ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ

ಈಗಾಗಾಲೇ ಎಲ್ಲರಿಗೂ ತಿಳಿದಿರುವಂತೆ ಎರಡು ದಿನಗಳ ಹಿಂದೆ ಖ್ಯಾತ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೋಲಿಸರು ರಾತ್ರೋ ರಾತ್ರಿ ಅವರ ಮನೆಯಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಕುರಿತಂತೆ ದೇಶದಲ್ಲಿ ಭೂಕಂಪವೇ ಆಗಿಹೋದಂತೇ ಪತ್ರಿಕಾ ವೃತ್ತಿ ಧರ್ಮಕ್ಕೇ ಕೊಳ್ಳಿ ಬಿದ್ದಂತಾಗಿದೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿದರೇ, ಅರ್ನಾಬ್ ಅವರ ವಿರೋಧಿ ಮಾಧ್ಯಮಗಳು ಪೋಲೀಸರ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇಬ್ಬರ ಪರವಾಗಿಯೂ ಎಗ್ಗಿಲ್ಲದೇ, ದಿನದ 24 ಗಂಟೆಗಳೂ ಜೋರು ಗಂಟಲಿನ ಚರ್ಚೆ ಎಂಬ ಹೆಸರಿನಲ್ಲಿ ಕೆಸರಾಟ ನೆಡೆಯುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿಯಲ್ಲ.

ಆರಂಭದಲ್ಲಿ NDTV ಯಲ್ಲಿ ವೃತ್ತಿಯನ್ನು ಆರಂಭಿಸಿ ನಂತರ Times Now ಮಾಧ್ಯಮದ ಮುಖಾಂತರ Nation wants to know ಎಂಬ ಪ್ರತೀ ದಿನದ ಚರ್ಚೆಯ ಮುಖಾಂತರ ಪ್ರವರ್ಧಮಾನಕ್ಕೆ ಬಂದ ಅರ್ನಾಬ್ ಕೆಲ ವರ್ಷಗಳ ಹಿಂದೆ ತಮ್ಮದೇ ಆದ Republic TV ಸಂಸ್ಥೆಯನ್ನು ಆರಂಭಿಸಿ, ಭಾರತೀಯ ಪತ್ರೀಕೋದ್ಯಮದಲ್ಲಿ ಎಡಪಂಥೀಯರದ್ದೇ ಪ್ರಾಭಲ್ಯ ಹೆಚ್ಚಾಗಿರುವಾಗ ಅವರೆಲ್ಲರನ್ನೂ ಧೈರ್ಯದಿಂದ ಎದುರು ಹಾಕಿಕೊಂಡು ತಮ್ಮ ಬಲಪಂಥೀಯ ನಿಲುವುಗಳ ಮೂಲಕ ದೇಶದ ಮನೆ ಮಾತಾಗಿದ್ದಾರೆ ಅರ್ನಾಬ್ ಎಂದರೂ ತಪ್ಪಾಗಲಾರದು

ಕೆಲವು ತಿಂಗಳುಗಳ ಹಿಂದೆ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷೆ ಸೋನಿಯಾಗಾಂಧಿಯವರ ನಿಜವಾದ ಹೆಸರಾದ ಆಂಟೋನಿಯೋ ಮೈನೋ ಹೆಸರನ್ನು ತಮ್ಮ ‍ಕಾರ್ಯಕ್ರಮದಲ್ಲಿ ಹೇಳಿದ್ದಕ್ಕಾಗಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ದೂರುಗಳನ್ನು ಕಾಂಗ್ರೇಸ್ಸಿಗರು ದಾಖಲಿದ್ದಲ್ಲದೇ ಕೆಲವು ಗೂಂಡಗಳು ಅವರ ಮತ್ತು ಅವರ ಪತ್ನಿಯ ಮೇಲೆ ಆಕ್ರಮಣ ಮಾಡಿದ್ದಾಗ ದೇಶದ ಬಹುತೇಕರು ಅವರ ಪರ ನಿಂತು ಧೈರ್ಯ ತುಂಬಿದ್ದರು. ಸುಶಾಂತ್ ಸಿಂಗ್ ಪ್ರಕರಣ ಆತ್ಮಹತ್ಯೆಯಲ್ಲಾ ಅದೊಂದು ಕೊಲೆ ಅದರ ಹಿಂದೆ ಮಹಾರಾಷ್ಟ್ರಮುಖ್ಯಮಂತ್ರಿಯವರ ಮಗನ ಕೈವಾಡವಿದೆ ಎಂಬ ಸಂಗತಿಯನ್ನು ಪದೇ ಪದೇ ಅರ್ನಾಬ್ ಹೇಳಿ ಇದರ ಕುರಿತಂತೆ ಸಿ.ಬಿ.ಐ ತನಿಖೆ ಆಗಬೇಕೆಂದು ಒತ್ತಾಯಿಸಿ, ಮಹಾರಾಷ್ಟ್ರದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲ ವಾರಗಳ ಹಿಂದೆ ಟಿ.ಆರ್.ಪಿ ಕುರಿತಂತೆ ಮಾಧ್ಯಮಗಳು ಮಾಡುತ್ತಿರುವ ಕೆಲ ಅಕ್ರಮಗಳಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಕೇಳಿಬಂದಾಗ ಇದೇ ಅರ್ನಾಬ್ ಮಹಾರಾಷ್ಟ್ರ ಸರ್ಕಾರ ತಮ್ಮ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೂಗಾಡಿ ಮಾನನಷ್ಟ ಮೊಕ್ಕದ್ದಮೆ ಹಾಕುತ್ತೇನೆ ಎಂದೂ ತಿಳಿಸಿದ್ದರು.

