್ಷಗಳನ್ನು ದಾಟಿತ್ತು… ಒಬ್ಬೊಬ್ಬ ಬ್ರಿಟಿಷ್ ಆಫೀಸರನೂ ಒಂದೊಂದು ಬಿಳಿಯಾನೆಯಂತೆ ಕಂಪನಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿಬಿಟ್ಟಿದ್ದ… ಕರ್ನಲ್ಲುಗಳ , ಲೆಫ್ಟಿನೆಂಟುಗಳ ಮತ್ತು ಲಾರ್ಡುಗಳ ಮೇಜವಾನಿ ಮೋಜುಮಸ್ತಿ ಎಗ್ಗಿಲ್ಲದೇ ಸಾಗಿತ್ತು. ಅವರೆಲ್ಲರ ಅಗತ್ಯಗಳನ್ನು ಪೂರೈಸಲು ಈ ಚೆಟ್ಟಿ ಮದರಾಸಿನ ಈಸ್ಟ್ ಇಂಡಿಯಾ ಕಂಪನಿಯ ಪಾಲಿಗೆ ಕಾಮಧೇನುವಾಗಿದ್ದ…

ಇತ್ತ… ಮಹಾರಾಜ ಮುಮ್ಮುಡಿ ಕೃಷ್ಣರಾಜ ಒಡೆಯರು ಮೇಲಿಂದ ಮೇಲೆ ಪತ್ರಗಳನ್ನು ಬರೆದು ಅಧಿಕಾರ ವಾಪಸಿಗಾಗಿ ವಿನಂತಿಸಿಕೊಳ್ಳುತ್ತಿದ್ದರೂ ಬ್ರಿಟಿಷರು ಕ್ಯಾರೇ ಎಂದಿರಲಿಲ್ಲ… ಇದನ್ನೆಲ್ಲಾ ಹತ್ತಿರದಿಂದಲೇ ಗ್ರಹಿಸುತ್ತಿದ್ದ ಚೆಟ್ಟಿ ಅದೊಂದು ದಿನ. ನೀವು ಮೈಸೂರು ಪ್ರಭುಗಳಿಗೆ ರಾಜ್ಯಾಧಿಕಾರ ಹಿಂದಿರುಗಿಸದಿದ್ದಲ್ಲಿ ನಾನು ಹಣ ಸಾಲ ಕೊಡುವುದನ್ನು ನಿಲ್ಲಿಸಬೇಕಾದೀತು ಎಚ್ಚರ ಎಂಬ ಬೆದರಿಗೆ ಹಾಗಿದರು. ಅದಕ್ಕೆ ಅಲೀ ಆಸ್ಗರ್ ಕೂಡಾ ತನ್ನ ಪ್ರಭಾವ ಬಳೆಸಿ ಮೈಸೂರು ಅರಸರಿಗೆ ಅಧಿಕಾರವನ್ನು ಹಿಂದಿರುಗಿಸಬೇಕೆಂದು ಒತ್ತಾಯ ಹಾಕಿದರು

ಇವರಿಬ್ಬರ ಬೆದರಿಕೆಗೆ ಬೆಚ್ಚಿದಂತೆ ನಟಿಸಿದ ಬ್ರಿಟಿಷರು ಅಂದಿನಿಂದ ಪ್ರಭುಗಳ ಪತ್ರಗಳಿಗೆ ಮಾನ್ಯತೆ ಕೊಟ್ಟು ಮಾರುತ್ತರ ಬರೆಯಲಾರಂಭಿಸಿದರು… ಅಧಿಕಾರ ವಾಪಸಿಗಾಗಿ ತಾವು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿಯೂ ವಾಗ್ದಾನ ಮಾಡಿದರು…

ಹೀಗೆ ಮೈಸೂರು ಸಂಸ್ಥಾನದ ಆಪ್ತರಾಗಿ ಚೆಟ್ಟಿ ಮತ್ತು ಅಸ್ಗರ್ ಅಲಿಯವರು ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಮೈಸೂರು ಸಂಸ್ಥಾನದ ಜನರ ಪಾಲಿಗೆ ಪ್ರಾತಃಸ್ಮರಣೀಯರಾಗುತ್ತಾರೆ.

1857ರಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆಯಾಗಿ ಪ್ರಥಮ ಸ್ವಾಂತ್ರತ್ರ್ಯ ಸಂಗ್ರಾಮವಾದಾಗ ಅದನ್ನು ಹತ್ತಿಕ್ಕಲು ಸಾಧ್ಯವಾಗದ ಈಸ್ಟ್ ಇಂಡಿಯಾ ಕಂಪನಿ ಬ್ರಿಟನ್ ರಾಣಿ ವಿಕ್ಟೋರಿಯಾಗೆ ಶರಣಾದಾಗ, ವಿಕ್ಟೋರಿಯಾರಾಣಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗ, ಪ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಮತ್ತು ಅವರ ಸಹಾಯಕರಾಗಿದ್ದ ಮಾರ್ಕ್ ಕಬ್ಬನ್ ಅವರು ಬರೆದಿದ್ದ ಪತ್ರವನ್ನು ಪುರಸ್ಕರಿಸಿ 565 ಸಂಸ್ಥಾನಗಳ ಪೈಕಿ ಮೈಸೂರಿನ ರಾಜರಿಗೆ ಮಾತ್ರವೇ ಆಡಳಿತವನ್ನು ಮರಳಿ ಹಸ್ತಾಂತರ ಮಾಡುತ್ತಾಳೆ. ಅಂತಹ ಮಹನೀಯರ ಸ್ಮರಣಾರ್ಥವಾಗಿಯೇ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಮತ್ತು ಉದ್ಯಾನಗಳಿಗೆ ಅವರುಗಳ ಹೆಸರನ್ನೇ ನಾಮಕರಣ ಮಾಡಿ ಇಂದಿಗೂ ಅವರನ್ನು ಸ್ಮರಿಸುವಂತೆ ಮಾಡಿದ್ದಾರೆ ನಮ್ಮ ಮಹಾರಾಜರು.

ಹಾಗೆ ಆಡಳಿತವನ್ನು ಮರಳಿ ಪಡೆದ ನಂತರ 1947ರ ವರೆಗೂ ನಿರಾತಂಕವಾಗಿ ಮೈಸೂರಿನ ಸಂಸ್ಥಾನ ಒಡೆಯರ್ ಕುಟುಂಬದ ಆಳ್ವಿಕೆಯನ್ನು ಅತ್ಯಂತ ಸುಭಿಕ್ಷವಾಗಿ ಆಡಳಿತ ನಡೆಸಲ್ಪಡುತ್ತದೆ. ಇದೇ ಸಮಯದಲ್ಲಿ ಮೈಸೂರಿಗೆ ಭೇಟಿನೀಡಿದ ಲಾರ್ಡ್ ಮೆಕಾಲೆ ವ್ಯವಹಾರದ ದೃಷ್ಥಿಯಿಂದ ರಾಜರುಗಳಿಗೆ ಇಂಗ್ಲೀಷ್ ಕಲಿಯಲು ಸೂಚಿಸಿದ್ದನ್ನು ಸ್ವೀಕರಿಸಿ ಮಹಾರಾಜರ ಮಕ್ಕಳುಗಳು ಮತ್ತು ಅವರ ಪ್ರಾಂತ್ಯದಲ್ಲಿ ಅನೇಕ ಮಕ್ಕಳುಗಳು ಆಂಗ್ಲಮಾಧ್ಯಮದ ಶಿಕ್ಷಣ ಪಡೆಯುತ್ತಾರೆ. 1892ರಲ್ಲಿ ಶ್ರೀ ಚಾಮರಾಜ ಒಡೆಯರ್ ಅವರು ಮಹಾರಾಜರಾಗಿಯೂ ಮತ್ತು ಶೇಷಾದ್ರಿ ಐಯ್ಯರ್ ಅವರು ದಿವಾನರಾಗಿದ್ದಾಗ ದೇಶ ಕಂಡ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದರು ಪರಿವ್ರಾಜಕರಾಗಿ ಮೈಸೂರಿಗೆ ಭೇಟಿಕೊಟ್ಟು ಸುಮಾರು ಎರಡು ವಾರಗಳ ಕಾಲ ಇಲ್ಲಿ ತಂಗಿದ್ದು ಮೈಸೂರಿನ ಸುತ್ತಮುತ್ತಲಿನ ಪ್ರದೇಶ ಅದರಲ್ಲೂ ಕಾನಕಾನಹಳ್ಳಿ (ಕನಕಪುರದ) ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಲು ಸಲಹೆನೀಡುತ್ತಾರೆ. ಅವರ ಸಲಹೆಯಮೇರೆಗೇ ರಾಣಿಯವರ ಹೆಸರಿನಲ್ಲಿ ಅಮ್ಮಣ್ಣಿ ಕಾಲೇಜ್ ಆರಂಭವಾಗುತ್ತದೆ. ಅದೇ ರೀತಿ ಸ್ವಾಮಿಗಳು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಧನ ಸಹಾಯವನ್ನೂ ಮಾಡುತ್ತಾರೆ. ಮುಂದೆ ವಿವೇಕಾನಂದರಿಂದ ಪ್ರೇರೇಪಿತರಾಗಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸೂಕ್ತ ಜಾಗ ಮತ್ತು ಧನ ಸಹಾಯವನ್ನು ಹುಡುಕುತ್ತಿದ್ದ ಜೆಮ್ ಷೇಡ್ ಜೀ ಟಾಟಾರವರಿಗೆ ಬೆಂಗಳೂರಿನಲ್ಲಿ ಸುಮಾರು 400 ಎಕರೆಯಷ್ಟು ಜಮೀನು ನೀಡಿದ್ದಲ್ಲದೇ ಅಂದಿನ ಕಾಲಕ್ಕೇ ಸುಮಾರು 50,000 ರೂಪಾಯಿಗಳ ಧನಸಹಾಯ ಮಾಡಿದರು ನಮ್ಮ ಮಹಾರಾಜರು. ಇಂದು ಅದೇ ಟಾಟಾ ಇನಿಸ್ಟಿಟ್ಯೂಟ್ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಹೆಸರಿನಲ್ಲಿ ವಿಶ್ವವಿಖ್ಯಾತವಾಗಿ ಸಾವಿರಾರು ವಿಜ್ಞಾನಿಗಳಿಗೆ ವಿದ್ಯಾತಾಣವಾಗಿದೆ.

ನಾಲ್ವಡೀ ಕೃಷ್ಣರಾಜ ಒಡೆಯರ್ ಅವರಿಗೆ ಶಿಕ್ಷಣವನ್ನು ಕೊಡಿಸಲು ಕರ್ನಲ್ ಫ್ರೇಜರ್ (ಬೆಂಗಳೂರಿನ ಫ್ರೇಜರ್ ಟೌನ್ ಇವರ ಸವಿ ನೆನಪಿನಲ್ಲಿಯೇ ಇದೆ) ಅವರನ್ನು ನೇಮಿಸುತ್ತಾರೆ. ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಆರಂಭವಾಗುತ್ತದೆ. ಅದೇ ಸಮಯದಲ್ಲಿ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಅಚಾತುರ್ಯವಾಗಿ ಬೆಂಕಿ ಹತ್ತಿಕೊಂಡು ಇಡೀ ಅರಮನೆ ಹೊತ್ತಿ ಉರಿದಾಗ, ಫ್ರೇಜರ್ ಅವರು ಮಹಾರಾಜರಿಗೆ ಅಗ್ನಿಶಾಮಕ ದಳದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ ಮೊತ್ತ ಮೊದಲಿಗೆ ಅಗ್ನಿಶಾಮಕ ದಳದ ಆರಂಭಕ್ಕೆ ಕಾರಣೀಭೂತರಾಗುತ್ತಾರೆ. ಅದಾದ ನಂತರ ಮತ್ತೆ ಈಗಿರುವ ಭವ್ಯವಾದ ಅರಮನೆ ರೂಪುಗೊಳ್ಳುತ್ತದೆ. ಫ್ರೇಜರ್ ಅವರು ಕೇವಲ ಇಂಗ್ಲೀಷ್ ಮಾತ್ರವಲ್ಲದೇ ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನ್ನು ಮಹಾರಾಜರಿಗೆ ಕಲಿಸಿಕೊಡುತ್ತಾರೆ

1902ರಲ್ಲಿ ಆರಂಭವಾದ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕುಂಟುತ್ತಾ ಸಾಗುತ್ತಾ ಕೇವಲ ಮಳೆಗಾಲದಲ್ಲಿ ಮಾತ್ರವೇ ವಿದ್ಯುತ್ ಉತ್ಪಾದಿಸುತ್ತಾ, ಮೈಸೂರು, ಬೆಂಗಳೂರು ಮತ್ತು ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿರುತ್ತದೆ. ವರ್ಷದ ಮುನ್ನೂರೈವತ್ತೈದು ದಿನಗಳೂ ವಿದ್ಯುತ್ ಉತ್ಪಾದಿಸಬೇಕಾದರೇ ನೀರನ್ನು ಎಲ್ಲಾದರೂ ತಡೆಹಿಡಿದು ಅದನ್ನು ಪ್ರತಿದಿನವೂ ಪೂರೈಸುವಂತೆ ಮಾಡುವ ಸಲುವಾಗಿಯೇ ಕನ್ನಂಬಾಡಿ ಕಟ್ಟೆಯನ್ನು ಕಟ್ಟುವ ನಿರ್ಧಾರಕ್ಕೆ ಬರುತ್ತಾರೆ.

ಮುಂಬೈಯಲ್ಲಿ ಎಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1909 ರಲ್ಲಿ ಮೈಸೂರಿಗೆ ಕರೆಸಿಕೊಂಡು ತಮ್ಮ ಕನಸಿನ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯನ್ನು ಸಾಕಾರಗೊಳಿಸಲು ವಿಶ್ವೇಶ್ವರಯ್ಯನವರನ್ನು ಕೇಳಿಕೊಂಡರು. ಅವರ ಇಚ್ಚೆಯಂತೆ 1911ರಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಮೊದಲ ವರದಿ ಸಿದ್ಧವಾಯಿತಾದರೂ ಅದಕ್ಕೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಎಂದು ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ. ಇದರಿಂದ ನೊಂದ ವಿಶ್ವೇಶ್ವರಯ್ಯ ಅವರು ದೈನಂದಿನ ಕೆಲಸಗಳಲ್ಲಿಯೂ ಆಸಕ್ತಿ ಕಳೆದುಕೊಂಡರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆ ಜಾರಿಗೆ ನಿರ್ಧರಿಸಿದರು. ಅದಕ್ಕೆ ಹಣವನ್ನು ಹೊಂಚಲು ತಮ್ಮ ರಾಣಿಯವರ ಚಿನ್ನಾಭರಣ ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳಿದ್ದ ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ಇಲ್ಲಿಗಿಂತ ದೂರದ ಬಾಂಬೆಯಲ್ಲಿ ಈ ಚಿನ್ನಾಭರಣಗಳಿಗೆ ಹೆಚ್ಚಿನ ಹಣ ಸಿಗಬಹುದೆಂಬ ಕಾರಣದಿಂದ ದೂರದ ಬಾಂಬೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಹೊಂಚಿಸುವ ಮೂಲಕ 1911 ಅಕ್ಟೋಬರ್ 12ರಂದು ಯೋಜನೆಗೆ ಒಪ್ಪಿಗೆ ಸೂಚಿಸಿದರು. ಆದರೆ ಕಾಮಗಾರಿ ನಡೆಯುತ್ತಿದ್ದ ಸಂಧರ್ಭದಲ್ಲಿ ನದಿಯಲ್ಲಿ ಭಾರಿ ಪ್ರವಾಹ ಬಂದು ಕಾರ್ಮಿಕರು ಕೊಚ್ಚಿಹೊಗುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಕೆಲವರನ್ನು ರಕ್ಷಿಸುವ ಸಂದರ್ಭದಲ್ಲಿ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ಡಾರ್ವಿನ್ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಅವರ ಸೇವೆ ಮತ್ತು ಬಲಿದಾನವನ್ನು ಚಿರಂತನವಾಗಿಡಲು ಕನ್ನಂಬಾಡಿ ಸುತ್ತಮುತ್ತಲಿನ ಜನರು ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ 5, 10, 25, 50 ಪೈಸೆ, 1 ರೂಪಾಯಿಗಳನ್ನು ಸಂಗ್ರಹಿಸಿ ಸುಮಾರು 600ರೂಪಾಯಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪುದುವಟ್ಟು ಇಟ್ಟು ಬುದ್ದಿವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಮಾಡುತ್ತಾರೆ.

ಇಂದು ನಾಡಿನಾದ್ಯಂತ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೆ ಆದನ್ನು ನಮ್ಮ ರಾಜರು ಅಂದಿನ ಕಾಲದಲ್ಲೇ ಜಾರಿಗೆ ತಂದು ಪ್ರತೀ ಗ್ರಾಮಗಳಿಗೂ ಒಂದು ಕನ್ನಡಿ ಮತ್ತು ಬಾಚಣಿಗೆ ಕೊಟ್ಟು ಪ್ರತಿಯೊಬ್ಬರು ಶುಭ್ರವಾಗಿ ಇರಬೇಕು ಎಂದು ಅಜ್ಞಾಪಿಸಿರುತ್ತಾರೆ. ಅದೇ ರೀತಿ ತಮ್ಮ ದೂರದೃಷ್ಟಿಯಿಂದ ಮೈಸೂರಿನ ಪ್ರತೀ ರಸ್ತೆಗಳು ವಿಶಾಲವಾಗಿ ಇರುವಂತೆ ಎಂದೂ ಕೂಡಾ ರಸ್ತೆಗಳಲ್ಲಿ ಜನ ಸಂದಣಿಯಾಗದಂತೆ ನೋಡಿಕೊಂಡಿರುತ್ತಾರೆ. ಬ್ರಿಟೀಷರೇ ಹೇಳಿದಂತೆ ಬ್ರಿಟನ್ ಬಿಟ್ಟರೇ ಬ್ರಿಟೀಷರು ವಾಸ ಮಾಡುವಂತಹ ಸುಸಜ್ಜಿತ, ವ್ಯವಸ್ಥಿತ ಮತ್ತು ಸುಂದರ ನಗರ ಮತ್ತೊಂದು ಎಂದರೆ ಅದು ಮೈಸೂರು ಎಂದು ಹೇಳಿದ್ದದ್ದು ಮೈಸೂರಿನ ಹೆಮ್ಮೆಯ ಸಂಕೇತವಾಗಿದೆ. ಜೋಗದ ಜಲಪಾತದಲ್ಲಿ ವಿದ್ಯುತ್ ಉತ್ಪಾದನಾ ಘಟಕ, ಬೆಂಗಳೂರಿನಲ್ಲಿ ಹೆಚ್.ಎ.ಎಲ್ ವಿಮಾನ ತಯಾರಿಕಾ ಘಟಕಗಳೂ ಮಹಾರಾಜರ ದೂರದೃಷ್ಟಿಯ ಫಲಗಳೇ ಆಗಿವೆ.

ಸ್ವತಃ ಸಂಗೀತ ಮತ್ತು ವೇದ ಪಾರಂಗತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 36000 ಪುಟಗಳ ಋಗ್ವೇದವನ್ನು 1000 ಪುಟಗಳ 36 ಸಂಪುಟದ ಪುಸ್ತವನ್ನಾಗಿ ಮಾಡಿಸಿ ಎಲ್ಲರಿಗೂ ಹಂಚಿಕೆ ಮಾಡುತ್ತಾರೆ. ಅದೇ ರೀತಿ ಸ್ವತಃ 21 ಕೃತಿಗಳನ್ನು ರಚಿಸಿ ಅದಕ್ಕೇ ಅವರೇ ಸ್ವತಃ ರಾಗ ಸಂಯೋಜನೆ ಮಾಡಿದ್ದಾರೆ.

pak

ಮೈಸೂರಿನ ಹೆಸರನ್ನು ವಿಶ್ವವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಈ ಸಿಹಿತಿಂಡಿಯ ಇತಿಹಾಸ ಬಲು ರೋಚಕವಾಗಿದೆ. ಅದೊಮ್ಮೆ ರಾಜರು ಅರಮನೆಯ ಬಾಣಸಿಗ ಕಾಕಾಸುರ ಮಾದಪ್ಪನವರನ್ನು ಕರೆದು ಯಾವುದಾದರೂ ಹೊಸಾ ಸಿಹಿ ತಿಂಡಿ ತಯಾರಿಸಲು ಹೇಳಿದರು ಮಹಾರಾಜರು ಹೇಳಿದ ಕೂಡಲೇ ಮರು ಮಾತನಾಡದೇ ಆಡುಗೆ ಮನೆಗೆ ಹೋದಾಗ ತಮ್ಮ ಮುಂದಿದ್ದ ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಎಂದು ಯೋಚಿಸಿ ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. (ಪಾಕ್ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). ಈ ಸಿಹಿ ತಿಂಡಿ ಕೇವಲ ಅರಮನೆಗಷ್ಟೇ ಮೀಸಲಾಗಿರಬಾರದೆಂದು ನಿರ್ಧರಿಸಿ ಅವರಿಗೆಂದೇ ಗುರುರಾಜ ಸ್ವೀಟ್ಸ್ ಎಂಬ ಅಂಗಡಿಯನ್ನು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ ಕಟ್ಟಿಸಿಕೊಡುತ್ತಾರೆ. ಇಂದಿಗೂ ಕೂಡಾ ಮಾದಪ್ಪ ಅವರ ಕುಟುಂಬದವರೇ ಗುರು ಸ್ವೀಟ್ಸ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟಾಗ, ಸರ್ದಾರ್ ವಲ್ಲಭಾಯಿಪಟೇಲ್ ಅವರ ನೇತೃತ್ವದಲ್ಲಿ 565 ಸಂಸ್ಥಾನಗಳನ್ನು ಭಾರತ ಗಣತಂತ್ರಕ್ಕೆ ಸೇರಿಕೊಳ್ಳಲು ಕೇಳಿಕೊಂಡಾಗ ಕಡೆಯ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಸಂತೋಷದಿಂದ ಮರು ಮಾತನಾಡಡೇ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಕೊಳ್ಳಲು ಒಪ್ಪಿಕೊಂಡಾಗ ಸ್ವತಃ ಅಂದಿನ ಪ್ರಧಾನಿಗಳಾಗಿದ್ದ ನೆಹರರವರು ಖುದ್ದಾಗಿ ಮೈಸೂರಿಗೆ ಬರುತ್ತಾರೆ ಎಂದರೆ ನಮ್ಮ ಮೈಸೂರಿನ ಖ್ಯಾತಿ ಎಷ್ಟಿತ್ತು ಎಂಬುದನ್ನು ಕಂಡು ಕೊಳ್ಳಬಹುದಾಗಿದೆ.

vish
ಇಂದು ಸೆಪ್ಟೆಂಬರ್ 14, ಖ್ಯಾತ ಇಂಜಿನಿಯರ್ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಜಯಂತಿ ಅವರಿಗೆ ಮೈಸೂರಿನ ಅರಸ ಬಗ್ಗೆ ಇದ್ದ ಅಪಾರ ಪ್ರೇಮ ಮತ್ತು ಕಾಳಜಿ ಎಷ್ಟಿತ್ತು ಎಂದು ಈ ಪ್ರಸಂಗದ ಮೂಲಕ ತಿಳಿಯುತ್ತದೆ.

ಐವತ್ತರ ದಶಕ. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಪ್ರಮುಖ ವೃತ್ತಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನಿಟ್ಟು ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಭರದಿಂದ ಸಾಗಿತ್ತು. ಹಾಗೆಯೇ ಅದನ್ನು ಉದ್ಘಾಟನೆಗೆ ಯಾರನ್ನು ಕರೆಸಬೇಕೆಂಬ ಚರ್ಚೆಯೂ ನಡೆಯುತ್ತಿತ್ತು. ರಾಜರ್ಷಿ ನಾಲ್ವಡಿಯವರ ಜತೆ ಒಡನಾಡಿದ್ದ ಬಹುತೇಕ ಎಲ್ಲ ಪ್ರಮುಖರೂ ಕಾಲನ ಕರೆಗೆ ಓಗೊಟ್ಟು ಹೋಗಿದ್ದರಿಂದ ಅಷ್ಟೇ ಘನವಾದವರ ಹುಡುಕಾಟ ನಡೆಯುತ್ತಿತ್ತು. ಆಗ ಫಕ್ಕನೆ ಮಿಂಚು ಹೊಳೆದಂತೆ ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿದ್ದ , ಮುಖ್ಯ ಎಂಜಿನೀರ್ ಆಗಿದ್ದ , ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದ ಧೀಮಂತ ಮಹಾನುಭಾವ ಸರ್ ಎಂ ವಿಶ್ವೇಶ್ವರಯ್ಯನವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಲಾಯಿತು.

ಅವರಿಗೆ ಆಗ ತೊಂಭತ್ತರ ಇಳಿವಯಸ್ಸು… ವಿಶ್ರಾಂತ ಜೀವನ ನಡೆಸುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ಖುಷಿಯಿಂದಲೇ ಒಪ್ಪಿಕೊಂಡು ಮೈಸೂರಿಗೆ ಬಂದಿಳಿದ ಅವರನ್ನು ಸರ್ಕಾರಿ ಗೆಸ್ಟ್ ಹೌಸಿನಲ್ಲಿ ಇಳಿಸಲಾಗಿತ್ತು. ಉದ್ಘಾಟನೆಯ ದಿನ, ಎಂದಿನಂತೆ ಸರ್ ಎಂ ವಿ ಯವರು ಸೂಟು ಬೂಟಿನಲ್ಲಿ ಕಂಗೊಳಿಸುತ್ತ ಹೊರಡಲು ಸಿದ್ಧವಾಗಿದ್ದಾಗ ಬಾಗಿಲ ಬಳಿ ಸದ್ದಾಯಿತು. ನಿಧಾನವಾಗಿ ಬಾಗಿಲು ತೆರೆದರೆ ಸರ್, ಕಾರು ಸಿದ್ಧವಿದೆ ಸರ್ … ಹೊರಡೋಣವೇ ಎಂದು ಕೇಳಿದರು.
ಆದಕ್ಕೆ ತಕ್ಷಣವೇ ವಿಶ್ವೇಶ್ವರಯ್ಯನವರು ಕಾರೇ … ಏತಕ್ಕೆ ? ಇಲ್ಲೇ ಇರುವ ಕೆ ಆರ್ ಸರ್ಕಲ್ಲಿಗೆ ಕಾರೇ?
ನೋ ನೋ ನೋ … ಅದೆಲ್ಲ ಬೇಡ …. ನಾಲ್ವಡಿಯವರು ನಮ್ಮನ್ನೆಲ್ಲ ಸಾಕಿ ಸಲಹಿದ ಧಣಿ… ನಾಡಿನ ಹಿತಕ್ಕಾಗಿ ಸದಾ ಸರ್ವದಾ ತಮ್ಮನ್ನು ತೊಡಗಿಸಿಕೊಂಡ ಮಹನೀಯ… ಅಂಥವರ ಪ್ರತಿಮೆ ಉದ್ಘಾಟನೆಗೆ ಕಾರಿನಲ್ಲಿ ಹೋಗುವುದೇ… ಅದಾಗದು…. ನಾನು ಇಲ್ಲಿಂದ ಅಲ್ಲಿಯವರೆಗೆ ನಡೆದೇ ಅಲ್ಲಿಗೆ ಬರುತ್ತೇನೆ ಎಂದು ಹೇಳಿ ಆ ಜ್ಞಾನವೃದ್ಧ , ವಯೋವೃದ್ಧ ಜೀವ ತಮ್ಮ ತೊಂಭತ್ತರ ಇಳಿವಯಸ್ಸಿನಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನಿಧಾನವಾಗಿ ನಡೆಯಲಾರಂಭಿಸಿತು. ಇದನ್ನೆಲ್ಲಾ ಕಣ್ಣಲ್ಲಿ ನೀರು ತಬ್ಬಿಕೊಂಡು ನೋಡುತ್ತಿದ್ದ ಉಳಿದ ಪ್ರಮುಖರೂ ಅವರ ಜತೆಗೂಡಿ ನಡೆದೇ ಹೊರಟು ಕೃಷ್ಣರಾಜ ಸರ್ಕಲ್ಲು ತಲುಪಿ ವಿದ್ಯುಕ್ತವಾಗಿ ಉಧ್ಘಾಟನೆಯನ್ನು ನಡೆಸಿಕೊಟ್ಟರು. ಈ ರೀತಿಯಾಗಿ ರಾಜಾ ಪ್ರತ್ಯಕ್ಷ ದೇವತ ಎನ್ನುವುದಕ್ಕೆ ಅನ್ವರ್ಥವಾಗಿ ನಮ್ಮ ಮೈಸೂರು ಅರಸರು ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ್ದರು.

ಕಡೆಯದಾಗಿ ಮೈಸೂರು ಮಹಾರಾಜರ ಮತ್ತೊಂದು ಉತ್ತಮ ಗುಣವನ್ನು ಹೇಳಲೇ ಬೇಕಿದೆ. ಸಾಧಾರಣವಾಗಿ ಎಲ್ಲಾ ಸಾಮಂತರು ಮತ್ತು ಜನಸಾಮಾನ್ಯರು ತಮ್ಮಲ್ಲಿರುವ ಅತ್ಯುತ್ತಮವಾದ ಅನನ್ಯವಾದ ಅನರ್ಘ್ಹ್ಯವಾದ ವಸ್ತುಗಳನ್ನು ಮಹಾರಾಜರುಗಳಿಗೆ ಕಾಣಿಕೆಯನ್ನಾಗಿ ಕೊಡುವುದು ವಾಡಿಕೆ. ಹಾಗೆ ಕೊಟ್ಟ ಕಾಣಿಕೆಗಳನ್ನು ಬಹುತೇಕ ರಾಜ ಮಾಹಾರಾಜರು ತಮ್ಮಲ್ಲೇ ಇಟ್ಟುಕೊಳ್ಳುವುದು ನಡೆದು ಬಂದ ಸಂಪ್ರದಾಯ. ಆದರೆ ನಮ್ಮ ಮಹಾರಾಜರು ಅಂತಹ ಕಾಣಿಕೆಗಳನ್ನು ಕೇವಲ ತಮ್ಮ ಕೈಯಲ್ಲಿ ಒಮ್ಮೆ ಮುಟ್ಟಿ, ನಿಮ್ಮ ಕಾಣಿಕೆ ನಮಗೆ ತಲುಪಿದೆ ಎಂದು ತಿಳಿಸಿ ಮತ್ತೇ ಅವರಿಗೇ ಹಿಂದಿರುಗಿಸಿ ಪ್ರಜೆಗಳಿಗೆ ರಾಜಾ ಭಾರವಾಗಬಾರದು ಎಂದು ಹೇಳುತ್ತಿದ್ದರಂತೆ.

ಇದರ ಜೊತೆ ಇನ್ನೂ ಅನೇಕ ಪ್ರಸಂಗಗಳನ್ನು ಸುಲಲಿತವಾಗಿ ಅರಳು ಹುರಿದಂತೆ ಶ್ರೀ ಧರ್ಮೇಂದ್ರವರವು ಹೇಳುತ್ತಿದ್ದರೆ ಸಮಯ ಹೋದ್ದದ್ದೇ ಗೊತ್ತಾಗಲಿಲ್ಲ. ಆದರೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಒಂದಷ್ಟು ನಿರ್ಧಾರಿತ ಸಮಯ ಇರುವುದರಿಂದ ಆಯೋಜಕರ ಒತ್ತಾಯದ ಮೇರೆಗೆ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಗಿಸಲೇ ಬೇಕಾಯಿತು. ಕಾರ್ಯಕ್ರಮದ ಅಂತ್ಯದ ಪ್ರಶ್ನೋತ್ತರದ ಸಮಯದಲ್ಲಿ ಇಷ್ಟೆಲ್ಲಾ ಕೊಡುಗೆಗಳನ್ನು ನೀಡಿದ ನಮ್ಮ ಮೈಸೂರು ರಾಜ ಮಹಾರಾಜರುಗಳನ್ನು ಇಂದಿನ ಯುವಜನಗೆ ಏಕೆ ನೆನಸಿಕೊಳ್ಳುತ್ತಿಲ್ಲಾ? ರಾಜರು ಏನು ಮಾಡಿದರು ಎಂದು ಉದ್ಧಟನದಿಂದ ಇಂದಿನ ರಾಜಕೀಯ ನಾಯಕರು ಏಕೆ ಕೇಳುತ್ತಾರೆ ಎಂಬ ಪ್ರಶ್ನೆಗೆ ಬಹಳ ನೋವಿನಿಂದಲೇ ಉತ್ತರಿಸಿದ ಧರ್ಮೇಂದ್ರರವರು ಮೈಸೂರು ರಾಜರ ಕೊಡುಗೆಗಳನ್ನು ನೆನೆಸಿಕೊಳ್ಳುವುದಕ್ಕೂ ಜನ ಹಿಂದೂ ಮುಂದು ನೋಡುತ್ತಿರುವುದು ನಿಜಕ್ಕೂ ದುಖಃಕರ. ಅದು ಅಕ್ಷಮ್ಯ ಅಪರಾಧ ಮತ್ತು ರಾಜಮನೆತನಕ್ಕೆ ಮಾಡಿದ ಅವಮಾನ ಎಂದೇ ಪರಿಗಣಿಸಬೇಕು ಎಂದರು. ಅದೇ ಕಾರಣಕ್ಕಾಗಿಯೇ ಸುಮಾರು 18 ವರ್ಷಗಳ ಕಾಲ ಮಧ್ಯಪ್ರಾಚ್ಯದೇಶಗಳಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂದಿರುಗಿದ ನಂತರ ಮೈಸೂರಿನಲ್ಲಿ ಹುಟ್ಟಿ ರಾಜಮನೆತನ ಮತ್ತು ಅರಮನೆಯ ಪರಿಸರದಲ್ಲಿಯೇ ಬೆಳೆದ ನಾನು ಈ ಇತಿಹಾಸವನ್ನು ಇತರರಿಗೆ ತಿಳಿಸದಿದ್ದಲ್ಲಿ ಅದು ದೇಶದ್ರೋಹಕ್ಕೆ ಸಮಾನ ಎಂದು ಪರಿಗಣಿಸಿ ಕಳೆದ ಐದು ವರ್ಷಗಳಿಂದ ಮೈಸೂರಿನ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅದಕ್ಕೆ ಅಗತ್ಯವಿರುವ ದಾಖಲೆ ಮತ್ತು ಪುರಾವೆಗಳನ್ನು ಸಂಗ್ರಹಿಸಿ ಜನರ ಮುಂದಿಡುವ ಕಾಯಕವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಈ ಬಾರಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಶ್ರೀಕಂಠ ಬಾಳಗಂಚಿಯವರು ಮಾಡಿದರೆ, ಶ್ರೀಯುತ ಜಯಂತ್ ಅವರ ನೇತೃತ್ವದಲ್ಲಿ ಬಂದಿದ್ದವರೆಲ್ಲರ ಜೊತೆಗೆ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಕಾರ್ಯಕ್ರಮ ವಿರಳ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದು ಹನ್ನೇರಡನೇ ಆವೃತ್ತಿಯಾಗಿದ್ದರಿಂದ ಇಂದಿನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಯೋಜಿಸಬೇಕು ಎಂದು ನಿರ್ಧರಿಸಲಾಗಿತ್ತು. ಕಾಕತಾಳೀಯವೋ ಎನ್ನುವಂತೆ ಮೈಸೂರಿನ ದಿವಾನರಾಗಿ ಮೈಸೂರಿನ ಸಂಸ್ಥಾನಕ್ಕೆ ಅತ್ಯಂತ ಹೆಚ್ಚಿನ ಕೊಡುಗೆ ನೀಡಿದ್ದಂತಹ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟಿದ ದಿನವೂ ಇಂದೇ ಆಗಿದ್ದರಿಂದ ಅವರ ಕಾರ್ಯಗಳನ್ನೂ ಇಂದಿನ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು ಮತ್ತು ಅವರ ಕೆಲಸಗಳಿಗೆ ಜೋರಾದ ಕರತಾಡನದ ಮೂಲಕ ಅಭಿನಂದನೆಯನ್ನೂ ಸಲ್ಲಿಸಲಾಯಿತು. ಸಾಧಾರಣವಾಗಿ ಒಂದು ಅಥವಾ ಒಂದೂ ಕಾಲು ಗಂಟೆಯಷ್ಟು ಇರುತ್ತಿದ್ದ ನಮ್ಮ ಕಾರ್ಯಕ್ರಮ ಈ ಬಾರಿ ಒಂದುವರೆ ಗಂಟೆ ದಾಟಿದ್ದರೂ ಕೇಳುವವರಿಗಾಗಲೀ, ವಕ್ತಾರರಿಗಾಗಲೀ ಒಂದೂ ಚೂರೂ ದಣಿವಾಗದೇ ಸಾಗುತ್ತಿದ್ದದ್ದು ಇಂದಿನ ಕಾರ್ಯಕ್ರಮದ ಗುಣಮಟ್ಟದ ದ್ಯೋತವಾಗಿತ್ತು. ಮೈಸೂರಿನ ಇತಿಹಾಸ ಹೇಳಲು ಮತ್ತು ಕೇಳಲು ಒಂದೆರಡು ಗಂಟೆಗಳು ಸಾಲದ ಕಾರಣ, ಇದೇ ಕಾರ್ಯಕ್ರಮದ ಮುಂದುವರಿದ ಭಾಗ ಮತ್ತೊಮ್ಮೆ ನಡೆಸುತ್ತೇವೆ ಎಂದು ಆಯೋಜಕರ ಆಶ್ವಾಸನೆಯ ಮೇರೆಗೆ ಕಾರ್ಯಕ್ರಮವನ್ನು ಮುಗಿಸಲಾಯಿತು. ಕಾರ್ಯಕ್ರಮ ಮುಗಿದ ನಂತರ ಧರ್ಮೇಂದ್ರ ಅವರ ಮರೆತು ಹೋದ ಮೈಸೂರಿನ ಪುಟಗಳು ಪುಸ್ತಕದ ಮಾರಾಟದ ವ್ಯವಸ್ಥೆ ಮಾಡಲಾಗಿ ಅವುಗಳು ಬಿಸಿಬಿಸಿ ದೋಸೆಯಂತೆ ಹಲವಾರು ಪ್ರತಿಗಳು ಮಾರಾಟವಾಗಿದ್ದು ಇಂದಿನ ಕಾರ್ಯಕ್ರಮದ ವಿಶೇಷವಾಗಿತ್ತು.

