ಪುಳಿಯೋಗರೆ
ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ… Read More ಪುಳಿಯೋಗರೆ