ರಿಪಬ್ಲಿಕ್ ಟಿವಿ ಛಾನೆಲ್ ಆರಂಭಿಸುವಾಗ ಅನ್ವಯ್ ನಾಯಕ್ ಎಂಬುವರ ಜೊತೆ ಅರ್ನಾಬ್ ಗೋಸ್ವಾಮಿ ಕೆಲವು ವ್ಯವಹಾರವನ್ನು ಮಾಡಿದ್ದಾರೆ. ಅನ್ವಯ್ ನಾಯಕ್ ಎನ್ನುವವರು ತಮಗೆ ಅರ್ನಾಬ್ ಗೋಸ್ವಾಮಿಯವರ ಕಡೆಯಿಂದ ಐವತ್ತು ಲಕ್ಷ ರೂ ಬಾಕಿ ಬರಬೇಕಾಗಿದೆ ಎಂದು ಡೆತ್ ನೋಟ್ ಬರೆದು ತಮ್ಮ ತಾಯಿಯವರನ್ನು ದಿಂಬಿನ ಮುಖಾಂತರ ಉಸಿರು ಗಟ್ಟಿಸಿ ಕೊಂದಿದ್ದಲ್ಲದೇ, ತಾವೂ ಕೂಡಾ ಅತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೊಲೆ ಮತ್ತು ಅತ್ಮಹತ್ಯೆಗೆ ಅರ್ನಾಬ್ ಅವರೇ ಪ್ರಚೋದಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಇದರಲ್ಲಿ ಅರ್ನಾಬ್ ಅವರ ಪಾತ್ರವಿಲ್ಲವೆಂದು ಪೊಲೀಸರು ಕೋರ್ಟ್ ಗೆ ಬಿ ತನಿಖಾ ವರದಿ ಅಂತಿಮ ನೀಡಿ ಅರ್ನಾಬ್ ಅವರನ್ನು ದೋಷ ಮುಕ್ತರಾಗಿಸಿದ್ದರು.

ಕಾಕತಾಳೀಯವೋ, ಇಲ್ಲವೇ ಸ್ವಪ್ರೇತಳಾಗಿಯೋ, ಇಲ್ಲವೇ ಕಾಣದ ಕೈಗಳ ಹಿಂದಿನ ಒತ್ತಡದಿಂದಾಗಿಯೋ, ಮೃತರ ಮಗಳು, ಅರ್ನಾಬ್ ಅವರ ಪ್ರಭಾವದಿಂದ ಪೊಲೀಸರು ಸರಿಯಾಗಿ ತನಿಖೆಯನ್ನು ಮಾಡದೇ ತಮ್ಮ ತಂದೆಯವರ ಆತ್ಮಹತ್ಯಾ ತನಿಖೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಪುರಾವೆಗಳನ್ನು ನೀಡಿ, ಹೊಸದಾಗಿ ತನಿಖೆಯನ್ನು ನಡೆಸಿ ತನ್ನ ತಂದೆಯ ಸಾವಿನ ಹಿಂದೆ ಇರಬಹುದಾದ ಅರ್ನಬ್ ಅವರಿಗೆ ಶಿಕ್ಷೆ ಕೊಡಿಸಬೇಕೆಂದು ದೂರು ದಾಖಲೆ ಸಲ್ಲಿಸಿದ್ದಾಳೆ. ಪ್ರಾಯಶಃ ಇಂತಹದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದ ಮಹಾರಾಷ್ಟ್ರ ಸರ್ಕಾರವೂ ಸಹಾ ಕೂಡಲೇ ಕೇಸಿನ ತನಿಖೆಯನ್ನು ವಿಶೇಷ ತಂಡಕ್ಕೆ ವಹಿಸಿದೆ.