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಇನ್ನೂ ಕೆಲವೇ ವಾರಗಳಲ್ಲಿ ಬರುವ ದಸರಾ ಹಬ್ಬದಲ್ಲಿ ರಾಜರ ಪಟ್ಟಾಭಿಷೇಕದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುವಾಗ ನಮ್ಮ ಮೈಸೂರು ರಾಜರನ್ನು ಮತ್ತವರ ಕೊಡುಗೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡೋಣ. ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗ ಬೇಕಾದರೇ ಸಭಿಕರ ಪಾಲ್ಗೊಳ್ಳುವಿಯ ಪಾತ್ರ ಬಹಳ ಮುಖ್ಯವಾಗಿರುವುದರಿಂದ ದಯವಿಟ್ಟು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ಇಬ್ಬರನ್ನು ಮುಖತಃ ಸಂಪರ್ಕಮಾಡಿ ಕಾರ್ಯಕ್ರಮಕ್ಕೆ ಕರೆದು ಕೊಂಡು ಬರುವಂತೆ ಸಂಕಲ್ಪಮಾಡೋಣ. ಮತ್ತೆ ಮುಂದಿನ ತಿಂಗಳ ಮೂರನೆಯ ಭಾನುವಾರ ಇನ್ನೂ ಹೆಚ್ಚಿನ ಜನರೊಂದಿಗೆ ಇದೇ ಮಂಥನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.

ಏನಂತೀರೀ?

ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ವಿದ್ಯಾರಣ್ಯಪುರ ಮಂಥನದ  ಹನ್ನೊಂದನೆಯ ಆವೃತ್ತಿ  ನಿಗಧಿಯಾಗಿದ್ದಂತೆ, ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ  ಶ್ರೀ  ಶ್ರಿಕಂಠ ಬಾಳಗಂಚಿ (ಹವ್ಯಾಸಿ ಬರಹಗಾರರು, https://enantheeri.com) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯುತ್ತಾರೆ.’ಸನಾತನ’ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ. ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದವಾಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಇದು ಎಂದು ಪರಿಗಣಿಸಲ್ಪಡುತ್ತಿದೆ.

ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಂ,ಬೌದ್ಧ,ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ,ಒಂದು ಸಮುದಾಯದ ಹೆಸರಾಗಿದೆ.ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು,ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ.

ಯಾವುದೇ ಒಂದು ಧರ್ಮ  ಅಥವಾ ಪಂಗಡ ಬೆಳೆಯುವುದು ಒಂದು  ನದೀ ಪಾತ್ರದ ಸುತ್ತ ಮುತ್ತಲೇ.  ಅದೇ ರೀತಿ ಊರುಗಳಲ್ಲಿಯೂ ಹಿಂದಿನ ಕಾಲದಲ್ಲಿ ಒಂದು ಕೆರೆ ಕಟ್ಟೆ ಭಾವಿಗಳನ್ನು ಗಿರಕಿ ಹೊಡೆಯುತ್ತಲೇ ಊರು ಬೆಳೆಯುತ್ತಿತ್ತು  ಮತ್ತು ಅಲ್ಲಿನ ಹವಾಮಾನದ ಅನುಗುಣವಾಗಿ ಅಲ್ಲಿನ ಆಚಾರ ವಿಛಾರ ಪದ್ದತಿಗಳು ರೂಢಿಯಲ್ಲಿ ಬಂದವು

ಇಂದಿನ ವಿಷಯ ನೋಡಲು ಅತ್ಯಂತ ಸರಳವಾಗಿ ಕಂಡರೂ ಅದನ್ನು ಅರಿವು ಮಾಡಿಕೊಳ್ಳಲು ಒಳಹೊಕ್ಕಂತೆಲ್ಲಾ ಅಗಾಧವಾದ ಆಲದ ಮರದಂತಿದೆ. ಹಾಗಾಗಿ ಅದನ್ನು ಸರಳವಾಗಿ ಒಂದು ದಿನದ ಆರಂಭದಿಂದ ಹಿಡಿದು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಊಟ ಮಾಡಿ ಮಲಗುವ ವರೆಗಿನ  ಆಚಾರ ಪದ್ದತಿಗಳು ಅಂದು ಹೇಗಿದ್ದವು ಮತ್ತು ಇಂದು ಹೇಗಿದೆ  ಎಂಬುದನ್ನು ಒಮ್ಮೆ ಮೆಲಕು ಹಾಕೋಣ.

ಒಂದು ದಿನನಲ್ಲಿ ನಡೆತ್ತಿದ್ದ ಪ್ರತಿಯೊಂದು ಪ್ರಕ್ರಿಯೆಗಳು ಮತ್ತು ಅದರ ಮಹತ್ವವೇನು  ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಕಾರಣಗಳು ಏನಿರಬಹುದು ಎಂದು ತಿಳಿಯೋಣ.

ಸೂರ್ಯ ಬದುಕಿನ ಚೇತನ.  ಸೂರ್ಯನ ಬೆಳೆಕಿನಿಂದಲೇ ಜಗ ಬೆಳಗುವುದು ಮತ್ತು ಸಕಲ ಜೀವರಾಶಿಗಳಿಗೆ ಶಕ್ತಿ ಒದುಗುವುದು

ಅಂತಹ ಸೂರ್ಯ ಮೂಡಣದಲ್ಲಿ ಉದಯವಾಗುವ  ಹೊತ್ತಿಗೆ ಮೆನೆಯಲ್ಲಿ ಮೊದಲು ಏಳುವವಳೇ ಆ ಮನೆಯ ಒಡತಿ ಮಹಾ ತಾಯಿ.

ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಅತ್ಯಂತ ಗೌರವ ಮತ್ತು ಎತ್ತರದ ಸ್ಥಾನಮಾನವನ್ನು ನೀಡಿದ್ದೇವೆ. ಇಂದು ಲೋಕವೆಲ್ಲಾ ಮಹಿಳಾ ಸಬಲೀಕರಣ,  ಮಹಿಳೆಯರು ಮತ್ತು ಪುರುಷರು ಸರಿಸಮಾನರು ಎಂದು ವಾದ ಮಾಡುತ್ತಲೇ ಇದ್ದರೇ ನಾವು ಅಂದಿನ ಕಾಲದಲ್ಲಿಯೇ  ಆಕೆಯನ್ನು ಶಕ್ತಿ ದೇವತೇ ಎಂದೇ ಸಂಭೋದಿಸಿದ್ದೇವೆ. ಪ್ರತಿಯೊಂದು ಬಾರಿ ದುಷ್ಟ ಶಿಕ್ಷಣವಾಗಬೇಕಾದರೂ ನಾವು ದೇವಿಯನ್ನೇ ಅವಲಿಂಭಿಸಿದ್ದೇವೆ. ಉದಾ:  ರಾಕ್ಷಸ ಮಹಿಷನನ್ನು ಸಂಹರಿಸಲು  ತಾಯಿ ದುರ್ಗೆ ಮಹಿಷಾಸುರ ಮರ್ಧಿನಿಯ ರೂಪ ತಾಳಿದಳು.

ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ.

ಅದೇ ರೀತಿ ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ಸ್ತ್ರೀಯನ್ನು ದೂಷಣೆ ಮಾಡಿದ್ದಲ್ಲಿ ಸಮಾಜದ ನಾಶ ಕಾಣಬಹುದು ಎಂದು ಎಚ್ಚರಿಸಿದ್ದಾರೆ ನಮ್ಮ ಹಿರಿಯರು. ಇಡೀ ರಾಮಾಯಣ ಮತ್ತು  ಮಹಾಭಾರತದ ಯುದ್ಧ ನಡೆದದ್ದೇ ಸ್ರೀಯನ್ನು ದೂಷಣೆ ಮಾಡಿರುವುದಕ್ಕೆ . ಇಡೀ ರಾಮಾಯಣ ಕಾರಣವಾಗಿದ್ದೇ ಸೀತಾಪರಣ ಅದೇ ರೀತಿ ಮಹಾಭಾರತದ ಕುರುಕ್ಷೇತ್ರ ನಡೆದದ್ದೇ ದ್ರೌಪತಿಯ ವಸ್ತ್ರಾಭರಣದ ಸೇಡನ್ನು ತೀರಿಸಿಕೊಳ್ಳಲು ಎಂಬುದು ಗಮನಾರ್ಯವಾಗಿದೆ

ಅಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದಳು ಮತ್ತು ಆ ಮನೆಯ ಸಂಪತ್ತಿನ   ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು . ನಾವೆಲ್ಲಾ ಗಮನಿಸಿರಬಹುದು  ಮನೆಯ ತಿಜೋರಿಯ ಕೀಲಿಗಳು  ಹೆಂಗಸರ ಸೆರಗಿನಲ್ಲಿಯೇ ಭದ್ರವಾಗಿರುತ್ತಿದ್ದವು.  ಅದು ತಲಾತಲಾಂತರದಿಂದ ಅತ್ತೆಯಿಂದ ಸೊಸೆಗೆ ಹಸ್ತಾಂತರವಾಗುತ್ತಿತ್ತೇ ವಿನಃ ಅದರ ಮಧ್ಯೆ ಪುರುಷರ ಪಾತ್ರವೆಲ್ಲಾ ಗೌಣವಾಗಿರುತ್ತಿತ್ತು.

ಅಂತಹ ತಾಯಿ  ಸೂರ್ಯ ಉದಯಿಸುವ ಮೊದಲೇ ಎದ್ದು  ಬಲ ಪಕ್ಕಕ್ಕೆ ಹೊರಳಿ ಎದ್ದು ಎರಡೂ ಕೈಗಳನ್ನೂ ಉಜ್ಜಿ ನೋಡಿ ಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರ ದರ್ಶನಂ ಎಂದು ಸಕಲ ದೇವಿಯರನ್ನು ಪ್ರಾರ್ಥನೆ ಮಾಡಿಕೊಂಡೇ  ಏಳುತ್ತಾಳೆ.

ಆದರೆ  ಇಂದು  ಬಹುತೇಕರು ಮಲಗುವ ಮುನ್ನ ಹಾಸಿಗೆಯ ಪಕ್ಕದಲ್ಲೇ ಮೊಬೈಲ್ ಚಾರ್ಜ್ ಹಾಕಿಟ್ಟು ಎದ್ದ ಕೂಡಲೇ  ದೇವರನ್ನು ನೆನೆಯುವುದೋ ಇಲ್ಲವೇ ನೋಡುವುದಿರಲಿ,  ಫೇಸ್ ಬುಕ್ ಮತ್ತು ವ್ಯಾಟ್ಸಾಪ್ ಇಲ್ಲವೇ ಇನ್ಸ್ತಾಗ್ರಾಮ್ ನೋಡಿಯೇ  ಏಳುತ್ತಿರುವುದು ನಿಜಕ್ಕೂ ದುಃಖಕರ

ನಮಗೆಲ್ಲಾ ತಿಳಿದಿರುವಂತೆ ನಮ್ಮ ಹೃದಯ ಎಡಭಾಗದಲ್ಲಿರುತ್ತದೆ ಮತ್ತು ಮಲಗಿರುವ ಸಮಯದಲ್ಲಿ ಇಡೀ ದೇಹ ಸುಮಾರು ಏಳೆಂಟು ಗಂಟೆ  ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಒಮ್ಮೆಲ್ಲೆ ಎಡಭಾಗದಲ್ಲಿ ಎದ್ದರೆ ಅನಗತ್ಯವಾಗಿ ಹೃದಯದ ಮೇಲೆ ಭಾರ ಹಾಕಬಾರದು ಮತ್ತು  ಅದರಿಂದ ಹೃದಯಕ್ಕೆ ಧಕ್ಕೆಯಾಗವಾದೆನ್ನುವ  ಕಾರಣ ಬಲ ಭಾಗದಲ್ಲಿ ಎದ್ದು ಎರಡೂ ಕೈಗಳನ್ನು ಪರಸ್ಪರ ಉಜ್ಜಿ ಶಾಖವನ್ನು ಉತ್ಪತ್ತಿಸಿ ಅದನ್ನು ಮುಖ ಮತ್ತು ಎರಡೂ ಕಿವಿಗಳ ಮೇಲೆ ಒತ್ತಿಕೊಂಡು ಕೆಲಸ ಆರಂಭಿಸುತ್ತೇವೆ

ಬೆಳಗಿನ ಶೌಚ ಕಾರ್ಯಕ್ರಮಗಳನ್ನು ಮುಗಿಸಿ ಕೂಡಲೇ ಬರುವುದೇ ಮನೆಯ ಮುಂಬಾಗದ ಸ್ವಚ್ಚತೆಗಾಗಿ. ಸಾಧಾರಣವಾಗಿ ಮನೆ ಹೇಗಿಟ್ಟುಕೊಂಡಿದ್ದಾರೆ ಎಂದು ಯಾರಾದರೂ ವಿಚಾರಿಸಿದರೆ,   ಮನೆ ಒಳ್ಳೇ ಕನ್ನಡಿ ಇಟ್ಟು ಕೊಂಡ ಹಾಗೆ ಇಟ್ಟು ಕೊಂಡಿದ್ದಾರೆ ಎನ್ನುವುದು ವಾಡಿಕೆ. ಕನ್ನಡಿ ನಮ್ಮ ಪ್ರತಿಬಿಂಬವನ್ನು ಸೂಚಿಸುತ್ತದೆ, ನಾವು ಹೇಗಿರುತ್ತೇವೆಯೋ ಅದನ್ನು  ಯಥಾವತ್ತಾಗಿ ತೋರಿಸುವುದೇ ಕನ್ನಡಿ ಅದರಲ್ಲಿ ಯಾವ ಮುಚ್ಚುಮರೆ ಇರುವುದಿಲ್ಲ ಹಾಗಾಗಿ ಕನ್ನಡಿ ಮುಂದೆ ಹೋದೊಡನೆಯೇ ಎಲ್ಲರೂ ತಮ್ಮ ಮುಖವನ್ನು ಆದಷ್ಟು ತಿದ್ದಿ ತೀಡಿ ಕೊಳ್ಳುತ್ತೇವೆ ಅಂತೆಯೇ ಮನೆಯನ್ನೂ ಸಹಾ ಚೆನ್ನಾಗಿ  ಗುಡಿಸಿ ಯಾವುದೇ ಕಸಕಡ್ಡಿಗಳು ಇಲ್ಲದಂತೆ ತೆಗೆದು ಅದಕ್ಕೆ ಸಗಣಿಯಿಂದ ಸಾರಿಸುತ್ತಿದ್ದರು. ಗೋಮೂತ್ರ ಮತ್ತು ಗೋಮಯ ಒಂದು ರೀತಿಯ ಕೀಟನಾಶಕಗಳು ಹಾಗಾಗಿ ಮನೆಗೆ ಯಾವುದೇ ಕೀಟನಾಶಕಗಳು ಬಾರದಂತೆ ನೈಸರ್ಗಿಕವಾಗಿಯೇ ತಡೆಯುತ್ತಿದ್ದೆವು.

ತಮಾಷಿಗಾಗಿ ಹೇಳಬೇಕೆಂದರೆ ಮುಸಲ್ಮಾನರ ಮನೆಯ ಮುಂಭಾಗ ಮತ್ತು  ಹಿಂದೂಗಳ ಮನೆಯ ಹಿಂಭಾಗ ನೋಡುವುದಕ್ಕೆ ಹೋಗಬಾರದಂತೆ. ಏಕೆಂದರೆ ಎರಡೂ ಪರಮ ಗಲೀಜಿನ ಸ್ಥಳ ವಾಗಿರುತ್ತದೆ ಎನ್ನುವುದು ಕೆಲವರ ಅಂಬೋಣ.

ಇನ್ನು ರಂಗೋಲಿ. ಅದನ್ನು ರಂಗ ನೀ ಒಲಿ ಎಂದೂ ಅರ್ಥೈಸುತ್ತಾರೆ.  ಇದು ಮಹಿಳೆಯರ ಸೃಜನಶೀಲತೆಯನ್ನು ಎತ್ತಿ ತೋರಿಸುವ ಸಾಧನವೇ ಹೌದು. ನಾವೆಲ್ಲರೂ ಸುಮ್ಮನೆ ಹೋಗುವಾಗ ಯಾರ ಮನೆಯ ಮುಂದಾದರೂ ರಂಗೋಲಿ ಚೆನ್ನಾಗಿದ್ದಾಗ ವಾಹ್!! ಎಷ್ಟು ಚೆನ್ನಾಗಿ ರಂಗೋಲಿ ಹಾಕಿದ್ದಾರೆ ಎಂದು ಪ್ರಶಂಸಿಸುತ್ತೇವೆ. ಅಂದರೆ  ಅದು ಆ ಮನೆಯಲ್ಲಿರುವ ಹೆಂಗಸು ಅತ್ಯಂತ ಸೃಜನ ಶೀಲೆ ಮತ್ತು ಕಲಾವಂತಿಕೆ ತಿಳಿಯುತ್ತಿತ್ತು. ಹಾಗೆ ಮನೆಯ ಸುತ್ತಲೂ ಸಾರಣೆ ಸಾರಿಸುವುದು ಎಂದರೆ ಬಣ್ಣ ಬಣ್ಣದರೀತಿಯಲ್ಲಿ ಅಲಂಕಾರ ಮತ್ತು ಆಕೃತಿಗಳನ್ನು ಬಿಡಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತಿದ್ದರು.

ಇನ್ನು ಇಂದಿನ ರೀತಿಯಾಗಿ ರಂಗೋಲಿ ಮಣ್ಣನ್ನು ಬಳೆಸದೇ, ಅಂದು  ರಂಗೋಲಿಗೆ ಬಳೆಸುತ್ತಿದ್ದದ್ದು ಅಕ್ಕಿಯ ಹಿಟ್ಟು. ಈ  ಅಕ್ಕೀ ಹಿಟ್ಟು  ಪಕ್ಷಿಗಳು ಮತ್ತು ಕ್ರಿಮಿಕೀಟಗಳಿಗೆ ಆಹಾರವಾಗುತ್ತಿದ್ದಲ್ಲದೇ, ಅವುಗಳು ಅದನ್ನು ಅಲ್ಲಿಯೇ ತಿಂದು ಮನೆಯ ಒಳಗೆ ಪ್ರವೇಶಿಸುತ್ತಿರಲಿಲ್ಲ.

ಹಾಗೆ ರಂಗೋಲಿ ಇಟ್ಟು  ಮನೆಯೊಳಗೆ ಪ್ರವೇಶಿಸಲು ಮುಂಬಾಗಿಲ ಹೊಸ್ತಿಲನ್ನು ತಲೆ ಬಾಗಿಸಿ ಕೊಂಡು ದಾಟಬೇಕಿತ್ತು. ಅಂದೆಲ್ಲಾ ಬಾಗಿಲ ಎತ್ತರವನ್ನು ಕೇವಲ ಐದು ಅಡಿಗಳಷ್ಟು ಇದ್ದು  ಮನೆಗೆ ಬರುವವರೆಲ್ಲರೂ ತಗ್ಗೀ ಬಗ್ಗೀ ಬರಬೇಕು ಎಂಬುದಾಗಿತ್ತು. ಅದೇ ರೀತಿ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಿರಲಾಗುತ್ತಿತ್ತು.  ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ  ಇಂಗಾಲದ ಡೈಆಕ್ಸೈಡನ್ನು  ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.  ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು  ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ  ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ  ಮಂಟಪದ ಸುತ್ತಮುತ್ತಲೂ  ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ   ಮಾವಿನ ಎಲೆಯನ್ನೇ  ತೋರಣವನ್ನಾಗಿ ಏಕೆ  ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.  ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.

ಇನ್ನು  ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ  ಮಾವಿನ ತೋರಣ ಕಟ್ಟುವುದರಿಂದ  ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.  ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು  ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.

ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ  ಬೇವಿನ ಸೊಪ್ಪಿನ ಎಲೆ ಅಥವಾ  ಟೊಂಗೆಗಳನ್ನು ಸಿಕ್ಕಿಸುವುದರಿಂದ,  ಮಾವು ಮತ್ತು ಬೇವಿನ ಎಲೆಯಲ್ಲಿ  ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ,  ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ  ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ   ಇರುವಂತೆ  ಮಾಡಿ, ಅವುಗಳು  ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.

ಇನ್ನು ಹೆಂಗಸರು ಈ ರೀತಿಯಾಗಿ ಮನೆ ಶುದ್ಧೀಕರಣ ಮಾಡುತ್ತಿದ್ದರೆ,  ಮನೆಯ ಗಂಡಸರು ತಮ್ಮ ಪ್ರಾಥರ್ವಿಧಿ ಮುಗಿಸಿ ಕೊಟ್ಟಿಗೆಗೆ ಹೋಗಿ ಸಗಣಿಯನ್ನು ಬಾಚಿ  ಅಲ್ಲೇ ಪಕ್ಕದಲ್ಲಿಯೇ ಇರುತ್ತಿದ್ದ  ತಿಪ್ಪೆಗೆ ಹಾಕಿ ಅದು ಮುಂದೇ ಗೊಬ್ಬರವಾಗುತ್ತದೆ. ಹೆಗಲಿನ ಮೇಲೆ ನೇಗಿಲು ಹೊತ್ತಿಕೊಂಡು ಕೃಷಿ ಪರಿಕರಗಳನ್ನೂ ತೆಗೆದುಕೊಂಡು ಎತ್ತುಗಳನ್ನು ಹೊಡೆದುಕೊಂಡು ತಮ್ಮ ಕೃಷಿ ಭೂಮಿಗೆ ಕೆಲಸ ಮಾಡಲು ಹೋಗುತ್ತಾರೆ. ಸೂರ್ಯನ ಝಳ ಹೆಚ್ಚಾಗುವ ಮುಂಚೆ ಬೆವರು ಸುರಿಯುವಷ್ಟು ದುಡಿಯುತ್ತಾರೆ. ಹಾಗಾಗಿ ಅವರೆಲ್ಲರೂ ಗಟ್ಟಿ ಮುಟ್ಟಾಗಿರುತ್ತಿದ್ದರು ಮತ್ತು ದೀರ್ಘಕಾಲ ಬಾಳಿ ಬಳುಕುತ್ತಿದ್ದರು. ಆದರೆ ಈಗ ಅದೇ ಜನಾ ಜಿಮ್ ಎಂದು ಒಂದೆರಡು ಗಂಟೆ ಬೆವರು ಸುರಿಸುತ್ತಾರೆ  ಅದರಿಂದ ದೇಹ ದಣಿವಾಗಬಹುದೇ ಹೊರತು ಇನ್ನೇನು ಪ್ರಯೋಜನವಾಗದು.

ಹೆಂಗಸರು ಹಸನಾಗಿ ಹಾಲು ಕರೆದು ನಂತರ ಸ್ನಾನ ಮಾಡಿ ಮನೆಯ ದೇವರಿಗೆ ಮತ್ತು ಮನೆಯ ಮುಂದಿನ ತುಳಸೀ ಕಟ್ಟೆಗೆ ಪೂಜೆ ಮಾಡಿ  ಅಡುಗೆ ಕಾರ್ಯದಲ್ಲಿ ಮಗ್ನರಾದರೆ, ಮನೆಯ ಇತರೇ ಹೆಣ್ಣು ಮಕ್ಕಳು ಅಂದಿನ ಅಡುಗೆ ಕೆಲಸಕ್ಕೆ ಬೇಕಾದ ತರಕಾರಿಗಳನ್ನು ತಮ್ಮ ಮನೆಯ ಹಿತ್ತಲಿನಿಂದಲೇ ತಂದು ಬಳಸುತ್ತಿದ್ದರು  ಆ ಹಿತ್ತಲು ಎಂತಹದ್ದು ಎಂದರೆ ಮನೆಯಲ್ಲಿ ಸ್ನಾನ ಮಾಡಿದ ನೀರು ಪಾತ್ರೆ ತೋಳೆದ ನೀರು ಸುಮ್ಮನೆ ಪೋಲಾಗದೇ ನೇರವಾಗಿ ಮನೆಯ ಹಿಂದಿನ  ತೋಟದಲ್ಲಿದ್ದ ಹೂವು ಹಣ್ಣುಗಳು ಮತ್ತು ತರಕಾರಿ ಗಿಡಗಳಿಗೆ ನೀರು ಉಣಿಸುತ್ತಿತ್ತು.  ಇಂದು ನಾವೆಲ್ಲಾ ನೀರು ಪೋಲು ಮಾಡಬೇಡಿ. ನೀರನ್ನು ಸದ್ಬಳಕೆ ಮಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ನಮ್ಮ ಪೂರ್ವಜರು ಅದನ್ನಾಗಲೇ ಮಾಡಿ ತೋರಿಸಿಯೇ ಬಿಟ್ಟಿದ್ದರು.

ನನಗೇ ತಿಳಿದ ಮಟ್ಟಿಗೆ  ಬಹಳ ಇತ್ತೀಚಿನ ದಿನಗಳ ವರೆಗೂ ಬಾಳೇ ದಿಂಡು, ಬಾಳೇ ಹೂ, ಸೀಮೇ ಬದನೇ ಕಾಯಿ, ಕುಂಬಳಕಾಯಿ, ಕರಿಬೇವಿನ ಸೊಪ್ಪು, ವಿಳ್ಳೇದೆಲೆ,  ಪರಂಗೀ ಹಣ್ಣುಗಳನ್ನು  ನಾವು ಕೊಂಡು ತಿಂದ ನೆನಪೇ ಇಲ್ಲಾ. ಒಂದೋ ನಮ್ಮ ಮನೆಯ ಹಿತ್ತಲಿನಲ್ಲಿಯೇ ಬೆಳೆಯುತ್ತಿತ್ತು  ಇಲ್ಲವೇ ಬೆಳೆದವರು ಯಾರೋ ಮಹಾನುಭಾವರು ಕೊಡುತ್ತಿದ್ದರು.

ಮನೆಯ  ಉಳಿದ ಹಂಗಸರೂ ಶುಚಿವಂತರಾಗಿ ಮನೆಯ ಮುಂದಿನ ಭಾವಿಯಿಂದಲೂ ಇಲ್ಲವೇ  ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ತಲೆ ಮೇಲೆ ಎರಡು, ಸೊಂಟದಲ್ಲಿ ಒಂದು ಮತ್ತೊಂದು ಕೈಯಲ್ಲಿ ಒಂದು ಬಿಂದಿಗೆ ಇಲ್ಲವೇ ಕೊಡದ ತುಂಬಾ ನೀರು ತುಂಬಿ ಕೊಂಡು ತರುತ್ತಿದ್ದರು.  . ಮನೆಯಲ್ಲಿ ಅಡುಗೆಗೆ  ಬಳೆಸಿದ ನಂತರ ಉಳಿದ ಹುಣಸೇ ಹಣ್ಣಿನ ಗಷ್ಟಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದ ತಾಮ್ರದ ಇಲ್ಲವೇ ಹಿತ್ತಾಳೆ ಬಿಂದಿಗಳು ಫಳ ಫಳನೆ ಹೊಳೆಯುತ್ತಿದ್ದವು. ಹಾಗಾಗಿ ಅಂದಿನ ಬಹುತೇಕ ಹೆಣ್ಣು ಮಕ್ಕಳು ಸಣ್ಣಗೆ ತಳುಕು ಬಳುಕುವ ಹಾಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೇ ಬದುಕುತ್ತಿದ್ದರು. ಮಲೆನಾಡ ಹೆಣ್ಣ ಮೈ ಬಣ್ಣ. ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ.  ಎನ್ನುವ ಜನಪ್ರಿಯ ಗೀತೆಯೇ ಇದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ  ಸುಮಾರು ಏಳೆಂಟು ಗಂಟೆ ಆ ಹೊತ್ತಿಗೆ ಮಕ್ಕಳನ್ನು ಎಬ್ಬಿಸಿ ಅವರ ಪ್ರಾಥರ್ವಿಧಿ ಮುಗಿಸಿ ಸ್ನಾನ ಮಾಡಿಸುತ್ತಿದ್ದರು. ಹಾಗೆ ಸ್ನಾನ ಮಾಡುವಾಗ  ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಯೇ ಸ್ನಾನ ಮಾಡಿಸುತ್ತಲೇ, ಭಾರತದ ಅಷ್ಟೂ ನದಿಗಳ ಪರಿಚಯ ಆ ಮಗುವಿಗೆ ಬಾಲ್ಯದಲ್ಲೇ ಆಗುತ್ತಿದ್ದಲ್ಲದ್ದೇ ಅವುಗಳ ಮಹತ್ವ ಆ ಮಗುವಿಗೆ ತಿಳಿದಿರುತ್ತಿತ್ತು. ಕುತೂಹಲದಿಂದ  ಆ ನದಿಗಳ ಪಾತ್ರ ಮತ್ತು ಭೂಗೋಳದ ಪರಿಚಯ ಸುಲಭವಾಗಿ ಅಲ್ಲಿಂದಲೇ ಆಗಿ ಹೋಗುತ್ತಿತ್ತು

ಮಕ್ಕಳಿಗೆಲ್ಲಾ ಸಾಲಾಗಿ  ಕುಳಿತು ತಿಂಡಿ ಬಡಿಸಲಾಗುತ್ತಿತ್ತು. ಹಾಗೆ ಸಾಲಾಗಿ ಒಟ್ಟಿಗೆ ಊಟ ತಿಂಡಿ ಬಡಿಸುವಾಗ ಮಕ್ಕಳಿಗೆ ಸಹಪಂಕ್ತಿ ಭೋಜನದ  ಕಲ್ಪನೆ ಜೊತೆಗೆ ಹಂಚಿ ತಿನ್ನುವ ಅಭ್ಯಾಸವಾಗುತ್ತಿತ್ತು. ಓಂ ಸಹನಾವವತು| ಸಹನೌ ಭುನಕ್ತು| ಸಹ ವೀರ್ಯಂ ಕರವಾವಹೈ| ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವ ಹೈ| ಓಂ ಶಾಂತಿಃ ಶಾಂತಿಃ ಶಾಂತಿಃ||  ಜೊತೆಗೆ  ಅನ್ನಪೂರ್ಣೇ ಸದಾ ಪೂರ್ಣೇ, ಶಂಕರ ಪ್ರಾಣ ವಲ್ಲಭೇ. ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ. ಭಿಕ್ಷಾಂ ದೇಹಿ ಚ ಪಾರ್ವತಿ.” ಮಂತ್ರವನ್ನು ಎಲ್ಲರೂ ಒಟ್ಟಿಗೆ ಹೇಳಿಯೇ ಎದುರಿಗೆ ಪಾತ್ರೆಯಲ್ಲಿರುವ ಆಹಾರವನ್ನು ಎಲ್ಲರೂ ಸಮಾನಾಗಿ ಖುಷಿ ಖುಷಿಯಿಂದ ಹಂಚಿಕೊಂಡು ತಿನ್ನುವುದನ್ನು   ನೋಡುವುದೇ ಆನಂದ. ಇನ್ನು ಮಕ್ಕಳು ತುಂಬಾ ಇದ್ದರೆ   ಎಲ್ಲರನ್ನೂ ಒಟ್ಟಿಗೆ ಕಲೆ ಹಾಕಿ ಕೈ ತುತ್ತು ಕೊಟ್ಟು ತಿನ್ನಿಸುತ್ತಿದ್ದರು. ಹಾಗೆ ಕೈ ತುತ್ತು ತಿನ್ನಿಸುವಾಗ ತಾಯಿಯ ಮಮತೆಯ ಜೊತೆಗೆ ಮಕ್ಕಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆದು ಮಕ್ಕಳು ಒಂದೆರಡು ತುತ್ತು ಹೆಚ್ಚಾಗಿಯೇ ತಿನ್ನುತ್ತಿದ್ದರು.

