ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಅತ್ತೆ-ಸೊಸೆ, ಸಂಬಂಧ-ಅನುಬಂಧ

ಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ. ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ… Read More ಅತ್ತೆ-ಸೊಸೆ, ಸಂಬಂಧ-ಅನುಬಂಧ

ಮಾತೃ ಸ್ವರೂಪೀ ಅಪ್ಪಾ

ಅದೊಂದು ಐಶಾರಾಮೀ ಅಂತರಾಷ್ಟ್ರೀಯ ಶಾಲೆಯ ಉದ್ಯಾನವನದಲ್ಲಿ  ಗಂಗಣ್ಣ ಗಿಡಗಳಿಗೆ ನೀರನ್ನು ಹಾಕಿ ಪೋಷಿಸುತ್ತಿದ್ದರು. ಸಂಜೆ ಬಿಸಿಲು ತೀವ್ರವಾಗಿ ಅತನನ್ನು ಬಸವಳಿಸುತ್ತಿತ್ತಾದರೂ ಅದನ್ನು ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದ ಮಾಲಿ ಗಂಗಣ್ಣನ ಅವರ ಬಳಿ ಬಂದ ಸಹೋದ್ಯೋಗಿಯೊಬ್ಬರು, ಪ್ರಿನ್ಸಿಪಾಲ್ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕೂಡಲೇ ಅವರನ್ನು ಭೇಟಿಯಾಗಬೇಕೆಂತೇ ಎಂದು ಹೇಳಿದರು. ಅರೇ! ಏನಪ್ಪಾ ಆಯ್ತು? ಪ್ರಿನ್ಸಿಪಾಲ್ ಮೇಡಂ ಕರೆಯುವಷ್ಟು ತಪ್ಪನ್ನು ನಾನೇನು ಮಾಡಿದೆ? ಎಂದು ಯೋಚಿಸುತ್ತಲೇ, ಭಯ ಭಯದಿಂದ ಬೆವರು ಸುರಿಯುತ್ತಿದ್ದ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಂಡು… Read More ಮಾತೃ ಸ್ವರೂಪೀ ಅಪ್ಪಾ

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ. ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ.… Read More ವಂಶವಾಹಿ ಸಂಸ್ಕಾರ (ಜೀನ್ಸ್)

ಪುನರ್ಜನ್ಮ ನೀಡಿದ ಅಪ್ಪ

ಬಹುಷಃ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ನಿಂಬೇಹುಳಿ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಚಾಕ್ಲೇಟ್ ಎಂದರೆ ಅದೊಂದೇ. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ನಾವು ಚಿಕ್ಕವರಿದ್ದಾಗ ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನ ರೂಪದಲ್ಲಿ ಸಿಗುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ… Read More ಪುನರ್ಜನ್ಮ ನೀಡಿದ ಅಪ್ಪ

ನಾನು ಅಪ್ಪನಾದ ಮಧುರ ಕ್ಷಣ

ತುಂಬು ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ತೋರಿಸಿ ಎಲ್ಲವೂ ಸರಿಯಾಗಿದೆ. ಇನ್ನು ಒಂದೆರಡು ವಾರಗಳಲ್ಲಿ ಪ್ರಸವವಾಗಬಹುದು ಎಂದಾಗ ಖುಷಿಯಿಂದ ಹೊಟ್ಟೇ ತುಂಬಾ ಚಾಟ್ಸ್ ತಿನ್ನಿಸಿ ನನ್ನಾಕೆಯನ್ನು ಅವಳ ತಾಯಿಯ ಮನೆಗೆ ಬಿಟ್ಟು ಬಂದಿದ್ದೆ. ಅಂದು ಮೇ 21, 2000ನೇ ಇಸವಿಯ ವೈಶಾಖ ಬಹುಳ ಚತುರ್ಥಿ. ಅರ್ಥಾತ್ ಸಂಕಷ್ಟಹರ ಚತುರ್ಥಿ. ಬೆಳ್ಳಂ ಬೆಳಿಗ್ಗೆಯೇ ನಮ್ಮ ತಂದೆ ತಾಯಿ, ಸೋದರ ಮಾವ ಮತ್ತು ಚಿಕ್ಕಂಮ್ಮಂದಿರು ಮೇಲುಕೋಟೆಗೆ ಹೋಗುವವರಿದ್ದರು. ಹಾಗಾಗಿ ಅವರು ಮಾಡಿಟ್ಟಿದ್ದ ಬಿಸಿ ಬಿಸಿ ಇಡ್ಲಿಯನ್ನು ಅದಾಗಲೇ ತವರು ಮನೆಗೆ… Read More ನಾನು ಅಪ್ಪನಾದ ಮಧುರ ಕ್ಷಣ

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ಅದೊಂದು ಹೆಸರಾಂತ ಗುರುಕುಲ ಬಹಳಷ್ಟು ವಿದ್ಯಾರ್ಥಿಗಳು ಆ ಗುರುಗಳ ಬಳಿ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯಂದಿರನ್ನು ಪರೀಕ್ಷಿಸುವ ಮನಸಾಗಿ, ಎಲ್ಲರನ್ನೂ ಒಟ್ಟುಗೂಡಿಸಿ ನಮಗೂ ಮತ್ತು ಭಗವಂತನಿಗೂ ಇರುವ ಅಂತರವೆಷ್ಟು? ಎಂಬ ಸರಳ ಪ್ರಶ್ನೆಯನ್ನು ಕೇಳಿದರು. ಗುರುಗಳ ಈ ಸರಳ ಪ್ರಶ್ನೆಗೆ ಬಹಳವಾಗಿ ತಲೆಕೆಡಿಸಿಕೊಂಡ ಶಿಷ್ಯಂದಿರು, ಒಬ್ಬ ಭೂಮಿ ಆಕಾಶದಷ್ಟು ದೂರವೆಂದರೆ ಮತ್ತೊಬ್ಬ, ಭೂಮಿ ಪಾತಾಳದಷ್ಟು ದೂರ ಗುರುಗಳೇ ಎಂದ ಹೀಗೆ ಒಬ್ಬಬ್ಬೊರು ಒಂದೊಂದು ರೀತಿಯಾಗಿ ಉತ್ತರಿಸಿದಾಗ ಸಮಾಧಾನರಾಗದ ಗುರುಗಳು. ಆ… Read More ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?