ಈ ಕೇಸಿನ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಸಲು ಆ ವಿಶೇಷ ತಂಡ ಅರ್ನಾಬ್ ಅವರನ್ನು ಬಂಧಿಸಲು ಬಂದಾಗಲೇ ಇಷ್ಟೆಲ್ಲಾ ಅವಾಂತರಗಳು ನಡೆದು ರಂಪ ರಾಮಾಯಣವಾಗುತ್ತದೆ. ನಿಜ ಹೇಳಬೇಕೆಂದರೆ, ಅರ್ನಾಬ್ ಅವರ ನೇರ ಪ್ರಚೋದನೆಯಿಂದ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅರ್ನಬ್ ಅವರನ್ನು ದೋಷಿ ಎನ್ನಬಹುದಾಗಿತ್ತು. ಆದರೆ ಇಲ್ಲಿ ಅವರಿಬ್ಬರ ಮಧ್ಯೆ ಐವತ್ತು ಲಕ್ಷ ರೂಪಾಯಿಗಳ ಬಾಕಿ ವ್ಯವಹಾರದಲ್ಲಿ ಎನೋ ಸಮಸ್ಯೆಯಾಗಿರುವ ಕಾರಣ, ಈಗ ಮೃತರ ಮಗಳು ಹೊಸದಾಗಿ ದೂರು ದಾಖಲಿಸಿದರೂ ಅರ್ನಬ್ ಅವರಿಗೆ ಯಾವುದೇ ತೊಂದರೆಯಾಗದೇ ಮತ್ತೊಮ್ಮೆ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಒಬ್ಬ ಸಾಮಾನ್ಯ ಮನುಷ್ಯರಿಗೂ ತಿಳಿದಿರ ಬಹುದಾದ ಕಾನೂನಿನ ವ್ಯವಸ್ಥೆಯಾಗಿದೆ.

ಆದರೆ ತಮ್ಮನ್ನು ಹಳಿಯಲು ಮಹಾರಾಷ್ಟ್ರ ಸರ್ಕಾರವೇ ಷಡ್ಯಂತ್ರದಿಂದ ಖುಲಾಸೆಯಾಗಿದ್ದ ಪ್ರಕರಣದಲ್ಲಿ ಮತ್ತೊಮ್ಮೆ ಮೃತರ ಮಗಳ ಮೂಲಕ ಹೊಸಾ ದೂರನ್ನು ದಾಖಲಿಸಿದೆ ಎಂಬುದನ್ನು ಬಲವಾಗಿ ನಂಬಿರುವ ಅರ್ನಾಬ್ ಸ್ವಲ್ಪ ಹೆಚ್ಚಾಗಿಯೇ ದೇಶದ ಜನರ ಅನುಕಂಪ ತಮ್ಮಡೆಗೆ ಸೆಳೆಯುವಂತೆ ಪ್ರತಿಕ್ರಿಯಿಸಿದ್ದಾರೆ ಎಂದೇ ನನ್ನ ಭಾವನೆ.

ಅರೋಪ ಬಂದಾಗ ಅರೋಪಿಗಳನ್ನು ವಿಚಾರಣೆಗಾಗಿ ಬಂಧಿಸಿ, ವಿಚಾರಣೆ ನಡೆಸಿ, ನಂತರ ನ್ಯಾಯಾಯಲದಲ್ಲಿ ತನಿಖೆ ಮುಂದುವರೆಸಿ, ಅರೋಪಿಗಳನ್ನು ಬಿಡುಗಡೆ ಮಾಡುವುದು ಸಹಜ ಪ್ರಕ್ರಿಯೆ. ಇದರ ಅರಿವಿದ್ದ ಅರ್ನಾಬ್ ಮತ್ತವರ ಕುಟುಂಬ ಸಂಭಾವಿತರಂತೆ, ಪೋಲೀಸರ ತನಿಖೆಗೆ ಸಹಕರಿಸಿ, ಬಂಧನಕ್ಕೆ ಒಳಗಾಗಿ ತಮ್ಮ ವಕೀಲರ ಮುಖಾಂತರ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿ ಆರೋಪ ಮುಕ್ತರಾಗಿ ಹೊರಬಂದಿದ್ದಲ್ಲಿ ರಾವಣನಿಂದ ಸೀತಾಮಾತೆಯನ್ನು ಬಿಡಿಸಿಕೊಂಡು ಬಂದಾಗ ಸೀತಾ ದೇವಿ ತನ್ನ ಪತಿವ್ರತೆಯ ಶುದ್ಧತೆಯನ್ನು ತೋರಿಸಲು ಅಗ್ನಿ ಪರೀಕ್ಷೆಗೆ ಒಳಗಾಗಿ, ಪರಿಶುದ್ಧಳಾಗಿ ಹೊರಬಂದಿದ್ದಂತೆ ಅರ್ನಾಬ್ ಅವರ ಘನತೆ ಮತ್ತಷ್ಟು ಹೆಚ್ಚುತ್ತಿತ್ತೇನೋ?