ಆದಾದ ನಂತರ ಮಾಡಿದ ಅಡುಗೆಯನ್ನು ಬುತ್ತಿ ತೆಗೆದುಕೊಂಡು ಹೊಲ ಗದ್ದೆಗಳಿಗೆ ಹೋಗಿ ಅಲ್ಲಿ ದುಡಿದು ದಣಿವಾಗಿರುತ್ತಿದ್ದ ಮನೆಯ ಗಂಡಸರಿಗೆ ಊಟ ಬಡಿಸಿ ಅವರದ್ದಾದನಂತರ ತಾವೂ ಊಟ ಮಾಡಿ ಜೊತೆಗೆ ಕಷ್ಟ ಸುಖದ ವಿಚಾರ ವಿನಿಮಯಗಳನ್ನು ಮಾಡಿ ಮನಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಮಾರನೆಯ ದಿನಕ್ಕೆ ಬೇಕಾಗುವಷ್ಟು  ಅಕ್ಕಿಯನ್ನು  ಒರಳಿನಲ್ಲಿ ಭತ್ತ ಕುಟ್ಟಿ ಸಿದ್ದ ಪಡಿಸಿಕೊಳ್ಳುತ್ತಿದ್ದರು.   ಇಲ್ಲವೇ ಅಕ್ಕಿ, ರಾಗಿ ಮತ್ತು ಗೋದಿಯನ್ನು ಬೀಸುವ ಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುತ್ತಿದ್ದರು. ಹೀಗೆ ಕುಟ್ಟುವುದರಿಂದ ಮತ್ತು ಬೀಸುವುದರಿಂದ ಮಹಿಳೆಯರ ಆರೋಗ್ಯ ಚೆನ್ನಾಗಿದ್ದು ಯಾರೂ ಕೂಡಾ ಬೆನ್ನು  ಅಥವಾ ಸೊಂಟ ಅಥವಾ  ಹರ್ನಿಯಾ ತೊಂದರೆಯಿಂದ  ಬಳಲುತ್ತಿರಲಿಲ್ಲ,

ಆದರೆ ಇಂದು ಒರಳು ಕಲ್ಲು  ಮತ್ತು ಬೀಸೋ ಕಲ್ಲು ಮದುವೆ ಮುಂಜಿಗಳಿಗೆ ಶಾಸ್ತ್ರಕ್ಕೆ ಯಾರಮನೆಯಿಂದಲೂ ಎರವಲು ಪಡೆದುಕೊಂಡು ಶಾಸ್ತ್ರ ಮುಗಿಸಿದ ನಂತರ  ಹಿಂದಿರುಗಿಸುವ ಶಾಸ್ತ್ರಕಷ್ಟೇ ಸೀಮಿತವಾಗಿದೆ. ಇಂದು ಎಲ್ಲದ್ದಕೂ ಮಿಕ್ಸಿ ಗ್ರೈಂಡರ್ ಬಳಕೆ ಹೆಚ್ಚಾಗಿದೆ, ನಿಜಕ್ಕೂ ಹೇಳ್ತೀನಿ ನಮ್ಮ ಊರಿನ ಮನೆಯಲ್ಲಿರುವ ಒರಳು ಕಲ್ಲಿನಲ್ಲಿ ರುಬ್ಬಿದ ಕಾಯಿ ಚೆಟ್ನಿಯ  ರುಚಿಯೇ ಬೇರೆ ಮತ್ತು ಅದೂ ಎರಡು ದಿನ ಇಟ್ಟರೂ ಕೆಡುತ್ತಿರಲಿಲ್ಲ ಆದರೆ ಇಂದಿನ ಮಿಕ್ಸಿ ಯಲ್ಲಿ ರುಬ್ಬಿದ ಚೆಟ್ನಿ ಬಿಸಿಯಾಗಿ ಹೋಗಿ ಮಧ್ಯಾಹ್ನ ಇಲ್ಲವೇ ಸಂಜೆ ಹೊತ್ತಿಗೇ ಹಳಸಿ ಹೋಗುತ್ತದೆ. ಕಾರಣ ಮಿಕ್ಸಿಯಲ್ಲಿ ಕಾಯಿ ನುರಿಯುವುದಿಲ್ಲ ಅದು ತುಂಡರಿಸಲ್ಪಡುವುದರಿಂದ ಅಲ್ಲಿ ಶಾಖ ಉತ್ಪತ್ತಿಯಾಗಿ ಅದು ಬಹಳ ಬೇಗ ಕೆಡುತ್ತದೆ.

ಈಗಿನ ಕಾಲದಂತೆ ಅಂದು ಶಾಲಾ ಕಾಲೇಜುಗಳು ಇರುತ್ತಿರಲಿಲ್ಲ, ಆಗೆಲ್ಲಾ ಮಕ್ಕಳನ್ನು  ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿಸುವ ಪದ್ದತಿ ಇತ್ತು. ಮಕ್ಕಳಿಗೆ  ಉಪನಯನ ಮಾಡಿ ಗುರುಕುಲಕ್ಕೆ ಬಿಟ್ಟು ಬರುತ್ತಿದ್ದರು.  ಅಲ್ಲಿ ಮಕ್ಕಳು ಬೆಳಿಗ್ಗೆ ಮದುಕರ ವೃತ್ತಿ (ಭಿಕ್ಷಾಟನೆ) ಮಾಡಿ ಕೊಂಡು ಆ ದಿವಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬೇಡಿ ತಂದು ಅದರಲ್ಲಿ ಅಡುಗೆ ಮಾಡಿ ತಿಂದು ಮಿಕ್ಕ ಸಮಯವನ್ನು  ವಿದ್ಯಾಭ್ಯಾಸಕ್ಕೆ ಮಿಸಲಿಡುತ್ತಿದ್ದರು.  ಕೇವಲ ಶೈಕ್ಷಣಿಕ ವಿದ್ಯೆಯಲ್ಲದೆ  ಪ್ರಾಯೋಗಿಕಕ್ಕೆ ಹೆಚ್ಚಿನ ಆಸ್ಥೆ ಕೊಡಲಾಗುತ್ತಿತ್ತು

ಇನ್ನು   ಶೈಕ್ಷಣಿಕವಾಗಿ ಶ್ಲೋಕಗಳು ಮತ್ತು ಶುಭಾಷಿತಗಳ ಮೂಲಕ ನೆನಪಿನ ಶಕ್ತಿ ಅದರೆ ಹೊತೆ ಮಗ್ಗಿ ಉರುಹೊಡೆಯುವುದರಿಂದ ತಟ್ಟನೆ ಗುಣಾಕಾರ ಮತ್ತು ಭಾಗಾಕಾರಗಳನ್ನು ಮಾಡುತ್ತಿದ್ದರು ಆದರೆ ಇಂದಿನ ಮಕ್ಕಳಿಗೆ ಕ್ಯಾಲುಕ್ಲೇಟರ್ ಇಲ್ಲದೇ 2+2 ಕೂಡಲೂ ಕಳೆಯಲೂ ಬಾರದಿರುವುದು ನಿಜಕ್ಕೂ ದುಃಖಕರ.

ಆದರೆ ಇಂದು ಎರಡು ಮೂರು  ಮೊಬೈಲ್ ನಂ. ನೆನೆಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ ತಿಣುಕಾಡುತ್ತಿದ್ದೇವೆ.  ಲ್ಯಾಂಡ್ ಲೈನ್ ಇದ್ದಾಗಲೇ, ನೂರಾರು ನಂಬರ್ಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳುತ್ತಿದ್ದ ನಮಗೆ ಮೊಬೈಲ್ ಬಂದ ಮೇಲೇ ಎಲ್ಲವನ್ನೂ ಮರೆಯುವಂತಾಗಿದೆ.

ಅಂದು ಅಮರ ಕೋಶ ಕಲಿಸಿಕೊಡುವುದರ ಮೂಲಕ ಮಕ್ಕಳಿಗೆ ನನಪಿನ ಶಕ್ತಿಯನ್ನು ಹೆಚ್ಚಿಸುತ್ತಿದ್ದಲ್ಲದೇ ಪ್ರತಿಯೊಂದು ಪದಕ್ಕೂ ಸಮಾನಾಂತರ ಪದರ ಅರ್ಥ ತಿಳಿಯುತ್ತಿತ್ತು ಉದಾ: ಉಮಾಕಾತ್ಯಾಯಿನೀ ಗೌರಿ ಕಾಳೀ …. ಶ್ರೀಕಂಠ ಶ್ಯಿತಿಕಂಠ ಕಪಾಲಬೃತ್..

ಅಮರಕೋಶದ  ವನೌಷಧಾ ವರ್ಗದಲ್ಲಿ ಇಲ್ಲದ ಔಷಧೀಯೇ ಇಲ್ಲ  ಅದರಂತೆ ಅಮರಕೋಶದಲ್ಲಿ ಇಲ್ಲದಿರುವ ಹೆಸರುಗಳೇ ಇಲ್ಲ ಎನ್ನಬಹುದು.

ಜ್ಯೋತಿಷ್ಯ ಶಾಸ್ತ್ರ :  ಖಗೋಳ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ, ಆರ್ಯಭಟ, ಭಾಸ್ಕರಾಚಾರ್ಯ ಮಂತಾದವರು ಬಹಳ ಖ್ಯಾತ ನಾಮವರು. ಇಲ್ಲಿ ಕುಳಿತಲ್ಲಿಂದಲೇ  ಕರಾರುವಾಕ್ಕಾಗಿ ಸೂರ್ಯ ಚಂದ್ರರ ಚಲನವಲನಗಳನ್ನು ಸರಿಯಾದ ಲೆಕ್ಕಾಚಾರದಿಂದ ಕರಾರುವಾಕ್ಕಾಗಿ  ಗ್ರಹಣಗಳ ಮಾಹಿತಿ ಮತ್ತು ಮಳೆ ಬೆಳೆ, ವಿನಾಶ ಮತ್ತು ವಿಪತ್ತುಗಳನ್ನು ಹೇಳುತ್ತಿದ್ದರು ಮತ್ತು ಅದನ್ನು ಎಲ್ಲರಿಗೂ ತಿಳಿಯಲೆಂದೇ ಪಂಚಾಗಗಳನ್ನು ಬರೆಯುತ್ತಿದ್ದರು.

ಕಾಲಕ್ಕೆ ನಮ್ಮಷ್ಟು ಬೆಲೆ ಕೊಟ್ಟವರು ಇನ್ನಾರು ಇಲ್ಲ. ರಾಹುಕಾಲಾ, ಗುಳಿಕಾಲ, ಯಮಗಂಡ ಕಾಲ ಎಂದು ಪ್ರತೀ ದಿನವೂ ವಿಭಜಿಸಿ ಪುಣ್ಯ ಕೆಲಸಗಳು ಮತ್ತು  ಅಪರ ಕರ್ಮಗಳನ್ನು ಸರಿಯಾದ ಸಮಯಕ್ಕೆ ಮಾಡುವ ಪದ್ದತಿ ನಮ್ಮಲ್ಲಿದೆ. ಅದಕ್ಕಾಗಿಯೇ ಸರಿಯಾಗಿ ಮಹೂರ್ತದ ಸಮಯ ನಿಗಧಿ ಪಡಿಸುತ್ತಾರೆ. ಆದರೆ ನಾವು IST- Indian standard time ಬದಲು Indian stretchable time ಎಂದು ಸುಮ್ಮನೆ ನಮ್ಮನ್ನೇ ನಾವು ಅಪಹಾಸ್ಯ ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ನಮ್ಮಲ್ಲಿ ಮಕ್ಕಳಿಗೆ ಹೆಸರು ಇಡುವುದರ ಹಿಂದೆಯೂ ಅನೇಕ ಕಾರಣಗಳಿವೆ.

ಸುಮ್ಮನೆ,  ಟಿಟ್ಟು, ಬಿಟ್ಟು, ಮೋನಿ ಸೋನಿ ಅಂತಾ ಕಾಟಾಚಾರದ ಹೆಸರುಗಳಿರದೆ, ರಾಮ ಕೃಷ್ಣಾ, ಗೋವಿಂದಾ ಶ್ರೀಹರಿ ವಾಸುದೇವ. ಶಿವ, ಸುಂದರ, ಲಕ್ಷ್ಮೀ ಸರಸ್ವತಿ, ಕಮಲ, ವಿಮಲ ಶಾರದೆ ಮುಂತಾಗಿ ತಮ್ಮ ಮನೆ ದೇವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಹೆಸರಿಡುತ್ತಿದ್ದರು. ಈ ಮೂಲಕ ಮಕ್ಕಳನ್ನು ಕರೆಯುವುದರ ಮೂಲಕವಾದರೂ ಅ ಸದಾ ದೇವರನ್ನು ನೆನೆಯುವಂತಾಗುತ್ತಿತ್ತು.

ಇನ್ನು ಸಂಜೆ ಹೊತ್ತಿಗೆ ಮಕ್ಕಳೆಲ್ಲರೂ ಮನೆಗೆ ಬಂದೊಡನೆಯೇ ಕೈಕಾಲು ಮುಖ ತೊಳೆದುಕೊಂಡು ಸ್ವಲ ಲಘು ಉಪಹಾರ ತಿಂದು  ದೈಹಿಕ ಪರಿಶ್ರಮದ ಆಟಗಳನ್ನು ಆಡುತ್ತಿದ್ದರು

ಇನ್ನು ಮಕ್ಕಳ  ಆಡುತ್ತಿದ್ದ  ಆಟಗಳ ಬಗ್ಗೆ ಗಮನ ಹರಿಸಿದರೆ

 • ಗೋಲಿ ಬುಗುರಿ  ಏಕಾಗ್ರತೆ  ಮತ್ತು ಗುರಿಯನ್ನು ಕಲಿಸುತ್ತಿತ್ತು.
 • ಕಬ್ಬಡ್ಡಿ ಖೋಖೋ . ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದವು.
 • ಮರಕೋತಿ ಮತ್ತು ಈಜು –  ಧೈರ್ಯವನ್ನು ಹೆಚ್ಚಿಸುವುದರೊಂದಿಗೆ ಜೀವ ರಕ್ಷಕ ಕಲೆಯೂ ಆಗಿರುತ್ತಿತ್ತು.
 • ಕುಂಟೇಬಿಲ್ಲೆ – ಹೆಣ್ಣು ಮಕ್ಕಳಿಗೆ ಅದಕ್ಕಿಂತ ಉತ್ತಮ ಆರೋಗ್ಯಕರ ವ್ಯಾಯಾಮ ಇನ್ನೊಂದಿಲ್ಲ,
 • ಚೌಕಾಬಾರ ಮತ್ತು ಅಳುಗುಳಿ ಮನೆ -> ಲೆಕ್ಕಾಚಾರ
 • ಚೆದುರಂಗ – ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳನ್ನು ಹಿಂದೆ ಬೈಯುವಾಗಲೂ ಅಯ್ಯೋ ಕೊದಂಡರಾಮ,  ನೀನೊಳ್ಳೆ ಹನುಮಂತ ಕಣೋ. ಬಾಲ ವಿಲ್ಲದ  ಅಂಜನೇಯ ಎನ್ನುತ್ತಿದ್ದರೇ ಹೊರತು ಈಗಿನ ರೀತಿಯಾಗಿ ಕೆಟ್ಟ ಭಾಷಾ ಪ್ರಯೋಗವನ್ನು ಖಂಡಿತವಾಗಿಯೂ ಮಾಡುತ್ತಲೇ ಇರುತ್ತಿರಲಿಲ್ಲ

ಇನ್ನು ಮಕ್ಕಳಿಗೆ ಮನೋರಂಜನೆ ಎಂದರೆ  ಹರಿಕಥೆ, ಪೌರಾಣಿಕ ನಾಟಕಗಳು ಯಕ್ಷಗಾನ ಇಲ್ಲವೇ ಅಂತ್ಯಾಕ್ಷರಿ.  ಅಂತ್ಯಾಕ್ಷರಿ ಆಟ ಮಕ್ಕಳಲ್ಲಿ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿಸುತ್ತಿತ್ತು.

ಆದರೆ ಇಂದು ಮಕ್ಕಳು ದೈಹಿಕವಾಗಿ ಪರಿಶ್ರಮ ಪಡುತ್ತಲೇ ಇಲ್ಲ ಸದಾಕಾಲ ಟಿವಿಯಲ್ಲಿ ಕಾರ್ಟೂನ್ ಇಲ್ಲವೇ ಮೊಬೈಲ್ ಗೇಮ್ಸ್ ಇದರಿಂದ ಕಣ್ಣುಗಳಿಗೆ ಹಾನಿ ಮತ್ತು ಮನಸ್ಸಿಗೆ ಛೇದವನ್ನು ಉಂಟು ಮಾಡುತ್ತಿವೆ.

ಗಂಡಸರುಗಳು ಅರಳೀ ಕಟ್ಟೆಯ ಕೆಳಗೆ ಕುಳಿತು ಲೋಕಾಭಿರಾಮವಾಗಿ ಆಗು ಹೋಗುಗಳನ್ನ್ನು ಹರಟುತ್ತಿದ್ದರು ಇಲ್ಲಿಯೇ ಹಳ್ಳಿಯ ಬಹಳಷ್ತು ಸಮಸ್ಯೆಗಳು ಪರಿಹಾರವಾಗಿ ಹೊಗುತ್ತಿತ್ತು. ಅರಳೀ ಮರವೂ ಕೂಡಾ  ಹೆಚ್ಚಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಹೆಮ್ಮರವಾಗಿದ್ದರಿಂದ  ಅರಳೀ ಕಟ್ಟೆಯ ಮೇಲೇ ಎಲ್ಲರೂ ಕುಳಿತುಕೊಳ್ಳುತ್ತಿದ್ದರು.

ಇನ್ನು ಸೂರ್ಯ ಮುಳುಗುತ್ತಿದ್ದಂತೆಯೇ ಮನೆಯವರೆಲ್ಲರೂ ಸೇರಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ವಿಭೂತಿ ಇಲ್ಲವೇ ಕುಂಕುಮ ಧರಿಸಿ  ದೇವರ ಕೋಣೆಯ ಕುಳಿತು ಭಕ್ತಿಯಿಂದ ಕೆಲಕಾಲ ದೇವರ ಭಜನೆ ಮಾಡುತ್ತಿದ್ದರು,  ಹೀಗೆ ಭಜನೆ ಮಾಡುತ್ತಿದ್ದರಿಂದ ಹೆಂಗಸರು ಮತ್ತು ಮಕ್ಕಳಿಗೆ ತನ್ನಿಂದ ತಾನೇ ಸಂಗೀತದ ಪರಿಚಯವಾಗಿ ಹೋಗುತ್ತಿತ್ತು. ಮಕ್ಕಳಿಗೆ ಶೃತಿ ಲಯ ಮತ್ತು ತಾಳದ ಜ್ಞಾನ ಬಂದು ಬಿಡುತ್ತಿತ್ತು. ಜೊತೆಗೆ ಹಾರ್ಮೋನಿಯಂ ಮತ್ತು ತಬಲ ಇಲ್ಲವೇ ಮೃದಂಗ ವಾದನ ಕಲಿತುಕೊಳ್ಳುತ್ತಿದ್ದರು,  ಇತ್ತೀಚೆಗೆ ಹೆಸರಾಂತ ಸಂಗೀತ ನಿರ್ದೇಶಕ ರವೀ ಬಸ್ರೂರ್ ಅವರ  ಸಂದರ್ಶನ ಕೇಳುತ್ತಿದ್ದಾಗ ಅವರಿಗೆ ಸಂಗೀತಾಸಕ್ತಿ   ಬಂದದ್ದೇ  ಈ ರೀತಿಯ ಸಾಮೂಹಿಕ ಭಜನೆಗಳಿಂದ ಎಂದು ತಿಳಿದು ನಮ್ಮ ಪೂರ್ವಜರ ಪರಿಕಲ್ಪನೆ ನಮಗೆ ಅರ್ಥವಾಯಿತು

ಇನ್ನು ಏಳೂವರೆ ಎಂಟಕ್ಕೆಲ್ಲಾ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡಿ ನಂತರ ಮಕ್ಕಳಿಗೆ ರಾಮಾಯಣ ಇಲ್ಲವೇ ಮಹಾಭಾರತ, ಭಾಗವತದ ಕುರಿತಾದ ಕತೆಗಳನ್ನು ಹೇಳುತ್ತಾ ಮಲಗಿಸುವ ಹೊತ್ತಿಗೆ ಗಂಟೆ ಹತ್ತಾಗಿರುತ್ತಿತ್ತು. ಅಲ್ಲಿಗೆ  ಊಟ ಮಾಡಿ ಎರಡು ಗಂಟೆಯಾಗಿ ಸ್ವಲ್ಪ ಅರಗಿರುತ್ತಿತ್ತು ಮತ್ತು ನೆಮ್ಮದಿಯಾಗಿ ನಿದ್ದೆ ಬರುತ್ತಿತ್ತು

ರೀತಿಯಾಗಿ ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ  ವೈಜ್ಞಾನಿಕವಾದ ವಿಶೇಷ ಕಾರಣಗಳು ಇದ್ದೇ  ಇರುತ್ತಿತ್ತು ಎಂದು ಸಮಯಾಭಾವದಿಂದಾಗಿ ಕಾರ್ಯಕ್ರಮವನ್ನು ಅಲ್ಲಿಗೇ ಮುಗಿಸಿ ಮುಂದೆ ಎಂದಾದರೂ ಸಮಯ ಸಿಕ್ಕಲ್ಲಿ ಅಂದು ಇದರ ಭಾಗ ಎರಡರಲ್ಲಿ  ನಾವು ಸಂಭ್ರಮದಿಂದ  ಆಚರಿಸುವ ಹಬ್ಬಗಳು ಮತ್ತು ಅವುಗಳ ವಿಶೇಷತೆಯ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಎಂದಿನಂತೆ ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿ, ಅವರೇ ವಂದಾನಾರ್ಪಣೆಯನ್ನೂ ಮಾಡಿದ್ದು ವಿಶೇಷವಾಗಿತ್ತು. ಶ್ರೀಮತಿ ಸುಧಾ ಸೋಮೇಶ್ ಅವರ ಜೊತೆಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಸುರಿಯುತ್ತಿದ್ದ ಮಳೆಯ ನಡುವೆಯೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮ ಅರ್ಧ ಗಂಟೆ ತಡವಾಗಿ ಆರಂಭವಾದರೂ  ಉತ್ತಮ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.   ಇಂದಿನ ಕಾರ್ಯಕ್ರಮ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿದ್ದು ಅದು ಕೇವಲ ವಕ್ತಾರರು ಮಾತನಾಡುವುದನ್ನು ಸಭಿಕರು ಆಲಿಸುವ ಬದಲು ಆವರಿಬ್ಬರ ನಡುವೆ ನೇರ ನೇರ ವಿಚಾರ ವಿನಿಮಯದ ಮೂಲಕ ಸಾಕಷ್ಟು ವಿಚಾರ ವಿನಿಮಯದ ಜೊತೆಗೆ ಅವರ ಅನುಭವಗಳನ್ನು ಹಂಚಿಕೊಂಡಿದ್ದು ಅತ್ಯಂತ ಮಹತ್ವವಾಗಿತ್ತು.

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ನಾವುಗಳು ನಮ್ಮ ತಂದೆ ತಾಯಿರಿಂದ ಕಲಿತ  ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮೆಲುಕು ಹಾಕುತ್ತಾ , ಸಾಧ್ಯವಾದಷ್ಟೂ ಅದನ್ನು  ನಮ್ಮ ಮಕ್ಕಳಿಗೆ ತಿಳಿಸಿಕೊಡುವತ್ತ ಹರಿಸೋಣ ನಮ್ಮ ಚಿತ್ತ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ಅವರಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಸಂಪ್ರದಾಯಗಳನ್ನು  ನಮ್ಮ ಮುಂದಿನ ಪೀಳಿಗೆಯವರಿಗೂ ಕಲಿಸುವ ಮತ್ತು ಉಳಿಸುವ ಜವಾಬ್ಧಾರಿ ನಮ್ಮದೇ ಆಗಿದೆ.

ಇಡೀ ಕಾರ್ಯಕ್ರಮವನ್ನು ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ

 

ಏನಂತೀರೀ?

ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ವಿದ್ಯಾರಣ್ಯಪುರ ಮಂಥನದ ಹತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ವಿಶ್ವನಾಥ್ ಶ್ರಿಕಂಠಯ್ಯ (ಜಲ ಸಂರಕ್ಷರು ಮತ್ತು ಮಳೆ ನೀರು ಕೊಯ್ಲು ತಜ್ಞರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂ ನದಿ ಮತ್ತು ಸರಸ್ವತಿ ನದಿಗಳ ಜೊತೆ ಜೊತೆಗೆ ಜೊತೆಗೆ ಹೋಲಿಸಿ ನೋಡುತ್ತವಾದರೂ ಅನೇಕ ಕಡೆ ಉತ್ಕತನ ಮಾಡಿ ನೊಡಿದಾಗ ಬಹುತೇಕ ಎಲ್ಲರ ಮನೆಗಳಲ್ಲಿಯೂ ಭಾವಿಯ ಬಳಕೆ ಮತ್ತು ಅತ್ಯುತ್ತಮ ಒಳಚೆರಂಡಿಯ ವ್ಯವಸ್ಥೆ ಇದ್ದದ್ದು ನಮಗೆ ಕಂಡು ಬರುತ್ತದೆ. ಅಂದರೆ ನಮ್ಮ ದೇಶದ ಜನತೆ ನದಿ ನೀರಿಗಿಂತಲೂ ಅಂತರ್ಜಲದ ಬಳಕೆಯನ್ನೇ ಹೆಚ್ಚಾಗಿ ಅವಲಂಭಿಸಿದ್ದರು ಎಂದು ತಿಳಿದು ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ತಿಳಿದಿರುವ ಅಂಕಿ ಅಂಶದ ಪ್ರಕಾರ 33 ದಶಲಕ್ಷ ಭಾವಿಗಳು ಮತ್ತು ಕೊಳವೇ ಭಾವಿಗಳ ಮೂಲಕ ನೀರನ್ನು ಬಳಸುತ್ತಿದ್ದೇವೆ. ನಮ್ಮ ದೇಶದಲ್ಲಿ ಇಂದು 250 Cubic sq KM ಅಂತರ್ಜಲವನ್ನು ಬಳಕೆ ಮಾಡುತ್ತಿದ್ದರೆ, ಚೀನಾ ಮತ್ತು ಅಮೇರಿಕಾ ದೇಶ ಎರಡೂ ಸೇರಿ ಕೇವಲ 200 Cubic sq KM ಅಂತರ್ಜಲವನ್ನು ಮಾತ್ರವೇ ಬಳಕೆ ಮಾಡುತ್ತಿದ್ದಾರೆ. ಹೀಗೆ ಗೊತ್ತು ಗುರಿ ಇಲ್ಲದ್ದೇ ಎಗ್ಗಿಲ್ಲದೆ ಅಂತರ್ಜಲ ಬಳಕೆ ಮಾಡುತ್ತಿರುವ ಕಾರಣದಿಂದಾಗಿ ಇಂದು ಸುಮಾರು 800-2000 ಅಡಿಗಳವರೆಗೂ ಕೊರೆದರೂ ನೀರು ಸಿಗದಾಗುತ್ತಿದೆ. ಸುಮಾರು 180-200 ಅಡಿಗಳಲ್ಲಿರುವ ಫ್ಲೋರೈಡ್ ಮತ್ತು ಓರ್ಸೆನಿಕ್ ಪದರಗಳು ನೀರಿನಲ್ಲಿ ಬೆರೆತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗೆ ಅಂತರ್ಜಲವನ್ನು ಹೆಚ್ಚು ಹೆಚ್ಚು ಕೊರೆದೆಂತಲ್ಲಾ ನದಿಗಳ ಸೆಲೆಗಳೂ ಬತ್ತಿ ಹೋಗುತ್ತಿವೆ. ನೀರಿಗಾಗಿ 30 ಅಡಿಗಳಿಗಿಂತಲೂ ಹೆಚ್ಚಾಗಿ ಭೂಮಿಯನ್ನು ಕೊರೆದಂತೆಲ್ಲಾ ನದಿಯೂ ಬತ್ತ ತೊಡಗುತ್ತದೆ. 1982ರ ವರೆಗೂ ಜೀವಂತವಿದ್ದ ಅರ್ಕಾವತಿ ನದಿ ಇಂದು ಕೇವಲ ಮಳೆಗಾಲದಲ್ಲಿ ಮಾತ್ರವೇ 15ದಿನಗಳಷ್ಟು ಸಂಪೂರ್ಣವಾಗಿ ಹರಿದರೆ ಹೆಚ್ಚೆನಿಸುತ್ತದೆ. ಹಾಗಾಗಿ ಗಂಗೆ, ಯಮುನಾ, ಅರ್ಕಾವತಿ ನದಿಗಳು ವರ್ಷದ ಮುನ್ನೂರೈವತ್ತು ದಿನಗಳೂ ಹರಿಯಬೇಕೆಂದರೆ ಮೋಡಗಳನ್ನು ಆಕರ್ಷಿಸಿ ಮಳೆ ಸುರಿಸಲು ಡಟ್ಟವಾದ ಮರಗಿಡಗಳು ಅವಶ್ಯಕವಾದರೆ, ಹಾಗೆ ಸುರಿದ ಮಳೆ ನೀರು ಸರಿಯಾಗಿ ನೀರಿನಲ್ಲಿ ಇಂಗಿಸಿ ಅಂತರ್ಜಲವನ್ನು ಹೆಚ್ಚಾಗಿಸಿದಲ್ಲಿ ಮಾತ್ರವೇ ಸಾಧ್ಯ. ಬೆಂಗಳೂರಿನಲ್ಲಿ ಇಂದು 970 ಮಿಲಿ ಮೀ ಮಳೆಯಾದರೆ ಅದರಲ್ಲಿ ಕೇವಲ 3-8% ನೀರು ಮಾತ್ರ ನೀರಿನಲ್ಲಿ ಇಂಗಿಹೋದರೆ ಅದೂ ಕೇವಲ 1 mts ಅಡಿಗಳಷ್ಟು ಮಾತ್ರವೇ ತಲುಪುತ್ತಿದೆ. ಎಲ್ಲಾಕಡೆಯಲ್ಲೂ ಕಾಂಕ್ರೀಟ್ ಮಯವನ್ನಾಗಿ ಮಾಡಿ ಭೂಮಿಯಲ್ಲಿ ನೀರು ಇಂಗಿ ಹೋಗಲು ಸಾಧ್ಯವೇ ಆಗದೇ ನೀರೆಲ್ಲಾ ವ್ಯರ್ಥವಾಗಿ ಚೆರಂಡಿಗೆ ಸೇರಿ ಕೊಳಚೆ ನೀರಾಗುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸುಮಾರು 800-1000 ವರ್ಷಗಳ ಇತಿಹಾಸವಿರುವ ಓಡಿಸ್ಸಾದ ಕಡೆಯಿಂದ ಬಂದಿರ ಬಹುದೆಂಬ ನಂಬಲಾಗಿರುವ ಓಡಿ ಜನಾಂಗ ಅಥವಾ ಒಡ್ಡರು ಇಲ್ಲವೇ ಭೋವಿ ಜನಾಂಗದವರು ನಮ್ಮ ರಾಜ್ಯದಲ್ಲಿರುವ ಅಥವಾ ಇದ್ದಿದ್ದ ಬಹುದಾಗಿದ್ದ ಸಾಕಷ್ಟು ಕೆರೆ ಭಾವಿಗಳನ್ನು ತೋಡಿರ ಬಹುದೆಂದು ಇತಿಹಾಸ ಹೇಳುತ್ತಿದೆ. ಇಂದಿಗೂ ಬೆಂಗಳೂರಿನಲ್ಲಿಯೇ ಸುಮಾರು 800-1000 ಕುಟುಂಬಳು ಇದ್ದೇ ಮಣ್ಣನ್ನೇ ನಂಬಿ ಜೀವನ ಸಾಗಿಸುತ್ತಿವೆ. ಇಂತಹ ಕುಟುಂಬಳಿಗೆ ಸೂಕ್ತ ತರಭೇತಿ ಸುಮಾರು ಎರಡು ಅಡಿಗಳ ವ್ಯಾಸವುಳ್ಳ 8-12 ಆಳದ ಭಾವಿರೀತಿಯ ಹಳ್ಳವನ್ನು ತೋಡಿ ಅದಕ್ಕೆ ಸಿಮೆಂಟ್ ರಿಂಗ್ ಗಳನ್ನು ಅಳವಡಿಸಿ ಮನೆಗಳ ಛಾವಣಿಯ ನೀರನ್ನು ಆ ಇಂಗು ಗುಂಡಿಗೆ ಹೋಗುವಂತೆ ಮಾಡುವ ಮೂಲಕ ಅಂತರ್ಜಲ ಮಟ್ತವನ್ನು ಹೆಚ್ಚಿಸುವ ಕಾರ್ಯ ಈಗ ಜಾರಿಯಲ್ಲಿದೆ.

Screenshot 2019-07-22 at 12.22.17 AM

ಇಂದು ಬೆಂಗಳೂರಿಗೆ ಪ್ರತಿದಿನ ಕಾವೇರಿ ನದಿಯಿಂದ 1400 ದಶಲಕ್ಷ ಲೀಟರ್ ನೀರನ್ನು ಬಳೆಸುತ್ತಿದ್ದೇವೆ. ಆದರೆ ಬೆಂಗಳೂರಿನಲ್ಲಿ ಬೀಳುವ ಮಳೆಯನ್ನು ಪ್ರತಿಯೊಂದು ಮನೆಯವರೂ ಸರಿಯಾಗಿ ಮಳೆ ನೀರು ಕೊಯ್ಲಿನ ಮೂಲಕ ಸಂಗ್ರಹಿಸಿದಲ್ಲಿ ಶೇ 50ರಷ್ಟು ಕಾವೇರಿಯ ನೀರಿನ ಅವಲಂಭನೆಯನ್ನು ಕಡಿಮೆ ಮಾಡ ಬಹುದಾಗಿದೆ. ಮಳೆ ನೀರು ಕೊಯ್ಲು ಮಾಡುವುದು ನಿಜಕ್ಕೂ ಸುಲಭವಾದ ಕೆಲಸ. ಮಳೆಗಾಲದಲ್ಲಿ ಛಾವಣಿಯನ್ನು ಸ್ಚಚ್ಚವಾಗಿ ಇಟ್ಟು ಕೊಂಡು ಅದರ ಮೇಲೆ ಬೀಳುವ ನೀರನ್ನು ಕೊಳವೆಯ ಮೂಲಕ ಒಂದು 60ಲೀಟರ್ ಸಂಗ್ರಹಿಸಲ್ಪಡುವ ಡ್ರಮ್ಮಿಗೆ ಒಂದು ಅಡಿಯಷ್ಟು ಇಜ್ಜಲು ಹಾಕಿ ಅದರ ಮೇಲೆ ಮೂರ್ನಾಲ್ಕು ಪದರದ ನೆಟ್ಲಾನ್ ಪದರವನ್ನು ಹಾಸಿ ಅದರ ಮೇಲೆ ಒಂದು ಶುಭ್ರವಾದ ಬಟ್ತೆಯನ್ನು ಹಾಸಿ ಅದರ ಹಾಯುವಂತೆ ಮಾಡಿ ಶುಧ್ಧೀಕರಿಸಿ ಅದನ್ನು ನಮ್ಮ ನೀರಿನ ಸಂಪ್ ಅಥವಾ ಯಾವುದಾದರೂ ತೊಟ್ಟಿಯಲ್ಲಿ ಸಂಗ್ರಹಿಸಿ ಎಲ್ಲದಕ್ಕೂ ಬಳೆಸಿಕೊಳ್ಳಬಹುದಾಗಿದೆ. ಅದಕ್ಕಿಂತಲೂ ಹೆಚ್ಚಾಗುವ ನೀರನ್ನು ಇಂಗು ಗುಂಡಿಗಳ ಮೂಲಕ ಭೂಮಿಯೊಳಗೆ ಹಾಯುವಂತೆ ಮಾಡಿ ಅಂತರ್ಜಲವನ್ನು ಹೆಚ್ಚಿಸಬಹುದಾಗಿದೆ. ಸುಮಾರು ಎರಡು ಮೂರು ವರ್ಷಗಳ ಅಂತರದಲ್ಲಿ ನೆಟ್ಲಾನ್ ಮತ್ತು ಬಟ್ಟೆಯ ಜೊತೆಗೆ ಇದ್ದಿಲನ್ನೂ ಬದಲಿಸಿದರೆ ಸಾಕು. ಮಳೆ ನೀರನ್ನು ನೇರವಾಗಿ ಭಾವಿ ಆಥವಾ ಕೊಳವೇ ಭಾವಿಗಳಿಗೆ ಬಿಡುವುದರ ಬದಲು ಅದನ್ನು ಆ ಭಾವಿ ಅಥವಾ ಕೊಳವೇ ಭಾವಿಗಳ ಹತ್ತಿರ ಇಂಗು ಗುಂಡಿ ನಿರ್ಮಿಸಿ ಅದರಲ್ಲಿ ಶುಧ್ಧೀಕರಿಸಿದ ನೀರನ್ನು ಹಾಯಿಸಿದಲ್ಲಿ ಹೆಚ್ಚಿನ ಸಫಲತೆ ಕೊಡುತ್ತದೆ.

ಮಳೆ ನೀರು ಕೊಯ್ಲು ಅಳವಡಿಗೆ ಬಹಳ ಸುಲಭವಾದರೂ ಆದನ್ನು ನಿರಂತವಾಗಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಹಾಳು ಹೋಗುವ ಸಾಧ್ಯತೆಯೇ ಹೆಚ್ಚಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ನಮ್ಮ ಮನೆಯ ಮೇಲೆ ಬೀಳುವ ಪ್ರತೀ ಹನಿ ಹನಿ ನೀರನ್ನೂ ಸಂಗ್ರಹಿ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮವಾವ ಅಂಡವಾದರೂ ನಮ್ಮ ಅಗತ್ಯಕ್ಕಿಂತ ಹೆಚ್ಚಾದ ನೀರನ್ನು ಚರಂಡಿ ಮೋರಿಗೆ ಹಾಯಿಸುವ ಬದಲು ಇಂಗು ಗುಂಡಿಗಳ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿ ಕೊಳ್ಳಲೇ ಬೇಕಾಗಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಕಾನೂನನ್ನು ತಂದು ಇನ್ನು ಮುಂದೆ ಕಟ್ಟುವ ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಮಾಡಲೇ ಬೇಕಾಗಿದೆ. ತಮಿಳುನಾಡಿದನಲ್ಲಿ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಮನೆ ಅಥವಾ ಹಳೇ ಮನೆ ಎಂಬ ತಾರತಮ್ಯವಿಲ್ಲದೆ ಎಲ್ಲರ ಮನೆಯಲ್ಲಿಯೂ ಮಳೆ ಕೊಯ್ಲಿನ ಮೂಲಕ ನೀರನ್ನು ಸಂಗ್ರಹಿಸಿರುವುದನ್ನು ಖಡ್ಡಾಯ ಗೊಳಿಸಿ ಒಂದು ಪಕ್ಷ ಆ ರೀತಿ ಮಾಡದಿದ್ದಲ್ಲಿ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬ ಕಾನೂನನ್ನು ಜಾರಿಗೆ ಗೊಳಿಸಿದ್ದಾರೆ.  ಹೀಗೆ ನಮ್ಮ ನಮ್ಮ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರನ್ನೇ ಬಳಸಿಕೊಂಡಲ್ಲಿ ಪ್ರಕೃತಿಯ ವಿರುದ್ಧವಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಎತ್ತಿನ ಹೊಳೆ ಯೋಜನೆಯ ಮೂಲಕ ದಕ್ಷಿಣ ಕನ್ನಡದ ನೇತ್ರಾವತಿ ಅಥವಾ ಶರಾವತಿಯ ನೀರನ್ನು ಬೆಂಗಳೂರಿಗೆ ತರುವುದನ್ನು ತಡೆಗಟ್ಟ ಬಹುದಾಗಿದೆ.

water_reusre

ಕಬ್ಬನ್ ಪಾರ್ಕಿನಲ್ಲಿದ್ದ ಸುಮಾರು ಹತ್ತು ದೊಡ್ಡ ದೊದ್ಡ ಭಾವಿಗಳು ಹಲವಾರು ವರ್ಷಗಳ ಕಾಲ ಉಪಯೋಗಿಸದ ಕಾರಣ ಪಾಳು ಬಿದ್ದು ಹೋಗಿತ್ತು. ಅವುಗಳನ್ನು ಶುದ್ಧೀಕರಿಸಿ ಪುನರುಜ್ಜೀವನಗೊಳಿಸಿದ ಪರಿಣಾಮವಾಗಿ ಅಲ್ಲಿನ ಗಿಡಮರಗಳಿಗೆ ನೀರುಣಿಸಲು ಇದೇ ನೀರನ್ನು ಬಳೆಸಲಾಗುತ್ತಿದೆ. ಇದೇ ರೀತಿ ಬೆಂಗಳೂರಿನ ಅಚ್ಚು ಮತ್ತು ಗಾಲಿ ಕಾರ್ಖಾನೆಯಲ್ಲಿದ್ದ ಸುಮಾರು ಎಂಟು ಹಳೆಯ ಭಾವಿಗಳನ್ನು ಪುನರುಜ್ಜೀವನ ಗೊಳಿಸಿದ ಪರಿಣಾಮವಾಗಿ ಪ್ರತಿದಿನ ಸುಮಾರು 30000ಲೀಟರ್ ನೀರನ್ನು ಆ ಭಾವಿಗಳಿಂದ ಬಳೆಸಲಾಗುತ್ತಿದೆ. ಅನೇಕ ವರ್ಷಗಳಿಂದ ನೀರಿದ್ದು ಇತ್ತೀಚೆಗೆ ಬರಿದಾಗಿದ್ದ ಭಾವಿಯ ಸುತ್ತಾ ಇಂಗು ಗುಂಡಿಯ ಮೂಲಕ ಮನೆಯ ಮೇಲೆ ಬಿದ್ದ ನೀರನ್ನು ಹಾಯಿಸಿ ಈಗ ವರ್ಷ ಪೂರ್ತಿ ಅದೇ ಭಾವಿಯಿಂದ ನೀರನ್ನು ಬಳೆಸುತ್ತಿದ್ದಾರೆ. ಅಷ್ಟೆಲ್ಲಾ ಏಕೆ? ಶ್ರೀಯುತ ವಿಶ್ವನಾಥ್ ಅವರ ಮನೆಯ ಮೇಲೆಯೇ ಬೀಳುವ ನೀರನ್ನು ಸಂಗ್ರಹಿಸಿ ಅದನ್ನೇ ವರ್ಷಪೂರ್ತಿಯೂ ಬಳಸುತ್ತಿದ್ದಾರೆ ಮತ್ತು ಅವರು ಮತ್ತು ಅವರ ಮನೆಗೆ ಬರುವ ಅಥಿತಿಗಳಿಗೆ ಹಾಗೆ ಸಂಗ್ರಹಿಸಲ್ಪಟ್ಟ ನೀರಿನಿಂದಲೇ ಅತ್ಯಧ್ಬುತ ಕಾಫಿಯನ್ನೂ ಮಾಡಿ ಕೊಡುತ್ತಾರೆ.

ಸರ್ಕಾರವೂ ಈ ಬಗ್ಗೆ ಹೆಚ್ಚಿನ ಆಸ್ಥೆವಹಿಸಿದ್ದು. ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್ಲಾ ಬಡಾವಣೆಗಳಲ್ಲಿ ಮತ್ತು ಬಹು ಅಂತಸ್ತಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಕೊಂಡಲ್ಲಿ ಮಾತ್ರವೇ ಅನುಮತಿ ನೀಡುವ ಕಾನೂನು ಜಾರಿಗೊಳಿಸಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತೀ ಮನೆಗಳಲ್ಲಿಯೂ ಕುಡಿಯುವ ಶುದ್ದ ನೀರು ಮತ್ತು ಈ ರೀತಿಯಾಗಿ ಶುಧ್ಧೀ ಕರಿಸಿದ ನೀರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿ ಶುಧ್ಧೀ ಕರಿಸಿದ ನೀರನ್ನು ಶೌಚಾಲಗಳಲ್ಲಿಯೂ ಮತ್ತು ಮನೆ ಮತ್ತು ವಾಹನಗಳನ್ನು ತೊಳೆಯುವುದಕ್ಕೆ ಮತ್ತು ಗಿಡ ಮರಗಳ ಪೋಷಣೆಗೆ ಬಳೆಸುವಂತೆ ಮಾಡಲಾಗಿದೆ.

ಬೆಂಗಳೂರಿನ ನೀರಿನ ಸಮಸ್ಯೆ ನೆನ್ನೆ ಮೊನ್ನೆಯದಲ್ಲಾ. ಅದು ಸುಮಾರು ಶತಮಾನಗಳ ಹಿಂದಿನ ಸಮಸ್ಯೆಯಾಗಿದೆ. ಅದಕ್ಕಾಗಿಯೇ 1894 ರಲ್ಲಿಯೇ ಹೆಸರು ಘಟ್ಟ ಕೆರೆಯ ಮೂಲಕ ನೀರನ್ನು ನಗರಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಅದೇ ರೀತಿ ತಿಪ್ಪಗೊಂಡನ ಹಳ್ಳಿಯ ಕೆರೆಯ ನೀರೂ ಸಹಾ ಬೆಂಗಳೂರಿನ ಹಲವಾರು ಬಡಾವಣೆಯ ನೀರಿನ ಬವಣೆಯನ್ನು ನೀಗಿಸುತ್ತಿದೆ. ಈ ನೀರನ್ನು ಪಂಪ್ ಮಾಡಲೆಂದೇ 1911 ರಲ್ಲಿ ಪ್ರಪ್ರಥವಾಗಿ ವಿದ್ಯುತ್ ಶಕ್ತಿಯನ್ನು ಬಳೆಸಲಾಯಿತು. ಅದೇ ರೀತಿ ಬೆಂಗಳೂರಿನಲ್ಲಿದ್ದ ಹಲವಾರು ಕೆರೆಗಳನ್ನು ಕೃಷಿಗಾಗಿ ಸುಮಾರು 1960ರ ವರೆಗೂ ಬಳೆಸಲಾಗುತ್ತಿತ್ತು. ಆದರೆ ಅದೇ ವರ್ಷ ಈ ಕೆರೆ ನೀರಿನಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಮಲೇರಿಯಾ ರೋಗ ಹರಡುತ್ತಿದೆ ಎಂದು ಮಲೇರಿಯಾ ನಿಯಂತ್ರಣ ಮಂಡಲಿ ಹೇಳಿದ್ದೇ ನೆಪ, ರೋಗಿ ಬಯಸಿದ್ದೂ ಹಾಲೂ ಅನ್ನ. ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಭೂಕಬಳಿಗೆದಾರರು ನೂರಾರು ಕೆರೆಗಳನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ನಿರ್ಮಿಸಿ ಕಾಂಕ್ರೀಟ್ ಕಾಡನ್ನಾಗಿ ಮಾಡಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಲು ಕಾರಣೀಭೂತರಾದರು.

ಪ್ರಜೆಗಳ ಅನುಕೂಲಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ ನಮ್ಮ ಹಿರಿಯರು ಮತ್ತು ನಮ್ಮನ್ನಾಳಿದ ರಾಜ ಮಹಾರಾಜರುಗಳು, ಪಾಳೇಗಾರರು ಪ್ರತೀ ಹಳ್ಳಿಗಳಲ್ಲಿಯೂ ಕೆರೆಯನ್ನು ನಿರ್ಮಿಸಿದ್ದರು. ಅ ಸುತ್ತಮುತ್ತಲೂ ಬೀಳುತ್ತಿದ್ದ ಮಳೆ ನೀರು ರಾಜ ಕಾಲುವೆಗಳ ಮೂಲಕ ಭೂಮಿಗೂ ಇಂಗಿ ಹೋಗಿ ಹೆಚ್ಚಾದ ನೀರು ಕೆರೆಯನ್ನು ಸೇರುತ್ತಿತ್ತು. ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲು ಪ್ರತೀ ವರ್ಷವೂ ರೈತಾಪಿ ಜನಗಳು ಸೇರಿ ಕೆರೆಯ ಹೂಳನ್ನು ಎತ್ತಿ ಅದು ಅತ್ಯಂತ ಫಲವತ್ತತೆಯಿಂದ ಕೂಡಿದ್ದರಿಂದ ಅದನ್ನು ತಮ್ಮ ಹೊಲಗದ್ದೆಗಳಲ್ಲಿ ಬಳೆಸಿಕೊಳ್ಳುವುದರ ಮೂಲಕ ಯಾವುದೇ ಕೃತಕ ರಾಸಾಯನಿಕ ಗೊಬ್ಬರ ಬಳೆಸದೇ ಸಾವಯವ ರೂಪದಲ್ಲಿ ಬೇಸಾಯ ಮಾಡುತ್ತಿದ್ದರು. ಅದೇ ರೀತಿ ಕೆರೆಗಳಿಂದ ಜೇಡಿ ಮಣ್ಣುಗಳನ್ನು ತೆಗೆದು ಚೆನ್ನಾಗಿ ಹದಗೊಳಿಸಿ ದೊಡ್ಡ ಗಣೇಶನ ಮೂರ್ತಿಗಳನ್ನು ಮಾಡಿ, ಅದನ್ನು ಪೂಜಿಸಿ ನಂತರ ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿ ಕೆರೆ ಕಟ್ಟೆಗಳು ಒಡೆಯದಂತೆ ಗಟ್ಟಿಯಾಗಿರಲೂ ಗಣೇಶನ ಮೂರ್ತಿಗಳನ್ನು ಅದೇ ಕೆರೆಗಳಲ್ಲಿ ವಿಸರ್ಜಿಸುತಿದ್ದದ್ದು ಈಗ ಇತಿಹಾಸವಾಗಿ ಹೋಗಿರುವುದು ದುಖಃಕರ ಸಂಗತಿ.

ಆದರು ಇಂದು ಕೆಲ ಪರಿಸರ ಪ್ರೇಮಿಗಳು ಮತ್ತು ಹಲವಾರು ಸರ್ಕಾರಿ ಮತ್ತು ಖಾಸಗೀ ಕಂಪನಿಗಳು ತಮ್ಮ CSR ಹಣವನ್ನು ಪರಿಸರ ಸಂರಕ್ಷಣೆ , ಕಲ್ಯಾಣಿಗಳ ಸ್ವಚ್ಚತೆ, ಕೆರೆಗಳ ಶುದ್ಧೀಕರಣಕ್ಕೆ ವ್ಯಯಮಾಡುತ್ತಿರುವುದು ಶ್ಲಾಘನೀಯಕರವಾಗಿದೆ. ಒತ್ತುವರಿಯಾಗಿದ್ದ ರಾಜಕಾಲುವೆಗಳನ್ನೆಲ್ಲಾ ತೆರೆವುಗೊಳಿಸಿ ಅವುಗಳಿಂದ ನೀರನ್ನು ನೇರವಾಗಿ ಕೆರೆಯ ಒಂದು ಭಾಗಕ್ಕೆ ಹರಿಯುವಂತೆ ಮಾಡಿ ಅಲ್ಲಿ ಆ ನೀರನ್ನು ಆಧುನಿಕ ರೀತಿಯಲ್ಲಿ ಶುಧ್ಧೀಕರಿಸಿ ಅದನ್ನು ಕೆರೆಗೆ ಬಿಡುವ ಕಾರ್ಯದಲ್ಲಿ ಯಶಸ್ವಿಯಗಿದ್ದಾರೆ. ವರ್ಷದ ಮುನ್ನೂರೈವತ್ತು ದಿನಗಳೂ ಆ ಕೆರೆಯಲ್ಲಿ ನೀರು ನಿಲ್ಲುವಂತಾದಲ್ಲಿ ಅ ಕೆರೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲದ ಮಟ್ಟ ಹೆಚ್ಚಾಗಿ ಸುಮಾರು 15-20 ಅಡಿಗಳ ಆಳದಲ್ಲಿಯೇ ಶುದ್ಧವಾದ ನೀರು ಸಿಗುವಂತಾಗಿದೆ.

ಕೇವಲ ಮಳೆಯ ನೀರೇ ಅಲ್ಲಿದೇ ಕೊಳಚೇ ನೀರನ್ನು ಕೆರೆಯ ಒಂದು ಭಾಗಕ್ಕೆ ಹರಿಯುವಂತೆ ಮಾಡಿ ಅದನ್ನು ಆರ್ದ್ರ ಭೂಮಿಯಲ್ಲಿ (wet land) ಮೂರ್ನಾಲ್ಕು ದಿನ ಇರುವಂತೆ ನೋಡಿಕೊಂಡು ಅಲ್ಲಿ ನೈಸರ್ಗಿಕವಾಗಿ ಶುದ್ದೀಕರಣವಾಗಿ ನಂತರ ಆ ನೀರನ್ನು ಶುಧ್ಧೀಕರಣ ಘಟಕದಲ್ಲಿ ಮತ್ತೊಮ್ಮೆ ಶುಧ್ಧೀಕರಿಸಿ ಕೆರೆಗಳಿಗೆ ಬಿಡುವ ವ್ಯವಸ್ಥೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈಗಾಗಲೇ ಜಕ್ಕೂರಿನ ಕೆರೆ, ರಾಚೇನಹಳ್ಳಿಗಳಲ್ಲಿ ಈ ರೀತಿಯ ವ್ಯವಸ್ಥೆ ಜಾರಿಯಲ್ಲಿದ್ದರೆ, ದೊಡ್ಡಬೊಮ್ಮಸಂದ್ರದ ಕೆರೆಯಲ್ಲಿ ಬಿಇಎಲ್ ಕಾರ್ಖಾನೆಯ ಸಹೋಯೋಗದೊಂದಿಗೆ ಒಳಚರಂಡಿ ಸಂಸ್ಕರಣಾ ಘಟಕ (sewage treatment plant STP) ನಿರ್ಮಾಣ ಹಂತದಲ್ಲಿದ್ದು ಸುಮಾರು ಎರಡು ಮೂರು ವರ್ಷಗಳಷ್ಟರಲ್ಲಿ ದೊಡ್ಡ ಬೊಮ್ಮಸಂದ್ರದ ಕೆರೆ ಗತ ವೈಭವಕ್ಕೆ ಮರಳುವಂತಾಗುತ್ತಲಿದೆ.

ಈ ರೀತಿಯಾಗಿ ಶುದ್ಧೀಕರಣಗೊಂಡ ನೀರನ್ನು ನೇರವಾಗಿ ಕೃಷಿ ಚಟುವಟಿಕೆಗಳಿಗೆ ಬಳೆಸಿಕೊಳ್ಳಬಾಹುದಾದರೂ ಅದರಲ್ಲಿ ಮನುಷ್ಯರು ತಿನ್ನಬಹುದಾದ ಸೊಪ್ಪು, ಹಣ್ಣು ತರಕಾರಿಗಳನ್ನು ಬೆಳೆಯದೆ ಆಂತಹ ನೀರಿನಲ್ಲಿ ದೇವರ ಪೂಜೆಗೆ ಬಳೆಸುವ ಹೂ, ರೇಷ್ಮೇ ಹುಳುಗಳ ಸಾಗಾಣಿಕೆಗೆ ಬಳೆಸುವ ಹಿಪ್ಪನೇರಳೆ ಬೆಳೆಗೆ ಉಪಯೋಗಿಸಬಹುದಾಗಿದೆ. ಇದೇ ನೀರಿನಲ್ಲಿ ಬಾಳೇ ಮತ್ತು ಪರಂಗೀ (ಪಪ್ಪಾಯ) ಹಣ್ಣುಗಳನ್ನು ಬೆಳೆಯ ಬಹುದಾಗಿದೆ. ಈ ರೀತಿಯ ಪ್ರಯೋಗ STP water Shit to silk project ಎಂಬ ಹೆಸರಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ.

ಇಂದು ನಾವು ಬಳೆಸುತ್ತಿರುವ ನೀರು ನಮ್ಮ ಹಿರಿಯರು ನಮಗೆ ಉಳಿಸಿಹೋದ ಸಂಪತ್ತಾಗಿದೆ. ನಾವು ಅದನ್ನು ಎಗ್ಗಿಲ್ಲದೇ ಬಳಸಿ ಬರಿದು ಮಾಡಿ ಹೋದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಶುಧ್ಧ ಗಾಳಿ ಮತ್ತು ನೀರನ್ನೂ ಸೇವಿಸದಂತಹ ಪರಿಸ್ಥಿಗೆ ತಲುಪುವಂತಾಗುತ್ತದೆ. ಹಾಗಾಗಿ ಪ್ರತಿಯೊಂದು ಯೋಜನೆಗಳಿಗೂ ಸರ್ಕಾರವನ್ನೇ ಅವಲಂಭಿಸದೇ ನಾವುಗಳೇ ಒಗ್ಗೂಡಿ ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರನ್ನು ಸದ್ವಳಕೆ ಮಾಡಿಕೊಳ್ಳ ಬಹುದಾಗಿದೆ. ಸರ್ಜಾಪುರದ ಸಮೀಪದಲ್ಲಿ ಸುಮಾರು 36 ಎಕರೆಗಳ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಸುಮಾರು 360 ದೊಡ್ಡ ನಿವೇಶನಗಳ ಬಡಾವಣೆಯಲ್ಲಿ BWSSB ನೀರಿನ ಸರಬರಾಜು ವ್ಯವಸ್ಥೆ ಇರಲಿಲ್ಲವಾದ್ದರಿಂದ ಪ್ರತಿಯೊಂದು ಮನೆಗೂ ಒಂದೊಂದು ಕೊಳವೇ ಭಾವಿಗಳನ್ನು ತೊಡಲು ನಿರ್ಧರಿಸಲಾಗಿತ್ತು. ಅವರ ಆ ಕಲ್ಪನೆ ಹೇಗಿತ್ತೆಂದರೆ ಒಂದು ದೊಡ್ಡ ಎಳನೀರಿನ ಬುಡ್ಡೆಗೆ ನೂರಾರು ಸ್ಟ್ರಾಗಳನ್ನು ಹಾಕಿ ಒಮ್ಮೆಲೆ ಹೀರುವಂತಹ ಪರಿಸ್ಥಿತಿ. ಹಾಗೆ 360 ಕೊಳವೆ ಭಾವಿಗಳನ್ನು ತೊಡಿದ್ದಲ್ಲಿ ಕೆಲವೇ ಕೆಲವು ತಿಂಗಳಿನಲ್ಲಿ ಅಲ್ಲಿನ ಸುತ್ತಮುತ್ತಲಿನ ಅಂತರ್ಜಲ ಬರಿದಾಗುವ ಸಂದರ್ಭವೇ ಹೆಚ್ಚಾಗಿತ್ತು. ಅದರ ಬದಲು ಕೇವಲ ಮೂರ್ನಾಲ್ಕು ಕೊಳವೇ ಭಾವಿಗಳನ್ನು ತೋಡಿ ಅದನ್ನು ಎಲ್ಲಾ ಮನೆಗಳು ಸಮಾನಾಗಿ ಹಂಚಿಕೊಳ್ಳುವ ಪದ್ದತಿಯನ್ನು ತರಲಾಗಿದೆ ಅದೇ ರೀತಿ ಆ ಕೊಳವೆ ಭಾವಿಗಳಿಗೆ ಸರಿಯಾದ ರೀತಿಯಲ್ಲಿ ಮಳೇ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ ಮತ್ತು ಅವರ ಬಡಾವಣೆಯ ಎಲ್ಲಾ ಗಿಡ ಮರ, ಹುಲ್ಲುಗಾವಲಿಗೂ ಮಳೆ ನೀರಿ ಕೊಯ್ಲಿನ ನೀರನ್ನೇ ಬಳೆಸುತ್ತಿರುವುದರಿಂದ ಇಂದಿಗೂ ಆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇಲ್ಲದಂತಾಗಿದೆ.

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆಯ ಕುರಿತಾಗಿ ಮತ್ತು ಇಂಗು ಗುಂಡಿಗಳನ್ನು ತೋಡಲು ನಮ್ಮ ಮನೆಯ ಹತ್ತಿರವೇ ಇರುವ ಭೋವಿಗಳ ಕುರಿತು ಈ http://bengaluru.urbanwaters.in/ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿದರೆ, ಎಂದಿನಂತೆ ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಶ್ರೀಮತಿ ಸುಧಾ ಸೋಮೇಶ್ ಅವರ ಜೊತೆಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಸುರಿಯುತ್ತಿದ್ದ ಮಳೆಯ ನಡುವೆಯೂ ಉತ್ತಮ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇಂದಿನ ಕಾರ್ಯಕ್ರಮ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿದ್ದು ಅದು ಕೇವಲ ವಕ್ತಾರರು ಮಾತನಾಡುವುದನ್ನು ಸಭಿಕರು ಆಲಿಸುಬ ಬದಲು ಆವರಿಬ್ಬರ ನಡುವೆ ನೇರ ನೇರ ವಿಚಾರ ವಿನಿಮಯದ ಮೂಲಕ ಸಾಕಷ್ಟು ವಿಚಾರ ವಿನಿಮಯ ಮತ್ತು ಮಳೆ ನೀರು ಕೊಯ್ಲಿನ ಬಗ್ಗೆ ಇದ್ದ ಅನೇಕ ಸಂದೇಹಗಳು ನಿವಾರಣೆಯಾಗಿದ್ದು ಅತ್ಯಂತ ಮಹತ್ವವಾಗಿತ್ತು. .

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟು ಎಲ್ಲರೂ ಸೇರೀ ನಿಸ್ವಾರ್ಥವಾಗಿ ಮಳೆ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಲ್ಲದೇ ನದಿಗಳ ಮೇಲಿನ ಅವಲಂಭನೆಯನ್ನು ತಗ್ಗಿಸಬಹುದಾಗಿದೆ. ಇದರಿಂದ ನದಿ ನೀರಿನ ಹಂಚಿಕೆಯ ಬಗ್ಗೆ ಅಂತರಾಜ್ಯಗಳ ನಡುವೆ ಸದಾ ನಡೆಯುವ ವ್ಯಾಜ್ಯಗಳಿಗೆ ತಿಲಾಂಜಲಿ ಹಾಡ ಬಹುದಾಗಿದೆ. ಸಮಸ್ಯೆಗಳು ನೂರಾರಿದ್ದರೆ ಅದಕ್ಕೆ ಸಾವಿರಾರು ಪರಿಹಾರಗಳು ಖಂಡಿತವಾಗಿಯೂ ಇದ್ದೇ ಇರುತ್ತವೆ. ದೃಢ ಮನಸ್ಸಿನಿಂದ ಮನಸ್ಸಿದ್ದಲ್ಲಿ ಮಾರ್ಗ ಎಂದು ಅಳುದುಳಿದ ನೀರನ್ನು ಜಾಗೃತವಾಗಿ ಸಂಗ್ರಹಿ ಬಳೆಸೋಣ. ನಮ್ಮ ಮುಂದಿನ ಪೀಳಿಗೆಗೂ ಶುಧ್ಧವಾದ ಯಥೇಚ್ಚಾವಾದ ನೀರನ್ನು ಉಳಿಸೋಣ.

ಸುರಿವ ಮಳೆಯ ನೀರನ್ನು ಜೋಪಾನವಾಗಿ ಸಂಕ್ಷಿಸಿಕೊಳ್ಳುವತ್ತ ಹರಿಸೋಣ ನಮ್ಮೆಲ್ಲರ ಚಿತ್ತ. ಇಂದು ಉಳಿಸದಿದ್ದರೆ ಹನಿ ಹನಿ ನೀರು ಮುಂದೆ ಇರುವುದಿಲ್ಲ ಒಂದು ಚೂರು ಕಣ್ಣೀರು.

ಏನಂತೀರೀ?

 

ಸರಸ್ವತಿ ನದಿ ಮತ್ತವಳ ಪುನಶ್ವೇತನ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ,  ಸರಸ್ವತಿ ನದಿ ಮತ್ತವಳ ಪುನಶ್ವೇತನದ ಕುರಿತಾದ  ವಿಷಯದ ಬಗ್ಗೆ  ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಆರ್. ಕೃಷ್ಣಮೂರ್ತಿ( ಖಾಸಗೀ ಕಂಪನಿಯ ಉದ್ಯೋಗಿಗಳು ಮತ್ತು ಇತಿಹಾಸ ಸಂಕಲನಕಾರರು)  ಅವರ ಅಮೃತ ಹಸ್ತದಿಂದ  ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಮತ್ತು ಅವರ ಮಗಳು ಅನನ್ಯಳ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಒಂದು ದೇಶದ ನಾಗರೀಕತೆ ಮತ್ತು ಸಂಸ್ಕೃತಿಗಳು ಬಹುತೇಕ ಒಂದಲ್ಲಾ ಒಂದು ನದಿ ಪಾತ್ರದ ಸುತ್ತಮುತ್ತಲೇ ಬೆಳೆದು ಬಂದಿರುತ್ತದೆ ಅಂತೆಯೇ ನೈಲ್ ನದಿಯ ಸುತ್ತಲೇ ಗ್ರೀಕ್ ಸಂಸ್ಕೃತಿ ಬೆಳೆದಿದ್ದರೆ, ಭಾರತೀಯ ಸಂಸ್ಕೃತಿ ಸಿಂಧು ನದಿಯ ಸುತ್ತಮತ್ತಲಿನದ್ದು ಎಂದೇ ನಾವುಗಳು ನಮ್ಮ ಇತಿಹಾಸದಲ್ಲಿ ಇಲ್ಲಿಯವರೆಗೆ ಓದಿಕೊಂಡು ಬಂದಿದ್ದೇವೆ.  ಸಿಂಧೂ ಜನಾಂಗದವರು ಎಂದು ಹೇಳಲು ಬಾಯಿ ತಿರುಗದ ಬ್ರಿಟಿಷರು ಅದನ್ನೇ ಇಂದೂ ಎಂದು ಹೇಳಿ ಕಡೆಗೆ ನಮ್ಮನ್ನು ಇಂಡಿಯನ್ನರು ಎಂದು ಕೆರೆದದ್ದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. 3000 ವರ್ಷಗಳಷ್ಟು ಹಳೆಯದಾದ ಹರಪ್ಪ ಮಹೆಂಜದಾರೂ ಸಂಸ್ಕೃತಿಯೇ ಮತ್ತು  ಸಿಂಧೂ ನದಿಯೇ ನಮ್ಮ ಮೂಲ ಎಂದು ಬಿಂಬಿಸಲಾಗಿದೆ ಮತ್ತು ಅದನ್ನೇ ನಮಗೆ  ನಂಬಿಸಲಾಗಿದೆ. ಆದರೆ ಗ್ರೀಕ್ ನಾಗರೀಕತೆಗೂ ಹಿಂದಿನ, ಸಿಂಧೂ ನದಿಗಿಂತಲೂ ಬಹಳ ಹಳೆಯದಾದ, ಸಿಂದೂ ನದಿಗಿಂತಲೂ ಹತ್ತಾರು ಪಟ್ಟು ವಿಶಾಲವಾದ, ನೂರಾರು ಮೈಲಿಗಳಷ್ಟು ದೊಡ್ದದಾದ  ಮತ್ತು ಇತಿಹಾಸ ಪ್ರಸಿದ್ಧವಾದ ವೈದಿಕ ನದಿಯೊಂದು ನಮ್ಮ ದೇಶದ ಮೂಲ ಸಂಸ್ಕೃತಿ ಎಂದು ಹೇಳಿದರೆ ಬಹುತೇಕರಿಗೆ ಇಂದು ಆಶ್ವರ್ಯವಾಗಬಹುದು. ಹೌದು ಇದು ಆಶ್ವರ್ಯವಾದರೂ ನಂಬಲೇ ಬೇಕಾದ  ಕಠು ಸತ್ಯವೇ ಹೌದು.  ನಾವಿಂದು ತಿಳಿಯ ಹೊರಟಿರುವುದು ವೈದೀಕ ನದಿ ಸರಸ್ವತಿಯ ಬಗ್ಗೆ.