ಆದರೆ ಇಲ್ಲಿ ಹಾಗಾಗದೇ, ಸುಮಾರು ಎರಡ್ಮೂರು ಗಂಟೆಗಳ ಕಾಲ ಅರಚಾಟ, ತಳ್ಳಾಟ ಮತ್ತು ಎಳೆದಾಟ ಪ್ರಕರಣವಾಗಿ ಕೆಲ ದಶಕಗಳ ಹಿಂದೆ ತಮಿಳುತಾಡಿನಲ್ಲಿ ಜಯಲಲಿತಾ ಆಡಳಿತ ಸಮಯದಲ್ಲಿ ತಡ ರಾತ್ರಿಯಲ್ಲಿ ವಯೋವೃದ್ಧ ಕರುಣಾನಿಧಿಯವರನ್ನು ಪ್ರಕರಣವೊಂದರಲ್ಲಿ ಬಂಧಿಸಲು ಬಂದಾಗ ಜನರ ಅನುಕಂಪ ಗಿಟ್ಟಿಸಲು ಇದೇ ರೀತಿಯಲ್ಲಿಯೇ ಎನೈ ಸಾವ್ ಅಡಿಚ್ಚಿರಾಂಗಾ, ಎನೈ ಕೊಲೈ ಪಂಡ್ರಾಂಗಾ ಎಂದು ಕೂಗಾಡಿ ಅದನ್ನೇ ತಮ್ಮ ಸನ್ ಟಿವಿಯ ಮುಖಾಂತರ ಎರಡು ಮೂರು ದಿನಗಳ ಕಾಲ ಬಿಟ್ಟೂ ಬಿಡದೇ ತೋರಿಸಿ ಕೊನೆಗೆ ಅಪಹಾಸ್ಯಕ್ಕೆ ಈಡಾಗಿದ್ದು ಅರ್ನಾಬ್ ಅವರಿಗೆ ತಿಳಿದಿತ್ತು ಎಂದು ಭಾವಿಸುತ್ತೇನೆ.

ಇನ್ನು ಈ ಪ್ರಕರಣ ಕುರಿತಂತೆ ಇತರೇ ಸುದ್ದಿ ಮಾಧ್ಯಮಗಳು ಸೊಲ್ಲೆತ್ತದಿರುವುದನ್ನು ಖಂಡಿಸಿ ಅರ್ನಾಬ್ ಪರ ಇರುವ ಕೆಲವರು ಆ ಲೂಟಿಯನ್ಸ್ ಮೇಲೆ ಅನೇಕ ಅರೋಪಗಳನ್ನು ಮಾಡುತ್ತಾ, ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ ಎಂದು ಟ್ರೋಲ್ ಮಾಡುತ್ತಿದ್ದರೇ, ಇನ್ನು ಬಿಜೆಪಿ ಮತ್ತು ಮೋದಿಯವರನ್ನು ವಿರೋಧಿಸುವ ತಂಡದವರು ಇದೇ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡು, ಸದಾಕಾಲವೂ ಹಿಂದೂ ಪರ ಮತ್ತು ಮೋದಿಯವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಅರ್ನಾಬ್ ಅವರನ್ನು ಬಿಜೆಪಿ ಸಮರ್ಥನೆ ಮಾಡಿಕೊಳ್ಳದೇ ಅಥವಾ ಪ್ರತಿಭಟನೆ ನಡೆಸದೇ ತಟಸ್ಥರಾಗಿರುವುದನ್ನು ಎತ್ತಿ ತೋರಿಸುತ್ತಾ ಅರ್ನಾಬ್ ಅಂತಹವರಿಗೇ ಬಿಜೆಪಿ ಈ ರೀತಿಯಾಗಿ ನಡೆಸಿಕೊಂಡರೆ ಇನ್ನು ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಹೇಗೆ ಕಾಪಾಡುತ್ತದೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿ ಒಂದು ರೀತಿಯಲ್ಲಿ ಪ್ರ‍ಚೋದನೆ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಈ ಪ್ರಕರಣದ ಹಿಂದೆ ಯಾವುದೇ ವಯಕ್ತಿಕ ಷಡ್ಯಂತರವೇನೇ ಇದ್ದರೂ ಅದನ್ನು ಕಾನೂನು ಬಲ್ಲ ಅರ್ನಾಬ್ ಅತ್ಯಂತ ಸರಳವಾಗಿ ಬಗೆ ಹರಿಸಿಕೊಂಡು ಬಂದು ಸುಖಾ ಸುಮ್ಮನೆ ಈ ರೀತಿಯಾಗಿ ಮುಚ್ಚಿಹೊದ ಪ್ರಕರಣಗಳಿಗೆ ಯಾರದ್ದೋ ಕುಮ್ಮಿಕ್ಕಿನಿಂದಲೋ, ಬೆದರಿಕೆಯಿಂದಲೋ ಮತ್ತೆ ಜೀವ ತುಂಬುತ್ತಿದ್ದವರ ಮೇಲೆ ವಿರುದ್ಧ ಸಾತ್ವಿಕವಾದ ಜನಜಾಗೃತಿಯನ್ನು ಉಂಟು ಮಾಡ ಬಹುದಾಗಿತ್ತು.