ಭಾರತದ ದೊಡ್ಡ ನದಿಗಳಾದ  ಸಪ್ತ ನದಿಗಳ ಉಗಮ ಸ್ಥಾನವು ಹಿಮಾಲಯದ ತಪ್ಪಲಿನಲ್ಲಿ ಹಿಮಗಳು ಕರಗಿ ನೀರಾಗಿ ಹರಿಯುವುದರ ಮೂಲಕವೇ ಆಗಿದೆ. ಋಗ್ವೇದದ ಒಂದು ಶ್ಲೋಕದಲ್ಲಿ ತಿಳಿಸಿರುವ  ಪ್ರಕಾರ ನಮ್ಮ  ಭೂಮಿ ಉಗಮವಾಗಿರುವುದು 4320000000 ವರ್ಷಗಳ ಹಿಂದೆ. 110000 ಮಿಲಿಯನ್ ವರ್ಷದ ಹಿಂದೆ  ವೈವಸ್ವತ ಮನ್ಬಂತರ  ಶುರುವಾಗುವ ಮೊದಲು  ಈಗಿರುವ ಏಳೂ ಖಂಡಗಳು ಅಂಟಾರ್ಕಟಿಕದ ಭಾಗಿವಾಗಿದ್ದು ನಿಧಾನವಾಗಿ ಚಲಿಸುತ್ತಾ 75 ಮಿಲಿಯನ್ ವರ್ಷಗಳ ಹಿಂದೆ ಒಂದೊಕ್ಕೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ  ಭೂಭಾಗ ಉಬ್ಬಿಕೊಂಡು ಎತ್ತರದ ಹಿಮಾಲಯ ಉದ್ಬವವಾಗಿ, ಭೂಮಿಯಿಂದ ಎತ್ತರೆತ್ತರಕ್ಕೆ  ಹೋದಂತೆಲ್ಲಾ ಉಷ್ಣಾಂಷ ಕಡಿಮೆಯಾಗುತ್ತಾ ಹೋಗಿ,  ಉಷ್ಣಾಂಶ -3 ಡಿಗ್ರಿಗಿಂತಲೂ ಕಡಿಮೆಯಾದಾಗ ನೀರು ಘನೀಕೃತವಾಗಿ ಹಿಮವಾಗುತ್ತದೆ. ನಂತರ ಇದೇ ನೀರು ಕರಗುತ್ತಾ  ಗಂಗಾ, ಯಮುನಾ, ಸರಸ್ವತಿ, ಬ್ರಹ್ಮಪುತ್ರ, ಸಟ್ಲೇಜ್, ಬಿಯಾಸ್ ರಾವಿ, ಝೀಲಂ ನದಿಗಳ ಉಗಮಕ್ಕೆ ಕಾರಣೀಭೂತವಾಯಿತು ಎಂದು ನಮ್ಮ ಪುರಾಣಗಳು ಹೇಳುತ್ತವೆ ಮತ್ತು ಇದನ್ನೇ NASA & ISRO ಉಪಗ್ರಹಗಳು ಮತ್ತು ಪುರಾತನ ತತ್ವ ಶಾಸ್ತ್ರದ ಇಲಾಖೆಗಳು ಪುರಸ್ಕರಿಸುತ್ತಿವೆ. ಹೀಗಾಗಿ ನಮ್ಮ ದೇಶದ ನಾಗರೀಕತೆ ಮತ್ತು ಸಂಸ್ಕೃತಿ ಇಡೀ ಬಹಳ ಪುರಾತನದ್ದು ಅಂದರೆ ಗ್ರೀಕ್ ಇತಿಹಾಸಕ್ಕಿಂತಲೂ ಮುಂಚಿನದು ಎಂಬುದನ್ನು ಪುಷ್ಟೀಕರಿಸುತ್ತದೆ.

ಹೀಗೆ ಉಗಮವಾದ ಬಹುತೇಕ ನದಿಗಳು ಪೂರ್ವದಿಕ್ಕಿನತ್ತ ಹರಿದರೆ, ಸರಸ್ವತಿ ನದಿ ಪಶ್ಚಿಮದ ಕಡೆ ಹರಿಯುತ್ತಾ, ಕುರುಕ್ಷೇತ್ರ ಅಂದರೆ  ಈಗಿನ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶಗಳ ಮೂಲಕ ಗುಜರಾತ್ ಪ್ರವೇಶಿಸಿ, ಸಮುದ್ರ  ತಳದಲ್ಲಿ ಮುಳುಗಿ ಹೋಗಿರುವ ದ್ವಾರಕೆಯ ಬಳಿ ಸಮುದ್ರ ಸೇರುತ್ತಿತ್ತು ಎಂಬುದನ್ನು ನಮ್ಮ ಪುರಾಣಗಳು ತಿಳಿಸುತ್ತವೆ. ಋಗ್ವೇದದಲ್ಲಿ 64 ಬಾರಿ ಸರಸ್ವತಿ ನದಿಯ ಉಲ್ಲೇಖವಿದ್ದರೆ, ರಾಮಾಯಣದಲ್ಲಿ  7 ಬಾರಿ ಮತ್ತು ಮಹಾಭಾರದದಲ್ಲಿ  235 ಸಲ ಸರಸ್ವತಿ ನದಿಯ ಬಗ್ಗೆ ಉಲ್ಲೇಖವಿದೆ. ಬಲರಾಮ ತನ್ನ ಪಾಪ ಪ್ರಾಯಶ್ಚಿತ್ತಕ್ಕಾಗಿ ಸರಸ್ವತಿ ನದಿಯ ಪಾತ್ರದ ಮುಖಾಂತರವೇ  ಹಿಮಾಲಯವನ್ನು ತಲುಪಿ ತನ್ನ ಪಾಪವನ್ನು ಕಳೆದು ಕೊಂಡ ಎಂದು ಪುರಾಣ ಹೇಳುತ್ತದೆ. ಅರ್ಜುನ ಪಾಶುಪಥಾಸ್ತ್ರವನ್ನು  ಪಡೆಯುವಾಗ ತಪ್ಪಸ್ಸು ಮಾಡಿದ್ದೂ ಇದೇ ಸರಸ್ವತಿಯ ತಟದಲ್ಲಿ ಎಂಬ ಉಲ್ಲೇಖವಿದೆ.  ಸ್ಕಂದ ಪುರಾಣ, ನಾರದ ಪುರಾಣಗಳಲ್ಲಿಯೂ ಮಾರ್ಕಂಡೇಯ ಋಷಿಗಳು ಇದೇ ಸರಸ್ವತಿನದಿಯ ತಟದಲ್ಲಿಯೇ ವಾಸಿಸುತ್ತಿದ್ದರು ಎಂದು ತಿಳಿಸುತ್ತದೆ. ಪ್ರಸ್ತುತ ಗಂಗಾ ನದಿಗಿಂತಲೂ 16-20ರಷ್ಟು ದೊಡ್ಡದಾದ ನದಿ ಪಾತ್ರವನ್ನು ಹೊಂದಿದ್ದ ಸರಸ್ವತಿ ನದಿ ಅಂದಿನ ಕಾಲಕ್ಕೆ ಅತೀ ದೊಡ್ಡ ನದಿಯಾಗಿದ್ದು ಅದರ ಪಾತ್ರದ ಸುತ್ತಮುತ್ತಲಿನ ಭೂಮಿ  ಅತ್ಯಂತ ಫಲವತ್ತತೆಯಿಂದ ಕೂಡಿತ್ತು ಇಂದಿನ ರಾಜಾಸ್ಥಾನದ ಥಾರ್ ಮರುಭೂಮಿಯಲ್ಲಿಯೂ ಒಂದು ಕಾಲದಲ್ಲಿ ಸರಸ್ವತಿ ನದಿ ಹರಿಯುತ್ತಿದ್ದಳು ಎಂಬುದಾಗಿ ಇತಿಹಾಸ ಹೇಳುತ್ತದೆ.  ಇಷ್ಟೆಲ್ಲಾ ಪ್ರಸಿದ್ಧಿ ಹೊಂದಿದ್ದ ಸರಸ್ವತಿ ನದಿ ಇಂದೇಕೆ ನಮಗೆ ಗೋಚರಿಸುತ್ತಿಲ್ಲ? ಸರಸ್ವತಿ ನದಿಯನ್ನು ಗುಪ್ತಗಾಮಿನಿ ಎಂದೇಕೆ ಕರೆಯುತ್ತಾರೆ ?  ಹದಿನೆಂಟನೇ ಶತಮಾನದಲ್ಲಿ ಕೆಲ ಆಂಗ್ಲ ಇತಿಹಾಸಕಾರರು ಇದನ್ನೇ ನೆಪವಾಗಿಟ್ಟು ಕೊಂಡು ಸರಸ್ವತಿ ಎಂಬ ನದಿಯೇ ಇರಲಿಲ್ಲ. ಅದು ಕೇವಲ ಕಾಲ್ಪನಿಕ. ರಾಮಾಯಣ ಮತ್ತು ಮಹಾಭಾರತಗಳು ನಡದೇ ಇಲ್ಲ. ಅವೆಲ್ಲವೂ ಕಾಲ್ಪನಿಕ ಕಥೆಗಳು ಎಂಬುದಾಗಿ ಹಸಿ ಸುಳ್ಳನ್ನು ಹೇಳುತ್ತಾ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.    ಸಾವಿರಾರು ವರ್ಷಗಳ ಹಿಂದೆಯೇ  ಸರಸ್ವತಿ ನದಿ  ಕಾಣೆಯಾಗಿದ್ದರೂ ಇಂದಿಗೂ ಜನ ಮಾನಸದಲ್ಲಿ  ಸರಸ್ವತಿ ನದಿ ಇದೆ ಮತ್ತು ರಾಮಾಯಣ,   ಮಹಾಭಾರತದ ನಡೆದ ಕುರುಹಾಗಿ ಅದರಲ್ಲಿ ಉಲ್ಲೇಖವಾಗಿರುವ ಬಹುತೇಕ  ಪ್ರದೇಶಗಳು ಭೂಭಾಗಗಳು ಇಂದಿಗೂ ನಮಗೆ ಕಾಣ ಸಿಗುತ್ತವೆ ಎಂದರೆ  ಅವೆಲ್ಲವೂ ಸತ್ಯ  ಎಂಬುದನ್ನು ಜಗತ್ತಿಗೆ ಸಾರಿ ಹೇಳಬೇಕಾಗಿದೆ.

ಹಿಮಾಲಯದ ತಪ್ಪಲಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಭೂಕಂಪಗಳು ಆಗುತ್ತಲೇ ಇರುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಂತಹದ್ದೇ ಭೂಕಂಪದಲ್ಲಿ ಅರ್ಧಕ್ಕರ್ಧ ನೇಪಾಳ ರಾಷ್ಟ್ರ ವಿಪತ್ತಿಗೆ ಒಳಗಾಗಿ, ಜಲ ಪ್ರಳಯವಾಗಿ ಇನ್ನೂ ಚೇತರಿಸಿಕೊಳ್ಳುತ್ತಿರುವುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಅಂತೆಯೇ ಸಾವಿರಾರು ವರ್ಷಗಳ ಹಿಂದೆ ಸರಸ್ವತಿ ನದಿ ಪಾತ್ರದಲ್ಲಾದ ಭೂಕಂಪದಿಂದಾಗಿ ಸರಸ್ವತಿ ನದಿ ಇಬ್ಬಾಗವಾಗಿ ಒಂದು ಭಾಗ  ತಮಸಾ ನದಿಯ ಮೂಲಕ ಈಗಿನ ಯಮುನಾ ನದಿಗೆ ಸೇರಿಕೊಂಡಿತು ಮತ್ತು ಮತ್ತೊಂದು ಭಾಗ ಭೂಮಿಯೊಳಗೆ ಅಂತರ್ಮುಖಿಯಾಗುತ್ತದೆ.ಸರಸ್ವತಿಯ ಉಪನದಿಯಾದ ಶತಧೃ ಹರ್ಯಾಣದ ರೋಪಾರ್ ಬಳಿ (ಈಗಿನ ರೂಪ್ ನಗರ) U-Turn  ತೆಗೆದುಕೊಂಡು  ಇಂದಿನ ಹರಿಯಾಣದ ಬಳಿ ಸಟ್ಲೇಜ್ ನದಿಯ ಮುಖಂತರ ಬಿಯಾಸ್ ನದಿಯಲ್ಲಿ ಲೀನವಾಗುವ ಕಾರಣದಿಂದಾಗಿಯೇ ಸರಸ್ವತಿ ನದಿಯ ಪಾತ್ರ ಬದಲಾಯಿತು ಎಂದು ಹೇಳುತ್ತದೆ ನಮ್ಮ ಇತಿಹಾಸ. ಆದರೆ  ಇಂದಿಗೂ ಕೂಡಾ ಸರಸ್ವತಿ ನದಿಯ ಪಾತ್ರದಲ್ಲಿದ್ದ ಹಲವಾರು ಉಪನದಿಗಳು ಮಳೆಗಾಲದಲ್ಲಿ ಉಕ್ಕಿಹರಿಯುತ್ತಿರುವುದನ್ನು ಕಾಣ ಬಹುದಾಗಿದೆ  ಅಂತಹ ನದಿಗಳಲ್ಲಿ ಗಗ್ಗರ್ ನದಿಯೂ ಒಂದಾಗಿದೆ.  ಮತ್ತು ಅದೇ ನದಿಯ ಪಾತ್ರದಲ್ಲಿದ್ದ   ನೂರಾರು ಮೀಟರ್ಗಳ ಉದ್ದ ಮತ್ತು ಅಗಲದ ಹಲವಾರು  ಸರೋವರಗಳು ಇಂದಿಗೂ   ಪ್ರಸ್ತುತವಾಗಿರುವುದು ಸರಸ್ವತಿ ನದಿಯ ಉಪಸ್ಥಿತಿಯನ್ನು ಸಾರಿ ಹೇಳುತ್ತವೆ.  ರಾಜಾಸ್ಥಾನದ ಮರುಭೂಮಿಯಲ್ಲಿ  ಮಣ್ಣು ಪರೀಕ್ಷೆ ಮಾಡಿ ನೋಡಿದಾಗ ಸಾವಿರಾರು ವರ್ಷಗಳ ಹಿಂದೆ ಅಲ್ಲಿ ಒಕ್ಕಲುತನ ಮಾಡುತ್ತಿದ್ದ ಕುರುಹು ಸಿಕ್ಕಿದೆ.

ಗುಜರಾತಿನ ಧೋಲಾವೀರಾ ಬಳಿ ನಡೆದ ಉತ್ಕತನದಲ್ಲಿ ಸಿಕ್ಕ ಮಡಿಕೆ ಕುಡಿಕೆಗಳು,  ಹೂಜಿಗಳು ಸುಟ್ಟ ಇಟ್ಟಿಗೆಗಳು ಸುಸಜ್ಜಿತವಾದ ರಸ್ತೆಗಳು ಮತ್ತು ಪಾದಾಚಾರಿ ರಸ್ತೆಗಳು  ನೀರು ಸೂಕ್ತರೀತಿಯಲ್ಲಿ ಹರಿಯಲು ಕಾಲುವೆಗಳು ಅಲ್ಲಿ  ಸಹಸ್ರಾರು ವರ್ಷಗಳ ಹಿಂದೆ ಒಂದು ಒಳ್ಳೆಯ ನಾಗರೀಕತೆ ಇತ್ತೆಂದು ಇಡೀ ಜಗತ್ತಿಗೇ ಸಾರಿ ಹೇಳುತ್ತಿವೆ.  ಅದೇ  ಅಲ್ಲದೆ  ಆ ಭಾಗದ ಸುತ್ತಮುತ್ತಲಿನ ಸುಮಾರು ಹದಿನಾರು ಸರೋವರಗಳು ತುಂಬಿ ಅದೇ ನೀರಿನ್ನೇ ಇಂದಿಗೂ ಕೂಡ ಕುಡಿಯಲು ಮತ್ತು ಕೃಷಿಗೆ ಬಳೆಸಿಕೊಳ್ಳುತ್ತಿದ್ದಾರೆ ಎಂದರೆ ಅಂದಿನಕಾಲದಲ್ಲಿಯೇ ನಮ್ಮಲ್ಲಿ ಮಳೆ ಕೊಯ್ಲಿನ ಪದ್ದತಿ  (Rain harvesting ) ಇತ್ತೆಂದು  ಜಗಜ್ಜಾಹೀರಾತಾಗಿದೆ. ಹಾಗೂ  ಇದೇ ಸರಸ್ವತಿ ನದಿಯನ್ನೇ  ಜಲಸಾರಿಗೆಯಂತೆ  ಉಪಯೋಗಿಸಿಕೊಂಡು ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸುತ್ತಿದ್ದರು ಎಂದು ತಿಳಿದು ಬರುತ್ತದೆ.

ಇಷ್ಟೆಲ್ಲಾ ಇತಿಹಾಸವಿರುವ ಸರಸ್ವತಿ ನದಿ ಮತ್ತು ನದಿ ಪಾತ್ರವವನ್ನು ಹುಡಕಲೇ ಬೇಕೆಂದು ನಿರ್ಧರಿಸಿದ ಕೆಲವರು ಅದರಲ್ಲೂ ಮಾನನೀಯ ಶ್ರೀ ವಿಷ್ಣು ಶ್ರೀಧರ್ ವಾಕಣಕರ್ ಮತ್ತು ಶ್ರೀ ಮೋರೊಪಂತ ನೀಲಕಂಠ ಪಿಂಗಳೆಯವರ ನಾಲ್ಕು-ಐದು ವಿದ್ವಾಂಸರ ತಂಡ, ನವ ದೆಹಲಿಯ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನ ತಂಡದ  ನೇತೃತ್ವದಲ್ಲಿ ಸರಸ್ವತಿ ನದಿಯ ಪಾತ್ರದ ಅಡಿಯಿಂದ ಮುಡಿಯವರೆಗೂ ಸುಮಾರು ಮೂರು- ನಾಲ್ಕು ತಿಂಗಳಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಹಲವಾರು ಕಡೆ ಉತ್ಕತನಗಳನ್ನು ನಡೆಸಿ ಅಲ್ಲಿ ಸರಸ್ವತಿ ನದಿ ಮತ್ತು ಅದರ ಸುತ್ತಮುತ್ತಲಿನ ನಾಗರೀಕತೆಯ ಅಸ್ಥಿತ್ವ ಕಂಡು ಬಂದಿದೆ. ಮೀರಟ್ ಪ್ರದೇಶದ ಸಮೀಪದ ಭಾಗ್ಪತ್ ಎಂಬಲ್ಲಿನ ಉತ್ಕತನದಲ್ಲಿ ಯೋಧರು ಯುದ್ದಕ್ಕೆ ಉಪಯೋಗಿಸುತ್ತಿದ್ದ ರಥ, ಯುದ್ದಕ್ಕೆ ಬಳೆಸುತ್ತಿದ್ದ ಖಡ್ಗ ಅದರೆ ಜೊತೆ ಆನೆಯ ದಂತಗಳಿಂದ ಮಾಡಿದ ಕೆಲ ಆಟಿಕೆಗಳು ಬಾಚಣಿಗೆ ಮುಂತಾದ ವಸ್ತುಗಳು ಸಿಕ್ಕಿವೆ ಮತ್ತು ಶಾಸ್ತ್ರೋಕ್ತವಾಗಿ ಮೃತರ ಸಮಾದಿ ಮಾಡುತ್ತಿದ್ದ ಪದ್ದತಿ ಇತ್ತೆಂದು ತಿಳಿದು ಬರುತ್ತದೆ. ಅದೇ ರೀತಿ ಬಿ. ಬಿ ಲಾಲ್ ಅವರ ನೇತೃತ್ವದ ತಂಡ ಪಾಂಡವರ ರಾಜಧಾನಿ ಕೌಷಂಬಿಯನ್ನು ಉತ್ಖನ ಮಾಡಿ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದ್ದ ಪ್ರದೇಶಗಳಿಗೂ ಇಲ್ಲಿಗೂ ಸಾಮ್ಯವಿದ್ದದ್ದು ಕಂಡು ಬಂದಿರುತ್ತದೆ ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನು ಪಾಂಡವರ ಪರವಾಗಿ ಧೃರ್ಯೋಧನದ ಬಳಿ ಸಂಧಾನಕ್ಕೆಂದು ಬಂದು ಕೇಳಿದ ಐದು ಗ್ರಾಮಗಳಾದ ಪಾಣೀಪತ್, ಸೋನೆಪತ್, ಭಾಗ್ ಪತ್, ಇಂದ್ರಪ್ರಸ್ಥ ಮತ್ತು ತಿಲ್ ಪತ್ ಗ್ರಾಮಗಳು ಇಂದಿಗೂ ಸರಸ್ವತಿ ನದಿಯ ಪಾತ್ರದಲ್ಲಿ ಇರುವುದು ಗಮನಿಸ ಬೇಕಾದ ಆಂಶವಾಗಿದೆ.

ಇವೆಲ್ಲಾ ಸಾಕ್ಷಾಧಾರಗಳಿಂದ  ಉತ್ಸಾಹಿತವಾದ ಪ್ರಸಕ್ತ ಹರ್ಯಾಣ ಸರ್ಕಾರ ಸರಸ್ವತಿ ನದಿಯ ಪುನಶ್ವೇತನಕ್ಕೆಂದೇ ಒಂದು ವೀಶೇಷವಾದ ಮಂಡಳಿಯನ್ನು ರಚಿಸಿ ಅದಕ್ಕೆ ಸಾಕಷ್ಟು  ಪ್ರೋತ್ಸಾಹ ಧನವನ್ನು ಮೀಸಲಾಗಿಸಿ ಸರಸ್ವತಿ ನದಿಯನ್ನು  ಮತ್ತೆ ಹಿಂದಿನ ರೀತಿಯಲ್ಲಿಯೇ ಪುನಶ್ವೇತನ ಗೊಳಿಸಲು ಕಠಿಬದ್ದರಾಗಿ ಹೊರಟಿರುವುದು ನಿಜಕ್ಕೂ ಶ್ಲಾಘನೀಯವಾದ ಸಂಗತಿಯಾಗಿದೆ. ಈಗಾಗಲೇ ಆ ನದಿ ಪಾತ್ರದಲ್ಲಿದ್ದ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಕಾಲುವೆಗಳನ್ನು ಮಾಡಿಸಿ ಮಳೆಗಾಲದಲ್ಲಿ ತುಂಬಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕೆಲಸಗಳಿಗೂ ಸಂಘಪರಿವಾರ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಲಿದೆ.  ಇದುವರೆಗೂ ನಡೆದಿರುವ ಕೆಲಸ ಮತ್ತು  ಎಲ್ಲರ ಉತ್ಸಾಹಗಳನ್ನು ಗಮನಿಸಿದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಜೀವಂತ ಸರಸ್ವತಿ ನದಿಯನ್ನು ಕಾಣುವ ಸುಯೋಗ ನಮಗೆ ಖಂಡಿತವಾಗಿಯೂ ಬಂದೇ ಬರಲಿದೆ ಮತ್ತು  ನದಿಯ ಪಾತ್ರದ ಸುತ್ತ ಮುತ್ತಲಿನ ಅಂದಿನ ನಾಗರೀಕತೆ ಮರುಕಳಿಸಿ ಭಾರತೀಯ ಜೀವನ ಪದ್ದತಿ ಮತ್ತು ಇತಿಹಾಸ ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗಿಂತಲೂ ಹಳೆಯದ್ದಾಗಿದೆ ಎಂಬುದನ್ನು ಇಡೀ ಜಗತ್ತಿಗೇ ಸಾರಬಹುದಾಗಿದೆ ಎಂದು ತಿಳಿಸಿ ಶ್ರೀ ಕೃಷ್ಣಮೂರ್ತಿಗಳು ತಮ್ಮ ಮಾತನ್ನು ಮುಗಿಸಿ ಸಭಿಕರಿಂದ ತೂರಿಬಂದ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಸಮರ್ಪಕ ಉತ್ತರ ನೀಡಿದರು ಅದೇ ರೀತಿ ಪ್ರಶ್ನೋತ್ತರ ವೇಳೆಯಲ್ಲಿಯೇ  ಒಂದು ಹಂತದಲ್ಲಿ ಒಂದು  ವಿಷಯದ ಬಗ್ಗೆ ಗಹನವಾದ ಚರ್ಬೆ ನಡೆದು ತಾರಕ್ಕಕ್ಕೇರಿದರೂ  ಕೃಷ್ಣಮೂರ್ತಿಗಳು ತಮ್ಮಆಪಾರ ಅನುಭವ ಮತ್ತು ತಾಳ್ಮೆಯಿಂದ ಜಾಣ್ಮೆಯ ಉತ್ತರ ನೀಡಿ ಚರ್ಚೆಯನ್ನು ತಹಬದಿಗೆ ತಂದಿದ್ದದ್ದು  ಎಲ್ಲರ ಮನಸೂರೆಗೊಂಡಿತು.

ಒಬ್ಬ  ಸಭಿಕಾನಾಗಿ ಅವರ ಆಳವಾದ ವಿಷಯ ಮಂಡನೆ ಕೇಳುತ್ತಾ ಹೋದಂತೆ ನಾವೆಲ್ಲೋ ತ್ರೇತಾಯುಗ ಇಲ್ಲವೇ ದ್ವಾಪರಯುಗದಲ್ಲಿ ಇದ್ದೇವೇನೋ ಎಂಬಂತೆ ಭಾಸವಾಗಿ ಅವರು ಹೇಳಿದ ಅನೇಕ ಅಂಕಿ ಅಂಶಗಳನ್ನು ಮತ್ತು ವಿಷಯಗಳನ್ನು ನಾನು ದಾಖಲು ಮಾಡಿಕೊಳ್ಳುವುದನ್ನು ಮರೆತಿದ್ದೇನೆ. ಹಾಗಾಗಿ ನನ್ನೀ  ವರದಿಗಿಂತಲೂ  ಅವರು ಪ್ರಸ್ತಾಪಿಸಿದ ಅನೇಕ ವಿಷಯಗಳನ್ನು ಅವರ ಬಾಯಿಯಿಂದಲೇ ಕೇಳಿದ್ದರೇ ಸೂಕ್ತ  ಎಂದನಿಸುತ್ತದೆ.  ಇಷ್ಟು ಸಣ್ಣ ವಯಸ್ಸಿನ ಕೃಷ್ಣಮೂರ್ತಿಗಳು ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳಿಂದ ಸಾವಿರಾರು ಭಾರತೀಯ ಇತಿಹಾಸ ಕುರಿತಾದ ಪುಸ್ತಕಗಳನ್ನು ಓದಿ ಅಪಾರವಾದ  ಜ್ಞಾನ ಸಂಪಾದನೆ ಮಾಡಿ, ಯಾವ ಬ್ರಿಟೀಷರು ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ನಮ್ಮಲ್ಲಿಯೇ ಜಗಳವನ್ನು ತಂದಿಡಲು ಸುಳ್ಳು ಸುಳ್ಳು ಕಾಲ್ಪನಿಕ ಇತಿಹಾಸವನ್ನು ಮೆಕಾಲೇ ಶಿಕ್ಷಣ ಪದ್ದತಿಯ ಪುಸ್ತಕಗಳ  ಮೂಲಕ ನಮ್ಮೆಲ್ಲರ ಮಸ್ತಕದಲ್ಲಿ ತುಂಬಿದ್ದಾರೋ ಅದೆಲ್ಲವನ್ನೂ  ಇಂತಹ ನೂರಾರು ಇತಿಹಾಸ ಸಂಕಲನಕಾರರ ಪರಿಶ್ರಮದಿಂದ ನಿಜವಾದ ಭಾರತೀಯ ಇತಿಹಾಸ, ನಾಗರೀಕತೆ ಮತ್ತು ಸಂಸ್ಕೃತಿಗಳನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕಲಿಸಬಹುದು ಎಂದರೆ ಉತ್ಪೇಕ್ಷೆಯೇನಲ್ಲ.

ಶ್ರೀಯುತ ಕೃಷ್ಣಮೂರ್ತಿಗಳೊಂದಿಗೆ ಬಂದಿದ್ದ ಮತ್ತೊಬ್ಬ ಯುವ ಇತಿಹಾಸ ಸಂಕಲನಕಾರ ಶ್ರೀ ವಾಗೀಶ್ ಕೂಡ ನಶಿಸಿ ಹೋಗುತ್ತಿರುವ ಅನೇಕ ಹಸ್ತಪ್ರತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ನಮ್ಮೆಲ್ಲಾ ಗ್ರಂಥಗಳು ಇನ್ನೂ ನಾಲ್ಕು ನೂರು- ಐದು ನೂರು ವರ್ಷಗಳ ವರೆಗೂ ಮುಂದಿನ ಹತ್ತಾರು ತಲೆಮಾರಿನವರೆಗೆ ಉಳಿಯಬೇಕೆಂದರೆ ತಾಳೇ ಗರಿಯಲ್ಲಿ ಬರೆದಿಡುವುದೇ ಸೂಕ್ತ ಎಂದು ಮಂಡಿಸಿದರು. ಈಗಿನ ಕಾಗದ ಪುಸ್ತಕ ಹೆಚ್ಚೆಂದರೆ 60-80 ವರ್ಷಗಳವರೆಗೆ ಉಳಿಯಬಹುದು. ಇನ್ನೂ ಅದನ್ನು ಡಿಜಿಟಲೀಕರಣ ಮಾಡಿಟ್ಟಲ್ಲಿ ಅವೆಲ್ಲವನ್ನೂ ರಕ್ಷಿಸಿದ ಹಾರ್ಡ್ ಡಿಸ್ಕ್ ತೊಂದರೆಯಾದಲ್ಲಿ ಅಥವಾ ಕ್ಲೌಡ್ನಲ್ಲಿ ಸಂಗ್ರಹಿಸಿಟ್ಟ ವಿಷಯಗಳನ್ನು ಬಳೆಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದಲ್ಲಿ ನಮ್ಮ ಬಳಿಯೇ ಸಂಗ್ರಹಿಸಿ ಇಟ್ಟು ಕೊಳ್ಳಬಹುದಾದ  ನೂರಾರು ವರ್ಷಗಳಷ್ಟು ದಿನ ಉಳಿಯುವ ತಾಳೇ ಗರಿಯೇ ಸೂಕ್ತ ಎಂದು ತಿಳಿಸಿದರು.

ಇದರ ಅಂಗವಾಗಿ ಮೇಲುಕೋಟೆಯ ವಯೋ ವೃದ್ಧ ಪಂಡಿತರಾದ ಶ್ರೀ ತಾತಾಚಾರ್ ಅವರ ಸಮ್ಮುಖದಲ್ಲಿ  ನಮ್ಮೆಲ್ಲಾ  ಧಾರ್ಮಿಕ ಗ್ರಂಥಗಳನ್ನು ತಾಳೇಗರಿಯಲ್ಲಿ ಬರೆದಿಡುವ ಅಭಿಯಾನ ಶುರುವಾಗಿದೆ. ಹಾಗೆ ಬರೆದು ಕೊಡುವವರಿಗೆ ಎಲ್ಲಾ ರೀತಿಯ ಸಲಕರಣೆಗಳೊಂದಿಗೆ ಸೂಕ್ತ ಸಂಭಾವನೆಯನ್ನೂ ಕೊಡುವುದಾಗಿ ತಿಳಿಸಿದರು.  ಈ  ಆಭಿಯಾನದಲ್ಲಿ ಭಾಗವಹಿಸಲು ಇಚ್ಚಿಸುವವರು 9972899775/ 9880189873 ಈ ನಂಬರಿಗೆ ಕರೆ ಮಾಡಿದಲ್ಲಿ  ಅವರ ಕಡೆಯಿಂದ ಸೂಕ್ತ ತರಭೇತಿಯನ್ನು ನೀಡಲಾಗುವುದು ಎಂದು ತಿಳಿಸಿ, ಈಗಾಗಲೇ ಬೆಂಗಳೂರಿನ  ಒಂದು ತಂಡ ಒಂದೀಡೀ ಗ್ರಂಥವನ್ನು ತಾಳೇಗರಿಗೆ ಲಿಪ್ಯಂತರ ಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ  ಎಂದು ತಿಳಿಸಿದರು.

WhatsApp Image 2019-06-18 at 2.41.59 PM

ಇತಿಹಾಸ ಸಂಕಲನದ ಬಗ್ಗೆ   ಈ ಕೆಳಕಂಡ ವಿಧಾನಗಳಲ್ಲಿ  ಹೆಚ್ಚಿನ ವಿಷಯಗಳನ್ನು ಅರಿತು ಕೊಳ್ಳಬಹುದು ಎಂದು ತಿಳಿಸಿದರು.

http://www.trueindianhistory.org

ಮೀಮಿಂಚೆ :  itihasablr@gmail.com

Face Book : Bharatiya Itiasa Sankalana Samithi

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸರಳ ಮತ್ತು  ಸುಂದರವಾಗಿ ನಿರೂಪಣೆ ಮಾಡಿದರೆ, ಎಂದಿನಂತೆ ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯರವರ ಕಂಚಿನ ಕಂಠದೊಂದಿಗೆ  ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ  ಈ ತಿಂಗಳ ಮಂಥನ ಭಾರತ ಮತ್ತು ಪಾಕೀಸ್ಥಾನಗಳ ನಡುವಿನ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದಾಗಲೂ ಅತ್ಯಂತ ಹೆಚ್ಚಿನ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು  ರೋಚಕವಾದ ವಿಷಯದೊಂದಿಗೆ  ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ  ನಮ್ಮ ದೇಶದ ನಿಜವಾದ  ಇತಿಹಾಸವನ್ನು  ಮತ್ತು ಸಂಸ್ಕೃತಿಗಳನ್ನು ನಾವುಗಳು ಸರಿಯಾದ ರೀತಿಯಲ್ಲಿ ಆಭ್ಯಸಿಸಿ ಅದನ್ನೇ  ನಮ್ಮ  ಮಕ್ಕಳಿಗೆ ಕಲಿಸುವುದರ ಮೂಲಕ ನಮ್ಮ ನಮ್ಮ ಭಾರತ ದೇಶವನ್ನು ಆದಷ್ಟು ಶೀಘ್ರದಲ್ಲಿಯೇ ಮತ್ತೊಮ್ಮೆ ವಿಶ್ವ ಗುರುವಾಗಿಸುವ ಮಹತ್ಕಾರ್ಯದಲ್ಲಿ ನಮ್ಮ ಅಳಿಲು ಪ್ರಯತ್ನವನ್ನು  ಮುಂದುವರಿಸೋಣ.

ಏನಂತೀರೀ?

ಭಾರತೀಯ ಯೋಗ ಮತ್ತು ಜೀವನ ಪದ್ದತಿ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಕುರಿತಾದ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಹೆಚ್. ಪಿ. ಕುಂಟೋಜಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಪ್ರಸ್ತುತ ಯೋಗ ಶಿಕ್ಷಕರು) ಅವರ ಅಮೃತ ಹಸ್ತದಿಂದ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ಮಾತೆಯವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ಕುಂಟೋಜಿಯವರು ಇಂದಿನ ವಿಷಯವಾಗಿದ್ದ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಎರಡು ವೈರುಧ್ಯ ಎಂದೇ ಆರಂಭಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಭಾರತೀಯರು, ಭಾರತೀಯ ಜೀವನ ಶೈಲಿಯನ್ನು ಸಂಪೂರ್ಣವಾಗಿ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ನಿಜಕ್ಕೂ ಖೇದಕರ. ಕಾಮ, ಕ್ರೋದ, ಲೋಭ,ಮೋಹ ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಮೀರಿ ಬರಲು ಸಾಧ್ಯವಾಗದೇ ಜಂಜಾಟದಲ್ಲಿ ಮುಳುಗಿದ್ದೇವೆ. ಭಗವದ್ಗೀತೆಯ ಆರನೇ ಅಧ್ಯಾಯದ ಒಂದು ಶ್ಲೋಕದಲ್ಲಿ ಯೋಗದ ಕುರಿತಾಗಿ ಹೇಳಿರುವುದನ್ನು ಉಲ್ಲೇಖಿಸಿತ್ತಾ, ನಮಗೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸ ಬೇಕು. ನಮಗೆ ಎಷ್ಟು ಬೇಕೋ ಅಷ್ಟೇ ದುಡಿಯಬೇಕು ಮತ್ತು ಅಷ್ಟನ್ನೇ ಅನುಭವಿಸಬೇಕು. ಹಾಗಾದಾಗಲೇ ಆವನು ಯೋಗಿ ಅನಿಸಿಕೊಳ್ಳುವುದು. ಶಂಕರಾಚಾರ್ಯರ ಭಜಗೋವಿಂದಂ ಆಭ್ಯಸಿದರೂ ಕೂಡಾ ಇದೇ ಅನುಭವವಾಗುತ್ತದೆ. ಯೋಗ ಎನ್ನುವುದು ನಮ್ಮ ಪ್ರಕೃತಿಯಲ್ಲಿ ನಮ್ಮ ಸುತ್ತಮುತ್ತಲಿರುವ, ಪ್ರಾಣಿ, ಪಶು ಪಕ್ಷೀ, ಕ್ರಿಮಿ ಕೀಟಗಳ ಹಾವ ಭಾವ ಮತ್ತು ಭಂಗಿಗಳ ಪ್ರತಿರೂಪವಾಗಿದೆ.

ಆದರೆ ನಾವಿಂದು life is enjoyment ಎಂದು ಭಾವಿಸಿ ನಮ್ಮ ದೇಹದ ಬಗ್ಗೆ ಯೋಚನೆಯೇ ಮಾಡದೇ ಇರುವುದರಿಂದ ನಮ್ಮ ದೇಹದಲ್ಲಿ ಕ್ರಿಮಿ ಕೀಟಗಳಿಂದ ತುಂಬಿಹೋಗಿದೆ. ನಮ್ಮ ದೇಹದಲ್ಲಿ ಉಸಿರು ಇರುವವರೆಗೂ ನಾವು ಮನುಷ್ಯರು. ಒಮ್ಮೆ ಉಸಿರು ನಿಂತು ಹೋದಲ್ಲಿ ನಮ್ಮನ್ನು ಶವ ಎನ್ನುತ್ತಾರೆ ಹಾಗಾಗಿ ಉಸಿರಾಡುವ ಸ್ಥಿತಿಯಲ್ಲಿರುವಾಗಲೇ ಆ ದೇಹ, ದೇಶದ ಅಭಿವೃಧ್ಧಿಗೆ ಉಪಯೋಗಿಸಿದ್ದರೆ ಏನೂ ಪ್ರಯೋಜನವಾಗದು.

ಶರೀರದ ರಚನೆಯ ಬಗ್ಗೆ ಉಪನಿಷತ್ತಿನಲ್ಲಿ ಚೆನ್ನಾಗಿ ಹೇಳಿದ್ದಾರೆ. ನಾವು ತಾಯಿಯ ಗರ್ಭದಲ್ಲಿರುವಾಗಲೇ ಸಕಲ ಯೋಗಾಸನಗಳನ್ನು ಕಲಿತಿರುತ್ತೇವೆ. ಅಮ್ಮನ ಕರುಳುಬಳ್ಳಿಯಲ್ಲಿ ಸುತ್ತಿಕೊಂಡಿರುವಾಗಲೇ ಅಷ್ಟಾಂಗ ಯೋಗಗಳನ್ನು ಮಾಡಿರುತ್ತೇವೆ. ನಮ್ಮ ದೇಹದಲ್ಲಿ ಒಟ್ಟು 206 ಮೂಳೆಗಳಿರುತ್ತವೆ. ಕಪಾದಲ್ಲಿ 8, ಮುಖದಲ್ಲಿ 14, ಎದೆ ಗೂಡಿನಲ್ಲಿ 24, ತೋಳು 64, ತೊಡೆ 64 ಇತರೆ ಕಡೆಯಲ್ಲಿ 26 ಈ ರೀತಿಯಾಗಿ ಅಸ್ತಿ ಪಂಜರಗಳಿಂದ ಸುಂದರವಾಗಿ ರೂಪುಗೊಂಡಿದೆ. ನಮ್ಮ ದೇಹ ವಾತ, ಪಿತ್ತ, ಕಫದಿಂದ ಆವೃತ್ತವಾಗಿದೆ. ಅದನ್ನು ಸ್ಥಿಮಿತವಾಗಿಟ್ಟು ಕೊಳ್ಳಲು ಯೋಗ ಬಹಳ ಸಹಕಾರಿಯಾಗಿದೆ. ಯೋಗ ಗರಡಿಮನೆಯಂತೆ ಕೇವಲ ದೇಹದಾಡ್ಯ ಬೆಳೆಸದೇ, ಮನಸ್ಸು ಮತ್ತು ದೇಹ ಎರಡನ್ನೂ ದಂಡಿಸುತ್ತದೆ. ಹಾಗಾಗಿ ಇತರೇ ವ್ಯಾಯಾಮದಿಂದ ಮೂವತ್ತು ನಲವತ್ತು ವರ್ಷಗಳು ನೆಮ್ಮದಿಯಾಗಿದ್ದರೆ, ಯೋಗ ಸಾಯವರೆಗೂ ನೆಮ್ಮದಿಯಾಗಿಡುತ್ತದೆ. ಹಾಗಾಗಿ ಮೊದಲು ನಾವು ನಮ್ಮನ್ನು ಮತ್ತು ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ನಮ್ಮ ದೇಹದಲ್ಲಿ 80ರಷ್ಟು ನೀರಿದ್ದರೆ 10ರಷ್ಟು ಗಾಳಿ ಮತ್ತು 10ರಷ್ಟು ಆಹಾರ ಇರಬೇಕು. ಆದರೆ ನಮ್ಮ ಇಂದಿನ ಜೀವನ ಶೈಲಿಯಲ್ಲಿ 90ರಷ್ಟು ಆಹಾರ ಮತ್ತು ಉಳಿದ 10ರಷ್ಟರಲ್ಲಿ ಗಾಳಿ ಮತ್ತು ನೀರು ತುಂಬಿ ಕೊಂಡಿರುವುದರಿಂದ ನಾವಿಂದು ಸ್ಧೂಲ ಕಾಯರಾಗಿದ್ದೇವೆ. ಕೈಕಾಲುಗಳು ಸಣ್ಣಗಿದ್ದು ಹೊಟ್ಟೆ ದಪ್ಪಗಾಗಿ ದಡೂತಿ ದೇಹದವರಾಗಿ ಬಿಟ್ಟಿದ್ದೇವೆ. ಹಾಗಾಗಿ ಕೇವಲ ಬಾಹ್ಯರೀತಿಯಲ್ಲಿ ಸುಂದರವಾಗಿದ್ದರೆ ಸಾಲದು. ಆಂತರಿಕವಾಗಿ ಸುಖಃದಿಂದ ಸುಂದರವಾಗಿಟ್ಟಿದ್ದಲ್ಲಿ ಮಾತ್ರವೇ ಆರೋಗ್ಯಕರವಾಗಿರುತ್ತದೆ. ಬೆಳಗಿನಿಂದ ಮಧ್ಯಾಹ್ನ 3ರ ವರೆಗೆ ದೇಹ ಬಿಸಿಯಾಗಿಟ್ಟು ಕೊಂಡರೆ ಸಂಜೆ 3ರ ನಂತರ ತಣ್ಣಗಿಟ್ಟು ಕೊಳ್ಳಬೇಕು. ಹಾಗೆ ದೇಹ ಇರಬೇಕಾಗಿದ್ದಲ್ಲಿ ನಮ್ಮ ಪಂಚೇಂದ್ರಿಯಗಳನ್ನು ನಿಗ್ರಹವಾಗಿಟ್ಟು ಕೊಳ್ಳಬೇಕು. ಹಾಗೆ ಇಂದ್ರೀಯಗಳನ್ನು ನಿಗ್ರಹದಲ್ಲಿಟ್ಟುಕೊಂಡಿರಲು ಯೋಗ ಬಹಳ ಉಪಕಾರಿಯಾಗಿದೆ. ಇದನ್ನೇ ನಮ್ಮ ಋಷಿ ಮುನಿಗಳು ಕಠಿಣ ಪರಿಶ್ರಮದಿಂದ ತಪ್ಪಸ್ಸಿನ ಮೂಲಕ ಸಾಧಿಸಿಕೊಂಡಿದ್ದರು. ಅವರು ಬಹಳಷ್ಟು ಸಮಯ ಮನೆಯ ಹೊರಗೇ ಇರುತ್ತಿದ್ದರು ಮತ್ತು ದೇಹವನ್ನು ದಂಡಿಸುತ್ತಿದ್ದರು. ಜೀವಿಸಲು ಅಗತ್ಯವಿದ್ದಷ್ಟೇ ಸೇವಿಸುತ್ತಿದ್ದರು ಹೊರತು, ಸೇವಿಸುವುದಕ್ಕೇ ಜೀವಿಸುತ್ತಿರಲಿಲ್ಲ. ಆದರೆ ನಾವಿಂದು ದೇಹ ದಂಡನೆ ಕಡಿಮೆಗೊಳಿಸಿ ಹೆಚ್ಚು ಹೆಚ್ಚು ಆಹಾರ ಸೇವಿಸುತ್ತಿರುವುದರಿಂದ ನಮ್ಮ ದೇಹ ಅನಾರೋಗ್ಯದ ಗೂಡಾಗಿದೆ. ಸಾಧ್ಯವಾದಷ್ಟೂ ಯೋಗಿಗಳಂತಾಗಲು ಪ್ರಯತ್ನಿಸ ಬೇಕು. ಸಾಧ್ಯವಾದಷ್ಟೂ ಮನಸ್ಸು ಮತ್ತು ದೇಹ ಒಂದೇ ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ. ಆದರೆ ನಾವಿಂದು ದೇಹ ಒಂದೆಡೆ ಇದ್ದರೆ ಮನಸ್ಸು ಮರ್ಕಟದಂತೆ ಮತ್ತೇನನ್ನೋ ಯೋಚಿಸುತ್ತಿರುತ್ತದೆ. ಹಾಗೆ ಮನಸ್ಸು ಮತ್ತು ದೇಹ ಏಕರೂಪದಲ್ಲಿ ಸದಾಕಾಲವೂ ಜಾಗೃತವಾಗಿರಲು ಯೋಗ ಬಹಳ ಪರಿಣಾಮಕಾರಿಯಾಗಿದೆ. ಕೇವಲ ಪುಸ್ತಕ ಓದಿಯೋ ಅಥವಾ ಯಾರನ್ನೋ ನೋಡಿಯೋ ಅಥವಾ ವೀಡಿಯೋ ನೋಡಿ ಆಸನಗಳನ್ನು ಮಾಡಿ ನಾವು ಯೋಗಿಗಳಾದೆವು ಎಂದೆಣಿಸಿದರೆ ಅದು ಕೇವಲ ಭ್ರಮೆಯಾಗುತ್ತದೆ. ಅಂತರಂಗ ಶುಧ್ದಿಯಾಗಿದ್ದಲ್ಲಿ ಮಾತ್ರವೇ ಬಹಿರಂಗ ಶುಧ್ಧಿ. ಹಾಗಾದಲ್ಲಿ ಮಾತ್ರವೇ ಯೋಗದ ಸಿಧ್ಧಿಯಾಗುತ್ತದೆ.

ನಮ್ಮ ದೇವಾನು ದೇವತೆಗಳನ್ನು ಸರಿಯಾಗಿ ಗಮನಿಸಿದಲ್ಲಿ ನಮಗೆ ಕಂಡು ಬರುವ ಅಂಶವೆಂದರೆ ಆ ದೇವಾನು ದೇವತೆಗಳು ಸಾಧಾರಣ ಸ್ಥಿತಿಯಲ್ಲಿ ನಿಂತಿರದೇ ಯಾವುದಾದರೊಂದು ಯೋಗಾಸನದ ಸ್ಥಿತಿಯಲ್ಲಿಯೇ ಕಾಣಸಿಗುತ್ತಾರೆ. ಆದರೆ ನಾವು ಅಂಧ ಪಾಶ್ಚಾತ್ಯೀಕರಣದಿಂದಾಗಿ ನಮ್ಮ ದೇವರನ್ನು ಅನುಕರಿಸದೇ ಮತ್ತಾವುದನ್ನೋ ಅನುಸರಿಸುತ್ತಾ ಅಧೋಗತಿಯತ್ತ ಸಾಗಿ ಆಲಸಿಗಳಾಗಿ ಹೋಗುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ನಮ್ಮ ದೇಶ, ನಮ್ಮ ಧರ್ಮ, ನಮ್ಮ ಹೆತ್ತ ತಂದೆ ತಾಯಿಯರನ್ನು ಪ್ರೀತಿಸದೆ ಆದರಿಸದೇ, ಗೌರವಿಸದೇ, ಮತ್ತಾವುದೋ ಪಾಶ್ವಾತ್ಯ ಸಂಸ್ಕಾರ, ಸಂಸ್ಕೃತಿಯನ್ನು ಆದರಿಸುತ್ತ ಕಾಲ ಕಳೆಯುತ್ತಿರುವುದು ನಿಜಕ್ಕೂ ದುಖಃಕರ. ನಮ್ಮ ಮನಸ್ಥಿತಿಯನ್ನು ಸರಿಯಾಗಿಟ್ಟು ಕೊಂಡು ನಿಯಮಿತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ , ಸುಳ್ಳು , ಮೋಸ ಮಾಡದೆ, ದುರಾಸೆ ಪಡದೆ ನಮ್ಮಲ್ಲಿ ಎಷ್ಟಿದೆಯೋ ಅಷ್ಟರಲ್ಲಿಯೇ ಜೀವನ ಮಾಡುವ ಶೈಲಿಯನ್ನು ಅನುಸರಿಸಿಕೊಳ್ಳಬೇಕು.
ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ನಮ್ಮಲ್ಲಿ ಅರ್ಪಣಾಭಾವವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರವೇ ದೇಹ ಮತ್ತು ಮನಸ್ಸು ಆಂತರಿಕವಾಗಿ ಶುದ್ಧವಾಗಿ ಆಂತರಂಗ ಮತ್ತು ಯಾವುದೇ ಖಾಯಿಲೆ ಕಸಾಲೆಗಳಿಲ್ಲದೆ ಬಹಿರಂಗವಾಗಿಯೂ ಶುದ್ಧತೆಯನ್ನು ಪಡೆದುಕೊಳ್ಳುತ್ತೇವೆ.

ಇನ್ನು ಸರಿಯಾದ ಉಸಿರಾಟದ ಕ್ರಮವನ್ನು ಸೂಚಿಸುವುದೇ ಪ್ರಣಾಯಾಮ. ಯಾರು ಸರಿಯಾಗಿ ಉಸಿರಾಟ ಮಾಡುತ್ತಾರೋ ಅಂತಹವರು ಯಾವ ರೋಗವಿಲ್ಲದೇ ದೀರ್ಘಾಯಸ್ಸನ್ನು ಪಡೆಯುತ್ತಾರೆ. ಹಾಗಾಗಿ ಉತ್ತಮ ಜೀವನ ಶೈಲಿಯ ಜೊತೆಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಒತ್ತು ಕೊಡಬೇಕು. ಧ್ಯಾನ ಎಂದರೆ ಕೇವಲ ಕಣ್ಣು ಮುಚ್ಚಿ ಕೂರುವುದಲ್ಲ. ಮನಸ್ಸನ್ನು ನಿಯಂತ್ರಿಸಿಕೊಂಡು ಏಕಾಗ್ರ ಚಿತ್ತದಲ್ಲಿ ಸಮಾಧಿ ಸ್ಥಿತಿಗೆ ತಲುಪುವುದು ಎಂದರ್ಥ. ಇದರ ಜೊತೆ ಜೊತೆಗೆ ದೇಹಕ್ಕೆ ಸರಿಯಾದ ವಿಶ್ರಾಂತಿಯೂ ಅತ್ಯಗತ್ಯ. ನಮ್ಮ ಭಾರತೀಯ ಯೋಗ ಮತ್ತು ನಮ್ಮ ಭಾರತೀಯ ಜೀವನ ಶೈಲಿಯೆಂದರೆ, ನಮ್ಮ ಮನಸ್ಸು, ಮನೋಸ್ಥಿತಿ ಮತ್ತು ದೇಹಗಳನ್ನು ಏಕಾಗ್ರಚಿತ್ತದಲ್ಲಿರಿಕೊಂಡು ನೆಮ್ಮದಿಯ ದೀರ್ಘಕಾಲ ಜೀವಿಸುವ ಪದ್ದತಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳೋಣ. ಎಂದು ಹೇಳಿ ತಮ್ಮ ಕಾರ್ಯಕ್ರಮವನ್ನು ಮುಗಿಸಿದರು.

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸುಂದರವಾಗಿ ನಿರೂಪಣೆ ಮಾಡಿದರೆ, ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಎಲ್ಲರ ಒಕ್ಕೊರಲಿನ ವಂದೇಮಾತರಂ ನೊಂದಿಗೆ ಯಶಸ್ವಿಯಾಗಿ ಅಂತ್ಯಗೊಂಡಿತು.

ಮುಂದಿನ ತಿಂಗಳು ಮತ್ತೊಂದು ವಿಷಯದೊಂದಿಗೆ ಮತ್ತಷ್ಟೂ ರೋಚಕವಾದ ಕಾರ್ಯಕ್ರಮದೊಂದಿಗೆ ನಿಮ್ಮನ್ನು ಭೇಟಿಯಾಗೋಣ. ಅಲ್ಲಿಯವರೆಗೂ ಭಾರತೀಯ ಯೋಗ ಮತ್ತು ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮುಂದುವರಿಸೋಣ.

ಏನಂತೀರೀ?

WhatsApp Image 2019-05-20 at 12.02.52 AM

ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ

ವಿದ್ಯಾರಣ್ಯಪುರ ಮಂಥನದ ಆರನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆಯ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಎಸ್. ರವಿ ವಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು ಬಿಇಎಂಎಲ್ ಅವರ ಅಮೃತ ಹಸ್ತದಿಂದ ಜಾಲಹಳ್ಳಿ ನಗರದ ಸಂಘಚಾಲಕರಾದ ಶ್ರೀ ನಾಗರಾಜ್ ಮೌದ್ಗಲ್ ಅವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಶ್ರೀಯುತ ರವಿಯವರು ಆರಂಭದಲ್ಲಿ ತಮ್ಮ ದೀರ್ಘಕಾಲದ ಅನುಭವ ಮತ್ತು ಪರಿಣಿತಿಯಿಂದ ನಾನಾ ರೀತಿಯ ವಿಮಾನಗಳು, ಅವುಗಳ ಶಕ್ತಿ ಸಾಮಥ್ಯ, ಅವುಗಳ ಚಾಕಚಕ್ಯತೆ, ಯಾವ ಯಾವ ವಿಮಾನಗಳು ಯಾವ ರೀತಿಯ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಲ್ಲದು ಮತ್ತು ಅವುಗಳನ್ನು ಹೇಗೆ ಯಾವ ರೀತಿಯಲ್ಲಿ ಯಾವ ಕ್ಷಣದಲ್ಲಿ ಉಪಯೋಗಿಸಲ್ಪಡುತ್ತದೆ ಎಂಬುದನ್ನು ನಿಜಕ್ಕೂ ನಾವೇ ಆ ಯುದ್ಧ ವಿಮಾನಗಳಲ್ಲಿ ಕುಳಿತು ಚಾಲನೆ ಮಾಡುತ್ತಿದ್ದಿವೇನೋ, ನಾವೇ ಯುದ್ಧದಲ್ಲಿ ಭಾಗಿಯಾಗಿದ್ದಿವೇನೋ ಎಂಬಂತೆ ಕಣ್ಣಿಗೆ ಕಟ್ಟುವ ಹಾಗೆ ಬಣ್ಣಿಸಿದ್ದನ್ನು ವರ್ಣಿಸುವುದಕ್ಕಿಂತ ಅವರ ಬಾಯಿಯಿಂದಲೇ ಕೇಳಿ ಆನಂದಿಸಿದರೇ ಚೆನ್ನ.

ರಫೇಲ್ ಎನ್ನುವುದು ಡಸಾಲ್ಟ್ ಎಂಬ ಫ್ರಂಚ್ ಕಂಪನಿ ತಯಾರಿಸಲ್ಪಡುವ ಯುದ್ಧ ವಿಮಾನದ ಹೆಸರು. ಆರಂಭದಲ್ಲಿ ಕೇವಲ ಫ್ರಾನ್ಸ್ ದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಂಪನಿ ಕ್ರಮೇಣ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡು ದೇಶ ವಿದೇಶಗಳಿಗೆ ತನ್ನ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಆರಂಭಿಸಿತು. 2001 ರಲ್ಲಿ ಭಾರತೀಯ ಏರ್ಫೋರ್ಸ್ ದೇಶದ ಭಧ್ರತೆಗಾಗಿ ಕೆಲ ಯುದ್ಧ ವಿಮಾನಗಳ ಅವಶ್ಯಕತೆಗಳನ್ನು ಭಾರತದ ಸರ್ಕಾರದ ಮುಂದಿಟ್ಟಿತು. ಅದಕ್ಕೆ ಸ್ಪಂದಿಸಿದ ಅಂದಿನ ಯುಪಿಎ ಸರ್ಕಾರ ಪ್ರಪಂಚದ ನಾನಾ ಕಂಪನಿಗಳ ಜೊತೆ ವ್ಯವಹಾರ ನಡೆಸಲು ಆರಂಭಿಸಿ ಅದರಲ್ಲಿ ಐದಾರು ಕಂಪನಿಗಳನ್ನು ಆಯ್ಕೆಮಾಡಿ ಮೊದಲು ಅವುಗಳ ಸಾಮರ್ಥ್ಯ ಪರೀಕ್ಷಿಸಿ ಅವುಗಳ ಸಾಮರ್ಥ್ಯ ನಮ್ಮ ಅವಶ್ಯಕತೆಗೆ ಹೊಂದಿದಲ್ಲಿ ನಂತರ ಹಣಕಾಸಿನ ವ್ಯವಹಾರ ಕುರಿತಾದ ಮಾತು ಕಥೆ ಆರಂಭಿಸಿ ಯಾವ ಕಂಪನಿ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆಯೋ ಅಂತಹ ಕಂಪನಿಯ ಜೊತೆ ವ್ಯಾಪಾರ ಒಪ್ಪಂದವನ್ನು ಮಾದಿಕೊಳ್ಳಲು ನಿರ್ಧರಿಸಲಾಯಿತು. ಹಾಗೆ ಅಂತಿಮವಾಗಿ ಆಯ್ಕೆ ಆದ ಕಂಪನಿಗಳಲ್ಲಿ ರಫೇಲ್ ಮತ್ತು ಯೂರೋ ಫೈಟ್ ಪ್ರಮುಖ ಕಂಪನಿಗಳಾಗಿವೆ. ಯೂರೋ ಫೈಟ್ ಸಾಮರ್ಹ್ಯ ನಿಜಕ್ಕೂ ಹೆಚ್ಚಾಗಿದ್ದರೂ ಅವರ ಉತ್ಪನ್ನದ ಬೆಲೆ ಅಧಿಕವಾಗಿದ್ದರಿಂದ ಅಂತಿಮವಾಗಿ ರಫೇಲ್ ಯುಧ್ದ ವಿಮಾನಗಳನ್ನು ಕೊಂಡುಕೊಳ್ಳಲು ನಿರ್ಧರಿಸಲಾಯಿತು. ಯುಪಿಎ-1 ರ ಸಮಯದಲ್ಲಿ ಆರಂಭವಾದ ವ್ಯವಹಾರ ಆರಂಭದಿಂದಲೇ ನಾನಾ ಕಾರಣಗಳಿಂದಾಗಿ ಕುಂಟುತ್ತಾ ಸಾಗಿ ಕೊನೆಗೆ ಯುಪಿಎ-2, 128 ಸಾಧಾರಣ ರಫೇಲ್ ಯುಧ್ದ ವಿಮಾನಗಳನ್ನು ಕೊಂಡುಕೊಳ್ಳಲು ನಿರ್ಧರಿಸಲಾಯಿತಾದರೂ ಯಾವುದೇ ವ್ಯವಹಾರಗಳಾಗಲೀ ಒಪ್ಪಂದಗಳಾಗಲೀ ಆಗದೆ ಯುಪಿಎ ಸರ್ಕಾರ ಪತನವಾಗಿ ಎನ್.ಡಿ.ಎ. ಸರ್ಕಾರ ಆಡಳಿತಕ್ಕೆ ಬಂದಾಗ ಈ ವ್ಯವಹಾರಕ್ಕೆ ಜೀವ ಬಂದಿತು. ಆರಂಭದಲ್ಲಿ ಡಸಾಲ್ಟ್ ಕಂಪನಿಯೊಂದಿಗೆ ನೇರವಾಗಿಯೇ ವ್ಯವಹಾರ ಮಾಡಲು ನಿರ್ಧರಿಸಲ್ಪಟ್ಟಿದ್ದರೂ ಪ್ರಸಕ್ತ ಸರ್ಕಾರ ಇಂತಹ ದೊಡ್ಡ ದೊಡ್ಡ ವ್ಯವಹಹಾರಗಳು ಯಾವುದೇ ರೀತಿಯ ಮಧ್ಯವರ್ತಿಗಳಲಿಲ್ಲದೆ ಪಾರದರ್ಶಿಕವಾಗಿರಬೇಕಂದು ನಿರ್ಧರಿಸಿ ಪ್ರಧಾನಮಂತ್ರಿಗಳೇ ಖುದ್ದಾದ ಆಸ್ತೆ ವಹಿಸಿ ಭಾರತ ಮತ್ತು ಪ್ರಾನ್ಸ್ ಸರ್ಕಾರದ ಜೊತೆಗೆ ನೇರವಾದ ವ್ಯವಹಾರ ಮಾಡಲು ನಿರ್ಧಾರವಾಯಿತು. ಆರಂಭದಲ್ಲಿ 128 ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದರೂ ಅದರಲ್ಲಿ ಕೆಲ ವಿಮಾನಗಳು ಮಾತ್ರ ಫ್ರಾನ್ಸ್ ನಿಂದ ತಯಾರಾಗಿ ನೇರವಾಗಿ ಭಾರತಕ್ಕೆ ಬಂದುು ಉಳಿದ ವಿಮಾನಗಳು ಡಸಲ್ಟ್ ಕಂಪನಿ ತಂತ್ರಜ್ಞಾನದ ಸಹಕಾರದೊಂದಿಗೆ ಭಾರತದಲ್ಲಿಯೇ ತಯಾರು ಮಾಡುವ ನಿರ್ಧಾರವಾಗಿತ್ತು. ಈ ವ್ಯವಹಾರಗಳ ಸಮಾಲೋಚನೆಗಾಗಿ ಭಾರತೀಯ ವಾಯುಪಡೆಯ ಮುಖ್ಯಸ್ಥರು, ಕಾನೂನು ಪರಿಣಿತರನ್ನೊಳಗೊಂಡ ಏಳು ಮಂದಿ ತಂಡವನ್ನು ರಚಿಸಿ, ಈ ವ್ಯವಹಾರ ಈಗಾಗಲೇ ಸಾಕಷ್ಟು ತಡವಾಗಿದ್ದ ಕಾರಣ ಮತ್ತು ನಮ್ಮ ನೆರೆಹೊರೆ ರಾಷ್ಟ್ರಗಳ ಬಳಿ ನಮಗಿಂತಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹೆಚ್ಚಾಗಿ ನಮಗೆ ಆಭದ್ರತೆಯ ಪ್ರಶ್ನೆ ಕಾಡುತ್ತಿದ್ದರಿಂದ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ 18×2=36 ಸಕಲ ರೀತಿಯ ಶಸ್ತ್ರಾಸ್ತ್ರ ಸಹಿತ, ಸದಾ ಯುದ್ಧಕ್ಕೆ ಸಿಧ್ಧವಾದ ಪೂರ್ಣ ಪ್ರಮಾಣದ ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಯಿತು. ಈ ವಿಮಾನಗಳ ಸಂಪೂರ್ಣವಾಗಿ ಫ್ರಾನ್ಸ್ ದೇಶದಲ್ಲಿಯೇ ತಯಾರಾಗಿ ಬರುತ್ತವಾದರೂ ಅವುಗಳ ಮುಂದಿನ ಐದು ವರ್ಷಗಳ ನಿರ್ವಹಣೆ, ರಿಪೇರಿ ಅದಕ್ಕೆ ಬೇಕಾಗುವ ಸಾಧನಗಳು, ಬಿಡಿಭಾಗಗಳನ್ನು ಭಾರತದಲ್ಲಿಯೇ ಸಿಧ್ಧ ಪಡಿಸಬೇಕೆಂಬ ಒಪ್ಪಂದವೂ ಆಗಿ 2019 ಸೆಪ್ಟೆಂಬರ್ ಸಮಯದಲ್ಲಿ ಸಂಪೂರ್ಣ ಸಾಮರ್ಥ್ಯದ ಮೊತ್ತ ಮೊದಲ ರಫೇಲ್ ವಿಮಾನ ಭಾರತಕ್ಕೆ ಬರುವಂತೆ ನಿರ್ಧರಿಸಲಾಯಿತು.

2016ರ ವರೆಗೂ ಈ ವ್ಯವಹಾರದ ಬಗ್ಗೆ ಯಾವುದೇ ರೀತಿಯ ಆಕ್ಷೇಪಗಳು ಇಲ್ಲದಿದ್ದರೂ ಅದೊಮ್ಮೆ ಫ್ರಾಸ್ಸ್ ಮಾಜೀ ಅಧ್ಯಕ್ಷ ಹೆರಾಂಡೆ ಈ ವ್ಯವಹಾರದಲ್ಲಿ ಭಾರತದ ರಿಲೆಯಸ್ಸ್ ಕಂಪನಿಯ ಪಾತ್ರವಿದೆ ಎಂದು ಹೇಳಿದ್ದನ್ನೇ ಮುಂದಾಗಿಸಿಕೊಂಡು ಕಾಂಗ್ರೇಸ್ ಪಕ್ಷ ಈ ವ್ಯವಹಾರದಲ್ಲಿ 30000 ಕೋಟಿ ಅವ್ಯವಹಾರ ನಡೆದಿದು ಎಂದು ಗುಲ್ಲೆಬ್ಬಿಸಿ ಈ ಆಷ್ಟೂ ಹಣ ರಿಲೆಯನ್ಸ್ ಪಾಲಾಗುತ್ತಿದೆ ಎಂಬ ಸುಳ್ಳನ್ನು ನಿರಂತರವಾಗಿ ಹೇಳುತ್ತಾ ಈ ವ್ಯವಹಾರದ ಸಂಪೂರ್ಣ ವ್ಯವಹಾರಗಳನ್ನು ಭಾರತೀಯರಿಗೆಲ್ಲರಿಗೂ ತಿಳಿಸಬೇಕು. ಈ ವ್ಯವಹಾರದ ಒಟ್ಟು ಮೊತ್ತದ ಜೊತೆಗೆ ಈ ಯುದ್ಧ ವಿಮಾನಗಳು ಯಾವ ಯಾವ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿವೆ ಮತ್ತು ಯುಧ್ಧ ವಿಮಾನಗಳ ಖರೀದಿ ಮೊತ್ತ ಏಕಾಏಕಿ ಹೆಚ್ಚಾಗಿದ್ದೇಕೆ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾರಂಭಿಸಿತು.

ದೇಶದ ಬಗ್ಗೆ ಕಾಳಜಿ ಇರುವ ಸಾಮಾನ್ಯ ಪ್ರಜೆಗಳಿಗೂ ಗೊತ್ತಿರುವ ಹಾಗೆ ಇಂತಹ ಮಿಲಿಟರಿ ಸಂಭಂಧಿತ ವ್ಯವಹಾರಗಳನ್ನು ಎಲ್ಲರ ಮುಂದೆ ಹೇಳಲಾಗದು. ಅದೂ ಯಾವ ಯಾವ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿವೆ ಎಂದು ತಿಳಿಸಿದರೆ ಅದನ್ನು ಎದುರಿಸಲು ನಮ್ಮ ಶತೃರಾಷ್ಟ್ರಗಳು ಸನ್ನಧ್ಧರಾಗುವುದಕ್ಕೇ ನಾವೇ ಕಾರಣೀಭೂತರಾಗುತ್ತೇವೆ ಎಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದ ರಾಹುಲ್ ಗಾಂಧಿ ಹೊಗಿ ಬಂದ ಕಡೆ ಎಲ್ಲಾ ಇದೇ ವಿಷಯವನ್ನು ಹೇಳುತ್ತಾ ಒಂದು ಸುಳ್ಳನ್ನು ನೂರು ಸಲಾ ಹೇಳುತ್ತಲೇ ಅದನ್ನೇ ಸತ್ಯವನ್ನಾಗಿಸುವ ತಂತ್ರಗಾರಿಯನ್ನೇ ಮುಂದುವರಿಸಿದರು. ಕಾಂಗ್ರೇಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸರ್ಕಾರದ ಕೆಲ ಹಿತಶತೃಗಳಾದ ಅರುಣ್ ಶೌರಿ, ಯಶವಂತ ಸಿನ್ಹಾ ಮತ್ತು ಪ್ರಶಾಂತ್ ಭೂಷಣ್ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತಂತೆ ತಕರಾರು ಅರ್ಜಿಯನ್ನು ಸಲ್ಲಿಸಿದರು. ಇವರ ಜೊತೆ ಹೆಸರಿಗಷ್ಟೆ ಹಿಂದೂ ಪತ್ರಿಗೆಯಾದರೂ ಸದಾ ಹಿಂದೂಗಳ ಬಗ್ಗೆ ಅಸಂಬಧ್ದವಾಗಿಯೇ ಧನಿ ಎತ್ತುವ ಅದರ ಸಂಪಾದಕ ದೇಶದ ಬಗ್ಗೆ ಕಮ್ಮಿನಿಷ್ಥೆ ಹೊಂದಿರುವ ಕಮ್ಯೂನಿಷ್ಟ್ ಸಿದ್ಧಾಂತದಿಂದ ಪ್ರೇರಿತನಾದ ಎನ್ ರಾಮ್ ಕೂಡ ಸೈನ್ಯದಲ್ಲಿರುವ ತನ್ನ ಪ್ರಭಾವ ದುರುಪಯೋಗ ಪಡಿಸಿಕೊಂಡು ಮತ್ತು ಕೆಲ ಸಿಬ್ಬಂಧಿಗಳಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಿ ಈ ವ್ಯವಹಾರದ ಕುರಿತಾದ ಕೆಲ ರಹಸ್ಯ ದಾಖಲೆಗಳನ್ನು ನಕಲು ಮಾಡಿಕೊಂಡು ಒಂದಲ್ಲಾ ಒಂದು ಅಪ್ರಸ್ತುತ ಮತ್ತು ಸುಳ್ಳು ಸುದ್ದಿಗಳನ್ನು ತನ್ನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಲೇ ಹೋದನು. ಸುಪ್ರೀಂ ಕೋರ್ಟ್ ಈ ಕುರಿತಂತ ಸುಧೀರ್ಘ ತನಿಖೆ ನಡೆಸಿ ಈ ವ್ಯವ್ಯಹಾರ ಪಾರದರ್ಶಕವಾಗಿದೆ ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾದ ತೀರ್ಮಾನ ನೀಡಿತು ಮತ್ತು ಹಣಕಾಸು ವ್ಯವಹಾರ ಕುರಿತಂತೆ ಸಿಎಜಿಯ ನೆರವನ್ನು ಕೋರಿತು. ಸಿಎಜಿ ಕೂಡ ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡಿಸಿ ಈ ವ್ಯವಹಾರ ಹಿಂದಿನ ಸರ್ಕಾರ ಕುದುರಿಸಿದ್ದ ವ್ಯಾಪಾರಕ್ಕಿಂತಲೂ ಕಡಿಮೆ ಹಣದಲ್ಲಿ ನಡೆದಿದೆ ಹಾಗಾಗಿ ಇದರಲ್ಲಿ ಯಾವ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಪಷೃವಾಗಿ ತಿಳಿಸಿದ್ದು ಕಾಂಗ್ರೇಸ್ ಮತ್ತು ದೇಶದ ಹಿತಶತೃಗಳಿಗೆ ನುಂಗಲಾರದ ತುಪ್ಪವಾಯಿತು.