ಇನ್ನು ಪೋಲೀಸರೂ ಸಹಾ ಸರ್ಕಾರಗಳು ಐದು ವರ್ಷಕ್ಕೊಮ್ಮೆ ಬರುತ್ತವೇ ಮತ್ತು ಹೋಗುತ್ತವೆ ಎಂಬುದನ್ನು ಅರಿತು, ಪೂರ್ವಾಗ್ರಹ ಪೀಡಿತ ಅಥವಾ ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ, ಪ್ರಕರಣಗಳು ದಾಖಲಾದಾಗ ಅರೋಪಿಗಳನ್ನು ನೇರವಾಗಿ ಬಂಧಿಸುವ ಮೊದಲು ಮೇಲ್ನೋಟಕ್ಕೆ ಆ ಆರೋಪದ ಸತ್ಯಾಸತ್ಯೆಗಳ ಕುರಿತಂತೆ ಸಣ್ಣದಾಗಿ ತನಿಖೆ ನಡೆಸಿ, ಇದರ ಹಿಂದೆ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಆಥವಾ ಅರೋಪ ಮಾಡಿದಂತಹವರ ವಯಕ್ತಿಕ ಹಿತಾಸಕ್ತಿ ಇಲ್ಲವೆಂದಾದಲ್ಲಿ ಮಾತ್ರವೇ ಆರೋಪಿಗಳನ್ನು ಬಂಧನ ಮಾಡಿ ನಿಷ್ಪಕ್ಷಪಾತ ತನಿಖೆಮಾಡಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದಲ್ಲಿ ಜನರಿಗೆ ಪೋಲೀಸರ ಮೇಲಿನ ನಂಬಿಕೆ ಹೆಚ್ಚುತ್ತಿತ್ತು.

ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಪೋಲೀಸರು, ಅರ್ನಾಬ್, ಮತ್ತವರ ಕುಟುಂಬ ಮತ್ತು ಸಾಮಾಜಿಕ ಜಾಲತಾಣಗಳ ಅಂಡುಪಿರ್ಕೆಗಳು ತಮ್ಮ ತಮ್ಮ ವಯಕ್ತಿಕ ಹಿತಾಸಕ್ತಿ, ಸೈದ್ಧಾಂತಿಕ ವಿರೋಧ ಮತ್ತು ಅಹಂ ನಿಂದಾಗಿ, ಸಣ್ಣದಾಗಿ ಆಗಿದ್ದ ಗಾಯವನ್ನು ಸುಖಾ ಸುಮ್ಮನೇ ಕೆರೆದು ಕೆರೆದು ರಾಡಿ ಮಾಡಿ ಎಲ್ಲರ ಸಮಯವನ್ನೂ ಹಾಳು ಮಾಡುತ್ತಿರುವುದಲ್ಲದೇ ಪರೋಕ್ಷವಾಗಿ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.

ಏನಂತೀರೀ?

ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಕಳೆದ ತಿಂಗಳು ಏಪ್ರಿಲ್ 16 2020 ರಂದು, ಸೂರತ್‌ನಲ್ಲಿ ತಮ್ಮ ಗುರು ಶ್ರೀ ಮಹಂತ್ ರಾಮ್‌ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಜುನಾ ಅಖಾರ ಸಾಧುಗಳಾದ ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70 ವರ್ಷ) ಮತ್ತು ಸುಶೀಲ್ ಗಿರಿ ಮಹಾರಾಜ್ (35 ವರ್ಷ) ಈ ಇಬ್ಬರು ಸ್ವಾಮಿಗಳು ಕಾರಿನಲ್ಲಿ ನಿಲೇಶ್ ತೆಲ್ಗಡೆ (30 ವರ್ಷದ) ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ, ಉದ್ರಿಕ್ತ ಗುಂಪೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಮೂವರನ್ನೂ ಪೋಲೀಸರ ಸಮ್ಮುಖದಲ್ಲೇ ಬರ್ಬರವಾಗಿ ಹತ್ಯೆಮಾಡಿತು. ದೇಶಾದ್ಯಂತದ ಕರೋನ ವೈರಸ್ ಲಾಕ್ ಡೌನ್ ಸಮಯದಲ್ಲಿ ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆ ಎಂಬ ಎಂಬ ವಾಟ್ಸಾಪ್ ವದಂತಿ ಈ ಘಟನೆ ಕಾರಣವಾಗಿದೆ ಎಂದು ತಿಪ್ಪೇ ಸಾರಿಸಲು ಪ್ರಯತ್ನಿಸಲಾಯಿತಾದರೂ ಇದರ ಹಿಂದೆ ಒಂದು ದೊಡ್ಡ ಸಂಘಟನೆಯ ಕೈವಾಡವಿದೆ ಎಂದು ಅನೇಕರು  ಅರೋಪ ಮಾಡಿದ ಕಾರಣ ಈ ಘಟನೆಯ ಸಂಬಂಧ ಈಗಾಗಲೇ ಪೊಲೀಸರು 100 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿರುವುದಲ್ಲದೇ ತನಿಖೆಯನ್ನೂ ನಡೆಸುತ್ತಿದ್ದಾರೆ.