ಭಾರತ ದೇಶ ತಮ್ಮ ಅಗತ್ಯಕ್ಕೆ ತಕ್ಕ ಸಾಮರ್ಥ್ಯವಿರುವ ಮತ್ತು ಬೆಲೆಯಲ್ಲಿಯೂ ತಮ್ಮ ಆಯವ್ಯಯಕ್ಕೆ ಸರಿಹೊಂದುವ ರಫೇಲ್ ಜೊತೆ ವ್ಯವಹಾರ ಕುದುರಿಸುತ್ತಿದ್ದನ್ನು ಗಮನಿಸಿದ ಯೂರೋ ಫೈಟ್ ತಮ್ಮ ಮೂಲ ಬೆಲೆಯಲ್ಲಿ ಶೇ 20ರಷ್ಟನ್ನು ಕಡಿಮೆಮಾಡಿದರೂ ನಮ್ಮ ವ್ಯವಹಾರಕ್ಕೆ ತಕ್ಕುದಾದ ಬೆಲೆಯಿರಲಿಲ್ಲವಾದ್ದರಿಂದ ತನ್ನ ಪ್ರಭಾವ ಬಳೆಸಿ ಕೆಲವು ಮಧ್ಯವರ್ತಿಗಳು ಅದರಲ್ಲೂ ಕಾಂಗ್ರೇಸ್ಸಿನ ರಾಜಕಾರಣಿಗಳ ಸಂಬಂಧಿಗಳ ಮೂಲಕ ವ್ಯವಹರ ಕುದುರಿಸಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದದ್ದು ಈಗ ಗುಟ್ಟಾಗಿ ಉಳಿದಿಲ್ಲ ಅದರಲ್ಲಿ ಪ್ರಮುಖವಾಗಿ ಈಗಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸಂಬಂಧಿ ಸುಧೀರ್ ಚೌದರಿ (ಈತ ರಾಹುಲ್ ಗಾಂಧಿಯ ಭಾವ ರಾಬರ್ಟ್ ವಾದ್ರಾನ ಸ್ನೇಹಿತಕೂಡ)ಯ ಮೂಲಕ ಪ್ರಯತ್ನಿಸಿತಾದರೂ ಒಮ್ಮೆ ಒಂದು ಕಂಪನಿಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಮತ್ತೊಂದು ಕಂಪನಿಯ ಜೊತೆ ವ್ಯವಹಾರ ಮಾಡಲು ಸಾಧ್ಯವಿಲ್ಲ ಎಂಬ ನಮ್ಮ ದೇಶದ ಕಾನೂನಿನ ಪ್ರಕಾರ ಯೂರೋ ಫೈಟ್ ಈ ಡೀಲ್ನಿಂದ ಹೊರಬಿದ್ದಿತು. ಹಾಗಾಗಿ ತನ್ನ ಪ್ರಭಾವ ಬಳೆಸಿ ಕಾಂಗ್ರೇಸ್ ಮೂಲಕ ಮತ್ತು ಅಮೇರಿಕಾದಲ್ಲಿಯೇ ಕುಳಿತು ಕಾಂಗೇಸ್ ಪಕ್ಷವನ್ನು ಪ್ರಚಾರ ಪಡಿಸುತ್ತಿರುವ ರಾಜೀವ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡ ಮುಖಾಂತರ ರಾಹುಲ್ ಗಾಂಧಿಯ ಮೇಲೆ ಪ್ರಭಾವ ಬೀರಲು ಯತ್ನಿಸಿತು. ಒಂದೊಮ್ಮೆ ಈ ಮಧ್ಯವರ್ತಿಗಳ ಮೂಲಕ ವ್ಯವಹಾರವೇನಾದರೂ ಕುದುರಿದ್ದಲ್ಲಿ ಇದು ಬೋಫೋರ್ಸ್ ಹಗರಣಕ್ಕಿಂತ ಸಾವಿರ ಪಾಲು ಹೆಚ್ಚಿನ ಹಗರಣವಾಗುತ್ತಿದ್ದರಲ್ಲಿ ಸಂದೇಹವೇ ಇರುತ್ತಿರಲಿಲ್ಲ.

ಕಾರ್ಯಕ್ರಮದ ಅಂತ್ಯದಲ್ಲಿ ಎಂದಿಗಿಂತಲೂ ಕಿಕ್ಕಿರಿದು ತುಂಬಿದ್ದ ಸಭಿಕರಿಂದ ತೂರಿಬಂದ ಈ ಪ್ರಶ್ನೆಗಳಿಗೆ ಅಷ್ಟೇ ತೀಕ್ಷ್ಣವಾಗಿ ಮತ್ತು ಸರಳವಾಗಿ ಶ್ರೀಯುತ ರವಿಯವರು ಉತ್ತರಿಸಿದ್ದ ಎಲ್ಲರ ಮೆಚ್ಚುಗೆ ಗಳಿಸಿತ್ತು. ಎಲ್ಲದ್ದಕ್ಕಿಂತ ಹೆಚ್ಚಾಗಿ ಅವರು ಪ್ರದರ್ಶಿಸಿದ ಪಿಪಿಟಿಯನ್ನು ಯಾವುದೇ ರೀತಿಯ ಮುಚ್ಚುಮರೆ ಇಲ್ಲದೆ ಯಾರೂ ಬೇಕಾದರೂ ಯಾರಿಗೆ ಬೇಕಾದರು ರವಾನಿಸಬಹುದು ಎಂದು ಹೇಳಿದ್ದು ಅವರಿಗೆ ವಿಷಯದ ಕುರಿತಾದ ಸ್ಪಪ್ಟತೆ ಮತ್ತು ಧೃಡತೆಯನ್ನು ಎತ್ತಿತೋರಿಸುತ್ತಿತ್ತು.

ಪ್ರಶ್ನೋತ್ತರ
1. ಈ ವ್ಯವಹಾರದಲ್ಲಿ HAL ಸಂಸ್ಥೆಗೆ ನಷ್ಟವಾಗಿಲ್ಲವೆ?
ಮುಂಚಿನ ವ್ಯವಹಾರದಲ್ಲಿ 128 ವಿಮಾನಗಳ ಪೈಕಿ ಕೆಲವೇ ಕೆಲವು ವಿಮಾನಗಳು ಫ್ರಾನ್ಸ್ನಿಂದ ಕೊಂಡು ಕೊಂಡು ಉಳಿದ ವಿಮಾನಗಳನ್ನು ಡಸಾಲ್ಟ್ ನಿಂದ ತಂತ್ರಜ್ಞಾನವನ್ನು ಪಡೆದು HAL ಸಂಸ್ಥೆಯಲ್ಲಿ ತಯಾರಿಗೆ ಮಾಡುವಂತೆ ಇತ್ತು. ಆದರೆ ಈ ವ್ಯವಹಾರದಲ್ಲಿ ಕೇವಲ 36 ವಿಮಾನಗಳನ್ನು ನೇರವಾಗಿ ಫ್ರಾನ್ಸ್ ದೇಶದಲ್ಲೇ ತಯಾರು ಮಾಡಿಸಿ ಆಮದು ಮಾಡಿಕೊಳ್ಳುತ್ತಿರುವುದರಿಂದ HAL ಸಂಸ್ಥೆಯ ನೇರವಾಗಿ ಭಾಗಿಯಾಗಿಲ್ಲದಿದ್ದರೂ, ಈ ವ್ಯವಹಾರದ ಪ್ರಮುಖ ತಯಾರಿಕಾ ಸಂಸ್ಥೆಯಾದ ಸಾಫ್ರನ್ ಕಂಪನಿಯ ಭಾಗವಾಗಿ ಹೆಚ್.ಎ.ಎಲ್ ಕೂಡ ಈ ವ್ಯವಹಾರದಲ್ಲಿ ದುರಸ್ತಿ ಕಾರ್ಯಗಳಲ್ಲಿ, ಬಿಡಿ ಭಾಗಗಳ ತಯಾರಿಕೆಯಲ್ಲಿ ಖಂಡಿತವಾಗಿಯೂ HAL ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳಲಾಗುತ್ತದೆ.

2. 128 ವಿಮಾನಗಳ ಸಂಖ್ಯೆ ಇದ್ದಕ್ಕಿದ್ದಂತೆ 36 ವಿಮಾನಗಳಿಗೆ ಹೇಗೆ ಇಳಿಮುಖವಾಯಿತು?
ಆರಂಭದಲ್ಲಿ 128 ವಿಮಾನಗಳ ಸಂಖ್ಯೆ ಅಗತ್ಯವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ವಾಯುಸೇನೆಗೆ ಕನಿಷ್ಟ ಪಕ್ಷ ಎರಡು ಬೆಟಾಲಿಯನ್ ಅಂದರೆ 18×2 ವಿಮಾನಗಳು ತುರ್ತಾಗಿ ಬೇಕಾಗಿರುವುದರಿಂದ ಯುದ್ಧಕ್ಕೆ ಸರ್ವಸನ್ನದ್ಧವಾದ ಸಕಲ ಶಸ್ತ್ರಾಸ್ತ್ರಗಳಿಂದ ಪೂರಿತವಾಗಿರುವ 36 ವಿಮಾನಗಳನ್ನು ಕೊಂಡು ಕೊಳ್ಳಲು ನಿರ್ಧರಿಸಲಾಗಿದೆ. ಈ ವಿಮಾನಗಳ ಕಾರ್ಯತತ್ಪರತೆ ನಮ್ಮ ನೆಲದಲ್ಲಿ ಹೇಗೆ ಆಗುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ಮಾರ್ಪಾಟುಗಳೊಂದಿಗೆ ಮತ್ತಷ್ಟು ವಿಮಾನಗಳನ್ನು ಮುಂದೆ ಖರೀದಿಸಬಹುದಾಗಿದೆ.

3. ಈ ವಿಮಾನಗಳ ನಿರ್ವಹಣೆ, ಬಿಡಿಬಾಗಗಳು ಮತ್ತು ದುರಸ್ತಿ ಹೇಗೆ ನಡೆಯುತ್ತವೆ.
30000 ಕೋಟಿಗಳ ಈ ವ್ಯವಹಾರದಲ್ಲಿ 9000 DRDOಗೆ ಹೋದರೆ, 21000 ಮೂರು ತಯಾರಿಕಾ ಕಂಪನಿಗಳ ಮಧ್ಯೆ ಹಂಚಿಕೆಯಾಗುತ್ತದೆ. ಆದರಲ್ಲಿ 6300 ಕೋಟಿ ತೇಲ್ಸ್ ಕಂಪನಿಯದ್ದಾದರೆ, 8400 ಕೋಟಿ ಡಸಾಲ್ಟ್ ಮತ್ತು 6300 ಸಾಫ್ರನ್ ಕಂಪನಿಯ ಪಾಲಾಗಿದೆ. ಭಾರತ ಸರ್ಕಾರದ ನಿಯಮದ ಪ್ರಕಾರ ಯಾವುದೇ ವ್ಯವಹಾರಗಳು ನಡೆದಲ್ಲಿ ಅದರ ಶೇ30.ರಷ್ಟನ್ನು ಭಾರತದಲ್ಲಿಯೇ ಹೂಡಿಕೆ ಮಾಡಲೇ ಬೇಕಿದೆ ಅದರಂತೆ ತೇಲ್ಸ್ 12 ಭಾರತೀಯ ಕಂಪನಿಗಳ ಜೊತೆ ಸಹಭಾಗಿತ್ವ ನಡೆಸಿದ್ದರೆ, ಡಸಾಲ್ಟ್ 55 ಮತ್ತು ಸಾಫ್ರನ್ 22 ಭಾರತೀಯ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಈ ವ್ಯವಹಾರವನ್ನು ಪೂರ್ಣಗೊಳಿಸಲಾಗುತ್ತಿದೆ. ಒಟ್ಟು 89 ಭಾರತೀಯ ಕಂಪನಿಗಳಲ್ಲಿ ರಿಲಯನ್ಸ್ ಕಂಪನಿಯೂ ಒಂದಾಗಿದ್ದು ಅದಕ್ಕೆ 3% ಅಂದರೆ 900 ಕೋಟಿಯ ವ್ಯವಹಾರ ಮಾಡಲಾಗುತ್ತಿದೆ. ಪಪ್ಪೂ ಹೇಳಿದ ಹಾಗೆ 30000 ಕೋಟಿ ಅಂಬಾನಿಯ ಪಾಲಗುತ್ತಿಲ್ಲ. ಅಂತೆಯೇ ಉಳಿದ 88 ಕಂಪನಿಗಳ ಪೈಕಿ ಎಲ್&ಟಿ, ಟೆಕ್ ಮಹೀಂದ್ರ, ಹೆಚ್.ಸಿ.ಎಲ್, ಕ್ಯಾಪ್ ಜೆಮಿನಿ, ಟೈಟಾನ್,ವಿಪ್ರೋ, ಗೋದ್ರೇಜ್ ಗಳಲ್ಲದೆ, ಸಾಫ್ರನ್ ಕಂಪನಿಯ ಭಾಗವಾಗಿ ಹೆಚ್.ಎ.ಎಲ್ ಕೂಡ ಈ ವ್ಯವಹಾರದಲ್ಲಿ ಪರೋಕ್ಷವಾಗಿ ಭಾಗಿಯಾಗಿದೆ.

4. ಒಂದು ಪಕ್ಷ ಭಾರತ ಸರ್ಕಾರ ಮತ್ತು ಫ್ರಾನ್ಸ್ ಸರ್ಕಾರ ನೇರವಾಗಿ ವ್ಯವಹರಿಸಿ 36 ವಿಮಾನಗಳನ್ನು ಕೊಳ್ಳುವ ಬದಲು 128 ವಿಮಾನಗಳನ್ನು ಮಧ್ಯವರ್ತಿಗಳ ಮೂಲಕ ಕೊಂಡು ಕೊಂಡಿದ್ದರೆ ಎಷ್ಟರ ಮಟ್ಟಿನ ಅವ್ಯವಹಾರ ನಡೆದೆರಬಹುದಾಗಿತ್ತು.
ನನ್ನ ಅಂದಾಜಿನ ಪ್ರಕಾರ 128 ವಿಮಾನಗಳನ್ನು ಮಧ್ಯವರ್ತಿಗಳ ಮೂಲಕ ಕೊಂಡು ಕೊಂಡಿದ್ದರೆ ಮತ್ತೊಮ್ಮೆ ಉಚ್ಚರಿಸುತ್ತಿದ್ದೇನೆ ಇದು ನನ್ನ ಅಂದಾಜಿನ ಪ್ರಕಾರ ಸರಿ ಸುಮಾರು 200000 ಕೋಟಿಗಳಷ್ಟು ಹಣದ ಅವ್ಯವಹಾರ ನಡೆಯಬಹುದಾಗಿತ್ತು.ಅದಕ್ಕಾಗಿಯೇ ಕಾಂಗ್ರೇಸ್ ಮತ್ತಿತರು ತಮ್ಮ ಪಾಲಿನ ಆದಾಯವನ್ನು ತಪ್ಪಿಸಿದ ಮೋದಿಯ ಸರ್ಕಾರದ ವಿರುದ್ಧ ಈ ಪರಿಯ ಪಿತೂರಿಗಳನ್ನು ನಡೆಸುತ್ತಿದ್ದಾರೆ.

ಇಡೀ ಕಾರ್ಯಕ್ರಮವನ್ನು ಶ್ರೀಕಂಠ ಬಾಳಗಂಚಿಯವರು ನಿರೂಪಣೆ ಮಾಡಿದರೆ, ಶ್ರೀ ಗುರುರಾಜ ಯಾವಗಲ್ ಅವರ ವಂದನಾರ್ಪಣೆ ಮತ್ತು ಶ್ರೀಮತಿ ಅನುರಾಧರವರ ಕಂಚಿನ ಕಂಠದ ವಂದೇಮಾತರಂ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಕೊನೆಗೊಂಡಿತು. ಕಾರ್ಯಕ್ರಮ ಮುಗಿದ ನಂತರವೂ ಸಭಿಕರು ಶ್ರೀಯುತ ರವಿಯವರತ್ತ ಮುಗಿಬಿದ್ದು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

ಒಟ್ಟಿನಲ್ಲಿ ಮೋದಿಯವರ ಸರ್ಕಾರದ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಅವ್ಯವಹಾರಗಳಾಗಲೀ ಭ್ರಷ್ಟಾಚಾರವಾಗಲೀ ನಡೆಯದೆ ಜನಮನ್ನಣೆ ಪಡೆದಿರುವುದರಿಂದ ಇದೇ ರೀತಿ ಮುಂದುವರಿದರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯ ಕಾಂಗ್ರೇಸ್ ಪಕ್ಷಕ್ಕೆ ಅರಿವಾಗಿರುವ ಪರಿಣಾಮ ಈಗ ತೋಳ ಬಂತು ತೋಳ ಕಥೆಯಂತೆ ರಫೇಲ್ ಡೀಲ್ ನಲ್ಲಿ ಹೋದ ಬಂದ ಕಡೆಯಲ್ಲೆಲ್ಲಾ
ಅವ್ಯವಹಾರ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಹೀಗೆಯೇ ಅವರ ಸುಳ್ಳಿನ ಕಂತೆ ಮುಂದುವರೆದಲ್ಲಿ ಅತೀ ಶೀಘ್ರದಲ್ಲಿಯೇ ತೋಳ ಬಂತು ತೋಳ ಕಥೆಯ ಅಂತ್ಯದಂತೆ ಇವರ ಅಂತ್ಯವಾಗುವುದರಲ್ಲಿ ಸಂದೇಹವೇ ಇಲ್ಲದಂತಾಗಿದೆ.

ರಫೇಲ್ ರಫೇಲ್ ಎಂದು ಇಲ್ಲ ಸಲ್ಲದ ವಿಷಯಗಳನ್ನು ಬಡಬಡಿಸುತ್ತಾ ರಾಗಾ-ಫೇಲ್ ಆಗಿರುವುದಂತೂ ಜಗಜ್ಜಾಹೀರಾತಾಗಿದೆ. ಅಂತಿಮವಾಗಿ ಈ ವ್ಯವಹಾರದಲ್ಲಿ ಯಾವುದೇ ರೀತಿಯ ಕಾನೂನಿನ ಉಲ್ಲಂಘನೆಯಾಗಲೀ ಹಣಕಾಸಿನ ದುರ್ಬಳಕೆಯಾಗಲೀ ಅಥವಾ ಕಡೆಗಣಿಸಲಾದ ಶಸ್ತ್ರಾಸ್ತ್ರಗಳು ಅಥವಾ ಯುದ್ದಉಪಕರಣಗಳನ್ನು ಕೊಂಡುಕೊಳ್ಳಲಾಗಿಲ್ಲ. ಯುಪಿಎ ಸರ್ಕಾರ 2001 ಮತ್ತು 2007ರಲ್ಲಿ ಯಾವ ಬೆಲೆಗೆ ಕೊಂಡು ಕೊಳ್ಳಲು ನಿರ್ಧರಿಸಿತ್ತೋ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಅದಕ್ಕಿಂತಲೂ ಅತ್ಯಾಧುನಿಕ ಉಪಕರಣಗಳೊಂದಿಗೆ ಶಶಕ್ತ ಯುದ್ದೋಪಕರಣಗಳು ಮತ್ತು ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿರುವುದು ಸತ್ಯ ಸತ್ಯ. ಸತ್ಯ. ಈ ರಫೇಲ್ ಕುರಿತಾದ ನಿಜವಾದ ಸಂಗತಿಗಳನ್ನು ದೇಶದ ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ನಾವೆಲ್ಲರೂ ನಮ್ಮ ಪ್ರಧಾನಿಗಳ ಭುಜಕ್ಕೆ ಭುಜಕೊಟ್ಟು ನಾವೆಲ್ಲಾ ಚೌಕೀದಾರಂತೆಯೇ ಕೆಲಸ ಮಾಡಬೇಕಿದೆ ಮತ್ತೊಮ್ಮೆ ದೇಶದಲ್ಲಿ ಕಮಲ ಉಜ್ವಲವಾಗಿ ಅರಳಬೇಕಿದೆ.

ಏನಂತೀರೀ?

ಮನೆ ಮದ್ದು

ವಿದ್ಯಾರಣ್ಯ ಪುರ ಮಂಥನದ ಇಂದಿನ ಕಾರ್ಯಕ್ರಮ ನಿಗಧಿತ ಸಮಯದಂತೆ ಮನೆ ಮದ್ದು ಕಾರ್ಯಕ್ರಮದ ವಕ್ತಾರರಾದ *ಡಾ. ಎ. ಎಸ್ ಚಂದ್ರಶೇಖರ್* ಮತ್ತು ಅಧ್ಯಕ್ಷತೆ ವಹಿಸಿದ್ದ *ಶ್ರೀಮತಿ ಜಿ. ಸ್ವಪ್ನರ* ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಪದ್ದತಿ(Junkfood), ಕಲಬೆರಕೆ ಅಡುಗೆ ಎಣ್ಣೆ, ಆಹಾರ ಪದಾರ್ಧಗಳಿಂದಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೋಗದಿಂದ ನರಳುವಂತಾಗಿದೆ. ಇದರ ಸಲುವಾಗಿ ಪ್ರತೀ ಬಾರಿಯೂ ವೈದ್ಯರ ಬಳಿ ಹೋಗಲು ಸಾವಿರಾರು ರೂಪಾಯಿಗಳನ್ನು ತೆತ್ತು ಆ ಕ್ಷಣಕ್ಕೆ ಆರೋಗ್ಯವಂತರಾದರೂ, ಔಷಧಿಗಳ ಅಡ್ಡ ಪರಿಣಾಮದಿಂದಾಗಿ ಮತ್ತೊಂದು ಕಾಯಿಲೆಗೆ ತುತ್ತಾಗಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿರುವಾಗ ಇಂತಹದ್ದಕ್ಕೆಲ್ಲಾ ನಮ್ಮ ಪೂರ್ವಜರು ಮನೆಯಲ್ಲಿಯೇ ಮದ್ದನ್ನು ತಯಾರಿಸಿ ಆರೋಗ್ಯವಂತರಾಗಿರುತ್ತಿದ್ದರು ಎಂಬುದನ್ನು ಸವಿರವಾಗಿ ಸಚಿತ್ರ ಸಮೇತವಾಗಿ ಇಂದು ನಮ್ಮೆಲ್ಲರ ಮಂದೆ ಪ್ರಸ್ತುತ ಪಡಿಸಿದವರು ಶ್ರೀ. ಎ. ಎಸ್ ಚಂದ್ರಶೇಖರ್. ತಮ್ಮ ತಂದೆಯವರಿಂದ ಪಾರಂಪರಾಗತವಾಗಿ ಕಲಿತದ್ದಲ್ಲದೆ, ಆಯುರ್ವೇದದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಪ್ರಸ್ತುತ ಮೈಸೂರಿನಲ್ಲಿ ವೈದ್ಯರಾಗಿರುವ ಶ್ರೀಯುತರ ಪಾಂಡಿತ್ಯವನ್ನು ಹೊಗಳಲು ಪದಗಳೇ ಸಾಲವು ಎಂದರೆ ಅತಿಶಯೋಕ್ತಿಯೇನಲ್ಲ.

ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಹಾಗೆಯೇ, ಚಂದ್ರಶೇಖರರ ಶುಶ್ರೋಶೆಯಿಂದ ವಾಸಿಯಾಗದ ಖಾಯಿಲೆಯೇ ಇಲ್ಲವೇನೂ ಎನ್ನುವಂತಿತ್ತು. ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ಅಕ್ಷರಶಃ ತೋರಿಸಿದ ಶ್ರೀಯುತರು, ಸಾಮಾನ್ಯ ರೋಗಗಳಾದ ನೆಗಡಿ, ಶೀತ, ಕೆಮ್ಮು, ತಲೆನೋವು, ಮೈಗ್ರೇನ್ ವಾತ, ಪಿತ್ತ, ಹುಳಿತೇಗು, ಹೊಟ್ಟೆ ಉಬ್ಬರ ಮುಂತಾದ ರೋಗಗಳಿಗೆ ತಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ, ಉಪ್ಪು, ಮೆಣಸು, ಜೀರಿಗೆ, ಸೋಂಪು, ಮೆಂತ್ಯ , ಇಂಗು, ಹುರಳೀ ಕಾಳು, ಕಲ್ಲುಸಕ್ಕರೆ, ತುಪ್ಪ, ಜೇನು ತುಪ್ಪ, ಸೈಂದ್ರ ಲವಣ, ಕರ್ಪೂರ ಬೆಣ್ಣೆ , ಹರಳೆಣ್ಣೆ, ಎಳ್ಳೆಣ್ಣೆ , ಅಕ್ಕಿ ಹಿಟ್ಟು, ಗೋದಿ ಹಿಟ್ಟು, ಲೋಳೆಸರ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಬದನೇಕಾಯಿ, ಹೂಕೋಸು, ಸಬ್ಬಸೀಗೆ ಸೊಪ್ಪುನಿಂದ ಹೇಗೆಲ್ಲಾ ನಿವಾರಿಸ ಬಹುದು ಎಂಬುದನ್ನು ಸುಂದರವಾಗಿ ತಿಳಿಸಿ ಕೊಟ್ಟರು.

ನೆರೆದಿದ್ದ ಪ್ರೇಕ್ಷಕರಲ್ಲಿ ಹೆಂಗಳೆಯರೇ ಹೆಚ್ಚಾಗಿದ್ದ ಕಾರಣ, ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಾಗುವ ಸಮಸ್ಯೆಗಳಿಗೆ , ಬಾಣಂತೀಯರಿಗೆ ಎದೆ ಹಾಲಿನ ಸಮಸ್ಯೆಗಳಿಗೆ ಮಲ್ಲಿಗೆ ಹೂ, ಮಲ್ಲಿಗೆ ಗಿಡದ ಎಲೆ, ಹೂ ಕೋಸಿನ ಎಲೆಗಳಿಂದ ಹೇಗೆ ಪರಿಹರಿಸ ಬಹುದೆಂದು ತಿಳಿಸಿ ಕೊಟ್ಟರು. ಪೈಲ್ಸ್, ಫಿಸ್ತುಲ, ಫಿಷರ್ ಮುಂತಾದ ಸಮಸ್ಯೆಗಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಸುಲಭವಾಗಿ ಹೇಗೆಲ್ಲಾ ನಿವಾರಿಸಬಹುದು ಎಂದು ಸರಳವಾಗಿ ತಿಳಿಸಿಕೊಟ್ಟರು.

ಆವರು ಹೇಳುವ ಪ್ರಕಾರ ಮಧುಮೇಹ ಮತ್ತು ರಕ್ತದೊತ್ತಡಗಳು ನಮ್ಮ ಜೀವನ ಶೈಲಿಯ ದುಷ್ಪರಿಣಾಗಳೇ ಹೊರತು ರೋಗವೇ ಅಲ್ಲ. ಕೆಲ ಮನೆ ಮದ್ದು, ಆಹಾರ ಪದ್ದತಿ ಮತ್ತು ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟಿದ್ದು ನೆರದಿದ್ದ ಎಲ್ಲರ ಮೆಚ್ಚಿಗೆ ಪಡೆಯಿತು.

ಇಂದು ತಿಳಿಸಿದ ಎಲ್ಲಾ ಮನೆ ಮದ್ದುಗಳನ್ನು ಅವರು ಸರಳ, ಸುಂದರ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ( ಪ್ರತೀ ಪುಸ್ತಕದ ಬೆಲೆ ಕೇವಲ ಹತ್ತು ರೂಪಾಯಿ ) ಸದ್ಯಕ್ಕೆ ನಾಲ್ಕು ಭಾಗಗಳ ಪುಸ್ತಕದ ರೂಪದಲ್ಲಿ ಹೊರತಂದಿದ್ದು ಪ್ರಸ್ತುತ ಐದನೆಯ ಭಾಗ ಹೊರ ತರುವ ಸಿದ್ಧತೆಯಲ್ಲಿದ್ದಾರೆ.

ಅವರ ಇದುವರೆಗಿನ ಸುಮಾರು ಮೂವತ್ತೈದು ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಸಾವಿರಾರು ರೋಗಿಗಳಿಗೆ ಸುಲಭವಾಗಿ ಅತ್ಯಂತ ಸರಳ ಖರ್ಚಿನಲ್ಲಿ ಸಮಸ್ಯೆಗಲನ್ನು ಪರಿಹರಿಸಿರುವ ಹೆಗ್ಗಳಿಕೆ ಅವರದ್ದು. ಅತ್ಯಂತ ಸರಳ ಸಹಜ ಜೀವಿಯಾಗಿರುವ ಅವರನ್ನು 9481170530 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದಾಗಿದೆ.

ಶ್ರೀಯುತ ಜಯಂತ್ ರವರ ಸುಂದರ ನಿರೂಪಣೆ, ಶ್ರೀಕಂಠ ಬಾಳಗಂಚಿಯವರ ವಂದನಾರ್ಪಣೆ ಮತ್ತು ಶ್ರೀಮತಿ ಶೃತಿ ಕೀರ್ತಿಯವರ ಕಂಚಿನ ಕಂಠದ ವಂದೇ ಮಾತರಂನೊಂದಿಗೆ ಈ ತಿಂಗಳಿನ ಮಂಥನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲ್ಪಟಿತು.

ಕಾರ್ಯಕ್ರಮವನ್ನು ಈ ಲಿಂಕ್ನಿಂದ ಡೌನ್ಲೋಡ್ ಮಾಡಿಕೊಂಡು ಕೇಳಿ ಆರೋಗ್ಯವಂತರಾಗಿರಿ https://drive.google.com/file/d/1tPkA-81NE_COQBMWFDWrw-OOPfKR2iKQ/view?usp=sharing

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ.

ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ ರೆಡ್ ಇಂಡಿಯನ್ಸ್ ಎಂದು ಕರೆದ್ದದ್ದು ಇತಿಹಾಸವಾಗಿ ನಂತರ ಅಲ್ಲಿನ ಮೂಲನಿವಾಸಿಗಳನ್ನೆಲ್ಲಾ ನಾಶಪಡಿಸಿದ ಬ್ರಿಟಿಷರು ಅಮೇರಿಕಾ ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಕೈಗಾರಿಕಾ ಕ್ರಾಂತಿಯಿಂದಾಗಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದು ತಮ್ಮ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕಲು ಹವಣಿಸುತ್ತಿದ್ದ ಸಂಧರ್ಭದಲ್ಲಿ John Benny ಎಂಬ ಅಮೇರಿಕಾದ ಪ್ರಖ್ಯಾತ ಲೇಖಕನ ಸಲಹೆಯ ಮೇರೆಗೆ World Trade Congress ಎಂಬ ಕಾರ್ಯಕ್ರಮವನ್ನು 1893 ಮೇ ತಿಂಗಳಿನಿಂದ ಡಿಸೆಂಬರ್ ವರೆಗೂ ನಡೆಸಲು ತೀರ್ಮಾನಿಸಲಾಯಿತು. ಈ ಸಮ್ಮೇಳನದ ಹಿಂದೆ ಅಮೇರಿಕಾದ 400 ವರ್ಷಗಳ ಸಂಭ್ರಮಾಚರಣೆಯ ಜೊತೆಗೆ ಒಂದಷ್ಟು ವ್ಯಾಪಾರದ ಮಾರುಕಟ್ಟೆಯನ್ನು ವೃಧ್ಧಿಸಿಕೊಳ್ಳುವ ಉದ್ದೇಶವಿತ್ತು. ಅದಕ್ಕಾಗಿ ಪ್ರಪಂಚಾದ್ಯಂತ ಎಲ್ಲಾ ದೇಶಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಇಂತಹ ಸಂಧರ್ಭವನ್ನು ತಮ್ಮ ಮತ ಪ್ರಚಾರಕ್ಕಾಗಿ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕೆಂದು ಹವಣಿಸಿದ ಕೆಲ ಕ್ರೈಸ್ತ ಪಾದ್ರಿಗಳ ಫಲವೇ ಸೆಪ್ಟೆಂಬರ್ 11-27ರ ವರೆಗಿನ ವಿಶ್ವ ಧರ್ಮ ಸಮ್ಮೇಳನದ ಆಯೋಜನಕ್ಕೆ ನಾಂದಿಯಾಯಿತು.