arnab3ದೇಶದ ಯಾವುದೇ ಮೂಲೆಯಲ್ಲಿ ಇದಕ್ಕಿಂತಲೂ ಸಣ್ಣ ಘಟನೆಗಳು ನಡೆದಲ್ಲಿ ಕೂಡಲೇ ಅಲ್ಲಿಗೆ ತೆರಳುವ ಗಂಜೀಗಿರಾಕಿಗಳು, ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ವಿರೋಧ ಪಕ್ಷವಾದ ಕಾಂಗ್ರೇಸ್ ಪಕ್ಷ ಈ ಘಟನೆಯ ಕುರಿತಾಗಿ ಒಂದು ಚೂರೂ ಸೊಲ್ಲೆತ್ತದ್ದನ್ನು ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ಅವರು ತಮ್ಮ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಕಠುವಾಗಿ ಟೀಕಿಸಿದ್ದಲ್ಲದೇ, ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನೆಡೆದಲ್ಲಿ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂಬು ಬ್ಬೊಬ್ಬಿರಿವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮದೇ ಸಮ್ಮಿಶ್ರಸರ್ಕಾರ ನಡೆಸುತ್ತಿರುವ ಮಹಾರಾಷ್ಟ್ರದಲ್ಲಿ ಇಂತಹ ಬರ್ಬರ ಘಟನೆಯಾದಾಗ ಸುಮ್ಮನಿರುವುದು ಏಕೆ? ಇಟಲೀ ಮೂಲದ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾದ ಸೋನೀಯಾ ಆಂಟೋನಿಯೋ ಮೈನೋ ಅವರಿಗೆ ಹಿಂದೂ ಸ್ವಾಮಿಗಳ ಹತ್ಯೆಯಾದಲ್ಲಿ ಮನಸ್ಸು ಕರಗುವುದಿಲ್ಲವೇ ಎಂದು ಸೋನಿಯಾ ಗಾಂಧಿಯವರ ಮೂಲ ಹೆಸರನ್ನು ತಮ್ಮ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.

ಸೋನಿಯಾ ವಿದೇಶದಲ್ಲಿ ಹುಟ್ಟಿ ಭಾರತೀಯರನ್ನು ಮದುವೆಯಾಗಿ, ಸೊಸೆಯ ಮೂಲಕ ಭಾರತಕ್ಕೆ ಬಂದು 14 ವರ್ಷಗಳಾದ ನಂತರ ಭಾರತದ ಪೌರತ್ವ ಪಡೆದ ವಿದೇಶೀ ಮಹಿಳೆ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಗೂ ತಿಳಿದಿರುವ ಸತ್ಯ. ಆದರೆ ಇದೇ ಸತ್ಯವನ್ನು ಸಾರ್ವಜನಿಕವಾಗಿ ತಿಳಿಸಿದರೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಅದೇಕೋ ಮುನಿಸು. ಕೇವಲ ಸೋನಿಯಾ ಅವರ ಮೂಲ ಹೆಸರನ್ನು ಹೇಳಿದ್ದನ್ನೇ ಮುಂದಿಟ್ಟುಕೊಂಡು ಮಾರನೇಯ ದಿನವೇ ದೇಶಾದ್ಯಂತ ಸುಮಾರು 200ಕ್ಕೂ ಅಧಿಕ ದೂರುಗಳು ದಾಖಲಾದವು. ಮತ್ತು ಇನ್ನೂ ಅತಿರೇಕದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅರ್ಣಾಬ್ ಮತ್ತು ಅವರ ಪತ್ನಿಯ ಮೇಲೆ ಕೆಲ ಗೂಂಡಾಗಳು ಧಾಳಿ ನಡೆಸಿದದ್ದು ಅಕ್ಷಮ್ಯ ಆಪರಾಧವೇ ಸರಿ,

ಅವರ ಮೇಲೆ ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ಸ್ಥಳೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದು ತಮ್ಮ ಮುಖಂಡರ ಆಣತಿಯ ಮೇರೆಗೆ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡರು. ಇದು ಕೇವಲ ಒಂದಿಬ್ಬರು ಗೂಂಡಾಗಳ ಮನಸ್ಥಿತಿಯಲ್ಲದೇ ಇಡೀ ಕಾಂಗ್ರೇಸ್ ಕಾರ್ಯಕರ್ತರ ಮನಸ್ಥಿತಿಯಾಗಿದೆ. ಈ ಹಲ್ಲೆಯ ಒಂದು ದಿನ ಮೊದಲು ಛತ್ತೀಸ್ ಘಡ್ ಮುಖ್ಯಮಂತ್ರಿಯೂ ಸಹಾ ಇದೇ ರೀತಿಯ ಧಮ್ಕಿಯನ್ನು ಹಾಕಿ ಈ ಜನ ಸಮೂಹ ಮಾಡಿದ ಹತ್ಯೆಯ ವಿಷಯವನ್ನು ಕೈಬಿಡದಿದ್ದರೆ ಬಾರೀ ಫಲವನ್ನು ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಇದೆಲ್ಲಾ ನೋಡಿದಲ್ಲಿ ತಮ್ಮ ಅಧಿನಾಯಕಿಯ ಓಲೈಕೆಗಾಗಿ ಕಾಂಗ್ರೇಸ್ಸಿಗರು ಎಂತಹ ಘನ ಘೋರ ಅಪರಾಧಕ್ಕೂ ಕೈಹಾಕುತ್ತಾರೆ ಎಂಬುದು ತಿಳಿದು ಬರುತ್ತದೆ.

arnab2ನಿಜವಾಗಿಯೂ ನೋಡಿದಲ್ಲಿ, ಅರ್ನಾಬ್ ಕೇಳಿದ್ದ ಪ್ರಶ್ನೆಯೇನೂ ಅಂತಹ ಗಂಭೀರವಾಗಿರಲಿಲ್ಲ. ಅವರ ಮೇಲೆ ಈ ರೀತಿಯ ಹಲ್ಲೆ ಮಾಡುವಂತಹ ಅಪರಾಧವೇನೂ ಆಗಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಜನಸಮೂಹ ಹಲ್ಲೆ ನಡೆದಾಗಲೆಲ್ಲಾ ಅಮ್ಮಾ ಮತ್ತು ಮಗ ಇತರ ಪಕ್ಷಗಳನ್ನೇ ದೂಷಿಸುತ್ತಾ ಅದನ್ನು ತೀವ್ರವಾಗಿ ಖಂಡಿಸುತ್ತಾ ಒಂದು ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸುತ್ತಿದ್ದವರು ಈಗ ಏಕಾಏಕಿ ತಮ್ಮ ಪಕ್ಷದ ಸಮ್ಮಿಶ್ರ ಸರ್ಕಾರ ಇರುವ ರಾಜ್ಯದಲ್ಲೇ ಇಂತಹ ಘನ ಘೋರ ಹತ್ಯೆ ನಡೆದಾಗ, ಸೋನಿಯಾ ಸಹಿತವಾಗಿ ಯಾವುದೇ ಕಾಂಗ್ರೆಸ್ ಮುಖಂಡರೂ ಒಂದು ಸಾಂತ್ವನ ಹೇಳದಿದ್ದದ್ದು ಎಲ್ಲರನ್ನು ಕೆರಳಿಸಿದ್ದಂತೂ ಸುಳ್ಳಲ್ಲ. ಸಾಧುಗಳ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿ ಪೊಲೀಸರು ಇದ್ದರೂ ಅವರಿಂದ ಧಾಳಿಕೋರರನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು ನೆಡೆದಿರಲಿಲ್ಲ ಎಂಬುದು ವೈರಲ್ ಆದ ವೀಡೀಯೋಗಳಲ್ಲಿ ಸ್ಪಷ್ಟವಾಗಿ ನೊಡಿದ್ದ ಜನ ಇದು ಅಮಾಯಕರರ ಕೃತ್ಯವಲ್ಲ ಇದೊಂದು ಪೂರ್ವಯೋಜಿತ ದಾಳಿ ಎಂಬುದು ಅರಿವಾಗುತ್ತದೆ. ಅದಕ್ಕಾಗಿಯೇ ಅರ್ನಾಬ್ ವಿಷಯವನ್ನು ಕೈಬಿಡಬೇಕೆಂದು ಕಾಂಗ್ರೇಸ್ ಮುಖಂಡರು ಒತ್ತಾಯಿಸುತ್ತಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಅಲ್ಲವೇ?