ಆರಂಭದಲ್ಲಿ ಈ ವಿಶ್ವಧರ್ಮ ಸಮ್ಮೇಳನಕ್ಕೆ ಸಾಕಷ್ಟು ಪರ ವಿರೋಧಗಳ ಚರ್ಚೆಗಳಾದವು. ವಿಶ್ವದಲ್ಲಿ ಧರ್ಮವೆಂದು ಯಾವುದಾದರೂ ಇದ್ದಲ್ಲಿ ಅದು ಕೇವಲ ಕ್ರೈಸ್ತ ಧರ್ಮವೊಂದೇ. ಮಿಕ್ಕೆಲ್ಲಾ ಧರ್ಮಗಳು ಕೇವಲ ಪೊಳ್ಳು ಧರ್ಮಗಳು ಅಂತಹ ಪೊಳ್ಳುಗಳ ನಡುವೆ ನಮ್ಮನ್ನು ಹೋಲಿಸಿಕೊಳ್ಳುವುದು ಸರಿಯಲ್ಲಾ ಎಂದು ವಾದಿಸಿದರೆ ಮತ್ತೆ ಕೆಲವರು, ಪರಮ ಸಹಿಷ್ಣುವಾದ ಕ್ರೈಸ್ತ ಮತದಿಂದ ಮಾತ್ರವೇ ಎಲ್ಲರೂ ಸದ್ಗತಿ ಕಾಣಲು ಸಾಧ್ಯ. ಹಾಗಾಗಿ ಉಳಿದ ಎಲ್ಲಾ ಮತಗಳಿಗೂ ತಮ್ಮ ಕ್ರೈಸ್ತ ಮತದ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸಿ ಅವರನ್ನೆಲ್ಲಾ ಕ್ರೈಸ್ತ ಮತಕ್ಕೆ ಪರಿವರ್ತಿಸಿ ಅವರನ್ನೆಲ್ಲಾ ಪಾಪ ಮುಕ್ತರನ್ನಾಗಿಸುವ ಹೊಣೆಗಾರಿಕೆ ನಮ್ಮ ಮೇಲಿರುವುದರಿಂದ ಇಂತಹ ವಿಶ್ವಧರ್ಮ ಸಮ್ಮೇಳನ ಅತ್ಯಗತ್ಯ ಎಂದು ವಾದಿಸಿ ಸಮ್ಮೇಳನದ ಆಯೋಜನೆ ಮಾಡಿದ್ದರು.

vivek2

ಇತ್ತ ಭಾರತದ ಕಲ್ಕತ್ತಾದಲ್ಲಿ ಹುಟ್ಟಿ ಬೆಳೆದ ನರೇಂದ್ರ ಎಂಬ ಯುವಕ ದೇವರನ್ನು ಕಾಣುವ ಹಂಬಲದಿಂದ ನಾನಾ ರೀತಿ ಪರಿಶ್ರಮ ಪಟ್ಟು ಕೊನೆಗೆ ಶ್ರೀ ರಾಮಕೃಷ್ಣ ಪರಮಹಂಸರಂತಹ ಗುರುಗಳ ಆಶ್ರಯಲ್ಲಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮೀ ವಿವೇಕಾನಂದ ಎಂಬ ಹೆಸರಿನಲ್ಲಿ ದೇಶವನ್ನು ಮತ್ತು ಧರ್ಮವನ್ನು ಅರಿಯಲು ಪರಿವ್ರಾಜಕರಾಗಿ ದೇಶಾದ್ಯಂತ ಪರ್ಯಟನೆ ಮಾಡುತ್ತಿರುವ ಸಂಧರ್ಭದಲ್ಲಿ ಅವರಿಗೆ ಖೇತ್ರಿ ಮಹಾರಾಜನ ಪರಿಚಯವಾಗುತ್ತದೆ. ಹೇಳಿ ಕೇಳಿ ಅಂದು ಬ್ರಿಟಿಶರು ದೇಶವನ್ನು ಆಳುತ್ತಿರುತ್ತಾರೆ. ನಮ್ಮ ಬಹುತೇಕ ರಾಜಮಹಾರಾಜರ ಬ್ರಿಟಿಷರ ಸಾಮಂತರಾಗಿ ಅವರ ಪ್ರಭಾವಕ್ಕೆ ಒಳಗಾಗಿರುಂತೆ ಖೇತ್ರಿ ರಾಜನೂ ಬ್ರಿಟಿಷರಂತೇ ನಮ್ಮ ಹಿಂದೂಗಳ ಮೂರ್ತಿ ಪೂಜೆಯ ಬಗ್ಗೆ ತುಸು ವಿರೋಧಿ ಧೋರಣೆ ಹೊಂದಿರುವುದು ಸ್ವಾಮೀಜಿಗಳ ಗಮನಕ್ಕೆ ಬಂದಿರುತ್ತದೆ. ಅದೊಂದು ದಿನ ರಾಜನ ಆಸ್ಥಾನದ ಸಭೆಯಲ್ಲಿ ಸ್ವಾಮೀಜಿಗಳು ಖೇತ್ರಿ ರಾಜನ ಮಂತ್ರಿಗೆ ರಾಜನ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗಿಯಲು ಸೂಚಿಸುತ್ತಾರೆ. ಸ್ವಾಮೀಜಿಗಳ ಈ ಮಾತನ್ನು ಕೇಳಿ ಬೆಚ್ಚಿದ ಮಂತ್ರಿ , ರಾಜನ ಭಾವಚಿತ್ರಕ್ಕೆ ಉಗುಳಲು ಹಿಂಜರಿಯುವುದನ್ನು ಕಂಡ ಸ್ವಾಮೀಜಿ, ಅರೇ, ರಾಜ ನಮ್ಮ ಮುಂದಿದ್ದಾನೆ. ನೀನು ಉಗುಳುತ್ತಿರುವುದು ಕೇವಲ ಕಾಗದಕ್ಕೆ ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಉಗಳಬಹುದು ಎಂದು ಸೂಚಿಸುತ್ತಾರೆ. ಅದಕ್ಕೆ ಮಂತ್ರಿಗಳು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ನಾವು ಈ ಭಾವಚಿತ್ರದಲ್ಲೂ ರಾಜನನ್ನೇ ಕಾಣುವುದರಿಂದ ಅದಕ್ಕೆ ಅಷ್ಟೇ ಗೌರವ ಕೊಡುವುದರಿಂದ ಆ ಭಾವಚಿತ್ರಕ್ಕೆ ನನ್ನಿಂದ ಉಗುಳಲು ಸಾಧ್ಯವಿಲ್ಲ ದಯವಿಟ್ಟು ಮನ್ನಿಸಿ ಎಂದಾಗ, ಸ್ವಾಮೀಜಿಗಳು ಹಸನ್ಮುಖರಾಗಿ ರಾಜನತ್ತ ತಿರುಗಿ, ರಾಜಾ, ಇದೇ ಭಕ್ತಿ ಭಾವವನ್ನೇ ನಮ್ಮ ಹಿಂದೂಗಳು ದೇವಸ್ಥಾನದಲ್ಲಿರುವ ದೇವರ ಮೂರ್ತಿಯಲ್ಲಿ ಕಾಣುತ್ತಾರೆ. ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಸ್ಥಾಪಿಸಿದ ಕಲ್ಲಿನ ಮೂರ್ತಿ ಅದು ಕೇವಲ ಕಲ್ಲಾಗಿರದೆ ಭಗವಂತನ ಸ್ವರೂಪವಾಗಿ ಹೋಗುವುದರಿಂದ ಜನರು ಭಕ್ತಿಭಾವದಿಂದ ಪೂಜಿಸುತ್ತಾರೆ ಎಂದಾಗ ಆ ಖೇತ್ರಿ ಮಹಾರಾಜನಿಗೆ ಸ್ವಾಮೀಜಿಗಳ ಮೇಲಿನ ಭಕ್ತಿ ಹೆಚ್ಚಾಗಿ ಇಂತಹ ಪರಮ ಜ್ಞಾನಿಗಳೇ ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ನಮ್ಮ ಹಿಂದೂ ಧರ್ಮವನ್ನು ಪ್ರತಿಪಾಸಲು ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಆವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಕಳಿಹಿಸುವುದಕ್ಕೆ ಎಲ್ಲಾ ಏರ್ಪಾಟುಗಳನ್ನು ಮಾಡಲು ಅನುವಾಗುತ್ತಾನೆ. ಆದರೆ ಈದಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಾಮಿಗಳು ತಮ್ಮ ದೇಶ ಪರ್ಯಟನೆಯನ್ನು ಮುಂದುವರೆಸಿ ತಮ್ಮ ಅಯಸ್ಕಾಂತೀಯ ಆಕರ್ಷಣಾ ಶಕ್ತಿಯಿಂದ ಅಪಾರ ರಾಜ ಮಹಾರಾಜರುಗಳನ್ನು ಶಿಷ್ಯವೃಂದವನ್ನೂ ಸಂಪಾದಿಸುತ್ತಾರೆ. ಅವರಿಂದ ಪ್ರಭಾವಿತರಾದ ರಾಜಮಹಾರಾಜರುಗಳಲ್ಲಿ ನಮ್ಮ ಮೈಸೂರು ಒಡೆಯರು ಕೂಡ ಒಬ್ಬರು. ಅವರೂ ಕೂಡ ಸ್ವಾಮೀಜಿಗಳ ಬುದ್ದಿಮತ್ತೆಯನ್ನು ಕಂಡು ಪ್ರಭಾವಿತರಾಗಿ ಅವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಬಲವಂತ ಪಡಿಸಿ ಅದರ ಖರ್ಚುವೆಚ್ಚಗಳನ್ನು ಭರಿಸು ಮುಂದಾಗುತ್ತಾರೆ. ಅಂತೆಯೇ ಸ್ವಾಮಿಗಳು ತಮ್ಮ ಪ್ರವಾಸವನ್ನು ಮುಂದುವರಿಸಿ ಕನ್ಯಾಕುಮಾರಿಯನ್ನು ತಲುಪಿ ಅಲ್ಲಿ ಸಮುದ್ರವನ್ನು ಈಜಿ ತುತ್ತ ತುದಿಯ ಬಂಡೆಯ ಮೇಲೆ ಕುಳಿತು ತಪಸ್ಸನ್ನು ಮಾಡಿ ಜ್ನಾನೋದಯ ಪಡೆದು ಮುಂದೆ ಮದ್ರಾಸ್ ನಗರಕ್ಕೆ ಪ್ರಯಾಣಿಸಿ ಅಲ್ಲಿನ ಅನೇಕ ಶಿಷ್ಯಂದಿರ ಒತ್ತಾಯಕ್ಕೆ ಮಣಿದು ಅಮೇರಿಕಾದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಒಪ್ಪಿ ಹಡಗನ್ನೇರಿ ಸುಮಾರು ಎರಡು ತಿಂಗಳಿನ ಸುಧೀರ್ಘ ಪ್ರಯಾಣದ ನಂತರ ಅಮೇರಿಕಾ ತಲುಪುತ್ತಾರೆ.

ವಿಶ್ವ ಧರ್ಮ ಸಮ್ಮೇಳನಕ್ಕೆ ಮೂರ್ನಾಲ್ಕು ತಿಂಗಳ ಮುಂಚೆಯೇ, ಅಪರಿಚಿತ ನಾಡಾದ ಅಮೇರಿಕದಲ್ಲಿ ಕಾಲಿಡುವ ಹೊತ್ತಿಗೇ, ಹಡಗಿನ ಪ್ರಯಾಣದ ಮಧ್ಯದಲ್ಲಿಯೇ ತಮ್ಮ ದಾಖಲೆಗಳನ್ನು ಕಳೆದುಕೊಂಡ ಸ್ವಾಮೀಜಿಗಳು ದುಬಾರಿ ಪ್ರದೇಶವಾದ ಚಿಕಾಗೋದಲ್ಲಿ ಇದ್ದ ಅಲ್ಪ ಸ್ವಲ್ಖ ಹಣವೂ ಖರ್ಚಾಗಿ ಹೋಗಿ ಮುಂದೇನೂ ಮಾಡುವುದು ಎಂದು ಯೋಚಿಸುತ್ತಿರುವಾಗ ಯಾರದ್ದೋ ಸಲಹೆಯ ಮೇರೆಗೆ ಅಂದಿಗೆ ಸಾಮಾನ್ಯ ನಗರವಾಗಿದ್ದ ಬೋಸ್ಟನ್ ನಗರಕ್ಕೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸ್ವಾಮೀಜಿಗಳ ತೇಜಸ್ಸಿಗೆ ಮಾರು ಹೋದ ಸಹ ಪ್ರಯಾಣಿಕಳೊಬ್ಬಳು ಸ್ವಾಮೀಜಿಗಳ ಜೊತೆ ಮಾತಿಗಿಳಿಯುತ್ತಾ, ಅವರ ಅಸಹನೀಯ ದಯಾನೀಯ ಪರಿಸ್ಥಿಗೆ ಮರುಕಗೊಂಡು ಅವಳ ಮನೆಯಲ್ಲಿಯೇ ಆಶ್ರಯ ನೀಡುತ್ತಾಳೆ. ತತ್ವಶಾಸ್ತ್ರದ ಪಂಡಿತೆಯಾಗಿದ್ದ ಆಕೆ ಮೊದಲೆರಡು ಮೂರು ದಿನಗಳಲ್ಲಿಯೇ ಸ್ವಾಮೀಜೀಗಳ ಪಾಂಡಿತ್ಯಕ್ಕೆ ಮಾರು ಹೋಗಿ ಆಕೆ ಅವರ ಪಾಂಡಿತ್ಯವನ್ನು ತನ್ನೆಲ್ಲಾ ಸ್ನೇಹಿತರಿಗೆ ಪರಿಚಯಿಸಲು ಪ್ರತೀ ದಿನ ಸಂಜೆ ತನ್ನ ಮನೆಯಲ್ಲಿ ಚಹಾ ಕೂಟವನ್ನೇರಿಪಡಿಸಿ ಅಲ್ಲಿ ಸ್ವಾಮೀಜಿಗಳ ಒಂದೆರಡು ಘಂಟೆಗಳ ಪ್ರವಚನ ನಡೆಯುತ್ತದೆ. ತನ್ನ ಪರಿಚಯಸ್ಧರ ಬಳಿ ಸ್ವಾಮೀಜಿಯವರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವುದಾಗಿಯೂ, ಆದರೆ ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರಿಗೆ ತಮ್ಮ ಶಿಫಾರಸ್ಸು ಪತ್ರ ನೀಡಲು ಕೇಳಿಕೊಂಡಾಗ, ಅವರು ಸ್ವಾಮೀಜಿಯನ್ನು ಭೇಟಿ ಮಾಡಿ, ಅವರ ಪಾಂಡಿತ್ಯಕ್ಕೆ ಬೆರಗಾಗಿ ಇವರಿಗೆ ಶಿಫಾರಸ್ಸು ಪತ್ರ ನೀಡುವುದೆಂದರೆ ಪ್ರಖರ ಸೂರ್ಯನ ಬೆಳಕಿಗೆ ಪ್ರಮಾಣ ಪತ್ರ ನೀಡಿದಂತೆ ಎಂದು ಉಧ್ಘರಿಸಿ, ಸಮ್ಮೇಳನದ ಆಯೋಜಕರಿಗೆ ಬರೆದ ಪತ್ರದಲ್ಲಿ ಇಡೀ ಅಮೇರಿಕಾದಲ್ಲಿರುವ ಎಲ್ಲಾ ಧರ್ಮಗುರುಗಳ ಪ್ರಾವೀಣ್ಯತೆಯನ್ನೂ ಮತ್ತು ಈ ಸ್ವಾಮಿಗಳ ಪ್ರಾವೀಣ್ಯತೆಯನ್ನು ತಕ್ಕಡಿಗೆ ಹಾಕಿದಲ್ಲಿ ನಿಶ್ಚಿತವಾಗಿಯೂ ಈ ಸ್ವಾಮಿಗಳದ್ದೇ ಹೆಚ್ಚಿನ ತೂಕವಿರುವ ಕಾರಣ ಇಂತಹವರಿಗೆ ಖಂಡಿತವಾಗಿಯೂ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನೀಡದಿದ್ದಲ್ಲಿ ನಮಗೇ ನಷ್ಟ ಎಂದು ಕೇವಲ ಎರಡು ಮೂರು ದಿನಗಳು ಅವರೂಡನೆ ವ್ಯವಹರಿಸಿದ ಪಾಶ್ಚಿಮಾತ್ಯ ವಿದ್ವಾಂಸರೊಬ್ಬರು ಬರೆದು ಕೊಡುತ್ತಾರೆಂದರೆ ಹೇಗಿರಬಹುದು ನಮ್ಮ ಸ್ವಾಮೀಜಿಯವರ ಪ್ರಾವೀಣ್ಯತೆ.

vivek3

ನಂತರದ ದಿನಗಳಲ್ಲಿ ಈ ಪತ್ರವನ್ನೂ ಕಳೆದುಕೊಂಡ ಸ್ವಾಮಿಗಳು ಮತ್ತೊಬ್ಬರ ಸಹಾಯದ ಮೂಲಕ ಹಾಗೂ ಹೀಗೂ ಮಾಡಿಕೊಂಡು ಸೆಪ್ಟೆಂಬರ್ 11ರ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರತಿಪಾದಕರಾಗಿ ವೇದಿಕೆಯನ್ನೇರುತ್ತಾರೆ. ಆಗಷ್ಟೇ ಸುಮಾರು ಮೂವತ್ತು ವರ್ಷ ಪ್ರಾಯದ ತರುಣ ಸ್ವಾಮೀ ವಿವೇಕಾನಂದರು ಸಮ್ಮೇಳನದಲ್ಲಿ ನೆರೆದಿದ್ದ ಭಾರೀ ಜನಸ್ತೋಮವನ್ನು ನೋಡಿ ನಿಬ್ಬೆರಗಾಗಿದ್ದಂತೂ ಸುಳ್ಳಲ್ಲ. ಅದಕ್ಕಿಂತ ಮುಂಚೆ ಅವರೆಂದೂ ಅಷ್ಟೋಂದು ಜನರೆದರು ಮಾತನಾಡಿಯೇ ಇರಲಿಲ್ಲ. ಅವರ ಪ್ರವಚನಗಳೇನಿದ್ದರೂ ಐವತ್ತು ಅರವತ್ತು ಜನರ ನಡುವೆಯೇ ನಡೆಯುತ್ತಿತ್ತಾದ್ದರಿಂದ ಮೊದಲ ಕೆಲವು ಗಂಟೆಗಳು ಭಾಷಣ ಮಾಡಲು ಹಿಂಜರಿದು, ಆಯೋಜಕರು ಪ್ರತೀ ಬಾರಿ ಮುಂದಿನ ಭಾಷಣ ನಿಮ್ಮದೇ ಎಂದಾಗಲೂ ಈಗ ಬೇಡ ನಂತರ ಮಾತನಾಡುತ್ತೇನೆ ಎಂದು ಮುಂದೂಡುತ್ತಾ, ವಿಧಿ ಇಲ್ಲದೆ ದಿನದ ಕಟ್ಟ ಕಡೆಯ ಭಾಷಣಕಾರರಾಗಿ ಧ್ವನಿವರ್ಧಕದ ಮುಂದೆ ಬಂದು ನಿಲ್ಲುತ್ತಾರೆ. ಇಡೀ ದಿನ ಹಲವಾರು ಧರ್ಮ ಪ್ರಚಾರಕರ ಭಾಷಣಗಳಿಂದ ಆಗಲೇ ಬೇಸರಿಗೊಂಡಿದ ಸಭಿಕರಲ್ಲನೇಕರು ಈ ಸ್ವಾಮಿ ಏನು ಮಾತಾನಾಡುತ್ತಾನೆ ಎಂದು ತಿಳಿದು ತಮ್ಮ ತಮ್ಮ ಜಾಗದಿಂದ ಹೊರನಡೆಯಲು ಸಿಧ್ಧರಾಗುತ್ತಿದ್ದಂತೆಯೇ, ತಮ್ಮ ಗಂಟಲನ್ನು ಸರಿ ಮಾಡಿಕೊಂಡು, ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನೂ, ತಾಯಿ ಭಾರತಿಯನ್ನು ಮನದಲ್ಲಿಯೇ ವಂದಿಸಿ, ಅಮೇರಿಕಾದ ನನ್ನ ನೆಚ್ಚಿನ ಸಹೋದರಿ, ಸಹೋದರರೇ ( Sisters & Brothers of America) ಭಾಷಣ ಆರಂಭಿಸುತ್ತಿದ್ದಂತೆಯೇ, ಆ ಒಂದು ವಾಕ್ಯ ಕೇಳಿದೊಡನೆಯೇ ಇಡೀ ಸಮ್ಮೇಳದಲ್ಲಿ ಒಂದು ರೀತಿಯ ವಿದ್ಯುತ್ ಸಂಚಲನಗೊಂಡು ಇಡೀ ಜನಸ್ತೋಮ ತಮಗರಿವಿಲ್ಲದಂತೆಯೇ ಕರತಾಡನ ಮಾಡಲು ಶುರು ಮಾಡಿ ಅದು ಸುಮಾರು ಎರಡು ನಿಮಿಷಕ್ಕೂ ಅಧಿಕಕಾಲ ಇಡೀ ಸಭಾಂಗಣದಲ್ಲಿ ಮಾರ್ಧನಿಸುತ್ತದೆ. ಸಭಾಂಗಣದ ಹೊರಗಿನವರೆಗೂ ಗಡಚಿಕ್ಕುವ ಆ ಚಪ್ಪಾಳೆಯ ಸದ್ದನ್ನು ಕೇಳಿ, ಈಗಾಗಲೇ ಸಭೆಯಿಂದ ಹೊರನಡೆದವರೂ ಸಹಾ ಲಘು ಬಗೆಯಿಂದ ಸಭಾಗಂಣದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಕುತೂಹಲದಿಂದ ಒಳಗೆ ಬಂದರೆ ಇಡೀ ಸಭಾಂಗಣದಲ್ಲಿ ನಿಲ್ಲಲೂ ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದು ತುಂಬಿಹೋಗುತ್ತದೆ. ಚಪ್ಪಾಳೆ ಸದ್ದೇಲ್ಲ ನಿಂತು ನಿಶ್ಯಬ್ಧವಾದಾಗ ತಮ್ಮ ಭಾಷಣ ಮುಂದುವರಿಸಿದ ಸ್ವಾಮೀಜಿಗಳು ನಿರರ್ಗಳವಾಗಿ ಸನಾತನ ಹಿಂದೂಧರ್ಮ ಮತ್ತು ನಮ್ಮ ಧರ್ಮನಿರಪೇಕ್ಷತೆ, ನಮ್ಮ ಜನರ ಇತಿಹಾಸವನ್ನೆಲ್ಲಾ ಎಳೆ ಎಳೆಯಾಗಿ ಎಲ್ಲರ ಮುಂದೆಯೂ ಬಿಚ್ಚಿಟ್ಟು ತಮ್ಮ ಭಾಷಣ ಮುಗಿಸಿದಾಗ ನೆರೆದಿದ್ದ ಸಭಿಕರಿಗೆಲ್ಲಾ ರೋಮಾಂಚನವಾಗಿದ್ದಂತೂ ಸುಳ್ಳಲ್ಲ.

ಸೆಪ್ಟೆಂಬರ್ 12ರಂದು ಅಮೇರಿಕಾದ ಬಹುತೇಕ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೂ ವಿವೇಕಾನಂದರು ಮತ್ತು ಅವರ ದಿಕ್ಸೂಚಿ ಭಾಷಣಕ್ಕೇ ಮೀಸಲಾಗಿಟ್ಟಿದ್ದವು. ಭಾರತ ಎಂದರೆ ಅನಾಗರೀಕ ದೇಶ, ಅದು ಹಾವಾಡಿಗರ, ಕರಡಿ ಮತ್ತು ಕೋತಿ ಕುಣಿಸುವ ದೇಶ. ಅಂತಹ ದೇಶವನ್ನು ಉದ್ಧಾರ ಮಾಡಲು ನಾವಲ್ಲಿಗೆ ಹೋಗಲೇ ಬೇಕು ಎಂದು ಎಲ್ಲರಿಂದಲೂ ಪ್ರತೀ ತಿಂಗಳು ದೇಣಿಗೆ ಸಂಗ್ರಹಿಸುತ್ತಿದ್ದ ಕ್ರೈಸ್ತ ಮಿಷನಿರಿಗಳಿಗೆ ಈ ಭಾಷಣ ಮರ್ಮಾಘಾತವನ್ನುಂಟು ಮಾಡಿದೆ. ಭಾರತದಂತಹ ದೇಶದಿಂದ ಬಂದ ಒಬ್ಬ ಸನ್ಯಾಸಿಗೇ ಇಷ್ಟೋಂದು ಪಾಂಡಿತ್ಯವಿರಬೇಕಾದರೆ ಇಂತಹ ಸಾವಿರಾರು ಪಂಡಿತರನ್ನು ಹೊಂದಿ ಭೌಧ್ಧಿಕವಾಗಿ ಸುಭಿಕ್ಷವಾಗಿರಲೇ ಬೇಕು ಎಂದು ಬರೆದಿದ್ದವು. ಅಂದಿನಿಂದ ಸಮ್ಮೇಳನದಲ್ಲಿ ಪ್ರತಿದಿನ ವಿವೇಕಾನಂದರನ್ನು ನೋಡಲು ಮತ್ತು ಅವರ ಮಾತನ್ನು ಕೇಳಲು ಜನರ ನೂಕು ನುಗ್ಗಲನ್ನು ಮನಗಂಡ ಸಮ್ಮೇಳನದ ಆಯೋಜಕರು ಪ್ರತಿದಿನ ಸಂಜೆ ವಿವೇಕಾನಂದರ ಭಾಷವನ್ನು ಏರ್ಪಾಡು ಮಾಡುತ್ತಾರೆ. ಕೇವಲ ಸ್ವಾಮೀಜೀಗಳ ಮಾತನ್ನು ಕೇಳುವ ಸಲುವಾಗಿಯೇ ಇಡೀ ದಿನ ಇತರರ ಭಾಷಣಗಳನ್ನು ಸಹಿಸಿಕೊಂಡು ದಿನದ ಅಂತ್ಯದಲ್ಲಿ ಸ್ವಾಮೀಜೀಯವರ ಪ್ರೇರಣಾತ್ಮಕ ಭಾಷವನ್ನಾಲಿಸಿ ಕೃತಾರ್ಥರಗುತ್ತಿದ್ದದ್ದು ಅನೇಕ ಕ್ರೈಸ್ತ ಧರ್ಮಗುರುಗಳಿಗೆ ಸ್ವಾಮೀಜಿಗಳ ಮೇಲೆ ಕೋಪವನ್ನು ತರಿಸಿದ್ದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಯಾವುದೇ ಹೆಚ್ಚಿನ ಅಪೇಕ್ಷೆ ಇಲ್ಲದೇ ಎಲ್ಲರಿಂದಲೂ ತಾತ್ಸಾರಕ್ಕೊಳಗಾಗಿದ್ದ ಸ್ವಾಮೀ ವಿವೇಕಾಂದರು ವಿಶ್ವಧರ್ಮ ಸಮ್ಮೇಳನದ ತಮ್ಮ ಸಾಲು ಸಾಲು ಭಾಷಣಗಳಿಂದ Man of the series ಆಗಿ ಹೋಗುತ್ತಾರೆ ಎನ್ನುವುದಂತೂ ಅಕ್ಷರಶಃ ಸತ್ಯ.

ಈ ದಿಕ್ಸೂಚಿ ಭಾಷಣದ ನಂತರದ ನಾಲ್ಕು ವರ್ಷಗಳು ಸ್ವಾಮೀಜಿಯವರು ಬಿಡುವಿಲ್ಲದಂತೆ ಅಮೇರಿಕಾ ಮತ್ತು ಯೂರೋಪಿನ ನಾನಾ ಪ್ರದೇಶಗಳಿಗೆ ಪ್ರವಾಸ ಮಾಡಿ ತಮ್ಮ ಅನುಯಾಯಿಗಳ ಪಡೆಯನ್ನು ಹೆಚ್ಚಿಸಿಕೊಳ್ಳುತ್ತಾ, ಹಿಂದೂ ಧರ್ಮದ ಬಗ್ಗೆಯೂ ಮತ್ತು ಭಾರತ ಬಗ್ಗೆ ಇದ್ದ ಎಲ್ಲಾ ಅಪನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುವಾಗಲೇ, ಸ್ವಾಮಿಗಳ ಮೇಲೆ ಕ್ರೈಸ್ತ ಮಿಷನರಿಗಳು ಇಲ್ಲ ಸಲ್ಲದ ಆರೋಪಗಗಳನ್ನು ಮಾಡುತ್ತಾ ಸ್ವಾಮಿಜಿಯವರ ಮಾನ ಹಾನಿ ಮಾಡಲು ಪ್ರಯತ್ನಿಸಿದರೂ ಅದು ನದಿ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಕೊಚ್ಚಿಕೊಂಡು ಹೋಗುತ್ತವೆ.

vivek1

ಈ ವೇಳೆಗಾಗಲೇ ವಿದೇಶದಲ್ಲಿ ನಮ್ಮ ದೇಶದ ಮತ್ತು ಧರ್ಮದ ಕೀರ್ತಿಪತಾಕೆಯನ್ನೇರಿಸಿದ ಸ್ವಾಮೀಜಿಯವರ ಪ್ರತಾಪ ಭಾರತಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಜನರಿಂದ ಜನರಿಗೆ ಕಾಳ್ಗಿಚ್ಚಿನಂತೆ ಹಬ್ಬಿ ಎಲ್ಲರಿಗೂ ಸ್ವಾಮೀಜೀಯವನ್ನು ಕಾಣುವ ಕುತೂಹಲ ಮೂಡಿರುತ್ತದೆ. ಇನ್ನೂ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ದೇಶ ಭಕ್ತರಿಗಂತೂ ವಿದೇಶದ ನೆಲದ ಮೇಲೆಯೇ ನಿಂತು ಅವರನ್ನೇ ನೇರವಾಗಿ ಪ್ರಶ್ನಿಸುತ್ತಿದ್ದ, ಅವರ ತಪ್ಪುಗಳನ್ನು ಎತ್ತಿತೋರುವ ದಿಟ್ಟ ತನವನ್ನು ತೋರುತ್ತಿದ್ದ ಸ್ವಾಮಿ ವಿವೇಕಾನಂದರು ಸ್ಪೂರ್ತಿದಾಯಕರಾಗುತ್ತಾರೆ. ಸುಭಾಸ್ ಚಂದ್ರ ಬೋಸ್, ಗಾಂಧೀಜೀ, ರವೀಂದ್ರನಾಥ್ ಟಾಗೂರರಂತಹ ಮಹಾನ್ ನಾಯಕರುವಳು ಸ್ವಾಮೀಜಿಯವರಿಂದ ಪ್ರೇರಿತರಾಗಿದ್ದಂತೂ ಸತ್ಯ ಸಂಗತಿ.

ಅಮೇರಿಕಾದಿಂದ ಶ್ರೀಲಂಕಾದ ಮೂಲಕ ಭಾರತಕ್ಕೆ ಮರಳುವಾಗ, ಸ್ವಾಮೀಜಿಯವರನ್ನು ಕಾಣಲು ಅಲ್ಲಿನ ಗಣ್ಯಾತಿ ಗಣ್ಯರೇ ಕಾಯುತ್ತಾ ನಿಂತಿರುವಾಗ, ಹಡಗಿನಿಂದ ಇಳಿದ ಕೂಡಲೇ ಸ್ವಾಮೀಜಿಯವರು ಮರಳನ್ನು ತಮ್ಮ ಮೇಲೆ ಸುರಿದುಕೊಳ್ಳುತ್ತಿದ್ದದ್ದನ್ನು ನೋಡಿ ಎಲ್ಲರೂ ಆಶ್ವರ್ಯಚಕಿತರಾಗುತ್ತಾರೆ. ಸ್ವಲ್ಪ ಸಮಯದನಂತರ ಸಾವರಿಸಿಕೊಂಡು ಕಳೆದ ನಾಲ್ಕೈದು ವರ್ಷಗಳಿಂದ ಭೋಗ ಭೂಮಿಯಲ್ಲಿದ್ದ ನನ್ನ ದೇಹ ಅಪವಿತ್ರಗೊಂಡಿದೆ. ಈಗ ಅದನ್ನು ತ್ಯಾಗಭೂಮಿಯ ಮಣ್ಣಿನಿಂದ ಶುಚಿಗೊಳ್ಳಿಸುತ್ತಿದ್ದೇನೆ ಎಂದಾಗ ಎಲ್ಲರಿಗೂ ಸ್ವಾಮೀಜಿಯವರ ದೇಶಪ್ರೇಮದ ಅರಿವಾಗಿ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಮಂದೆ ನಾಲ್ಕೈದು ವರ್ಷಗಳು ದೇಶಾದ್ಯಂತ ಪರ್ಯಟನ ಮಾಡಿ ಎಲ್ಲರಿಗೂ ಮಾರ್ಗದರ್ಶನ ಮಾಡಿ ತಮ್ಮ ಮೂವತ್ತೊಂಬತ್ತರ ವಯಸ್ಸಿನಲ್ಲಿ ಜುಲೈ 4, 1902 ರಂದು ನಾನಾ ರೀತಿಯ ಖಾಯಿಲೆಗಳಿಂದ ಜರ್ಜರಿತವಾಗಿದ್ದ ದೇಹದಿಂದ ಮುಕ್ತಿಹೊಂದುತ್ತಾರೆ. ಹಾಗೆ ಮುಕ್ತಿ ಹೊಂದುವ ಮೊದಲು ತಮ್ಮ ಶಿಷ್ಯರೊಂದಿಗೆ ಮಾತನಾಡುತ್ತಾ ಸರಿಯಾದ ಆಹಾರವಿಲ್ಲದೆ, ಸರಿಯಾದ ಪಥ್ಯವಿಲ್ಲದೆ, ದೇಶ ವಿದೇಶಗಳ ವಿವಿಧ ಹವಾಮಾನಗಳಲ್ಲಿ ಸುತ್ತಿದ ಪರಿಣಾಮವಾಗಿ ಈ ದೇಹ ಕೃಶವಾರಿರುವ ಪರಿಣಾಮವಾಗಿ ಈ ದೇಹವನ್ನು ತ್ಯಜಿಸಲೇ ಬೇಕಾಗಿದ್ದರೂ ನನ್ನ ಚಿಂತನೆಗಳ ಮೂಲಕ ಇನ್ನೂ ಸಾವಿರ ವರ್ಷಗಳು ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿದ್ದದ್ದು ಇಂದಿಗೂ ಪ್ರಸ್ತುತವಾಗಿದೆ.

ಇಂದಿನ ಯುವಜನತೆ ಆಧುನಿಕತೆ ಎಂಬ ಹೆಸರಿನಲ್ಲಿ ಪಾಶ್ವಾತ್ಯ ಸಂಸ್ಕೃತಿಯನ್ನು , ಸಿನಿಮಾ ನಾಯಕರಗಳು, ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಮತ್ತು ಅಪ್ರಬುಧ್ಧ ರಾಜಕೀಯ ನಾಯಕರುಗಳನ್ನು ತಮ್ಮ ನಾಯಕರುಗಳು ಎಂದು ನಂಬಿ ಅವರನ್ನೇ ಅಂಧಾನುಕರಣೆ ಮಾಡುತ್ತಾ ದಿಕ್ಕು ತಪ್ಪುತ್ತಿರುವ ಸಮದಲ್ಲಿ ನರೇಂದ್ರರ ಚಿಂತನೆಗಳು ಇಂದಿಗೂ ಅತ್ಯಾವಶ್ಯಕ ಅನಿಸುತ್ತಿದೆಯಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