  • ಕಾಂಗ್ರೇಸ್ ಮುಖಂಡರು ಸಲ್ಲಿಸಿದ ದೂರಿನನ್ವಯ ಅರ್ನಾಬ್ ಗೋಸ್ವಾಮಿಯವರನ್ನು ಠಾಣೆಗೆ ಕರೆಸಿ ಸುಮಾರು 9 ಗಂಟೆಗಳ ವಿಚಾರಣೆಯನ್ನು ಮಾಡಿರುವ ಹಿನ್ನಲೆಯೇನು? ಆ ವಿಚಾರಣಾ ಸಂದರ್ಭದಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎನ್ನುವುದು ನಮ್ಮ ಗಮನಕ್ಕೆ ಬಂದಿಲ್ಲದಿದ್ದರೂ, ಸೋನೀಯಾ ಅವರ ಮೂಲ ಹೆಸರನ್ನು ಹೇಳಿದ್ದಕ್ಕೆ 9 ಗಂಟೆಗಳಷ್ಟು ವಿಚಾರಣೆಯ ಅಗತ್ಯವಿತ್ತೇ? ಅಥವಾ ಸಮ್ಮಿಶ್ರ ಸರ್ಕಾರವೂ ಸಹಾ ಪೋಲೀಸರ ಮೇಲೆ ತಮ್ಮ ಪ್ರಭಾವ ಬಳೆಸಿ ತಮ್ಮ ಅಧಿನಾಯಕಿಯನ್ನು ಸುಪ್ರೀತಗೊಳಿಸಲು ಪ್ರಯತ್ನಿಸಿದರೇ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
  • ನಿಜವಾಗಿಯೂ ತೀವ್ರತರದಲ್ಲಿ ತನಿಖೆ ನಡೆಸಬೇಕಾಗಿದ್ದದ್ದು ಪಾಲ್ಘರ್ ಗಲಭೆಯ ಹತ್ಯಾಕೋರರು ಮತ್ತು ಅವರ ಹಿಂದಿರುರುವ ಶಕ್ತಿಗಳು ಮತ್ತು ಅರ್ಣಾಬ್ ಮೇಲಿನ ಧಾಳಿ ಕೋರರ ಹಿಂದಿರುವ ನಿಜವಾದ ವ್ಯಕ್ತಿಗಳ ಬಗ್ಗೆ ಅಲ್ಲವೇ?
  • ಆದರೆ ಪೋಲೀಸರು ಇವೆರಡನ್ನೂ ಬಿಟ್ಟು ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದಂತೆ ವಿಷಯಾಂತರ ಮಾಡಲು ಅರ್ಣಾಬ್ ಅವರನ್ನು ಪ್ರಶ್ನಿಸಿರಬಹುದಲ್ಲದೇ?
  • ದೇಶದಲ್ಲಿ ಪ್ರತೀ ದಿನ ನೂರಾರು ಸುಳ್ಳು ಆಪಾದನೆಗಳನ್ನೇ ಬ್ರೇಕಿಂಗ್ ನ್ಯೂಸ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡುವ ಅದೆಷ್ಟೋ ಪತ್ರಕರ್ತರು ಧಿಮ್ಮಾಲೆ ರಂಗಾ ಎಂದು ಓಡಾಡುತ್ತಿರುವಾಗ ಸೋನಿಯಾ ಮೂಲ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ 9 ಗಂಟೆಗಳ ತನಿಖೆಯ ಅಗತ್ಯವಿತ್ತೇ?
  • ತನಿಖೆ ನಡೆದು ಸುಮಾರು ಎರಡು ವಾರಗಳಾದರೂ ಈ ಬಗ್ಗೆ ಯಾವುದೇ ದೋಷಾರೋಪಣೆ ಪಟ್ಟಿಯಾಗಲೀ ಅಥವಾ ವಿಷಯಗಳಾಗಲೀ ಹೊರಬಾರದಿರುವುದು ಸಹಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆಯಲ್ಲವೇ?
  • ಕಾನೂನು ಎಂದ ಮೇಲೇ ಅದು ಇಡೀ ದೇಶಕ್ಕೇ ಅನ್ಚಯವಾಗುವುದೇ ಹೊರತು ಕಾಂಗ್ರೇಸ್ ಆಡಳಿತ ರಾಜ್ಯಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂಬ ಯಾವುದೇ ನಿಯಮಗಳು ಇಲ್ಲ ಅಲ್ಲವೇ?
  • ಭಾರತೀಯ ಪ್ರಜೆ ಎಂದ ಮೇಲೆ ಕಾನೂನು ಎಲ್ಲರಿಗೂ ಒಂದೇ, ಸೋನಿಯಾ ಗಾಂಧಿಯವರೂ ಅದಕ್ಕೆ ಅತೀತರಲ್ಲ ಅಲ್ಲವೇ ?

ಪ್ರಸ್ತುತ ಕೋವಿಡ್ ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಮತ್ತು ಮುಂಬೈನ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಪಕ್ಷದ ಅಧ್ಯಕ್ಷರೊಬ್ಬರ ಬಗ್ಗೆ ಕೇವಲ ವಿಚಾರಣೆಗಾಗಿ 9 ರಿಂದ 10 ಗಂಟೆಗಳ ಕಾಲ ಪೊಲೀಸ್ ವ್ಯಕ್ತಿಗಳ ಸಮಯವನ್ನು ವ್ಯರ್ಥ ಮಾಡುವುದು ಸರ್ಕಾರ ಮತ್ತು ಪೊಲೀಸರ ಕಡೆಯಿಂದ ಸಂಪೂರ್ಣವಾಗಿ ಕರ್ತವ್ಯ ಲೋಪ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸಾವಿರಾರು ಜನರ ಜೀವಗಳನ್ನು ಉಳಿಸುವ ಮತ್ತು ಪಾಲ್ಘಾರ್ ಹತ್ಯೆಕೋರ ವಿಚಾರಣೆ ನಡೆಸುವ ಬದಲು ಸಮ್ಮಿಶ್ರ ಪಾಲುದಾರರ ಅಧ್ಯಕ್ಷರ ಓಲೈಕೆಯೇ ರಾಜ್ಯ ಸರ್ಕಾರದ ಆದ್ಯತೆಯಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವೇ ಹೌದು.

ಏನಂತೀರೀ?